Thank you for sharing your details with us!
ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಎಂದರೇನು?
ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಎನ್ನುವುದು ಒಂದು ವಿಧದ ಇನ್ಶೂರೆನ್ಸ್ ಆಗಿದ್ದು, ಇದು ನಿಮ್ಮ ಕಮರ್ಷಿಯಲ್ ಬಿಲ್ಡಿಂಗ್ ಗಳ ಮೇಲೆ ಅಂಗಡಿ ಕಿಟಕಿಯ ಭಾರೀ ಗಾಜಿನ ಒಡೆಯುವಿಕೆಯಂತಹ ಹಾನಿಗಳ ವಿರುದ್ಧ ನಿಮಗೆ ರಕ್ಷಣೆಯನ್ನು ನೀಡುತ್ತದೆ.
ನೀವು ಯೋಚನೆಗೆ ಒಳಗಾಗಿದ್ದರೆ, ಪ್ಲೇಟ್ ಗ್ಲಾಸ್ ಒಂದು ರೀತಿಯ ದಪ್ಪ ಮತ್ತು ಉತ್ತಮ ಗುಣಮಟ್ಟದ ಗಾಜು ಆಗಿದ್ದು, ಇದನ್ನು ಕಿಟಕಿಯ ಫಲಕಗಳು, ಗಾಜಿನ ಬಾಗಿಲುಗಳು, ಸ್ಕ್ರೀನ್ ಗಳು ಮತ್ತು ಪಾರದರ್ಶಕ ಗೋಡೆಗಳನ್ನು ಮಾಡಲು ಬಳಸಲಾಗುತ್ತದೆ.
ಅನೇಕ ವ್ಯವಹಾರಗಳಿಗೆ, ಸಾಕಷ್ಟು ಗಾಜು ಅಥವಾ ಗ್ಲಾಸ್ ಅನ್ನು ಹೊಂದಿರುವುದು ನಿಜವಾಗಿಯೂ ಮುಖ್ಯವಾಗಿದೆ. ಒಳಗೆ ಏನನ್ನು ಮಾರಾಟ ಮಾಡಲಾಗುತ್ತಿದೆ ಎಂದು ನಿಮಗೆ ನೋಡಲು ಸಾಧ್ಯವಾಗದ ಒಂದು ಅಂಗಡಿಯನ್ನು ಊಹಿಸಿ! ಆದರೆ ಗಾಜು ತುಂಬಾ ನಾಜೂಕು ಸಹ ಆಗಿರುತ್ತದೆ ಮತ್ತು ಒಂದು ಕೆಟ್ಟದಾಗಿ ಬ್ಯಾಲೆನ್ಸ್ ಆಗಿರುವ ಶೆಲ್ಫ್ನಿಂದ ಹಿಡಿದು ಕ್ರಿಕೆಟ್ ಆಡುವ ಮಕ್ಕಳವರೆಗೆ, ಇದು ಹಲವಾರು ಕಾರಣಗಳಿಂದ ಆಕಸ್ಮಿಕವಾಗಿ ಹಾನಿಗೊಳಗಾಗಬಹುದು ಅಥವಾ ಇದ್ದಕ್ಕಿದ್ದಂತೆ ಒಡೆಯಬಹುದು! ದುರದೃಷ್ಟವಶಾತ್, ಈ ಪ್ಲೇಟ್ ಗ್ಲಾಸ್ ಅನ್ನು ರಿಪೇರಿ ಮಾಡುವುದು ಒಂದು ದುಬಾರಿ ವ್ಯವಹಾರವಾಗಿದೆ.
ಆದರೆ ನಿಮ್ಮ ವ್ಯಾಪಾರವು ಪ್ಲೇಟ್ ಗ್ಲಾಸ್ ಅನ್ನು ಇನ್ಶೂರೆನ್ಸ್ ನಿಂದ ಕವರ್ ಮಾಡಲಾಗಿದ್ದರೆ, ಅಂತಹ ಹಣಕಾಸಿನ ನಷ್ಟದಿಂದ ನಿಮಗೆ ರಕ್ಷಣೆ ದೊರೆಯುತ್ತದೆ.
ಆದರೆ, ನಿಮಗೆ ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಏಕೆ ಬೇಕಾಗುತ್ತದೆ?
ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ?
ನೀವು ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಅನ್ನು ಪಡೆದಾಗ, ಇಂತಹ ಸಂದರ್ಭಗಳಲ್ಲಿ ಕವರ್ ಅನ್ನು ಪಡೆಯುತ್ತೀರಿ...
ಏನೆಲ್ಲಾ ಕವರ್ ಆಗಿರುವುದಿಲ್ಲ?
ನಾವು ಪಾರದರ್ಶಕತೆಯನ್ನು ಬಲವಾಗಿ ನಂಬುವ ಕಾರಣ, ಕವರ್ ಮಾಡಲಾಗದ ಕೆಲವು ಸನ್ನಿವೇಶಗಳನ್ನು ಇಲ್ಲಿ ನೀಡಿದ್ದೇವೆ...
ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ನ ವೆಚ್ಚ ಎಷ್ಟಾಗುತ್ತದೆ?
ನಿಮ್ಮ ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಪ್ರೀಮಿಯಂನ ಪ್ರೀಮಿಯಂ ವೆಚ್ಚವು ಹಲವಾರು ಅಂಶಗಳನ್ನು ಆಧರಿಸಿದೆ. ಪ್ರೀಮಿಯಂ ಅನ್ನು ನಿರ್ಧರಿಸಲು ಬಳಸಲಾಗುವ ಕೆಲವು ಅಂಶಗಳು ಈ ರೀತಿ ಇವೆ:
- ನೀವು ಆಯ್ಕೆ ಮಾಡಿದ ಸಮ್ ಇನ್ಶೂರ್ಡ್ (ಅಂದರೆ, ಪಾಲಿಸಿಯ ಅಡಿಯಲ್ಲಿ ಒಟ್ಟಾರೆಯಾಗಿ ಪಾವತಿಯಾಗಬೇಕಾದ ಗರಿಷ್ಠ ಮೊತ್ತ).
- ನಿಮ್ಮ ಬಿಸಿನೆಸ್ ಇರುವ ಸ್ಥಳ.
- ಕವರ್ ಆಗಿರುವ ವಸ್ತುಗಳ ಸಂಖ್ಯೆ.
- ಇನ್ಶೂರ್ ಆಗಿರುವ ಗಾಜಿನ ವಿಧ.
ಕವರೇಜ್ ನ ವಿಧಗಳು
ಡಿಜಿಟ್ನ ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ನೊಂದಿಗೆ, ಈ ಕೆಳಗಿನವುಗಳಲ್ಲಿ ಯಾವುದು ನಿಮ್ಮ ಬಿಸಿನೆಸ್ ಗೆ ಸರಿಹೊಂದುತ್ತದೆ ಎಂಬುದರ ಆಧಾರದ ಮೇಲೆ ನೀವು ಸಮ್ ಇನ್ಶೂರ್ಡ್ ಅನ್ನು ಆರಿಸಿಕೊಳ್ಳಬಹುದು.
ವಾಸ್ತವಿಕ ಮೌಲ್ಯ
ಇಲ್ಲಿ, ಪಾಲಿಸಿ ಅವಧಿಯ ಮೊದಲ ದಿನದಂದು, ಅಥವಾ ವಯಸ್ಸು ಮತ್ತು ಸವೆತದ ಕಾರಣದಿಂದ ಯಾವುದೇ ಡೆಪ್ರಿಸಿಯೇಶನ್ ಅನ್ನು ಪರಿಗಣಿಸುತ್ತಾ ಅದು ಹೊಸದಾಗಿದ್ದಾಗ, ಆದ ಅದರ ರಿಪ್ಲೇಸ್ಮೆಂಟ್ ವೆಚ್ಚದ ಪ್ರಕಾರ ಪ್ಲೇಟ್ ಗ್ಲಾಸ್ನ ಮೌಲ್ಯವನ್ನು ನಿಗದಿಪಡಿಸಲಾಗಿದೆ.
ರಿಪ್ಲೇಸ್ಮೆಂಟ್ ಮೌಲ್ಯ
"ರಿಇನ್ಸ್ಟೇಟಮೆಂಟ್ ವಾಲ್ಯೂ" ಎಂದೂ ಕರೆಯಲ್ಪಡುವ ಇದನ್ನು, ಪಾಲಿಸಿ ಅವಧಿಯ ಮೊದಲ ದಿನದ ರಿಪ್ಲೇಸ್ಮೆಂಟ್ ವೆಚ್ಚದ ಪ್ರಕಾರ ನಿಗದಿಪಡಿಸಲಾಗಿದೆ ಮತ್ತು ಯಾವುದೇ ವಯಸ್ಸಿನ ಹಾಗೂ ಸವೆತದ ಡೆಪ್ರಿಸಿಯೇಶನ್ ಅನ್ನು ಪರಿಗಣಿಸಲಾಗುವುದಿಲ್ಲ.
ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಅನ್ನು ಹೊಂದಿರುವ ಪ್ರಯೋಜನಗಳು
ಯಾರಿಗೆಲ್ಲಾ ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಬೇಕಾಗಿರುತ್ತದೆ?
ನೀವು ಅಥವಾ ನಿಮ್ಮ ಬಿಸಿನೆಸ್ ಸಂಸ್ಥೆಗಳು ಸ್ವಲ್ಪಮಟ್ಟಿನಲ್ಲಾದರೂ ಪ್ಲೇಟ್ ಗ್ಲಾಸ್ ಅನ್ನು ಅಳವಡಿಸಿದ್ದರೆ, ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಅತ್ಯಂತ ಮುಖ್ಯವಾದದು ಎಂದು ನೀವು ಕಾಣಬಹುದು. ಉದಾಹರಣೆಗೆ, ಒಂದು ವೇಳೆ...