ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸುವುದು ಹೇಗೆ?

ಆನ್‌ಲೈನ್‌ ಫಾರ್ಮ್ ಸಲ್ಲಿಕೆಯ ಪರಿಚಯದೊಂದಿಗೆ, ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಕೆಯ ಅಥವಾ ಮರುಪಡೆಯುವಿಕೆಯ ಪ್ರಕ್ರಿಯೆಯು ತೀರಾ ಸರಳವಾಗಿದೆ.

ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸುವುದು ಹೇಗೆ ಎಂಬುವುದರ ಸಂಪೂರ್ಣ ಲೇಖನ ಇಲ್ಲಿದೆ.

ಇದಕ್ಕಾಗಿ ಅರ್ಜಿ ಸಲ್ಲಿಸಲು ನೀವು ಸೂಕ್ತ ಡಾಕ್ಯುಮೆಂಟುಗಳನ್ನು ಸಿದ್ಧವಿಡಬೇಕಾಗುವುದು ಎಂದು ಗಮನವಿರಲಿ

ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸುವ ಅಥವಾ ಬದಲಾವಣೆ ಮಾಡುವ ವಿಧಾನ

ಪಾಸ್‌ಪೋರ್ಟ್‌ನ ಮರುಪಡೆಯುವಿಕೆಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ನೀವು ಈ ಪ್ರಕ್ರಿಯೆಯನ್ನು ಎರಡು ವಿಧಗಳಲ್ಲಿ ಪೂರ್ಣಗೊಳಿಸಬಹುದು -

  • ಆನ್‌ಲೈನ್‌ ಫಾರ್ಮ್ ಸಲ್ಲಿಕೆ

  • ಇ-ಫಾರ್ಮ್ ಸಲ್ಲಿಕೆ.

ಆನ್‌ಲೈನ್‌ ಫಾರ್ಮ್ ಸಲ್ಲಿಕೆಯ ಪ್ರಕ್ರಿಯೆ

ಮದುವೆಯ ನಂತರ ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸಲು ಬೇಕಾಗಿರುವ ಆನ್‌ಲೈನ್‌ ಫಾರ್ಮ್ ಸಲ್ಲಿಕೆ ವಿಧಾನದ ಹಂತ ಹಂತವಾದ ನಿದರ್ಶನ ಇಲ್ಲಿದೆ- 

1. ಪಾಸ್‌ಪೋರ್ಟ್‌ ಸೇವಾದ ಆನ್‌ಲೈನ್‌ ಪೋರ್ಟಲ್ ಗೆ ಭೇಟಿ ನೀಡಿ ಹಾಗೂ ನಿಮ್ಮನ್ನು ನೀವು ನೋಂದಾಯಿಸಿಕೊಳ್ಳಿ.

2. ನಂತರ, ನಿಮ್ಮ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ಅನ್ನು ಬಳಸಿ ಲಾಗಿನ್ ಮಾಡಿ ಮತ್ತು ಸಂಗಾತಿಯ ಹೆಸರನ್ನು ಸೇರಿಸಲು "ಹೊಸ ಪಾಸ್‌ಪೋರ್ಟ್‌/ಮರುಪಡೆಯುವಿಕೆಗಾಗಿ  ಅರ್ಜಿ ಸಲ್ಲಿಸಿ" ಮೇಲೆ ಕ್ಲಿಕ್ ಮಾಡಿ.

3. ಎಲ್ಲಾ ಸಂಬಂಧಿತ ವಿವರಗಳನ್ನು ಒದಗಿಸಿದ ನಂತರ "ಸಲ್ಲಿಸಿ" ಮೇಲೆ ಒತ್ತಿರಿ.

4. ನಂತರ, ಅಪಾಯಿಂಟ್ಮೆಂಟ್  ಬುಕ್ ಮಾಡಲು "ಪೇ ಅಂಡ್ ಬುಕ್ ಅಪಾಯಿಂಟ್ಮೆಂಟ್" ಮೇಲೆ ಕ್ಲಿಕ್ ಮಾಡಿ.

5. ಪಾವತಿ ಪುಟದಲ್ಲಿರುವ SBI ಚಲಾನ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್ ಆಯ್ಕೆಗಳಿಂದ ನಿಮಗೆ ಸೂಕ್ತವಾಗಿರುವ ಪಾವತಿ ವಿಧಾನವನ್ನು ಆಯ್ಕೆ ಮಾಡಿ ಹಾಗೂ ಅಗತ್ಯವಿರುವ ಶುಲ್ಕವನ್ನು ಪಾವತಿಸಿ. ಪಿಒ/ಪಿಒಪಿಎಸ್ಕೆ/ಪಿಎಸ್ಕೆ ಯಲ್ಲಿ ನೇಮಕಕ್ಕಾಗಿ ಮುಂಗಡವಾದ ಆನ್‌ಲೈನ್‌ ಶುಲ್ಕ ಪಾವತಿ ಕಡ್ಡಾಯವಾಗಿರುತ್ತದೆ.

