ಎಪಿವೈ ಕ್ಯಾಲ್ಕುಲೇಟರ್
ವಯಸ್ಸು (ವರ್ಷಗಳು)
ಬಯಸಿದ ಮಾಸಿಕ ಪೆನ್ಷನ್
ಬಯಸಿದ ಕೊಡುವಿಕೆ
ಅಟಲ್ ಪೆನ್ಷನ್ ಯೋಜನೆ ಕ್ಯಾಲ್ಕುಲೇಟರ್
2015ರಲ್ಲಿ ಲಾಂಚ್ ಆಗಿರುವ ಅಟಲ್ ಪೆನ್ಷನ್ ಯೋಜನೆ, ಒಂದು ಸರಕಾರಿ ಯೋಜನೆಯಾಗಿದೆ. ಇದು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಅವರ ರಿಟೈರ್ಮೆಂಟ್ ನಂತರ ಹಣಕಾಸಿನ ಭದ್ರತೆಯನ್ನು ಒದಗಿಸುತ್ತದೆ. ಈ ಯೋಜನೆಯು ಅರ್ಹ ಅಭ್ಯರ್ಥಿಗಳಿಗೆ ಮಾಸಿಕ ಕೊಡುವಿಕೆ ನೀಡಲು ಹಾಗೂ ಅವರು 60 ವಯಸ್ಸು ತಲುಪಿದ ನಂತರ ಸಂಗ್ರಹವಾದಂತಹ ಒಟ್ಟು ಮೊತ್ತವನ್ನು ಪಡೆಯಲು ಪ್ರೋತ್ಸಾಹಿಸುತ್ತದೆ.
ಅಟಲ್ ಪೆನ್ಷನ್ ಯೋಜನೆ ಕ್ಯಾಲ್ಕುಲೇಟರ್ ಒಂದು ಡಿಜಿಟಲ್ ಕ್ಯಾಲ್ಕುಲೇಟರ್ ಆಗಿದ್ದು, ಮಾಸಿಕ ಪಾವತಿ ಮತ್ತು ನಿರೀಕ್ಷಿತ ಆದಾಯವನ್ನು ಮುಂಚಿತವಾಗಿ ಅಂದಾಜು ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.
ಆದ್ದರಿಂದ, ಯಾವುದೇ ವಿಳಂಬವಿಲ್ಲದೆ, ನೀವು ಅಟಲ್ ಪೆನ್ಷನ್ ಯೋಜನೆ ಕ್ಯಾಲ್ಕುಲೇಟರ್ ಅನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ.
ಪ್ರಧಾನ ಮಂತ್ರಿ ಅಟಲ್ ಪೆನ್ಷನ್ ಯೋಜನೆ ಕ್ಯಾಲ್ಕುಲೇಟರ್: APY ಅನ್ನು ಲೆಕ್ಕ ಹಾಕುವುದು ಹೇಗೆ?
ಮೊದಲನೆಯದಾಗಿ, ಅಟಲ್ ಪೆನ್ಷನ್ ಯೋಜನೆ ಕ್ಯಾಲ್ಕುಲೇಟರ್ ಅನ್ನು ಬಳಸಲು, ನೀವು ಎಷ್ಟು ಪಾವತಿಸಬೇಕು ಎಂಬುದನ್ನು ನಿರ್ಧರಿಸಿ. ನಿಮ್ಮ ಮಾಸಿಕ ಕೊಡುವಿಕೆಯು ನಿಮ್ಮ ಹೂಡಿಕೆ ಮಾಡುವಾಗಿನ ವಯಸ್ಸು ಮತ್ತು ನೀವು ಆಯ್ಕೆ ಮಾಡುವ ಪೆನ್ಷನ್ ಆಯ್ಕೆಯನ್ನು ಅವಲಂಬಿಸಿರುತ್ತದೆ.
