ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಬೆಲೆ

ಇಂದೇ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಕೊಟೇಶನ್ ಪಡೆಯಿರಿ

Third-party premium has changed from 1st June. Renew now

ಟು ವೀಲರ್ ಥರ್ಡ್ ಪಾರ್ಟಿ ಇನ್ಶೂರೆನ್ಸ್ ದರಗಳು

ಒಮ್ಮೆ ಮೈಮರೆತು ನಿಮ್ಮ ಬೈಕ್‌ನಲ್ಲಿ ಅಜಾಗರೂಕವಾಗಿ ಚಾಲನೆ ಮಾಡಿದರೆ, ಅದು ಥರ್ಡ್ ಪಾರ್ಟಿಗೆ ಹಾನಿ ಉಂಟು ಮಾಡುತ್ತದೆ ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಅಥವಾ ಅದಾಗಲೇ ಈ ರೀತಿಯ ಅನುಭವ ನಿಮಗಾಗಿದೆಯೇ? ಅಥವಾ ನಿಮ್ಮ ತಪ್ಪಿಲ್ಲದಿದ್ದರೂ ಬೇರೆಯವರು ರಸ್ತೆಯಲ್ಲಿ ಅಜಾಗರೂಕವಾಗಿ ವಾಹನ ಚಲಾಯಿಸಿ ನಿಮ್ಮನ್ನು ಗಾಯಗೊಳಿಸಿದ್ದಾರೆಯೇ? ಹೌದು ಎಂದಾದರೆ, ಥರ್ಡ್ ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಪ್ರಸ್ತುತತೆಯ ಬಗ್ಗೆ ನೀವು ತಿಳಿದಿರಬೇಕು.

ಎಷ್ಟೋ ಬಾರಿ ರಸ್ತೆ ಅಪಘಾತವು ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡುತ್ತದೆ ಅಥವಾ ಜನರ ಸಾವಿಗೆ ಕಾರಣವಾಗುತ್ತದೆ ಅಥವಾ ಇತರರನ್ನು ಗಾಯಗೊಳಿಸುತ್ತದೆ. ನಂತರ ಇಬ್ಬರ ನಡುವೆ ಪರಿಹರಿಸಲಾಗದ ವಿವಾದವನ್ನು ತಂದೊಡ್ಡುತ್ತದೆ. ಅಂತಹ ಸಂದರ್ಭಗಳಲ್ಲಿ, ನಿಮ್ಮ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿ ಉಪಯೋಗಕ್ಕೆ ಬರುತ್ತದೆ ಮತ್ತು ಪರಿಹಾರದ ಮೊತ್ತವನ್ನು ಮೋಟಾರ್ ಕ್ಲೈಮ್ಸ್ ಟ್ರಿಬ್ಯೂನಲ್ ನಿರ್ಧಾರ ಮಾಡುತ್ತದೆ.

 

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ದರಗಳು

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಬೈಕ್‌ನ ಎಂಜಿನ್ ಸಾಮರ್ಥ್ಯದ ಆಧಾರದ ಮೇಲೆ ಶುಲ್ಕ ವಿಧಿಸಲಾಗುತ್ತದೆ. 2019-20 ಮತ್ತು 2022 ರ ಬೆಲೆಗಳನ್ನು ನೋಡೋಣ

 

ಎಂಜಿನ್ ಸಾಮರ್ಥ್ಯ 2019-20 ರ ಪ್ರೀಮಿಯಂ ರೂಪಾಯಿಯಲ್ಲಿ ಹೊಸ 2ಡಬ್ಲ್ಯೂ ಟಿಪಿ ದರ (1ನೇ ಜೂನ್ 2022 ರಿಂದ ಜಾರಿಗೆಯಾಗಿರುವ )
75 ಸಿಸಿ ಮೀರದಂತೆ ₹482 ₹538
75ಸಿಸಿ ಮೀರಿದ ಆದರೆ 150ಸಿಸಿ ಮೀರದಂತೆ ₹752 ₹714
1505ಸಿಸಿ ಮೀರಿದ ಆದರೆ 350ಸಿಸಿ ಮೀರದಂತೆ ₹1193 ₹1366
350ಸಿಸಿ ಮೀರಿದ ₹2323 ₹2804

