Zero
Documentation
Quick Claim
Process
Affordable
Premium
Terms & conditions apply*,Terms & conditions apply*
Zero
Documentation
Quick Claim
Process
Affordable
Premium
ಹೋಮ್‌ಲೋನ್‌ಗಾಗಿ ಹೋಮ್ ಇನ್ಶೂರೆನ್ಸ್
ಹೋಮ್‌ಲೋನ್‌ಗಾಗಿ ಹೋಮ್ ಇನ್ಶೂರೆನ್ಸ್ ಎಂದರೇನು?
ಹೋಮ್‌ಲೋನ್‌ಗಾಗಿ ಹೋಮ್ ಇನ್ಶೂರೆನ್ಸ್ ಒಂದು ದೀರ್ಘಾವಧಿಯ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿ ಆಗಿದ್ದು, ಇದರಲ್ಲಿ ಇನ್ಶೂರರ್ ಮನೆ ಮತ್ತು ಅದರ ವಸ್ತುಗಳಿಗೆ ಕವರೇಜ್ ಒದಗಿಸುತ್ತಾರೆ. ಬೆಂಕಿ, ಪ್ರವಾಹ, ಚಂಡಮಾರುತ ಇತ್ಯಾದಿ ಕಾರಣಗಳಿಂದ ಮನೆಗಳಿಗೆ ಡ್ಯಾಮೇಜ್ ಆದಾಗ ಮನೆಮಾಲೀಕರಿಗೆ ಆರ್ಥಿಕ ಕವರೇಜ್ ಅನ್ನು ಒದಗಿಸುವ ಭರವಸೆಯನ್ನು ಡಿಜಿಟ್ನ ಹೋಮ್ ಇನ್ಶೂರೆನ್ಸ್ ಪಾಲಿಸಿ ಒದಗಿಸುತ್ತದೆ.
ಹೋಮ್ ಇನ್ಶೂರೆನ್ಸ್ ಪಾಲಿಸಿ ಪಡೆಯುವುದು ಯಾಕೆ ಅವಶ್ಯ?
ಮನೆ ಅಥವಾ ಅದರ ವಸ್ತುಗಳಿಗೆ ಯಾವುದೇ ಡ್ಯಾಮೇಜ್ ಉಂಟಾದಾಗ ಹೋಮ್ ಇನ್ಶೂರೆನ್ಸ್ ಒದಗಿ ಬರುವುದರಿಂದ ಈ ಪಾಲಿಸಿ ಪಡೆಯುವುದು ಅತ್ಯವಶ್ಯವಾಗಿದೆ. ಡ್ಯಾಮೇಜ್ ಕಾರಣದಿಂದ ಉಂಟಾಗುವ ನಷ್ಟವನ್ನು ಆರ್ಥಿಕವಾಗಿ ಕವರ್ ಮಾಡುವ ಭರವಸೆಯನ್ನು ಈ ಪಾಲಿಸಿ ಒದಗಿಸುತ್ತದೆ. ಅದರೊಂದಿಗೆ, ಸಾಲದಾತನಿಗೆ ಆ ಹೋಮ್ ಲೋನ್ ಕೆಟ್ಟಸಾಲವಾಗಿ ಮಾರ್ಪಡದಂತೆ ನೋಡಿಕೊಳ್ಳುತ್ತದೆ.
ಹೋಮ್ ಲೋನ್ ಪಡೆಯುವಾಗ ಹೋಮ್ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯವೇ?
