Thank you for sharing your details with us!
ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಎಂದರೇನು?
ಕಾಂಪ್ರೆಹೆನ್ಸಿವ್ ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ನಿಮ್ಮ ಬಿಸಿನೆಸ್ ಕಾರ್ಯಾಚರಣೆಗಳು, ಅದರ ಉತ್ಪನ್ನಗಳು ಅಥವಾ ನಿಮ್ಮ ಆವರಣದಲ್ಲಿ ಸಂಭವಿಸುವ ಯಾವುದೇ ರೀತಿಯ ಪ್ರಾಪರ್ಟಿ ಡ್ಯಾಮೇಜ್ ಅಥವಾ ದೈಹಿಕ ಗಾಯದಿಂದ ಉಂಟಾಗುವ ಯಾವುದೇ ಕ್ಲೈಮ್‌ಗಳ ವಿರುದ್ಧ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುವ ಒಂದು ರೀತಿಯ ಬಿಸಿನೆಸ್ ಇನ್ಶೂರೆನ್ಸ್ ಆಗಿದೆ.
ಕ್ಲೈಂಟ್ ಅಥವಾ ಕಸ್ಟಮರ್, ಮೀಟಿಂಗ್ಗಾಗಿ ನಿಮ್ಮ ಆಫೀಸಿಗೆ ಬಂದಿದ್ದಾರೆ ಎಂದಿಟ್ಟುಕೊಳ್ಳಿ ಮತ್ತು ಅವರು "ಎಚ್ಚರಿಕೆಯ ವೆಟ್ ಫ್ಲೋರ್ ಚಿಹ್ನೆ" ಅನ್ನು ನೋಡದಿದ್ದರೆ ಮತ್ತು ಅಚಾನಕ್ ಆಗಿ ಅವರು ಜಾರಿಬೀಳುವುದು, ಬೀಳುವುದು ಮತ್ತು ಅವರ ಕೈ ಮುರಿದರೆ! ಅಥವಾ, ಮೀಟಿಂಗ್ ಸಮಯದಲ್ಲಿ ನಿಮ್ಮ ಆಫೀಸಿನಲ್ಲಿ ಯಾರಾದರೂ ಆಕಸ್ಮಿಕವಾಗಿ ಕ್ಲೈಂಟ್ನ ಫೋನ್ ಮೇಲೆ ನೀರನ್ನು ಚೆಲ್ಲಿ ಅದನ್ನು ಡ್ಯಾಮೇಜುಗೊಳಿಸಿದರೆ.
ಕೇಳಲು ವಿಚಿತ್ರವೆನಿಸುತ್ತದೆ, ಅಲ್ಲವೇ? ಅಂದಹಾಗೆ, ನೀವು ಜವಾಬ್ದಾರರಾಗಿ ಕಂಡುಬಂದರೂ ಕೆಟ್ಟದ್ದಾಗಿದೆ. ಇದರರ್ಥ ನೀವು ಉಂಟಾದ ತೊಂದರೆ ಮತ್ತು ಡ್ಯಾಮೇಜುಗಳನ್ನು ಭರಿಸಬೇಕು!
ಈ ರೀತಿಯ ಸಂದರ್ಭಗಳಲ್ಲಿ, ಲಯಬಿಲಿಟಿ ಇನ್ಶೂರೆನ್ಸ್ ಛತ್ರಿಯಂತೆ ನಿಮ್ಮನ್ನು ಕವರ್ ಮಾಡುತ್ತದೆ. ಗಾಯಗಳು ಹಾಗೂ ಜನರು/ಪ್ರಾಪರ್ಟಿಗೆ ಉಂಟಾಗುವ ಡ್ಯಾಮೇಜುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಏಕೆ ಮುಖ್ಯ ಎಂದು ತಿಳಿಯಲು ಬಯಸುವಿರಾ?
ನಿಮಗೆ ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಏಕೆ ಬೇಕು?