ಹೊಸ ಟು ವೀಲರ್ ವೆಹಿಕಲುಗಳಿಗೆ ಥರ್ಡ್ ಪಾರ್ಟಿ ಪ್ರೀಮಿಯಂ (5-ವರ್ಷದ ಏಕ ಪ್ರೀಮಿಯಂ ಪಾಲಿಸಿ)

ಎಂಜಿನ್ ಸಾಮರ್ಥ್ಯ 2019-20 ರ ಪ್ರೀಮಿಯಂ ರೂಪಾಯಿಯಲ್ಲಿ ಹೊಸ 2ಡಬ್ಲ್ಯೂ ಟಿಪಿ ದರ (1ನೇ ಜೂನ್ 2022 ರಿಂದ ಜಾರಿಗೆಯಾಗಿರುವ )
75 ಸಿಸಿ ಮೀರದಂತೆ ₹1,045 ₹2,901
75ಸಿಸಿ ಮೀರಿದ ಆದರೆ 150ಸಿಸಿ ಮೀರದಂತೆ ₹3,285 ₹3,851
1505ಸಿಸಿ ಮೀರಿದ ಆದರೆ 350ಸಿಸಿ ಮೀರದಂತೆ ₹5,453 ₹7,365
350ಸಿಸಿ ಮೀರಿದ ₹13,034 ₹15,117

ಹೊಸ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಗಾಗಿ ಪ್ರೀಮಿಯಂಗಳು ಟು ವೀಲರ್ ವೆಹಿಕಲ್ (1 -ವರ್ಷದ ಏಕ ಪ್ರೀಮಿಯಂ ಪಾಲಿಸಿ)

ವೆಹಿಕಲ್ ಕಿಲೋವ್ಯಾಟ್ ಸಾಮರ್ಥ್ಯ (ಕೆಡಬ್ಲ್ಯೂ) 2019-20 ರ ಪ್ರೀಮಿಯಂ ರೂಪಾಯಿಯಲ್ಲಿ ಹೊಸ 2ಡಬ್ಲ್ಯೂ ಟಿಪಿ ದರ (1ನೇ ಜೂನ್ 2022 ರಿಂದ ಜಾರಿಗೆಯಾಗಿರುವ )
3 ಕೆಡಬ್ಲ್ಯೂ ಮೀರದ ₹410 ₹457
3 ಕೆಡಬ್ಲ್ಯೂ ಮೀರದ ಆದರೆ 7ಕೆಡಬ್ಲ್ಯೂ ಮೀರದಂತೆ ₹639 ₹609
7ಕೆಡಬ್ಲ್ಯೂ ಮೀರಿದ ಆದರೆ 16ಡಬ್ಲ್ಯೂ ಮೀರದಂತೆ ₹1014 ₹1161
16 ಡಬ್ಲ್ಯೂ ಮೀರಿದ ₹1975 ₹2383

ಹೊಸ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಗಾಗಿ ಪ್ರೀಮಿಯಂಗಳು ಟು ವೀಲರ್ ವೆಹಿಕಲ್ (5-ವರ್ಷದ ಏಕ ಪ್ರೀಮಿಯಂ ಪಾಲಿಸಿ)