ಹೋಮ್ ಇನ್ಶೂರೆನ್ಸ್ ಪಾಲಿಸಿ ಪಡೆಯುವುದು ಕಡ್ಡಾಯವಲ್ಲ. ಆದಾಗ್ಯೂ, ಆರ್ಥಿಕ ಹಿತಾಸಕ್ತಿಯ ಕಾರಣದಿಂದ ಪಾಲಿಸಿ ಪಡೆಯುವುದಕ್ಕೆ ಸಲಹೆ ನೀಡಬಹುದು. ನೀವು ಈಗಾಗಲೇ ನಿಮ್ಮ ಕನಸಿನ ಮನೆಯನ್ನು ಖರೀದಿ ಮಾಡುವುದಕ್ಕಾಗಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿರುವುದರಿಂದ ಸಣ್ಣ ಮೊತ್ತದ ಪ್ರೀಮಿಯಂ ಪಾವತಿಸುವ ಮೂಲಕ ಯಾವುದೇ ಡ್ಯಾಮೇಜ್ ಆದ ಸಂದರ್ಭದಲ್ಲಿ ನೀವು ನಿಮ್ಮ ಆಸ್ತಿ ಮತ್ತು ಅದರ ವಸ್ತುಗಳನ್ನು ರಕ್ಷಿಸಿಕೊಳ್ಳಬಹುದು.
ಹೋಮ್ ಲೋನ್ ತೆಗೆದುಕೊಳ್ಳುವಾಗ ಹೋಮ್ ಇನ್ಶೂರೆನ್ಸ್ ಪಡೆಯುವುದು ಹೇಗೆ ಪ್ರಯೋಜನಕಾರಿ?
ಹೋಮ್ ಲೋನ್ ಪಡೆಯುವುದು ಒಂದು ದೊಡ್ಡ ಬದ್ಧತೆಯಾಗಿದ್ದು, ನಿಮ್ಮ ಆದಾಯದ ಬಹುಪಾಲು ದೀರ್ಘಾವಧಿಯವರೆಗೆ ಸಾಲ ತೀರಿಸುವುದಕ್ಕೆ ಹೋಗುತ್ತದೆ. ಹೋಮ್ ಇನ್ಶೂರೆನ್ಸ್ ಪಾಲಿಸಿ ಸೂಕ್ತ ಹೇಗೆ ಒದಗಿಬರುತ್ತದೆ ಎಂಬ ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ -
- ಇನ್ಶೂರರ್ ಪ್ರಾಪರ್ಟಿಯನ್ನು ಕವರ್ ಮಾಡುವುದರಿಂದ ನಿಮ್ಮ ಕುಟುಂಬ ಮತ್ತು ಅವಲಂಬಿತರನ್ನು ಅದು ರಕ್ಷಿಸುತ್ತದೆ.
- ಶಾಶ್ವತ ಅಂಗವೈಕಲ್ಯ, ತೀವ್ರ ಅನಾರೋಗ್ಯ ಅಥವಾ ಅನಿರೀಕ್ಷಿತ ಕೆಲಸ ನಷ್ಟ ಸಂದರ್ಭದಲ್ಲಿ ರಕ್ಷಣೆಗೆ ಬರುವ ಆ್ಯಡ್-ಆನ್ ಕವರ್ ಗಳನ್ನೂ ನೀವು ಆಯ್ಕೆ ಮಾಡಿಕೊಳ್ಳಬಹುದು.
ಹೋಮ್ ಇನ್ಶೂರೆನ್ಸ್ ಮತ್ತು ಹೋಮ್ ಲೋನ್ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸಗಳು
ಹೋಮ್ ಇನ್ಶೂರೆನ್ಸ್ ಮತ್ತು ಹೋಮ್ ಲೋನ್ ಇನ್ಶೂರೆನ್ಸ್ ವಿಚಾರದ ಕುರಿತಾಗಿ ನಾವು ಮಾತನಾಡುವಾಗ, ಅವೆರಡರ ಮಧ್ಯೆ ಹಲವು ವ್ಯತ್ಯಾಸಗಳಿರುವುದು ಗಮನಿಸಬೇಕು. ಈ ಕೆಳಗಿನ ಟೇಬಲ್ ಮೂಲಕ ಅವುಗಳ ಕಡೆಗೆ ಗಮನ ಹರಿಸೋಣ:
ಹೋಮ್ ಇನ್ಶೂರೆನ್ಸ್ |
ಹೋಮ್ ಲೋನ್ ಇನ್ಶೂರೆನ್ಸ್ |
ಬೆಂಕಿ, ಭೂಕಂಪ, ಪ್ರವಾಹ, ಕಳ್ಳತನ ಇತ್ಯಾದಿ ದುರ್ಘಟನೆಗಳು ನಡೆದಾಗ ಮನೆಗೆ ಉಂಟಾಗುವ ಡ್ಯಾಮೇಜ್ ಅಥವ ನಷ್ಟಗಳಿಗೆ ಹೋಮ್ ಇನ್ಶೂರೆನ್ಸ್ ಪಾವತಿ ಮಾಡುತ್ತದೆ. |
ಒಂದು ವೇಳೆ ಪಾಲಿಸಿಹೋಲ್ಡರ್ ಅನಿರೀಕ್ಷಿತ ಘಟನೆಗಳಿಂದಾಗಿ ಸಾಲದಾತರಿಗೆ ಕಟ್ಟಲಾಗದೆ ಉಳಿದ ಹೋಮ್ ಲೋನ್ ಬಾಕಿಯನ್ನು ಇನ್ಶೂರರ್ ಸೆಟಲ್ ಮಾಡುವ ಕಾರಣದಿಂದ ಹೋಮ್ ಇನ್ಶೂರೆನ್ಸ್ ನೆರವಾಗುತ್ತದೆ. |
ಹೋಮ್ ಇನ್ಶೂರೆನ್ಸ್ ಪಾಲಿಸಿ ಪಡೆದಾಗ ಪಾವತಿಸಬೇಕಾದ ಪ್ರೀಮಿಯಂ ಕಡಿಮೆ ಇರುತ್ತದೆ. |
ಹೋಮ್ ಲೋನ್ ಇನ್ಶೂರೆನ್ಸ್‌ಗೆ ಪಾವತಿಸಬೇಕಾದಗ ಪ್ರೀಮಿಯಂ ಜಾಸ್ತಿ ಇರುತ್ತದೆ. |
ಹೋಮ್ ಲೋನ್ ತೆಗೆದುಕೊಂಡಿದ್ದನ್ನು ಪರಿಗಣಿಸದೆಯೂ ನೀವು ಹೋಮ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಬಹುದು. |
ನೀವು ನಿಮಗಾಗಿ ಹೋಮ್ ಲೋನ್ ಪಡೆದುಕೊಂಡಿದ್ದರೆ ಮಾತ್ರ ಹೋಮ್ ಲೋನ್ ಇನ್ಶೂರೆನ್ಸ್ ಖರೀದಿ ಮಾಡಬಹುದು. |
ಹೋಮ್ ಲೋನ್ ಇನ್ಶೂರೆನ್ಸ್ ಕಾರಣದಿಂದ ಮನೆಯ ಡೌನ್ ಪೇಮೆಂಟ್ ಕಡಿಮೆಯಾಗುತ್ತದೆ. |
ಹೋಮ್ ಇನ್ಶೂರೆನ್ಸ್ ಸಂದರ್ಭದಲ್ಲಿ ಡೌನ್ ಪೇಮೆಂಟ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. |
ಹೋಮ್‌ಲೋನ್‌ಗಾಗಿ ಹೋಮ್ ಇನ್ಶೂರೆನ್ಸ್ ಖರೀದಿಸುವಾಗ ಗಮನಿಸಬೇಕಾದ ಅಂಶಗಳು
ಶಿಫಾರಸ್ಸಿನ ಕಾರಣದಿಂದ ಹೋಮ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಸಮಯದಲ್ಲಿ, ಮುಂದುವರಿಯುವ ಮೊದಲು ಹಲವಾರು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಈಗ ನಾವು ಅವುಗಳನ್ನು ಒಮ್ಮೆ ನೋಡೋಣ: