ಪಿಪಿಎಫ್ ಕ್ಯಾಲ್ಕುಲೇಟರ್
ವಾರ್ಷಿಕ ಹೂಡಿಕೆ
ಸಮಯದ ಅವಧಿ
ಬಡ್ಡಿ ದರ
ಪಿಪಿಎಫ್ ಕ್ಯಾಲ್ಕುಲೇಟರ್ - ಆನ್ಲೈನ್ ಹಣಕಾಸಿನ ಟೂಲ್
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ನಿಯಮಗಳ ಪ್ರಕಾರ, ಪಿಪಿಎಫ್ ಬ್ಯಾಲೆನ್ಸ್ ಮೇಲಿನ ಬಡ್ಡಿಯನ್ನು ಮಾಸಿಕವಾಗಿ ಲೆಕ್ಕಹಾಕಿ, ಮಾರ್ಚ್ 31 ರಂದು ಹಣಕಾಸು ವರ್ಷದ ಕೊನೆಯಲ್ಲಿ ವ್ಯಕ್ತಿಯ ಖಾತೆಗೆ ಜಮಾ ಮಾಡಲಾಗುತ್ತದೆ.
ಆದಾಗ್ಯೂ, ಬಡ್ಡಿ ಲೆಕ್ಕಾಚಾರವು ವಾರ್ಷಿಕ ಸಂಯೋಜನೆ ವಿಧಾನವನ್ನು ಅನುಸರಿಸುತ್ತದೆ. ಸ್ವಲ್ಪ ಗೊಂದಲವಾಗಿದೆಯಲ್ಲವೇ?
ಸರಿ, ಇನ್ನು ಮುಂದೆ ಗೊಂದಲವಿರುವುದಿಲ್ಲ! ಪಿಪಿಎಫ್ ಬಡ್ಡಿ ದರ, ಅದರ ಲೆಕ್ಕಾಚಾರ ಪ್ರಕ್ರಿಯೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲದರ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಪಡೆಯಲು ಕೆಳಗಿನ ವಿಭಾಗವನ್ನು ಓದಿ.
ಮೊದಲೇ ಹೇಳಿದಂತೆ, ಪಿಪಿಎಫ್ ಲೆಕ್ಕಾಚಾರ ಪ್ರಕ್ರಿಯೆಯು ಇತರ ಉಳಿತಾಯ ಅಥವಾ ಹೂಡಿಕೆಯ ಆಯ್ಕೆಗಳಿಂದ ಸ್ವಲ್ಪ ಭಿನ್ನವಾಗಿರುತ್ತದೆ ಮತ್ತು ಸಂಕೀರ್ಣವಾಗಿದೆ. ಅಂತಹ ಸಂದರ್ಭಗಳಲ್ಲಿ, ಪಿಪಿಎಫ್ ಕ್ಯಾಲ್ಕುಲೇಟರ್ ಮೂಲಕ ಪಿಪಿಎಫ್ ಬಡ್ಡಿಯನ್ನು ಸುಲಭವಾಗಿ ಲೆಕ್ಕಾಚಾರ ಮಾಡಬಹುದಾಗಿದೆ.
ಪಿಪಿಎಫ್ ಕ್ಯಾಲ್ಕುಲೇಟರ್ ಒಂದು ಆನ್ಲೈನ್ ಸಾಧನವಾಗಿದ್ದು, ನಿರ್ದಿಷ್ಟ ಆವರ್ತನದೊಂದಿಗೆ ನಿಶ್ಚಿತ ಅವಧಿಗೆ ಪಿಪಿಎಫ್ ಖಾತೆಗೆ ನಿಮ್ಮ ಕೊಡುಗೆಯ ವಿರುದ್ಧ ವರ್ಷವಾರು ಆದಾಯವನ್ನು ಲೆಕ್ಕಾಚಾರ ಮಾಡಲು ಸಹಾಯ ಮಾಡುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ನೀವು ಪಿಪಿಎಫ್ ನಲ್ಲಿ ಹೂಡಿಕೆ ಮಾಡಲು ಸಿದ್ಧರಿದ್ದರೆ ಮತ್ತು ಹೂಡಿಕೆಯ ಆದರ್ಶ ಮೊತ್ತ ಅಥವಾ ನಿರ್ದಿಷ್ಟ ಅವಧಿಗೆ ಹೂಡಿಕೆ ಮಾಡಲು ಅದು ಉತ್ಪಾದಿಸುವ ಆದಾಯದ ಬಗ್ಗೆ ಖಚಿತವಾಗಿರದಿದ್ದರೆ, ನೀವು ತ್ವರಿತ ಫಲಿತಾಂಶಗಳು/ಲೆಕ್ಕಾಚಾರಗಳನ್ನು ಪಡೆಯಲು ಪಿಪಿಎಫ್ ಕ್ಯಾಲ್ಕುಲೇಟರ್ ಒಂದು ಉಪಯುಕ್ತ ಟೂಲ್ ಆಗಿದೆ.