ವೆಹಿಕಲ್ ಕಿಲೋವ್ಯಾಟ್ ಸಾಮರ್ಥ್ಯ (ಕೆಡಬ್ಲ್ಯೂ) 2019-20 ರ ಪ್ರೀಮಿಯಂ ರೂಪಾಯಿಯಲ್ಲಿ ಹೊಸ 2ಡಬ್ಲ್ಯೂ ಟಿಪಿ ದರ (1ನೇ ಜೂನ್ 2022 ರಿಂದ ಜಾರಿಗೆಯಾಗಿರುವ )
3 ಕೆಡಬ್ಲ್ಯೂ ಮೀರದ ₹888 ₹2466
3 ಕೆಡಬ್ಲ್ಯೂ ಮೀರದ ಆದರೆ 7ಕೆಡಬ್ಲ್ಯೂ ಮೀರದಂತೆ ₹2792 ₹3273
7ಕೆಡಬ್ಲ್ಯೂ ಮೀರಿದ ಆದರೆ 16ಡಬ್ಲ್ಯೂ ಮೀರದಂತೆ ₹4653 ₹6260
16 ಡಬ್ಲ್ಯೂ ಮೀರಿದ ₹11,079 ₹12,849

350 ಸಿಸಿಗಿಂತ ಹೆಚ್ಚಿನ ಬೈಕ್‌ಗಳಿಗೆ ದರ ಏರಿಕೆ ಪ್ರಸ್ತಾಪ ಮಾಡಿಲ್ಲ. ಆದ್ದರಿಂದ ಬೆಲೆಯು ಹೆಚ್ಚಾಗುವ ನಿರೀಕ್ಷೆಯಿದೆ, ಬೈಕ್‌ಗಳು, ಸ್ಕೂಟರ್‌ಗಳು ಇತ್ಯಾದಿಗಳಂತಹ ಹೊಸ ಟು ವೀಲರ್ ವೆಹಿಕಲುಗಳಿಗೆ ದೀರ್ಘಾವಧಿಯ ಥರ್ಡ್ ಪಾರ್ಟಿ ಪ್ರೀಮಿಯಂ ಅನ್ನು ಶುಲ್ಕ ವಿಧಿಸಲು ಇನ್ಶೂರರ್ ಗೆ ಅನುಮತಿಸಲಾಗಿದೆ.

 

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು?

  • ಯಾವಾಗ ರಸ್ತೆಯಲ್ಲಿ ಟು ವೀಲರ್ ವೆಹಿಕಲ್ ಗಳು ಹೆಚ್ಚಾದವು, ಅಂದಿನಿಂದ ಸಂಭವಿಸುವ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಯಿತು. ಈ ಕಾರಣಕ್ಕೆ ಸರ್ಕಾರ ಅದೇ ಅನುಪಾತದಲ್ಲಿ ಥರ್ಡ್ ಪಾರ್ಟಿ ಪ್ರೀಮಿಯಂಗಳನ್ನು ಹೆಚ್ಚಿಸಲು ನಿರ್ಧರಿಸಿದೆ.

     ಬೈಕ್‌ನ ಎಂಜಿನ್ ಸಾಮರ್ಥ್ಯವು ಬೇರೆ ಬೇರೆ ಶ್ರೇಣಿಯ ಬೈಕುಗಳಿಗೆ ಥರ್ಡ್-ಪಾರ್ಟಿ ಪ್ರೀಮಿಯಂ ಅನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ರಕ್ಷಣೆ ಸಿಗುತ್ತದೆ?

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ನಲ್ಲಿ ಯಾವುದರ ರಕ್ಷಣೆ ಸಿಗುವುದಿಲ್ಲ?

ನೀವು ಕ್ಲೈಮ್ ಮಾಡುವ ಸಂದರ್ಭದಲ್ಲಿ ಯಾವುದೇ ಆಶ್ಚರ್ಯ ಪಡುವ ಸಂದರ್ಭ ಸೃಷ್ಟಿಯಾಗಬಾರದು ಎಂದರೆ ನಿಮ್ಮ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಯಾವುದು ಒಳಗೊಂಡಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ಇಲ್ಲಿ ಅಂತಹ ಕೆಲವು ಸನ್ನಿವೇಶಗಳ ಬಗ್ಗೆ ತಿಳಿಸಲಾಗಿದೆ.

