ಭಾರತದಲ್ಲಿ ನಿಷ್ಕ್ರಿಯ ಆದಾಯವನ್ನು ಗಳಿಸುವುದು ಹೇಗೆ
ನೀವೊಂದು ನಿರ್ದಿಷ್ಟ ಅವಧಿಯ 9 ರಿಂದ 5 ಗಂಟೆಯ ಉದ್ಯೋಗವನ್ನು ಹೊಂದಿದವರಾಗಿರಲಿ, ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿರುವವರಾಗಲಿ ಅಥವಾ ನೀವು ಫ್ರೀಲ್ಯಾನ್ಸರ್ ಆಗಿರಲಿ, ಹೆಚ್ಚಿನ ಶ್ರಮವಿಲ್ಲದೆ ಹೆಚ್ಚುವರಿ ಹಣವನ್ನು ನಿಯಮಿತವಾಗಿ ಗಳಿಸುವ ಅತ್ಯುತ್ತಮ ಮಾರ್ಗವೆಂದರೆ, ಅದೇ ನಿಷ್ಕ್ರಿಯ ಆದಾಯ ಗಳಿಸುವ ಮಾರ್ಗವನ್ನು ಕಂಡುಹಿಡಿಯುವುದು.
ನಿಷ್ಕ್ರಿಯ ಆದಾಯ ಎಂದರೇನು?
ನೀವು ನಿಷ್ಕ್ರಿಯ ಆದಾಯವನ್ನು ಬಾಡಿಗೆ ಪಡೆಯುವ ಪ್ರಾಪರ್ಟಿಗಳಿಂದ ಅಥವಾ ನೀವು ಸಕ್ರಿಯವಾಗಿ ತೊಡಗಿಸಿಕೊಳ್ಳದೆ ಇತರೆ ಉದ್ಯಮದಿಂದ ಪಡೆಯುವ ಗಳಿಕೆ ಎಂದು ವ್ಯಾಖ್ಯಾನಿಸಲಾಗಿದೆ. ಮೂಲಭೂತವಾಗಿ, ನಿಷ್ಕ್ರಿಯ ಆದಾಯ ಎನ್ನುವುದು ನೀವು ಗಳಿಸಲು ಸಾಕಷ್ಟು "ಆ್ಯಕ್ಟಿವ್" ಆಗಿ ಕೆಲಸ ಮಾಡುವ ಅಗತ್ಯವಿಲ್ಲದ ಹಣ. ನೀವು ನಿದ್ದೆ ಮಾಡುವಾಗಲೂ, ಹಣ ಗಳಿಸುವುದು ಮುಖ್ಯ ಗುರಿಯಾಗಿದೆ.
ಇದನ್ನು ಮಾಡಲು, ಮುಂಗಡವಾಗಿ ಏನನ್ನಾದರೂ ರಚಿಸಲು ನೀವು ನಿಮ್ಮ ಸಮಯ ಅಥವಾ ಸ್ವಲ್ಪ ಹಣವನ್ನು ಹೂಡಿಕೆ ಮಾಡಬೇಕಾಗಬಹುದು, ನಂತರ ಸ್ವಲ್ಪ ಹೆಚ್ಚಿನ ಪ್ರಯತ್ನದೊಂದಿಗೆ ಜೀವನದುದ್ದಕ್ಕೂ ಆದಾಯ ಗಳಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
ನಿಷ್ಕ್ರಿಯ ಆದಾಯವನ್ನು ಗಳಿಸುವ ಪ್ರಮುಖ ಮಾರ್ಗಗಳು ಇಲ್ಲಿವೆ
1. ಬಾಡಿಗೆ ಪ್ರಾಪರ್ಟಿಗಳಲ್ಲಿ ಹೂಡಿಕೆ ಮಾಡುವುದು
ನಿಷ್ಕ್ರಿಯ ಆದಾಯವನ್ನು ಗಳಿಸಲು ರಿಯಲ್ ಎಸ್ಟೇಟ್ ಹೂಡಿಕೆಯು ಅತ್ಯಂತ ಜನಪ್ರಿಯ ಮಾರ್ಗವಾಗಿದೆ. ಸ್ವಲ್ಪ ಹೂಡಿಕೆಯೊಂದಿಗೆ, ನೀವು ಮನೆಗಳನ್ನು, ಕಚೇರಿಗಳನ್ನು, ಅಪಾರ್ಟ್ಮೆಂಟ್ ಕಟ್ಟಡಗಳನ್ನು ಮತ್ತು ಇತರ ರೀತಿಯ ರಿಯಲ್ ಎಸ್ಟೇಟ್‌ಗಳನ್ನು ಖರೀದಿಸಬಹುದು ಮತ್ತು ಬಾಡಿಗೆಗೆ ನೀಡಬಹುದು. ನಂತರ ನೀವು ಪ್ರತಿ ತಿಂಗಳು ಬಾಡಿಗೆ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ ಮತ್ತು ಬಾಡಿಗೆದಾರರೊಂದಿಗೆ ದಿನನಿತ್ಯದ ಸಮಸ್ಯೆಗಳನ್ನು ನಿರ್ವಹಿಸಲು ಮತ್ತು ಯಾವುದೇ ರೀತಿಯ ಪಾವತಿಗಳನ್ನು ಸಂಗ್ರಹಿಸಲು ಪ್ರಾಪರ್ಟಿ ಮ್ಯಾನೇಜರ್‌ನನ್ನು ಸಹ ನೇಮಿಸಿಕೊಳ್ಳಬಹುದು.