ಕಮರ್ಷಿಯಲ್ ಜನರಲ್ ಲಯಬಿಲಿಟಿ (CGL) ಪಾಲಿಸಿ ಎಂದೂ ಕರೆಯಲ್ಪಡುವ ಜನರಲ್ ಲಯಬಿಲಿಟಿ ಇನ್ಶೂರೆನ್ಸ್, ನಿಮ್ಮ ಬಿಸಿನೆಸ್ ಅಸೋಸಿಯೇಟ್ಸ್, ಕಸ್ಟಮರ್ ಅಥವಾ ಕ್ಲೈಂಟ್‌ಗಳಂತಹ ಯಾವುದೇ ಥರ್ಡ್ ಪಾರ್ಟಿಯ ಪ್ರಾಪರ್ಟಿ ಡ್ಯಾಮೇಜ್ ಅಥವಾ ದೈಹಿಕ ಗಾಯಗಳಿಗೆ ಯಾವುದೇ ಲೀಗಲ್ ಲಯಬಿಲಿಟಿಗಳಿಂದ, ಬಿಸಿನೆಸ್‌ಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾದ ಒಂದು ರೀತಿಯ ಇನ್ಶೂರೆನ್ಸ್ ಕವರ್ ಆಗಿದೆ. ಆದರೆ ನಿಮಗೆ ನಿಜವಾಗಿಯೂ ಇದು ಏಕೆ ಬೇಕು?
ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?
ನೀವು ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಅನ್ನು ಪಡೆದಾಗ, ನೀವು ಈ ಕೆಳಗಿನವುಗಳಿಗಾಗಿ ಕವರ್ ಆಗುತ್ತೀರಿ…
ಸೂಚನೆ: ಕವರೇಜ್, ಹೊರಗಿಡುವಿಕೆಗಳು ಮತ್ತು ಷರತ್ತುಗಳ ಬಗ್ಗೆ ವಿವರವಾದ ಮಾಹಿತಿಗಾಗಿ ದಯವಿಟ್ಟು ನಿಮ್ಮ ಪಾಲಿಸಿ ಪದಗಳನ್ನು ನೋಡಿ.
ಲಯಬಿಲಿಟಿ ಇನ್ಶೂರೆನ್ಸ್‌ನ ಅಗತ್ಯವಿರುವ ಬಿಸಿನೆಸ್‌ಗಳ ವಿಧಗಳು
ನೀವು ಬಿಸಿನೆಸ್ ಓನರ್ ಆಗಿದ್ದರೆ ಮತ್ತು ವಿಶೇಷವಾಗಿ ನಿಮ್ಮ ಕಾರ್ಯಾಚರಣೆಗಳು ಥರ್ಡ್ ಪಾರ್ಟಿಗಳೊಂದಿಗೆ ಸಾಕಷ್ಟು ಸಂಪರ್ಕವನ್ನು ಹೊಂದಿದ್ದರೆ, ಈ ಇನ್ಶೂರೆನ್ಸ್ ಅನ್ನು ಪಡೆಯುವುದರಿಂದ ನೀವು ಪ್ರಯೋಜನ ಪಡೆಯಬಹುದು:
ಸರಿಯಾದ ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವುದು ಹೇಗೆ?
ಲಯಬಿಲಿಟಿ ಇನ್ಶೂರೆನ್ಸ್ ಅನ್ನು ಪಡೆಯುವ ಮೊದಲು ನೆನಪಿಡಬೇಕಾದ ವಿಷಯಗಳು
ನಿಮ್ಮ ಲಯಬಿಲಿಟಿ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ ಹಾಗೂ ಏನನ್ನು ಕವರ್ ಮಾಡುವುದಿಲ್ಲ ಎಂಬುದನ್ನು ಯಾವಾಗಲೂ ಪರಿಶೀಲಿಸಲು ಮರೆಯದಿರಿ. ನಿಯಮಗಳು ಮತ್ತು ಷರತ್ತುಗಳನ್ನು ಓದಿ. ಅದರಿಂದ ನೀವು ಮುಂದೆಂದೂ ಅಚ್ಚರಿ ಪಡಲಾರಿರಿ.
