ನೀವು ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್ ಅನ್ನು ಹೇಗೆ ಮಾರಾಟ ಮಾಡಬಹುದು?
ಈಗಿನ ಕಾಲದಲ್ಲಿ, ಬಹಳಷ್ಟು ಜನರು ಸ್ವಲ್ಪ ಹೆಚ್ಚುವರಿ ಆದಾಯಕ್ಕಾಗಿ ಪರ್ಯಾಯ ವೃತ್ತಿ ಆಯ್ಕೆಗಳನ್ನು ಮತ್ತು ಪಾರ್ಟ್-ಟೈಮ್ ಜಾಬ್‌ಗಳನ್ನು ಹುಡುಕುತ್ತಿರುತ್ತಾರೆ. ಅವರಿಗಿರುವ ಉತ್ತಮ ಮಾರ್ಗವೆಂದರೆ ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್ ಮಾರಾಟ ಮಾಡುವುದು.
ಭಾರತದಲ್ಲಿ, ಇನ್ಶೂರೆನ್ಸ್ ಅನ್ನು ಮಾರಾಟ ಮಾಡಲು ಎರಡು ಮುಖ್ಯ ಮಾರ್ಗಗಳಿವೆ:
1. ಇನ್ಶೂರೆನ್ಸ್ ಅಡ್ವೈಸರ್
ಇನ್ಶೂರೆನ್ಸ್ ಅಡ್ವೈಸರ್ ಎಂದರೆ ನಿರ್ದಿಷ್ಟ ಇನ್ಶೂರೆನ್ಸ್ ಕಂಪನಿಯೊಂದಿಗೆ ರಿಜಿಸ್ಟರ್ ಆಗಿರುವ ಇವರು, ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಲು, ಕ್ಲೈಮ್‌ಗಳನ್ನು ಮಾಡಲು ಹಾಗೂ ಇನ್ನೂ ಹೆಚ್ಚಿನ ಸಹಾಯ ಮಾಡಲು ಗ್ರಾಹಕರೊಂದಿಗೆ ಸಂಪರ್ಕ ಹೊಂದಿರುತ್ತಾರೆ. ಐ.ಆರ್.ಡಿ.ಎ.ಐ ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ, ನಿಮ್ಮ ಲೈಸೆನ್ಸ್ ಪಡೆಯಲು ಮತ್ತು ಅಡ್ವೈಸರ್ ಆಗಲು ನೀವು ತರಬೇತಿ ಕಾರ್ಯಕ್ರಮಕ್ಕೆ ಒಳಗಾಗಬೇಕು ಮತ್ತು ಪರೀಕ್ಷೆಗೆ ಹಾಜರಾಗಬೇಕು.
2. ಪಾಯಿಂಟ್ ಆಫ್ ಸೇಲ್ ಪರ್ಸನ್ (ಪಿ.ಓ.ಎಸ್.ಪಿ)
ಪಿ.ಓ.ಎಸ್.ಪಿ ಎನ್ನುವುದು ಐ.ಆರ್.ಡಿ.ಎ.ಐ ನಿಂದ 2015 ರಲ್ಲಿ ಇನ್ಶೂರೆನ್ಸ್ ಅಡ್ವೈಸರ್‌ಗಳಿಗಾಗಿ ರಚಿಸಲ್ಪಟ್ಟ ಹೊಸ ರೀತಿಯ ಲೈಸೆನ್ಸ್ ಆಗಿದೆ. ನೀವು ಇನ್ನೂ ನಿಗದಿಪಡಿಸಿದ ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗಬೇಕು ಮತ್ತು ಆನ್‌ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಆಗ ನೀವು ಲೈಫ್ ಇನ್ಶೂರೆನ್ಸ್ ಮತ್ತು ಜನರಲ್ ಇನ್ಶೂರೆನ್ಸ್ ವಿಭಾಗಗಳಲ್ಲಿ (ಮೋಟಾರ್ ಇನ್ಶೂರೆನ್ಸ್, ಹೆಲ್ತ್ ಇನ್ಶೂರೆನ್ಸ್, ಟ್ರಾವೆಲ್ ಇನ್ಶೂರೆನ್ಸ್ ಮತ್ತು ಇತ್ಯಾದಿಗಳನ್ನು ಒಳಗೊಂಡಂತೆ) ಅನೇಕ ಇನ್ಶೂರೆನ್ಸ್ ಕಂಪನಿಗಳ ಪಾಲಿಸಿಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ.
