ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಪಾಲಿಸಿ ಆನ್‌ಲೈನ್ ಎಂದರೇನು?
ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಪಾಲಿಸಿಯು ವ್ಯಾಪಾರಕ್ಕೆ ಸಂಬಂಧಿಸಿದ ಪ್ರಾಪರ್ಟಿಗಳಿಗೆ ಕವರೇಜ್ ಒದಗಿಸುತ್ತದೆ. ಪಾಲಿಸಿ ಅಡಿಯಲ್ಲಿ ನಮೂದಾಗಿರುವ ವ್ಯಾಪಾರಕ್ಕೆ ಸಂಬಂಧಿಸಿದ ಕಟ್ಟಡಗಳು ಮತ್ತು ರಚನೆಗಳು, ಫಿಟ್ಟಿಂಗ್‌ಗಳು ಮತ್ತು ಫಿಕ್ಷರ್‌ಗಳು, ಪ್ಲಾಂಟ್ ಮತ್ತು ಮಷೀನರಿ, ಸ್ಟಾಕ್ ಮತ್ತು ಇತರ ಅಸೆಟ್‌ಗಳು ಡ್ಯಾಮೇಜ್ ಆಗಿ ಸಂಭವಿಸುವ ನಷ್ಟವನ್ನು ಕವರ್ ಮಾಡಲು ಇನ್ಶೂರರ್ ಒಪ್ಪಿಕೊಂಡಿರುತ್ತಾರೆ. ಪಾಲಿಸಿ ಆರಂಭವಾಗುವ ಸಮಯದಲ್ಲಿ ಪ್ರತೀ ಸ್ಥಳದಲ್ಲಿ ಅಪಾಯ ಉಂಟಾಗಬಹುದಾದ ಎಲ್ಲಾ ಇನ್ಶೂರೇಬಲ್ ಅಸೆಟ್ ಕ್ಲಾಸ್‌ಗಳ ಒಟ್ಟು ಮೊತ್ತ ರೂ.5 ಕೋಟಿಯನ್ನು ದಾಟದಿದ್ದರೆ ನೀವು ಪಾಲಿಸಿಯನ್ನು ಹೊಂದಬಹುದು.
ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಪಾಲಿಸಿ ಯಾಕೆ ಅವಶ್ಯಕ?
ಗೋ ಡಿಜಿಟ್, ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಪಾಲಿಸಿಯ ಖರೀದಿಯು ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದ ಸ್ಟ್ರಕ್ಚರ್‌ಗಳು, ಪ್ಲಾಂಟ್ ಮತ್ತು ಮಷೀನರಿ, ಸ್ಟಾಕ್ ಮತ್ತು ಇತರ ಆಸ್ತಿಗಳು ಧ್ವಂಸವಾದರೆ ಅಥವಾ ಡ್ಯಾಮೇಜ್ ಅಥವಾ ಭೌತಿಕ ನಷ್ಟ ಉಂಟಾದ ಸಂದರ್ಭದಲ್ಲಿ ಕವರೇಜ್ ಒದಗಿಸುವ ಭರವಸೆ ಒದಗಿಸುತ್ತದೆ.
ಪಾಲಿಸಿಯನ್ನು ಖರೀದಿಸಲು ಯಾರೆಲ್ಲಾ ಅರ್ಹರು?
ವ್ಯಾಪಾರಕ್ಕೆ ಸಂಬಂಧಿಸಿದ ಪ್ರಾಪರ್ಟಿಯನ್ನು ಹೊಂದಿರುವ ಯಾರು ಬೇಕಾದರೂ ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಪಾಲಿಸಿಯನ್ನು ಖರೀದಿಸಬಹುದು. ಈ ಕೆಳಗೆ ನಮೂದಿಸಿರುವವರು ಪಾಲಿಸಿ ಪಡೆಯಬಹುದು:
- ಪ್ರಾಪರ್ಟಿಯ ಮಾಲೀಕರು
- ಪ್ರಾಪರ್ಟಿಯ ಬಾಡಿಗೆದಾರರು
- ಗುತ್ತಿಗೆದಾರ ಅಥವಾ ಪ್ರಾಪರ್ಟಿ ಖರೀದಿಸುವವರು
- ಆಯೋಗದಲ್ಲಿ ಟ್ರಸ್ಟಿ ಸ್ಥಾನ ಹೊಂದಿರುವ ವ್ಯಕ್ತಿ
- ಪ್ರಾಪರ್ಟಿ ಜವಾಬ್ದಾರಿ ಹೊಂದಿರುವ ಮತ್ತು ಇನ್ಶೂರೆನ್ಸ್ ಪಡೆಯಲು ಹೊಣೆಗಾರರಾಗಿರುವ ವ್ಯಕ್ತಿ
ಡಿಜಿಟ್‌ನ ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಪಾಲಿಸಿ ಅಡಿಯಲ್ಲಿ ಏನೆಲ್ಲಾ ಕವರ್ ಆಗುತ್ತದೆ?
