ಕಾರ್ಬೋಹೈಡ್ರೇಟ್ ಕ್ಯಾಲ್ಕುಲೇಟರ್
Target Daily Carbohydrate Intake
value
- Pick a muscle workout Plan
- Calculate your Macros
- Learn about the best supplements for gaining muscles
- Join a fittness community
ಕಾರ್ಬೋಹೈಡ್ರೇಟ್ ಕ್ಯಾಲ್ಕುಲೇಟರ್: ಬಳಸುವುದು ಹೇಗೆ ಮತ್ತು ಇದರ ಪ್ರಯೋಜನಗಳನ್ನು ಪಡೆದುಕೊಳ್ಳುವುದು ಹೇಗೆ

ಉತ್ತಮ ಆಹಾರ ಪದ್ಧತಿಯು (ಡಯಟ್) ದೇಹದ ರೋಗನಿರೋಧಕ ಶಕ್ತಿ ಮತ್ತು ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್ಗಳು, ವಿಟಮಿನ್ಗಳು ಮತ್ತು ಖನಿಜಗಳಂತಹ ಪ್ರತಿಯೊಂದು ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತದೆ. ಆದಾಗ್ಯೂ, ಆರೋಗ್ಯಕರ ಡಯಟ್ ನಿಂದ ಲಾಭವನ್ನು ಪಡೆಯಲು, ನೀವು ಈ ಪ್ರತಿಯೊಂದು ಅಂಶವನ್ನೂ ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು.
ಆದ್ದರಿಂದ, ಕಾರ್ಬೋಹೈಡ್ರೇಟ್ಗಳ ವಿಷಯಕ್ಕೆ ಬಂದಾಗ, ನೀವು ತುಂಬಾ ಜಾಗರೂಕರಾಗಿರಬೇಕು ಏಕೆಂದರೆ ಇದು ನಿಮ್ಮ ಆರೋಗ್ಯದ ಸುಧಾರಣೆಯ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ. ಎಷ್ಟು ಸೇವನೆ ಮಾಡಬೇಕೆಂದು ತಿಳಿಯಲು, ನೀವು ಆಹಾರ ತಜ್ಞರನ್ನು ಸಂಪರ್ಕಿಸಬಹುದು ಅಥವಾ ಸುಲಭವಾಗಿ ಆನ್ಲೈನ್ ಕಾರ್ಬೋಹೈಡ್ರೇಟ್ ಕ್ಯಾಲ್ಕುಲೇಟರ್ ನ ಸಹಾಯ ತೆಗೆದುಕೊಳ್ಳಬಹುದು.
ಕಾರ್ಬೋಹೈಡ್ರೇಟ್ಗಳು ಎಂದರೇನು?
ಕಾರ್ಬೋಹೈಡ್ರೇಟ್ಗಳು ದೇಹವನ್ನು ಪೋಷಿಸುವ ಪ್ರಮುಖ ಪೋಷಕಾಂಶಗಳಾಗಿವೆ ಹಾಗೂ ಅವು ಸಕ್ಕರೆಯ ಅಣುಗಳ ರೂಪದಲ್ಲಿ ಆಹಾರ ಪದಾರ್ಥಗಳಲ್ಲಿ ಇರುತ್ತವೆ. ಅವು ನಿಮ್ಮ ದೇಹವನ್ನು ಪ್ರವೇಶಿಸಿದಾಗ, ಗ್ಲೂಕೋಸ್ ಆಗಿ ಬದಲಾಗುತ್ತವೆ ಮತ್ತು ಬರ್ನ್ ಆಗುತ್ತವೆ ಮತ್ತು ನಿಮಗೆ ಕೆಲಸ ಮಾಡಲು ಶಕ್ತಿಯನ್ನು ನೀಡುತ್ತವೆ. ಕಾರ್ಬೋಹೈಡ್ರೇಟ್ಗಳು ಸಮೃದ್ಧವಾಗಿರುವ ಆಹಾರಗಳು ಇವು:
- ಬ್ರೆಡ್
- ಅನ್ನ
- ಹಣ್ಣುಗಳು
- ಪಿಷ್ಟ ತರಕಾರಿಗಳು
- ಜೋಳ
- ಬಟಾಣಿಗಳು
- ಬೇಳೆಗಳು
- ಬೀನ್ಸ್
- ಸಕ್ಕರೆಯುಕ್ತ ಆಹಾರಗಳು, ಇತ್ಯಾದಿ.