ಈ ರೀತಿಯಾಗಿ, ನೀವು ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ಮತ್ತು ಅನೇಕ ಕಂಪನಿಗಳ ವಿಭಿನ್ನ ಇನ್ಶೂರೆನ್ಸ್ ಯೋಜನೆಗಳನ್ನು ನೀಡಬಹುದು. ಇದರಿಂದ ಗ್ರಾಹಕರು ತಮಗಾಗಿ ಉತ್ತಮ ಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ಅನೇಕ ಕಂಪನಿಗಳಿಂದ ಪಾಲಿಸಿಗಳನ್ನು ಮಾರಾಟ ಮಾಡಲು ಇನ್ಶೂರೆನ್ಸ್ ಮಧ್ಯವರ್ತಿ ಅಥವಾ ಬ್ರೋಕರ್‌ನೊಂದಿಗೆ ಕೆಲಸ ಮಾಡಬಹುದು ಅಥವಾ ಒಂದೇ ಕಂಪನಿಯೊಂದಿಗೆ ಕೆಲಸ ಮಾಡಬಹುದು. ಹೀಗಾಗಿ, ಸಾಂಪ್ರದಾಯಿಕ ಇನ್ಶೂರೆನ್ಸ್ ಅಡ್ವೈಸರ್‌ಗಿಂತ ನಿಮಗಿಲ್ಲಿ ಹೆಚ್ಚಿನ ಆಯ್ಕೆಗಳಿವೆ.
ಇನ್ಶೂರೆನ್ಸ್ ಪಿ.ಓ.ಎಸ್.ಪಿ(POSP) ಆಗುವುದು ಹೇಗೆ
ನಾವು ನೋಡಿದಂತೆ, ಪಿ.ಓ.ಎಸ್.ಪಿ (ಅಥವಾ ಪಾಯಿಂಟ್ ಆಫ್ ಸೇಲ್ಸ್ ಪರ್ಸನ್) ಎಂದರೆ ಅನೇಕ ಕಂಪನಿಗಳ ಲೈಫ್ ಇನ್ಶೂರೆನ್ಸ್, ಮೋಟಾರ್ ಇನ್ಶೂರೆನ್ಸ್, ಹೆಲ್ತ್ ಇನ್ಶೂರೆನ್ಸ್ ಮತ್ತು ಮುಂತಾದ ಅನೇಕ ವರ್ಗಗಳ ಇನ್ಶೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡಲು ಸರ್ಟಿಫೈಡ್ ಆಗಿರುವ ವ್ಯಕ್ತಿ.
ಪಿ.ಓ.ಎಸ್.ಪಿ ಆಗಲು, ನೀವು ಐ.ಆರ್.ಡಿ.ಎ.ಐ ನೀಡಿದ ಕನಿಷ್ಠ ಶೈಕ್ಷಣಿಕ ಅರ್ಹತೆಗಳನ್ನು ಪೂರೈಸಬೇಕು ಮತ್ತು ಕಡ್ಡಾಯ ತರಬೇತಿ ಕೋರ್ಸ್‌ಗೆ ಒಳಗಾಗಬೇಕಾಗುತ್ತದೆ.
ಪಿ.ಓ.ಎಸ್.ಪಿ(POSP) ಆಗಲು ಅಗತ್ಯವಿರುವ ಅರ್ಹತೆಗಳು: ಇನ್ಶೂರೆನ್ಸ್ ಏಜೆಂಟ್ ಆಗಲು ಕೆಲವು ಮೂಲಭೂತ ಅವಶ್ಯಕತೆಗಳಿವೆ. ನೀವು ಕನಿಷ್ಟ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ನೀವು ಮಾನ್ಯವಾಗಿರುವ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಮತ್ತು ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಅನ್ನು ಹೊಂದಿರಬೇಕು.
