Third-party premium has changed from 1st June. Renew now
ಬೈಕ್‌ನ ಕ್ಯಾಶ್‌ಲೆಸ್ ಇನ್ಶೂರೆನ್ಸಿನ ವಿವರಣೆ
ನಮ್ಮ ದೇಶ, ಭಾರತವು 133.92 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ದೊಡ್ಡದು ಎನ್ನುವುದು ಕೇವಲ ಒಂದು ಪದವಾಗುತ್ತದೆ. ಆದರೆ ಈ ಅಗಾಧ ಸಂಖ್ಯೆಯ ಜನರು, ಸಮಾಜದ ವಿವಿಧ ಹಿನ್ನೆಲೆಗಳು ಮತ್ತು ವಿವಿಧ ವಿಭಾಗಗಳಿಂದ ಬರುತ್ತಾರೆ.
ಒಂದು ವೇಳೆ ಜನರ ಚಲನಶೀಲತೆಯ ಬಗ್ಗೆ ನೀವು ಆಶ್ಚರ್ಯ ಪಡುತ್ತಿದ್ದರೆ, ಸತತವಾಗಿ ಇರುವ ಟ್ರಾಫಿಕ್, ಕಣ್ಣಿಗೆ ಕಾಣದಷ್ಟು ತಲೆಗಳು ಮತ್ತು ವಾಹನಗಳಿಂದ ತುಂಬಿರುವ ರಸ್ತೆಗಳನ್ನು ನೀವು ನೋಡಬಹುದು. ಟು-ವೀಲರ್ ಅದರಲ್ಲೂ ಬೈಕ್‌ಗಳ ಸಂಖ್ಯೆ ಹೆಚ್ಚಿವೆ. ಏಕೆಂದರೆ ಇದು ಓಡಿಸಲು ಅನುಕೂಲಕರವಾಗಿದೆ, ಇದರ ನಿರ್ವಹಣೆಯು ಸುಲಭವಾಗಿದೆ ಮತ್ತು ಇದು ಉತ್ತಮ ಬೆಲೆಯಲ್ಲಿ ಲಭ್ಯವಿದೆ.
ಮೋಟಾರ್ ವೆಹಿಕಲ್ ಆಕ್ಟ್ , 1988 ರ ಅನ್ವಯ, ನಿಮ್ಮ ವಾಹನಕ್ಕೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕವರ್ ಅನ್ನು ಖರೀದಿಸುವುದು ಖಡ್ಡಾಯವಾಗಿದೆ. ಸಾಮಾನ್ಯವಾಗಿ, ಮಾರುಕಟ್ಟೆಯಲ್ಲಿರುವ ಇನ್ಶೂರೆನ್ಸ್ ಕಂಪನಿಗಳು ನಿಮಗೆ ಎರಡು ರೀತಿಯ ಮೋಟಾರ್ ಪಾಲಿಸಿಗಳನ್ನು ನೀಡುತ್ತವೆ. ಅವುಗಳೆಂದರೆ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಮತ್ತು ಥರ್ಡ್ ಪಾರ್ಟಿ ಲೈಬಿಲಿಟಿ ಇನ್ಶೂರೆನ್ಸ್.
ನೀವು ವಾಹನವನ್ನು ಹೊಂದಿದ್ದರೆ ಮತ್ತು ಆ ವಾಹನವನ್ನು ನಿಮ್ಮ ಉಪಯೋಗಕ್ಕಾಗಿ ರಸ್ತೆಗಳಲ್ಲಿ ಬಳಸಿದರೆ, ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ನಿಮ್ಮ ನೈತಿಕ ಜವಾಬ್ದಾರಿಯಾಗಿರುತ್ತದೆ.
ಕ್ಯಾಶ್‌ಲೆಸ್ ಬೈಕ್ ಇನ್ಶೂರೆನ್ಸ್ ಎಂದರೇನು?