ಲಯಬಿಲಿಟಿಯ ಸರಿಯಾದ ಲಿಮಿಟ್ ಅನ್ನು ಆಯ್ಕೆ ಮಾಡಿ; ನೀವು ಹೆಚ್ಚಿನ ಲಯಬಿಲಿಟಿ ಲಿಮಿಟ್ ಅನ್ನು ಹೊಂದಿರುವಾಗ ಅಥವಾ ಇನ್ಶೂರೆನ್ಸ್ ಮೊತ್ತವನ್ನು ಹೊಂದಿರುವಾಗ ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಕೂಡ ಅಧಿಕವಾಗಿರುತ್ತದೆ. ಆದರೆ ನಿಮ್ಮ ಸ್ವಂತ ಮನಃಶಾಂತಿಗಾಗಿ ಯಾವುದೇ ಡ್ಯಾಮೇಜುಗಳ ಸಂಭಾವ್ಯ ವೆಚ್ಚವನ್ನು ನಿಮ್ಮ ಪ್ರೀಮಿಯಂನಲ್ಲಿ ಉಳಿಸಲು, ಕಡಿಮೆ ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆ ಮಾಡಬೇಡಿ.
ಎಲ್ಲಾ ಅಂಶಗಳನ್ನು ಒಟ್ಟಾಗಿ ಮೌಲ್ಯಮಾಪನ ಮಾಡುವ ಮೂಲಕ ಉತ್ತಮ ಮೌಲ್ಯವನ್ನು ನೋಡಿ - ಇನ್ಶೂರೆನ್ಸ್ ಮೊತ್ತ ಮತ್ತು ಪ್ರೀಮಿಯಂನಿಂದ ಹಿಡಿದು ಕವರೇಜಿನವರೆಗೆ ಹಾಗೂ ನಿಮಗೆ ಉತ್ತಮ ಮೌಲ್ಯವನ್ನು ನೀಡುವ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆಮಾಡಿ.
ನಿಮ್ಮ ಬಿಸಿನೆಸ್‌ನ ಸ್ವರೂಪವನ್ನು ಆಧರಿಸಿ ಸರಿಯಾದ ಪಾಲಿಸಿಯನ್ನು ಆಯ್ಕೆ ಮಾಡಿ. ಉದಾಹರಣೆಗೆ ರಿಟೇಲ್ ಶಾಪ್ (ಬೊಟಿಕ್ ಅಥವಾ ಕಿರಾಣಿ ಶಾಪ್ ಇತ್ಯಾದಿ) ಬಹಳಷ್ಟು ಕಸ್ಟಮರ್ಗಳನ್ನು ಪಡೆಯುತ್ತದೆ, ಆದರೆ ಅಲ್ಲಿ ಯಾವುದೇ ಪ್ರಾಡಕ್ಟ್‌ಗಳನ್ನು ತಯಾರಿಸುವುದಿಲ್ಲ. ಹಾಗಾಗಿ ಅವರಿಗೆ ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸಿನ ಅಗತ್ಯವಿರುತ್ತದೆಯೆ ಹೊರತು, ಪ್ರಾಡಕ್ಟ್ ಲಯಬಿಲಿಟಿ ಕವರ್ನದಲ್ಲ.
ಜನರಲ್ ಲಯಬಿಲಿಟಿ ಇನ್ಶೂರೆನ್ಸ್‌ಗೆ ಎಷ್ಟು ವೆಚ್ಚವಾಗುತ್ತದೆ?