ಉದಾಹರಣೆಗೆ, ನೀವು 18ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನಿಮ್ಮ 60ನೇ ವಯಸ್ಸಿನಲ್ಲಿ ನಿಮ್ಮ ಪೆನ್ಷನ್ ಪಡೆಯಬೇಕಾದರೆ ನೀವು 42 ವರ್ಷಗಳವರೆಗೆ ಇದರಲ್ಲಿ ಹಣ ಹೂಡುತ್ತಿರಬೇಕಾಗುತ್ತದೆ. ನೀವು 18ನೇ ವಯಸ್ಸಲ್ಲಿ ₹1,000 ಪೆನ್ಷನ್ ಆಯ್ಕೆಯನ್ನು ಆರಿಸಿದರೆ, ನಿಮ್ಮ ಕೊಡುಗೆ ₹42ಕ್ಕೆ ಸಮನಾಗಿರುತ್ತದೆ.
ಆದಾಗ್ಯೂ, ಮಾನವನಿಂದಾಗುವ ದೋಷಗಳನ್ನು ತಪ್ಪಿಸಲು, ನೀವು ಆನ್ಲೈನ್ ಅಟಲ್ ಪೆನ್ಷನ್ ಯೋಜನೆ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು. ಅಟಲ್ ಪೆನ್ಷನ್ ಯೋಜನೆ ಕ್ಯಾಲ್ಕುಲೇಟರ್ ಅನ್ನು ಬಳಸಿ ಲೆಕ್ಕಾಚಾರ ಮಾಡಲು ಅನುಸರಿಸಬೇಕಾದ ಹಂತಗಳು ಈ ರೀತಿ ಇವೆ:
- ಎನ್ಎ ಪಿ ಎಸ್ ನ ಈ ಅಧಿಕೃತ ಲಿಂಕ್ ಗೆ ಭೇಟಿ ನೀಡಿ - https://npstrust.org.in/apy-calculator
- ಈಗ, ನಿಮ್ಮ ವಯಸ್ಸು, ಪೆನ್ಷನ್, ನಿರೀಕ್ಷಿತ ಆದಾಯ ಮತ್ತು ವರ್ಷಾಶನ ದರವನ್ನು ಆಯ್ಕೆಮಾಡಿ.
- ಆಯ್ಕೆ ಮಾಡಿದ ನಂತರ, ನಿಮ್ಮ ಪೆನ್ಷನ್ ಆಯ್ಕೆಯ ಆಧಾರದ ಮೇಲೆ ನಿಮ್ಮ ಮಾಸಿಕ, ಅರ್ಧ-ವಾರ್ಷಿಕ ಮತ್ತು ತ್ರೈಮಾಸಿಕ ಕೊಡುವಿಕೆಯ ಮಾಹಿತಿಯನ್ನು ಪಡೆಯುತ್ತೀರಿ. ಅಲ್ಲದೆ, ನಿಮ್ಮ ಅಷ್ಟು ವರ್ಷಗಳ ಒಟ್ಟು ಅಸಲು ಮೊತ್ತ ಮತ್ತು ಹೂಡಿಕೆಯ ಬಗ್ಗೆ ಅಂದಾಜು ಲೆಕ್ಕಾಚಾರ ಪಡೆಯುತ್ತೀರಿ.
ನೆನಪಿಡಿ, ಈ ಕ್ಯಾಲ್ಕುಲೇಟರ್ ಈ ಯೋಜನೆಯಲ್ಲಿ ಅನ್ವಯಿಸುವ ಇತರ ಶುಲ್ಕಗಳನ್ನು ಪರಿಗಣಿಸುವುದಿಲ್ಲ. ಹೆಚ್ಚಿನ ಸ್ಪಷ್ಟತೆಗಾಗಿ, ನೀವು ಅರ್ಜಿ ಸಲ್ಲಿಸುತ್ತಿರುವ ಬ್ಯಾಂಕ್ನೊಂದಿಗೆ ಅದನ್ನು ಪರಿಶೀಲಿಸಿ.