ಹೂಡಿಕೆಯ ಅವಶ್ಯಕತೆ ಏನು? - ಬಾಡಿಗೆ ಪ್ರಾಪರ್ಟಿಗಳನ್ನು ಹೊಂದಲು, ಪ್ರಾರಂಭಿಕ ಹಂತದಲ್ಲಿ ಸ್ವಲ್ಪ ಕೆಲಸ ಮತ್ತು ಹಣಕಾಸು ಹೂಡಿಕೆಯ ಅಗತ್ಯವಿರುತ್ತದೆ.
ನೀವು ಎಷ್ಟು ಸಂಪಾದಿಸಬಹುದು? - ನೀವು ಎಷ್ಟು ಪ್ರಾಪರ್ಟಿಯನ್ನು ಹೊಂದಿದ್ದೀರಿ, ಬಾಡಿಗೆದಾರರ ವಿಧಗಳು ಮತ್ತು ಬಾಡಿಗೆ ಮೊತ್ತವನ್ನು ಅವಲಂಬಿಸಿ, ನೀವು ಬಾಡಿಗೆ ಪ್ರಾಪರ್ಟಿಗಳ ಮೂಲಕ ಗಮನಾರ್ಹ ಪ್ರಮಾಣದ ಹಣವನ್ನು ಗಳಿಸಬಹುದು.
ಏನನ್ನು ನೆನಪಿನಲ್ಲಿಡಬೇಕು? - ಪ್ರಾಪರ್ಟಿಯನ್ನು ಹೊಂದಲು ಕೆಲವು ಹಣಕಾಸಿನ ಅಪಾಯಗಳಿವೆ, ಉದಾಹರಣೆಗೆ ಬಾಡಿಗೆದಾರರನ್ನು ಹುಡುಕಲು ಸಾಧ್ಯವಾಗದೇ ಇರುವುದು ಅಥವಾ ಹೆಚ್ಚಿದ ಮಾರ್ಟ್‌ಗೇಜ್ ಅನ್ನು ಎದುರಿಸುವುದು. ಆದ್ದರಿಂದ, ನೀವು ಹೂಡಿಕೆ ಮಾಡುವ ಮೊದಲು ನಿಮ್ಮ ಪ್ರಾಪರ್ಟಿಗೆ ಸರಿಯಾದ ಬೇಡಿಕೆ ಇದೆಯೇ ಎಂದು ಖಚಿತಪಡಿಸಿಕೊಳ್ಳಿ.
2. ನಿಮ್ಮ ಮನೆಯನ್ನು ಬಾಡಿಗೆಗೆ ನೀಡಿ
ಬಾಡಿಗೆಗೆಂದೇ ಪ್ರತ್ಯೇಕ ಪ್ರಾಪರ್ಟಿಗಳಲ್ಲಿ ಹೂಡಿಕೆ ಮಾಡಲು ನಿಮಗೆ ಸಾಧ್ಯವಾಗದಿದ್ದರೆ, Airbnb ನಂತಹ ಬಾಡಿಗೆ ಕಂಪನಿಯೊಂದಿಗೆ ಪಾರ್ಟ್ನರ್‌ಶಿಪ್ ಮಾಡುವ ಮೂಲಕ, ನಿಮ್ಮ ಪ್ರಸ್ತುತ ಪ್ರಾಪರ್ಟಿಗಳನ್ನು ನೀವು ಬಾಡಿಗೆಗೆ ನೀಡಬಹುದು. ನೀವು ಹೆಚ್ಚುವರಿ ಕೊಠಡಿಗಳನ್ನು ಹೊಂದಿದ್ದರೆ ಅಥವಾ ಸ್ವಲ್ಪ ಸಮಯದವರೆಗೆ ನೀವು ಊರಿನಿಂದ ಹೊರಗಿರಬೇಕಿದ್ದರೆ, ಈ ವಿಧಾನ ಉತ್ತಮವಾಗಿ ಕೆಲಸ ಮಾಡುತ್ತದ. ಇನ್ನಷ್ಟು ಹೆಚ್ಚುವರಿ ಹಣ ಗಳಿಸಲು ನಿಮ್ಮ ಕಾರನ್ನು ಸಹ ನೀವು ಬಾಡಿಗೆಗೆ ನೀಡಬಹುದು.
ಹೂಡಿಕೆಯ ಅವಶ್ಯಕತೆ ಏನು? - ಇದಕ್ಕೆ ಕಡಿಮೆ ಹೂಡಿಕೆ ಮತ್ತು ಸ್ವಲ್ಪ ಹೆಚ್ಚುವರಿ ಕೆಲಸ ಬೇಕಾಗುತ್ತದೆ.
ನೀವು ಎಷ್ಟು ಸಂಪಾದಿಸಬಹುದು? - ನಿಮ್ಮ ಗಳಿಕೆಯನ್ನು ನಿಮ್ಮ ಪ್ರಾಪರ್ಟಿಯ ಗಾತ್ರ ಮತ್ತು ನೀವು ಪಾರ್ಟ್ನರ್ ಆಗಿರುವ ಬಾಡಿಗೆ ಕಂಪನಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಏನನ್ನು ನೆನಪಿನಲ್ಲಿಡಬೇಕು? - ಇಲ್ಲಿ ಕಡಿಮೆ ಆರ್ಥಿಕ ತೊಂದರೆಗಳಿದ್ದರೂ, ಅಪರಿಚಿತರನ್ನು ನಿಮ್ಮ ಜಾಗದಲ್ಲಿ ಉಳಿಯಲು ಬಿಡುವಾಗ ನೀವು ಯಾವಾಗಲೂ ಜಾಗರೂಕರಾಗಿರಬೇಕು.
3. ಸ್ಟಾಕ್‌ಗಳಲ್ಲಿ ಹೂಡಿಕೆ
ನೀವು ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವಾಗ, ಅವಶ್ಯವಾಗಿ ನೀವು ಕಂಪನಿಯ ಷೇರುಗಳನ್ನು ಖರೀದಿಸುತ್ತೀರಿ. ಮತ್ತು ಆ ಷೇರುಗಳ ಮೌಲ್ಯದಲ್ಲಿ ಹೆಚ್ಚಳವಾದಾಗ, ನೀವು ಕಂಪನಿಯಿಂದ ನಿಯಮಿತ ಮಧ್ಯಂತರದಲ್ಲಿ ಪಾವತಿಯನ್ನು (ಅಥವಾ ಡಿವಿಡೆಂಡ್) ಪಡೆಯುತ್ತೀರಿ. ಈ ಡಿವಿಡೆಂಡ್‌ಗಳನ್ನು ಸ್ಟಾಕ್‌ನ ಪ್ರತಿ ಷೇರಿಗೆ ಪಾವತಿಸಲಾಗಿರುವುದರಿಂದ, ನೀವು ಹೆಚ್ಚು ಷೇರುಗಳನ್ನು ಹೊಂದಿದಷ್ಟು, ನಿಮ್ಮ ಗಳಿಕೆಯು ಹೆಚ್ಚಾಗುತ್ತದೆ.
ಯಾವುದೇ ಗ್ಯಾರಂಟಿಗಳಿಲ್ಲದ ಕಾರಣ ಅನೇಕ ಜನರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಜಾಗರೂಕರಾಗಿರುತ್ತಾರೆ. ಆದರೆ, ನೀವು ನಿಮ್ಮ ಪೋರ್ಟ್‌ಫೋಲಿಯೊವನ್ನು ವಿಭಿನ್ನಗೊಳಿಸಿದರೆ ಮತ್ತು ಅಪಾಯವನ್ನು ಕಡಿಮೆ ಮಾಡಿದರೆ, ಕಾಲಾನಂತರದಲ್ಲಿ ನಿಧಾನವಾಗಿ ನಿಷ್ಕ್ರಿಯ ಆದಾಯವನ್ನು ಗಳಿಸಲು ಇದು ಉತ್ತಮ ಮಾರ್ಗವಾಗಿದೆ.
ಹೂಡಿಕೆಯ ಅವಶ್ಯಕತೆ ಏನು? - ನೀವು ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದಾಗ, ಖರೀದಿ ಮಾಡುವುದಕ್ಕೆ ಸರಿಯಾದ ಸ್ಟಾಕ್‌ಗಳನ್ನು ಹುಡುಕಲು ನೀವು ಪ್ರಾರಂಭದಲ್ಲಿ ಸ್ವಲ್ಪ ಕೆಲಸವನ್ನು ಮಾಡಬೇಕಾಗಬಹುದು. ಇದರ ಹೊರತಾಗಿ, ನೀವು ಮುಂಗಡ ಹಣದ ಹೂಡಿಕೆಯನ್ನೂ ಮಾಡಬೇಕಾಗುತ್ತದೆ.
ನೀವು ಎಷ್ಟು ಸಂಪಾದಿಸಬಹುದು? - ಲಾಭದಾಯಕ ಷೇರುಗಳು ನಿಮಗೆ ಹೆಚ್ಚಿನ ಡಿವಿಡೆಂಡ್‌ಗಳನ್ನು ನೀಡುತ್ತದೆ ಮತ್ತು ಶಾಶ್ವತ ಸಂಪತ್ತನ್ನು ನಿರ್ಮಿಸಲು ಇದು ಉತ್ತಮ ಮಾರ್ಗವಾಗಿದೆ.
ಏನನ್ನು ನೆನಪಿನಲ್ಲಿಡಬೇಕು? - ಕಂಪನಿಗಳು ಉತ್ತಮವಾಗಿ ಕಾರ್ಯನಿರ್ವಹಿಸದೇ ಇದ್ದಾಗ ಅಥವಾ ಅನಿಶ್ಚಿತತೆಯ ಸಮಯದಲ್ಲಿ, ನಿಮ್ಮ ಷೇರುಗಳ ಮೌಲ್ಯ ಕಡಿಮೆಯಾಗಬಹುದೆಂಬ ಕಾರಣಕ್ಕೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಯಾವಾಗಲೂ ಸ್ವಲ್ಪ ಅಪಾಯವಿರುತ್ತದೆ. ಆದರೆ, ಆರ್ಥಿಕವಾಗಿ ಸ್ಥಿರವಾಗಿರುವ ಕಂಪನಿಗಳಿಂದ ಎಕ್ಸ್‌ಚೇಂಜ್-ಟ್ರೇಡೆಡ್ ಫಂಡ್‌ಗಳು (ಇಟಿಎಫ್‌ಗಳು) ಅಥವಾ ಹೈ-ಡಿವಿಡೆಂಡ್ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಈ ಅಪಾಯವನ್ನು ಕಡಿಮೆ ಮಾಡಬಹುದು.
4. ಡಿಜಿಟಲ್ ಉತ್ಪನ್ನಗಳನ್ನು ಮಾರಾಟ ಮಾಡುವುದು
ಡಿಜಿಟಲ್ ಉತ್ಪನ್ನಗಳು ಎಂದರೆ ಡೌನ್‌ಲೋಡ್ ಮಾಡಬಹುದಾದ ಅಥವಾ ಸ್ಟ್ರೀಮ್ ಮಾಡಬಹುದಾದ ಮೀಡಿಯಾ ವಿಧಗಳಾಗಿವೆ. ಇವುಗಳಲ್ಲಿ ಟೆಂಪ್ಲೇಟ್‌ಗಳು, ಪ್ಲಗ್-ಇನ್‌ಗಳು, ಪಿಡಿಎಫ್ ಗಳು, ಪ್ರಿಂಟ್ ಮಾಡಬಹುದಾದವುಗಳು, ಇ-ಪುಸ್ತಕಗಳು, ಆಡಿಯೋ ಅಥವಾ ವಿಡಿಯೋ ಕೋರ್ಸ್‌ಗಳು ಅಥವಾ ಯುಎಕ್ಸ್ ಕಿಟ್‌ಗಳು ಸೇರಿವೆ. ಈ ಉತ್ಪನ್ನಗಳ ವಿಷಯವು ರೆಸಿಪಿ ಕಲೆಕ್ಷನ್‌ಗಳಿಂದ ಹಿಡಿದು ಡಿಸೈನ್ ಟೆಂಪ್ಲೇಟ್‌ಗಳು ಮತ್ತು ವೈರ್‌ಫ್ರೇಮ್‌ಗಳವರೆಗೆ ಹೆಚ್ಚು ಬದಲಾಗಬಹುದು. ಒಮ್ಮೆ ಈ ಉತ್ಪನ್ನವನ್ನು ರಚಿಸಿದ ನಂತರ, ಉಡೆಮಿ, ಸ್ಕಿಲ್‌ಶೇರ್, ಅಥವಾ ಕೋರ್ಸ್ಎರಾ ನಂತಹ ಸೈಟ್‌ಗಳ ಮೂಲಕ ಅವುಗಳನ್ನು ವಿತರಿಸುವ ಮತ್ತು ಮಾರಾಟ ಮಾಡುವ ಮೂಲಕ ನೀವು ನಿಷ್ಕ್ರಿಯ ಆದಾಯವನ್ನು ಗಳಿಸಬಹುದು.
ಹೂಡಿಕೆಯ ಅವಶ್ಯಕತೆ ಏನು? - ಇತರರಿಗೆ ಮಾರಾಟ ಮಾಡುವುದಕ್ಕಾಗಿ ನಿಮ್ಮ ಬಳಿ ಉತ್ಪನ್ನವನ್ನು ಇರಬೇಕೆಂದರೆ, ಉತ್ಪನ್ನವನ್ನು ರಚಿಸುವ ಪ್ರಾರಂಭಿಕ ಹಂತದಲ್ಲಿ ನೀವು ಸ್ವಲ್ಪ ಕೆಲಸವನ್ನು ಮಾಡಬೇಕಾಗುತ್ತದೆ.
ನೀವು ಎಷ್ಟು ಸಂಪಾದಿಸಬಹುದು? - ಡಿಜಿಟಲ್ ಉತ್ಪನ್ನಗಳು ಹೆಚ್ಚಿನ ಲಾಭಾಂಶವನ್ನು ಹೊಂದಿವೆ, ಏಕೆಂದರೆ ನೀವು ಪ್ರಾಪರ್ಟಿಯನ್ನು ಒಮ್ಮೆ ಮಾತ್ರ ಮಾಡಬೇಕಾಗಿದೆ, ಆದರೆ ನೀವದನ್ನು ಆನ್‌ಲೈನ್‌ನಲ್ಲಿ ಎಷ್ಟು ಬಾರಿ ಬೇಕಾದರೂ ಮಾರಾಟ ಮಾಡಬಹುದು.
ಏನನ್ನು ನೆನಪಿನಲ್ಲಿಡಬೇಕು? - ಇಂಟರ್ನೆಟ್‌ನಲ್ಲಿ ಸಾಕಷ್ಟು ಉತ್ಪನ್ನಗಳು ಇರುವುದರಿಂದ, ಅದರಿಂದ ಉತ್ತಮ ಹಣವನ್ನು ಗಳಿಸಲು ನೀವು ವಿಭಿನ್ನವಾದದ್ದನ್ನು ಅಥವಾ ನಿರ್ದಿಷ್ಟ ಮಾರುಕಟ್ಟೆಯನ್ನು ಗುರಿಯಾಗಿಸುವ ಏನನ್ನಾದರೂ ರಚಿಸಬೇಕಾಗಬಹುದು. ನಿಮ್ಮ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡಬೇಕೆಂಬುದನ್ನು ಸಹ ನೀವು ತಿಳಿದುಕೊಳ್ಳಬೇಕು.
5. ಅಫಿಲಿಯೇಟ್ ಮಾರ್ಕೆಟಿಂಗ್ ಸ್ಕೀಮ್‌ಗಳು
ಅಫಿಲಿಯೇಟ್ ಮಾರ್ಕೆಟಿಂಗ್ ಎನ್ನುವುದು, ತಮ್ಮ ಉತ್ಪನ್ನಗಳ ಬಗ್ಗೆ ಪ್ರಚಾರ ಮಾಡಲು ಮಾರ್ಗಗಳನ್ನು ಹುಡುಕುತ್ತಿರುವ ಬ್ರ್ಯಾಂಡ್‌ಗಳಿಗೆ ಸಹಾಯ ಮಾಡುವ ಒಂದು ಮಾರ್ಗವಾಗಿದೆ. ನೀವು ಅಮೆಜಾನ್ ನಂತಹ ನಿರ್ದಿಷ್ಟ ಬ್ರ್ಯಾಂಡ್ ಅಥವಾ ಕಂಪನಿಗೆ ಅಫಿಲಿಯೇಟ್ ಆಗುತ್ತೀರಿ ಮತ್ತು ನಿಮ್ಮ ಸೈಟ್ ಅಥವಾ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಅವರ ಉತ್ಪನ್ನಗಳ ಲಿಂಕ್ ಹಾಕುವುದರ ಮೂಲಕ, ನಿಮ್ಮ ಫಾಲೋವರ್‌ಗಳಿಗೆ ಅಥವಾ ಓದುಗರಿಗೆ ನೀವು ಆ ಉತ್ಪನ್ನಗಳ ಬಗ್ಗೆ ಪ್ರಚಾರ ಮಾಡುತ್ತೀರಿ.
ನಂತರ, ಉತ್ಪನ್ನಗಳ ಮಾರಾಟಕ್ಕೆ ಸಹಾಯ ಮಾಡುವ ಪ್ರತಿ ಮಾರಾಟದಿಂದ, ಲಾಭದ ತುಣುಕನ್ನು ಪಡೆಯುವ ಮೂಲಕ ನೀವು ಅವರ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಪಡೆಯುವ ಕಮಿಷನ್‌ಗಳಿಂದ ನಿಷ್ಕ್ರಿಯ ಆದಾಯವನ್ನು ಗಳಿಸಬಹುದು. ಹೀಗಾಗಿ, ನೀವು ನೀಡಿದ ನಿರ್ದಿಷ್ಟ ಲಿಂಕ್ ಅನ್ನು ಬಳಸಿಕೊಂಡು ಹೆಚ್ಚಿನ ಜನರು ಈ ಉತ್ಪನ್ನಗಳನ್ನು ಖರೀದಿಸಿದಷ್ಟು, ನೀವು ಹೆಚ್ಚು ಹಣವನ್ನು ಪಡೆಯುತ್ತೀರಿ.
ಹೂಡಿಕೆಯ ಅವಶ್ಯಕತೆ ಏನು? - ಇದು ಕಡಿಮೆ ಹಣಕಾಸು ಹೂಡಿಕೆಯನ್ನು ಒಳಗೊಳ್ಳಬಹುದಾದರೂ, ವೆಬ್‌ಸೈಟ್, ಬ್ಲಾಗ್ ಅಥವಾ ಇಮೇಲ್ ಲಿಸ್ಟ್‌ಗಳ ಮೂಲಕ ಬೆಳೆಯುತ್ತಿರುವ ದೊಡ್ಡ ಸೋಷಿಯಲ್ ಮೀಡಿಯಾವನ್ನು ನಿರ್ಮಿಸಲು, ಪ್ರಾರಂಭಿಕ ಹಂತದಲ್ಲಿ ನೀವು ನಿಮ್ಮ ಅಮೂಲ್ಯ ಸಮಯವನ್ನು ನೀಡಬೇಕಾಗುತ್ತದೆ.
ನೀವು ಎಷ್ಟು ಸಂಪಾದಿಸಬಹುದು? - ಅಫಿಲಿಯೇಟ್ ಮಾರ್ಕೆಟಿಂಗ್ ಒಂದು ಬೆಳೆಯುತ್ತಿರುವ ಉದ್ಯಮವಾಗಿದ್ದು, ಹೀಗಾಗಿ ಹೆಚ್ಚಿನ ಗಳಿಕೆಗೆ ಇಲ್ಲಿ ಸಾಕಷ್ಟು ಅವಕಾಶವಿದೆ.
ಏನನ್ನು ನೆನಪಿನಲ್ಲಿಡಬೇಕು? - ಅಫಿಲಿಯೇಟ್ ಪ್ರೋಗ್ರಾಮ್‌ಗೆ ಸೇರಲು ಕಡಿಮೆ ವೆಚ್ಚ ಅಥವಾ ಕಡಿಮೆ ಅಪಾಯವಿದೆ, ಮತ್ತು ನಿಮ್ಮ ವೀಕ್ಷಕರಿಗೆ ಹೊಸ ಉತ್ಪನ್ನಗಳನ್ನು ಪ್ರಚಾರ ಮಾಡುವ ಮೂಲಕ ನೀವು ಸುಲಭವಾಗಿ ಅಳೆಯಬಹುದು
6. ಪಿ.ಓ.ಎಸ್.ಪಿ(POSP) ಇನ್ಶೂರೆನ್ಸ್ ಏಜೆಂಟ್ ಆಗಿ
ಪಿ.ಓ.ಎಸ್.ಪಿ ಅಥವಾ ಪಾಯಿಂಟ್ ಆಫ್ ಸೇಲ್ಸ್‌ಪರ್ಸನ್ ಎಂದರೆ ಇನ್ಶೂರೆನ್ಸ್ ಏಜೆಂಟ್. ಅವರು ಗ್ರಾಹಕರಿಗೆ, ಅವರ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಲು ಇನ್ಶೂರೆನ್ಸ್ ಕಂಪನಿಗಳೊಂದಿಗೆ ಕೆಲಸ ಮಾಡುತ್ತಾರೆ. ಇದಕ್ಕೆ ಆರಂಭಿಕ ಹಂತದಲ್ಲಿ ಸಕ್ರಿಯ ತೊಡಗುವಿಕೆಯ ಅಗತ್ಯವಿದ್ದು, ಗ್ರಾಹಕರು ತಮ್ಮ ಪಾಲಿಸಿಗಳನ್ನು ನವೀಕರಿಸಿದಾಗ ನೀವು ನಿಷ್ಕ್ರಿಯ ಆದಾಯವನ್ನು ಸಹ ಗಳಿಸಬಹುದು.
ಪಿ.ಓ.ಎಸ್.ಪಿ ಏಜೆಂಟ್ ಆಗುವ ಹಂತಗಳು, ಅವಶ್ಯಕತೆಗಳು ಮತ್ತು ನಿಯಮಗಳ ಕುರಿತು ನೀವು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.
ಹೂಡಿಕೆಯ ಅವಶ್ಯಕತೆ ಏನು? - ನೀವು ಆರಂಭಿಕ ಹಂತದಲ್ಲಿಯೇ ಕಷ್ಟಪಟ್ಟು ಕೆಲಸ ಮಾಡಿದರೆ ಮತ್ತು ಉತ್ತಮ ಗ್ರಾಹಕರ ಬಳಗವನ್ನು ನಿರ್ಮಿಸಿದರೆ, ಆಗ ನೀವು ಕಡಿಮೆ ಪ್ರಯತ್ನದಲ್ಲಿ ಪಾಲಿಸಿಗಳನ್ನು ನವೀಕರಿಸುತ್ತೀರಿ ಮತ್ತು ನಿಷ್ಕ್ರಿಯ ಆದಾಯವನ್ನು ಗಳಿಸುತ್ತೀರಿ.
ನೀವು ಎಷ್ಟು ಸಂಪಾದಿಸಬಹುದು? - ನಿಮ್ಮ ಆದಾಯವು ಕಮಿಷನ್ ಅನ್ನು ಆಧರಿಸಿರುತ್ತದೆ. ಆದ್ದರಿಂದ, ನೀವು ಎಷ್ಟು ಹೆಚ್ಚು ಪಾಲಿಸಿಗಳನ್ನು ಮಾರಾಟ ಮಾಡುತ್ತೀರೋ, ಅಷ್ಟೇ ವೇಗವಾಗಿ ನೀವು ಹೆಚ್ಚಿನ ಆದಾಯವನ್ನು ಗಳಿಸಬಹುದು.
ಏನನ್ನು ನೆನಪಿನಲ್ಲಿಡಬೇಕು? - ಇನ್ಶೂರೆನ್ಸ್ ಪಿ.ಓ.ಎಸ್.ಪಿ ಆಗಲು ಯಾವುದೇ ತೊಂದರೆಗಳಿಲ್ಲ. ಸ್ಮಾರ್ಟ್‌ಫೋನ್ ಮತ್ತು ಉತ್ತಮ ಇಂಟರ್ನೆಟ್ ಸಂಪರ್ಕ ಇರುವವರೆಗೆ, ಮಾರಾಟ ಮಾಡುವ ಆತ್ಮವಿಶ್ವಾಸ ಹೊಂದಿರುವ ಯಾರಾದರೂ ಪಿ.ಓ.ಎಸ್.ಪಿ ಏಜೆಂಟ್ ಆಗಬಹುದು. ಆದಾಗ್ಯೂ, ನೀವು ಸೇರಲಿರುವ ಕಂಪನಿಯ ಬಗ್ಗೆ ತಿಳಿದುಕೊಳ್ಳುವುದು ಮತ್ತು ಯಾವುದೇ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಎಲ್ಲವನ್ನೂ ಸರಿಯಾಗಿ ಓದುವುದು, ಇವೆರಡನ್ನೂ ನೆನಪಿಟ್ಟುಕೊಳ್ಳುವುದು ಒಳ್ಳೆಯದು.
ನಿಷ್ಕ್ರಿಯ ಆದಾಯವನ್ನು ಗಳಿಸುವ ಬಗ್ಗೆ ಹೊಸಬರು ತಿಳಿದುಕೊಳ್ಳಬೇಕಾದ ವಿಷಯಗಳು
ಸ್ವಲ್ಪ ಹೆಚ್ಚು ಹಣವನ್ನು ಗಳಿಸಲು ಬಯಸುವ ಅನೇಕ ಜನರು ಪಾರ್ಟ್-ಟೈಮ್ ಜಾಬ್, ಫ್ರೀಲ್ಯಾನ್ಸ್ ವರ್ಕ್ ಅಥವಾ ಇತರ ಕೆಲಸಗಳಿಗೆ ಮರಳುತ್ತಾರೆ. ಆದಾಗ್ಯೂ, ಇವುಗಳಿಗೆ ನೀವು ನಿರಂತರವಾಗಿ ಮತ್ತು ಸಕ್ರಿಯವಾಗಿ ಶ್ರಮ ಪಡಬೇಕಾಗುತ್ತದೆ. ಆದ್ದರಿಂದ, ನೀವು ಹೆಚ್ಚಿನ ಸಮಯ ಕಳೆಯುವುದನ್ನು ನಿಲ್ಲಿಸುವುದು ಹಾಗೂ ನಿಷ್ಕ್ರಿಯ ಆದಾಯವನ್ನು ಗಳಿಸುವುದು ಹೇಗೆ ಎಂಬುದನ್ನು ನೋಡುವುದೇ ಉತ್ತಮ ಆಯ್ಕೆಯಾಗಿದೆ.
ನೀವು ನಿಷ್ಕ್ರಿಯ ಆದಾಯಕ್ಕೆ ಹೊಸಬರಾಗಿದ್ದರೆ, ಹೂಡಿಕೆ ಮತ್ತು ಹಣ ಗಳಿಸುವ ಮೊದಲು ನೀವು ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳು ಇಲ್ಲಿವೆ.
ಇದು "ಬೇಗ-ಶ್ರೀಮಂತರಾಗಿ" ಸ್ಕೀಮ್ ಅಲ್ಲ - ನಿಷ್ಕ್ರಿಯ ಆದಾಯದೊಂದಿಗೆ, ನೀವು ಹೆಚ್ಚು ಸಕ್ರಿಯ ಕೆಲಸವಿಲ್ಲದೆಯು ಹಣ ಗಳಿಸಬಹುದು, ಆದರೆ ನೀವು ಯಾವುದಕ್ಕೂ, ಏನನ್ನೂ ಪಡೆಯುತ್ತಿಲ್ಲ. ಈಗಲೂ ನೀವು, ಕೆಲಸ ಅಥವಾ ಹೂಡಿಕೆಗಳನ್ನು ಮುಂಗಡವಾಗಿ ಇರಿಸಬೇಕಾಗುತ್ತದೆ, ಮತ್ತು ಇದು ಆದಾಯವನ್ನು ಉತ್ಪಾದಿಸಿ, ಡಿವಿಡೆಂಡ್, ಬಡ್ಡಿಯನ್ನು ನೀಡುತ್ತ ಅಥವಾ ಮೌಲ್ಯದಲ್ಲಿ ಏರಿಕೆಯಾಗಿ, ಕಾಲಾನಂತರದಲ್ಲಿ ನಿಮಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.
ಈಗಲೂ ನೀವು ಸ್ವಲ್ಪ ಹೆಚ್ಚಿನ ಶ್ರಮವನ್ನು ಹಾಕಬೇಕಾಗಿದೆ - ನೀವು ಪ್ರಾರಂಭಿಕ ಹಂತದಲ್ಲಿ ಹೆಚ್ಚಿನ ಕೆಲಸ ಮತ್ತು ಹೂಡಿಕೆಯನ್ನು ಮಾಡಿದರೂ, ಈಗಲೂ ನೀವು ಸ್ವಲ್ಪ ಹೆಚ್ಚಿನ ಶ್ರಮವನ್ನು ಹಾಕಬೇಕಾಗಬಹುದು. ನಿಷ್ಕ್ರಿಯ ಆದಾಯವನ್ನು ನಿರಂತರವಾಗಿ ಬರುವಂತೆ ಮಾಡಲು ನಿಮ್ಮ ಉತ್ಪನ್ನವನ್ನು ಅಪ್ಡೇಟ್ ಮಾಡುವುದು, ನಿಮ್ಮ ಬಾಡಿಗೆ ಪ್ರಾಪರ್ಟಿಯನ್ನು ಉತ್ತಮ ಸ್ಥಿತಿಯಲ್ಲಿ ಇಡುವುದು ಅಥವಾ ನಿಮ್ಮ ಸ್ಟಾಕ್‌ಗಳು ಮತ್ತು ಹೂಡಿಕೆಗಳನ್ನು ಚೆಕ್ ಮಾಡುವುದು ಇತ್ಯಾದಿಗಳನ್ನು ಇದು ಒಳಗೊಂಡಿರಬಹುದು.
ನಿಷ್ಕ್ರಿಯ ಆದಾಯವು ತೆರಿಗೆಗೆ ಒಳಪಡುತ್ತದೆ - ಈ ರೀತಿಯ ಆದಾಯವಕ್ಕೆ ಸಕ್ರಿಯ ಆದಾಯಕ್ಕಿಂತ ವಿಭಿನ್ನವಾದ ತೆರಿಗೆಯನ್ನು ವಿಧಿಸಲಾಗುತ್ತದೆ (ನಿಮ್ಮ ಸಂಬಳದಂತೆ) ಅದು ತೆರಿಗೆಗಳಿಗೆ ಒಳಪಟ್ಟಿರುತ್ತದೆ.
ಪದೇ ಪದೇ ಕೇಳಲಾದ ಪ್ರಶ್ನೆಗಳು
ನಿಷ್ಕ್ರಿಯ ಆದಾಯ ಎಂದರೇನು?
ನಿಷ್ಕ್ರಿಯ ಆದಾಯವು ಒಂದು ರೀತಿಯ ಆದಾಯವಾಗಿದ್ದು, ಇದನ್ನು ಗಳಿಸಲು ಮತ್ತು ನಿರ್ವಹಣೆ ಮಾಡಲು ಕನಿಷ್ಠ ಪ್ರಯತ್ನದ ಅಗತ್ಯವಿರುತ್ತದೆ. ನೀವು ಬಾಡಿಗೆ ಪ್ರಾಪರ್ಟಿಯಿಂದ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ, ಆನ್‌ಲೈನ್ ಉತ್ಪನ್ನಗಳನ್ನು ಮಾರಾಟ ಮಾಡುವುದು ಮುಂತಾದ ಇತರ ಉದ್ಯಮಗಳಿಂದ ಹಣವನ್ನು ಗಳಿಸುತ್ತೀರಿ.
ನಿಷ್ಕ್ರಿಯ ಆದಾಯವನ್ನು ಪಡೆಯುವುದು ನಿಮಗೆ ಸೂಕ್ತವೇ?
ಹಲವಾರು ಜನರು ಸಕ್ರಿಯ ಆದಾಯಕ್ಕಾಗಿ ಕೆಲವು ಮೂಲಗಳನ್ನು ಹೊಂದಿದ್ದಾರೆ, ಅಲ್ಲಿ ನೀವು ಹಣ ಗಳಿಸಲು ಸ್ವಲ್ಪ ಪ್ರಯತ್ನವನ್ನು ಪಡುತ್ತೀರಿ. ಅಂತಹ ಸಂದರ್ಭಗಳಲ್ಲಿ, ಆದಾಯವನ್ನು ಗಳಿಸಲು ನೀವು ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ. ಒಂದುವೇಳೆ ನೀವು ಕೆಲಸ ನಿಲ್ಲಿಸಿದರೆ, ನಿಮ್ಮ ಆದಾಯವೂ ನಿಲ್ಲುತ್ತದೆ. ಹೀಗಾಗಿ, ನಿಮಗೆ ನಿಮ್ಮ ಸಮಯವೇ ಅಕ್ಷರಶಃ ಹಣವಾಗುತ್ತದೆ.
ಮತ್ತೊಂದೆಡೆ, ನಿಷ್ಕ್ರಿಯ ಆದಾಯ ಗಳಿಸಲು ನೀವು ಸಕ್ರಿಯವಾಗಿ ಕೆಲಸ ಮಾಡುವ ಅಗತ್ಯವಿಲ್ಲ. ನಿಮ್ಮ ಕೆಲಸ ಅಥವಾ ಹೂಡಿಕೆಯ ಆರಂಭಿಕ ಅವಧಿಯು, ನಿಮಗೆ ತಿಂಗಳುಗಳವರೆಗೆ ಅಥವಾ ವರ್ಷಗಳವರೆಗೆ ಹಣ ಬರುವಂತೆ ಮಾಡುತ್ತದೆ. ಇದು ನಿಮಗೆ ಕೆಲ ಆರ್ಥಿಕ ಭದ್ರತೆಯನ್ನು ಒದಗಿಸಲು ಸಹಾಯ ಮಾಡುತ್ತದೆ.
ನಿಷ್ಕ್ರಿಯ ಆದಾಯದ ಪ್ರಯೋಜನಗಳೇನು?
ನಿಷ್ಕ್ರಿಯ ಆದಾಯವು ನೀವು ನೀಡುವ ಸ್ವಲ್ಪ ಸಮಯ ಮತ್ತು ಹಾಕುವ ಶ್ರಮಕ್ಕೆ ಹೆಚ್ಚುವರಿ ಆದಾಯವನ್ನು ಒದಗಿಸುತ್ತದೆ. ಇದು ನಿಮ್ಮ ವೈಯಕ್ತಿಕ ಹಣಕಾಸು ಸುಧಾರಣೆಗೆ ಉತ್ತಮ ಮಾರ್ಗವಾಗಿದೆ ಮತ್ತು ಭವಿಷ್ಯದಲ್ಲಿ ನಿಮ್ಮ ಹಣಕಾಸಿನ ಸ್ಥಿರತೆಯ ಬಗ್ಗೆ ವಿಶ್ವಾಸವನ್ನು ಹೊಂದಲು ಸಹಾಯ ಮಾಡುತ್ತದೆ.
ಹೆಚ್ಚುವರಿಯಾಗಿ, ಇದು ನಿಮಗೆ ಹೆಚ್ಚಿನ ಸಮಯವನ್ನು ಹೊಂದಲು, ಒತ್ತಡ ಮತ್ತುಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಏಕೆಂದರೆ ಇನ್ನು ಮುಂದೆ ನೀವು ನಿಮ್ಮ ಸಮಯವನ್ನು, ಹಣಕ್ಕಾಗಿ ವ್ಯಾಪಾರ ಮಾಡಬೇಕಾಗಿಲ್ಲ.
ನಿಷ್ಕ್ರಿಯ ಆದಾಯದ ಮಿತಿಗಳು ಯಾವುವು?
ನಿಷ್ಕ್ರಿಯ ಆದಾಯವನ್ನು ಗಳಿಸುವ ವಿಷಯಕ್ಕೆ ಬಂದಾಗ, ಇದು ರಾತ್ರೋರಾತ್ರಿ ಶ್ರೀಮಂತರಾಗುವ ಕಥೆಯಲ್ಲ. ನೀವು ಹೆಚ್ಚು ದೀರ್ಘಾವಧಿಯ ದೃಷ್ಟಿಕೋನವನ್ನು ಹೊಂದಬೇಕಾಗುತ್ತದೆ. ನೀವು ಆರಂಭದಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡುತ್ತಿರುವುದರಿಂದ, ಇದು ಅಲ್ಪಾವಧಿಯಲ್ಲಿ ಹೆಚ್ಚಿನ ಆದಾಯವನ್ನು ಒದಗಿಸದೇ ಇರಬಹುದು, ಆದರೆ ಇದು ಕಾಲಾನಂತರದಲ್ಲಿ ಹಣವನ್ನು ಗಳಿಸುತ್ತದೆ.
ನೀವು ಎಷ್ಟು ನಿಷ್ಕ್ರಿಯ ಆದಾಯವನ್ನು ಗಳಿಸಬಹುದು?
ನಿಷ್ಕ್ರಿಯ ಆದಾಯದೊಂದಿಗೆ ನೀವು ಹೆಚ್ಚು ಬಯಸಿದಷ್ಟು ಹೆಚ್ಚು, ಅಥವಾ ಕಡಿಮೆ ಬಯಸಿದಷ್ಟು ಕಡಿಮೆ ಗಳಿಸಬಹುದು. ಇದು ಗಂಟೆಗಳ ಸಂಖ್ಯೆಯನ್ನು, ಆರಂಭಿಕ ಹಂತದ ಪ್ರಯತ್ನವನ್ನು ಮತ್ತು ನಿಮಗೆ ಆರಂಭದಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವ ಬಂಡವಾಳವನ್ನು ಅವಲಂಬಿಸಿರುತ್ತದೆ. ಇದು ನೀವು ಆಯ್ಕೆ ಮಾಡುವ ನಿಷ್ಕ್ರಿಯ ಆದಾಯದ ವಿಧವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು, ಬಾಡಿಗೆ ಪ್ರಾಪರ್ಟಿಗಳನ್ನು ಖರೀದಿಸುವುದು ಇತ್ಯಾದಿ.