ಹೆಲ್ತ್ ಇನ್ಶೂರೆನ್ಸ್ ಆಡ್-ಆನ್‌ಗಳು/ರೈಡರ್‌ಗಳ ಬಗ್ಗೆ ಎಲ್ಲಾ ನೀವು ತಿಳಿದಿರಬೇಕಾದದ್ದು
ನೀವು ಒಂದು ಸ್ಟಾಂಡರ್ಡ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿ, ಈ ಬಾರಿ ನಿಮ್ಮ ಎಲ್ಲಾ ಆರೋಗ್ಯ ಸಂಬಂಧಿತ ವೆಚ್ಚಗಳ ವ್ಯವಸ್ಥೆ ಆಗಿದೆ ಎಂದು ಆರಾಮವಾಗಿ ಇರುತ್ತೀರಿ. ಆದರೆ ಒಂದು ಸ್ಟಾಂಡರ್ಡ್ ಹೆಲ್ತ್ಇನ್ಶೂರೆನ್ಸ್ ಕೆಲವು ಅಗತ್ಯಗಳನ್ನು ಪೂರೈಸುವುದಿಲ್ಲ.
ಹಾಗಾದರೆ, ಅವುಗಳ ಬಗ್ಗೆ ಮಾಡುವುದಾದರೂ ಏನು?
ಇಂತಹ ಸಂದರ್ಭದಲ್ಲಿ ಹೆಲ್ತ್ ಇನ್ಶೂರೆನ್ಸ್ ರೈಡರ್ಸ್ ಉಪಯೋಗಕ್ಕೆ ಬರುತ್ತವೆ!
ನಿಮ್ಮ ಬಳಿ ಈಗಾಗಲೇ ಹೆಲ್ತ್ಇನ್ಶೂರೆನ್ಸ್ ರೈಡರ್ಸ್ ಇದ್ದರೆ, ನೀವು ಆಡ್ - ಆನ್ಸ್ ಅಥವಾ ರೈಡರ್ಸ್ ಎಂಬ ಪದಗಳನ್ನು ಕೇಳಿರುವ ಸಂಭಾವನೆ ಹೆಚ್ಚಾಗಿರುತ್ತದೆ.ಈಗ, ಇವುಗಳು ಏನನ್ನೆಲ್ಲಾ ಒಳಗೊಂಡಿವೆ ಎಂಬುವುದನ್ನು ವಿವರವಾಗಿ ತಿಳಿದುಕೊಳ್ಳುವ ಸಮಯ ಬಂದಿದೆ.
ಹೆಲ್ತ್ಇನ್ಶೂರೆನ್ಸ್ ರೈಡರ್ ಅಥವಾ ಆಡ್ - ಆನ್ಸ್ ಎಂದರೇನು?
ಈ ಪದಗಳ ಸಾರವನ್ನು ಹೇಳುವುದಾದರೆ, ಇವುಗಳು ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಬರುವ ವೈಶಿಷ್ಟ್ಯಗಳಲ್ಲಿ ಇರುವುದಿಲ್ಲ ಆದರೆ ಹೆಚ್ಚುವರಿ ಪ್ರೀಮಿಯಮ್ ನ ಬದಲಿಗೆ ಇವುಗಳನ್ನು ಪ್ರತ್ಯೇಕವಾಗಿ ಸೇರಿಸಲಾಗುತ್ತದೆ.
ಹೆಲ್ತ್ ಇನ್ಶೂರೆನ್ಸ್ ಆಡ್ - ಆನ್ಸ್ ಅಥವಾ ರೈಡರ್ ಗಳನ್ನು ನಿಮ್ಮ ಪ್ರಸ್ತುತ ಹೆಲ್ತ್ ಇನ್ಶೂರೆನ್ಸ್ ಮೇಲೆ ಸೇರಿಸಿ ಅದರ ಲಾಭಗಳನ್ನು ಅಥವಾ ಪೂರ್ವ ನಿರ್ಧಾರಿತ ಘಟನೆಗಳ ಸಂದರ್ಭದಲ್ಲಿ ಪಡೆಯಬಹುದಾದ ಮೊತ್ತವನ್ನು ಹೆಚ್ಚಿಸಲು ಉಪಯೋಗಿಸಬಹುದು.
ಇನ್ಶೂರೆನ್ಸ್ ರೆಗ್ಯೂಲೇಟರಿ ಆಂಡ್ ಡೆವೆಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್ಡಿಎಐ) ದ ಪ್ರಕಾರ, ಒಂದು ಸಿಂಗಲ್ ಹೆಲ್ತ್ಇನ್ಶೂರೆನ್ಸ್ ಪಾಲಿಸಿ ಮೇಲೆ ತೆಗೆದುಕೊಳ್ಳಬಹುದಾದ ಎಲ್ಲಾ ರೈಡರ್ಸ್ ಅಥವಾ ಆಡ್ - ಆನ್ಸ್ ನ ಸಮಗ್ರ ಪ್ರೀಮಿಯಮ್, ಮೂಲ ಪ್ರೀಮಿಯಮ್ ಮೊತ್ತದ 30% ಕ್ಕಿಂತ ಹೆಚ್ಚಿರಬಾರದು.
ಉದಾಹರಣೆಗೆ, ನೀವು ರೂ 5000/ವಾರ್ಷಿಕ ಪ್ರೀಮಿಯಮ್, ರೂ. 700000 ಇನ್ಶೂರ್ಡ್ ಮೊತ್ತಕ್ಕೆ ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುತ್ತೀರಿ. ನೀವು ನಿಮ್ಮ ಈ ಹೆಲ್ತ್ ಇನ್ಶೂರೆನ್ ಪಾಲಿಸಿ ಮೇಲೆ 5 ಆಡ್ - ಆನ್ಸ್ ಅನ್ನು ಸೇರಿಸಲು ನಿರ್ಧರಿಸುತ್ತೀರಿ. ಇಂತಹ ಸಂದರ್ಭದಲ್ಲಿ, ನೀವು ಈ ಆಡ್ ಆನ್ಸ್ ಗಳಿಗೆ ಪಾವತಿಸಬೇಕಾದ ಪ್ರೀಮಿಯಮ್ ನ ಮೊತ್ತ, ಐಆರ್ಡಿಎಐ ಪ್ರಕಾರ, ರೂ. 1500(5000x30%) ಅನ್ನು ಮೀರಬಾರದು.
ವಿವಿಧ ಪ್ರಕಾರದ ಹೆಲ್ತ್ಇನ್ಶುರೆನ್ಸ್ ಆಡ್ - ಆನ್ಸ್ ಗಳು ಯಾವುವು?
ಭಾರತದ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಲ್ಲಿ ಇರುವ ವಿವಿಧ ಪ್ರಕಾರದ ಆಡ್ - ಆನ್ಸ್ ಅನ್ನು ಈ ಕೆಳಗಡೆ ನೀಡಲಾಗಿದೆ.
ಹೆಲ್ತ್ ಇನ್ಶೂರೆನ್ಸ್ ಆಡ್ - ಆನ್ಸ್ | ಏನೆಲ್ಲಾ ಕವರ್ ಆಗಿದೆ |
---|---|
ರೂಮ್ ಬಾಡಿಗೆ ಮನ್ನಾ | ಈ ಹೆಲ್ತ್ಇನ್ಶೂರೆನ್ಸ್ ರೈಡರ್ ನೊಂದಿಗೆ, ನಿಮ್ಮ ಪಾಲಿಸಿ ಅಡಿಯಲ್ಲಿ ನಿಮ್ಮ ಆಸ್ಪತ್ರೆ ರೂಮ್ ಗೆ ಸಿಗುವ ಉಪ - ಮಿತಿಯನ್ನು ನೀವು ಹೆಚ್ಚಿಸಬಹುದು ಅಥವಾ ರೂಮ್ ಬಾಡಿಗೆ ಮೇಲೆ ಉಪ - ಮಿತಿ ಇಲ್ಲದಂತೆ ಆಯ್ಕೆ ಮಾಡಬಹುದು |
ಹೆರಿಗೆ ಕವರ್ | ಈ ರೈಡರ್ ಹೆರಿಗೆ ಮತ್ತು ಜನನಕ್ಕೆ ಸಂಬಂದಪಟ್ಟ ಎಲ್ಲಾ ವೆಚ್ಚಗಳನ್ನು ಕವರ್ ಮಾಡುತ್ತದೆ. |
