ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮೆಡಿಕಲ್ ವೆಚ್ಚದೊಂದಿಗೆ ಹೆಲ್ತ್ ಇನ್ಶೂರೆನ್ಸ್ ಅತ್ಯಗತ್ಯ ಹೂಡಿಕೆಯಾಗಿದೆ. ಹಾಗೂ, ನೀವು ಮತ್ತು ನಿಮ್ಮ ಪ್ರೀತಿಪಾತ್ರರು, ಮೆಡಿಕಲ್ ವೆಚ್ಚಗಳ ವಿಷಯದಲ್ಲಿ ಕಾಳಜಿ ವಹಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಲು, ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಮಾರ್ಗವಾಗಿದೆ.
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯು ಒಂದೇ ಪಾಲಿಸಿಯಡಿಯಲ್ಲಿ ಎಲ್ಲವನ್ನೂ ಒಳಗೊಳ್ಳುವ ಕವರೇಜನ್ನು ನೀಡುತ್ತದೆ. ಅಂದರೆ ನೀವು ದೊಡ್ಡ ಮೊತ್ತದ ಮೆಡಿಕಲ್ ವೆಚ್ಚಗಳನ್ನು ಸರಿದೂಗಿಸಲು ಹಲವಾರು ರೀತಿಯ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳನ್ನು ಖರೀದಿಸಬೇಕಾಗಿಲ್ಲ. ಮತ್ತು, ಬೇಸಿಕ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಿಗಿಂತ ಭಿನ್ನವಾಗಿ, ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಆರ್ಗನ್ ಟ್ರಾನ್ಸಪ್ಲಾಂಟ್ ಮತ್ತು ಚಿಕಿತ್ಸೆಯ ಪರ್ಯಾಯ ವಿಧಾನಗಳಂತಹ ಅಧಿಕ ವೆಚ್ಚದ ಚಿಕಿತ್ಸೆಗಳನ್ನು ಕವರ್ ಮಾಡುತ್ತದೆ.
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಈ ಕೆಳಗಿನವುಗಳನ್ನು ಒಳಗೊಂಡಂತೆ ವ್ಯಾಪಕವಾದ ಕವರೇಜನ್ನು ಹೊಂದಿದೆ:
ಸೂಚನೆ: ಡಿಜಿಟ್ನಲ್ಲಿ, ಕನ್ಸ್ಯೂಮೇಬಲ್ ಕವರ್ ಆ್ಯಡ್-ಆನ್ ಆಯ್ಕೆ ಮಾತ್ರ ಲಭ್ಯವಿದೆ.
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ:
ದುರದೃಷ್ಟಕರ ಅಪಘಾತಗಳು, ಹಾಸ್ಪಿಟಲೈಸೇಷನ್ ವೆಚ್ಚಗಳು, ಡೇ ಕೇರ್ ಚಿಕಿತ್ಸೆಗಳು ಮತ್ತು ಮಾರಣಾಂತಿಕ ಗಂಭೀರ ಕಾಯಿಲೆಗಳ ಚಿಕಿತ್ಸೆಯಂತಹ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ, ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ವ್ಯಾಪಕ ಶ್ರೇಣಿಯ ಕವರೇಜ್ ನೀಡುತ್ತವೆ.
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಹೆಚ್ಚಿನ ಸಮ್ ಇನ್ಶೂರ್ಡ್ ಆಯ್ಕೆಗಳೊಂದಿಗೆ ಬರುತ್ತವೆ. ಇದರಿಂದ ನಿಮ್ಮ ಆರೋಗ್ಯ ವೆಚ್ಚಗಳಿಗೆ ನೀವು ಹೆಚ್ಚಿನ ವ್ಯಾಪ್ತಿಯನ್ನು ಪಡೆಯಬಹುದು.
ವ್ಯಾಪಕವಾದ ಕವರೇಜ್ ಎಂದರೆ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಯೋಜನೆಗಳು ಹೆಚ್ಚಿನ ಮೆಡಿಕಲ್ ವೆಚ್ಚಗಳನ್ನು ಕವರ್ ಮಾಡುತ್ತವೆ. ಇದು ಬೇಸಿಕ್ ಯೋಜನೆಗಳ ಅಡಿಯಲ್ಲಿ ಕವರ್ ಆಗದ ವೆಚ್ಚಗಳನ್ನು ಕವರ್ ಮಾಡುತ್ತದೆ. ಉದಾಹರಣೆಗೆ ಪ್ರೀ ಮತ್ತು ಪೋಸ್ಟ್ ಹಾಸ್ಪಿಟಲೈಸೇಷನ್, ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್, ಔಷಧಿಗಳು, ಇತ್ಯಾದಿ.
ಹೆಚ್ಚುವರಿಯಾಗಿ, ಕಾಂಪ್ರೆಹೆನ್ಸಿವ್ ಯೋಜನೆಗಳು ಸಾಮಾನ್ಯವಾಗಿ ಯಾವುದೇ ಕೊಠಡಿ ಬಾಡಿಗೆ ಮಿತಿ, ಹೆಚ್ಚಿನ ಐಸಿಯು ಕೊಠಡಿ ಬಾಡಿಗೆ ಮಿತಿಗಳು ಮತ್ತು ವಿಶಾಲವಾದ ಆಂಬ್ಯುಲೆನ್ಸ್ ಕವರ್ ಹೊಂದಿರುವ ಪ್ರಯೋಜನವನ್ನು ನೀಡುತ್ತವೆ.
ಇತರ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಲ್ಲಿ ಲಭ್ಯವಿಲ್ಲದ ಹೆಚ್ಚಿನ ಪ್ರಯೋಜನಗಳನ್ನು ಸಹ, ನೀವು ಕಾಂಪ್ರೆಹೆನ್ಸಿವ್ ಹೆಲ್ತ್ ಯೋಜನೆಯೊಂದಿಗೆ ಪಡೆಯಲು ಸಾಧ್ಯವಾಗುತ್ತದೆ. ಇದು ಸಮ್ ಇನ್ಶೂರ್ಡ್ ನ ಮರುಪೂರಣದಂತಹ ವಿಷಯಗಳನ್ನು ಒಳಗೊಂಡಿರುತ್ತದೆ. ಪಾಲಿಸಿಯ ಅವಧಿಯಲ್ಲಿ ನೀವು ಇನ್ಶೂರೆನ್ಸ್ ಮೊತ್ತವನ್ನು ಖಾಲಿ ಮಾಡಿದ್ದರೆ ನಿಮ್ಮ ಎಸ್ಐ ಅನ್ನು ಮರುಪೂರಣಗೊಳಿಸಲಾಗುತ್ತದೆ ಅಥವಾ ನಿಮ್ಮ ನೋ ರೂಮ್ ರೆಂಟ್ ಕ್ಯಾಪಿಂಗ್ (ಅಂದರೆ ಗರಿಷ್ಠ ಕೊಠಡಿ ಬಾಡಿಗೆಗೆ ಮಿತಿಯಿಲ್ಲ) ಪ್ರಯೋಜನವನ್ನು ಒಳಗೊಂಡಿರುತ್ತದೆ.
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಸಾಮಾನ್ಯವಾಗಿ ಕ್ಯಾಶ್ಲೆಸ್ ಕ್ಲೈಮ್ಗಳ ಸೌಲಭ್ಯವನ್ನು ನೀಡುತ್ತವೆ. ಅಲ್ಲಿ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪೂರೈಕೆದಾರರು ತಮ್ಮ ನೆಟ್ವರ್ಕ್ ಆಸ್ಪತ್ರೆಗಳೊಂದಿಗೆ ತಾವೇ ನೇರವಾಗಿ ಬಿಲ್ಗಳನ್ನು ನೋಡಿಕೊಳ್ಳುತ್ತಾರೆ. ಇದರರ್ಥ ನೀವು ನಿಮ್ಮ ಸ್ವಂತ ಜೇಬಿನಿಂದ ಯಾವುದೇ ಹಣವನ್ನು ಪಾವತಿಸುವ ಅಗತ್ಯವಿಲ್ಲ (ಯಾವುದೇ ಸಹ-ಪಾವತಿಗಳು ಅಥವಾ ಡಿಡಕ್ಟಿಬಲ್ ಗಳನ್ನು ಹೊರತುಪಡಿಸಿ).
