ರಿಟೈರ್ಮೆಂಟ್ ಪ್ಲಾನಿಂಗ್ ಕ್ಯಾಲ್ಕುಲೇಟರ್
ವಯಸ್ಸು
ರಿಟೈರ್ಮೆಂಟ್ ವಯಸ್ಸು
ವಾರ್ಷಿಕ ಆದಾಯ
ಆದಾಯದ ಬೆಳವಣಿಗೆ ದರ
ಪ್ರಸ್ತುತ ಹೂಡಿಕೆ
ಪ್ರಸ್ತುತ ಹೂಡಿಕೆ (ವಾರ್ಷಿಕವಾಗಿ)
ನಿರೀಕ್ಷಿತ ಪಿಂಚಣಿ (ವಾರ್ಷಿಕವಾಗಿ)
ರಿಟೈರ್ಮೆಂಟ್ ಕ್ಯಾಲ್ಕುಲೇಟರ್ ಎಂದರೇನು?
ಆನ್ಲೈನ್ ರಿಟೈರ್ಮೆಂಟ್ ಕ್ಯಾಲ್ಕುಲೇಟರ್ ಎಂದರೆ ನಿಮ್ಮ ಪ್ರಸ್ತುತ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ರಿಟೈರ್ಮೆಂಟ್ ನಂತರ ನಿಮಗೆ ಅಗತ್ಯವಿರುವ ಹಣವನ್ನು ಲೆಕ್ಕಾಚಾರ ಮಾಡುವ ಒಂದು ಉಪಯುಕ್ತ ಸಾಧನ. ಲೆಕ್ಕಾಚಾರಗಳು ರಿಟೈರ್ಮೆಂಟ್ ಅವಧಿ ಮತ್ತು ಹಣದುಬ್ಬರದ ನಿರೀಕ್ಷಿತ ದರದಂತಹ ಊಹೆಗಳನ್ನು ಆಧರಿಸಿವೆ.
ಈ ಕ್ಯಾಲ್ಕುಲೇಟರ್ನ ಕಾರ್ಯನಿರ್ವಹಣೆಯ ಕುರಿತು ವಿವರವಾಗಿ ತಿಳಿಯೋಣ.
ರಿಟೈರ್ಮೆಂಟ್ ಕ್ಯಾಲ್ಕುಲೇಟರ್ ನ ಸೂತ್ರ ಯಾವುದು?
ರಿಟೈರ್ಮೆಂಟ್ ಪ್ಲಾನಿಂಗ್ ಕ್ಯಾಲ್ಕುಲೇಟರ್ ಕಾರ್ಯನಿರ್ವಹಿಸುವ ಗಣಿತದ ಸೂತ್ರ ಹೀಗಿದೆ:
FV = PV (1+r)^n.
ಭಾರತದಲ್ಲಿ ರಿಟೈರ್ಮೆಂಟ್ ಕ್ಯಾಲ್ಕುಲೇಟರ್ ಅನ್ನು ಬಳಸುವ ಮೊದಲು, ಎಲ್ಲಾ ಮೂಲಭೂತ ನಿಯತಾಂಕಗಳನ್ನು ಅರ್ಥಮಾಡಿಕೊಳ್ಳಲು ಕೆಳಗಿನ ಕೋಷ್ಟಕವನ್ನು ನೋಡಿ.
ಸೂತ್ರ |
ನಿಯತಾಂಕಗಳು |
FV = PV (1+r)^n |
ಭವಿಷ್ಯದ ಮೌಲ್ಯ (FV), ಪ್ರಸ್ತುತ ಮೌಲ್ಯ (PV), ನಿರೀಕ್ಷಿತ ಹಣದುಬ್ಬರ (r), ರಿಟೈರ್ಮೆಂಟ್ ಅವಧಿ(n) |
ರಿಟೈರ್ಮೆಂಟ್ ಪ್ಲಾನಿಂಗ್ ಕ್ಯಾಲ್ಕುಲೇಟರ್ ಹೇಗೆ ಕೆಲಸ ಮಾಡುತ್ತದೆ?
ರಿಟೈರ್ಮೆಂಟ್ ಪ್ಲಾನಿಂಗ್ ಕ್ಯಾಲ್ಕುಲೇಟರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಒಂದು ಉದಾಹರಣೆ ಸಹಿತ ಅರ್ಥಮಾಡಿಕೊಳ್ಳೋಣ.
ಈ ಕೋಷ್ಟಕವು ನಿಮ್ಮ ಸನ್ನಿವೇಶವನ್ನು ವಿವರಿಸುತ್ತದೆ ಎಂದು ನೋಡೋಣ -
ನಿಯತಾಂಕಗಳು |
ಡೇಟಾ |
ಪ್ರಸ್ತುತ ವಯಸ್ಸು |
35 ವರ್ಷಗಳು |
ರಿಟೈರ್ಮೆಂಟ್ ವಯಸ್ಸು |
60 ವರ್ಷಗಳು |
ರಿಟೈರ್ಮೆಂಟ್ ನಂತರ ಅಗತ್ಯವಿರುವ ಮಾಸಿಕ ಆದಾಯ |
₹35,000 |
ಜೀವಿತಾವಧಿ |
80 |
ಹಣದುಬ್ಬರ |
6% |
ಈಗ, ನಿಮ್ಮ ರಿಟೈರ್ಮೆಂಟ್ ನಿಧಿಯನ್ನು 8% ಬಡ್ಡಿ ನೀಡುವ ಬ್ಯಾಂಕ್ ನ ಎಫ್.ಡಿಯಲ್ಲಿ ಹೂಡಿಕೆ ಮಾಡಲು ನೀವು ಬಯಸುತ್ತೀರಿ ಎಂದು ಹೇಳೋಣ.
ಹಾಗಾದರೆ ಸೂತ್ರದ ಪ್ರಕಾರ FV = PV (1+r)^n
FV |
ಅಗತ್ಯವಿರುವ ವಾರ್ಷಿಕ ಆದಾಯ |
₹35,000 (1+0.06)^25 = ₹1,50,215.5 |
₹150215.5 x 12 = ₹18,02,586 |
ಎಫ್.ಡಿ.ಆದಾಯ |
ಹಣದುಬ್ಬರ |
ರಿಟರ್ನ್ ನ ಹಣದುಬ್ಬರ-ಹೊಂದಾಣಿಕೆ ದರ |
8% |
6% |
(1+0.08)/(1+0.06) - 1 = 0.001575 |
ಆದ್ದರಿಂದ, ಹಣದುಬ್ಬರ-ಹೊಂದಾಣಿಕೆ ದರವು 0.001575 ಆಗುತ್ತದೆ.
ತಿಂಗಳುಗಳಲ್ಲಿ ರಿಟೈರ್ಮೆಂಟ್ ಅವಧಿ |
ಪಿಎಂಟಿ |
12x20 = 240 |
₹18,02,586/12 = ₹1,50,215 |
PV ವಿಧಾನವನ್ನು ಬಳಸಿಕೊಂಡು ಈಗ ನಿಮ್ಮ ರಿಟೈರ್ಮೆಂಟ್ ನಿಧಿಅನ್ನು ನೀವು ಎಕ್ಸೆಲ್ ಕ್ಯಾಲ್ಕುಲೇಟರ್ನಲ್ಲಿ ಲೆಕ್ಕ ಹಾಕಬಹುದು.
ಕೆಳಗಿನ ಕೋಷ್ಟಕದಲ್ಲಿ ತೋರಿಸಿರುವಂತೆ ರಿಟೈರ್ಮೆಂಟ್ ಕ್ಯಾಲ್ಕುಲೇಟರ್ನಲ್ಲಿ ಕೆಳಗಿನವುಗಳನ್ನು ಆಯ್ಕೆಮಾಡಿ.
PMT |
1,50,215 |
NPER |
240 ತಿಂಗಳುಗಳು |
ವಿಧ |
1 |
ರಿಟೈರ್ಮೆಂಟ್ ಕಾರ್ಪಸ್ |
₹3,00,48,832 |
ಆದ್ದರಿಂದ, ನೀವು ವಾರ್ಷಿಕ ಆದಾಯ ₹18,02,586 ಗಳಿಸಲು ಅಗತ್ಯವಿರುವ ರಿಟೈರ್ಮೆಂಟ್ ನಿಧಿ₹3,00,48,832 ಆಗಿದೆ.