ಆಸ್ಪತ್ರೆ ನಗದು ಕವರ್ | ಇದು ಆಸ್ಪತ್ರೆ ದಾಖಲಾತಿ ವೇಳೆಯಲ್ಲಿ ಇನ್ಶೂರ್ಡ್ ವ್ಯಕ್ತಿಗೆ ಇನ್ಶೂರರ್ ನೀಡುವ ಪ್ರತೀ ದಿನದ ನಗದು ಭತ್ಯೆಯ ಒಂದು ರೀತಿಯಾಗಿದೆ. |
ಗಂಭೀರ ಖಾಯಿಲೆಗಾಗಿ ಕವರ್ | ಈ ಆಡ್ - ಆನ್ ನಿಮಗೆ ಗಂಭೀರ ಖಾಯಿಲೆಗಳಾದ ಕ್ಯಾನ್ಸರ್, ಹೃದಯ ಸಂಬಂಧೀ ಖಾಯಿಲೆಗಳು ಮುಂತಾದದಕ್ಕೆ ತಗಲುವ ವೆಚ್ಚಗಳಿಗೆ ಆರ್ಥಿಕ ಕವರೇಜ್ ನೀಡುತ್ತದೆ. |
ಪರ್ಸನಲ್ ಅಪಘಾತ ಕವರ್ | ಈ ಆಡ್ - ಆನ್ ಅಂಗವೈಕಲ, ಸಾವು ಇತ್ಯಾದಿ ಸೇರಿ ವ್ಯಕ್ತಿಗೆ ಆಗಿರುವ ಎಲ್ಲಾ ತರಹದ ಅಪಘಾತ ಸಂಬಂಧೀ ಗಾಯಗಳಿಗೆ ಪರಿಹಾರವನ್ನು ಒದಗಿಸುತ್ತದೆ. |
ವಲಯದ ಅಪ್ ಗ್ರೇಡ್ | ಈ ಆಡ್ - ಅನ್ ಇನ್ಶೂರ್ಡ್ ವ್ಯಕ್ತಿಗೆ ಅವನು/ಅವಳು ಚಿಕಿತ್ಸೆ ಪಡೆಯುತ್ತಿರುವ ನಗರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಆರ್ಥಿಕ ನೆರವು ಪಡೆಯಲು ಅನುಮತಿ ನೀಡುತ್ತದೆ. |
ಆಯುಶ್ ಚಿಕಿತ್ಸಾ ಕವರ್ | ಈ ಆಡ್ - ಆನ್ ಅಡಿಯಲ್ಲಿ, ನೀವು ಪರ್ಯಾಯ ಚಿಕಿತ್ಸಾ ವಿಧಾನಗಳಿಗೆ ( ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ) ಆರ್ಥಿಕ ನೆರವು ಪಡೆಯಬಹುದು. |
ಹೆಲ್ತ್ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಇರುವ ವಿವಿಧ ಪ್ರಕಾರದ ಆಡ್ - ಆನ್ಸ್ - ವಿವರಗಳು
1. ರೂಮ್ ಬಾಡಿಗೆ ಮನ್ನಾ
ಸ್ಟಾಂಡರ್ಡ್ ಹೆಲ್ತ್ಇನ್ಶೂರೆನ್ಸ್ ಪಾಲಿಸಿಯಲ್ಲಿ, ಆಸ್ಪತ್ರೆ ರೂಮ್ ಬಾಡಿಗೆಯನ್ನು ಒಂದು ನಿರ್ದಿಷ್ಟ ಮೊತ್ತಕ್ಕೆ ಮಿತಗೊಳಿಸಲಾಗುತ್ತದೆ (ಕ್ಯಾಪ್). ನೀವು ಇಂತಹ ಇನ್ಶೂರೆನ್ಸ್ ಪಾಲಿಸಿ ಮೇಲೆ ರೂಮ್ ಬಾಡಿಗೆ ಮನ್ನಾ ಆಡ್ - ಆನ್ಸ್ ಅನ್ನು ಸೇರಿಸಿದರೆ, ಇದರ ಮಿತಿ ಹೆಚ್ಚುತ್ತದೆ, ಅಥವಾ ಮಿತಿಯೇ ಇರದಂತೆ ಮಾಡುತ್ತದೆ.
