ಒವುಲೇಷನ್ ಕ್ಯಾಲ್ಕುಲೇಟರ್
ಮುಂದಿನ ಋತುಚಕ್ರದ ದಿನಗಳಲ್ಲಿ ನಿಮ್ಮ ಹೆಚ್ಚು ಫಲದಾಯಕ ದಿನಗಳು
ನಿಮ್ಮ ಋತುಚಕ್ರವು ದಿನಗಳು | ಫಲದಾಯಕ ದಿನಗಳ ಡ್ಯೂ ಡೇಟ್ |
---|---|
{{nextPeriod.nextSixPeriod}} | {{nextPeriod.dueDates}} |
ಆನ್ಲೈನ್ ಒವುಲೇಷನ್ ಡೇಟ್ ಕ್ಯಾಲ್ಕುಲೇಟರ್: ಹೇಗೆ ಬಳಸುವುದು ಮತ್ತು ಅದರ ಮಹತ್ವ
ಪ್ರತಿ ಮಹಿಳೆಯ ಋತುಚಕ್ರ ವಿಭಿನ್ನವಾಗಿರುತ್ತದೆ. ಆದ್ದರಿಂದ, ನೀವು ಗರ್ಭಧರಿಸುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ, ನಿಮ್ಮ ದೇಹವನ್ನು ಚೆನ್ನಾಗಿ ತಿಳಿದುಕೊಳ್ಳಲು ನೀವು ಪ್ರಯತ್ನಿಸಬೇಕು. ಈ ಉದ್ದೇಶಕ್ಕಾಗಿ, ನೀವು ಆನ್ಲೈನ್ ಒವುಲೇಷನ್ ದಿನಾಂಕ ಕ್ಯಾಲ್ಕುಲೇಟರ್ ನ ಸಹಾಯವನ್ನು ತೆಗೆದುಕೊಳ್ಳಬಹುದು. ನಿಮ್ಮ ಹೆಚ್ಚು ಫಲದಾಯಕ ದಿನಗಳನ್ನು ಲೆಕ್ಕಾಚಾರ ಮಾಡಲು ಇದು ನೆರವಾಗುತ್ತದೆ. ಅಲ್ಲದೆ, ನೀವು ಗರ್ಭಿಣಿಯಾಗಿದ್ದೀರಾ ಎಂದು ಪರಿಶೀಲಿಸಲು ಸರಿಯಾದ ದಿನಾಂಕ ಯಾವುದು ಎಂಬುದರ ಕುರಿತಾಗಿಯೂ ಒಳನೋಟವನ್ನು ಪಡೆಯಬಹುದು.
ಈ ಆನ್ಲೈನ್ ಒವುಲೇಷನ್ ಡೇಟ್ ಕ್ಯಾಲ್ಕುಲೇಟರ್ ನಿಮಗೆ ಹೇಗೆ ಸಹಾಯ ಮಾಡುತ್ತದೆ, ಇದನ್ನು ಹೇಗೆ ಬಳಸುವುದು ಮತ್ತು ನೀವು ಒವುಲೇಷನ್ ದಿನಗಳಲ್ಲಿದ್ದೀರಿ ಎಂದು ತಿಳಿಯುವ ಸೂಚನೆಗಳ ಕುರಿತು ಈ ಕೆಳಗೆ ಇನ್ನಷ್ಟು ತಿಳಿಯಿರಿ!
ಒವುಲೇಷನ್ ಡೇಟ್ ಕ್ಯಾಲ್ಕುಲೇಟರ್ ಎಂದರೇನು?
ಒವುಲೇಷನ್ ಕ್ಯಾಲ್ಕುಲೇಟರ್ ಮಹಿಳೆಯ ಫಲಧಾಯಕ ಕಾಲಾವಧಿಯ ಅಂದಾಜು ನೀಡುತ್ತದೆ. ಆದರೆ ಗರ್ಭ ನಿಯಂತ್ರಣ ಮತ್ತು ಗರ್ಭಧಾರಣೆಯನ್ನು ಖಾತರಿಪಡಿಸುವುದಿಲ್ಲ. ಆದ್ದರಿಂದ, ನಿಮ್ಮ ಗರ್ಭಧಾರಣೆ ಕುರಿತು ತಿಳಿಯಲು ಮತ್ತು ನಿಮಗೆ ಸೂಕ್ತ ಅನ್ನಿಸುವಂತೆ ಗರ್ಭ ನಿಯಂತ್ರಣ ಕುರಿತು ನಿರ್ಣಯ ತೆಗೆದುಕೊಳ್ಳಲು ವೈದ್ಯರನ್ನು ಸಂಪರ್ಕಿಸುವುದು ಒಳಿತು.
ನಿಮಗೆ ಆನ್ಲೈನ್ ಒವುಲೇಷನ್ ಡೇಟ್ ಕ್ಯಾಲ್ಕುಲೇಟರ್ ಏಕೆ ಬೇಕು?
ಹೆಚ್ಚು ಫಲದಾಯಕ ದಿನಗಳಲ್ಲಿ ನಿಮ್ಮ ಅಂಡಾಣುವನ್ನು ಪುರುಷ ಸಂಗಾತಿಯ ವೀರ್ಯ ತಲುಪಿದರೆ ಗರ್ಭಿಣಿಯಾಗುವ ಸಾಧ್ಯತೆ ಹಚ್ಚಿರುತ್ತದೆ. ಅದಕ್ಕಿಂತ ಹೆಚ್ಚಾಗಿ, ನಿಮ್ಮ ಒವುಲೇಷನ್ಯ ಕೆಲವು ದಿನಗಳಲ್ಲಿಅಂದರೆ ಅಂಡಾಣು ಬಿಡುಗಡೆಯಾಗುವ ಸಂದರ್ಭಗಳಲ್ಲಿ ಮಾತ್ರ ಹೀಗಾಗಲು ಸಾಧ್ಯವಿದೆ.
ಆನ್ಲೈನ್ ಒವುಲೇಷನ್ ಡೇಟ್ ಕ್ಯಾಲ್ಕುಲೇಟರ್ ನಿಮ್ಮ ಫಲಧಾಯಕ ದಿನಗಳ ಕಾಲಾವಧಿಯನ್ನು ಅಂದಾಜಿಸಲು ನೆರವಾಗುತ್ತದೆ. ಆದಾಗ್ಯೂ, ಈ ಕ್ಯಾಲ್ಕುಲೇಟರ್ ಗರ್ಭಧಾರಣೆ ಅಥವಾ ಜನನ ನಿಯಂತ್ರಣವನ್ನು ಖಾತರಿಪಡಿಸುವುದಿಲ್ಲ ಎಂದು ನೆನಪಿಡಬೇಕಾದುದು ಅವಶ್ಯ.
ಪ್ರತಿ ಮಹಿಳೆಯ ಫಲದಾಯಕ ಕಾಲಾವಧಿಯು ವಿಭಿನ್ನವಾಗಿರುತ್ತದೆ ಮತ್ತು ತಿಂಗಳು ತಿಂಗಳು ಆ ಅವಧಿ ಬದಲಾಗಬಹುದು. ಸಾಮಾನ್ಯವಾಗಿ ನಿಮ್ಮ ಋತುಚಕ್ರದ ಸಮಯದಲ್ಲಿ ನೀವು ಗರ್ಭಿಣಿಯಾಗುವ ಹೆಚ್ಚಿನ ಸಾಧ್ಯತೆ ಇರುವ ಸಮಯ 6 ದಿನಗಳು.
