ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆ ಎಂದರೇನು?
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮೆಡಿಕಲ್ ವೆಚ್ಚದೊಂದಿಗೆ ಹೆಲ್ತ್ ಇನ್ಶೂರೆನ್ಸ್ ಅತ್ಯಗತ್ಯ ಹೂಡಿಕೆಯಾಗಿದೆ. ಹಾಗೂ, ನೀವು ಮತ್ತು ನಿಮ್ಮ ಪ್ರೀತಿಪಾತ್ರರು, ಮೆಡಿಕಲ್ ವೆಚ್ಚಗಳ ವಿಷಯದಲ್ಲಿ ಕಾಳಜಿ ವಹಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಲು, ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಮಾರ್ಗವಾಗಿದೆ.
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯು ಒಂದೇ ಪಾಲಿಸಿಯಡಿಯಲ್ಲಿ ಎಲ್ಲವನ್ನೂ ಒಳಗೊಳ್ಳುವ ಕವರೇಜನ್ನು ನೀಡುತ್ತದೆ. ಅಂದರೆ ನೀವು ದೊಡ್ಡ ಮೊತ್ತದ ಮೆಡಿಕಲ್ ವೆಚ್ಚಗಳನ್ನು ಸರಿದೂಗಿಸಲು ಹಲವಾರು ರೀತಿಯ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳನ್ನು ಖರೀದಿಸಬೇಕಾಗಿಲ್ಲ. ಮತ್ತು, ಬೇಸಿಕ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಿಗಿಂತ ಭಿನ್ನವಾಗಿ, ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಆರ್ಗನ್ ಟ್ರಾನ್ಸಪ್ಲಾಂಟ್ ಮತ್ತು ಚಿಕಿತ್ಸೆಯ ಪರ್ಯಾಯ ವಿಧಾನಗಳಂತಹ ಅಧಿಕ ವೆಚ್ಚದ ಚಿಕಿತ್ಸೆಗಳನ್ನು ಕವರ್ ಮಾಡುತ್ತದೆ.
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯು ಏನನ್ನು ಕವರ್ ಮಾಡುತ್ತದೆ?
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಈ ಕೆಳಗಿನವುಗಳನ್ನು ಒಳಗೊಂಡಂತೆ ವ್ಯಾಪಕವಾದ ಕವರೇಜನ್ನು ಹೊಂದಿದೆ:
- ಒಳರೋಗಿಯ ಹಾಸ್ಪಿಟಲೈಸೇಷನ್ - ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಂತೆ, ಇದು 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದಾಗ ಉಂಟಾಗುವ ಮೆಡಿಕಲ್ ವೆಚ್ಚಗಳನ್ನು ಕವರ್ ಮಾಡುತ್ತದೆ. ಉದಾಹರಣೆಗೆ ಕೊಠಡಿ ಬಾಡಿಗೆ ಶುಲ್ಕಗಳು, ನರ್ಸಿಂಗ್ ಶುಲ್ಕಗಳು, ಆಕ್ಸಿಜನ್, ಐಸಿಯು ಶುಲ್ಕಗಳು ಇತ್ಯಾದಿ.
- ಪ್ರೀ ಮತ್ತು ಪೋಸ್ಟ್ ಹಾಸ್ಪಿಟಲೈಸೇಷನ್ - ಇವುಗಳು ಡಿಸ್ಚಾರ್ಜ್ ಆದ ನಂತರ ಹಾಗೂ ನೀವು ದಾಖಲಾಗುವ ಮೊದಲು ಉಂಟಾಗುವ ಮೆಡಿಕಲ್ ವೆಚ್ಚಗಳು. ಇದು ಡಯಾಗ್ನೋಸ್ಟಿಕ್ಸ್ ಪರೀಕ್ಷೆಗಳು, ಇನ್ವೆಸ್ಟಿಗೇಷನ್ ವಿಧಾನಗಳು, ಫಾಲೋ-ಅಪ್ ಪರೀಕ್ಷೆಗಳು, ಔಷಧಿಗಳು ಮುಂತಾದವುಗಳನ್ನು ಕವರ್ ಮಾಡುತ್ತದೆ.