ನೋ ಕ್ಯಾಪ್ ಸಂದರ್ಭದಲ್ಲಿ, ರೂಮ್ ಬಾಡಿಗೆಯನ್ನು, ಇನ್ಶೂರ್ಡ್ ಮೊತ್ತದ ಮಟ್ಟಿಗೆ ಅನುಮತಿಸಲಾಗುತ್ತದೆ. ನೀವು ಒಂದು ಮಹಾನಗರದ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಈ ಹೆಲ್ತ್ ಇನ್ಶೂರೆನ್ಸ್ ಆಡ್ - ಆನ್ ತುಂಬಾ ಆವಶ್ಯಕವಾಗುತ್ತದೆ, ಯಾಕೆಂದರೆ ಅಲ್ಲಿ ರೂಮ್ ವೆಚ್ಚದಲ್ಲಿ ಗಣನೀಯ ಏರಿಕೆ ಇರುತ್ತದೆ.
ಉದಾಹರಣೆಗೆ, ನಿಮ್ಮ ಸ್ಟಾಂಡರ್ಡ್ ಹೆಲ್ತ್ಇನ್ಶೂರೆನ್ಸ್ ಪಾಲಿಸಿ ನಿಮ್ಮ ರೂಮ್ ಬಾಡಿಗೆ ಮಿತಿಯನ್ನು ರೂ.1500 ಪ್ರತೀ ರಾತ್ರಿಗೆ ಕ್ಯಾಪ್ ಮಾಡಲಾಗುತ್ತದೆ. ಇದು ನೀವು ದಾಖಲಾಗಲು ಇಚ್ಛಿಸುವ ಆಸ್ಪತ್ರೆಯ ರೂಮ್ ಬಾಡಿಗೆಯ ವೆಚ್ಚ ಭರಿಸಲು ಸಾಕಾಗುವುದಿಲ್ಲ. ಆದ್ದರಿಂದ, ನೀವು ರೂಮ್ ಬಾಡಿಗೆ ಮನ್ನಾ ಆಡ್ - ಆನ್ ಅನ್ನು ತೆಗೆದುಕೊಂಡರೆ ಇಂತಹ ಉಪ - ಮಿತಿಯನ್ನು ರೂ. 4000 ಪ್ರತೀ ರಾತ್ರಿಗೆ ಹೆಚ್ಚಿಸಬಹುದು.
2. ಹೆರಿಗೆ ಕವರ್
ಹೆರಿಗೆ ಕವರ್ ನಲ್ಲಿ, ಗರ್ಭಾವಸ್ಥೆ ಹಾಗೂ ಜನನಕ್ಕೆ ಸಂಬಂಧಿತ ಎಲ್ಲಾ ವೆಚ್ಚಗಳ ಕವರೇಜ್ ನಿಮಗೆ ನೀಡಲಾಗುತ್ತದೆ. ಕೆಲವು ಇನ್ಶೂರೆನ್ಸ್ ಕಂಪನಿಗಳು ನಿಮಗೆ ಪಾಲಿಸಿಯ ಮೆಚುರಿಟಿ ಅವಧಿ ಅಥವಾ ಹೆರಿಗೆ ಕವರ್ ಅಡಿಯಲ್ಲಿ ಆದ ನಿಮ್ಮ ಮಗುವಿನ ಜನನದ 3 ತಿಂಗಳ ವರೆಗೆ ಮಗುವಿನ ವೆಚ್ಚವನ್ನು ಭರಿಸುತ್ತವೆ.
3. ಆಸ್ಪತ್ರೆ ನಗದು ಕವರ್
ಈ ಹೆಲ್ತ್ ಇನ್ಶೂರೆನ್ಸ್ ರೈಡರ್ ಆಡಿಯಲ್ಲಿ, ನೀವು ಆಸ್ಪತ್ರೆಗೆ ದಾಖಲಾದ ಅವಧಿಯಲ್ಲಿ ನಿಮ್ಮ ಇನ್ಶೂರರ್ ನಿಮಗೆ ಪ್ರತಿದಿನ ನಗದು ಭತ್ಯೆ ನೀಡುತ್ತಾರೆ. ಈ ಭತ್ಯೆಯನ್ನು ಪಡೆಯಲು ಇನ್ಶೂರ್ ಆಗಿರುವ ವ್ಯಕ್ತಿ 24 ಘಂಟೆಗಳು ಅಥವಾ 1 ದಿನಕ್ಕಿಂತ ಹೆಚ್ಚು ಸಮಯಕ್ಕೆ ಆಸ್ಪತ್ರೆಯಲ್ಲಿ ದಾಖಲಾಗಿರಬೇಕು.