ಅಟಲ್ ಪೆನ್ಷನ್ ಯೋಜನೆ ಲೆಕ್ಕಾಚಾರ ಚಾರ್ಟ್
ಕೆಳಗಿನ ಕೋಷ್ಟಕವು ನಿಮ್ಮ ವಯಸ್ಸು ಮತ್ತು ನೀವು ಆಯ್ಕೆ ಮಾಡುವ ಪೆನ್ಷನ್ಯ ಆಧಾರದ ಮೇಲೆ ಮಾಸಿಕ ಕೊಡುವಿಕೆಯನ್ನು ವಿವರಿಸುತ್ತದೆ. ಆದ್ದರಿಂದ, ನೀವು 18ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಪ್ರೀಮಿಯಂ ಕಡಿಮೆ ಇರುತ್ತದೆ.
ನಿಯಮಿತವಾಗಿ ಕೊಡುವಿಕೆ ನೀಡುವುದರಿಂದ ಅರ್ಜಿದಾರರು 60 ವರ್ಷಗಗಳು ಆದ ಬಳಿಕ ಮಾಸಿಕ ಪೆನ್ಷನ್ಯನ್ನು ಪಡೆಯುದು ನಿಶ್ಚಿತವಾಗುತ್ತದೆ. ಫಲಾನುಭವಿಯ ಮರಣದ ಸಂದರ್ಭದಲ್ಲಿ, ಅವನ/ಅವಳ ಸಂಗಾತಿ ಪೆನ್ಷನ್ ಪ್ರಯೋಜನಗಳನ್ನು ಪಡೆಯುತ್ತಾರೆ. ಆದಾಗ್ಯೂ, ಇವರಿಬ್ಬರ ನಿಧನದ ನಂತರ, ನೇಮಕಗೊಂಡ ನಾಮಿನಿ ಈ ಪೆನ್ಷನ್ ಮೊತ್ತವನ್ನು ಸ್ವೀಕರಿಸುತ್ತಾರೆ.
₹1,000 ಮಾಸಿಕ ಪೆನ್ಷನ್ಗಾಗಿ ಅಟಲ್ ಪೆನ್ಷನ್ ಯೋಜನೆ ಕ್ಯಾಲ್ಕುಲೇಟರ್ ಚಾರ್ಟ್
ವಯಸ್ಸು (ಕೊಡುವಿಕೆಯ ವರ್ಷಗಳು) |
ಮಾಸಿಕ ಪಾವತಿ |
ನಿರೀಕ್ಷಿತ ಆದಾಯ |
18 (42 ವರ್ಷಗಳು) |
₹42 |
₹1.7 ಲಕ್ಷಗಳು |
20 (40 ವರ್ಷಗಳು) |
₹50 |
₹1.7 ಲಕ್ಷಗಳು |
22 (38 ವರ್ಷಗಳು) |
₹59 |
₹1.7 ಲಕ್ಷಗಳು |
24 (36 ವರ್ಷಗಳು) |
₹70 |
₹1.7 ಲಕ್ಷಗಳು |
26 (34 ವರ್ಷಗಳು) |
₹82 |
₹1.7 ಲಕ್ಷಗಳು |
28 (32 ವರ್ಷಗಳು) |
₹97 |
₹1.7 ಲಕ್ಷಗಳು |
30 (30 ವರ್ಷಗಳು) |
₹116 |
₹1.7 ಲಕ್ಷಗಳು |
32 (28 ವರ್ಷಗಳು) |
₹138 |
₹1.7 ಲಕ್ಷಗಳು |
34 (26 ವರ್ಷಗಳು) |
₹165 |
₹1.7 ಲಕ್ಷಗಳು |
36 (24 ವರ್ಷಗಳು) |
₹198 |
₹1.7 ಲಕ್ಷಗಳು |
38 (22 ವರ್ಷಗಳು) |
₹240 |
₹1.7 ಲಕ್ಷಗಳು |
40 (20 ವರ್ಷಗಳು) |
₹291 |
₹1.7 ಲಕ್ಷಗಳು |
₹2,000 ಮಾಸಿಕ ಪೆನ್ಷನ್ಗಾಗಿ ಅಟಲ್ ಪೆನ್ಷನ್ ಯೋಜನೆ ಕ್ಯಾಲ್ಕುಲೇಟರ್ ಚಾರ್ಟ್
ವಯಸ್ಸು (ಕೊಡುವಿಕೆ ವರ್ಷಗಳು) |
ಮಾಸಿಕ ಪಾವತಿ |
ನಿರೀಕ್ಷಿತ ಆದಾಯ |
18 (42 ವರ್ಷಗಳು) |
₹84 |
₹3.4 ಲಕ್ಷಗಳು |
20 (40 ವರ್ಷಗಳು) |
₹100 |
₹3.4 ಲಕ್ಷಗಳು |
22 (38 ವರ್ಷಗಳು) |
₹117 |
₹3.4 ಲಕ್ಷಗಳು |
24 (36 ವರ್ಷಗಳು) |
₹139 |
₹3.4 ಲಕ್ಷಗಳು |
26 (34 ವರ್ಷಗಳು) |
₹164 |
₹3.4 ಲಕ್ಷಗಳು |
28 (32 ವರ್ಷಗಳು) |
₹194 |
₹3.4 ಲಕ್ಷಗಳು |
30 (30 ವರ್ಷಗಳು) |
₹231 |
₹3.4 ಲಕ್ಷಗಳು |
32 (28 ವರ್ಷಗಳು) |
₹276 |
₹3.4 ಲಕ್ಷಗಳು |
34 (26 ವರ್ಷಗಳು) |
₹330 |
₹3.4 ಲಕ್ಷಗಳು |
36 (24 ವರ್ಷಗಳು) |
₹396 |
₹3.4 ಲಕ್ಷಗಳು |
38 (22 ವರ್ಷಗಳು) |
₹480 |
₹3.4 ಲಕ್ಷಗಳು |
40 (20 ವರ್ಷಗಳು) |
₹582 |
₹3.4 ಲಕ್ಷಗಳು |
₹3,000 ಮಾಸಿಕ ಪೆನ್ಷನ್ಗಾಗಿ ಅಟಲ್ ಪೆನ್ಷನ್ ಯೋಜನೆ ಕ್ಯಾಲ್ಕುಲೇಟರ್ ಚಾರ್ಟ್
ವಯಸ್ಸು (ಕೊಡುವಿಕೆ ವರ್ಷಗಳು) |
ಮಾಸಿಕ ಪಾವತಿ |
ನಿರೀಕ್ಷಿತ ಆದಾಯ |
18 (42 ವರ್ಷಗಳು) |
₹126 |
₹5.1 ಲಕ್ಷಗಳು |
20 (40 ವರ್ಷಗಳು) |
₹150 |
₹5.1 ಲಕ್ಷಗಳು |
22 (38 ವರ್ಷಗಳು) |
₹177 |
₹5.1 ಲಕ್ಷಗಳು |
24 (36 ವರ್ಷಗಳು) |
₹208 |
₹5.1 ಲಕ್ಷಗಳು |
26 (34 ವರ್ಷಗಳು) |
₹246 |
₹5.1 ಲಕ್ಷಗಳು |
28 (32 ವರ್ಷಗಳು) |
₹292 |
₹5.1 ಲಕ್ಷಗಳು |
30 (30 ವರ್ಷಗಳು) |
₹347 |
₹5.1 ಲಕ್ಷಗಳು |
32 (28 ವರ್ಷಗಳು) |
₹414 |
₹5.1 ಲಕ್ಷಗಳು |
34 (26 ವರ್ಷಗಳು) |
₹495 |
₹5.1 ಲಕ್ಷಗಳು |
36 (24 ವರ್ಷಗಳು) |
₹594 |
₹5.1 ಲಕ್ಷಗಳು |
38 (22 ವರ್ಷಗಳು) |
₹720 |
₹5.1 ಲಕ್ಷಗಳು |
40 (20 ವರ್ಷಗಳು) |
₹873 |
₹5.1 ಲಕ್ಷಗಳು |
₹4,000 ಮಾಸಿಕ ಪೆನ್ಷನ್ಗಾಗಿ ಅಟಲ್ ಪೆನ್ಷನ್ ಯೋಜನೆ ಕ್ಯಾಲ್ಕುಲೇಟರ್ ಚಾರ್ಟ್
ವಯಸ್ಸು (ಕೊಡುವಿಕೆ ವರ್ಷಗಳು) |
ಮಾಸಿಕ ಪಾವತಿ |
ನಿರೀಕ್ಷಿತ ಆದಾಯ |
18 (42 ವರ್ಷಗಳು) |
₹168 |
₹6.8 ಲಕ್ಷಗಳು |
20 (40 ವರ್ಷಗಳು) |
₹198 |