6. "ಪ್ರಿಂಟ್ ಅಪ್ಲಿಕೇಶನ್ ರಿಸೀಪ್ಟ್" ಮೇಲೆ ಕ್ಲಿಕ್ ಮಾಡಿ. ಈ ರಶೀದಿಯು ಕೆಳಗಿರುವ ವಿವರಗಳನ್ನು ಹೊಂದಿರುತ್ತದೆ:

  • ಅಪಾಯಿಂಟ್ಮೆಂಟ್ ನಂಬರ್

  • ಅಪ್ಲಿಕೇಶನ್ ರೆಫೆರೆನ್ಸ್ ನಂಬರ್

ಆಫ್ಲೈನ್ ಫಾರ್ಮ್ ಸಲ್ಲಿಕೆಯ ಪ್ರಕ್ರಿಯೆ

ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸುವುದು ಹೇಗೆ ಎಂದು ಯೋಚಿಸುತ್ತಿರುವವರಿಗೆ ಹಂ ತಹಂತವಾದ ಇ-ಫಾರ್ಮ್ ಸಲ್ಲಿಕೆಯ ಪ್ರಕ್ರಿಯೆಯನ್ನು ಈ ಕೆಳಗಡೆ ನೀಡಲಾಗಿದೆ- 

1. ಪಾಸ್ಪೋರ್ಟ್ ಸೇವಾ ಕೇಂದ್ರ ದ ವೆಬ್ಸೈಟ್ ನಿಂದ ಎಕ್ಸ್ಎಂಎಲ್ ಸ್ವರೂಪದಲ್ಲಿರುವ ಇ-ಫಾರ್ಮ್ ಅನ್ನು ಡೌನ್ಲೋಡ್ ಮಾಡಿ ಹಾಗೂ ಆವಶ್ಯಕ ವಿವರಗಳನ್ನು ತುಂಬಿಸಿರಿ.

2. ಈಗ, ಪೋರ್ಟಲ್ ಗೆ ಲಾಗಿನ್ ಮಾಡಿ ಹಾಗೂ ಈ XML ಫೈಲ್ ಅನ್ನು ಅಪ್ಲೋಡ್ ಮಾಡಿ.

3. ಆನ್‌ಲೈನ್‌ ಪ್ರಕ್ರಿಯೆಗಾಗಿ ಹೇಳಿರುವಂತೆಯೇ, ಪಾವತಿ ಪುಟದಲ್ಲಿ ಪಾವತಿಯನ್ನು ಪೂರ್ಣಗೊಳಿಸಿ. ಹಾಗೂ, ಮೇಲೆ ನೀಡಿರುವ ವಿಧಾನದಂತೆಯೇ ನಿಮ್ಮ ಪಾವತಿ ರಶೀದಿಯನ್ನು ಡೌನ್ಲೋಡ್ ಮಾಡಿ.

ನಿಮ್ಮ ಆನ್‌ಲೈನ್‌ ಅಥವಾ ಆಫ್ಲೈನ್ ಸಲ್ಲಿಕೆಯ ನಂತರ ಅಪಾಯಿಂಟ್ಮೆಂಟ್  ವಿವರಗಳನ್ನು ಹೊಂದಿರುವ SMS  ಅನ್ನು ಪಡೆಯಿರಿ. ಅಂತಿಮ ಪ್ರಕ್ರಿಯೆಗಾಗಿ, ನೀವು ಒರಿಜಿನಲ್ ಡಾಕ್ಯುಮೆಂಟುಗಳೊಂದಿಗೆ ನಿಮ್ಮ ಸ್ಥಳೀಯ ಪಾಸ್‌ಪೋರ್ಟ್‌ ಕಚೇರಿಗೆ ಭೇಟಿ ನೀಡಬೇಕಾಗುವುದು.

ಹೀಗಾಗಿ, ಪಾಸ್‌ಪೋರ್ಟ್‌ನಲ್ಲಿ ತಮ್ಮ ಗಂಡನ ಹೆಸರನ್ನು ಹೇಗೆ ಸೇರಿಸುವುದು ಎಂದು ಯೋಚಿಸುತ್ತಿರುವವರು ಮೇಲಿರುವ ನಿರ್ದೇಶಕಗಳನ್ನು ಗಮನದಲ್ಲಿಟ್ಟುಕೊಳ್ಳಬಹುದಾಗಿದೆ.

ಪಾಸ್‌ಪೋರ್ಟ್‌ನಲ್ಲಿ ತಮ್ಮ ಪತ್ನಿಯ ಹೆಸರನ್ನು ಹೇಗೆ ಸೇರಿಸುವುದು ಎಂದು ಯೋಚಿಸುತ್ತಿರುವವರಿಗೂ ಇದೇ ನಿರ್ದೇಶಕಗಳು ಅನ್ವಯಿಸುತ್ತವೆ.

ಪಾಸ್‌ಪೋರ್ಟ್‌ನಲ್ಲಿ ಪತ್ನಿಯ ಹೆಸರನ್ನು ಸೇರಿಸಲು ಬೇಕಾಗಿರುವ ಡಾಕ್ಯುಮೆಂಟುಗಳು ಯಾವುವು?

ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸಲು ಈ ಕೆಳಗೆ ನೀಡಲಾದ ಡಾಕ್ಯುಮೆಂಟುಗಳ ಆವಶ್ಯಕತೆ ಇದೆ - 

  • ನಿಮ್ಮ ಮೂಲ ಪಾಸ್‌ಪೋರ್ಟ್‌.

  • ನಿಮ್ಮ ಪಾಸ್‌ಪೋರ್ಟ್‌ನ ಮೊದಲ ಹಾಗೂ ಕೊನೆಯ ಪುಟಗಳ ಪ್ರತಿಗಳು.

  • ಅವಲೋಕನ ಪುಟ.

  • ಇಸಿಆರ್ ಅಥವಾ ಇಸಿಆರ್ ಯೇತರ ಪುಟ.

  • ಅಲ್ಪಾವಧಿ ವ್ಯಾಲಿಡಿಟಿ ಹೊಂದಿರುವ ಪಾಸ್‌ಪೋರ್ಟ್‌ಗಾಗಿ, ನೀವು ವ್ಯಾಲಿಡಿಟಿ ಪುಟವನ್ನೂ ಸಲ್ಲಿಸಬೇಕಾಗುವುದು. 

ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಬದಲಾಯಿಸಲು ಇದೇ ಡಾಕ್ಯುಮೆಂಟುಗಳು ಆವಶ್ಯಕವಾಗಿರುತ್ತವೆ ಹಾಗೂ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯೂ ಒಂದೇ ಆಗಿದೆ. 

ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸಲು ನೀಡಬೇಕಾದ ಶುಲ್ಕ:

 
ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಬದಲಾಯಿಸಲು ನೀಡಬೇಕಾದ ಶುಲ್ಕಗಳನ್ನು ಈ ಕೋಷ್ಟಕದಲ್ಲಿ ಪಟ್ಟಿ ಮಾಡಲಾಗಿದೆ-

ಘಟಕ ಉಪ-ಘಟಕ ಶುಲ್ಕಗಳು
ಕಾನ್ಸುಲರ್ ಶುಲ್ಕ ಪಾಸ್‌ಪೋರ್ಟ್‌ ಶುಲ್ಕಗಳು ವಯಸ್ಕರ ಅಪ್ಲಿಕೇಶನ್ ವರ್ಗದ ಪ್ರಕಾರ
ಕಾನ್ಸುಲರ್ ಶುಲ್ಕ ಭಾರತೀಯ ಸಮುದಾಯ ಕಲ್ಯಾಣ ನಿಧಿ ₹ 221
ಸಿಕೆಜಿಎಸ್ ಶುಲ್ಕ ಸಿಕೆಜಿಎಸ್ ಸೇವಾ ಶುಲ್ಕ ₹ 1470 ಪ್ರತೀ ಅಪ್ಲಿಕೇಶನ್
ಸಿಕೆಜಿಎಸ್ ಶುಲ್ಕ ಐಚ್ಛಿಕ ಶುಲ್ಕ ಕೊರಿಯರ್ ಸೇವೆ ಹಾಗೂ ಟೆಕ್ಸ್ಟ್ ಮೆಸೇಜ್
ಒಟ್ಟು - ₹1691

ಭಾರತೀಯ ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸುವ ಪ್ರಕ್ರಿಯೆಗಾಗಿ ತತ್ಕಾಲ್ ಸೇವೆ ಲಭ್ಯವಿದೆ. ಇದಕ್ಕೆ ಹೆಚ್ಚುವರಿ ಶುಲ್ಕ ತಗಲುತ್ತದೆ.