ಅಪಘಾತದ ನಂತರ, ಜನರು ಸೌಲಭ್ಯಗಳನ್ನು ಮತ್ತು ಇನ್ಶೂರೆನ್ಸ್ ಸಹಾಯವನ್ನು ಪಡೆಯುತ್ತಾರೆ. ಇನ್ಶೂರೆನ್ಸ್ ಪೂರೈಕೆದಾರು ಪಟ್ಟಿಮಾಡಿದ ಯಾವುದೇ ಟು-ವೀಲರ್ ಗ್ಯಾರೇಜ್‌ನಲ್ಲಿ, ಬೈಕ್ ರಿಪೇರಿ ಮಾಡಲು ಈ ಇನ್ಶೂರೆನ್ಸ್ ಅನುವು ಮಾಡಿಕೊಡುತ್ತದೆ. ಪಾಲಿಸಿದಾರರು ತಮ್ಮ ಜೇಬಿನಿಂದ ಒಂದು ಪೈಸೆಯನ್ನು ಖರ್ಚು ಮಾಡಬೇಕಿಲ್ಲದಿರುವುದರಿಂದ ಇದು ಕ್ಯಾಶ್‌ಲೆಸ್ ಬೈಕ್ ಇನ್ಶೂರೆನ್ಸ್ ಎನಿಸಿಕೊಳ್ಳುತ್ತದೆ. ಪಾಲಿಸಿದಾರರ ಬದಲಿಗೆ ಇನ್ಶೂರೆನ್ಸ್ ಕಂಪನಿಯು ಎಲ್ಲಾ ದುರಸ್ತಿ ಬಿಲ್‌ಗಳನ್ನು ಪಾವತಿಸುತ್ತದೆ. ಕ್ಲೇಮ್ ಮಾಡುವ ಸಮಯದಲ್ಲಿ, ನೀವು ಪಾಲಿಸಿಯ ಅಡಿಯಲ್ಲಿ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಕ್ಯಾಶ್‌ಲೆಸ್ ಬೈಕ್ ಇನ್ಶೂರೆನ್ಸ್ ಎಷ್ಟು ಉಪಯುಕ್ತವಾಗಿದೆ ಎಂಬುದರ ಕುರಿತು ವಿವರಗಳನ್ನು ಪಡೆಯುವ ಮೊದಲು, ಮೋಟಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿರುವ ಪ್ರತಿಯೊಂದು ರೀತಿಯ ಕವರ್ ಅನ್ನು ಈಗ ನಾವು ವಿವರವಾಗಿ ನೋಡೋಣ.
ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ: ನೀವು ನಿಮಗಾಗಿ, ನಿಮ್ಮ ಬೈಕ್‌ಗಾಗಿ ಮತ್ತು ಥರ್ಡ್-ಪಾರ್ಟಿಗಾಗಿ ಕವರ್ ಖರೀದಿಸಲು ಆಯ್ಕೆಮಾಡುವ ಮೋಟಾರ್ ಪಾಲಿಸಿಯನ್ನು, ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಎನ್ನುತ್ತಾರೆ. ಅಪಘಾತ, ಬೆಂಕಿ, ಕಳ್ಳತನ, ನೈಸರ್ಗಿಕ ವಿಪತ್ತುಗಳು ಮತ್ತು ನಿಮ್ಮ ನಿಯಂತ್ರಣದಲ್ಲಿರದ ಇತರ ರೀತಿಯ ಘಟನೆಗಳ ಸಂದರ್ಭದಲ್ಲಿ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮನ್ನು ರಕ್ಷಿಸುತ್ತದೆ.
ಥರ್ಡ್-ಪಾರ್ಟಿ ಹೊಣೆಗಾರಿಕೆ ಪಾಲಿಸಿ: 'ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್' ಅಪಘಾತದಲ್ಲಿ ಭಾಗಿಯಾಗಿರುವ ಥರ್ಡ್ ಪಾರ್ಟಿಯನ್ನು ರಕ್ಷಿಸುತ್ತದೆ. ಅವರು ದೈಹಿಕ ಗಾಯವನ್ನು ಮತ್ತು ಆಸ್ತಿ ಹಾನಿಯನ್ನು ಹೊಂದಿರಬಹುದು. ಒಂದುವೇಳೆ ಇನ್ಶೂರೆನ್ಸ್ ಹೋಲ್ಡರ್ ಅಥವಾ ವಾಹನದ ಮಾಲೀಕ, ಅಪಘಾತ/ಹಾನಿಗೆ ಕಾರಣವಾಗಿದ್ದರೆ, ಕಾನೂನು ಮತ್ತು ವೈದ್ಯಕೀಯ ನೆರವಿನ ವೆಚ್ಚವನ್ನು ಪಾವತಿಸಲು ಅವಳು/ಅವನು ಜವಾಬ್ದಾರನಾಗಿರುತ್ತಾರೆ.