₹6.8 ಲಕ್ಷಗಳು |
22 (38 ವರ್ಷಗಳು) |
₹234 |
₹6.8 ಲಕ್ಷಗಳು |
24 (36 ವರ್ಷಗಳು) |
₹277 |
₹6.8 ಲಕ್ಷಗಳು |
26 (34 ವರ್ಷಗಳು) |
₹327 |
₹6.8 ಲಕ್ಷಗಳು |
28 (32 ವರ್ಷಗಳು) |
₹388 |
₹6.8 ಲಕ್ಷಗಳು |
30 (30 ವರ್ಷಗಳು) |
₹462 |
₹6.8 ಲಕ್ಷಗಳು |
32 (28 ವರ್ಷಗಳು) |
₹551 |
₹6.8 ಲಕ್ಷಗಳು |
34 (26 ವರ್ಷಗಳು) |
₹659 |
₹6.8 ಲಕ್ಷಗಳು |
36 (24 ವರ್ಷಗಳು) |
₹792 |
₹6.8 ಲಕ್ಷಗಳು |
38 (22 ವರ್ಷಗಳು) |
₹957 |
₹6.8 ಲಕ್ಷಗಳು |
40 (20 ವರ್ಷಗಳು) |
₹1,164 |
₹6.8 ಲಕ್ಷಗಳು |
₹5,000 ಮಾಸಿಕ ಪೆನ್ಷನ್ಗಾಗಿ ಅಟಲ್ ಪೆನ್ಷನ್ ಯೋಜನೆ ಕ್ಯಾಲ್ಕುಲೇಟರ್ ಚಾರ್ಟ್
ವಯಸ್ಸು (ಕೊಡುವಿಕೆ ವರ್ಷಗಳು) |
ಮಾಸಿಕ ಪಾವತಿ |
ನಿರೀಕ್ಷಿತ ಆದಾಯ |
18 (42 ವರ್ಷಗಳು) |
₹210 |
₹8.5 ಲಕ್ಷಗಳು |
20 (40 ವರ್ಷಗಳು) |
₹248 |
₹8.5 ಲಕ್ಷಗಳು |
22 (38 ವರ್ಷಗಳು) |
₹292 |
₹8.5 ಲಕ್ಷಗಳು |
24 (36 ವರ್ಷಗಳು) |
₹346 |
₹8.5 ಲಕ್ಷಗಳು |
26 (34 ವರ್ಷಗಳು) |
₹409 |
₹8.5 ಲಕ್ಷಗಳು |
28 (32 ವರ್ಷಗಳು) |
₹485 |
₹8.5 ಲಕ್ಷಗಳು |
30 (30 ವರ್ಷಗಳು) |
₹577 |
₹8.5 ಲಕ್ಷಗಳು |
32 (28 ವರ್ಷಗಳು) |
₹689 |
₹8.5 ಲಕ್ಷಗಳು |
34 (26 ವರ್ಷಗಳು) |
₹824 |
₹8.5 ಲಕ್ಷಗಳು |
36 (24 ವರ್ಷಗಳು) |
₹990 |
₹8.5 ಲಕ್ಷಗಳು |
38 (22 ವರ್ಷಗಳು) |
₹1,196 |
₹8.5 ಲಕ್ಷಗಳು |
40 (20 ವರ್ಷಗಳು) |
₹1,454 |
₹8.5 ಲಕ್ಷಗಳು |
ಅಟಲ್ ಪೆನ್ಷನ್ ಯೋಜನೆಯ ಮೇಲೆ ಅನ್ವಯಿಸುವ ಬಡ್ಡಿ ದರ
ವಿಳಂಬವಾದ ಮಾಸಿಕ ಪಾವತಿಗಳಿಗೆ ಕೆಲವು ಶುಲ್ಕಗಳು ಮತ್ತು ಬಡ್ಡಿ ದರಗಳಿರುತ್ತವೆ. ಪೆನ್ಷನ್ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಸರ್ಕಾರಿ ಪರವಾನಗಿಯ ಆಧಾರದ ಮೇಲೆ ಈ ಶುಲ್ಕಗಳನ್ನು ವಿಧಿಸುತ್ತದೆ.