ಈ ಬಹುಮುಖ ಸಾಧನವು ಹೆಚ್.ಡಿ.ಎಫ್.ಸಿ, ಪಿಪಿಎಫ್ ಕ್ಯಾಲ್ಕುಲೇಟರ್, ಎಸ್.ಬಿ.ಐ ಪಿಪಿಎಫ್ ಕ್ಯಾಲ್ಕುಲೇಟರ್, ಇತ್ಯಾದಿಗಳಂತಹ ವಿವಿಧ ಬ್ಯಾಂಕ್-ವಾರು ಕ್ಯಾಲ್ಕುಲೇಟರ್ಗಳ ಅಗತ್ಯವನ್ನು ನಿವಾರಿಸುತ್ತದೆ.
ಈ ಸಾಧನವನ್ನು ಹಣಕಾಸು ಸಚಿವಾಲಯದ ರಾಷ್ಟ್ರೀಯ ಉಳಿತಾಯ ಸಂಸ್ಥೆಯಿಂದ 1968 ರಲ್ಲಿ ಪರಿಚಯಿಸಲಾಯಿತು. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ದೀರ್ಘಾವಧಿಯ ಉಳಿತಾಯ ಮತ್ತು ಹೂಡಿಕೆ ಉತ್ಪನ್ನಗಳಲ್ಲಿ ಒಂದಾಗಿದೆ. ಪಿಪಿಎಫ್ ಅನ್ನು ಜನಪ್ರಿಯ ಆಯ್ಕೆಯನ್ನಾಗಿ ಮಾಡುವ ಒಂದು ಕಾರಣವೆಂದರೆ ಗಣನೀಯ ಆದಾಯ, ಅಂದರೆ, ಪ್ರತಿ ವರ್ಷದ ಕೊನೆಯಲ್ಲಿ ಸಂಗ್ರಹವಾದ ಬಡ್ಡಿ ಮೊತ್ತ.
ಪಿಪಿಎಫ್ ಬಡ್ಡಿಯನ್ನು ಲೆಕ್ಕ ಹಾಕುವುದು ಹೇಗೆ?
ಬಡ್ಡಿಯನ್ನು ಪ್ರತಿ ತಿಂಗಳ 5 ನೇ ಮತ್ತು ಕೊನೆಯ ದಿನದ ನಡುವೆ ಠೇವಣಿ ಮಾಡಿದ ವ್ಯಕ್ತಿಯ ಕನಿಷ್ಠ ಪಿಪಿಎಫ್ ಖಾತೆಯ ಬ್ಯಾಲೆನ್ಸ್ನಲ್ಲಿ ಲೆಕ್ಕಹಾಕಲಾಗುತ್ತದೆ. ಇದನ್ನು ಪರಿಗಣಿಸುವ ಹಲವು ಅಂಶಗಳು ಹೀಗಿವೆ. ಅವು ಯಾವುವೆಂದರೆ:
- ನೀವು ಹೊಸ ಠೇವಣಿ ಮಾಡಲು ಸಿದ್ಧರಿದ್ದು, ಆ ತಿಂಗಳಲ್ಲೇ ಠೇವಣಿಯ ಮೇಲಿನ ಬಡ್ಡಿಯನ್ನು ಪಡೆಯಬೇಕೆಂದರೆ, ನೀವು ಪ್ರತಿ ತಿಂಗಳ 5 ನೇ ತಾರೀಖಿನ ಒಳಗೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ಬಡ್ಡಿಯನ್ನು ಹಿಂದಿನ ಬಾಕಿಯ ಮೇಲೆ ಲೆಕ್ಕ ಹಾಕಲಾಗುತ್ತದೆ ಮತ್ತು ಹೊಸ ಠೇವಣಿಯನ್ನು ಪರಿಗಣಿಸಲಾಗುವುದಿಲ್ಲ.
- ಆದ್ದರಿಂದ, ಬಡ್ಡಿಯನ್ನು ಹೆಚ್ಚಿಸಲು, ವ್ಯಕ್ತಿಗಳು ಪ್ರತಿ ತಿಂಗಳ 5ನೇ ತಾರೀಖಿನ ಒಳಗೆ ಕೊಡುಗೆಗಳನ್ನು ಅಥವಾ ಒಟ್ಟು ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ.
- ಪಿಪಿಎಫ್ ಚಂದಾದಾರರು ಪಿಪಿಎಫ್ ಖಾತೆಯಲ್ಲಿ ಕನಿಷ್ಠ ₹500 ಮೊತ್ತವನ್ನು ಠೇವಣಿ ಮಾಡಬಹುದು ಮತ್ತು ಗರಿಷ್ಠ ಮಿತಿಯು ₹1.5 ಲಕ್ಷದವರೆಗೆ ಇರುತ್ತದೆ.
ಗಮನಿಸಿ: ಪಿಪಿಎಫ್ ಖಾತೆಯಲ್ಲಿ ಒಂದು ದೊಡ್ಡ ಮೊತ್ತದ ಠೇವಣಿ ಪ್ರತಿ ವರ್ಷ ಗರಿಷ್ಠ 12 ಕಂತುಗಳಲ್ಲಿ ಮಾಡಬಹುದು.
- ಆದ್ದರಿಂದ, ನೀವು ಪಿಪಿಎಫ್ ಖಾತೆಯ ಗರಿಷ್ಠ ಮಿತಿಯನ್ನು ಹೊಂದಿದ್ದರೆ, ನೀವು ಅದನ್ನು ಏಪ್ರಿಲ್ 5 ರೊಳಗೆ ಠೇವಣಿ ಮಾಡಬೇಕು. ಇಡೀ ವರ್ಷಕ್ಕೆ ಒಂದು-ಬಾರಿ ಠೇವಣಿಗೆ ಬಡ್ಡಿಯನ್ನು ಪಡೆಯಲು ಇದು ನಿಮಗೆ ಅನುಕೂಲವಾಗುತ್ತದೆ. ಈ ಕೆಳಗಿನ ಉದಾಹರಣೆ ನಿಮಗೆ ಸ್ಪಷ್ಟಪಡಿಸುತ್ತದೆ.
ಉದಾಹರಣೆಗೆ, ಹಿಂದಿನ ಹಣಕಾಸು ವರ್ಷದಲ್ಲಿ, ನಿಮ್ಮ ಪಿಪಿಎಫ್ ಖಾತೆಯಲ್ಲಿ ನೀವು ₹1 ಲಕ್ಷ ಮೊತ್ತವನ್ನು ಹೊಂದಿದ್ದೀರಿ. ನೀವು ಏಪ್ರಿಲ್ 5 ರ ಮೊದಲು ₹50000 ಠೇವಣಿ ಮಾಡಿದ್ದೀರಿ. ಆದ್ದರಿಂದ, ಕನಿಷ್ಠ/ಕಡಿಮೆ ಮಾಸಿಕ ಬ್ಯಾಲೆನ್ಸ್ (5ನೇ ಏಪ್ರಿಲ್-30ನೇ ಏಪ್ರಿಲ್ ನಿಂದ) ₹150000 ಆಗಿದೆ. ಆದ್ದರಿಂದ, ನೀವು ಆ ತಿಂಗಳಿಗೆ X (ಹೆಚ್ಚು) ಬಡ್ಡಿಯನ್ನು ಪಡೆಯುತ್ತೀರಿ (ಪಿಪಿಎಫ್ ಬಡ್ಡಿ ದರವನ್ನು ಅವಲಂಬಿಸಿ).
ಪರ್ಯಾಯವಾಗಿ, ನೀವು ಏಪ್ರಿಲ್ 5 ರ ನಂತರ ₹50000 ಠೇವಣಿ ಮಾಡಿದ್ದರೆ, ಆ ತಿಂಗಳ ಹೊಸ ಕೊಡುಗೆಯಲ್ಲಿ ನೀವು ಬಡ್ಡಿಯನ್ನು ಪಡೆಯಲಾಗುವುದಿಲ್ಲ.
ಏಕೆ?
ಏಕೆಂದರೆ ಕನಿಷ್ಠ/ಕಡಿಮೆ ಬಡ್ಡಿಯ ಪಿಪಿಎಫ್ ಬ್ಯಾಲೆನ್ಸ್ ₹100000 ಆಗಿದೆ (5ನೇ ಏಪ್ರಿಲ್ ನಿಂದ ತಿಂಗಳ ಅಂತ್ಯದವರೆಗೆ). ಈ ಸಂದರ್ಭದಲ್ಲಿ, ನೀವು ಆ ತಿಂಗಳಿಗೆ (ಕಡಿಮೆ) ಬಡ್ಡಿಯನ್ನು ಪಡೆಯುತ್ತೀರಿ.
ಸಂಕ್ಷಿಪ್ತವಾಗಿ, ನೀವು ಏಪ್ರಿಲ್ 5 ರ ಮೊದಲು ಮೊತ್ತವನ್ನು ಠೇವಣಿ ಮಾಡಿದರೆ, ನೀವು ಹೊಸ ಠೇವಣಿಗೆ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತೀರಿ. ನೀವು ಏಪ್ರಿಲ್ 5 ರ ನಂತರ ಮೊತ್ತವನ್ನು ಠೇವಣಿ ಮಾಡಿದರೆ, ನೀವು ಠೇವಣಿಗೆ ಕಡಿಮೆ ಬಡ್ಡಿಯನ್ನು ಪಡೆಯುತ್ತೀರಿ.
ಪಿಪಿಎಫ್ ಬಡ್ಡಿ ಲೆಕ್ಕಾಚಾರದ ಸೂತ್ರ
ಪಿಪಿಎಫ್ ಬಡ್ಡಿ ಲೆಕ್ಕಾಚಾರದ ವಿಧಾನವು ಸಂಯುಕ್ತ ಬಡ್ಡಿ ಲೆಕ್ಕಾಚಾರದ ಸೂತ್ರವನ್ನು ಮತ್ತು ವಾರ್ಷಿಕವಾಗಿ ಪಿಪಿಎಫ್ ಅಸಲು ಮೊತ್ತದ ಸಂಯೋಜನೆಯನ್ನು ಒಳಗೊಂಡಿರುತ್ತದೆ, ಅಂದರೆ, ಪ್ರತಿ ವರ್ಷ.
ಪಿಪಿಎಫ್ ಬಡ್ಡಿಯನ್ನು ಲೆಕ್ಕಾಚಾರ ಮಾಡುವ ಸೂತ್ರ ಇಲ್ಲಿದೆ.
A=P(1+r)˄t
ಸೂತ್ರದಲ್ಲಿ ಉಲ್ಲೇಖಿಸಲಾದ ಅಸ್ಥಿರಗಳನ್ನು ಡಿಕೋಡ್ ಮಾಡೋಣ -
A: ಪಿಪಿಎಫ್ ಮೆಚುರಿಟಿ ಮೊತ್ತ
P: ಪಿಪಿಎಫ್ ಅಸಲು ಮೊತ್ತ (ಹೂಡಿಕೆ)
r: ಪಿಪಿಎಫ್ ಬಡ್ಡಿ ದರ
t: ಸಮಯದ ಅವಧಿ
ಮೇಲೆ ತಿಳಿಸಿದ ಸೂತ್ರದಿಂದ ಒಂದು ವಿಷಯವನ್ನು ಊಹಿಸಬಹುದು: ಹೂಡಿಕೆಯ ಅವಧಿಯು ಹೆಚ್ಚಿದ್ದರೆ, ನೀವು ಪಿಪಿಎಫ್ ಖಾತೆಯಲ್ಲಿ ಹೆಚ್ಚಿನ ಬಡ್ಡಿಯನ್ನು ಪಡೆದುಕೊಳ್ಳಬಹುದು. ಈಗ ಪಿಪಿಎಫ್ ನಲ್ಲಿ ಬಡ್ಡಿಯನ್ನು ಹೇಗೆ ಲೆಕ್ಕ ಹಾಕಬಹುದು ಎಂದು ನಿಮಗೆ ತಿಳಿದಿದೆ, ಕಾಲಾನಂತರದಲ್ಲಿ ದರಗಳು ಹೇಗೆ ಬದಲಾಗುತ್ತವೆ ಎಂಬುದನ್ನು ನೀವು ನಿರ್ಣಯಿಸಬಹುದು.
ಪಿಪಿಎಫ್ ಬಡ್ಡಿ ದರ ಮತ್ತು ಅದರ ಬದಲಾಗುವ/ಪರಿಷ್ಕರಿಸುವ ಆವರ್ತನ
ಸಾರ್ವಜನಿಕ ಭವಿಷ್ಯ ನಿಧಿಯು ಪಿಪಿಎಫ್ ಬ್ಯಾಲೆನ್ಸ್/ಪ್ರಿನ್ಸಿಪಲ್ ಮೇಲೆ ಬಡ್ಡಿಯ ಮೊತ್ತವನ್ನು ಉತ್ಪಾದಿಸುತ್ತದೆ. ಪ್ರಸ್ತುತ ಪಿಪಿಎಫ್ ಬಡ್ಡಿ ದರವು 2020-21 ಹಣಕಾಸು ವರ್ಷದ ಕ್ಯೂ3 ಗೆ 7.1% ಆಗಿದ್ದು, ದರವನ್ನು ಭಾರತ ಸರ್ಕಾರ ನಿರ್ಧರಿಸುತ್ತದೆ,ಪಿಪಿಎಫ್ ಖಾತೆಯನ್ನು ಎಲ್ಲಿ ತೆರೆದರೂಅದು ಸ್ಥಿರವಾಗಿರುತ್ತದೆ.
ಮೊತ್ತವನ್ನು ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ, ಅಂದರೆ ಪಿಪಿಎಫ್ ಚಂದಾದಾರರು ಪ್ರತಿ ವರ್ಷ ಗಣನೀಯ ಮೊತ್ತವನ್ನು ಚಕ್ರ ಬಡ್ಡಿಯ ರೂಪದಲ್ಲಿ ಪಡೆಯಬಹುದು.
ಹಿಂದಿನ ವರ್ಷದಲ್ಲಿ, ಪಿಪಿಎಫ್ ಬಡ್ಡಿದರಗಳು ಏರಿಳಿತಗೊಂಡಿದ್ದು, 2016 ರಿಂದ ತೀವ್ರ ಕುಸಿತವನ್ನು ಕಂಡಿದೆ. ಮೇಲಾಗಿ, ಪಾವತಿಸಬೇಕಾದ ಪಿಪಿಎಫ್ ಬಡ್ಡಿ ದರವನ್ನು ಅವಶ್ಯಕತೆಗೆ ಅನುಗುಣವಾಗಿ ವಾರ್ಷಿಕವಾಗಿ ನಿರ್ಧರಿಸಲಾಗುತ್ತದೆ.
ಆದಾಗ್ಯೂ, 2017 ರಿಂದ, ಬಡ್ಡಿದರವು ಬದಲಾಗಿದೆ ಮತ್ತು ತ್ರೈಮಾಸಿಕವಾಗಿ ಸೂಚಿಸಲಾಗುತ್ತದೆ.