ಪರಿಶೀಲಿಸಿ : ಥರ್ಡ್ ಪಾರ್ಟಿ ಅಥವಾ ಕಾಂಪ್ರೆಹೆನ್ಸಿವ್ ಪಾಲಿಸಿ ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡಲು ಬೈಕ್ ಇನ್ಶುರೆನ್ಸ್ ಕ್ಯಾಲ್ಕುಲೇಟರ್ ಅನ್ನು ಬಳಸಿ.
ಕ್ಯಾಶ್‌ಲೆಸ್ ಬೈಕ್ ಇನ್ಶೂರೆನ್ಸ್ - ಒಂದು ಸ್ಪಷ್ಟ ಚಿತ್ರಣ
ಕ್ಯಾಶ್‌ಲೆಸ್ ಸೌಲಭ್ಯವನ್ನು ಬಳಸಿಕೊಳ್ಳಲು ಕ್ಯಾಶ್‌ಲೆಸ್ ಬೈಕ್ ಇನ್ಶೂರೆನ್ಸ್ ಕುರಿತು ಸ್ಪಷ್ಟ ಚಿತ್ರಣವನ್ನು ತಿಳಿದುಕೊಳ್ಳುವುದು ಜಾಣತನವಾಗಿದೆ. ಕ್ಯಾಶ್‌ಲೆಸ್ ಇನ್ಶೂರೆನ್ಸ್ ಸೌಲಭ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಇದರ ಉದ್ದೇಶವಾಗಿದೆ. ಅತ್ಯುತ್ತಮ ಸೇವೆ ಮತ್ತು ದುರಸ್ತಿ ಸಹಾಯವನ್ನು ಒದಗಿಸುವ ಆಯ್ದ ಗ್ಯಾರೇಜ್‌ಗಳೊಂದಿಗೆ ಇನ್ಶೂರೆನ್ಸ್ ಸಂಸ್ಥೆಗಳು ಸಹಯೋಗ (Tie-up) ಹೊಂದಿವೆ. ಕ್ಲೇಮ್ ಸಮಯದಲ್ಲಿ, ಇನ್ಶೂರೆನ್ಸ್ ಹೋಲ್ಡರ್'ಗೆ ನಿರ್ದಿಷ್ಟ ಗ್ಯಾರೇಜ್‌ಗೆ ಭೇಟಿ ನೀಡಲು ಮತ್ತು ರಿಪೇರಿ ಮಾಡಿಸಿಕೊಳ್ಳಲು ನಿರ್ದೇಶಿಸಲಾಗುತ್ತದೆ. ರಿಪೇರಿಯ ನಂತರ ಗ್ಯಾರೇಜ್ ಪ್ರತಿನಿಧಿ ದುರಸ್ತಿಯ ಬಿಲ್‌ಗಳನ್ನು ಇನ್ಶೂರೆನ್ಸ್ ಕಂಪನಿಗೆ ಕಳುಹಿಸುತ್ತಾರೆ. ಇನ್ಶೂರೆನ್ಸ್ ಹೋಲ್ಡರ್ ಆಗಿ ನೀವು ಇನ್ಶೂರೆನ್ಸ್ ಕಂಪನಿಗೆ ಹಾನಿ/ಅಪಘಾತದ ಸ್ವರೂಪವನ್ನು ವಿವರವಾಗಿ ತಿಳಿಸಬೇಕು. ಎಲ್ಲ ವಿವರಗಳ ಪರಿಶೀಲನೆಯ ನಂತರ, ಇನ್ಶೂರೆನ್ಸ್ ಕಂಪನಿಯು, ಪಾಲಿಸಿಯಲ್ಲಿ ನಮೂದಿಸಲಾದ ಮಿತಿಗಳ ಪ್ರಕಾರ ಪಾವತಿಯನ್ನು ಬಿಡುಗಡೆ ಮಾಡುತ್ತಾರೆ.
ಕ್ಯಾಶ್‌ಲೆಸ್ ಬೈಕ್ ಇನ್ಶೂರೆನ್ಸ್‌ನ ಕ್ಲೇಮ್ ಮಾಡುವುದು ಹೇಗೆ?