ಸರಳವಾಗಿ ಹೇಳುವುದಾದರೆ, 20 ವರ್ಷಗಳ ನಂತರ ₹18,02,586 ವಾರ್ಷಿಕ ಆದಾಯವನ್ನು ಪಡೆಯಲು ನಿಮ್ಮ 60ನೇ ವರ್ಷದಲ್ಲಿ ₹3,00,48,832 ಅನ್ನು 8% ರಿಟರ್ನ್ ದರದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
ರಿಟೈರ್ಮೆಂಟ್ ಪ್ಲಾನಿಂಗ್ ಕ್ಯಾಲ್ಕುಲೇಟರ್ ಅನ್ನು ಬಳಸುವುದು ಹೇಗೆ?
ಸೂತ್ರವನ್ನು ಬಳಸಿಕೊಂಡು ಲೆಕ್ಕಾಚಾರ ಮಾಡುವುದಕ್ಕಿಂತ ಕ್ಯಾಲ್ಕುಲೇಟರ್ ಅನ್ನು ಬಳಸುವುದು ಸುಲಭವಾದ ವಿಧಾನವಾಗಿದೆ. ನೀವು ಮಾಡಬೇಕಾಗಿರುವುದು ಕೆಳಗೆ ತಿಳಿಸಲಾದ ಸರಳ ಹಂತಗಳನ್ನು ಅನುಸರಿಸುವುದು.
ಹಂತ 1: 18 ರಿಂದ 50 ವರ್ಷಗಳ ನಡುವಿನ ಸ್ಲೈಡಿಂಗ್ ಬಟನ್ ಅನ್ನು ಬಳಸಿಕೊಂಡು ಸರಿಯಾದ ವಯಸ್ಸನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಪ್ರಸ್ತುತ ವಯಸ್ಸನ್ನು ನಮೂದಿಸಿ. ಕೊಟ್ಟಿರುವ ಕೋಷ್ಟಕದಲ್ಲಿ ನೀವು ನಿಮ್ಮ ವಯಸ್ಸನ್ನು ನೇರವಾಗಿ ಟೈಪ್ ಮಾಡಬಹುದು.
ಹಂತ 2: ಮುಂದೆ ನೀವು ಹಿಂದಿನ ಹಂತದಂತೆಯೇ ಸ್ಲೈಡರ್ ಆಯ್ಕೆಯನ್ನು ಬಳಸಿಕೊಂಡು ನಿಮ್ಮ ನಿರೀಕ್ಷಿತ ನಿವೃತ್ತಿ ವಯಸ್ಸನ್ನು ಸೇರಿಸಬೇಕು. ಸ್ಕೇಲ್ 40 ರಿಂದ 70 ವರ್ಷಗಳನ್ನು ಒಳಗೊಂಡಿರುವುದರಿಂದ ಇರುವುದರಿಂದ ನಿಮ್ಮ ರಿಟೈರ್ಮೆಂಟ್ ವಯಸ್ಸನ್ನು ನೀವು ನೇರವಾಗಿ ಟೈಪ್ ಮಾಡಬಹುದು.
ಹಂತ 3: ಈಗ ನೀವು ₹ 10000 ರಿಂದ ₹ 1 ಕೋಟಿ ನಡುವೆ ಸ್ಕ್ರಾಲ್ ಮಾಡುವುದರ ಮೂಲಕ ನಿಮ್ಮ ವಾರ್ಷಿಕ ಆದಾಯವನ್ನು ಒದಗಿಸಬೇಕಾಗುತ್ತದೆ.
ಹಂತ 4: ನಿಮ್ಮ ಆದಾಯ ಬೆಳವಣಿಗೆ ದರವನ್ನು ವರ್ಷಗಳಲ್ಲಿ ಆಯ್ಕೆ ಮಾಡುವುದು ನಿಮ್ಮ ಮುಂದಿನ ಹಂತವಾಗಿರುತ್ತದೆ.
ಹಂತ 5: ಇದರ ನಂತರ ನೀವು ನಿಮ್ಮ ಪ್ರಸ್ತುತ ಹೂಡಿಕೆಗಳು ಮರುಕಳಿಸುವ ಅಥವಾ ನಿಶ್ಚಲವಾಗಿದ್ದರೆ, ನಿಮ್ಮ ಪ್ರಸ್ತುತ ವಾರ್ಷಿಕ ಹೂಡಿಕೆಯ ಮೊತ್ತವನ್ನು ರೂಪಾಯಿಗಳಲ್ಲಿ ಒದಗಿಸಬೇಕು.
ಹಂತ 6: ಈಗ ನೀವು ರಿಟೈರ್ಮೆಂಟ್ ನಂತರದ ನಿಮ್ಮ ವಾರ್ಷಿಕ ನಿರೀಕ್ಷಿತ ಪಿಂಚಣಿಯನ್ನು ಆಯ್ಕೆ ಮಾಡಬೇಕಾಗುತ್ತದೆ.
ಹಂತ 7: ಕೊನೆಯದಾಗಿ ನೀವು ನಿರ್ದಿಷ್ಟ ಅವಧಿಗೆ ಊಹಿಸಲಾದ ಹಣದುಬ್ಬರವನ್ನು ಆಯ್ಕೆ ಮಾಡಬೇಕಾಗುತ್ತದೆ, ಇದನ್ನು ಪೂರ್ವನಿಯೋಜಿತವಾಗಿ 6% ಗೆ ಹೊಂದಿಸಲಾಗಿರುತ್ತದೆ.
ಹಂತ 8: ನಿಮ್ಮ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ನಿಮಗೆ ಅಗತ್ಯವಿರುವ ಹಣವನ್ನು ಪರಿಶೀಲಿಸಿ, ಅದಕ್ಕೆ ಅನುಗುಣವಾಗಿ ನಿಮ್ಮ ರಿಟೈರ್ಮೆಂಟ್ ಅನ್ನು ಯೋಜಿಸಿ.
ರಿಟೈರ್ಮೆಂಟ್ ಪ್ಲಾನಿಂಗ್ ಕ್ಯಾಲ್ಕುಲೇಟರ್ನ ಪ್ರಯೋಜನಗಳು ಯಾವುವು?
ಆನ್ಲೈನ್ ರಿಟೈರ್ಮೆಂಟ್ ಕ್ಯಾಲ್ಕುಲೇಟರ್ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇದು ನಿಮಗೆ ಹೀಗೆ ಸಹಾಯ ಮಾಡುತ್ತದೆ -
- ನಿಮ್ಮ ವೃತ್ತಿಪರ ವೃತ್ತಿಜೀವನದ ಕೊನೆಯಲ್ಲಿ ದೊಡ್ಡ ನಿಧಿಯೊಂದಿಗೆ ರಿಟೈರ್ಮೆಂಟ್ ಆಗಲು ನೀವು ಮಾಸಿಕವಾಗಿ ಎಷ್ಟು ಉಳಿಸಬೇಕು ಎಂಬುದನ್ನು ಲೆಕ್ಕಾಚಾರ ಮಾಡಿ.
- ನೀವು ಪರಿಗಣಿಸಬೇಕಾದ ನಿರ್ದಿಷ್ಟ ಹೂಡಿಕೆ ಅವಕಾಶಗಳನ್ನು ನಿರ್ಧರಿಸಿ.
- ವಿವಿಧ ರಿಟೈರ್ಮೆಂಟ್ ಆಯ್ಕೆಗಳು ಮತ್ತು ಯೋಜನೆಗಳನ್ನು ಹೋಲಿಕೆ ಮಾಡಿ.
- ಕೆಲವು ಸರಳ ಕ್ಲಿಕ್ಗಳೊಂದಿಗೆ ಸಮಯವನ್ನು ಉಳಿಸಿ.
ಈಗ ನೀವು ರಿಟೈರ್ಮೆಂಟ್ ಕ್ಯಾಲ್ಕುಲೇಟರ್ನ ಕೆಲಸ, ಬಳಕೆ ಮತ್ತು ಪ್ರಯೋಜನಗಳ ಬಗ್ಗೆ ತಿಳಿದುಕೊಂಡಿದ್ದೀರಿ. ಹಾಗಾದರೆ ನಿಮ್ಮ ಆರ್ಥಿಕ ಸುರಕ್ಷಿತ ಭವಿಷ್ಯಕ್ಕಾಗಿ ಸಕಾಲದಲ್ಲಿ ಹೂಡಿಕೆ ಮಾಡಿ!