ಪಿ.ಓ.ಎಸ್.ಪಿ(POSP) ಆಗುವ ವಿಧಾನ: ಪಿ.ಓ.ಎಸ್.ಪಿ ಆಗಿ ಕೆಲಸ ಪ್ರಾರಂಭಿಸಲು, ನೀವು ನಿರ್ದಿಷ್ಟ ಕಂಪನಿ ಅಥವಾ ಇನ್ಶೂರೆನ್ಸ್ ಮಧ್ಯವರ್ತಿಯೊಂದಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ನಂತರ ಐ.ಆರ್.ಡಿ.ಎ.ಐ ನೀಡುವ 15-ಗಂಟೆಗಳ ಕಡ್ಡಾಯ ತರಬೇತಿಯನ್ನು ಪೂರ್ಣಗೊಳಿಸಬೇಕು. ಒಮ್ಮೆ ನೀವು ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಮತ್ತು ನಿಗದಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ನೀವು ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಲು ಲೈಸೆನ್ಸ್ ಪಡೆಯುತ್ತೀರಿ (ಪಿ.ಓ.ಎಸ್.ಪಿ ಮಾರ್ಗಸೂಚಿಗಳ ಪ್ರಕಾರ).
ಆದ್ದರಿಂದ, ಈ ಮೂಲಭೂತ ಮಾನದಂಡಗಳನ್ನು ಪೂರೈಸುವ ಯಾರಾದರೂ ಪಿ.ಓ.ಎಸ್.ಪಿ ಆಗಲು ರಿಜಿಸ್ಟರ್ ಮಾಡಿಕೊಳ್ಳಬಹುದು. ಮತ್ತು ನೀವು ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಲು ಮತ್ತು ವಿತರಿಸಲು ಸಾಧ್ಯವಾಗುವುತ್ತದೆ. ಈ ಕೆಲಸಕ್ಕಾಗಿ ನಿಮಗೆ ಬೇಕಾಗಿರುವುದು ಕೇವಲ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಮತ್ತು ಉತ್ತಮ ಇಂಟರ್ನೆಟ್ ಕನೆಕ್ಷನ್.
ಗೂಗಲ್ ಲಿಸ್ಟಿಂಗ್ಸ್, ವೆಬ್‌ಸೈಟ್ ಕ್ರಿಯೇಷನ್‌ನಂತಹ ಆನ್‌ಲೈನ್ ಚಾನಲ್‌ಗಳನ್ನು ಸೆಟ್ ಮಾಡುವುದು, ಗೂಗಲ್, ಫೇಸ್ಬುಕ್ ಪೇಜುಗಳು, ಜಾಹೀರಾತುಗಳು, ಇಮೇಲ್, ಎಸ್ಎಮ್ಎಸ್, ವಾಟ್ಸಾಪ್ ಇತ್ಯಾದಿಗಳಂತಹ ಇತರ ಆನ್‌ಲೈನ್ ಚಾನಲ್‌ಗಳನ್ನು ಸೆಟ್ ಮಾಡುವುದು ಮತ್ತು ಇನ್ನಷ್ಟು. ಎಲ್ಲದರ ಬಗ್ಗೆ ಚಿಕ್ಕ ವಿವರಗಳು ತುಂಬಾ ಸಹಾಯಕವಾಗುತ್ತವೆ.
ಪದೇಪದೇ ಕೇಳಲಾದ ಪ್ರಶ್ನೆಗಳು
ಪಿ.ಓ.ಎಸ್.ಪಿ(POSP) ಮತ್ತು ಜನರಲ್ ಇನ್ಶೂರೆನ್ಸ್ ಸೇಲ್ಸ್ ಪರ್ಸನ್ ನಡುವಿನ ವ್ಯತ್ಯಾಸವೇನು?
ಎರಡರ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಇನ್ಶೂರೆನ್ಸ್ ಏಜೆಂಟ್‌ರು ತಮಗೆ ಸಂಬಂಧಿಸಿರುವ ಕಂಪನಿಯ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾತ್ರ ಮಾರಾಟ ಮಾಡಬಹುದು. ಅವರು ಲೈಫ್ ಇನ್ಸೂರೆನ್ಸ್ ಅನ್ನು ಮಾರಾಟ ಮಾಡಲು ಒಂದು ಲೈಸೆನ್ಸ್ ಪಡೆಯಬಹುದು ಅಥವಾ ಜನರಲ್ ಇನ್ಶೂರೆನ್ಸ್ ಅನ್ನು ಮಾರಾಟ ಮಾಡಲು ಒಂದು ಲೈಸೆನ್ಸ್ ಪಡೆಯಬಹುದು. ಅಷ್ಟೇ ಅಲ್ಲ, ಲೈಫ್ ಇನ್ಸೂರೆನ್ಸ್ ಹಾಗೂ ಜನರಲ್ ಇನ್ಶೂರೆನ್ಸ್ ಎರಡನ್ನೂ ಮಾರಾಟ ಮಾಡಲು ಕಾಂಪೋಸಿಟ್ ಲೈಸೆನ್ಸ್ ಅನ್ನು ಪಡೆಯಬಹುದು.