ನೀವು ಡಿಜಿಟ್ ಇನ್ಶೂರೆನ್ಸ್‌ನೊಂದಿಗೆ ಇನ್ಶೂರೆನ್ಸ್ ಖರೀದಿಸಿದ್ದರೆ, ಕ್ಯಾಶ್‌ಲೆಸ್ ಬೈಕ್ ಇನ್ಶೂರೆನ್ಸ್‌ನ ಕ್ಲೇಮ್ ಮಾಡುವ ಹಂತ-ಹಂತದ ಪ್ರಕ್ರಿಯೆ ಇಲ್ಲಿದೆ.
- ಹಂತ 1: ಇನ್ಶೂರೆನ್ಸ್ ಕಂಪನಿಗೆ ಆನ್‌ಲೈನ್‌ನಲ್ಲಿ ಅಥವಾ ಕಂಪನಿಯ ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಫೋನಿನಲ್ಲಿ ಇನ್ಶೂರೆನ್ಸ್ ಕಂಪನಿಯವರಿಗೆ ಮಾಹಿತಿ ನೀಡಿ.
- ಹಂತ 2: 1800-258-5956 ಸಂಖ್ಯೆಗೆ ಕರೆ ಮಾಡಿ. ಹಕ್ಕುದಾರರು (claimant) ಅದರಿಂದ ಲಿಂಕ್ ಒಂದನ್ನು ಸ್ವೀಕರಿಸುತ್ತಾರೆ.
- ಹಂತ 3: ಈ ಸ್ವಯಂ ತಪಾಸಣಾ (self-inspection) ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಬೈಕ್‌ನ ಹಾನಿಗಳನ್ನು ಶೂಟ್ ಮಾಡಿ, ಅದರ ವಿವರಗಳನ್ನು ನಮಗೆ ಕಳುಹಿಸಿ.
- ಹಂತ 4: ನಿಮ್ಮ ಬೈಕಿನ ದುರಸ್ತಿಗಾಗಿ, ಪಟ್ಟಿ ಮಾಡಲಾದ ನಮ್ಮ ಯಾವುದೇ ಗ್ಯಾರೇಜ್ ಅನ್ನು ಆಯ್ದುಕೊಳ್ಳಿ. ಗ್ಯಾರೇಜ್ ಪ್ರತಿನಿಧಿಯು ಬಿಲ್‌ಗಳನ್ನು ಇನ್ಶೂರೆನ್ಸ್ ಕಂಪನಿಗೆ ಕಳುಹಿಸುತ್ತಾರೆ.
- ಹಂತ 5: ಇನ್ಶೂರೆನ್ಸ್ ಹೋಲ್ಡರ್, ಡಿಜಿಟ್ ಇನ್ಶೂರೆನ್ಸ್ ಕಂಪನಿಯಿಂದ ಮರುಪಾವತಿಯನ್ನು ಕ್ಲೇಮ್ ಮಾಡಬಹುದು.
ಕ್ಯಾಶ್‌ಲೆಸ್ ಬೈಕ್ ಇನ್ಶೂರೆನ್ಸ್ ಕ್ಲೇಮ್‌ಗೆ ಅಗತ್ಯವಿರುವ ದಾಖಲೆಗಳು
ಡಿಜಿಟ್ ನಲ್ಲಿ, ಯಾವುದೇ ದಾಖಲೆಗಳ ಅಗತ್ಯವಿಲ್ಲ. ಎಲ್ಲಾ ಕ್ಲೇಮ್‌ಗಳನ್ನು ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಲಾಗಿದೆ ಅಥವಾ ನೀವು ಆನ್‌ಲೈನ್‌ನಲ್ಲಿ ವಿನಂತಿಸಬಹುದು. ಪ್ರಕ್ರಿಯೆಯು ತ್ವರಿತವಾದುದಾಗಿದೆ (quick) ಮತ್ತು ಸಂಪೂರ್ಣವಾಗಿ ಕಾಗದರಹಿತವಾಗಿದೆ (Paperless).
ಕ್ಯಾಶ್‌ಲೆಸ್ ಬೈಕ್ ಇನ್ಶೂರೆನ್ಸ್ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು
ನೀವು ಕ್ಯಾಶ್‌ಲೆಸ್ ಬೈಕ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಂಡಿದ್ದರೆ, ಕ್ಲೇಮ್ ಮಾಡುವ ಸಮಯದಲ್ಲಿ ಉಂಟಾಗುವ ಎಲ್ಲ ವೆಚ್ಚಗಳನ್ನು ಇನ್ಶೂರೆನ್ಸ್ ಕಂಪನಿಯವರು ಪಾವತಿಸುತ್ತಾರೆ ಎಂಬ ಭರವಸೆಯನ್ನು ಹೊಂದುತ್ತೀರಿ. ಆದರೆ ಬೈಕ್ ಇನ್ಶೂರೆನ್ಸಿನ ಬಗ್ಗೆ ನೀವು ಹೆಚ್ಚು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ:
- ಪಟ್ಟಿ ಮಾಡಲಾದ ಗ್ಯಾರೇಜ್ ಒಂದರಲ್ಲಿ ಕ್ಯಾಶ್‌ಲೆಸ್ ಸೌಲಭ್ಯವನ್ನು ಪಡೆಯುವುದು ಕಷ್ಟಕರವೆನಿಸುವ ಸಂದರ್ಭಗಳು ಇರಬಹುದು. ಅಂತಹ ಸಂದರ್ಭದಲ್ಲಿ, ನೀವು ಬೈಕ್ ರಿಪೇರಿ ಮಾಡಿಸಬಹುದು ಹಾಗೂ ಅದನ್ನು ಪಾವತಿಸಬಹುದು. ನಂತರ, ಗ್ಯಾರೇಜ್‌ನಿಂದ ಎಲ್ಲ ಬಿಲ್‌ಗಳನ್ನು ಸಂಗ್ರಹಿಸಿ ನಂತರ ಅದನ್ನು ಇನ್ಶೂರೆನ್ಸ್ ಕಂಪನಿಗೆ ಸಲ್ಲಿಸಿ. ಸರ್ವೇಯರ್‌ನ ವರದಿಯಂತೆ, ನೀವು ಪಾವತಿಸಿದ ಮೊತ್ತವನ್ನು ಅವರು ನಿಮಗೆ ಮರುಪಾವತಿ ಮಾಡುತ್ತಾರೆ.
- ಬೈಕ್‌ನ ಎಲ್ಲ ಭಾಗಗಳು ಇನ್ಶೂರೆನ್ಸಿನ ಅಡಿಯಲ್ಲಿ ಕವರ್ ಆಗುವುದಿಲ್ಲ. ನೀವು ಅಂತಹ ಭಾಗಗಳ ಬಗ್ಗೆ ತಿಳಿದಿರಬೇಕು ಮತ್ತು ದುರಸ್ತಿ ಪ್ರಕ್ರಿಯೆಗಾಗಿ ನಿರೀಕ್ಷಿಸಬೇಡಿ. ಅಂತಹ ಭಾಗಗಳ ವೆಚ್ಚಗಳಿಗೆ ಇನ್ಶೂರೆನ್ಸ್ ಹೋಲ್ಡರ್ ಪಾವತಿಸಬೇಕಾಗುತ್ತದೆ.
ಅನೇಕ ಇನ್ಶೂರೆನ್ಸ್ ಕಂಪನಿಗಳು ಕ್ಯಾಶ್‌ಲೆಸ್ ಬೈಕ್ ಇನ್ಶೂರೆನ್ಸ್ ಸೌಲಭ್ಯವನ್ನು, ಅನುಕೂಲಕರವಾಗಿ ಮತ್ತು ಸೂಕ್ತವಾಗಿ ಕೈಗೆಟುಕುವಂತೆ ವಿನ್ಯಾಸಗೊಳಿಸಿವೆ. ನೀವು ಪ್ರತ್ಯೇಕವಾಗಿ ಆಯ್ಕೆ ಮಾಡುವ ಮೊದಲು, ನಿಮಗೆ ಲಭ್ಯವಿರುವ ಆಯ್ಕೆಗಳನ್ನು ಚೆನ್ನಾಗಿ ಹೋಲಿಕೆ ಮಾಡಿದರೆ ಅದು ಉತ್ತಮ ಆಯ್ಕೆಯಾಗುತ್ತದೆ.