 

ಸ್ವಂತ ಹಾನಿಗಳು

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿ ಇದ್ದರೆ, ಅದರಲ್ಲಿ ಸ್ವಂತ ಗಾಡಿಗೆ ಉಂಟಾದ ಹಾನಿಗೆ ಯಾವುದೇ ಪರಿಹಾರವಿಲ್ಲ.

 

ಕುಡಿದು ಅಥವಾ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸುವುದು

ನೀವು ಒಂದು ವೇಳೆ ಕುಡಿದು ವಾಹನ ಸವಾರಿ ಮಾಡುತ್ತಿದ್ದರೆ ಅಥವಾ ಮಾನ್ಯವಾದ ಟು ವೀಲರ್ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸುತ್ತಿದ್ದರೆ, ನಿಮ್ಮ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ನಿಮಗೆ ರಕ್ಷಣೆ ನೀಡುವುದಿಲ್ಲ.

 

ಮಾನ್ಯ ಡ್ರೈವಿಂಗ್ ಲೈಸೆನ್ಸ್ ಹೋಲ್ಡರ್ ಇಲ್ಲದೆ ಗಾಡಿ ಓಡಿಸುವುದು

ನೀವು ಕಲಿಯುವವರ ಅಂದರೆ ಲರ್ನಿಂಗ್ ಲೈಸೆನ್ಸ್ ಹೊಂದಿದ್ದು, ಪಿಲಿಯನ್ ಸೀಟಿನಲ್ಲಿ ಮಾನ್ಯವಾದ ಲೈಸೆನ್ಸ್-ಹೋಲ್ಡರ್ ಇಲ್ಲದೆ ನಿಮ್ಮ ಟು ವೀಲರ್ ವಾಹನವನ್ನು ಓಡಿಸುತ್ತಿದ್ದರೆ, ಆ ಸಂದರ್ಭಗಳಲ್ಲಿ ನಿಮ್ಮ ಕ್ಲೇಮ್ ರಕ್ಷಣೆಗೆ ಒಳಪಡುವುದಿಲ್ಲ.

 

ಆಡ್- ಆನ್ ಗಳನ್ನು ಖರೀದಿ ಮಾಡದೇ ಇರುವುದು

ಎದುರಾಗುವ ಕೆಲವು ಸಂದರ್ಭ ಹಾಗು ಸನ್ನಿವೇಶಗಳನ್ನು ಆಡ್-ಆನ್‌ ಗಳು ರಕ್ಷಿಸುತ್ತವೆ. ನೀವು ಅಂತಹ ಟು- ವೀಲರ್ ವೆಹಿಕಲ್ ಆಡ್-ಆನ್‌ಗಳನ್ನು ಖರೀದಿಸದಿದ್ದರೆ, ಅದಕ್ಕೆ ಅನುಗುಣವಾದ ಸಂದರ್ಭಗಳಿಗೆ ರಕ್ಷಣೆ ಸಿಗುವುದಿಲ್ಲ.

 

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಏಕೆ ಮುಖ್ಯವಾಗಿದೆ?

ಮೋಟಾರು ವಾಹನ ಕಾಯ್ದೆಯ ಪ್ರಕಾರ, ನಿಮಗೆ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಏಕೆ ಅಗತ್ಯವಿದೆ ಎಂಬುದಕ್ಕೆ ಮಾಹಿತಿ ಇಲ್ಲಿದೆ:

ಕಾನೂನು ಅನುಸರಣೆ:

ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿಯನ್ನು ಹೊಂದದೆ, ಕಾನೂನುಬದ್ಧವಾಗಿ ಟು ವೀಲರ್ ವೆಹಿಕಲ್ ಮಾಲೀಕರಿಗೆ ಭಾರತೀಯ ರಸ್ತೆಗಳಲ್ಲಿ ಸವಾರಿ ಮಾಡಲು ಅನುಮತಿ ಇಲ್ಲ.