ಇದು ನಿಮಗೆ ಆಸ್ಪತ್ರೆಯಲ್ಲಿ ದಾಖಲಾದ ಸಮಯದಲ್ಲಿ ಆಗುವ ವೇತನದ ನಷ್ಟವನ್ನು ಸರಿದೂಗಿಸಿ ನಿಮ್ಮ ಅಗತ್ಯದ ಖರ್ಚುಗಳಾದ ವಾಹನ, ಆಹಾರ ಮುಂತಾದ ವೆಚ್ಚಗಳನ್ನು ಭರಿಸಲು ಸಹಾಯಕವಾಗುತ್ತದೆ.
4. ಗಂಭೀರ ಖಾಯಿಲೆಗಳ ಕವರ್
ಈ ಆಡ್ - ಆನ್ ನ ಅಡಿಯಲ್ಲಿ, ಇನ್ಶೂರ್ಡ್ ವ್ಯಕ್ತಿ ಗಂಭೀರ ಖಾಯಿಲೆಗೆ ತುತ್ತಾದರೆ ಇನ್ಶೂರೆನ್ಸ್ ಪ್ರೊವೈಡರ್, ಅವರ ಒಟ್ಟು ಚಿಕಿತ್ಸೆಯ ವೆಚ್ಚವನ್ನು ಪರಿಗಣಿಸದೆಯೇ, ಅವರಿಗೆ ಒಂದು ದೊಡ್ಡ ಮೊತ್ತವನ್ನು ನೀಡುತ್ತಾರೆ.
ನೀವು 5 ಲಕ್ಷ ಇನ್ಶೂರ್ಡ್ ಮೊತ್ತದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದ್ದೀರಿ ಎಂದು ಭಾವಿಸಿ. ನೀವು ರೂ. 15 ಲಕ್ಷ ವರೆಗಿನ ಖಚಿತ ಮೊತ್ತ ನೀಡುವ, ಗಂಭೀರ ಖಾಯಿಲೆ ಕವರ್ ಆಡ್ - ಆನ್ ಅನ್ನೂ ತೆಗೆದುಕೊಂಡಿದ್ದೀರಿ ಎಂದಿಟ್ಟುಕೊಳ್ಳಿ.
ನಿಮ್ಮಲ್ಲಿ ಒಂದು ವೇಳೆ ಕ್ಯಾನ್ಸರ್ ಪತ್ತೆಯಾದರೆ, ಹಾಗೂ ನೀವು ಇನ್ಶೂರೆನ್ಸ್ ಕಂಪನಿಯಲ್ಲಿ ಕ್ಲೈಮ್ ರೈಸ್ ಮಾಡಿದರೆ, ನಿಮ್ಮ ಚಿಕಿತ್ಸೆಯ ಒಟ್ಟು ಮೊತ್ತ 9.5 ಲಕ್ಷವಾಗಿದ್ದರೂ ಅದು ನಿಮಗೆ ತಕ್ಷಣ ರೂ 15 ಲಕ್ಷದ ದೊಡ್ಡ ಮೊತ್ತವನ್ನು ಒದಗಿಸುತ್ತದೆ.
5. ಪರ್ಸನಲ್ ಅಪಘಾತ ಕವರ್
ಈ ಆಡ್ - ಆನ್ ಇನ್ಶೂರ್ಡ್ ವ್ಯಕ್ತಿಗೆ ಅಪಘಾತ ಸಂಬಂಧಿತ ಹಾನಿಗಳಿಂದಾದ ವೆಚ್ಚಗಳನ್ನು ಭರಿಸಲು ಆರ್ಥಿಕ ಕವರೇಜ್ ನೀಡುತ್ತದೆ. ಇದು ಭಾಗಶಃ ಅಂಗವೈಕಲ್ಯ, ಆಜೀವನ ಅಂಗವೈಕಲ್ಯ, ಸಾವು ಮುಂತಾದದ್ದನ್ನು ಒಳಗೊಂಡಿರುತ್ತದೆ.