ಏನೆಲ್ಲಾ ಕವರ್ ಆಗುವುದಿಲ್ಲ?
ಡಿಜಿಟ್‌ನ ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಪಾಲಿಸಿ ಕವರೇಜ್ ಒದಗಿಸದಿರುವ ಅಂಶಗಳು ಹೀಗಿವೆ -
ಯಾವುದೇ ಪಬ್ಲಿಕ್ ಅಥಾರಿಟಿ ಆದೇಶದ ಇನ್ಶೂರ್ಡ್ ಪ್ರಾಪರ್ಟಿಯನ್ನು ಮೇರೆಗೆ ಸುಟ್ಟು ಹಾಕಿದಾಗ ಉಂಟಾದ ಡ್ಯಾಮೇಜ್ ಅಥವಾ ನಷ್ಟ.
ಕೇಂದ್ರಪಗಾಮಿ ಬಲದಿಂದ ಅಥವಾ ಅಂತಃಸ್ಫೋಟ/ ಸ್ಫೋಟ ಸಂಭವಿಸಿದ ಕಾರಣದಿಂದ ಬಾಯ್ಲರ್‌ಗಳು, ತಾಪರಕ್ಷಕಗಳು ಅಥವಾ ಇತರ ಸ್ಟೀಮ್ ಉತ್ಪತ್ತಿಯಾಗುವ ಉಪಕರಣಗಳಿಗೆ ಉಂಟಾಗುವ ಡ್ಯಾಮೇಜ್.
ಸಾಮಾನ್ಯ ಬಿರುಕು ಬಿಡುವಿಕೆ, ಹೊಸ ರಚನೆಗಳ ಸ್ಥಾಪನೆ, ನಿರ್ಮಿಸಿದ ನೆಲದಲ್ಲಿನ ಚಲನೆಗಳು, ನೀರಿನಿಂದಾದ ಸವೆತ, ದೋಷಯುಕ್ತ ವಸ್ತುಗಳ ಬಳಕೆ ಇತ್ಯಾದಿ ಕಾರಣಗಳಿಂದ ಇನ್ಶೂರ್ಡ್ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್.
ಇನ್ಶೂರ್ಡ್ ವ್ಯಕ್ತಿಯ ಮಾಲೀಕತ್ವದ ಅಥವಾ ಅವರಿಗೆ ಸೇರಿದ ಪ್ರಾಣಿ ಅಥವಾ ವಿಮಾನ, ವೆಹಿಕಲ್‌ನಿಂದ ಉಂಟಾದ ಅಥವಾ ಸಾನಿಕ್ / ಸೂಪರ್‌ಸಾನಿಕ್ ವೇಗದ ವಿಮಾನ ಅಥವಾ ವೈಮಾನಿಕ/ ಬಾಹ್ಯಾಕಾಶ ಸಾಧನಗಳಿಂದ ಉಂಟಾದ ಒತ್ತಡದ ಅಲೆಗಳಿಂದ ಸಂಭವಿಸಿದ ಡ್ಯಾಮೇಜ್.
ಕೆಲಸದ ಪೂರ್ತಿ ಅಥವಾ ಭಾಗಶಃ ನಿಲ್ಲುವಿಕೆಯಿಂದ ಅಥವಾ ಯಾವುದೇ ಪ್ರೊಸೆಸ್/ಆಪರೇಷನ್‌ಗಳು/ಆಮಿಷನ್‌ಗಳ ವಿಳಂಬ/ಅಡೆತಡೆ/ ನಿಲ್ಲುವಿಕೆಯಿಂದ ಉಂಟಾಗುವ ನಷ್ಟ ಅಥವಾ ಡ್ಯಾಮೇಜ್.
