ಕೊರೋನಾ ಕವಚ್ ಪಾಲಿಸಿ ಎಂದರೇನು?
ಕೋವಿಡ್-19 ಸಾಂಕ್ರಾಮಿಕವು ಜಗತ್ತನ್ನು ಸ್ಥಗಿತಗೊಳಿಸಿ ನಮ್ಮ ಜೀವನವನ್ನು ಗಮನಾರ್ಹವಾಗಿ ಬದಲಾಯಿಸಿದೆ. ಭಾರತವು ಪ್ರಸ್ತುತ ಮೂರನೇ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದ್ದು ಪ್ರಕರಣಗಳು ಪ್ರತಿದಿನ ಹೆಚ್ಚುತ್ತಲೇ ಇವೆ.
ಈ ಸಾಂಕ್ರಾಮಿಕ ರೋಗವು ತಂದ ಆರ್ಥಿಕ ಒತ್ತಡವನ್ನು ತಗ್ಗಿಸಲು, ಐಆರ್ಡಿಎಐ (ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ ಮೆಂಟ್ ಅಥಾರಿಟಿ ಆಫ್ ಇಂಡಿಯಾ) ಇತ್ತೀಚೆಗೆ ಕೊರೋನಾ ಕವಚ್ (ಇಂಗ್ಲಿಷ್ನಲ್ಲಿ ಆರ್ಮರ್) ಪಾಲಿಸಿಯನ್ನು ಬಿಡುಗಡೆ ಮಾಡಿದೆ, ಇದು ಕೈಗೆಟುಕುವ ದರದ ಒಂದು-ಬಾರಿ ಪಾವತಿ ಕವರ್ ಆಗಿದ್ದು, ಈ ವೈರಸ್ ಸೋಂಕಿಗೆ ಒಳಗಾದವರಿಗೆ ಅದರ ವೈದ್ಯಕೀಯ ಸೇವೆ ಮತ್ತು ವೆಚ್ಚಗಳಿಂದ ಉಂಟಾಗಬಲ್ಲ ಹಣಕಾಸಿನ ಪರಿಣಾಮಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
ಇದು ಏನೆಲ್ಲವನ್ನು ಒಳಗೊಂಡಿದೆ ಮತ್ತು ನೀವು ಅದನ್ನು ಪಡೆಯಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಗೊಂದಲವಿದೆಯೇ? ನಿಮಗಾಗಿ ನಾವು ಇದನ್ನು ಹೇಗೆ ಸರಳೀಕರಿಸಿದ್ದೇವೆ ಎಂದು ತಿಳಿಯಲು ಓದಿ!
ನಿಖರವಾದ ಕವರೇಜ್ ಗಳು ಮತ್ತು ಪ್ರೀಮಿಯಂ ವಿವರಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ.
ಕೊರೋನಾ ಕವಚ ಕವರ್ನಲ್ಲಿ ಏನನ್ನು ಕವರ್ ಆಗಿದೆ?
ಕೊರೋನಾ ಕವಚ್ ಅಡಿಯಲ್ಲಿ ಏನೆಲ್ಲಾ ಕವರ್ ಆಗಿರುವುದಿಲ್ಲ?
ಕೊರೋನಾ ಕವಚ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಯಾರು ಖರೀದಿಸಬೇಕು?
ಕೊರೋನಾ ಕವಚ್ ಪಾಲಿಸಿಯನ್ನು ಯಾರು ಬೇಕಾದರೂ ಖರೀದಿಸಬಹುದು ಆದರೆ ಪ್ರತಿಯೊಬ್ಬರೂ ಅದನ್ನು ಖರೀದಿಸುವುದರಲ್ಲಿ ಅರ್ಥವಿದೆಯೇ?
ಕೊರೋನಾ ಕವಚ್ ಪಾಲಿಸಿಯು ಉಪಯುಕ್ತವೆಂದು ಪರಿಗಣಿಸಬಹುದಾದ ನಾಲ್ಕು ವಿಭಿನ್ನ ಜನರನ್ನು ನಾವು ಪಟ್ಟಿ ಮಾಡಿದ್ದೇವೆ, ನೀವು ಯಾವ ವರ್ಗಕ್ಕೆ ಸೇರಿದ್ದೀರಿ ಎಂದು ನೋಡಲು ಕೆಳಗೆ ಓದಿ.
1. ಇನ್ಶೂರ್ಡ್ ಆಗದಿರುವವರು
ಪ್ರಸ್ತುತವಾಗಿ ನೀವು ಯಾವುದೇ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದಿಲ್ಲದಿದ್ದರೆ, ಈ ಕೂಡಲೇ ಹೆಲ್ತ್ ಇನ್ಶೂರೆನ್ಸ್ ಪಡೆಯುವುದು ಅಥವಾ ಕನಿಷ್ಠಪಕ್ಷ ಕೊರೋನಾ ಕವಚ್ ಕವರ್ ಅನ್ನಾದರೂ ಪಡೆಯುವುದು ಬಹುಶಃ ಬುದ್ಧಿವಂತಿಗೆಯಾಗುತ್ತದೆ.
ನಾವು ಇಂದು ಜೀವಿಸುತ್ತಿರುವ ಈ ಅನಿಶ್ಚಿತ ಸಮಯದ ಮಧ್ಯೆ ಆರ್ಥಿಕವಾಗಿ ಸುರಕ್ಷಿತವಾಗಿರಲು ಇದು ನಿಮಗೆ ಸಹಾಯ ಮಾಡುತ್ತದೆ. ಒಂದು ಹೆಲ್ತ್ ಇನ್ಶೂರೆನ್ಸ್ ನ ಪ್ರೀಮಿಯಂ ಅಧಿಕವಾಗಿದ್ದರೂ, ಇದು ಹಲವು ಪ್ರಯೋಜನಗಳೊಂದಿಗೆ ಬರುತ್ತದೆ ಮತ್ತು ಇದು ಕೊರೊನಾ ಕವಚ್ ಗಿಂತ ಭಿನ್ನವಾಗಿ ಒಂದು ದೀರ್ಘಾವಧಿಯ ಕವರ್ ಆಗಿದೆ, ಕೊರೋನಾ ಕವಚ್ ಒಂದು ಅಲ್ಪಾವಧಿಯ ಪಾಲಿಸಿಯಾಗಿದ್ದು ಕೋವಿಡ್-19 ಹಾಸ್ಪಿಟಲೈಸೇಷನ್ ಮತ್ತು ಚಿಕಿತ್ಸೆಯನ್ನು ಕವರ್ ಮಾಡಲು ಮಾತ್ರ ವಿನ್ಯಾಸಗೊಳಿಸಲಾಗಿದೆ.
2. ಸುರಕ್ಷಿತರು
ನೀವು ಈಗಾಗಲೇ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೂ, ನಿಮ್ಮ ಪ್ರಸ್ತುತ ಯೋಜನೆಯು ತುಂಬಾ ಮೂಲಭೂತ ಮತ್ತು ಸೀಮಿತವಾಗಿದೆ ಎಂದು ನಿಮಗನಿಸಿದರೆ, ಕೊರೋನಾವೈರಸ್ಗೆ ಸಂಬಂಧಿಸಿದ ಅಪಾಯಗಳಿಗೆ ನಿರ್ದಿಷ್ಟವಾಗಿ ಕೊರೋನಾ ಕವಚ್ ಅನ್ನು ಪಡೆಯಲು ನೀವು ಆಯ್ಕೆ ಮಾಡಬಹುದು ಹಾಗೂ ಇದರಿಂದ ನಿಮ್ಮ ಪ್ರಸ್ತುತ ಹೆಲ್ತ್ ಇನ್ಶೂರೆನ್ಸ್ ಯೋಜನೆಗಿಂತ ಮೇಲಿನ ಮತ್ತು ಹೆಚ್ಚಿನ ಕವರೇಜ್ ಅನ್ನು ನೀವು ಹೊಂದಿರುತ್ತೀರಿ.
ಇದನ್ನು ಸರಿಯಾಗಿ ಮಾಡಲು ಸೂಕ್ತವಾದ ಮಾರ್ಗವೆಂದರೆ ಮೊದಲು ನಿಮ್ಮ ಪ್ರಸ್ತುತ ಹೆಲ್ತ್ ಇನ್ಶೂರೆನ್ಸ್ ನ ಸಾಮರ್ಥ್ಯವನ್ನು ಅಳೆಯುವುದು ಮತ್ತು ಅದು ನಿಮಗೆ ಮತ್ತು ನಿಮ್ಮ ಕುಟುಂಬದ ಆರೋಗ್ಯ ಅಗತ್ಯಗಳಿಗೆ ಸಾಕಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೌಲ್ಯಮಾಪನವನ್ನು ಮಾಡುವುದು. ಅದು ಸಾಕಾಗುವುದಿಲ್ಲ ಎಂದಾದರೆ, ನೀವು ಒಂದು ಹೆಚ್ಚುವರಿ ಕವರ್ ಅನ್ನು ಪಡೆಯಬಹುದು; ಕೊರೋನಾ ಕವಚ್ ಅಥವಾ ಕೊರೋನಾ ರಕ್ಷಕ್.
3. ಕಾರ್ಪೊರೇಟ್ ಹಾಟ್ಶಾಟ್ಗಳು
ನೀವು ಪ್ರಸ್ತುತವಾಗಿ ನಿಮಗೆ ಗುಂಪು ಮೆಡಿಕಲ್ ಇನ್ಶೂರೆನ್ಸ್ ಅನ್ನು ಒದಗಿಸುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ, ಆದರೆ ಇದು ಸಾಕಾಗುವುದಿಲ್ಲ ಅಥವಾ ಇದು ಕೊರೋನಾವೈರಸ್ ಸಂಬಂಧಿತ ಚಿಕಿತ್ಸೆಗಳನ್ನು ಕವರ್ ಮಾಡುವುದಿಲ್ಲ ಎಂದು ನೀವು ಭಾವಿಸಿದರೆ, ಆಗ ಕೊರೋನಾ ಕವಚ್ ಅನ್ನು ಹೆಚ್ಚುವರಿ ಕವರ್ ಆಗಿ ಖರೀದಿಸುವುದು ಬುದ್ಧಿವಂತವಾಗಿಯಾಗುತ್ತದೆ ಏಕೆಂದರೆ ಇದು ಅದರ ಸಂಭಾವ್ಯ ಚಿಕಿತ್ಸಾ ವೆಚ್ಚಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.
4. ದುರ್ಬಲರು
ದುರದೃಷ್ಟವಶಾತ್, ಕೋವಿಡ್-19 ಕೆಲವು ಜನರಿಗೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತದೆ. 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು, ಮಧುಮೇಹ, ಕ್ಯಾನ್ಸರ್, ದೀರ್ಘಕಾಲದ ಉಸಿರಾಟದ ಕಾಯಿಲೆಗಳು ಮತ್ತು ಹೃದಯರಕ್ತನಾಳದ ಕಾಯಿಲೆಗಳಂತಹ ಇತರ ಕಾಯಿಲೆ ಮತ್ತು ಅನಾರೋಗ್ಯಗಳನ್ನು ಹೊಂದಿರುವವರು.
ನೀವು ಅಥವಾ ನಿಮ್ಮ ಪೋಷಕರು ಈ ವರ್ಗಕ್ಕೆ ಸೇರಿದ್ದರೆ, ಕೊರೋನಾವೈರಸ್ ಅನ್ನು ಕವರ್ ಮಾಡಲು ಹೆಚ್ಚುವರಿ ಕವರ್ (ನಿಮ್ಮ ಹೆಲ್ತ್ ಇನ್ಶೂರೆನ್ಸ್ ಹೊರತುಪಡಿಸಿ)ಅನ್ನೂ ಪಡೆಯುವುದು ಅರ್ಥಪೂರ್ಣವಾಗಿರುತ್ತದೆ.
ಕೊರೋನಾ ಕವಚ್ ಪಾಲಿಸಿಯ ಅನುಕೂಲಗಳು ಮತ್ತು ಅನಾನುಕೂಲಗಳು
ಅನುಕೂಲಗಳು
ಒಂದು-ಬಾರಿ ಪಾವತಿ ಕವರ್ : ಸಾಮಾನ್ಯ, ವಾರ್ಷಿಕ ಪ್ರೀಮಿಯಂಗಿಂತ ಭಿನ್ನವಾಗಿ, ಖರೀದಿಯ ಸಮಯದಲ್ಲಿ ನೀವು ಕೊರೋನಾ ಕವಚ್ ಪ್ರೀಮಿಯಂ ಅನ್ನು ಮಾತ್ರ ಪಾವತಿಸಬೇಕಾಗುತ್ತದೆ.
ಕಡಿಮೆ ವೇಟಿಂಗ್ ಪೀರಿಯಡ್ : ಕೊರೋನಾ ಕವಚ್ ಕವರ್ ನ ವೇಟಿಂಗ್ ಪೀರಿಯಡ್ 15-ದಿನಗಳು ಮಾತ್ರವಾಗಿದೆ, ಅಂದರೆ ನೀವು ಕವರ್ ಅನ್ನು ಖರೀದಿಸಿದ 15 ದಿನಗಳ ನಂತರ ಈ ಪ್ರಯೋಜನವನ್ನು ಕ್ಲೈಮ್ ಮಾಡಬಹುದು ಮತ್ತು ಇದರ ಪ್ರಯೋಜನವನ್ನು ಪಡೆಯಬಹುದು.
ಯಾವುದೇ ಹೆಲ್ತ್ ಇನ್ಶೂರೆನ್ಸ್ ಇಲ್ಲದವರಿಗೆ ಅತ್ಯಂತ ಸೂಕ್ತವಾಗಿರುತ್ತದೆ : ನೀವು ಇದೀಗ ಯಾವುದೇ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿಲ್ಲದಿದ್ದರೆ, ಅದರ ಕೈಗೆಟುಕುವ ಬೆಲೆ ಮತ್ತು ಕಡಿಮೆ ವೇಟಿಂಗ್ ಪೀರಿಯಡ್ ಅನ್ನು ಪರಿಗಣಿಸಿ ಕೊರೋನಾ ಕವಚ್ ಅನ್ನು ಖರೀದಿಸುವುದು ಸಮಂಜಸವಾದ ಆಯ್ಕೆಯಾಗಿದೆ.
- ಕೈಗೆಟುಕುವ ಪ್ರೀಮಿಯಂ : ಐಆರ್ಡಿಎಐ ಕೊರೋನಾ ಕವಚ್ ಅನ್ನು ಬಿಡುಗಡೆ ಮಾಡಿದ ಉದ್ದೇಶವು ಈ ಅನಿಶ್ಚಿತ ಸಮಯದಲ್ಲಿ ಜನರಿಗೆ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡುವುದು ಆಗಿದೆ ಮತ್ತು ಆದ್ದರಿಂದ ಇದರ ಬೆಲೆಯನ್ನು ಕೈಗೆಟುಕುವ ದರದಲ್ಲಿ ನಿಗದಿಪಡಿಸಲಾಗಿದೆ.
ಅನಾನುಕೂಲಗಳು
ಇದು ಒಂದು ಅಲ್ಪಾವಧಿಯ ಕವರ್ ಆಗಿದೆ : ಕೊರೋನಾ ಕವಚ್ ಕವರ್ ಅನ್ನು ನಿರ್ದಿಷ್ಟವಾಗಿ ಅಲ್ಪಾವಧಿಯ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ ಮತ್ತು ಆದ್ದರಿಂದ ಅದರ ಪಾವತಿ ಸಹ ಒಂದು ಬಾರಿಯದ್ದೇ ಆಗಿದೆ. ಈ ಕವರ್ 9.5 ತಿಂಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ ಮತ್ತು ನೀವು ಒಂದು ಕ್ಲೈಮ್ ಮಾಡಿದ ನಂತರ ಇದರ ಅವಧಿ ಮುಕ್ತಾಯವಾಗುತ್ತದೆ.
ಚಿಕಿತ್ಸೆಯು ಕೋವಿಡ್-19 ಗೆ ಸೀಮಿತವಾಗಿದೆ : ಕೊರೋನಾ ಕವಚ್ ಕವರ್ ಅನ್ನು ಕೇವಲ ಕೋವಿಡ್-19 ನ ಚಿಕಿತ್ಸೆ ಮತ್ತು ಆಸ್ಪತ್ರೆಗೆ ಸೇರಿಸುವ ವೆಚ್ಚವನ್ನು ಕವರ್ ಮಾಡಲು ವಿನ್ಯಾಸಗೊಳಿಸಲಾಗಿದೆ ಹಾಗೂ ಇದು ಯಾವುದೇ ಇತರ ಕಾಯಿಲೆಗಳು ಮತ್ತು ರೋಗಗಳನ್ನು ಒಳಗೊಂಡಿರುವುದಿಲ್ಲ.
ಸೀಮಿತ ಸಮ್ ಇನ್ಶೂರ್ಡ್ : ಕೊರೋನಾ ಕವಚ್ ಕವರ್ ಅನ್ನು ಕೋವಿಡ್-19 ನ ಚಿಕಿತ್ಸೆ ಮತ್ತು ಆಸ್ಪತ್ರೆಯ ವೆಚ್ಚಗಳಿಗಾಗಿ ಮಾತ್ರ ಮಾಡಲಾಗಿರುವುದರಿಂದ, ಸಮ್ ಇನ್ಶೂರ್ಡ್ ಗರಿಷ್ಠ 5 ಲಕ್ಷಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ಸೀಮಿತ ಆರೋಗ್ಯ ಮತ್ತು ಹಣಕಾಸಿನ ಪ್ರಯೋಜನಗಳು : ಕೊರೋನಾ ಕವಚವು ಕೈಗೆಟುಕುವ ಬೆಲೆಯಲ್ಲಿದ್ದರೂ, ಇದು ಕೊರೋನಾವೈರಸ್ ಸಂಬಂಧಿತ ಚಿಕಿತ್ಸೆಗಳನ್ನು ಮಾತ್ರ ಕವರ್ ಮಾಡುತ್ತದೆ, ಆದ್ದರಿಂದ ಆರೋಗ್ಯ ಮತ್ತು ಹಣಕಾಸಿನ ದೃಷ್ಟಿಕೋನದಿಂದ, ಹಲವು ಪ್ರಯೋಜನಗಳೊಂದಿಗೆ, ವಿಶೇಷವಾಗಿ ದೀರ್ಘಕಾಲೀನ ಪ್ರಯೋಜನಗಳೊಂದಿಗೆ ಬರುವ ಪ್ರಮಾಣಿತ ಹೆಲ್ತ್ ಇನ್ಶೂರೆನ್ಸ್ ಗೆ ಹೋಲಿಸಿದರೆ, ಇದು ಬಹಳ ಸೀಮಿತ ಪ್ರಯೋಜನಗಳೊಂದಿಗೆ ಬರುತ್ತದೆ.
- ಉತ್ತಮ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಹೊಂದಿರುವವರಿಗೆ ಅಷ್ಟು ಲಾಭದಾಯಕವಲ್ಲ : ನೀವು ನಿಮ್ಮ ಮತ್ತು ನಿಮ್ಮ ಕುಟುಂಬದ ಸದಸ್ಯರಿಗಾಗಿ ಈಗಾಗಲೇ ಒಂದು ಉತ್ತಮ ಇನ್ಶೂರೆನ್ಸ್ ಯೋಜನೆಯನ್ನು ಹೊಂದಿರುವವರಾಗಿದ್ದರೆ, ನಿಮ್ಮ ಪ್ರಸ್ತುತ ಹೆಲ್ತ್ ಇನ್ಶೂರೆನ್ಸ್ ಕೂಡಾ ಕೋವಿಡ್-19 ಅನ್ನು ಕವರ್ ಮಾಡುವುದರಿಂದ ಕೊರೋನಾ ಕವಚ್ ಖರೀದಿಸುವುದರಲ್ಲಿ ಹೆಚ್ಚಿನ ಅರ್ಥವಿಲ್ಲ.
ಕೊರೋನಾ ಕವಚ್ ಪಾಲಿಸಿಯನ್ನು ಖರೀದಿಸುವಾಗ ನೀವು ಯಾವ ಅಂಶಗಳನ್ನು ಪರಿಗಣಿಸಬೇಕು?
ಬ್ರ್ಯಾಂಡ್ - ಅನೇಕ ಹೆಲ್ತ್ ಇನ್ಶೂರರ್ ಗಳು ಇಂದು ಕೊರೋನಾ ಕವಚ್ ಕವರ್ ಅನ್ನು ನೀಡುತ್ತಿದ್ದಾರೆ. ಒದಗಿಸಿದ ಪಾವತಿಯು ಒಂದೇ ಆಗಿರಬಹುದು, ಆದರೆ ನೀವು ಆಯ್ಕೆ ಮಾಡುವ ಬ್ರ್ಯಾಂಡ್ ಒಟ್ಟಾರೆ ವ್ಯತ್ಯಾಸವನ್ನು ಮಾಡುತ್ತದೆ. ಆದ್ದರಿಂದ, ನೀವು ಆಯ್ಕೆ ಮಾಡಲು ಹಲವು ಆಯ್ಕೆಗಳನ್ನು ಹೊಂದಿದ್ದರೂ, ಮಾರುಕಟ್ಟೆಯಲ್ಲಿನ ಎಲ್ಲಾ ಹೆಲ್ತ್ ಇನ್ಶೂರರ್ ಗಳ ಮೌಲ್ಯಮಾಪನ ಮಾಡಿ - ಅವರ ಖ್ಯಾತಿ, ಸಾಮಾಜಿಕ ಮಾಧ್ಯಮ ರೇಟಿಂಗ್ಗಳು ಮತ್ತು ಸಾಮಾನ್ಯ ಗ್ರಹಿಕೆಯನ್ನು ಪರಿಶೀಲಿಸಿ. ಇದರಿಂದ ನಿಮ್ಮ ಆರೋಗ್ಯ ಮತ್ತು ಸಂಪತ್ತಿಗೆ ನೀವು ಉತ್ತಮ ಆಯ್ಕೆಯನ್ನು ಮಾಡಲು ಸಾಧ್ಯವಾಗುತ್ತದೆ.
ವೇಟಿಂಗ್ ಪೀರಿಯಡ್ ಗಳು - ಕೊರೋನಾ ಕವಚ್ ಕವರ್ 15-ದಿನಗಳ ಪ್ರಮಾಣಿತ ಆರಂಭಿಕ ವೇಟಿಂಗ್ ಪೀರಿಯಡ್ ನೊಂದಿಗೆ ಬರುತ್ತದೆ. ಆದಾಗ್ಯೂ, ನೀವು ಒಂದು ವಿಸ್ತೃತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಲು ಯೋಜಿಸುತ್ತಿದ್ದರೆ, ಹೆಲ್ತ್ ಇನ್ಶೂರರ್ ಗಳು ನೀಡುವ ವಿಭಿನ್ನ ಕಾಯುವಿಕೆ ಅವಧಿಗಳನ್ನು ಪರಿಶೀಲಿಸಿ ಮತ್ತು ನಿಮಗೆ ಮತ್ತು ನಿಮ್ಮ ಕುಟುಂಬದ ಪರಿಸ್ಥಿತಿಗೆ ಸೂಕ್ತವಾದ ಒಂದನ್ನು ಆರಿಸಿಕೊಳ್ಳಿ. ಉದಾಹರಣೆಗೆ, ಮೆಟರ್ನಿಟಿ ಕವರ್ ಗಾಗಿ ಇರುವ ಕಾಯುವಿಕೆ ಅವಧಿಯು ಮಕ್ಕಳನ್ನು ಹೊಂದಲು ಯೋಜಿಸದೆ ಇದ್ದವರಿಗೆ ಅರ್ಥವಾಗದು ಆದರೆ ಶೀಘ್ರದಲ್ಲೇ ಮಕ್ಕಳನ್ನು ಹೊಂದಲು ಯೋಜಿಸುತ್ತಿರುವವರಿಗೆ ಖಂಡಿತ ಅರ್ಥವಾಗುವುದು.
ಸೇವಾ ಪ್ರಯೋಜನಗಳು - ಎಲ್ಲಾ ಹೆಲ್ತ್ ಇನ್ಶೂರರ್ ಗಳು ಒಂದೇ ರೀತಿಯ ಕೊರೋನಾ ಕವಚ್ ಪಾಲಿಸಿಗಳನ್ನು ನೀಡುತ್ತಿರುವುದರಿಂದ, ಅವರು ನೀಡುವ ಸೇವಾ ಪ್ರಯೋಜನಗಳಿಂದಾಗಿ ಅವರು ಪರಸ್ಪರ ಭಿನ್ನವಾಗಿರುತ್ತಾರೆ. ಆದ್ದರಿಂದ, ಯಾವಾಗಲೂ ನಿಮಗೆ ಮೌಲ್ಯಯುತವಾಗಿ ತೋರುವ ಯಾವುದೇ ಹೆಚ್ಚುವರಿ ಪ್ರಯೋಜನಗಳಿಗಾಗಿ ಹುಡುಕಿರಿ.
ಕ್ಯಾಶ್ಲೆಸ್ ಆಸ್ಪತ್ರೆಗಳು - ಪ್ರತಿ ಹೆಲ್ತ್ ಇನ್ಶೂರರ್ ಕ್ಯಾಶ್ಲೆಸ್ ಆಸ್ಪತ್ರೆಗಳ ನೆಟ್ವರ್ಕ್ ಅನ್ನು ಹೊಂದಿದ್ದು ಅಲ್ಲಿ ನೀವು ಕ್ಯಾಶ್ಲೆಸ್ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳಬಹುದಾದರಿಂದ ಈ ಪ್ರಕ್ರಿಯೆಯು ರಿಇಂಬರ್ಸ್ ಮೆಂಟ್ ಪ್ರಕ್ರಿಯೆಗಿಂತ ಸ್ವಲ್ಪ ಉತ್ತಮವಾಗಿರುತ್ತದೆ. ಆದ್ದರಿಂದ, ನಿಮ್ಮ ಸಂಭಾವ್ಯ ಹೆಲ್ತ್ ಇನ್ಶೂರರ್ ನಿಮ್ಮ ಆಯ್ಕೆಯ ಆಸ್ಪತ್ರೆಯಲ್ಲಿ ಕ್ಯಾಶ್ಲೆಸ್ ಚಿಕಿತ್ಸೆಯನ್ನು ನೀಡುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ಕ್ಯಾಶ್ಲೆಸ್ ಆಸ್ಪತ್ರೆಗಳ ಪಟ್ಟಿಯನ್ನು ಪರಿಶೀಲಿಸಿ.
ಪ್ರೊಸೆಸ್ - ವಿಮಾ ಪ್ರಕ್ರಿಯೆಗಳು ದೀರ್ಘ ಮತ್ತು ಕಷ್ಟಕರವಾಗಿರುವುದರಿಂದ ಸಾಮಾನ್ಯವಾಗಿ ಕೆಟ್ಟ ಹೆಸರನ್ನು ಹೊಂದಿರುತ್ತವೆ. ಆದರೆ, ಇಂದು ಅನೇಕ ಆಧುನಿಕ ಕಂಪೆನಿಗಳು ಇದಕ್ಕೆ ತದ್ವಿರುದ್ಧವಾಗಿವೆ! ಆದ್ದರಿಂದ, ನಿಮ್ಮ ಸಂಭಾವ್ಯ ಆರೋಗ್ಯ ಇನ್ಶೂರರ್ ನ ಪ್ರೊಸೆಸ್ ಗಳನ್ನು ಪರಿಶೀಲಿಸಿ; ಅವು ಡಿಜಿಟಲ್-ಸ್ನೇಹಿ, ಶೂನ್ಯ-ಸ್ಪರ್ಶವಾಗಿವೆಯೇ ಅಥವಾ ಹೆಚ್ಚು ಸಾಂಪ್ರದಾಯಿಕವಾಗಿವೆಯೇ ಮತ್ತು ನಿಮಗಾಗಿ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಅದನ್ನೇ ಆರಿಸಿಕೊಳ್ಳಿ!
ಕ್ಲೈಮ್ ಸೆಟಲ್ ಮೆಂಟ್ ರೇಶಿಯೋ - ಅಗತ್ಯವಿರುವ ಸಮಯದಲ್ಲಿ ನಿಮ್ಮ ಕ್ಲೈಮ್ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಹೆಲ್ತ್ ಇನ್ಶೂರರ್ ಅನ್ನೇ ನೀವು ಬಯಸುತ್ತೀರಿ!
- ಗ್ರಾಹಕರ ವಿಮರ್ಶೆಗಳು - ಗ್ರಾಹಕರು ಒಂದು ಉತ್ಪನ್ನದ ಅತ್ಯಂತ ವಿಶ್ವಾಸಾರ್ಹ ಪ್ರತಿಕ್ರಿಯೆಯ ಮೂಲವಾಗಿದ್ದಾರೆ! ಆದ್ದರಿಂದ, ನಿಮ್ಮ ಕೊರೋನಾ ಕವಚ್ ಅಥವಾ ಕೊರೋನಾವೈರಸ್ ಅನ್ನು ಒಳಗೊಂಡಿರುವ ಯಾವುದೇ ಇತರ ಹೆಲ್ತ್ ಇನ್ಶೂರೆನ್ಸ್ ಅನ್ನು ನೀವು ಯಾವ ಇನ್ಶೂರರ್ ನಿಂದ ತೆಗೆದುಕೊಳ್ಳಲು ಬಯಸುತ್ತೀರೋ ಅವರ ಗ್ರಾಹಕರ ವಿಮರ್ಶೆಗಳನ್ನು ಯಾವಾಗಲೂ ನೋಡಿ ಹಾಗೂ ಇದರಿಂದ ನೀವು ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುವುದು ಖಚಿತವಾಗುತ್ತದೆ!
ಕೋವಿಡ್-19 ಗಾಗಿ ಇತರ ಹೆಲ್ತ್ ಇನ್ಶೂರೆನ್ಸ್ ಆಯ್ಕೆಗಳು
ಕೊರೋನಾ ಕವಚ್ ಕವರ್ನ ಹೊರತಾಗಿ, ಕೋವಿಡ್-19 ಗಾಗಿ ಕವರೇಜ್ ನೀಡುವ ಹಲವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಇವೆ, ಅವುಗಳೆಂದರೆ:
ಕೋವಿಡ್-19 ಅನ್ನು ಕವರ್ ಮಾಡುವ ಹೆಲ್ತ್ ಇನ್ಶೂರೆನ್ಸ್ ಗಳು
ಇಂದು, ಹೆಚ್ಚಿನ ಗುಣಮಟ್ಟದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಕೊರೋನಾವೈರಸ್ ಅನ್ನು ಕವರ್ ಮಾಡುತ್ತವೆ, ಇದು ಸಾಂಕ್ರಾಮಿಕವಾಗಿದ್ದರೂ ಸಹ.
ನೀವು ಈಗಾಗಲೇ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆದಿದ್ದರೆ, ಅದರಲ್ಲಿ ಕೋವಿಡ್-19 ಕವರ್ ಆಗಿದೆಯೇ ಇಲ್ಲವೇ ಎಂದು ನಿಮ್ಮ ಇನ್ಶೂರರ್ ನೊಂದಿಗೆ ದೃಢವಾಗಿ ಪರಿಶೀಲಿಸಿ.