6. ಝೋನ್ ಅಪ್ ಗ್ರೇಡ್
ಝೋನ್ ಅಪ್ ಗ್ರೇಡ್ ನಲ್ಲಿ, ವಿವಿಧ ನಗರ ವಲಯಗಳಲ್ಲಿ ಚಿಕಿತ್ಸೆಗಾಗಿ ಹೆಚ್ಚಿನ ಆರ್ಥಿಕ ಕವರೇಜ್ ಅನ್ನು ಪಡೆಯಬಹುದು. ನಗರದ ಮೆಡಿಕಲ್ ವೆಚ್ಚದ ಆಧಾರದಲ್ಲಿ ಝೋನ್ ಗಳನ್ನು ವರ್ಗೀಕರಣ ಮಾಡಾಲಾಗಿದೆ. ಒಂದು ನಿರ್ದಿಷ್ಟ ಪ್ರದೇಶದ ಮೆಡಿಕಲ್ ವೆಚ್ಚ ಹೆಚ್ಚಿದ್ದರೆ, ಅದನ್ನು ಇಂತಹ ವರ್ಗೀಕರಣದಲ್ಲಿ ಮೊದಲು ಇರಿಸಲಾಗುತ್ತದೆ.
ಈ ಆಡ್ - ಆನ್ ಗಳಿಂದ ಸ್ವಲ್ಪ ಹೆಚ್ಚು ಪ್ರೀಮಿಯಮ್ ನಲ್ಲಿ ವಿವಿಧ ಝೋನ್ ಅಥವಾ ಪ್ರದೇಶಗಳಲ್ಲಿ ಆಗುವ ಚಿಕಿತ್ಸಾ ವೆಚ್ಚದಲ್ಲಿಯ ಅಂತರವನ್ನು ಭರಿಸಲು ಅನುಮತಿ ನೀಡುತ್ತದೆ. ಆದರೆ ಕೊನೆಯಲ್ಲಿ, ಇದು ನಿಮ್ಮ ಒಟ್ಟು ಪ್ರೀಮಿಯಮ್ ನಲ್ಲಿ 10% - 20% ವರೆಗೆ ಉಳಿತಾಯ ನೀಡುತ್ತದೆ.
ಭಾರತದ ವಿವಿಧ ವಲಯ (ಝೋನ್) ಗಳು:
- ಝೋನ್ ಎ : ದೆಹೆಲಿ/ಎನ್ ಸಿ ಆರ್, ಮುಂಬಯಿ(ನವಿ ಮುಂಬಯಿ, ಥಾನೆ, ಕಲ್ಯಾಣ್ ಅನ್ನೂ ಸೇರಿ).
- ಝೋನ್ ಬಿ : ಹೈದರಾಬಾದ್, ಸೆಕುಂದರಾಬಾದ್, ಕೋಲ್ಕತ್ತಾ, ಅಹ್ಮದಾಬಾದ್, ವಡೋದರಾ, ಚೆನ್ನೈ, ಪುಣೆ ಮತ್ತು ಸೂರತ್.
- ಝೋನ್ ಸಿ : ಎ ಮತ್ತು ಬಿ ಹೊರತುಪಡಿಸಿ ಎಲ್ಲಾ ವಲಯಗಳು ಝೋನ್ ಸಿ ಗೆ ಸೇರುತ್ತವೆ.
ಪ್ರಸ್ತುತ, ಡಿಜಿಟ್‌ನಲ್ಲಿ, ನಾವು ಎರಡು ಝೋನ್ ಅನ್ನು ಹೊಂದಿದ್ದೇವೆ: ಝೋನ್ ಎ (ಗ್ರೇಟರ್ ಹೈದರಾಬಾದ್, ದೆಹಲಿ ಎನ್ಸಿಆರ್ , ಗ್ರೇಟರ್ ಮುಂಬೈ) ಮತ್ತು ಝೋನ್ ಬಿ (ಎಲ್ಲಾ ಇತರ ಸ್ಥಳಗಳು). ನೀವು ಝೋನ್ ಬಿ ಯಲ್ಲಿ ನೆಲೆಗೊಂಡಿದ್ದರೆ ನೀವು ಪ್ರೀಮಿಯಂನಲ್ಲಿ ಹೆಚ್ಚುವರಿ ಡಿಸ್ಕೌಂಟ್ ಅನ್ನು ಪಡೆಯುತ್ತೀರಿ. ಅಷ್ಟೇ ಅಲ್ಲದೆ , ನಾವು ಯಾವುದೇ ಝೋನ್-ಆಧಾರಿತ ಸಹ-ಪಾವತಿಯನ್ನು ಹೊಂದಿಲ್ಲ.