ಇನ್ನಷ್ಟು ತಿಳಿಯಲು ಕೋಷ್ಟಕವನ್ನು ನೋಡಿ:
ಮಧ್ಯವರ್ತಿ |
ಶುಲ್ಕ ಪ್ರಮುಖ |
ಸೇವಾ ಶುಲ್ಕ |
ಕೆಂದ್ರೀಯ ದಾಖಲೆ - ಕಾಪಿಡುವ ಏಜನ್ಸಿಗಳು |
ಖಾತೆ ತೆರೆಯುವಿಕೆ ಶುಲ್ಕಗಳು |
₹15/ಖಾತೆ |
- |
ಖಾತೆ ನಿರ್ವಹಣಾ ಶುಲ್ಕಗಳು |
₹40/ಖಾತೆ ಪ್ರತೀ ವರ್ಷ |
ಪೆನ್ಷನ್ ನಿಧಿ ನಿರ್ವಾಹಕರು |
ಹೂಡಿಕೆ ಶುಲ್ಕ (ಪ್ರತೀ ವರ್ಷ) |
AUMನ 0.0102% |
ಪಾಲಕ |
ಹೂಡಿಕೆ ನಿರ್ವಹಣಾ ಶುಲ್ಕ (ವಾರ್ಷಿಕ) |
0.0075% (ಎಲೆಕ್ಟ್ರಾನಿಕ್ಸ್) 0.05% (AUM ನ ಭೌತಿಕ ವಿಭಾಗ) |
ಹಾಜರಿಯ ಪಾಯಿಂಟ್ |
ಚಂದಾದಾರರ ಶುಲ್ಕಗಳು |
₹120 - ₹150 |
- |
ಮರುಕಳಿಸುವ ಶುಲ್ಕಗಳು |
₹100 ಪ್ರತೀ ವರ್ಷ/ಚಂದಾದಾರ |
ಅನ್ವಯಿಸುವ ಪೆನಾಲ್ಟಿ ಶುಲ್ಕಗಳು
ನಿಗದಿತ ದಿನಾಂಕದ ಮೊದಲು ಮಾಸಿಕ ಪ್ರೀಮಿಯಂ ಅನ್ನು ಪಾವತಿಸಲು ವಿಫಲವಾದರೆ, ಅನ್ವಯಿಸುವ ಮಾಸಿಕ ಪೆನಾಲ್ಟಿ ಶುಲ್ಕಗಳ ಪಟ್ಟಿ ಇಲ್ಲಿದೆ:
- ₹100 ವರೆಗಿನ ಮಾಸಿಕ ಪಾವತಿಗಳಿಗೆ PFRDA ₹1 ಶುಲ್ಕವನ್ನು ಪಡೆಯುತ್ತದೆ.
- ₹101 ರಿಂದ ₹150 ಮಧ್ಯದ ಮಾಸಿಕ ಕೊಡುಗೆಗಳಿಗೆ ಇದು ₹2 ಶುಲ್ಕವನ್ನು ಪಡೆಯುತ್ತದೆ.
- ₹500 ರಿಂದ ₹1,000 ಮಧ್ಯದ ಪ್ರೀಮಿಯಂಗಳಿಗೆ ₹5 ಶುಲ್ಕ ಅನ್ವಯಿಸುತ್ತದೆ.
- ₹1,000ಕ್ಕಿಂತ ಹೆಚ್ಚಿನ ಮಾಸಿಕ ಪ್ರೀಮಿಯಂಗಳಿಗೆ ₹10 ಶುಲ್ಕವನ್ನು ವಿಧಿಸಲಾಗುತ್ತದೆ.
ಅಟಲ್ ಪೆನ್ಷನ್ ಯೋಜನೆ ಪ್ರೀಮಿಯಂ ಕ್ಯಾಲ್ಕುಲೇಟರ್ ಬಳಸುವುದರಿಂದಾಗುವ 3 ಲಾಭಗಳು
ಆನ್ಲೈನ್ ಅಟಲ್ ಪೆನ್ಷನ್ ಯೋಜನಾ ಕ್ಯಾಲ್ಕುಲೇಟರ್ ಅನ್ನು ಬಳಸುವುರಿಂದ ಹೇಗೆ ಸಹಾಯ ಆಗುತ್ತದೆ ಎಂಬುದನ್ನು ಮುಂದಿನ ಹಂತಗಳಲ್ಲಿ ನೋಡೋಣ:
ಮುಂಗಡ ಉಳಿತಾಯಗಳು
ಅಟಲ್ ಪೆನ್ಷನ್ ಯೋಜನೆ ಕ್ಯಾಲ್ಕುಲೇಟರ್ ಅನ್ನು ಬಳಸುವುದರಿಂದ ಉದ್ದೇಶಿತ ಧನವನ್ನು ಸ್ವೀಕರಿಸಲು ನೀವು ಎಷ್ಟು ಉಳಿತಾಯ ಮಾಡಬೇಕೆಂಬುದರ ಬಗ್ಗೆ ಮುಂಚಿತವಾಗಿ ಅಂದಾಜು ಸಿಗುತ್ತದೆ.
ಸಮಯವನ್ನು ಉಳಿಸುತ್ತದೆ
ಸಂಪೂರ್ಣವಾಗಿ ಆನ್ಲೈನ್ ಆಗಿರುವುದರಿಂದ, ಹೆಚ್ಚಿನ ಸಮಯ ಹಾಗೂ ಶಕ್ತಿಯನ್ನು ವ್ಯಯಿಸದೆಯೇ ಈ ಕ್ಯಾಲ್ಕುಲೇಟರ್ ನಿಮಗೆ ಬಹುತೇಕ ನಿಖರ ಫಲಿತಾಂಶಗಳನ್ನು ನೀಡುತ್ತದೆ.
ಉಚಿತ ಬಳಕೆ
ಅನೇಕ ವೆಬ್ಸೈಟ್ಗಳು ಆನ್ಲೈನ್ ಅಟಲ್ ಪೆನ್ಷನ್ ಯೋಜನೆ ರಿಟರ್ನ್ ಕ್ಯಾಲ್ಕುಲೇಟರ್ ಅನ್ನು ಒದಗಿಸುತ್ತವೆ, ಇದು ಯಾವುದೇ ಬಳಕೆಯ ನಿರ್ಬಂಧಗಳಿಗೆ ಒಳಪಟ್ಟಿಲ್ಲ. ಸಾಮಾನ್ಯವಾಗಿ ಈ ಕ್ಯಾಲ್ಕುಲೇಟರ್ ಗಳ ಬಳಕೆ ಉಚಿತವಾಗಿರುತ್ತದೆ. ಆದ್ದರಿಂದ, ನೀವು ಈ ಕ್ಯಾಲ್ಕುಲೇಟರ್ ಅನ್ನು ನಿಮ್ಮ ಅಗತ್ಯಗಳ ಪ್ರಕಾರ ಬಳಸಬಹುದು.