ಯಾವುದೇ ವ್ಯಕ್ತಿ ಕಾನೂನುಬಾಹಿರವಾಗಿ ಯಾವುದೇ ಕಟ್ಟಡವನ್ನು ಸ್ವಾಧೀನಪಡಿಸಿಕೊಂಡಿದ್ದರೆ ಆತನನ್ನು ಅಲ್ಲಿಂದ ತಾತ್ಕಾಲಿಕವಾಗಿ/ ಶಾಶ್ವತವಾಗಿ ಹೊರಹಾಕುವ ಸಂದರ್ಭದಲ್ಲಿ ಉಂಟಾಗುವ ಭೌತಿಕ ನಷ್ಟ.
ಯಾವುದೇ ಸ್ಪ್ರಿಂಕ್ಲರ್ ಇನ್‌ಸ್ಟಾಲೇಷನ್‌ನ ತೆಗೆದುಹಾಕುವಿಕೆ/ ವಿಸ್ತರಣೆ ಅಥವಾ ಬಿಲ್ಡಿಂಗ್‌ನ ರಿಪೇರಿಗಳು/ ಆಲ್ಟರೇಷನ್‌ಗಳು ಅಥವಾ ಕಟ್ಟಡ ರಚನೆಯಲ್ಲಿ ನಿಮಗೆ ಕಂಡು ಬಂದ ದೋಷಗಳು.
ಭಾರತ್ ಸೂಕ್ಷ್ಮ ಉದ್ಯಮ ಪಾಲಿಸಿಯ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು
ಭಾರತ್ ಸೂಕ್ಷ್ಮ ಉದ್ಯಮ ಪಾಲಿಸಿಯ ಪಾವತಿಸಬೇಕಾದ ಪ್ರೀಮಿಯಂಗಳು ಈ ಕೆಳಗಿನ ಅಂಶಗಳನ್ನು ಅವಲಂಬಿಸಿವೆ -
ಪಾಲಿಸಿಗೆ ನೀವು ಪಾವತಿಸಬೇಕಾಗಿರುವ ಪ್ರೀಮಿಯಂ ಮೊತ್ತ ಬಿಸಿನೆಸ್‌ನ ಪ್ರಕಾರವನ್ನು ಅವಲಂಬಿಸಿದೆ. ಬಿಸಿನೆಸ್‌ನ ಪ್ರಕಾರದ ಆಧಾರದಲ್ಲಿ ನೀವು ಪಾಲಿಸಿಗೆ ಪಾವತಿಸಬೇಕಾದ ಪ್ರೀಮಿಯಂನ ಮೊತ್ತ ಜಾಸ್ತಿ ಇರುತ್ತದೆ.
ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಪಾಲಿಸಿಯ ಪಾಲಿಸಿಯನ್ನು ಪಡೆಯಲು ನೀವು ಪಾವತಿಸಬೇಕಾದ ಪ್ರೀಮಿಯಂ ಮೇಲೆ ಸಮ್ ಇನ್ಶೂರ್ಡ್ ಅಮೌಂಟ್ ಕೂಡ ಪರಿಣಾಮ ಬೀರುತ್ತದೆ. ಸಮ್ ಇನ್ಶೂರ್ಡ್ ಜಾಸ್ತಿ ಇದ್ದಾಗ ಪ್ರೀಮಿಯಂ ಕೂಡ ಜಾಸ್ತಿ.
ಪ್ರೀಮಿಯಂ ಕ್ಯಾಲ್ಕುಲೇಟ್ ಆಗುವಾಗ ಎಂಟರ್‌ಪ್ರೈಸ್‌ನ ರಿಸ್ಕ್ ಪ್ರೊಫೈಲ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಎಂಟರ್‌ಪ್ರೈಸ್‌ನ ಪ್ರೊಫೈಲ್ ಹೆಚ್ಚು ರಿಸ್ಕ್ ಹೊಂದಿದ್ದರೆ ಪಾವತಿಸಬೇಕಾದ ಪ್ರೀಮಿಯಂ ಕೂಡ ಜಾಸ್ತಿಯಾಗಿರುತ್ತದೆ ಮತ್ತು ವೈಸ್ ವರ್ಸಾ.
ಭಾರತದಲ್ಲಿ ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಕುರಿತು ಕೇಳಲಾದ ಪ್ರಶ್ನೆಗಳು
ಇನ್ಶೂರ್ಡ್ ವ್ಯಕ್ತಿಯ ಲೀಗಲ್ ರೆಪ್ರೆಸೆಂಟೇಟಿವ್‌ನ ಬೆನಿಫಿಟ್ ಕಾರಣಕ್ಕೆ ಪಾಲಿಸಿ ಮುಂದುವರಿಯುತ್ತದೆಯೇ?
ಹೌದು, ಒಂದು ವೇಳೆ ಇನ್ಶೂರ್ಡ್ ವ್ಯಕ್ತಿಯ ಮರಣ ಸಂಭವಿಸಿದರೆ, ಆತ/ ಆಕೆಯ ಲೀಗಲ್ ರೆಪ್ರೆಸೆಂಟೇಟಿವ್ ಪಾಲಿಸಿಯ ಬೆನಿಫಿಟ್ ಪಡೆಯುವುದನ್ನು ಮುಂದುವರಿಸುತ್ತಾರೆ.
ಪಾಲಿಸಿ ಅವಧಿಯಲ್ಲಿ ಇನ್ಶೂರೇಬಲ್ ಅಸೆಟ್‌ನ ಬೆಲೆಯು ರೂ.5 ಕೋಟಿಗಿಂತ ಹೆಚ್ಚಾದರೆ ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಪಾಲಿಸಿಯು ಮುಂದುವರಿಯುತ್ತದೆಯೇ?
ಹೌದು, ಬೆಲೆಯು ರೂ.5ಕೋಟಿಗಿಂತ ಹೆಚ್ಚಾದರೂ ಪಾಲಿಸಿಯು ಅಸೆಟ್ ಕವರ್ ಮಾಡುವುದನ್ನು ಮುಂದುವರಿಸುತ್ತದೆ. ಆದಾಗ್ಯೂ, ಪಾಲಿಸಿ ಎಕ್ಸ್‌ಪೈರ್ ಆದಾಗ ಅನ್ವಯ ಆಗುವ ಪಾಲಿಸಿಯೊಂದಿಗೆ ರಿಪ್ಲೇಸ್ ಮಾಡುವ ಅವಶ್ಯಕತೆ ಇದೆ.
ಪಾಲಿಸಿ ಕ್ಯಾನ್ಸಲ್ ಆಗುವ ಸಂಭವ ಇದೆಯೇ?
ಹೌದು, ಪಾಲಿಸಿ ಅವಧಿಯ ಯಾವುದೇ ಹಂತದಲ್ಲಿ ಪಾಲಿಸಿ ಕ್ಯಾನ್ಸಲ್ ಆಗಬಹುದು. ಪಾಲಿಸಿ ಕ್ಯಾನ್ಸಲ್ ಆಗಿದ್ದಕ್ಕೆ ಪ್ರೀಮಿಯಂ ಒಂದು ಭಾಗವನ್ನು ರಿಫಂಡ್ ಮಾಡಲಾಗುತ್ತದೆ.
ಪಾಲಿಸಿ ಅವಧಿಯಲ್ಲಿ ಇನ್ಶೂರರ್ ಯಾವ ಆಧಾರದ ಮೇಲೆ ಪಾಲಿಸಿಯನ್ನು ಕ್ಯಾನ್ಸಲ್ ಮಾಡಬಹುದು?
ತಪ್ಪು ನಿರೂಪಣೆ, ವಾಸ್ತವ ಸಂಗತಿಗಳ ಬಹಿರಂಗ ಪಡಿಸದಿರುವಿಕೆ, ಅಸಹಕಾರ ಅಥವಾ ವಂಚನೆ ಕಾರಣದಿಂದ ಇನ್ಶೂರರ್ ಪಾಲಿಸಿಯನ್ನು ಕ್ಯಾನ್ಸಲ್ ಮಾಡಬಹುದು.
ಕವರೇಜ್ ಆರಂಭಿಸಲು ನಾನು ಇನ್ಶೂರರ್‌ಗೆ ಮುಂಚಿತವಾಗಿಯೇ ಪ್ರೀಮಿಯಂ ಪಾವತಿ ಮಾಡಬೇಕೆ?
ಹೌದು, ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಪಾಲಿಸಿಯ ಪ್ರೀಮಿಯಂ ಅನ್ನು ಮುಂಚಿತವಾಗಿಯೇ ಪಾವತಿಸಬೇಕು. ಪ್ರೀಮಿಯಂ ಪಾವತಿಸಿದ ಬಳಿಕವೇ ಕವರೇಜ್ ಆರಂಭವಾಗುತ್ತದೆ.