ಈ ಕ್ಯಾಲ್ಕುಲೇಟರ್ ಜೊತೆಗೆ, ಬೇಸಲ್ ಟೆಂಪರೇಚರ್ ಟ್ರ್ಯಾಕಿಂಗ್, ಫಲವತ್ತತೆ ದಿನಗಳ ಯೋಜನೆ ಚಾರ್ಟು ಮತ್ತು ಒವುಲೇಷನ್ ಪರೀಕ್ಷಾ ಕಿಟ್ಗಳು ಸಹ ನಿಮ್ಮ ಹೆಚ್ಚು ಫಲದಾಯಕ ಸಮಯವನ್ನು ಊಹಿಸಲು ಸಹಾಯ ಮಾಡುತ್ತದೆ.
ಒವುಲೇಷನ್ ದಿನಾಂಕಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ಮುಂದಿನ ಪೀರಿಯಡ್ ಆದ ದಿನದಿಂದ 14 ದಿನಗಳನ್ನು ಎಣಿಸುವುದರ ಮೂಲಕ ನಿಮ್ಮ ಒವುಲೇಷನ್ ದಿನಾಂಕವನ್ನು ಅಂದಾಜಿಸಲು ಫಲದಾಯಕ ದಿನಗಳ ಕ್ಯಾಲ್ಕುಲೇಟರ್ ನೆರವಾಗುತ್ತದೆ. ಈ ಉದ್ದೇಶಕ್ಕಾಗಿ, ಇದು ನಿಮ್ಮ ಋತುಚಕ್ರದ ಬಗೆಗಿನ ಮಾಹಿತಿಯನ್ನು ನಿಮ್ಮಿಂದ ಅಪೇಕ್ಷಿಸುತ್ತದೆ.
ಉದಾಹರಣೆಗೆ, ನೀವು 28 ದಿನಗಳ ಋತುಚಕ್ರವನ್ನು ಹೊಂದಿದ್ದರೆ, ನಿಮ್ಮ ಕೊನೆಯ ಪೀರಿಯಡ್ ನ ಮೊದಲ ದಿನದಿಂದ ಶುರು ಮಾಡಿದರೆ 28ನೇ ದಿನಕ್ಕೆ ಸರಿಯಾಗಿ ನಿಮ್ಮ ಮುಂದಿನ ಪೀರಿಯಡ್ ಆರಂಭವಾಗುತ್ತದೆ ಎಂಬುದನ್ನು ಕ್ಯಾಲ್ಕುಲೇಟರ್ ಅಂದಾಜು ಮಾಡುತ್ತದೆ.
ನೀವು ಮಾಹಿತಿಯನ್ನು ನೀಡಿದ ನಂತರ, ಒವುಲೇಷನ್ ಕ್ಯಾಲ್ಕುಲೇಟರ್ ನಿಮ್ಮ ಫಲದಾಯಕ ಕಾಲಾವಧಿಯನ್ನು ತೋರಿಸುತ್ತದೆ. ಇದು ನಿಮ್ಮ ಒವುಲೇಷನ್ಯ ದಿನ ಮತ್ತು ಅದರಿಂದ ಮೊದಲ ಐದು ದಿನಗಳನ್ನು ಒಳಗೊಂಡಿರುತ್ತದೆ. ಆದಾಗ್ಯೂ, ಆ ಸಮಯದ ಚೌಕಟ್ಟಿನ ಕೊನೆಯ ಮೂರು ದಿನಗಳಲ್ಲಿ ನೀವು ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚು.
ಒವುಲೇಷನ್ ಡೇಟ್ ಕ್ಯಾಲ್ಕುಲೇಟರ್ ಅನ್ನು ಬಳಸುವುದು ಹೇಗೆ?
ಒವುಲೇಷನ್ ಕಾಲಾವಧಿ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ನಿಮ್ಮ ಅತ್ಯಂತ ಫಲದಾಯಕ ದಿನಗಳನ್ನು ಕಂಡುಹಿಡಿಯಲು ನೀವು ಎರಡು ಸರಳ ಹಂತಗಳನ್ನು ಅನುಸರಿಸಬೇಕು:
ಹಂತ 1: ಆ ತಿಂಗಳ ಅಥವಾ ಅದರ ಹಿಂದಿನ ತಿಂಗಳ ನಿಮ್ಮ ಪೀರಿಯಡ್ ನ ಮೊದಲ ದಿನವನ್ನು ನಮೂದಿಸಿ.
ಹಂತ 2: ಡ್ರಾಪ್-ಡೌನ್ ಪಟ್ಟಿಯಲ್ಲಿ ನಿಮ್ಮ ಋತುಚಕ್ರದ ಅವಧಿಯನ್ನು ಉಲ್ಲೇಖಿಸುವ ಮೂಲಕ ಸರಿಯಾದ ಆಯ್ಕೆಯನ್ನು ಆರಿಸಿಕೊಳ್ಳಿ. ಅದರ ನಂತರ, ಕ್ಯಾಲ್ಕುಲೇಟರ್ ನಿಮಗೆ ದಿನಾಂಕಗಳನ್ನು ಒದಗಿಸುತ್ತದೆ.
ಒವುಲೇಷನ್ ಸೂಚನೆಗಳು ಯಾವುವು?
ಫಲದಾಯಕ ಅವಧಿಯ ಕ್ಯಾಲ್ಕುಲೇಟರ್ ಅನ್ನು ಬಳಸದೆಯೇ ಒವುಲೇಷನ್ ನಡೆಯುತ್ತಿದೆ ಎಂಬುದನ್ನು ಗುರುತಿಸುವುದು ಹೇಗೆ ಎಂದು ನೀವು ಆಲೋಚಿಸುತ್ತಿದ್ದರೆ, ನೀವು ಗಮನಿಸಬೇಕಾದ ಕೆಲವು ಸೂಚನೆಗಳು ಇಲ್ಲಿವೆ:
- ಹಸಿವು ಅಥವಾ ಮನಸ್ಥಿತಿಯಲ್ಲಿ ಬದಲಾವಣೆ.
- ಕೆಳಹೊಟ್ಟೆಯಲ್ಲಿ ಸಣ್ಣಗೆ ಸೆಳೆತ.
- ಬೇಸಲ್ ಬಾಡಿ ಟೆಂಪರೇಚರ್ ನಲ್ಲಿ ಹೆಚ್ಚಳ.
- ಸ್ತನಗಳಲ್ಲಿ ಮೃದುತ್ವ.
- ಲೈಂಗಿಕ ಆಸಕ್ತಿ ಹೆಚ್ಚಳ.
- ಹೊಟ್ಟೆ ಉಬ್ಬಿಕೊಂಡ ಭಾವ.
- ವಾಸನೆ ಪ್ರಜ್ಞೆ ಹೆಚ್ಚಳ.
- ಯೋನಿಯಲ್ಲಿ ಸಣ್ಣಗಿನ ರಕ್ತಸ್ತ್ರಾವ.
- ಗರ್ಭಕಂಠವು ಮೃದುವಾಗುತ್ತದೆ ಮತ್ತು ತೆರೆದುಕೊಳ್ಳುತ್ತದೆ.
ಮಹಿಳೆಯ ಮಾಸಿಕ ಚಕ್ರದ ಒಂದು ನಿರ್ದಿಷ್ಟ ಅವಧಿಯಲ್ಲಿ ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಒವುಲೇಷನ್ ಡೇಟ್ ಕ್ಯಾಲ್ಕುಲೇಟರ್ ಒವುಲೇಷನ್ ಅವಧಿಯ ಅಂದಾಜು ಸಮಯ ಮತ್ತು ದಿನವನ್ನು ಊಹಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಹೆಚ್ಚು ನಿಖರವಾದ ಫಲಿತಾಂಶ ಪಡೆಯಲು ಸರಿಯಾದ ಪೀರಿಯಡ್ ದಿನಾಂಕ ಮತ್ತು ಋತುಚಕ್ರ ಅವಧಿಯ ಲೆಕ್ಕವನ್ನು ನಮೂದಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.