ಪಿಪಿಎಫ್ ಕ್ಯಾಲ್ಕುಲೇಟರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.
ಮೊದಲೇ ಹೇಳಿದಂತೆ, ಪಿಪಿಎಫ್ ಬಡ್ಡಿ ಕ್ಯಾಲ್ಕುಲೇಟರ್ ಆನ್ಲೈನ್ ಹಣಕಾಸು ಸಾಧನವಾಗಿದ್ದು, 15 ವರ್ಷಗಳ ಲಾಕ್-ಇನ್ ಅವಧಿಯ ನಂತರ ಹೂಡಿಕೆ ಮತ್ತು ಮುಕ್ತಾಯ ಮೊತ್ತದ ಮೇಲೆ ಗಳಿಸಿದ ಪಿಪಿಎಫ್ ಬಡ್ಡಿಯ ಲೆಕ್ಕಾಚಾರವನ್ನು ನೀಡುತ್ತದೆ. ಪಿಪಿಎಫ್ ಬಡ್ಡಿದರವನ್ನು ಲೆಕ್ಕ ಹಾಕುವುದು ಹೇಗೆ ಎಂಬುದು ನಿಮಗೆ ಅರ್ಥವಾಗದಿದ್ದರೆ, ಈ ಉಪಕರಣವನ್ನು ಬಳಸುವುದು ಒಂದು ಉತ್ತಮ ಆಯ್ಕೆಯಾಗಿದೆ.
ಪಿಪಿಎಫ್ ಬಡ್ಡಿ ದರದ ಕ್ಯಾಲ್ಕುಲೇಟರ್ ಅನ್ನು ಬಳಸಲು, ನೀವು ಪ್ರತಿ ವರ್ಷದ ಠೇವಣಿ ಪ್ರಕಾರವನ್ನು (ಸ್ಥಿರ ಮೊತ್ತ ಅಥವಾ ವೇರಿಯಬಲ್) ಮತ್ತು ಠೇವಣಿ ಮೊತ್ತವನ್ನು ಆಯ್ಕೆ ಮಾಡಬೇಕಾಗುತ್ತದೆ.
ನಿಖರವಾಗಿ ಹೇಳಬೇಕೆಂದರೆ, ನೀವು ಪಿಪಿಎಫ್ ಬಡ್ಡಿ ದರ, ಸಮಯ ಮತ್ತು ಹೂಡಿಕೆ ಮಾಡಿದ ಅಸಲು ಮೊತ್ತದಂತಹ ಡೇಟಾವನ್ನು ಹಾಕಿದಾಗ, ಅದು ನಿಮಗೆ ಫಲಿತಾಂಶಗಳನ್ನು ತೋರಿಸುತ್ತದೆ.
ಆದಾಗ್ಯೂ, ಕೆಲವು ಹೊಸ ನಿಯಮಗಳೊಂದಿಗೆ ಫಲಿತಾಂಶಗಳನ್ನು ಪಡೆಯುವ ಬಗೆಯನ್ನು ನೀವು ಅರ್ಥಮಾಡಿಕೊಳ್ಳಬೇಕು.
- ಆರಂಭಿಕ ಬ್ಯಾಲೆನ್ಸ್ - ಇದು ವರ್ಷದ ಆರಂಭದಲ್ಲಿ ಪಿಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಸೂಚಿಸುತ್ತದೆ.
- ಠೇವಣಿ ಮಾಡಿದ ಮೊತ್ತ - ಇದು ವರ್ಷವಿಡೀ ಎಲ್ಲಾ ಠೇವಣಿಗಳನ್ನು ಮಾಡಿದ ನಂತರ ಪಿಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಸೂಚಿಸುತ್ತದೆ.
- ಗಳಿಸಿದ ಬಡ್ಡಿ - ಇದು ಹಣಕಾಸಿನ ವರ್ಷದ ಕೊನೆಯಲ್ಲಿ ಪಿಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಆಧರಿಸಿ ಮಾಡಲಾದ ಬಡ್ಡಿ ಲೆಕ್ಕಾಚಾರವನ್ನು ಸೂಚಿಸುತ್ತದೆ. ಪಿಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ.
- ಮುಕ್ತಾಯದ ಬಾಕಿ - ಇದು ವರ್ಷದ ಕೊನೆಯಲ್ಲಿ ಒಟ್ಟು ಮೊತ್ತವನ್ನು ಸೂಚಿಸುತ್ತದೆ, ಇದನ್ನು ಅಸ್ತಿತ್ವದಲ್ಲಿರುವ ವರ್ಷದಿಂದ ಪ್ರಾರಂಭಿಕ ಖಾತೆಗೆ ಗಳಿಸಿದ ಬಡ್ಡಿಯನ್ನು ಮತ್ತು ವರ್ಷವಿಡೀ ಮಾಡಿದ ಎಲ್ಲಾ ಠೇವಣಿಗಳನ್ನು ಒಟ್ಟುಗೂಡಿಸಿ ಲೆಕ್ಕಹಾಕಲಾಗುತ್ತದೆ.
- ಸಾಲ (ಗರಿಷ್ಠ) - ಪಿಪಿಎಫ್ ಚಂದಾದಾರರು ಖಾತೆ ತೆರೆದ ದಿನಾಂಕದಿಂದ 3ನೇ ವರ್ಷದಿಂದ 6ನೇ ವರ್ಷದ ಅಂತ್ಯದವರೆಗೆ ಲೋನ್ಗಳನ್ನು ಪಡೆಯಬಹುದು ಆದಾಗ್ಯೂ, 6 ನೇ ವರ್ಷದ ಅಂತ್ಯದ ನಂತರ, ಪಿಪಿಎಫ್ ಮೇಲಿನ ಸಾಲಗಳು ಲಭ್ಯವಿರುವುದಿಲ್ಲ. ವ್ಯಕ್ತಿಗಳು ಭಾಗಶಃ ಹಿಂತೆಗೆದುಕೊಳ್ಳುವಿಕೆಯನ್ನು ಆಯ್ಕೆ ಮಾಡಬಹುದು. ಪಿಪಿಎಫ್ ನಲ್ಲಿ ನೀಡಲಾಗುವ ಗರಿಷ್ಠ ಸಾಲವು ಸಾಮಾನ್ಯವಾಗಿ ಖಾತೆಯ ಹಿಂದಿನ ವರ್ಷದ ಆರಂಭಿಕ ಬ್ಯಾಲೆನ್ಸ್ನ 25% ಆಗಿದೆ.
- ಹಿಂತೆಗೆದುಕೊಳ್ಳುವಿಕೆ (ಗರಿಷ್ಠ) - ಪಿಪಿಎಫ್ ಚಂದಾದಾರರು 6 ನೇ ವರ್ಷ ಪೂರ್ಣಗೊಂಡ ನಂತರ ಮತ್ತು 7 ನೇ ಹಣಕಾಸು ವರ್ಷದ ಪ್ರಾರಂಭದ ನಂತರ ವರ್ಷಕ್ಕೊಮ್ಮೆ ಭಾಗಶಃ ಹಿಂಪಡೆಯಬಹುದು. ಹಿಂದಿನ ವರ್ಷದಲ್ಲಿ ಯಾವುದೇ ವಿದ್ಡ್ರಾವಲ್ ಅಥವಾ ಸಾಲವನ್ನು ಪಡೆದಿಲ್ಲ ಎಂಬ ಊಹೆಯ ಆಧಾರದ ಮೇಲೆ ಗರಿಷ್ಠ ಹಿಂಪಡೆಯುವ ಮೊತ್ತವನ್ನು ಆನ್ಲೈನ್ ಕ್ಯಾಲ್ಕುಲೇಟರ್ ತೋರಿಸುತ್ತದೆ.
ಪಿಪಿಎಫ್ ಖಾತೆಯ ಪ್ರಮುಖ ಅಂಶಗಳು
- ಪಿಪಿಎಫ್ ಯೋಜನೆಗಳು 15 ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ಬರುತ್ತವೆ.
- ಈ ಖಾತೆಗಳನ್ನು ಐದು ವರ್ಷಗಳ ಬ್ಲಾಕ್ಗಳಿಗೆ ವಿಸ್ತರಿಸಬಹುದು.
- ವಿಶೇಷ ಸಂದರ್ಭಗಳಲ್ಲಿ ಐದು ವರ್ಷಗಳ ನಂತರ ಪಿಪಿಎಫ್ ಖಾತೆಯನ್ನು ಅಕಾಲಿಕವಾಗಿ ಮುಚ್ಚುವಿಕೆಯನ್ನು ಸರ್ಕಾರವು ಸುಗಮಗೊಳಿಸುತ್ತದೆ.
ಮೇಲೆ ತಿಳಿಸಿದ ವಿಭಾಗಗಳು ಪಿಪಿಎಫ್ ಬಡ್ಡಿ ದರಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಮಾಹಿತಿಯನ್ನು ಒಳಗೊಂಡಿರುತ್ತವೆ.ಪಿಪಿಎಫ್ ಬಡ್ಡಿ ದರವನ್ನು ಲೆಕ್ಕ ಹಾಕುವ ಬಗೆ ಮತ್ತು ಪಿಪಿಎಫ್ ಬಡ್ಡಿಯ ಮೇಲಿನ ತೆರಿಗೆ ಪ್ರಯೋಜನಗಳು, ಉಳಿತಾಯ ಮತ್ತು ಹೂಡಿಕೆ ಸಾಧನದಲ್ಲಿ ಠೇವಣಿ ಮಾಡುವುದು/ಹೂಡಿಕೆ ಮಾಡುವುದು ಎಷ್ಟು ಸುಲಭವಾಗಿರುತ್ತದೆ ಮತ್ತು ತೊಂದರೆ-ಮುಕ್ತವಾಗಿರುತ್ತದೆ ಎಂಬುದು ಈಗ ನಿಮಗೆ ತಿಳಿದಿದೆ.
ಆದ್ದರಿಂದ, ಇಂದೇ ಅತ್ಯಧಿಕ ಪಿಪಿಎಫ್ ಬಡ್ಡಿ ದರವನ್ನು ಹುಡುಕಲು ಪ್ರಾರಂಭಿಸಿ!
ಕಳೆದ 3 ವರ್ಷಗಳಲ್ಲಿ ಪಿಪಿಎಫ್ ಬಡ್ಡಿ ದರಗಳು ಹೇಗೆ ಬದಲಾಗಿವೆ?
ಕೆಳಗಿನ ಕೋಷ್ಟಕವು ಕಳೆದ 3 ವರ್ಷಗಳಲ್ಲಿ ಪಿಪಿಎಫ್ ಬಡ್ಡಿದರದಲ್ಲಿನ ಬದಲಾವಣೆಗಳನ್ನು ತೋರಿಸುತ್ತದೆ:
ಅವಧಿ |
PPF ಬಡ್ಡಿ ದರ |
ಏಪ್ರಿಲ್-ಜೂನ್, 2021 |
7.1% |
ಜನವರಿ-ಮಾರ್ಚ್ 2021 |
7.1% |
ಅಕ್ಟೋಬರ್-ಡಿಸೆಂಬರ್ 2020 |
7.1% |
ಜುಲೈ-ಸೆಪ್ಟೆಂಬರ್ 2020 |
7.1% |
ಏಪ್ರಿಲ್-ಜೂನ್ 2020 |
7.1% |
ಜನವರಿ-ಮಾರ್ಚ್ 2020 |
7.9% |
ಅಕ್ಟೋಬರ್-ಡಿಸೆಂಬರ್ 2019 |
7.9% |
ಏಪ್ರಿಲ್-ಜೂನ್ 2019 |
8.0% |
ಜನವರಿ-ಮಾರ್ಚ್ 2019 |
8.0% |
ಅಕ್ಟೋಬರ್-ಡಿಸೆಂಬರ್ 2018 |
8.0% |
ಜುಲೈ-ಸೆಪ್ಟೆಂಬರ್ 2018 |
7.6% |
ಏಪ್ರಿಲ್-ಜೂನ್ 2018 |
7.6% |