7. ಆಯುಷ್ ಕವರ್
ಇದರಲ್ಲಿ, ನೀವು ಪರ್ಯಾಯ ಚಿಕಿತ್ಸಾ ವಿಧಾನಗಳಾದ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ ಗೆ ಸಂಬಂಧಿತ ಅಸ್ಪತ್ರೆ ದಾಖಾಲಾತಿಯ ವೆಚ್ಚಗಳಿಗೆ ಆರ್ಥಿಕ ಕವರೇಜ್ ಪಡೆಯಬಹುದು.
ಈ ಕವರ್ ಕೇವಲ ಹಿರಿಯ ನಾಗರಿಕರು ಅಥವಾ 60 ಮೇಲ್ಪಟ್ಟ ವ್ಯಕ್ತಿಗಳಿಗೆ ಲಭ್ಯವಿದೆ.
ಡಿಸ್ಕ್ಲೈಮರ್: ಒದಗಿಸಿದ ಆಡ್-ಆನ್‌ಗಳು ಇತರ ಇನ್ಶೂರೆನ್ಸ್ ಪೂರೈಕೆದಾರರಲ್ಲಿ ಭಿನ್ನವಾಗಿರುತ್ತವೆ. ಅವರು ಒದಗಿಸುವ ಆಡ್-ಆನ್‌ಗಳ ಸಂಪೂರ್ಣ ವಿವರಗಳಿಗಾಗಿ ನಿಮ್ಮ ಇನ್ಶೂರರ್ ನೊಂದಿಗೆ ಪರಿಶೀಲಿಸಿ.
ಹೆಲ್ತ್ ಇನ್ಶೂರೆನ್ಸ್ ಆಡ್ - ಆನ್ಸ್ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ನಗದು ರಹಿತ ಸೆಟ್ಲ್ ಮೆಂಟ್ ಗಳಿಗೆ ಆಡ್ - ಆನ್ಸ್ ಲಭ್ಯವಿದೆಯೇ?
ಹೌದು, ನಿಮ್ಮ ಇನ್ಶೂರರ್ ನೆಟ್ವರ್ಕ್ ಒಳಗಿನ ಆಸ್ಪತ್ರೆಗಳಲ್ಲಿ ನಗದು ರಹಿತ ಸೆಟ್ಲ್ ಮೆಂಟ್ ಗಳಿಗೆ ಆಡ್ - ಆನ್ಸ್ ಲಭವಿದೆ.
ಝೋನ್ ಅಪ್ ಗ್ರೇಡ್ ಕವರ್ ಗಳಿಗಾಗಿ ನಗರಗಳನ್ನು ಹೇಗೆ ವರ್ಗೀಕರಿಸಲಾಗಿದೆ?
ಈ ಉದ್ದೇಶಕ್ಕಾಗಿ, ಇನ್ಶೂರೆನ್ಸ್ ಕಂಪನಿಗಳು, ಅಲ್ಲಿನ ಚಿಕಿತ್ಸಾ ವೆಚ್ಚದ ಮೇಲೆ ನಗರಗಳನ್ನು ವರ್ಗೀಕರಿಸುತ್ತವೆ.
ಆಸ್ಪತ್ರೆ ನಗದು ಕವರ್ ಅನ್ನು ಮೆಡಿಕಲ್ ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಉಪಯೋಗಿಸಬಹುದೇ?
ಹೌದು, ಆಸ್ಪತ್ರೆ ನಗದು ಕವರ್ ನ ಅಡಿಯಲ್ಲಿ ದೊರೆತ ನಗದು ಭತ್ಯೆಯ ಉಪಯೋಗದಲ್ಲಿ ಯಾವುದೇ ನಿರ್ಭಂದವಿಲ್ಲ.