- ಡೇಕೇರ್ ಪ್ರಕ್ರಿಯೆಗಳು - ಡಯಾಲಿಸಿಸ್, ಕಿಮೊಥೆರಪಿ, ಆಂಜಿಯೋಗ್ರಫಿ, ರೇಡಿಯೊಥೆರಪಿ, ಇತ್ಯಾದಿಗಳಂತಹ ಆಸ್ಪತ್ರೆಯಲ್ಲಿ ಕೈಗೊಳ್ಳಲಾದ 24 ಗಂಟೆಗಳಿಗಿಂತ ಕಡಿಮೆ ಅವಧಿಯ ಅಗತ್ಯವಿರುವ ಡೇಕೇರ್ ಮೆಡಿಕಲ್ ಚಿಕಿತ್ಸೆಗಳನ್ನು ಕವರ್ ಮಾಡುತ್ತದೆ.
- ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳು - ಇದು 1-4 ವರ್ಷಗಳ ವೇಟಿಂಗ್ ಪೀರಿಯಡ್ ನಂತರ ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಅಸ್ತಮಾದಂತಹ ಮೊದಲೇ ಅಸ್ತಿತ್ವದಲ್ಲಿರುವ ಮೆಡಿಕಲ್ ಪರಿಸ್ಥಿತಿಗಳನ್ನು ಕವರ್ ಮಾಡುತ್ತದೆ.
- ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್ - ಇದು ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್ ಅಗತ್ಯವಿರುವ ಸಂದರ್ಭಗಳನ್ನು ಕವರ್ ಮಾಡುತ್ತದೆ.
- ಆರ್ಗನ್ ಡೋನರ್ ವೆಚ್ಚಗಳು - ಅಂಗಾಂಗ ಕಸಿಯ ಸಂದರ್ಭದಲ್ಲಿ, ಅಂಗಾಂಗ ದಾನ ಪ್ರಕ್ರಿಯೆಯಲ್ಲಿ ಉಂಟಾಗುವ ವೆಚ್ಚವನ್ನು ಪಾಲಿಸಿಯು ಕವರ್ ಮಾಡಬಹುದು.
- ಕ್ರಿಟಿಕಲ್ ಇಲ್ ನೆಸ್ ಚಿಕಿತ್ಸೆ - ಇದು ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯ, ಹೃದಯಾಘಾತ, ಪಾರ್ಶ್ವವಾಯು ಮತ್ತು ಪಾರ್ಶ್ವವಾಯು ಮುಂತಾದ ಕ್ರಿಟಿಕಲ್ ಇಲ್ ನೆಸ್ ಚಿಕಿತ್ಸೆಯನ್ನು ಕವರ್ ಮಾಡುತ್ತದೆ.
- ಆಂಬ್ಯುಲೆನ್ಸ್ ಶುಲ್ಕಗಳು - ಇದು ತುರ್ತು ಆಂಬ್ಯುಲೆನ್ಸ್ ಸೇವೆಗಳ ವೆಚ್ಚವನ್ನು ಕವರ್ ಮಾಡುತ್ತದೆ.
- ವಾರ್ಷಿಕ ಹೆಲ್ತ್ ಚೆಕಪ್ - ಯಾವುದಾದರೂ ಪತ್ತೆಯಾಗದ ಕಾಯಿಲೆಯ ಸಮಸ್ಯೆಗಳನ್ನು ತಪ್ಪಿಸಲು ಮತ್ತು ಉತ್ತಮ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಕಾಂಪ್ಲಿಮೆಂಟರಿ ವಾರ್ಷಿಕ ಮೆಡಿಕಲ್ ಪರೀಕ್ಷೆಗಳನ್ನು ಮಾಡಲಾಗುವುದು.