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಕ್ಯುಮುಲೇಟಿವ್ ಬೋನಸ್ ಪ್ರಯೋಜನದೊಂದಿಗೆ ಬರುತ್ತವೆ. ಪಾಲಿಸಿ ವರ್ಷದಲ್ಲಿ ಯಾವುದೇ ಕ್ಲೈಮ್ಗಳನ್ನು ಮಾಡದವರಿಗೆ ಯಾವುದೇ ಹೆಚ್ಚುವರಿ ಪ್ರೀಮಿಯಂ ಅನ್ನು ವಿಧಿಸದೆಯೇ ಅವರ ಸಮ್ ಇನ್ಸೂರ್ಡ್ನಲ್ಲಿ ಹೆಚ್ಚಳವನ್ನು ಮಾಡುತ್ತಾರೆ.
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯು ಜೀವಿತಾವಧಿಯ ರಿನೀವಲ್ ಅನ್ನು ನೀಡುತ್ತದೆ. ಆದ್ದರಿಂದ ನೀವು ನಿಮ್ಮ ಪ್ರೀಮಿಯಂ ಅನ್ನು ಪಾವತಿಸುವವರೆಗೆ, ನಿಮ್ಮ ವಯಸ್ಸಿನ ಹೊರತಾಗಿಯೂ ನೀವು ಯೋಜನೆಯ ಪ್ರಯೋಜನಗಳನ್ನು ಆನಂದಿಸುವುದನ್ನು ಮುಂದುವರೆಸಬಹುದು.
ನಿಮಗಾಗಿ ಅಥವಾ ನಿಮ್ಮ ಕುಟುಂಬದ ಸದಸ್ಯರಿಗಾಗಿ ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದಾಗ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80D ಅಡಿಯಲ್ಲಿ ನೀವು ನಿಮ್ಮ ಪ್ರೀಮಿಯಂ ಮೊತ್ತದ ಮೇಲೆ ಟ್ಯಾಕ್ಸ್ ಪ್ರಯೋಜನಗಳನ್ನು ಪಡೆಯಬಹುದು.
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ವ್ಯಕ್ತಿಯೊಬ್ಬರು ಮಾಡಬಹುದಾದ ಅತ್ಯುತ್ತಮ ಹೂಡಿಕೆಗಳಲ್ಲಿ ಒಂದಾಗಿದೆ. ಇದು ಸಂಪೂರ್ಣ ರಕ್ಷಣೆಯನ್ನು ಒದಗಿಸುವುದರಿಂದ, ಬೇರೆ ಬೇರೆ ಕವರ್ಗಳನ್ನು ಪ್ರತ್ಯೇಕವಾಗಿ ಖರೀದಿಸದೆ ನೀವು ಹಣವನ್ನು ಉಳಿಸಬಹುದು. ಇದು ನಿಮ್ಮ ಉಳಿತಾಯವನ್ನು ರಕ್ಷಿಸಲು ಮತ್ತು ಆಸ್ಪತ್ರೆಯ ಬಿಲ್ಗಳ ಬಗ್ಗೆ ಚಿಂತಿಸದೆ ಉತ್ತಮ ಚಿಕಿತ್ಸೆಯನ್ನು ಪಡೆಯಲು ಸಹಾಯ ಮಾಡುತ್ತದೆ.
ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್, ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್, ವೈಯಕ್ತಿಕ ಅಪಘಾತದ ಇನ್ಶೂರೆನ್ಸ್ ಮತ್ತು ಮುಂತಾದ ವಿವಿಧ ರೀತಿಯ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಇಂದು ಲಭ್ಯವಿವೆ. ಆದ್ದರಿಂದ ನಿಮ್ಮ ಮತ್ತು ನಿಮ್ಮ ಕುಟುಂಬದ ಅವಶ್ಯಕತೆಗಳಿಗೆ ಸೂಕ್ತವೆನಿಸುವ ಸರಿಯಾದ ಯೋಜನೆಯನ್ನು ಆಯ್ಕೆ ಮಾಡುವುದು ತುಂಬಾ ಮುಖ್ಯ.