ನೀವು ಇನ್ನೂ ಕೊರೊನಾವೈರಸ್ಗಾಗಿ ಹೆಲ್ತ್ ಇನ್ಶೂರೆನ್ಸ್ ಪಡೆದಿಲ್ಲದಿದ್ದರೆ, ನಿಮ್ಮ ಆಯ್ಕೆಗಳ ಮೌಲ್ಯಮಾಪನ ಮಾಡಲು ಮತ್ತು ಕೋವಿಡ್-19 ಗಾಗಿ ಮಾತ್ರವಲ್ಲದೆ, ದೀರ್ಘಾವಧಿಯಲ್ಲಿ ನಿಮ್ಮ ಇತರ ಎಲ್ಲಾ ಆರೋಗ್ಯ ಅಗತ್ಯಗಳಿಗಾಗಿಯೂ ಸಹ ಇದನ್ನು ಪಡೆಯಲು ನಿರ್ಧರಿಸಲು ಇದು ಸರಿಯಾದ ಸಮಯವಾಗಿದೆ.
ಕೊರೋನಾ ರಕ್ಷಕ್ ಹೆಲ್ತ್ ಇನ್ಶೂರೆನ್ಸ್
ಕೊರೋನಾ ರಕ್ಷಕ್ ಇದೆ ರೀತಿಯ, ಪಾಕೆಟ್ ಗಾತ್ರದ ಹೆಲ್ತ್ ಇನ್ಶೂರೆನ್ಸ್ ಆಗಿದ್ದು, ಕೊರೊನಾವೈರಸ್ ನಿಂದ ಮಾತ್ರ ಕವರ್ ನೀಡುತ್ತದೆ. ಇಲ್ಲಿಯೂ ಸಹ, ನೀವು ಖರೀದಿಸುವ ಸಮಯದಲ್ಲಿ ಮಾತ್ರ ಪ್ರೀಮಿಯಂ ಪಾವತಿಸಬೇಕಾಗುತ್ತದೆ.
ಆದಾಗ್ಯೂ, ಕ್ಯಾಶ್ಲೆಸ್ ಚಿಕಿತ್ಸೆಗಳನ್ನು ಆಯ್ಕೆ ಮಾಡಿಕೊಳ್ಳುವ ಬದಲು ಅಥವಾ ವೆಚ್ಚವನ್ನು ಮರುಪಾವತಿ ಮಾಡಿಸಿಕೊಳ್ಳುವ ಬದಲು, ಕೊರೋನಾ ರಕ್ಷ ಕ್, ನೀವು ವೈರಸ್ ಸೋಂಕಿಗೆ ಒಳಗಾಗಿದ್ದರೆ ನಿಮ್ಮ ಸಂಪೂರ್ಣ ಸಮ್ ಇನ್ಶೂರ್ಡ್ ಅನ್ನು ಒಟ್ಟಾಗಿ ನೀಡುವ ಒಂದು ಲಂಪ್ಸಮ್ ಕವರ್ ಆಗಿದೆ.
ಗ್ರೂಪ್ ಹೆಲ್ತ್ ಇನ್ಶೂರೆನ್ಸ್ - ಕೊರೋನಾವೈರಸ್ ಕವರ್
ಇಂದಿನ ಪರಿಸ್ಥಿತಿಗೆ ಅನುಗುಣವಾಗಿ, ಎಲ್ಲಾ ದೊಡ್ಡ ಮತ್ತು ಸಣ್ಣ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಒದಗಿಸುವಂತೆ ಶಿಫಾರಸು ಮಾಡಲಾಗಿದೆ.
ಆದಾಗ್ಯೂ, ಕೆಲವು ಸಣ್ಣ ವ್ಯಾಪಾರಗಳಿಗೆ ಕಾಂಪ್ರೆಹೆನ್ಸಿವ್ ಆರೋಗ್ಯ ಪ್ಲಾನ್ ಗಳನ್ನು ನಿಭಾಯಿಸಲು ಸಾಧ್ಯವಾಗದಿರಬಹುದು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ, ಬದಲಿಗೆ ಅವರು ತಮ್ಮ ಉದ್ಯೋಗಿಗಳನ್ನು ಕೊರೋನಾವೈರಸ್ ವಿರುದ್ಧ ಕವರ್ ಮಾಡಲು ಗುಂಪು ಕೊರೋನಾವೈರಸ್ ಕವರ್ ಅನ್ನು ಆಯ್ಕೆ ಮಾಡಬಹುದು.