ಪ್ರತೀ ಅರ್ಜಿದಾರರಿಗೆ ಪ್ರತ್ಯೇಕವಾಗಿ ಶುಲ್ಕ ಪಾವತಿ ಮಾಡುವುದು ಕಡ್ಡಾಯವಾಗಿದೆ. ವ್ಯಕ್ತಿಗಳು ಕ್ಯಾಶ್  ಅಥವಾ ಚೆಕ್ ಮೂಲಕ ಪಾವತಿ ಮಾಡಬಾರದು. ಕ್ರೆಡಿಟ್ ಕಾರ್ಡ್ ನಲ್ಲಿ ಪಾವತಿ ಮಾಡಿದ್ದಲ್ಲಿ ಹೆಚ್ಚುವರಿ ಅನುಕೂಲಕರ  ಶುಲ್ಕ ಅನ್ವಯಿಸುತ್ತದೆ.

ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಅಪ್ಡೇಟ್ ಮಾಡಲು ಎಷ್ಟು ಸಮಯ ಬೇಕಾಗುತ್ತದೆ?

ನವೀಕರಿಸಲಾದ ಪಾಸ್‌ಪೋರ್ಟ್‌ ಅನ್ನು ಪಡೆಯಲು ಗರಿಷ್ಠ ಮೂರು ಕೆಲಸದ ದಿನಗಳ ಅಗತ್ಯವಿದೆ. ಅದಾಗ್ಯೂ, ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸಲು ಬೇಕಾದ ಪ್ರಕ್ರಿಯೆ ಸಮಯ ಗರಿಷ್ಠ 2 ಘಂಟೆಗಳಾಗಿದೆ.

ಆದ್ದರಿಂದ, ನೀವು ಗಮನಿಸಿರುವಂತೆಯೇ, ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸುವ ಪ್ರಕ್ರಿಯೆಯು ಬಹಳ ನಿಖರವಾಗಿದೆ.  ನಿಮಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಹಾಯ ಮಾಡಲು ಹಲವಾರು ಥರ್ಡ್ ಪಾರ್ಟಿ ವೆಬ್ಸೈಟ್ ಗಳು ಹಾಗೂ ಸಂಸ್ಥೆಗಳಿವೆ.

ಅದಾಗ್ಯೂ, ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸುವುದು ಹೇಗೆ ಎಂದು ಯೋಚಿಸುವವರು ನೇರವಾಗಿ ಸರಕಾರಿ ಪೋರ್ಟಲ್ ಗೆ ವಿಸಿಟ್ ಮಾಡಬೇಕೆಂದು ನಾವು ಸಲಹೆ ನೀಡುತ್ತೇವೆ.  ಸುಗಮವಾದ ಪ್ರಕ್ರಿಯೆಗಾಗಿ ನೀವು ಅಪ್ಲಿಕೇಶನ್ ಅಥವಾ ಮರುಪಡೆಯುವಿಕೆಯ ಫಾರ್ಮ್ ನಲ್ಲಿ ಉಲ್ಲೇಖಿಸಲಾದ ಎಲ್ಲಾ ವಿವರಗಳನ್ನು ಒದಗಿಸತಕ್ಕದ್ದು. 

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸಲು ಮದುವೆಯ ಪ್ರಮಾಣಪತ್ರ ಕಡ್ಡಾಯವೇ?

ಇಲ್ಲ, ನೀವಿಬ್ಬರೂ ಭಾರತೀಯರಾಗಿದ್ದರೆ ನಿಮ್ಮ ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸಲು ಮದುವೆಯ ಪ್ರಮಾಣಪತ್ರ ಕಡ್ಡಾಯವಲ್ಲ.

 

ನಿಮ್ಮ ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸಲು ಪೋಲೀಸ್ ವೆರಿಫಿಕೇಶನ್ ಅಗತ್ಯವಿದೆಯೇ?

ಇಲ್ಲ, ನಿಮ್ಮ ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸಲು ಪೋಲೀಸ್ ವೆರಿಫಿಕೇಶನ್ ಅಗತ್ಯವಿಲ್ಲ

ಪಾಸ್‌ಪೋರ್ಟ್‌ನಲ್ಲಿ ನನ್ನ ಸಂಗಾತಿಯ ರಾಷ್ಟ್ರೀಯತೆಯನ್ನು ಸೂಚಿಸಲು ನನಗೆ ಯಾವುದೇ ಅಂತ್ಯ/ಪೂರ್ವಪ್ರತ್ಯಯವನ್ನು ಸೇರಿಸುವ ಅಗತ್ಯವಿದೆಯೇ

ಇಲ್ಲ, ಕೇವಲ ಸಂಗಾತಿಯ ಹೆಸರಿನ ಅಗತ್ಯವಿದೆ.  ರಾಷ್ಟ್ರೀಯತೆಯನ್ನು ಸೂಚಿಸಲು ಯಾವುದೇ ಅಂತ್ಯ ಅಥವಾ ಪೂರ್ವ ಪ್ರತ್ಯಯದ ಅಗತ್ಯವಿಲ್ಲ