 ಅಗಾಧ ಹೊಣೆಗಾರಿಕೆ:

ಇದು ತುಂಬಾ ಸರಳವಾಗಿದೆ ಮತ್ತು ಇದನ್ನು ಯಾರೂ ಇಷ್ಟ ಪಡುವುದಿಲ್ಲ. ಅಷ್ಟೇ ಅಲ್ಲದೆ ಕೆಲವು ಸಂದರ್ಭಗಳಲ್ಲಿ ಅನೇಕ ಜನರು ಥರ್ಡ್ ಪಾರ್ಟಿಗೆ ಉಂಟಾದ ನಷ್ಟ ಮತ್ತು ಹಾನಿಯನ್ನು ಸರಿದೂಗಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿಯೇ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪ್ರಯೋಜನಕ್ಕೆ ಬರುತ್ತದೆ, ನಿಮ್ಮ ಜೇಬಿನಿಂದ ನೀವು ಯಾವುದೇ ಹಣವನ್ನು ಕಳೆದುಕೊಳ್ಳದಂತೆ ನಿಮ್ಮನ್ನು ರಕ್ಷಿಸಲು ಇದು ಸಹಾಯ ಮಾಡುತ್ತದೆ.

 

ಥರ್ಡ್-ಪಾರ್ಟಿಗೆ ಉಂಟಾದ ನಷ್ಟಗಳನ್ನು ಪಾವತಿಸಲು ಬೈಕ್ ಮಾಲೀಕರು ಹೊಣೆಗಾರರಾಗಬಹುದಾದ ನಿದರ್ಶನಗಳು

ಗಾಯಗಳು ಆದಂತಹ ಸಂದರ್ಭ:

ಗಾಯಗೊಂಡ ವ್ಯಕ್ತಿ (ಥರ್ಡ್ ಪಾರ್ಟಿ) ತನ್ನ ವೈದ್ಯಕೀಯ ನೆರವು, ತನ್ನ ದೇಹದ ವಿರೂಪತೆಯನ್ನು ಸರಿಪಡಿಸಿಕೊಳ್ಳಲು ಖರ್ಚು ಮಾಡಿದ ವೆಚ್ಚ ಮತ್ತು ನಿಮ್ಮ ಬೈಕ್ ಅನ್ನು ಒಳಗೊಂಡ ಅಪಘಾತದ ನಂತರ ಅವಳು/ಅವನು ಕೆಲಸ ಮಾಡಲು ಸಾಧ್ಯವಾಗದಿದ್ದಾಗ ಗಾಯಗೊಂಡ ವ್ಯಕ್ತಿಯ ಗಳಿಕೆಯ ನಷ್ಟಗಳನ್ನು ಪರಿಹಾರದ ರೂಪದಲ್ಲಿ ಕೇಳಬಹುದು. ಬೇರೊಬ್ಬರ ತಪ್ಪಿನಿಂದಾಗಿ ಒಂದು ವೇಳೆ ನೀವು ಗಾಯಗಳನ್ನು ಅನುಭವಿಸುವ ಸ್ಥಿತಿ ತಲುಪಿದರೆ, ಮೇಲೆ ತಿಳಿಸಿದಂತೆ ಪರಿಹಾರವನ್ನು ಕೇಳಲು ನಿಮಗೂ ಅಧಿಕಾರವಿದೆ.

ಸಾವು ಸಂಭವಿಸಿದರೆ:

ಮೃತರ ಅವಲಂಬಿತರು ಸಾವಿಗೆ ಕಾರಣವಾದ ಗಾಯದ ಚಿಕಿತ್ಸೆಗಾಗಿ ವೈದ್ಯಕೀಯ ವೆಚ್ಚವನ್ನು ಕೇಳಬಹುದು. ಕೆಲವು ಸಂದರ್ಭಗಳಲ್ಲಿ, ಮೃತರಿಂದ ಬರುತ್ತಿದ್ದ ಆದಾಯಕ್ಕೆ ಉಂಟಾದ ನಷ್ಟಕ್ಕೆ ಪರಿಹಾರವನ್ನು ಕೇಳಬಹುದು.