ಮತ್ತೊಂದೆಡೆ, ಪಿ.ಓ.ಎಸ್.ಪಿ ಏಜೆಂಟ್‌ರು ಎಲ್ಲಾ ರೀತಿಯ ಇನ್ಶೂರೆನ್ಸ್‌ಗಳನ್ನು, ವಿವಿಧ ಕಂಪನಿಗಳ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಬಹುದು, ಮತ್ತು ಅದಕ್ಕಾಗಿ ಅವರು ಇನ್ಶೂರೆನ್ಸ್ ಮಧ್ಯವರ್ತಿ ಅಥವಾ ಬ್ರೋಕರ್‌ನೊಂದಿಗೆ ಸಂಪರ್ಕ ಹೊಂದಿರಬೇಕು.
ಯಾರು ಪಿ.ಓ.ಎಸ್.ಪಿ(POSP) ಆಗಬಹುದು?
ಮೂಲಭೂತ ಮಾನದಂಡಗಳನ್ನು ಪೂರೈಸುವ ಯಾರಾದರೂ (18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ನೇ ತರಗತಿಯಲ್ಲಿ ಉತ್ತೀರ್ಣರಾದವರು) ಪಿ.ಓ.ಎಸ್.ಪಿ ಆಗಬಹುದು. ಹೀಗಾಗಿ, ಫ್ರೆಶರ್‌ಗಳಿಗೆ ಇದು ಸರಿಯಾದ ಅವಕಾಶವಾಗಿದೆ. ಮತ್ತು, ನೀವು ಈ ಕೆಲಸವನ್ನು ಪಾರ್ಟ್-ಟೈಮ್ ಆಗಿಯೂ ಮಾಡಬಹುದಾದ್ದರಿಂದ, ಕಾಲೇಜು ವಿದ್ಯಾರ್ಥಿಗಳು, ಗೃಹಿಣಿಯರು, ನಿವೃತ್ತರು ಮತ್ತು ಈಗಾಗಲೇ ಉದ್ಯೋಗವನ್ನು ಹೊಂದಿದ್ದರೂ ಸಹ, ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ.
ಪಿ.ಓ.ಎಸ್.ಪಿ(POSP) ಆಗಿ ನೀವು ಎಷ್ಟು ಹಣವನ್ನು ಗಳಿಸಬಹುದು?
ಪಿ.ಓ.ಎಸ್.ಪಿ ಆಗಿ, ನಿಮ್ಮ ಗಳಿಕೆಯು ನೀವು ಕೆಲಸ ಮಾಡುವ ಗಂಟೆಗಳ ಸಂಖ್ಯೆಯನ್ನು ಅವಲಂಬಿಸಿರುವುದಿಲ್ಲ ಬದಲಿಗೆ ನೀವು ಮಾರಾಟ ಮಾಡುವ ಪಾಲಿಸಿಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಯಾವುದೇ ಸ್ಥಿರ ಆದಾಯ ಮತ್ತು ಗರಿಷ್ಠ ಮಿತಿ ಇಲ್ಲದಿರುವುದರಿಂದ ಹೆಚ್ಚಿನ ಗಳಿಕೆಗೆ ಇಲ್ಲಿ ಸಾಕಷ್ಟು ಅವಕಾಶವಿದೆ. ಮುಖ್ಯವಾಗಿ, ನೀವು ಹೆಚ್ಚು ಪಾಲಿಸಿಗಳನ್ನು ಮಾರಾಟ ಮಾಡಿದಷ್ಟು, ನೀವು ಹೆಚ್ಚು ನವೀಕರಣಗಳನ್ನು ಪಡೆಯುತ್ತೀರಿ. ಹೆಚ್ಚು ನವೀಕರಣಗಳನ್ನು ಪಡೆದಷ್ಟು ನೀವು ಪಿ.ಓ.ಎಸ್.ಪಿ ಯಾಗಿ ಹೆಚ್ಚು ಗಳಿಸಬಹುದು.
ಪಿ.ಓ.ಎಸ್.ಪಿ(POSP) ಆಗಿ ರಿಜಿಸ್ಟರ್ ಮಾಡಲು ನಾನು ಯಾವ ಡಾಕ್ಯುಮೆಂಟುಗಳನ್ನು ಸಲ್ಲಿಸಬೇಕು?
ಪಿ.ಓ.ಎಸ್.ಪಿ ಆಗಿ ರಿಜಿಸ್ಟರ್ ಮಾಡಲು, ನಿಮಗೆ ಈ ಕೆಳಗಿನ ಡಾಕ್ಯುಮೆಂಟುಗಳು ಬೇಕಾಗುತ್ತವೆ:
- ನಿಮ್ಮ10ನೇ ತರಗತಿ (ಅಥವಾ ಅದಕ್ಕೂ ಹೆಚ್ಚಿನ ತರಗತಿ) ಯ ಉತ್ತೀರ್ಣ ಪ್ರಮಾಣಪತ್ರದ ಪ್ರತಿ
- ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ನ ಪ್ರತಿ (ಮುಂಭಾಗ ಮತ್ತು ಹಿಂಭಾಗ)
- ಮೇಲೆ ನಿಮ್ಮ ಹೆಸರಿರುವ ಒಂದು ಕ್ಯಾನ್ಸಲ್ಡ್ ಚೆಕ್
- ಒಂದು ಫೋಟೋ
ಪಿ.ಓ.ಎಸ್.ಪಿ(POSP) ಯು ಯಾವ ಉತ್ಪನ್ನಗಳನ್ನು ಮಾರಾಟ ಮಾಡಬಹುದು?
ತಾವು ಕೆಲಸ ಮಾಡುವ ಕಂಪನಿಯನ್ನು ಅವಲಂಬಿಸಿ, ಪಿ.ಓ.ಎಸ್.ಪಿ ಯು ಹಲವಾರು ಇನ್ಶೂರೆನ್ಸ್ ವಿಭಾಗಗಳ, ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಬಹುದು. ಇವುಗಳಲ್ಲಿ ಲೈಫ್ ಇನ್ಶೂರೆನ್ಸ್, ಟರ್ಮ್ ಇನ್ಶೂರೆನ್ಸ್, ಮೋಟಾರ್ ಇನ್ಶೂರೆನ್ಸ್, ಹೆಲ್ತ್ ಇನ್ಶೂರೆನ್ಸ್, ಟ್ರಾವೆಲ್ ಇನ್ಶೂರೆನ್ಸ್ ಮುಂತಾದವು ಸೇರಿವೆ.
ನೀವು ಯಾವಾಗ ಇನ್ಶೂರೆನ್ಸ್ ಅನ್ನು ಮಾರಾಟ ಮಾಡಲು ಪ್ರಾರಂಭಿಸಬಹುದು?
ಒಮ್ಮೆ ನೀವು ಇನ್ಶೂರೆನ್ಸ್ ಕಂಪನಿ ಅಥವಾ ಬ್ರೋಕರ್‌ನೊಂದಿಗೆ ರಿಜಿಸ್ಟರ್ ಮಾಡಿದ ನಂತರ, ನೀವು 15 ಗಂಟೆಗಳ ಕಡ್ಡಾಯ ತರಬೇತಿಯನ್ನು ಪೂರ್ಣಗೊಳಿಸಬಹುದು ಮತ್ತು ಅಗತ್ಯವಿರುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು. ನಂತರ ನೀವು ಇ-ಸರ್ಟಿಫಿಕೇಟ್ ಅನ್ನು ಪಡೆಯುತ್ತೀರಿ ಮತ್ತು ನೀವು ಪಿ.ಓ.ಎಸ್.ಪಿ ಏಜೆಂಟ್ ಆಗಿ ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್ ಅನ್ನು ಮಾರಾಟ ಮಾಡಲು ಪ್ರಾರಂಭಿಸಬಹುದು.
ಪಿ.ಓ.ಎಸ್.ಪಿ(POSP) ಆಗುವ ಪ್ರಯೋಜನಗಳೇನು?
ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪಿ.ಓ.ಎಸ್.ಪಿ ಆಗಿ ಮಾರಾಟ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ:
- ಯಾವುದೇ ನಿಗದಿಪಡಿಸಿದ ಸಮಯಗಳಿಲ್ಲ - ನಿಮ್ಮ ಕೆಲಸದ ಸಮಯವನ್ನು ಸ್ವತಃ ನೀವೇ ಸುಲಭವಾಗಿ ಆಯ್ಕೆ ಮಾಡಬಹುದು ಮತ್ತು ನಿಗದಿಪಡಿಸಬಹುದು. ಹಾಗೂ ನೀವು ಫುಲ್-ಟೈಮ್ ಮಾಡಲು ಬಯಸುತ್ತೀರೊ ಅಥವಾ ಪಾರ್ಟ್-ಟೈಮ್ ಕೆಲಸ ಮಾಡಲು ಬಯಸುತ್ತೀರೊ ನೀವೇ ಎಂಬುದನ್ನು ನಿರ್ಧರಿಸಬಹುದು.
- ನಿಮ್ಮ ಸ್ವಂತ ಬಾಸ್ ನೀವಾಗಬಹುದು - ನಿಮಗೆ ಅನುಕೂಲಕರವಾದಾಗ ನಿಮ್ಮಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಮತ್ತು ನೀವು ಎಷ್ಟು ಕೆಲಸ ಮಾಡಲು ಬಯಸುತ್ತೀರಿ ಎಂಬುದನ್ನು ನಿಗದಿಪಡಿಸಲು ಸಾಧ್ಯವಾಗುತ್ತದೆ.
- ಮನೆಯಿಂದಲೇ ಕೆಲಸ ಮಾಡಲು ಸಾಧ್ಯವಿದೆ - ಪಾಲಿಸಿಗಳನ್ನು ಮಾರಾಟ ಮಾಡಲು ಪಿ.ಓ.ಎಸ್.ಪಿ ಗಳು ಆನ್‌ಲೈನ್ ಪ್ರಕ್ರಿಯೆಗಳನ್ನು ಬಳಸಬಹುದಾದ್ದರಿಂದ, ಅವರು ಸುಲಭವಾಗಿ ಮನೆಯಿಂದಲೇ ಕೆಲಸ ಮಾಡಬಹುದು, ಅಥವಾ ಅವರು ಬಯಸುವ ಬೇರೆಲ್ಲಿಂದಾದರೂ ಸಹ ಅವರು ಕೆಲಸ ಮಾಡಬಹುದು.
- ನಿಗದಿಪಡಿಸಿದ ಕಮಿಷನ್‌ಗಳು ಇವೆ - ಪಿ.ಓ.ಎಸ್.ಪಿ ಗಳು, ರೆಗ್ಯುಲೆಟರಿ ಸಂಸ್ಥೆ (ಐ.ಆರ್.ಡಿ.ಎ.ಐ) ನಿಗದಿಪಡಿಸಿದ ಕಮಿಷನ್‌ಗಳನ್ನು ಗಳಿಸುತ್ತಾರೆ. ಆದ್ದರಿಂದ, ನೀವು ಸ್ಥಿರ ಆದಾಯವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಆದಾಯವು ನೀವು ಮಾರಾಟ ಮಾಡುವ ಪಾಲಿಸಿಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.
- ಶೂನ್ಯ ಹೂಡಿಕೆಯ ಅಗತ್ಯವಿದೆ - ನೀವು ಪಿ.ಓ.ಎಸ್.ಪಿ ಆಗಿ ಸೇರುವಾಗ ಯಾವುದೇ ಹೂಡಿಕೆ ಮಾಡುವ ಅಥವಾ ಪಾವತಿ ಮಾಡುವ ಅಗತ್ಯವಿಲ್ಲ. ನಿಮಗೆ ಬೇಕಿರುವುದು ಕೇವಲ ಒಂದು ಸ್ಮಾರ್ಟ್‌ಫೋನ್, ಕಂಪ್ಯೂಟರ್ ಮತ್ತು ಇಂಟರ್ನೆಟ್ ಕನೆಕ್ಷನ್!