ಇನ್ಶೂರೆನ್ಸ್ ಕಂಪನಿಯು ನಿಮ್ಮ ಜನರಲ್ ಅಥವಾ ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್‌ಗೆ ಪ್ರೀಮಿಯಂ ಅನ್ನು ಕ್ಯಾಲ್ಕುಲೇಟ್ ಮಡಿದಾಗ, ಅವರು ಅದನ್ನು ಹಲವಾರು ಅಂಶಗಳ ಆಧಾರದ ಮೇಲೆ ನಿರ್ಧರಿಸುತ್ತಾರೆ. ಉದಾಹರಣೆಗೆ:
ನಿಮ್ಮ ಬಿಸಿನೆಸ್‌ನ ಸ್ವರೂಪ - ಪ್ರತಿಯೊಂದು ಬಿಸಿನೆಸ್ ಕೂಡ ವಿಭಿನ್ನವಾಗಿದೆ ಮತ್ತು ಅದರ ಕಾರ್ಯಾಚರಣೆಗಳು ವಿಭಿನ್ನ ಪ್ರಮಾಣದ ರಿಸ್ಕ್‌ಗಳನ್ನು ಹೊಂದಿರುತ್ತವೆ, ಆದ್ದರಿಂದ ನಿಮ್ಮ ಪ್ರೀಮಿಯಂ ಇದರಿಂದ ಪ್ರಭಾವಿತವಾಗುತ್ತದೆ. (ಉದಾಹರಣೆಗೆ, ಒಂದು ಪುಸ್ತಕದಂಗಡಿಗಿಂತ ಒಂದು ಕಾರ್ಖಾನೆಯು, ವಿಸಿಟರ್ಗಳಿಗೆ ಹೆಚ್ಚಿನ ಅಪಾಯವನ್ನು ಉಂಟುಮಾಡಬಹುದು)
ಪ್ರಾಡಕ್ಟ್‌ಗಳ ಪ್ರಕಾರ - ನಿಮ್ಮ ಬಿಸಿನೆಸ್‌ನ ರಿಸ್ಕ್ ನಿಮ್ಮ ಬಿಸಿನೆಸ್ ನೀಡುವ ಪ್ರಾಡಕ್ಟ್‌ಗಳ ಅಥವಾ ಸರ್ವೀಸ್ಗಳ ಮೇಲೆ ಅವಲಂಬಿತವಾಗಿರುತ್ತದೆ
ನಿಮ್ಮ ಬಿಸಿನೆಸ್‌ನ ಗಾತ್ರ - ಸಾಮಾನ್ಯವಾಗಿ, ನಿಮ್ಮ ಬಿಸಿನೆಸ್ ದೊಡ್ಡದಿದ್ದಷ್ಟು, ಅದರ ಮೌಲ್ಯವು ಹೆಚ್ಚಾಗುತ್ತದೆ. ಆದ್ದರಿಂದ, ನಿಮ್ಮ ಜನರಲ್ ಅಥವಾ ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್ ಪ್ರೀಮಿಯಂ ಕೂಡ ಹೆಚ್ಚಾಗುತ್ತದೆ
ಕ್ಲೈಮ್ ಇತಿಹಾಸ - ನಿಮ್ಮ ಬಿಸಿನೆಸ್ ಈ ಹಿಂದೆ ಎಷ್ಟು ಕ್ಲೈಮ್‌ಗಳನ್ನು ಮಾಡಿದೆ ಎಂಬುದು ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವಾಗಿದೆ
ಲೊಕೇಶನ್ - ನಿಮ್ಮ ಬಿಸಿನೆಸ್ ಇರುವ ಲೊಕೇಶನ್ ಅನ್ನು ಆಧರಿಸಿ, ಲಯಬಿಲಿಟಿ ಇನ್ಶೂರೆನ್ಸ್ ಪ್ರೀಮಿಯಂನ ಮೇಲೆ ಪರಿಣಾಮ ಬೀರುತ್ತದೆ ಎಂಬ ಸರಳ ಕಾರಣಕ್ಕಾಗಿ, ವಿವಿಧ ಪಟ್ಟಣಗಳು ಮತ್ತು ನಗರಗಳು ವಿವಿಧ ಹಂತದ ರಿಸ್ಕ್ನೊಂದಿಗೆ ಬರುತ್ತವೆ
ಲೋಕೇಶನ್ಗಳ ಸಂಖ್ಯೆ - ಒಂದು ವೇಳೆ ನಿಮ್ಮ ಬಿಸಿನೆಸ್ ಡಿಫರೆಂಟ್ ಲೋಕೇಶನ್ಗಳಲ್ಲಿ ಕಾರ್ಯನಿರ್ವಹಿಸುವಾಗ, ಅದು ಹೆಚ್ಚಿನ ಮಟ್ಟದ ರಿಸ್ಕ್ ಅನ್ನು ಹೊಂದಿರುತ್ತದೆ
ಅಂದಾಜು ಟರ್ನ್ಓವರ್ - ನಿಮ್ಮ ಪ್ರೀಮಿಯಂ ನಿಮ್ಮ ಬಿಸಿನೆಸ್‌ನ ಅಂದಾಜು ಟರ್ನ್ಓವರ್ ಮೇಲೂ ಸಹ ಆಧಾರಿತವಾಗಿರುತ್ತದೆ
ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಇತರ ಅಂಶಗಳೆಂದರೆ ಪರಿಸರ, ಆಕ್ಯುಪೆನ್ಸಿ, ಪ್ರಾದೇಶಿಕ ಮತ್ತು ನ್ಯಾಯವ್ಯಾಪ್ತಿಯ ಮಾನ್ಯತೆ ಮತ್ತು ನಿಮ್ಮ ಬಿಸಿನೆಸ್ ರೆಕಾರ್ಡ್. ಮತ್ತು ಸಾಮಾನ್ಯವಾಗಿ, ಹೆಚ್ಚಿನ ರಿಸ್ಕ್ಗೆ ಕಾರಣವಾಗುವ ಯಾವುದೇ ವಿಷಯವು, ಪಾವತಿಸಬೇಕಾದ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸುತ್ತದೆ.
ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಮತ್ತು ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸವೇನು?
ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್ ಎನ್ನುವುದು ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಅನ್ನು ಹೋಲುವ ಪಾಲಿಸಿಯಾಗಿದೆ. ಆದರೆ ಅವುಗಳು ತಮ್ಮ ಉದ್ದೇಶ ಮತ್ತು ಕವರೇಜಿಗೆ ಸಂಬಂಧಿಸಿದಂತೆ ಪರಸ್ಪರ ಭಿನ್ನವಾಗಿರುತ್ತವೆ. ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್ ಮತ್ತು ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಅನ್ನು ನೋಡೋಣ:
|
ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್ |
ಜನರಲ್ ಲಯಬಿಲಿಟಿ ಇನ್ಶೂರೆನ್ಸ್ |
ಏನಿದು? |
ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್, ಪ್ರಿಮೈಸಸ್‌ನಲ್ಲಿರುವ ಯಾವುದೇ ಥರ್ಡ್ ಪಾರ್ಟಿ ಗಾಯ ಅಥವಾ ಡ್ಯಾಮೇಜಿನ ಕ್ಲೈಮ್‌ಗಳ ವಿರುದ್ಧ ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್ ಅನ್ನು ಕವರ್ ಮಾಡುತ್ತದೆ. |
ಜನರಲ್ ಲಯಬಿಲಿಟಿ ಇನ್ಶೂರೆನ್ಸ್, ನಿಮ್ಮ ಬಿಸಿನೆಸ್‌ನಲ್ಲಿ ಥರ್ಡ್ ಪಾರ್ಟಿ ವ್ಯಕ್ತಿಗೆ ಅಥವಾ ಪ್ರಾಪರ್ಟಿಗೆ ಯಾವುದೇ ಗಾಯ ಸೇರಿದಂತೆ, ವ್ಯಾಪಕ ಶ್ರೇಣಿಯ ಘಟನೆಗಳನ್ನು ಕವರ್ ಮಾಡುತ್ತದೆ. |
ಕವರೇಜ್ |
ಮೂಲಭೂತವಾಗಿ, ಇದು ನಿಮ್ಮ ವ್ಯಾಪಾರದ ಪ್ರಿಮೈಸಸ್‌ನಲ್ಲಿರುವ ಯಾವುದೇ ಪಬ್ಲಿಕ್ ಮೆಂಬರ್‌ಗಳಿಗೆ (ಅಥವಾ ಥರ್ಡ್ ಪಾರ್ಟಿಗಳಿಗೆ) ಗಾಯಗಳು, ಡ್ಯಾಮೇಜ್ ಅನ್ನು ಕವರ್ ಮಾಡುತ್ತವೆ. ಇದು ಕಸ್ಟಮರ್‌ಗಳು, ವಿಸಿಟರ್‌ಗಳು ಮತ್ತು ಡೆಲಿವರಿ ಸಿಬ್ಬಂದಿಯನ್ನು ಒಳಗೊಂಡಿರಬಹುದು. |