- ಆ್ಯಡ್-ಆನ್ ಕವರ್‌ಗಳು - ಆ್ಯಡ್-ಆನ್ ಕವರ್‌ಗಳೊಂದಿಗೆ ನಿಮ್ಮ ಕವರೇಜ್ ಅನ್ನು ವಿಸ್ತರಿಸುವ ಆಯ್ಕೆಯನ್ನು ನೀವು ಪಡೆಯುತ್ತೀರಿ, ಉದಾಹರಣೆಗೆ:
- ಮೆಟರ್ನಿಟಿ ಮತ್ತು ನವಜಾತ ಶಿಶುವಿನ ಕವರ್ - ಇದು ಗರ್ಭಧಾರಣೆ ಮತ್ತು ಹೆರಿಗೆಗೆ ಸಂಬಂಧಿಸಿದ ವೆಚ್ಚಗಳನ್ನು ಮತ್ತು ನವಜಾತ ಶಿಶುವಿಗೆ ಸಂಬಂಧಿಸಿದ ವೆಚ್ಚಗಳನ್ನು ಕವರ್ ಮಾಡುತ್ತದೆ.
- ಆಯುಷ್ ಚಿಕಿತ್ಸೆ - ಇದು ಆಯುರ್ವೇದ, ಯುನಾನಿ, ಸಿದ್ಧ ಮತ್ತು/ಅಥವಾ ಹೋಮಿಯೋಪತಿಯಂತಹ ಪರ್ಯಾಯ ಚಿಕಿತ್ಸೆಗಳನ್ನು ಕವರ್ ಮಾಡುತ್ತದೆ.
- ಹಾಸ್ಪಿಟಲ್ ಕ್ಯಾಶ್ ಪ್ರಯೋಜನ - ಹಾಸ್ಪಿಟಲೈಸೇಷನ್ ಸಮಯದಲ್ಲಿ ಡೈಲಿ ಕ್ಯಾಶ್ ಪ್ರಯೋಜನ, ಆಸ್ಪತ್ರೆಯ ಬಿಲ್‌ಗೆ ಮೀರಿದ ವೆಚ್ಚಗಳನ್ನು ಭರಿಸಲು ನೀವು ಬಳಸಬಹುದು.*
- ಝೋನ್ ಅಪ್‌ಗ್ರೇಡ್ - ಈ ಆ್ಯಡ್-ಆನ್ ಕವರ್‌ನೊಂದಿಗೆ, ಭಾರತದಾದ್ಯಂತ ವಿವಿಧ ನಗರ ಝೋನ್‌ಗಳಲ್ಲಿ ಚಿಕಿತ್ಸೆಗೆ ತಗಲುವ ವಿಭಿನ್ನ ವೆಚ್ಚಗಳನ್ನು ನೀವು ಲೆಕ್ಕ ಹಾಕಲು ಸಾಧ್ಯವಾಗುತ್ತದೆ.
ಸೂಚನೆ: ಡಿಜಿಟ್‌ನಲ್ಲಿ, ಕನ್ಸ್ಯೂಮೇಬಲ್ ಕವರ್ ಆ್ಯಡ್-ಆನ್ ಆಯ್ಕೆ ಮಾತ್ರ ಲಭ್ಯವಿದೆ.
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದುವುದರ ಪ್ರಯೋಜನಗಳು
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ:
1. ವ್ಯಾಪಕ ವ್ಯಾಪ್ತಿ
ದುರದೃಷ್ಟಕರ ಅಪಘಾತಗಳು, ಹಾಸ್ಪಿಟಲೈಸೇಷನ್ ವೆಚ್ಚಗಳು, ಡೇ ಕೇರ್ ಚಿಕಿತ್ಸೆಗಳು ಮತ್ತು ಮಾರಣಾಂತಿಕ ಗಂಭೀರ ಕಾಯಿಲೆಗಳ ಚಿಕಿತ್ಸೆಯಂತಹ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ, ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ವ್ಯಾಪಕ ಶ್ರೇಣಿಯ ಕವರೇಜ್ ನೀಡುತ್ತವೆ.
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಹೆಚ್ಚಿನ ಸಮ್ ಇನ್ಶೂರ್ಡ್ ಆಯ್ಕೆಗಳೊಂದಿಗೆ ಬರುತ್ತವೆ. ಇದರಿಂದ ನಿಮ್ಮ ಆರೋಗ್ಯ ವೆಚ್ಚಗಳಿಗೆ ನೀವು ಹೆಚ್ಚಿನ ವ್ಯಾಪ್ತಿಯನ್ನು ಪಡೆಯಬಹುದು.
2. ಮೆಡಿಕಲ್ ವೆಚ್ಚಗಳಿಂದ ರಕ್ಷಣೆ
ವ್ಯಾಪಕವಾದ ಕವರೇಜ್ ಎಂದರೆ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಯೋಜನೆಗಳು ಹೆಚ್ಚಿನ ಮೆಡಿಕಲ್ ವೆಚ್ಚಗಳನ್ನು ಕವರ್ ಮಾಡುತ್ತವೆ. ಇದು ಬೇಸಿಕ್ ಯೋಜನೆಗಳ ಅಡಿಯಲ್ಲಿ ಕವರ್ ಆಗದ ವೆಚ್ಚಗಳನ್ನು ಕವರ್ ಮಾಡುತ್ತದೆ. ಉದಾಹರಣೆಗೆ ಪ್ರೀ ಮತ್ತು ಪೋಸ್ಟ್ ಹಾಸ್ಪಿಟಲೈಸೇಷನ್, ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್, ಔಷಧಿಗಳು, ಇತ್ಯಾದಿ.
ಹೆಚ್ಚುವರಿಯಾಗಿ, ಕಾಂಪ್ರೆಹೆನ್ಸಿವ್ ಯೋಜನೆಗಳು ಸಾಮಾನ್ಯವಾಗಿ ಯಾವುದೇ ಕೊಠಡಿ ಬಾಡಿಗೆ ಮಿತಿ, ಹೆಚ್ಚಿನ ಐಸಿಯು ಕೊಠಡಿ ಬಾಡಿಗೆ ಮಿತಿಗಳು ಮತ್ತು ವಿಶಾಲವಾದ ಆಂಬ್ಯುಲೆನ್ಸ್ ಕವರ್ ಹೊಂದಿರುವ ಪ್ರಯೋಜನವನ್ನು ನೀಡುತ್ತವೆ.
3. ಹೆಚ್ಚುವರಿ ವ್ಯಾಪ್ತಿಗಳು
ಇತರ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಲ್ಲಿ ಲಭ್ಯವಿಲ್ಲದ ಹೆಚ್ಚಿನ ಪ್ರಯೋಜನಗಳನ್ನು ಸಹ, ನೀವು ಕಾಂಪ್ರೆಹೆನ್ಸಿವ್ ಹೆಲ್ತ್ ಯೋಜನೆಯೊಂದಿಗೆ ಪಡೆಯಲು ಸಾಧ್ಯವಾಗುತ್ತದೆ. ಇದು ಸಮ್ ಇನ್ಶೂರ್ಡ್ ನ ಮರುಪೂರಣದಂತಹ ವಿಷಯಗಳನ್ನು ಒಳಗೊಂಡಿರುತ್ತದೆ. ಪಾಲಿಸಿಯ ಅವಧಿಯಲ್ಲಿ ನೀವು ಇನ್ಶೂರೆನ್ಸ್ ಮೊತ್ತವನ್ನು ಖಾಲಿ ಮಾಡಿದ್ದರೆ ನಿಮ್ಮ ಎಸ್ಐ ಅನ್ನು ಮರುಪೂರಣಗೊಳಿಸಲಾಗುತ್ತದೆ ಅಥವಾ ನಿಮ್ಮ ನೋ ರೂಮ್ ರೆಂಟ್ ಕ್ಯಾಪಿಂಗ್ (ಅಂದರೆ ಗರಿಷ್ಠ ಕೊಠಡಿ ಬಾಡಿಗೆಗೆ ಮಿತಿಯಿಲ್ಲ) ಪ್ರಯೋಜನವನ್ನು ಒಳಗೊಂಡಿರುತ್ತದೆ.
4. ಕ್ಯಾಶ್‌ಲೆಸ್ ಕ್ಲೈಮ್‌ಗಳು
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಸಾಮಾನ್ಯವಾಗಿ ಕ್ಯಾಶ್‌ಲೆಸ್ ಕ್ಲೈಮ್‌ಗಳ ಸೌಲಭ್ಯವನ್ನು ನೀಡುತ್ತವೆ. ಅಲ್ಲಿ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪೂರೈಕೆದಾರರು ತಮ್ಮ ನೆಟ್‌ವರ್ಕ್ ಆಸ್ಪತ್ರೆಗಳೊಂದಿಗೆ ತಾವೇ ನೇರವಾಗಿ ಬಿಲ್‌ಗಳನ್ನು ನೋಡಿಕೊಳ್ಳುತ್ತಾರೆ. ಇದರರ್ಥ ನೀವು ನಿಮ್ಮ ಸ್ವಂತ ಜೇಬಿನಿಂದ ಯಾವುದೇ ಹಣವನ್ನು ಪಾವತಿಸುವ ಅಗತ್ಯವಿಲ್ಲ (ಯಾವುದೇ ಸಹ-ಪಾವತಿಗಳು ಅಥವಾ ಡಿಡಕ್ಟಿಬಲ್ ಗಳನ್ನು ಹೊರತುಪಡಿಸಿ).
5. ಕ್ಯುಮುಲೇಟಿವ್ ಬೋನಸ್
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಕ್ಯುಮುಲೇಟಿವ್ ಬೋನಸ್ ಪ್ರಯೋಜನದೊಂದಿಗೆ ಬರುತ್ತವೆ. ಪಾಲಿಸಿ ವರ್ಷದಲ್ಲಿ ಯಾವುದೇ ಕ್ಲೈಮ್‌ಗಳನ್ನು ಮಾಡದವರಿಗೆ ಯಾವುದೇ ಹೆಚ್ಚುವರಿ ಪ್ರೀಮಿಯಂ ಅನ್ನು ವಿಧಿಸದೆಯೇ ಅವರ ಸಮ್ ಇನ್ಸೂರ್ಡ್ನಲ್ಲಿ ಹೆಚ್ಚಳವನ್ನು ಮಾಡುತ್ತಾರೆ.
6. ಜೀವಮಾನದ ರಿನೀವೇಬಲಿಟಿ
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯು ಜೀವಿತಾವಧಿಯ ರಿನೀವಲ್ ಅನ್ನು ನೀಡುತ್ತದೆ. ಆದ್ದರಿಂದ ನೀವು ನಿಮ್ಮ ಪ್ರೀಮಿಯಂ ಅನ್ನು ಪಾವತಿಸುವವರೆಗೆ, ನಿಮ್ಮ ವಯಸ್ಸಿನ ಹೊರತಾಗಿಯೂ ನೀವು ಯೋಜನೆಯ ಪ್ರಯೋಜನಗಳನ್ನು ಆನಂದಿಸುವುದನ್ನು ಮುಂದುವರೆಸಬಹುದು.
7. ಟ್ಯಾಕ್ಸ್ ಪ್ರಯೋಜನಗಳು
ನಿಮಗಾಗಿ ಅಥವಾ ನಿಮ್ಮ ಕುಟುಂಬದ ಸದಸ್ಯರಿಗಾಗಿ ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದಾಗ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80D ಅಡಿಯಲ್ಲಿ ನೀವು ನಿಮ್ಮ ಪ್ರೀಮಿಯಂ ಮೊತ್ತದ ಮೇಲೆ ಟ್ಯಾಕ್ಸ್ ಪ್ರಯೋಜನಗಳನ್ನು ಪಡೆಯಬಹುದು.
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸುವ ಮೊದಲು ಪರಿಗಣಿಸಬೇಕಾದ ಪ್ರಮುಖ ವಿಷಯಗಳು
- ಎಲ್ಲಾ ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳನ್ನು ಹೀಗೆಯೇ ಕರೆಯಲಾಗುವುದಿಲ್ಲ. ಕೆಲವು ಡಿಜಿಟ್‌ನ ಕಂಫರ್ಟ್ ಆಯ್ಕೆಯಂತಹ ಇತರ ಹೆಸರುಗಳನ್ನು ಒಳಗೊಂಡಿರಬಹುದು.
- ನಿಮಗಾಗಿ ಹೆಚ್ಚು ಸೂಕ್ತವೆನಿಸುವ ಪಾಲಿಸಿಯೊಂದನ್ನು ಆಯ್ಕೆಮಾಡುವ ಮೊದಲು ಅವುಗಳ ಕವರೇಜ್ ಪ್ರಯೋಜನಗಳು ಮತ್ತು ಪ್ರೀಮಿಯಂನ ಆಧಾರದ ಮೇಲೆ ಆನ್‌ಲೈನ್‌ನಲ್ಲಿ ಲಭ್ಯವಿರುವ ವಿವಿಧ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳನ್ನು ಹೋಲಿಕೆ ಮಾಡಿ.
- ನಿಯಮಗಳು ಮತ್ತು ಷರತ್ತುಗಳನ್ನು ಓದುವ ಮೂಲಕ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಕವರ್ ಮಾಡುತ್ತದೆ ಮತ್ತು ಏನನ್ನು ಕವರ್ ಮಾಡುವುದಿಲ್ಲ ಎಂಬುದನ್ನು ಪರಿಶೀಲಿಸಲು ಮರೆಯದಿರಿ.
- ನಿಮ್ಮ ಆರೋಗ್ಯ ಅಗತ್ಯತೆಗಳು ಮತ್ತು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗುವ ಸದಸ್ಯರ ಸಂಖ್ಯೆಯನ್ನು ಆಧರಿಸಿ ನಿಮ್ಮ ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆ ಮಾಡಿ.
- ನಿಮ್ಮ ಇನ್ಶೂರೆನ್ಸ್ ಕಂಪನಿಯಿಂದ ಯಾವುದೇ ಪ್ರಮುಖ ಮಾಹಿತಿ ಅಥವಾ ಮೆಡಿಕಲ್ ಇತಿಹಾಸವನ್ನು ಮುಚ್ಚಿಡಬೇಡಿ.
- ನಿಮಗೆ ಸಾಧ್ಯವಾದರೆ, ಉತ್ತಮ ಕವರೇಜ್‌ಗಾಗಿ ವಿಭಿನ್ನ ಆ್ಯಡ್-ಆನ್‌ಗಳೊಂದಿಗೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಕಸ್ಟಮೈಸ್ ಮಾಡಿ.
- ನಿಮ್ಮ ಹೆಲ್ತ್ ಇನ್ಶೂರೆನ್ಸ್ ಅನ್ನು ಜೀವನದಲ್ಲಿ ಆದಷ್ಟು ಬೇಗ ಖರೀದಿಸಿ. ಇದರಿಂದ ನೀವು ಹೆಚ್ಚು ಸೂಕ್ತವಾದ ಪ್ರೀಮಿಯಂಗಳನ್ನು ಪಡೆಯುತ್ತೀರಿ ಮತ್ತು ವೇಟಿಂಗ್ ಪೀರಿಯಡ್ ಗಳನ್ನು ವೇಗವಾಗಿ ದಾಟುತ್ತೀರಿ.
- ನೀಡಲಾದ ಸೇವೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಕಂಪನಿಯ ಕಸ್ಟಮರ್ ರಿವ್ಯೂಗಳನ್ನು ಪರಿಶೀಲಿಸಿ.
- ಇನ್ಶೂರರ್ ಆ್ಯಡ್-ಆನ್‌ಗಳು, 24x7 ಸಪೋರ್ಟ್ ಮತ್ತು ಮುಂತಾದ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಾರೆಯೇ ಎಂದು ನೋಡಿ.
ತೀರ್ಮಾನ
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ವ್ಯಕ್ತಿಯೊಬ್ಬರು ಮಾಡಬಹುದಾದ ಅತ್ಯುತ್ತಮ ಹೂಡಿಕೆಗಳಲ್ಲಿ ಒಂದಾಗಿದೆ. ಇದು ಸಂಪೂರ್ಣ ರಕ್ಷಣೆಯನ್ನು ಒದಗಿಸುವುದರಿಂದ, ಬೇರೆ ಬೇರೆ ಕವರ್‌ಗಳನ್ನು ಪ್ರತ್ಯೇಕವಾಗಿ ಖರೀದಿಸದೆ ನೀವು ಹಣವನ್ನು ಉಳಿಸಬಹುದು. ಇದು ನಿಮ್ಮ ಉಳಿತಾಯವನ್ನು ರಕ್ಷಿಸಲು ಮತ್ತು ಆಸ್ಪತ್ರೆಯ ಬಿಲ್‌ಗಳ ಬಗ್ಗೆ ಚಿಂತಿಸದೆ ಉತ್ತಮ ಚಿಕಿತ್ಸೆಯನ್ನು ಪಡೆಯಲು ಸಹಾಯ ಮಾಡುತ್ತದೆ.
ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್, ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್, ವೈಯಕ್ತಿಕ ಅಪಘಾತದ ಇನ್ಶೂರೆನ್ಸ್ ಮತ್ತು ಮುಂತಾದ ವಿವಿಧ ರೀತಿಯ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಇಂದು ಲಭ್ಯವಿವೆ. ಆದ್ದರಿಂದ ನಿಮ್ಮ ಮತ್ತು ನಿಮ್ಮ ಕುಟುಂಬದ ಅವಶ್ಯಕತೆಗಳಿಗೆ ಸೂಕ್ತವೆನಿಸುವ ಸರಿಯಾದ ಯೋಜನೆಯನ್ನು ಆಯ್ಕೆ ಮಾಡುವುದು ತುಂಬಾ ಮುಖ್ಯ.
ಪದೇ ಪದೇ ಕೇಳಲಾದ ಪ್ರಶ್ನೆಗಳು
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್‌ನ ಅರ್ಥವೇನು?
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯು ಆಸ್ಪತ್ರೆಯ ವೆಚ್ಚಗಳು, ಆಂಬ್ಯುಲೆನ್ಸ್ ವೆಚ್ಚಗಳು, ಡೇಕೇರ್ ಪ್ರಕ್ರಿಯೆಗಳು, ರೆಗ್ಯುಲರ್ ಹೆಲ್ತ್ ಚೆಕಪ್, ತೀವ್ರ ಅನಾರೋಗ್ಯ, ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್ ಚಿಕಿತ್ಸೆ, ಪರ್ಯಾಯ ಚಿಕಿತ್ಸಾ ಆಯ್ಕೆಗಳು, ಪ್ರೀ ಮತ್ತು ಪೋಸ್ಟ್ ಹಾಸ್ಪಿಟಲೈಸೇಷನ್ ಮತ್ತು ನಿರ್ದಿಷ್ಟ ವೇಟಿಂಗ್ ಪೀರಿಯಡ್ ನಂತರ ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಹೆಲ್ತ್ ಕೇರ್ ಕವರೇಜನ್ನು ನೀಡುತ್ತದೆ.
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಮತ್ತು ರೆಗ್ಯುಲರ್ ಹೆಲ್ತ್ ಇನ್ಶೂರೆನ್ಸ್‌ನ ನಡುವಿನ ವ್ಯತ್ಯಾಸವೇನು?
ಎರಡೂ ವಿಧದ ಯೋಜನೆಗಳು ಮೆಡಿಕಲ್ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಯ ಮೂಲಭೂತ ವೆಚ್ಚಗಳಿಗೆ ಕವರೇಜ್ ನೀಡುತ್ತವೆ. ಆದಾಗ್ಯೂ, ರೆಗ್ಯುಲರ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಕೆಲವು ಷರತ್ತುಗಳನ್ನು ಒಳಗೊಂಡಿರುವುದಿಲ್ಲ ಅಥವಾ ಇತರ ಮಿತಿಗಳನ್ನು ಹೊಂದಿರುವುದಿಲ್ಲ. ಮತ್ತೊಂದೆಡೆ, ನೀವು ಮೇಲೆ ನೋಡಿದಂತೆ ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್, ಹೆಚ್ಚು ವ್ಯಾಪಕವಾದ ಕವರೇಜನ್ನು ಹೊಂದಿದೆ.