ಕಾರ್ಬೋಹೈಡ್ರೇಟ್ಗಳನ್ನು ಸರಳ ಮತ್ತು ಸಂಕೀರ್ಣ ಎಂಬ ಎರಡು ಶಾಖೆಗಳಾಗಿ ವಿಂಗಡಿಸಬಹುದು. ಸರಳ ಕಾರ್ಬೋಹೈಡ್ರೇಟ್ಗಳು ಸಕ್ಕರೆಯಾಗಿದ್ದರೆ ಹಾಗೂ ಸಂಕೀರ್ಣ ಕಾರ್ಬೋಹೈಡ್ರೇಟ್ಗಳು ದೀರ್ಘವಾದ ಸಕ್ಕರೆ ಅಣುಗಳಿಂದ ಮಾಡಲ್ಪಟ್ಟಿವೆ.
ಕಾರ್ಬೋಹೈಡ್ರೇಟ್ಗಳ ವಿವಿಧ ವಿಧಗಳು ಯಾವುವು?
ಕಾರ್ಬೋಹೈಡ್ರೇಟ್ಗಳಲ್ಲಿ 3 ವಿಧಗಳಿವೆ. ಅವುಗಳು ಈ ರೀತಿ ಇವೆ:
- ಸಕ್ಕರೆಗಳು: ಇವುಗಳು ಸರಳವಾದ ಕಾರ್ಬೋಹೈಡ್ರೇಟ್ ಗಳಾಗಿದ್ದು ಮುಖ್ಯವಾಗಿ ತಮ್ಮ ಮೂಲ ರೂಪದಲ್ಲಿ ಧಾನ್ಯಗಳು, ಸಕ್ಕರೆ ಪಾನೀಯಗಳು, ಸಿಹಿತಿಂಡಿಗಳಲ್ಲಿ ಕಂಡುಬರುತ್ತವೆ. ಅವು ಹಾಲು, ಹಣ್ಣುಗಳು ಮತ್ತು ತರಕಾರಿಗಳಲ್ಲಿಯೂ ಇರುತ್ತವೆ.
- ಪಿಷ್ಟಗಳು: ಪಿಷ್ಟಗಳು ಅನೇಕ ಸಕ್ಕರೆ ಸರಣಿಗಳಿಂದ ಮಾಡಲ್ಪಟ್ಟ ಸಂಕೀರ್ಣ ಕಾರ್ಬೋಹೈಡ್ರೇಟ್ ಗಳಾಗಿವೆ. ಮಾನವ ದೇಹವು ಪಿಷ್ಟಗಳನ್ನು ಒಡೆಯುತ್ತದೆ ಮತ್ತು ಶಕ್ತಿಯನ್ನು ಉತ್ಪಾದಿಸುತ್ತದೆ. ಧಾನ್ಯಗಳು, ಪಾಸ್ತಾ, ಆಲೂಗಡ್ಡೆ ಇತ್ಯಾದಿಗಳು ಪಿಷ್ಟಗಳನ್ನು ಹೊಂದಿವೆ.
- ಫೈಬರ್ ಗಳು: ಫೈಬರ್ ಗಳು ಕಾರ್ಬೋಹೈಡ್ರೇಟ್ ಗಳ ಅತ್ಯಂತ ಸಂಕೀರ್ಣ ರೂಪವಾಗಿದ್ದು, ನಿಮ್ಮ ದೇಹವು ಇವುಗಳನ್ನು ಸರಿಯಾಗಿ ಮುರಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಫೈಬರ್ ಭರಿತ ಆಹಾರಗಳು ಹೆಚ್ಚು ಪೋಷಣೆಯನ್ನು ನೀಡುತ್ತವೆ ಮತ್ತು ಡಯಟ್ ನಲ್ಲಿ ಬಹಳ ಮಹತ್ವದ್ದಾಗಿವೆ. ಜೊತೆಗೆ, ಫೈಬರ್ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ಬೀಜಗಳು, ಬೀನ್ಸ್, ಬೀಜಗಳು ಮತ್ತು ಹಣ್ಣುಗಳಂತಹ ಆಹಾರಗಳು ಫೈಬರ್-ಭರಿತವಾಗಿವೆ.
ಕಾರ್ಬೋಹೈಡ್ರೇಟ್ ಕ್ಯಾಲ್ಕುಲೇಟರ್ ಅನ್ನು ಬಳಸುವುದು ಹೇಗೆ?
ಆನ್ಲೈನ್ ಕಾರ್ಬ್ ಕ್ಯಾಲ್ಕುಲೇಟರ್ ದೈನಂದಿನ ಕಾರ್ಬ್ ಸೇವನೆಯನ್ನು ಸುಲಭವಾಗಿ ಅಳೆಯುವ ಉತ್ತಮ ಅನುಕೂಲಕರ ಸಾಧನವಾಗಿದೆ. ಆನ್ಲೈನ್ ಡಿಜಿಟ್ ಕಾರ್ಬೋಹೈಡ್ರೇಟ್ ಕ್ಯಾಲ್ಕುಲೇಟರ್ ನ ಸಹಾಯದಿಂದ ನಿಮ್ಮ ದೈನಂದಿನ ಕಾರ್ಬ್ ಸೇವನೆಯನ್ನು ಅಳೆಯಲು ನೀವು ಅನುಸರಿಸಬೇಕಾದ ಹಂತಗಳನ್ನು ಕೆಳಗೆ ನೀಡಲಾಗಿದೆ:
ಹಂತ 1: ಕಾರ್ಬ್ ಕ್ಯಾಲ್ಕುಲೇಟರ್ ತೆರೆಯಿರಿ ಮತ್ತು ಅಗತ್ಯ ಅಂಶಗಳನ್ನು ಪರಿಶೀಲಿಸಿ
ಹಂತ 2: ಮೊದಲಿಗೆ, ನಿಮ್ಮ ಲಿಂಗ ಆಯ್ಕೆ ಮಾಡಿ
ಹಂತ 3: ನಂತರ, ನಿಮ್ಮ ವಯಸ್ಸು, ತೂಕ ಮತ್ತು ಎತ್ತರವನ್ನು ನಮೂದಿಸಿ
ಹಂತ 4: "ಗುರಿ" ಟ್ಯಾಬ್ ಗೆ ಹೋಗಿ
ಹಂತ 5: ನಿಮ್ಮ ಗುರಿಯನ್ನು ಆಯ್ಕೆ ಮಾಡಿ, ಅಂದರೆ ನೀವು ಕೊಬ್ಬು ನಷ್ಟ ಮಾಡಿಕೊಳ್ಳಲು ಬಯಸುತ್ತೀರಾ, ನಿಯಮಿತ ನಿರ್ವಹಣೆ ಮಾಡುತ್ತೀರಾ ಅಥವಾ ಮಸಲ್ ಪಡೆಯುತ್ತೀರಾ ಎಂಬುದು
ಹಂತ 6: "ಚಟುವಟಿಕೆ ಹಂತ" ಟ್ಯಾಬ್ ಗೆ ಹೋಗಿ
ಹಂತ 7: ನಿಮ್ಮ ದೈನಂದಿನದ ಚಟುವಟಿಕೆ ಮಟ್ಟವನ್ನು ಆಯ್ಕೆ ಮಾಡಿ
ಹಂತ 8: ಅಂತಿಮವಾಗಿ, ಕ್ಯಾಲ್ಕುಲೇಟರ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಫಲಿತಾಂಶವನ್ನು ಪಡೆಯಿರಿ
ಕಾರ್ಬೋಹೈಡ್ರೇಟ್ ಕ್ಯಾಲ್ಕುಲೇಟರ್ ನ ಪ್ರಯೋಜನಗಳೇನು?
ಈ ಆನ್ಲೈನ್ ಕಾರ್ಬೋಹೈಡ್ರೇಟ್ ಸೇವನೆಯ ಕ್ಯಾಲ್ಕುಲೇಟರ್ ಅನ್ನು ಬಳಸುವ ಪ್ರಯೋಜನಗಳು ಈ ಕೆಳಗಿನಂತಿವೆ:
- ಈ ಸಂಪೂರ್ಣ ಪ್ರಕ್ರಿಯೆಯು ತುಂಬಾ ಸುಲಭವಾಗಿದೆ
- ಪೂರ್ತಿ ಉಚಿತ
- ನಿಖರ ಫಲಿತಾಂಶಗಳು
- ಸಮಯದ ಉಳಿಕೆ
ಈ ಕಾರ್ಬೋಹೈಡ್ರೇಟ್ ಸೇವನೆ ಕ್ಯಾಲ್ಕುಲೇಟರ್ ನ ಬಳಕೆ ಮತ್ತು ಪ್ರಯೋಜನಗಳ ಬಗ್ಗೆ ಈಗ ನಿಮಗೆ ತಿಳಿದಿರುವುದರಿಂದ, ಕಾರ್ಬೋಹೈಡ್ರೇಟ್ಗಳು ಮತ್ತು ಮಾನವನ ಆರೋಗ್ಯದ ಮೇಲೆ ಅವುಗಳ ಪರಿಣಾಮಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.
ನೀವು ಎಷ್ಟು ಕಾರ್ಬೋಹೈಡ್ರೇಟ್ಗಳನ್ನು ಸೇವಿಸಬೇಕು?
ಮೊದಲೇ ಹೇಳಿದಂತೆ, ದೈನಂದಿನ ಕಾರ್ಬ್ ಸೇವನೆ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಕಾರ್ಬೋಹೈಡ್ರೇಟ್ ಸೇವನೆಯ ಲೆಕ್ಕಾಚಾರ ಮಾಡಲು ನೀವು ಮೇಲಿನ ಹಂತಗಳನ್ನು ಅನುಸರಿಸಬಹುದು. ಆದಾಗ್ಯೂ, ದೈನಂದಿನ ಕಾರ್ಬೋಹೈಡ್ರೇಟ್ ಸೇವನೆಯನ್ನು ಗಮನಿಸಲು ನಿಮ್ಮ ದೇಹದ ಅವಶ್ಯಕತೆಗಳನ್ನು ನೀವು ತಿಳಿದಿರಬೇಕು. ವಯಸ್ಕರಿಗೆ ಕನಿಷ್ಠ ಶೇ.55 ಕಾರ್ಬೋಹೈಡ್ರೇಟ್ ಸೇವನೆಯನ್ನು ಶಿಫಾರಸು ಮಾಡಲಾಗಿದೆ. ನಿಮ್ಮ ಕಾರ್ಬೋಹೈಡ್ರೇಟ್ ಸೇವನೆಯು ಶೇ.65ಕ್ಕೆ ಏರಬಾರದು. ಕಾರ್ಬ್ ಸೇವನೆಯ ಶೇಕಡಾವಾರನ್ನು ಕ್ಯಾಲೋರಿಗಳಲ್ಲಿ ಅಳೆಯಲಾಗುತ್ತದೆ, ಇಲ್ಲಿ 4 ಕಿಲೋ ಕ್ಯಾಲರಿ 1 ಗ್ರಾಂಗೆ ಸಮನಾಗಿರುತ್ತದೆ.
ಉದಾಹರಣೆಗೆ: ನಿಮ್ಮ ದೈನಂದಿನ ಸೇವನೆಯು 2,000 ಕ್ಯಾಲೋರಿಗಳಾಗಿದ್ದರೆ, ಅದರಲ್ಲಿ 900 ಕ್ಯಾಲೋರಿಯಿಂದ 1,300 ಕ್ಯಾಲೋರಿಗಳು ಕಾರ್ಬೋಹೈಡ್ರೇಟ್ಗಳಿಂದ ಬರಬೇಕು. ಪ್ರೋಟೀನ್ ಗಳು ಮತ್ತು ಕೊಬ್ಬು ಉಳಿದ ಪ್ರಮಾಣವನ್ನು ಪೂರೈಸುತ್ತವೆ.
ಸಾಮಾನ್ಯ ಆಹಾರಗಳಲ್ಲಿರುವ ಕಾರ್ಬೋಹೈಡ್ರೇಟ್ ಅಂಶ ಎಷ್ಟು?
ಆಹಾರ |
ಭಾಗದ ಗಾತ್ರ |
ಕಾರ್ಬೋಹೈಡ್ರೇಟ್ ಗಳು |
ಬ್ರೆಡ್ |
1 ಹೋಳು |
10 - 20 ಗ್ರಾಂ |
ಎಲ್ಲಾ ಉದ್ದೇಶಕ್ಕೆ ಬಳಸುವ, ಒಣ ಹಿಟ್ಟು |
2 ಚಮಚ |
12 ಗ್ರಾಂ |
ಬೇಯಿಸಿದ ಓಟ್ ಮೀಲ್ |
½ ಕಪ್ |
12 - 15 ಗ್ರಾಂ |
ಬೇಯಿಸಿದ ಅನ್ನ |
½ ಕಪ್ |
45 ಗ್ರಾಂ |
ಬೀನ್ಸ್ ಹಾಗೂ ಬೇಳೆಗಳು |
½ ಕಪ್ |
18 - 22 ಗ್ರಾಂ |
ಬೀಜಗಳು, ಮಿಶ್ರಿತ |
½ ಕಪ್ |
15 ಗ್ರಾಂ |
ಜೋಳ, ಬೇಯಿಸಿದ ಅಥವಾ ಕ್ಯಾನ್ ನಲ್ಲಿ ಶೇಖರಿಸಲಾದ |
½ ಕಪ್ |
15 ಗ್ರಾಂ |
ಬಾದಾಮಿ ಹಾಲು |
1 ಕಪ್ |
<1 ಗ್ರಾಂ |
ಗ್ರೀಕ್ ಮೊಸರು (ಪ್ಲೇನ್) |
1 ಕಪ್ |
10 ಗ್ರಾಂ |
ಆಕಳ ಹಾಲು |
1 ಕಪ್ |
12 ಗ್ರಾಂ |
ಸೋಯ್ ಹಾಲು |
1 ಕಪ್ |
3 ಗ್ರಾಂ |
ಮೊಸರು (ಪ್ಲೇನ್) |
1 ಕಪ್ |
14 ಗ್ರಾಂ |
ಸೇಬು |
1 ಮಧ್ಯಮ |
15 - 30 ಗ್ರಾಂ |
ಒಳ್ಳೆಯ ಕಾರ್ಬ್ ಮತ್ತು ಕೆಟ್ಟ ಕಾರ್ಬ್ ಎಂದು ಯಾವುದನ್ನು ಪರಿಗಣಿಸಲಾಗುತ್ತದೆ?
ಸಾಮಾನ್ಯವಾಗಿ, ಒಳ್ಳೆಯ ಕಾರ್ಬ್ ಗಳು ಆರೋಗ್ಯಕರ ಕಾರ್ಬ್ ಗಳೆಂದು ಕರೆಯುವ ಕಾರ್ಬ್ ಗಳನ್ನು ಬೀನ್ಸ್, ಧಾನ್ಯಗಳು, ತರಕಾರಿಗಳು ಮತ್ತು ಹಣ್ಣುಗಳಿಂದ ಪಡೆಯಬಹುದು. ಮತ್ತೊಂದೆಡೆ, ಕೆಟ್ಟ ಕಾರ್ಬ್ಗಳು ಸಂಸ್ಕರಿಸಲಾದ ಸರಳ ಕಾರ್ಬೋಹೈಡ್ರೇಟ್ಗಳಾಗಿದ್ದು, ಇವುಗಳು ಸೇರಿಸಲಾದ ಸಕ್ಕರೆ ಅಂಶಗಳಲ್ಲಿ ಮತ್ತು ಸಂಸ್ಕರಿಸಿದ ಧಾನ್ಯಗಳಲ್ಲಿ ಇರುತ್ತವೆ.
ಹೀಗಾಗಿ, ಒಳ್ಳೆಯ ಕಾರ್ಬ್ ಗಳು:
- ಹೆಚ್ಚಿನ ಪೋಷಕಾಂಶಗಳನ್ನು ಹೊಂದಿವೆ
- ಕಡಿಮೆ ಕ್ಯಾಲರಿಗಳನ್ನು ಹೊಂದಿವೆ
- ಕಡಿಮೆ ಅಥವಾ ಶೂನ್ಯ ಪ್ರಮಾಣದ ಸಂಸ್ಕರಿತ ಸಕ್ಕರೆ ಅಂಶವನ್ನು ಹೊಂದಿರುತ್ತದ
- ಕಡಿಮೆ ಸೋಡಿಯಂ ಹೊಂದಿರುತ್ತದೆ
- ನೈಸರ್ಗಿಕ ಫೈಬರ್ ಗಳನ್ನು ಹೊಂದಿರುತ್ತದೆ
- ಕಡಿಮೆ ಅನಾರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ
ಕೆಟ್ಟ ಕಾರ್ಬ್ ಗಳು:
- ಹೆಚ್ಚು ಕ್ಯಾಲರಿಗಳನ್ನು ಹೊಂದಿರುತ್ತವೆ
- ಸಂಸ್ಕರಿತ ಧಾನ್ಯಗಳಲ್ಲಿ ಹೆಚ್ಚಿರುತ್ತದೆ
- ಕಡಿಮೆ ಫೈಬರ್ ಹಾಗೂ ಪೋಷಕಾಂಶಗಳನ್ನು ಹೊಂದಿರುತ್ತದೆ
- ಕೃತಕ ಸಕ್ಕರೆ, ಸೋಡಿಯಂ, ಮತ್ತು ಆರೋಗ್ಯಕರ ಕೊಬ್ಬಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
ಆದ್ದರಿಂದ, ನಿಮ್ಮ ದೈನಂದಿನ ಕಾರ್ಬೋಹೈಡ್ರೇಟ್ಗಳ ಸೇವನೆಯ ಬಗ್ಗೆ ನಿಮಗೆ ಕಾಳಜಿ ಇದ್ದರೆ, ಈ ಮಾರ್ಗದರ್ಶಿಯನ್ನು ಪರಿಗಣಿಸಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಡಯಟ್ ಯೋಜಿಸಿ. ಆದಾಗ್ಯೂ, ಕಾರ್ಬೋಹೈಡ್ರೇಟ್ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ಸುಲಭವಾಗಿ ಕಾರ್ಬೋಹೈಡ್ರೇಟ್ ಸೇವನೆಯ ಲೆಕ್ಕಾಚಾರ ಮಾಡಲು ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಹೆಚ್ಚಿನ ಸಹಾಯಕ್ಕಾಗಿ, ನೀವು ಆಹಾರ ತಜ್ಞರನ್ನು ಸಹ ಸಂಪರ್ಕಿಸಬಹುದು.