ಇದು ನಿಮ್ಮ ಬಿಸಿನೆಸ್‌ಗಾಗಿ ಹೆಚ್ಚು ಕಾಂಪ್ರೆಹೆನ್ಸಿವ್ ಕವರ್ ಆಗಿದ್ದು, ಇದು ನಿಮ್ಮ ಥರ್ಡ್ ಪಾರ್ಟಿ ಲಯಬಿಲಿಟಿಗಳನ್ನು ಮಾತ್ರ ನೋಡಿಕೊಳ್ಳದೇ ಅದರೊಂದಿಗೆ ಅಡ್ವರ್ಟೈಸಿಂಗ್ ಗಾಯಗಳು ಮತ್ತು ಪರ್ಸನಲ್ ಗಾಯಗಳು ಮತ್ತು ನಿಮ್ಮ ಬಿಸಿನೆಸ್ ಕಾರ್ಯಾಚರಣೆಯ ಕಾರಣದಿಂದಾಗಿ ಸಂಭವಿಸುವ ಯಾವುದೇ ಗಾಯಗಳು ಅಥವಾ ಡ್ಯಾಮೇಜುಗಳಂತಹ ಇತರ ಸಂದರ್ಭಗಳಲ್ಲಿಯೂ ಸಹ ನಿಮಗೆ ರಕ್ಷಣೆ ನೀಡುತ್ತದೆ. |
ಪ್ರಯೋಜನಗಳು |
ಜನರಲ್ ಲಯಬಿಲಿಟಿ ಇನ್ಶೂರೆನ್ಸ್‌ಗಿಂತ ಪ್ರೈವೇಟ್ ಲಯಬಿಲಿಟಿ ಇನ್ಶೂರೆನ್ಸ್‌ನ ಪ್ರೀಮಿಯಂ ಸ್ವಲ್ಪ ಕಡಿಮೆ ಇರುತ್ತದೆ. |
ಜನರಲ್ ಲಯಬಿಲಿಟಿ ಇನ್ಶೂರೆನ್ಸ್, ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್ ಕವರ್ ಮಾಡುವ ಎಲ್ಲವನ್ನೂ ಕವರ್ ಮಾಡುತ್ತದೆ. ಜೊತೆಗೆ ಪರ್ಸನಲ್ ಮತ್ತು ಅಡ್ವರ್ಟೈಸಿಂಗ್ ಗಾಯವನ್ನು ಸಹ ಕವರ್ ಮಾಡುತ್ತದೆ. |
ಲಿಮಿಟೇಶನ್‌ಗಳು |
ಈ ಕವರೇಜ್ ನಿಮ್ಮ ಬಿಸಿನೆಸ್ ಪ್ರಾಪರ್ಟಿಗೆ ಮಾತ್ರ ಅನ್ವಯಿಸುತ್ತದೆ. ಆದ್ದರಿಂದ ನೀವು ಅಥವಾ ನಿಮ್ಮ ಎಂಪ್ಲಾಯೀಗಳು ಬೇರೆ ಕಡೆಗಳಲ್ಲಿ ಯಾವುದೇ ಡ್ಯಾಮೇಜ್ ಅನ್ನು ಅನುಭವಿಸಿದರೆ, ಅದನ್ನು ಕವರ್ ಮಾಡಲಾಗುವುದಿಲ್ಲ ಉದಾಹರಣೆಗೆ ಕ್ಲೈಂಟ್‌ಗಳ ಮನೆ. |
ಪ್ರೀಮಿಯಂ ಪ್ರೈವೇಟ್ ಲಯಬಿಲಿಟಿ ಇನ್ಶೂರೆನ್ಸ್‌ಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿರುತ್ತದೆ. |
ಜನರಲ್ ಲಯಬಿಲಿಟಿ ಇನ್ಶೂರೆನ್ಸ್‌ನ ಸಾಮಾನ್ಯ ನಿಯಮಗಳನ್ನು ನಿಮಗಾಗಿ ಸರಳೀಕರಿಸಲಾಗಿದೆ
ಇತರೆ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಗಳು
ಬಿಸಿನೆಸ್ ಓನರ್ ಆಗಿ, ನೀವು ವ್ಯಾಪಕ ಶ್ರೇಣಿಯ ಲಯಬಿಲಿಟಿಗಳಿಗೆ ಒಡ್ಡಿಕೊಳ್ಳುವುದರಿಂದ, ಎಲ್ಲಾ ರೀತಿಯ ಲಯಬಿಲಿಟಿ ಇನ್ಶೂರೆನ್ಸ್ ಕವರ್ (ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್ ಮತ್ತು ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಅನ್ನು ಹೊರತುಪಡಿಸಿ) ಲಭ್ಯವಿವೆ ಎಂಬುದನ್ನು ಗಮನಿಸುವುದು ಮುಖ್ಯವಾಗಿರುತ್ತದೆ: