Third-party premium has changed from 1st June. Renew now
ನಿಮ್ಮ ಟು ವೀಲರ್ ವಾಹನಕ್ಕಾಗಿ ಟಿವಿಎಸ್ ಇನ್ಶೂರೆನ್ಸ್ ಅನ್ನು ಖರೀದಿಸಿ/ರಿನ್ಯೂ ಮಾಡಿ
ಟಿವಿಎಸ್ ಬೈಕ್ ಗಳು, ಅದರ ಜನಪ್ರಿಯತೆಯ ಕಾರಣ, ಟಿವಿಎಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳು ಹಾಗೂ ಅದರಿಂದ ಗರಿಷ್ಠ ಲಾಭಗಳಿಸುವುದಕ್ಕಾಗಿ ಯಾವ ರೀತಿ ಆಯ್ಕೆ ಮಾಡಬೇಕು, ಎನ್ನುವುದರ ಬಗ್ಗೆ ನಾವು ಮಾತನಾಡೋಣ. 2018-19 ಹಣಕಾಸಿನ ವರ್ಷದಲ್ಲಿ ಸುಮಾರು 24.5 ಮಿಲಿಯ ವಾಹನಗಳನ್ನು ಬಿಡುಗಡೆ ಮಾಡಿದ ಭಾರತವು, ಟು ವೀಲರ್ ವಾಹನ ತಯಾರಿಕೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿರುವ ರಾಷ್ಟ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಸುಮಾರು 22 ತಯಾರಕರೊಂದಿಗೆ, 2018 ರಲ್ಲಿ, ದೇಶದ ಮೋಟಾರ್ ವಾಹನ ತಯಾರಿಕೆ ವಿಭಾಗದಲ್ಲಿ ಸರಾಸರಿ ಸ್ಥಳೀಯ ಮಾರಾಟವು 21.18 ಮಿಲಿಯನ್ ವಾಹನಗಳಾಗಿತ್ತು. (1)
ಈ ತಯಾರಕರಲ್ಲಿ, ಟಿವಿಎಸ್ ಮೋಟಾರ್ ಕಂಪನಿಯ ಹೆಸರು ಎಂದಿಗೂ ಭರವಸೆಯ ಇನ್ನೊಂದು ಹೆಸರಾಗಿದೆ. ಮಾರುಕಟ್ಟೆಯಲ್ಲಿ ಮೂರನೇ ಅತೀ ದೊಡ್ಡ ಉತ್ಮಾದನೆಯ ಕಂಪನಿಯಾಗಿದ್ದು, ಟಿವಿಎಸ್ ನ ವಾರ್ಷಿಕ ಆದಾಯವು 20,185.43 ಕೋಟಿಯಾಗಿದೆ. ಈ ಅಂಕಿಗಳಿಂದ, ಭಾರತದಲ್ಲಿ ಟಿವಿಎಸ್ ಉತ್ಪನ್ನಗಳಿಗೆ ಗಣನೀಯ ಬೇಡಿಕೆ ಇದೆ ಎಂದು ಸಾಬೀತಾಗುತ್ತದೆ.
ಈಗ, ನಿಮ್ಮ ಟಿವಿಎಸ್ ಟು ವೀಲರ್ ವಾಹನಗಳನ್ನು ಇನ್ಶೂರ್ ಮಾಡುವ ಬಗ್ಗೆ ಮಾತನಾಡೋಣ. ಟಿವಿಎಸ್ ಬೈಕ್ ಇನ್ಶೂರೆನ್ಸ್ ನಿಮ್ಮ ಟಿವಿಎಸ್ ಟು ವೀಲರ್ ವಾಹನಕ್ಕೆ ಒಂದು ಉತ್ತಮ ಆರ್ಥಿಕ ಸಾಧನವಾಗಿದ್ದು, ನಿಮ್ಮ ವಾಹನವನ್ನು ರಸ್ತೆಯಲ್ಲಿ ಚಲಾಯಿಸುವಾಗ ಉಂಟಾಗಬಹುದಾದ ನಷ್ಟಗಳಿಂದ ನಿಮ್ಮ ಹಣವನ್ನು ಸಂರಕ್ಷಿಸುತ್ತದೆ.
ನಿಮ್ಮ ಟಿವಿಎಸ್ ಟು ವೀಲರ್ ವಾಹನಕ್ಕಾಗಿ, ಈ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು(ಥರ್ಡ್ ಪಾರ್ಟೀ ಹೊಣೆಗಾರಿಕೆ ಕವರ್) ಮೋಟಾರ್ ವಾಹನ ಅಧಿನಿಯಮ, 1988, ಪ್ರಕಾರ ಕಡ್ಡಾಯವಾಗಿದೆ. ಜೊತೆಗೆ, ನಿಮ್ಮ ಟು ವೀಲರ್ ವಾಹನವನ್ನು ಒಳಗೊಂಡಿರುವ ಅಪಘಾತದಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಕವರ್ ಮಾಡುವುದು ಅಗತ್ಯವೂ ಆಗಿದೆ.
ಟಿವಿಎಸ್ ಬೈಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿದೆ
ಯಾವ ಕವರ್ ಸಿಗುವುದಿಲ್ಲ?
ನೀವು ಕ್ಲೈಮ್ ಮಾಡುವಾಗ ಯಾವುದೇ ಆಶ್ಚರ್ಯ ಪಡಬೇಕಾದ ಸಂದರ್ಭ ಸೃಷ್ಟಿಯಾಗಬಾರದು ಎಂದರೆ ನಿಮ್ಮ ಎಲೆಕ್ಟ್ರಿಕ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಸಿಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಆದ್ದರಿಂದ ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:
ಥರ್ಡ್-ಪಾರ್ಟಿ ಅಥವಾ ಲಯಬಿಲಿಟೀಸ್ ಬೈಕ್ ಪಾಲಿಸಿಯ ಸಂದರ್ಭದಲ್ಲಿ, ಸ್ವಂತ ವಾಹನಕ್ಕೆ ಉಂಟಾದ ಹಾನಿಯನ್ನು ಒಳಗೊಂಡಿರುವುದಿಲ್ಲ.
ನೀವು ಕುಡಿದು ಸವಾರಿ ಮಾಡುತ್ತಿರುವ ಸಂದರ್ಭಗಳಲ್ಲಿ ಅಥವಾ ಮಾನ್ಯವಾದ ಟು ವೀಲರ್ ವಾಹನ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸುತ್ತಿದ್ದರೆ, ನಿಮ್ಮ ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ನಿಮಗೆ ಕವರ್ ನೀಡುವುದಿಲ್ಲ.
ನೀವು ಕಲಿಯುವವರ ಲೈಸೆನ್ಸ್ ಹೊಂದಿದ್ದು, ಪಿಲಿಯನ್ ಸೀಟಿನಲ್ಲಿ ಮಾನ್ಯವಾದ ಲೈಸೆನ್ಸ್-ಹೋಲ್ಡರ್ ಇಲ್ಲದೆ ನಿಮ್ಮ ಟು ವೀಲರ್ ವಾಹನವನ್ನು ಓಡಿಸುತ್ತಿದ್ದರೆ- ಆ ಸಂದರ್ಭಗಳಲ್ಲಿ ನಿಮ್ಮ ಕ್ಲೈಮ್ ಕವರ್ ಗೆ ಒಳಪಡುವುದಿಲ್ಲ.
ಯಾವುದೇ ಕೊಡುಗೆಯ ನಿರ್ಲಕ್ಷ್ಯ (ಉದಾ. ತಯಾರಕರ ಚಾಲನಾ ಕೈಪಿಡಿಯ ಪ್ರಕಾರ ಶಿಫಾರಸು ಮಾಡಲಾಗಿರದ ಪ್ರಕ್ರಿಯೆ ಅಂದರೆ ಪ್ರವಾಹದಲ್ಲಿ ಟು ವೀಲರ್ ವಾಹನವನ್ನು ಚಾಲನೆ ಮಾಡುವುದರಿಂದ ಉಂಟಾಗುವ ಹಾನಿ ಇವುಗಳಿಗೆ ಕವರ್ ನೀಡಲಾಗುವುದಿಲ್ಲ)
ಕೆಲವು ಸನ್ನಿವೇಶಗಳನ್ನು ಆಡ್-ಆನ್‌ಗಳು ರಕ್ಷಿಸುತ್ತವೆ. ನೀವು ಅಂತಹ ಆಡ್-ಆನ್‌ಗಳನ್ನು ಖರೀದಿಸದಿದ್ದರೆ, ಅದಕ್ಕೆ ಅನುಗುಣವಾದ ಸಂದರ್ಭಗಳಲ್ಲಿ ಕವರ್ ಪಡೆದುಕೊಳ್ಳಲು ಸಾಧ್ಯವಿಲ್ಲ.
ನೀವು ಡಿಜಿಟ್ ನ ಟಿವಿಎಸ್ ಬೈಕ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?
ನಿಮ್ಮ ಅಗತ್ಯತೆಗಳಿಗೆ ತಕ್ಕಂತೆ ಬರುವ ಬೈಕ್ ಇನ್ಶೂರೆನ್ಸ್ ಯೋಜನೆಗಳು
ಥರ್ಡ್ ವ್ಯಕ್ತಿ ಬೈಕ್ ಇನ್ಶೂರೆನ್ಸ್ ಬೈಕ್ ವಿಮೆಯ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ; ಇದು ಮೂರನೇ ವ್ಯಕ್ತಿಗೆ, ವಾಹನಕ್ಕೆ ಅಥವಾ ಆಸ್ತಿಗೆ ಉಂಟಾದ ಹಾನಿ ಮತ್ತು ನಷ್ಟಗಳನ್ನು ಮಾತ್ರ ಒಳಗೊಂಡಿರುತ್ತದೆ
ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಬೈಕ್ ಇನ್ಶೂರೆನ್ಸ್ ನ ಅತ್ಯಮೂಲ್ಯ ವಿಧಗಳಲ್ಲಿ ಒಂದಾಗಿದೆ, ಈ ಬೈಕ್ ಇನ್ಶೂರೆನ್ಸ್ ಮೂರನೇ ವ್ಯಕ್ತಿಯ ಹೊಣೆಗಾರಿಕೆಗಳು ಮತ್ತು ನಿಮ್ಮ ಸ್ವಂತ ಬೈಕ್ ಗೆ ಸಂಭವಿಸುವ ಹಾನಿ ಎರಡನ್ನೂ ಒಳಗೊಂಡಿರುತ್ತದೆ.
ಥರ್ಡ್ ಪಾರ್ಟೀ | ಕಾಂಪ್ರೆಹೆನ್ಸಿವ್ |
ಅಪಘಾತದ ಕಾರಣ ನಿಮ್ಮ ಸ್ವಂತ ಟು ವೀಲರ್ ವಾಹನಕ್ಕಾದ ಹಾನಿಗಳು/ನಷ್ಟಗಳು |
|
ಬೆಂಕಿಯ ಕಾರಣ ನಿಮ್ಮ ಸ್ವಂತ ಟು ವೀಲರ್ ವಾಹನಕ್ಕಾದ ಹಾನಿಗಳು/ನಷ್ಟಗಳು |
|
ನೈಸರ್ಗಿಕ ವಿಪತ್ತಿನ ಕಾರಣ ನಿಮ್ಮ ಸ್ವಂತ ಟು ವೀಲರ್ ವಾಹನಕ್ಕಾದ ಹಾನಿಗಳು/ನಷ್ಟಗಳು |
|
ಥರ್ಡ್ ಪಾರ್ಟೀ ವಾಹನಕ್ಕಾದ ಹಾನಿಗಳು |
|
ಥರ್ಡ್ ಪಾರ್ಟೀ ಸ್ವತ್ತಿಗಾದ ಹಾನಿಗಳು |
|
ವಯಕ್ತಿಕ ಅಪಘಾತ ಕವರ್ |
|
ಥರ್ಡ್ ಪಾರ್ಟೀ ವ್ಯಕ್ತಿಗೆ ಗಾಯ/ಸಾವು |
|
ನಿಮ್ಮ ಸ್ಕೂಟರ್ ಅಥವಾ ಬೈಕ್ ನ ಕಳವು |
|
ನಿಮ್ಮ ಐಡಿವಿ ಅನ್ನು ಕಸ್ಟಮೈಜ್ ಮಾಡಿ |
|
ಕಸ್ಟಮೈಜ್ ಆದ ಆಡ್-ಆನ್ ಗಳಿಂದಾಗಿ ಹೆಚ್ಚುವರಿ ಸುರಕ್ಷೆ |
|
Get Quote | Get Quote |
Know more about the difference between comprehensive and third party two wheeler insurance
ಸಮಗ್ರ ಹಾಗೂ ಥರ್ಡ್ ಪಾರ್ಟೀ ಟು ವೀಲರ್ ವಾಹನ ಇನ್ಶೂರೆನ್ಸ್ ನಡುವಿನ ವ್ಯತ್ಯಾಸಗಳ ಬಗ್ಗೆ ಹೆಚ್ಚು ತಿಳಿಯಿರಿ
ಕ್ಲೈಮ್ ಫೈಲ್ ಮಾಡುವುದು ಹೇಗೆ?
ನೀವು ನಮ್ಮ ಟು – ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದ ಅಥವಾ ನವೀಕರಿಸಿದ ನಂತರ, ನೀವು ಚಿಂತೆ ಇಲ್ಲದೆ ಇರಬಹುದು, ಏಕೆಂದರೆ 3 ಹಂತಗಳ ಸಂಪೂರ್ಣ ಡಿಜಿಟಲ್ ಕ್ಲೈಮ್ ಪ್ರಕ್ರಿಯೆಯನ್ನು ನಾವು ನಿಮಗಾಗಿ ಒದಗಿಸುತ್ತಿದ್ದೇವೆ!
ಹಂತ 1
1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರಂ ಭರ್ತಿ ಮಾಡಬೇಕಾದ ಅವಶ್ಯಕತೆ ಇಲ್ಲ.
ಹಂತ 2
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸೆಲ್ಫ್ ಇನ್ಸ್ಪೆಕ್ಷನ್ ಮಾಡುವ ಲಿಂಕ್ ಪಡೆಯಿರಿ. ಹಂತ ಹಂತವಾಗಿ ಬರಲಾಗುವ ಮಾರ್ಗದರ್ಶನದ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನಕ್ಕೆ ಉಂಟಾದ ಹಾನಿಯನ್ನು ಸೆರೆ ಹಿಡಿಯಿರಿ.
ಹಂತ 3
ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆಯ್ದುಕೊಳ್ಳಿ ಅಂದರೆ, ನಮ್ಮ ಗ್ಯಾರೇಜ್ ಗಳ ನೆಟ್ವರ್ಕ್ ಮೂಲಕ ಮರುಪಾವತಿ ಅಥವಾ ಕ್ಯಾಶ್ಲೆಸ್ ವ್ಯವಹಾರದ ಸೌಲಭ್ಯ ಪಡೆಯಬಹುದು.
ಟಿವಿಎಸ್ ಮೋಟಾರ್ ಕಂಪನಿ - ಒಂದು ಸಂಕ್ಷಿಪ್ತ ಇತಿಹಾಸ
ಟಿವಿಎಸ್ ಮೋಟಾರ್ ಕಂಪನಿ ಲಿ., ಗಾತ್ರ ಹಾಗೂ ವಹಿವಾಟಿನ ನಿಟ್ಟಿನಲ್ಲಿ, ಟಿವಿಎಸ್ ಗ್ರೂಪಿನ ಅತೀ ದೊಡ್ಡ ಕೊಡುಗೆದಾರನಾಗಿದೆ. 1972 ರಲ್ಲಿ ಸುಂದರಂ ಕ್ಲೇಯ್ಟನ್ ಕಂಪನಿ ಮೂಲಕ ತನ್ನ ಮೂಲವನ್ನು ಕಂಡುಕೊಂಡ ಟಿವಿಎಸ್ ನ ಪ್ರಧಾನ ಕಛೇರಿ ಚೆನ್ನೈನಲ್ಲಿದೆ. ಜಪಾನಿನ ಅಗ್ರ ಶ್ರೇಣಿಯ ತಯಾರಕರಲ್ಲಿ ಒಂದಾದ ಸುಜುಕಿ ಜೊತೆಗಿನ ತಾಂತ್ರಿಕ ಸಹಯೋಗದೊಂದಿಗೆ, ಈ ಕಂಪನಿಯು ಮೋಟಾರ್ಸೈಕಲ್ ಗಳನ್ನು ತಯಾರಿಸಲು ಆರಂಭಿಸಿತು.
2001 ರಲ್ಲಿ ಸುಜುಕಿಯೊಂದಿಗಿನ ತನ್ನ ಸಹಯೋಗ ಕೊನೆಗೊಂಡ ನಂತರ, ಟಿವಿಎಸ್ ಅನ್ನು 2001 ರಲ್ಲಿ ಪ್ರತ್ಯೇಕವಾಗಿ ಸ್ಥಾಪಿಸಲಾಯಿತು. ಅಂದಿನಿಂದ ಈ ಕಂಪನಿಯು ಹಲವು ಪ್ರಶಸ್ತಿ ಹಾಗೂ ಮನ್ನಣೆಗಳನ್ನು ತನ್ನದಾಗಿಸಿಕೊಂಡು ಭಾರತದ ಮೋಟಾರ್ ಬೈಕ್ ತಯಾರಿಕೆಯ ಕಾರ್ಯಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ದೃಢಪಡಿಸಿಕೊಂಡಿದೆ.
ಕಂಪನಿಯ ಇತ್ತೀಚಿಗೆ ಪ್ರಾರಂಭಿಸಲಾದ ಕೆಲವು ಇತ್ಪನ್ನಗಳು ಇಲ್ಲಿವೆ:
ಟಿವಿಎಸ್ ಅಪಾಚೆ ಆರ್ ಟಿ ಆರ್ 200
ಟಿವಿಎಸ್ ಅಪಾಚೆ ಆರ್ ಆರ್ 310
ಟಿವಿಎಸ್ ಎಕ್ಸ್ ಎಲ್ 100
ಟಿವಿಎಸ್ ವಿಕ್ಟರ್
ತನ್ನ ಕ್ಯಾಟಲಾಗ್ ನಲ್ಲಿ ಇಂತಹ ಉನ್ನತ ಮಟ್ಟದ ಉತ್ಪನ್ನಗಳನ್ನು ಇಟ್ಟುಕೊಂಡಿರುವ ಟಿವಿಎಸ್, ದೇಶದಲ್ಲಿ ಮೋಟಾರ್ ಸೈಕಲ್ ತಯಾರಿಕೆಯ ಆಟವನ್ನೇ ಬದಲಿಸುವ ನಿಟ್ಟಿನಲ್ಲಿ ಅಪಾರ ಕೊಡುಗೆ ನೀಡಿದ ಬ್ರ್ಯಾಂಡ್ ಗಳಲ್ಲಿ ಒಂದಾಗಿದೆ. ಆದ್ದರಿಂದಲೇ, ಅದರ ಬೈಕ್ ಗಳ ಜೊತೆ, ಮೋಟಾರ್ ಸೈಕಲ್ ಪ್ರಿಯರ ನಡುವೆ, ಟಿವಿಎಸ್ ಬೈಕ್ ಇನ್ಶೂರೆನ್ಸ್ ಗಿರುವ ಬೇಡಿಕೆಯೂ ಬಹಳ ಹೆಚ್ಚಿದೆ.
ಟಿವಿಎಸ್ ಮೋಟಾರ್ ಕಂಪನಿ ಇಷ್ಟು ಜನಪ್ರಿಯ ಏಕಿದೆ?
ಸರಿ, ಈ ಬ್ರ್ಯಾಂಡ್ ಇಷ್ಟು ಜನಪ್ರಿಯವಾಗಿರಲು ಹಲವಾರು ಕಾರಣಗಳಿವೆ. ಇಲ್ಲಿ ಕೆಲವು ಕಾರಣಗಳನ್ನು ನೀಡಲಾಗಿದೆ;
ಇದು, ಭಾರತದ ಮೊದಲ ಸ್ವದೇಶಿ ಬೈಕ್ - ವಿಕ್ಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ ಮೊದಲ ಕಂಪನಿಯಾಗಿದೆ.
ಇವರು, ಪ್ರತಿದಿನದ ಬಳಕೆಗೆ ಉತ್ತಮವಾಗಿರುವ ಬೈಕ್ ಗಳನ್ನು ಕೈಗೆಟಕುವ ದರಗಳಲ್ಲಿ ತಯಾರಿಸುತ್ತಾರೆ. ಫ಼್ಯಾನ್ಸಿ(ಅಲಂಕಾರಿಕ) ಬೈಕ್ ಗಳು ಆಕರ್ಷಕವಾಗಿ ಕಂಡರೂ, ಪ್ರಯಾಣಿಕ ಬೈಕ್ ಗಳು ಹೆಚ್ಚು ಅನುಕೂಲಕರವಾಗಿದ್ದು, ಸಾರ್ವಜನಿಕರಿಗೆ ಈ ವಾಹನಗಳು ಉತ್ತಮ ಆಯ್ಕೆಯಾಗಿವೆ.
2019 ರಲ್ಲಿ ಟಿವಿಎಸ್, ಭಾರತದ ಮೊದಲ ಎಥನಾಲ್ ಆಧಾರಿತ ಮೋಟಾರ್ ಸೈಕಲ್ ಅನ್ನು ಪ್ರಾರಂಭಿಸಿತು. ಜೈವಿಕ ಇಂಧನಗಳ ಬದಲಿಗೆ ಎಥನಾಲ್ ಅನ್ನು ಬಳಸುವುದು, ಪ್ರದೂಷಣೆಯನ್ನು ನಿಯಂತ್ರಿಸುವ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ ಹಾಗೂ ಇದನ್ನು ಮಾಡುವುದು ಇಂದಿನ ಸಮಯದ ಒಂದು ತೀವ್ರ ಆವಶ್ಯಕತೆಯಾಗಿದೆ.
ಟಿವಿಎಸ್ ನ ಬೈಕ್ ಗಳು ಆಧುನಿಕ ತಂತ್ರಜ್ಞಾನ, ಅಂದವಾದ ರಚನೆ ಹಾಗೂ ಶ್ರೇಷ್ಠ ಸಾಮರ್ಥ್ಯವನ್ನು ಹೊಂದಿವೆ.
ಭಾರತೀಯರಲ್ಲಿ, ವಿಶೇಷವಾಗಿ ತಮ್ಮ ದೈನಂದಿನದ ಪ್ರಯಾಣಗಳಿಗೆ ಮೋಟಾರ್ ಸೈಕಲ್ ಮೇಲೆ ಅವಲಂಬಿತರಾದವರಲ್ಲಿ, ಇವುಗಳು, ಟಿವಿಎಸ್ ಅನ್ನು ಇಷ್ಟು ಜನಪ್ರಿಯಗೊಳಿಸುವ ಕೆಲವು ಪ್ರಮುಖ ಅಂಶಗಳಾಗಿವೆ.
ಟಿವಿಎಸ್ ಟು ವೀಲರ್ ವಾಹನಗಳ ವೈಶಿಷ್ಟ್ಯಗಳು - ಇವುಗಳು ಇಷ್ಟು ಆಕರ್ಷಕವಾಗಿರಲು ಕಾರಣವೇನು?
ಭಾರತದ ತಯಾರಕರು ತಯಾರಿಸಿದ ಬೈಕ್ ಗಳ ವಿಷಯ ಬಂದಾಗ, ಟಿವಿಎಸ್ ಬಿಡುಗಡೆ ಮಾಡಿದ ಬೈಕ್ ಗಳು ಅದ್ವಿತೀಯವಾಗಿರುತ್ತವೆ.
ಏಕೆ ಎಂದು ಕೇಳಿದಿರಾ? ನೀವೇ ನೋಡಿ!
ಬಾಳಿಕೆ - ಬೈಕ್ ನ ಬಾಳಿಕೆಯು, ಅದರ ಬಳಕೆ ಹಾಗೂ ನಿರ್ವಣೆಯನ್ನು ಅವಲಂಬಿಸಿದೆಯಾದರೂ, ಟಿವಿಎಸ್ ಟು ವೀಲರ್ ವಾಹನಗಳು ಮಾರುಕಟ್ಟೆಯ ಗಟ್ಟಿಮುಟ್ಟಾದ ಬೈಕುಗಳಲ್ಲಿ ಒಂದಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿವೆ. ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ, ಟಿವಿಎಸ್ ಮಾದರಿಗಳು ಉತ್ತಮ ಪ್ರಯಾಣಿಕ ಬೈಕ್ ಗಳಾಗಿವೆ.
ಭರವಸೆ - ಟಿವಿಎಸ್ ಬೈಕ್ ಗಳು ಮಾರುಕಟ್ಟೆಯಲ್ಲಿ ಭರವಸೆಗಾಗಿ ಪ್ರಖ್ಯಾತರಾಗಿದ್ದಾರೆ. ಪ್ರಯಾಣಿಕ ಬೈಕ್ ಗಳ ವಿಷಯ ಬಂದಾಗ, ಟಿವಿಎಸ್ ವಿಕ್ಟರ್ ಭಾರತೀಯರ ಮೊದಲ ಆಯ್ಕೆಯಾಗಿದೆ. ಅಪಾಚೆ ಸರಣಿಗಳ ಒಳ್ಳೆಯ ಮೈಲೇಜ್ ಹಾಗೂ ಅತ್ಯುತ್ತಮ ಎಂಜಿನ್ ಜೊತೆ, ಟಿವಿಎಸ್ ಹೈ ಎಂಡ್ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸುವಲ್ಲಿ ಯಾಶಸ್ವಿಯಾಗಿದೆ.
ಕೈಗೆಟಕುವ ದರಗಳು - ಇವುಗಳು ತಮ್ಮ ಉನ್ನತ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದರೂ, ಟಿವಿಎಸ್ ಬೈಕ್ ಗಳು ತಮ್ಮ ಕೈಗೆಟಕುವ ದರಗಳಿಂದಲೂ ಛಾಪು ಮೂಡಿಸಿವೆ. ಅತ್ಯಂತ ದುಬಾರಿ ಟಿವಿಎಸ್ ಬೈಕ್ ಆದ ಟಿವಿಎಸ್ ಅಪಾಚೆ ಆರ್ ಆರ್ 310, ರೂ 2.28 ಬೆಲೆಬಾಳಿದರೂ, ನೀವು ಸುಲಭವಾಗಿ ರೂ 40,000 ಬೆಲೆಯ ಟಿವಿಎಸ್ ಸ್ಪೋರ್ಟ್ ಅನ್ನು ಖರೀದಿಸಬಹುದು.
ವೈವಿಧ್ಯಮಯ ಉತ್ಪನ್ನಗಳು - ಪ್ರತೀ ವರ್ಷ ಇದು ಬಿಡುಗಡೆ ಮಾಡುವ ವೈವಿಧ್ಯಮಯ ಉತ್ಪನ್ನಗಳು ಇದರ ಹಿರಿಮೆಯ ಹಿಂದಿನ ಒಂದು ಸಹಾಯಕ ಅಂಶವಾಗಿದೆ. “ಎಲ್ಲರಿಗೂ ಒಂದು ವಾಹನ” ಎಂಬ ಟ್ಯಾಗ್ ಲೈನ್ ಹೊಂದಿರುವ ಟಿವಿಎಸ್, ವಿವಿಧ ಶೈಲಿಯ ಸ್ಕೂಟರ್ ಗಳು, ಮೋಟಾರ್ ಸೈಕಲ್ ಗಳು, ಮೋಪೆಡ್ ಗಳು ಇತ್ಯಾದಿಗಳನ್ನು ಒದಗಿಸುತ್ತದೆ.
ಆಧುನಿಕ ತಂತ್ರಜ್ಞಾನ - ಟಿವಿಎಸ್, ಬಿಎಸ್-VI ಗುಣಮಟ್ಟಕ್ಕೆ ಒಗ್ಗುವ ಮೋಟಾರ್ ಸೈಕಲ್ ಗಳನ್ನು ಪರಿಚಯಿಸಿದ ದೇಶದ ಮೊದಲ ತಯಾರಕರಲ್ಲಿ ಒಬ್ಬರಾಗಿದ್ದಾರೆ. ಇದರ ಜೊತೆ, ಟಿವಿಎಸ್ ಬೈಕುಗಳು ಮಾರುಕಟ್ಟೆಯ ಅತ್ಯಂತ ಪರಿಷ್ಕೃತ ಎಂಜಿನ್ ಗಳನ್ನು ಹೊಂದಿವೆ.
ಆದರೆ, ಮಾರುಕಟ್ಟೆಯ ಅತ್ಯುತ್ತಮ ಉತ್ಪನ್ನಗಳಲ್ಲಿ ಒಂದಾಗಿದ್ದರೂ ಸಹ, ಟಿವಿಎಸ್ ಬೈಕ್ ಗಳು ಭಾರತೀಯ ರಸ್ತೆಗಳ ಅಪಾಯಗಳಿಂದ ಸುರಕ್ಷಿತವೇನಲ್ಲ. ನೀವು ಬೈಕ್ ರೈಡ್ ಮಾಡುವವರಾಗಿದ್ದರೆ ಅಪಘಾತಗಳು, ಘರ್ಷಣೆಗಳು ಹಾಗೂ ಕಳವಿನಂತಹ ದುರ್ಘಟನೆಗಳು ಕೂಡಾ ದುರಾದೃಷ್ಟವಶಾತ್ ಅಪರೂಪವೇನಲ್ಲ.
ಆದ್ದರಿಂದಲೇ, ಇಂತಹ ಘಟನೆಗಳಿಂದ ಉಂಟಾಗುವ ಆರ್ಥಿಕ ಹೊಣೆಗಾರಿಕೆಗಳಿಂದ ನಿಮ್ಮನ್ನು ದೂರವಿಡಲು, ಭಾರತದ ಹಲವು ಇನ್ಶೂರೆನ್ಸ್ ಕಂಪನಿಗಳು ನಿಮ್ಮ ಟಿವಿಎಸ್ ಬೈಕ್ ಗಳು, ಸ್ಕೂಟರ್ ಗಳು ಹಾಗೂ ಮೋಪೆಡ್ ಗಳಿಗೆ ಕಸ್ಟಮೈಜ್ ಮಾಡಬಲ್ಲ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಕವರ್ ಗಳನ್ನು ಪರಿಚಯಿಸಿವೆ.
ನಿಮಗೆ ಟಿವಿಎಸ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಏಕೆ ಅಗತ್ಯ ಎಂದು ತಿಳಿಯಿರಿ.
ನೀವು ಟಿವಿಎಸ್ ಬೈಕ್ ಇನ್ಶೂರೆನ್ಸ್ ಪಾಲಿಸಿಗಳನ್ನು ಏಕೆ ಆಯ್ಕೆ ಮಾಡಬೇಕು
ಇಂದು, ಮೋಟಾರ್ ವಾಹನ ಅಧಿನಿಯಮ 1988 ರ ಪ್ರಕಾರ, ನಿಮ್ಮ ಟಿವಿಎಸ್ ಬೈಕ್ ಗಾಗಿ ಥರ್ಡ್ ಪಾರ್ಟೀ ಹೊಣೆಗಾರಿಕೆ ಇನ್ಶೂರೆನ್ಸ್ ಕವರ್ ಪಡೆಯುವುದು ಕಡ್ಡಾಯವಾಗಿದೆ. ಆದರೆ ನಿಮಗೆ ನಿಮ್ಮ ಟು ವೀಲರ್ ವಾಹನಕ್ಕಾಗಿ ಸಂಪೂರ್ಣ ಸುರಕ್ಷತೆ ಬೇಕಿದ್ದರೆ ನೀವು ಕಾಂಪ್ರೆಹೆನ್ಸಿವ್ ಕವರ್ ಅನ್ನೇ ಆಯ್ಕೆ ಮಾಡಿ ಎಂದು ನಾವು ಶಿಫಾರಸು ಮಾಡುತ್ತೇವೆ.
ಸರಿ, ಈಗ ನೀವು ಇನ್ಶೂರೆನ್ಸ್ ಕವರ್ ಖರೀದಿ ಅಥವಾ ಟಿವಿಎಸ್ ಬೈಕ್ ಇನ್ಶೂರೆನ್ಸ್ ರಿನೀವಲ್ ಅನ್ನು ಏಕೆ ಮಾಡಬೇಕು?
ನೋಡಿ!
ನಿಮ್ಮ ಸ್ವಂತ ವಾಹನಕ್ಕಾದ ನಷ್ಟ/ಹಾನಿಯಿಂದ ಚೇತರಿಸಿಕೊಳ್ಳಲು - ಟಿವಿಎಸ್ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಒಂದು ಪ್ರಮುಖ ವೈಶಿಷ್ಟ್ಯವೇನೆಂದರೆ,ಅಪಘಾತ,ಬೆಂಕಿ, ನೈಸರ್ಗಿಕ ವಿಪತ್ತುಗಳು ಇತ್ಯಾದಿಗಳಿಂದ ನಿಮ್ಮ ಸ್ವಂತ ವಾಹನಕ್ಕಾದ ಹಾನಿಗಳು ಹಾಗೂ ನಷ್ಟಗಳಿಗೆ ತಗುಲಿದ ವೆಚ್ಚಗಳಿಗಾಗಿ ಇದು ಮರುಪಾವತಿಯನ್ನು ನೀಡುತ್ತದೆ. ಹಾಗೂ, ನೀವು ಭದ್ರತೆಯನ್ನುಎಷ್ಟೇ ಕಾಪಾಡಿದರೂ, ನಿಮ್ಮ ಟಿವಿಎಸ್ ಬೈಕ್ ಅಥವಾ ಸ್ಕೂಟರ್ ಕಳವಾಗುವ ಸಂಭಾವನೆ ಇರುತ್ತದೆ. ಈ ಸಂದರ್ಭದಲ್ಲಿ ಉಂಟಾಗುವ ಆರ್ಥಿಕ ನಷ್ಟವನ್ನು ತಪ್ಪಿಸಲು,ನೀವು ನಿಮ್ಮ ಟು ವೀಲರ್ ವಾಹನವನ್ನು ಕಾಂಪ್ರೆಹೆನ್ಸಿವ್ ಕವರ್ ಅಡಿಯಲ್ಲಿ ಇನ್ಶೂರ್ ಮಾಡಿಸಬಹುದು.
ಥರ್ಡ್ ಪಾರ್ಟೀ ವಾಹನ ಅಥವಾ ಸ್ವತ್ತಿಗಾದ ಹಾನಿಗಳಿಗೆ ಮರುಪಾವತಿ - ಈ ಕವರ್ ಅನ್ನು, ಥರ್ಡ್ ಪಾರ್ಟೀ ಹೊಣೆಗಾರಿಕೆ ಹಾಗೂ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿ, ಎರಡೂ ಒದಗಿಸುತ್ತವೆ. ಈ ಲಾಭದೊಂದಿಗೆ, ಥರ್ಡ್ ಪಾರ್ಟೀ ಸ್ವತ್ತು ಅಥವಾ ವಾಹನಕ್ಕೆ ನಿಮ್ಮ ಇನ್ಶೂರ್ಡ್ ಟು ವೀಲರ್ ವಾಹನದಿಂದಾದ ಹಾನಿ ಅಥವಾ ನಷ್ಟಗಳಿಂದ ನಿಮ್ಮನ್ನು ನೀವು ಆರ್ಥಿಕವಾಗಿ ಸಂರಕ್ಷಿಸಬಹುದು. ಥರ್ಡ್ ಪಾರ್ಟೀ ವ್ಯಕ್ತಿಗಾದ ಗಂಭೀರ ಗಾಯ ಅಥವಾ ಸಾವಿನ ಸಂದರ್ಭದಿಂದ ಉತ್ಪನ್ನವಾಗುವ ಹೊಣೆಗಾರಿಕೆಗಳಿಗೂ ಇದು ತನ್ನ ಲಾಭಗಳನ್ನು ವಿಸ್ತರಿಸಿದೆ. ಇಂತಹ ಸಂದರ್ಭದಲ್ಲಿ ನೀಡಬೇಕಾಗುವ ಯಾವುದೇ ದಾವೆ ಶುಲ್ಕಗಳನ್ನೂ ನಿಮಗೆ ಮರುಪಾವತಿಸಲಾಗುತ್ತದೆ.
ವೈಯಕ್ತಿಕ ಅಪಘತದ ಕವರ್ - ಈ ಲಾಭದೊಂದಿಗೆ, ನಿಮ್ಮ ಟು ವೀಲರ್ ವಾಹನದೊಂದಿಗಿನ ನಿಮ್ಮ ಅಪಘಾತದಿಂದ ನಿಮಗೆ ಅಂಗವೈಕಲ್ಯ ಉಂಟಾದರೆ, ನಿಮಗೆ ಆರ್ಥಿಕ ಸಂರಕ್ಷಣೆಯನ್ನು ನೀಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ನೀವು ಸಾವಿಗೀಡಾದರೆ, ಒಂದು ವಯಕ್ತಿಕ ಅಪಘಾತ ಕವರ್ ನಿಮ್ಮ ಪರಿವಾರದ ಸದಸ್ಯರಿಗೆ ಪರಿಹಾರವನ್ನು ಒದಗಿಸುತ್ತದೆ.
ಹೆಚ್ಚು ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ - ನೀವು ಟಿವಿಎಸ್ ಬೈಕ್ ಇನ್ಶೂರೆನ್ಸ್ ಖರೀದಿಸಬೇಕಾದ ಇನ್ನೊಂದು ಮುಖ್ಯ ಕಾರಣ ಏನೆಂದರೆ, ಸಂಪೂರ್ಣ ಹಾನಿ ಅಥವಾ ಕಳವಾದ ಸಂದರ್ಭದಲ್ಲಿ, ನೀವು ನಿಮ್ಮ ಸ್ಕೂಟಿ/ಬೈಕ್ ನ ಮೊತ್ತವನ್ನು ಹಿಂಪಡೆಯಬಹುದು. ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ, ಇಂತಹ ಸಂದರ್ಭಗಳಲ್ಲಿ ನೀಡಲಾಗುವ ಎಶೂರ್ಡ್ ಮೊತ್ತವಾಗಿದ್ದು, ಇದನ್ನು ನಿಮ್ಮ ಟಿವಿಎಸ್ ಟು ವೀಲರ್ ವಾಹನದ ಮಾರುಕಟ್ಟೆಯ ಬೆಲೆಯಿಂದ ಅದರ ಡಿಪ್ರಿಸಿಯೇಷನ್ ಅನ್ನು ಕಳೆದು ನೀಡಲಾಗುತ್ತದೆ.
ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿಯಿಂದ ಗರಿಷ್ಠ ಲಾಭಗಳನ್ನು ಪಡೆಯುತ್ತಿದ್ದೀರಿ ಎಂದು ಖಚಿತಪಡಿಸಲು, ಹೆಚ್ಚಿನ ಹಾಗೂ ಕಸ್ಟಮೈಜ್ ಆಗಬಲ್ಲ ಐಡಿವಿಯೊಂದಿಗೆ ಬರುವ ಪಾಲಿಸಿಯನ್ನು ಪಡೆಯುವುದೇ ಉತ್ತಮವಾಗಿರುತ್ತದೆ.
ನೀವು ಟಿವಿಎಸ್ ಬೈಕ್ ಇನ್ಶೂರೆನ್ಸ್ ರಿನೀವಲ್ ಮಾಡಲು ನೋಡುತ್ತಿದ್ದರೆ ಹಾಗೂ ನಿಮ್ಮ ಇನ್ಶೂರೆನ್ಸ್ ಪ್ರೊವೈಡರ್ ಅನ್ನು ಬದಲಾಯಿಸಲು ನೋಡುತ್ತಿದ್ದರೆ, ಆಡ್-ಆನ್ ಹಾಗೂ ರೈಡರ್ ಗಳು ಹೋಲಿಕೆಯ ಪ್ರಮುಖ ಅಂಶಗಳಾಗಿರುತ್ತವೆ.
ಈಗ ಟಿವಿಎಸ್ ಬೈಕ್ ಇನ್ಶೂರೆನ್ಸ್ ಪಾಲಿಸಿಗಳ ಪ್ರಾಮುಖ್ಯತೆ ನಿಮಗೆ ತಿಳಿದ ಮೇಲೆ, ಒಬ್ಬ ಸ್ಪರ್ಧಾತ್ಮಕ ಇನ್ಶೂರೆನ್ಸ್ ಪ್ರೊವೈಡರ್ ಅನ್ನು ಆಯ್ಕೆ ಮಾಡುವ ಸಮಯ ಬಂದಿದೆ.
ನೀವು ಡಿಜಿಟ್ ಇನ್ಶೂರೆನ್ಸ್ ಅನ್ನು ಪರಿಗಣಿಸಿದ್ದೀರಾ?
ನೀವು ನಿಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಗಾಗಿ ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕು?
ಭಾರತದ ಅಗ್ರಸ್ಥಾನೀಯ ಹಾಗೂ ಪ್ರತಿಷ್ಠಿತ ಇನ್ಶೂರೆನ್ಸ್ ಪ್ರೊವೈಡರ್ ಗಳಲ್ಲಿ ಒಂದಾಗಿರುವುದರ ಜೊತೆಗೆ, ನಿಮ್ಮ ಟಿವಿಎಸ್ ಟು ವೀಲರ್ ವಾಹನಕ್ಕಾಗಿ ಡಿಜಿಟ್ ನೀಡುವ ಬೈಕ್ ಇನ್ಶೂರೆನ್ಸ್ ಪಾಲಿಸಿಗಳ ಹಲವು ಲಾಭಗಳಿವೆ;
ಕೆಲವನ್ನು ಕೆಳಗಡೆ ನೀಡಲಾಗಿದೆ:
1. ದೊಡ್ಡ ಸಂಖ್ಯೆಯ ನೆಟ್ವರ್ಕ್ ಗ್ಯಾರೇಜ್ ಗಳು - ಡಿಜಿಟ್ ಇನ್ಶೂರೆನ್ಸ್ ಅವರ ಟಿವಿಎಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಕವರ್ ನ ಅಡಿಯಲ್ಲಿ ನಗದುರಹಿತ ರಿಪೇರಿ ಸೌಲಭ್ಯಗಳನ್ನು ಒದಗಿಸುತ್ತಾರೆ. ಈ ಸೌಲಭ್ಯದೊಂದಿಗೆ, ನೀವು ನಿಮ್ಮ ಇನ್ಶೂರೆನ್ಸ್ ಪ್ರೊವೈಡರ್ ಅಡಿಯಲ್ಲಿರುವ ಯಾವುದೇ ನೆಟ್ವರ್ಕ್ ಗ್ಯಾರೇಜ್ ಗಳಲ್ಲಿ, ಅವರ ಸೇವೆಗಾಗಿ ಯಾವುದೇ ನಗದು ಹಣವನ್ನು ನೀಡದೆಯೇ, ನಿಮ್ಮ ಟು ವೀಲರ್ ವಾಹನದ ರಿಪೇರಿಯನ್ನು ಮಾಡಿಸಬಹುದು. ಡಿಜಿಟ್ ನಲ್ಲಿ 2900 ಕ್ಕಿಂತಲೂ ಹೆಚ್ಚು ನೆಟ್ವರ್ಕ್ ಗ್ಯಾರೇಜ್ ಗಳಿವೆ, ಇದರಿಂದ ನಿಮ್ಮ ನಗದುರಹಿತ ರಿಪೇರಿ ಸೇವೆಗಳನ್ನು ಪಡೆಯುವ ಸಂಭಾವನೆಯೂ ಹೆಚ್ಚುತ್ತದೆ.
2. ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳ ಆಯ್ಕೆಗಳು - ಡಿಜಿಟ್ ನೊಂದಿಗೆ, ನಿಮ್ಮ ಟು ವೀಲರ್ ವಾಹನವನ್ನು ನೀವು ಈ ಕೆಳಗೆ ನೀಡಿರುವ ಇನ್ಶೂರೆನ್ಸ್ ಪಾಲಿಸಿಗಳ ಅಡಿಯಲ್ಲಿ ಇನ್ಶೂರ್ ಮಾಡಿಸಬಹುದು. ಅವು ಹೀಗಿವೆ:
ಥರ್ಡ್ ಪಾರ್ಟೀ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ - ಯಾವುದೇ ಥರ್ಡ್ ಪಾರ್ಟೀ ಸ್ವತ್ತು ಅಥವಾ ವಾಹನಕ್ಕೆ ನಿಮ್ಮ ಇನ್ಶೂರ್ಡ್ ಟು ವೀಲರ್ ವಾಹನದಿಂದ ಹಾನಿ ಅಥವಾ ನಷ್ಟ ಉಂಟಾದರೆ ಅಥವಾ ಆ ಮೂರನೇ ವ್ಯಕ್ತಿಗೆ ಗಂಭೀರ ಗಾಯ ಅಥವಾ ಸಾವು ಸಂಭವಿಸಿದರೆ, ಈ ಸಂದರ್ಭದಲ್ಲಿ ಉಂಟಾಗುವ ಆರ್ಥಿಕ ಹೊಣೆಗಾರಿಕೆಗಳನ್ನು ಈ ಪಾಲಿಸಿಯು ಕವರ್ ಮಾಡುತ್ತದೆ.
ಕಾಂಪ್ರೆಹೆನ್ಸಿವ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ - ಈ ಇನ್ಶೂರೆನ್ಸ್ ಕವರ್, ಥರ್ಡ್ ಪಾರ್ಟೀ ಹೊಣೆಗಾರಿಕೆಯನ್ನು ಮಾತ್ರವಲ್ಲದೆ, ಅಪಘಾತ, ನೈಸರ್ಗಿಕ ವಿಪತ್ತು ಇತ್ಯಾದಿಗಳಿಂದ ನಿಮ್ಮ ಸ್ವಂತ ವಾಹನಕ್ಕಾದ ಹಾನಿಗಳಿಂದ ಉಂಟಾಗುವ ಆರ್ಥಿಕ ಹೊಣೆಗಾರಿಕೆಯಿಂದ ಕವರ್ ನೀಡುತ್ತದೆ.
ಸೆಪ್ಟೆಂಬರ್ 2018 ರ ನಂತರ ನೀವು ನಿಮ್ಮ ಟು ವೀಲರ್ ವಾಹನವನ್ನು ಖರೀದಿಸಿದರೆ ನೀವು ಓನ್ ಡ್ಯಾಮೇಜ್ ಕವರ್ ಅನ್ನೂ ಆಯ್ಕೆ ಮಾಡಿಕೊಳ್ಳಬಹುದು. ಈ ಕವರ್ ನಿಮಗೆ ಕಾಂಪ್ರೆಹೆನ್ಸಿವ್ ಪಾಲಿಸಿಯ ಲಾಭಗಳನ್ನು ನೀಡುತ್ತದೆ, ಆದರೆ ಥರ್ಡ್ ಪಾರ್ಟೀ ಹೊಣೆಗಾರಿಕೆಯ ಕವರೇಜ್ ಅನ್ನು ಹೊರತುಪಡಿಸಿ. ನೀವು ಈಗಾಗಲೇ ಒಂದು ಥರ್ಡ್ ಪಾರ್ಟೀ ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸಿದ್ದರೆ, ನೀವಿದನ್ನು ಪ್ರತ್ಯೇಕ ಕವರ್ ಆಗಿ ಖರೀದಿಸಬಹುದು.
3. ಶೀಘ್ರ ಹಾಗೂ ಸರಳ ಕ್ಲೈಮ್ ಇತ್ಯರ್ಥ ಹೆಚ್ಚಿನ ಕ್ಲೈಮ್ ಸೆಟ್ಲ್ಮೆಂಟ್ ಅನುಪಾತದೊಂದಿಗೆ - ಸಾಮಾನ್ಯವಾಗಿ, ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ಕ್ಲೈಮ್ ರೈಸ್ ಮಾಡಿದ ನಂತರ, ನಿಮ್ಮ ಬೈಕ್ ಅನ್ನು ಪರಿಶೀಲಿಸಿ, ನಿಮ್ಮ ಕ್ಲೈಮ್ ನ ಪರೀಕ್ಷೆಯನ್ನು ನಡೆಸಲು ಕಂಪನಿಯಿಂದ ಒಂದು ಪ್ರತಿನಿಧಿಯನ್ನು ಕಳಿಸಲಾಗುತ್ತದೆ. ಆದರೆ ಡಿಜಿಟ್ ನಲ್ಲಿ, ನೀವು ಸ್ಮಾರ್ಟ್ಫೋನ್ ಅಳವಡಿಕೆಯ ಸ್ವ-ಪರಿಶೀಲನೆಯ ಲಾಭವನ್ನು ಪಡೆಯಬಹುದು. ಇದು ನಿಮ್ಮ ಪ್ರಕ್ರಿಯೆಯ ಶೀಘ್ರತೆಯನ್ನು ಹೆಚ್ಚಿಸಿ, ಸುದೀರ್ಘ ಪತ್ರವ್ಯವಹಾರದ ಗೊಂದಲವನ್ನು ತಪ್ಪಿಸುತ್ತದೆ. ಇವರ ಆನ್ಲೈನ್ ಪ್ರಕ್ರಿಯೆಯೊಂದಿಗೆ, ಡಿಜಿಟ್ ಅವರ ಕ್ಲೈಮ್ ಸೆಟ್ಲ್ಮೆಂಟ್ ಅನ್ನು ದೊಡ್ಡಮಟ್ಟಿಗೆ ಸುಗಮಗೊಳಿಸಿದ್ದಾರೆ. ಕಂಪನಿಯು ನಿಮ್ಮ ಕ್ಲೈಮ್ ಇತ್ಯರ್ಥಕ್ಕಾಗಿ ಕೆಲವೇ ದಿನಗಳನ್ನು ತೆಗೆದುಕೊಳ್ಳುತ್ತದೆ ಹಾಗೂ ಈ ಸಮಯವು ದೇಶದ ಉಳಿದ ಅಗ್ರಸ್ಥಾನೀಯ ಇನ್ಶೂರೆನ್ಸ್ ಕಂಪನಿಗಳು ತೆಗೆದುಕೊಳ್ಳುವ ಸಮಯಕ್ಕಿಂತ ಸಾಕಷ್ಟು ಕಡಿಮೆಯಾಗಿದೆ.
ಇದರ ಜೊತೆ, ಕಂಪನಿಯು ಹೆಚ್ಚಿನ ಕ್ಲೈಮ್ ಸೆಟ್ಲ್ಮೆಂಟ್ ಅನುಪಾತವನ್ನು ಹೊಂದಿದ್ದು, ಇದು ನಿಮ್ಮ ಕ್ಲೈಮ್ ತಿರಸ್ಕಾರವಾಗುವ ಸಂಭಾವನೆಯನ್ನು ಕಡಿಮೆಗೊಳಿಸುತ್ತದೆ.
4. ಸರಳ ಇನ್ಶೂರೆನ್ಸ್ ಖರೀದಿ ಹಾಗೂ ರಿನೀವಲ್ ಪ್ರಕ್ರಿಯೆ - ನೀವು ನಿಮ್ಮ ಟಿವಿಎಸ್ ಟು ವೀಲರ್ ವಾಹನ ಅಥವಾ ಟಿವಿಎಸ್ ಸ್ಕೂಟಿಯ ಇನ್ಶೂರೆನ್ಸ್ ರಿನೀವಲ್ ಗಾಗಿ ಆನ್ಲೈನ್ ಹುಡುಕಾಟ ನಡೆಸುತ್ತಿದ್ದರೆ, ಈ ಪ್ರಕ್ರಿಯೆಯಲ್ಲಿ ನಿಮಗೆ ನೆರವಾಗಲು ಡಿಜಿಟ್ ಗಿಂತ ಉತ್ತಮ ಬೇರಾರೂ ಇಲ್ಲ. ನೀವು ಇನ್ಶೂರೆನ್ಸ್ ಪಾಲಿಸಿಯ ಗೊಂದಲರಹಿತ ಖರೀದಿ ಹಾಗೂ ರಿನೀವಲ್ ಪಡೆಯಬಹುದು. ಅಷ್ಟೇ ಅಲ್ಲದೇ ನಿಮ್ಮ ಹಿಂದಿನ ಪಾಲಿಸಿಯ ನೋ ಕ್ಲೈಮ್ ಬೋನಸ್ ಅನ್ನು ಮುಂದಕ್ಕೆ ತೆಗೆದುಕೊಂಡು ಹೋಗಿ, ನಿಮ್ಮ ಪ್ರೀಮಿಯಂ ಪಾವತಿಯಲ್ಲಿ ರಿಯಾಯಿತಿಯನ್ನು ಪಡೆಯಬಹುದು.
5. ಹೆಚ್ಚಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ(ಐಡಿವಿ) - ನಾವು ಈಗಾಗಲೇ ಐಡಿವಿ ಬಗ್ಗೆ ಚರ್ಚಿಸಿದ್ದೇವೆ. ಆದ್ದರಿಂದ, ನೀವು ನಿಮ್ಮ ಟಿವಿಎಸ್ ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ಅಥವಾ ರಿನ್ಯೂ ಮಾಡುವಾಗ, ನಿಮ್ಮ ಪ್ರಾಥಮಿಕ ಗುರಿಯು ಹೆಚ್ಚಿನ ಐಡಿವಿ ಅನ್ನು ಹುಡುಕುವುದು ಆಗಿರಬೇಕು, ಇದರಿಂದ ನಿಮ್ಮ ಬೈಕ್ ಗೆ ಸಂಪೂರ್ಣ ಹಾನಿ ಅಥವಾ ಕಳವಾದ ಸಂದರ್ಭದಲ್ಲಿ ನೀವು ಗರಿಷ್ಠ ಲಾಭಗಳನ್ನು ಪಡೆಯಬಹುದು. ಡಿಜಿಟ್, ನಿಮಗೆ ನಿಮ್ಮ ಅಗತ್ಯದ ಪ್ರಕಾರ ನಿಮ್ಮ ಟು ವೀಲರ್ ವಾಹನದ ಐಡಿವಿ ಅನ್ನು ಕಸ್ಟಮೈಜ್ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ.
6. ವಿವಿಧ ಆಡ್-ಆನ್ ಕವರ್ ಗಳು - ಡಿಜಿಟ್ ನ ಟಿವಿಎಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯು, ನಿಮ್ಮ ಬೈಕಿಗೆ ಗರಿಷ್ಠ ಸಂರಕ್ಷಣೆ ಒದಗಿಸುವ ಹಲವು ಆಡ್-ಆನ್ ಗಳನ್ನು ನೀಡುತ್ತದೆ. ನೀವು ನಿಮ್ಮ ಟಿವಿಎಸ್ ಬೈಕಿಗಾಗಿ ಪಡೆಯಬಹುದಾದ ಕೆಲವು ಆಡ್-ಆನ್ ಗಳನ್ನು ಕೆಳಗೆ ನೀಡಲಾಗಿದೆ-
ಝೀರೋ ಡಿಪ್ರಿಸಿಯೇಷನ್ ಕವರ್
ಎಂಜಿನ್ ಹಾಗೂ ಗೇರ್ ಸಂರಕ್ಷಣೆ ಕವರ್
ರಿಟರ್ನ್ ಟು ಇನ್ವಾಯ್ಸ್ ಕವರ್
ಬ್ರೇಕ್ಡೌನ್ ಅಸಿಸ್ಟೆನ್ಸ್
ಕನ್ಸೂಮೇಬಲ್ ಕವರ್
ಈ ಆಡ್-ಆನ್ ಗಳು ನಿಮ್ಮ ಬೈಕ್/ಸ್ಕೂಟರ್ ಗಾಗಿ ಹೆಚ್ಚಿನ ಸಂರಕ್ಷಣೆಯನ್ನು ಒದಗಿಸುವಲ್ಲಿ ಈ ಆಡ್-ಆನ್ ಗಳು ಅಗತ್ಯವಾಗುತ್ತವೆ.
7. 24x7 ಗ್ರಾಹಕ ಸೇವೆ - ಡಿಜಿಟ್ ನ ತಂಡವು ನಿಮಗಾಗಿ ಉತ್ತಮ ಸೇವೆಯನ್ನು ಒದಗಿಸಲು ದಣಿವಿಲ್ಲದೆ ಕೆಲಸ ಮಾಡುತ್ತದೆ. ಹೀಗಾಗಿ ನೀವು ಅವರ ಗ್ರಾಹಕ ಸೇವಾ ಕೇಂದ್ರದಲ್ಲಿ ಯಾವ ಹೊತ್ತಿನಲ್ಲಾದರೂ ಕರೆ ಮಾಡಬಹುದು-ರಾಷ್ಟ್ರೀಯ ರಜಾದಿನಗಳಲ್ಲೂ ಕೂಡಾ.
ನೋಡಿದಿರಲ್ಲವೇ!
ಕೈಗೆಟಕುವ ಪ್ರೀಮಿಯಂ ಹಾಗೂ ಆಕರ್ಷಕ ಆಡ್-ಆನ್ ಕೊಡುಗೆಗಳೊಂದಿಗೆ, ಡಿಜಿಟ್ ಇನ್ಶೂರೆನ್ಸ್, ನಿಮ್ಮ ಬೈಕ್, ಸ್ಕೂಟರ್ ಅಥವಾ ಮೋಪೆಡ್ ಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸುತ್ತದೆ!
ನಿಮ್ಮ ಟಿವಿಎಸ್ ಟು ವೀಲರ್ ವಾಹನದ ಪ್ರೀಮಿಯಂ ಅನ್ನು ಹೇಗೆ ಕಡಿಮೆ ಮಾಡಬಹುದು ಎಂಬ ಸಣ್ಣ ರಹಸ್ಯವನ್ನು ನಾವು ನಿಮಗೆ ಹೇಳುತ್ತೇವೆ.
ನಿಮ್ಮ ಟಿವಿಎಸ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಅನ್ನು ನೀವು ಹೇಗೆ ಕಡಿಮೆ ಮಾಡಬಹುದು?
ನಿಮ್ಮ ಟಿವಿಎಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಅನ್ನು ಕಡಿಮೆ ಮಾಡಲು ನೀವು ಕೆಲವು ವಿಧಾನಗಳನ್ನು ಅನುಸರಿಸಬಹುದು. ಉದಾಹರಣೆಗೆ:
ನೀವು ವಾಲಂಟರಿ ಡಿಡಕ್ಟೇಬಲ್(ಸ್ವಯಂಪ್ರೇರಿತ ಕಡಿತಗಳು)ಗಳ ಅಯ್ಕೆ ಮಾಡಬಹುದು. ಇದರಲ್ಲಿ, ಕ್ಲೈಮ್ ಇತ್ಯರ್ಥದ ಸಮಯದಲ್ಲಿ ನಿಮ್ಮ ವಾಹನದ ರಿಪೇರಿ ವೆಚ್ಚದ ಒಂದು ಭಾಗವನ್ನು ನೀವು ಪಾವತಿಸಬೇಕಾಗುತ್ತದೆ.
ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿಗಾಗಿ ಆಡ್-ಆನ್ ಕವರ್ ಗಳನ್ನು ಖರೀದಿಸುವಾಗ ಎಚ್ಚರಿಕೆಯಿಂದಿರಬೇಕು, ಏಕೆಂದರೆ ನೀವು ಆಯ್ಕೆ ಮಾಡುವ ಪ್ರತೀ ಆಡ್-ಆನ್ ಗಾಗಿ ನೀವು ಸ್ವಲ್ಪ ಹೆಚ್ಚು ಪ್ರೀಮಿಯಂ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ನಿಮ್ಮ ಇನ್ಶೂರೆನ್ಸ್ ಕಂಪನಿಯ ನೋ ಕ್ಲೈಮ್ ಬೋನಸ್ ಪಾಲಿಸಿಯನ್ನು ಪರಿಶೀಲಿಸಿ ಅದರಿಂದ ನಿಮಗೆ ಗರಿಷ್ಠ ಲಾಭಗಳು ದೊರೆಯುವುದನ್ನು ಖಚಿತಪಡಿಸಿಕೊಳ್ಳಿ.
ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ನೇರವಾಗಿ ಇನ್ಶೂರೆನ್ಸ್ ಕಂಪನಿಯಿಂದಲೇ ಖರೀದಿಸಿ. ನೀವು ಒಬ್ಬ ಏಜಂಟ್ ಅಥವಾ ಬ್ರೋಕರ್ ನ ಸೇವೆ ಪಡೆದರೆ, ನೀವು ಅವರ ಸೇವೆಗಾಗಿ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿ ಮೇಲೆ ಖರ್ಚು ಮಾಡುವ ಮೊತ್ತವನ್ನು ಹೆಚ್ಚಿಸುತ್ತದೆ.
ಈ ಕೆಲವು ಸಲಹೆಗಳನ್ನು ಗಮನದಲ್ಲಿರಿಸಿ, ನೀವು ನಿಮ್ಮ ಇನ್ಸೂರೆನ್ಸ್ ಕಂಪನಿಗೆ ಪಾವತಿಸಬೇಕಾದ ಪ್ರೀಮಿಯಂ ಮೊತ್ತವನ್ನು ಕಡಿಮೆಗೊಳಿಸಬಹುದು.
ಸರಿ, ಈಗ ನೀವು ನಿಮ್ಮ ಟಿವಿಎಸ್ ಬೈಕ್ ಅಥವಾ ಸ್ಕೂಟರ್ ಗಾಗಿ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಪ್ರತೀ ಅಂಶವನ್ನು ಚೆನ್ನಾಗಿ ತಿಳಿದುಕೊಂಡಾದ ಮೇಲೆ, ತಡಮಾಡದೆ ಇಂದೇ ನಿಮ್ಮ ವಾಹನವನ್ನು ಇನ್ಶೂರ್ ಮಾಡಿಸಿ!
ಆನ್ಲೈನ್ ಟಿವಿಎಸ್ ಟು ವೀಲರ್ ವಾಹನ ಇನ್ಶೂರೆನ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ನಾನು ನನ್ನ ಟಿವಿಎಸ್ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್ ಆಗಿ ರಿನ್ಯೂ ಮಾಡಬಹುದೇ?
ಹೌದು, ನೀವು ನಿಮ್ಮ ಟಿವಿಎಸ್ ಬೈಕ್ ಗಾಗಿ ಆನ್ಲೈನ್ ಇನ್ಶೂರೆನ್ಸ್ ಪಾಲಿಸಿ ರಿನೀವಲ್ ಅನ್ನು ಆಯ್ಕೆ ಮಾಡಬಹುದು. ಆದರೆ, ನೀವು ಅದರ ನೋ ಕ್ಲೈಮ್ ಬೋನಸ್ ಪಡೆಯಬೇಕೆಂದಿದ್ದರೆ, ನಿಮ್ಮ ಪ್ರಸ್ತುತ ಪಾಲಿಸಿಯ ಅವಧಿ ಮುಗಿಯುವ ಮೊದಲೇ, ನಿಮ್ಮ ಪಾಲಿಸಿಯನ್ನು ರಿನ್ಯೂ ಮಾಡುವುದು ಮುಖ್ಯವಾಗುತ್ತದೆ.
ನಾನು ನನ್ನ ಇನ್ಶೂರೆನ್ಸ್ ಪ್ರೊವೈಡರ್ ಅನ್ನು ಬದಲಾಯಿಸುವ ಆಯ್ಕೆ ಮಾಡಿದರೆ ನನ್ನ ಟು ವೀಲರ್ ವಾಹನಕ್ಕಿರುವ ನೋ ಕ್ಲೈಮ್ ಬೋನಸ್ ಅನ್ನು ಪಡೆಯಬಹುದೇ?
ಹೌದು, ನೀವು ನಿಮ್ಮ ಇನ್ಶೂರೆನ್ಸ್ ಪ್ರೊವೈಡರ್ ಅನ್ನು ಬದಲಾಯಿಸುವ ಆಯ್ಕೆ ಮಾಡಿದ ಮೇಲೂ ನಿಮ್ಮ ಟು ವೀಲರ್ ವಾಹನಕ್ಕಿರುವ ನೋ ಕ್ಲೈಮ್ ಬೋನಸ್ ಅನ್ನು ಪಡೆಯಬಹುದು.
ನನ್ನ ಟಿವಿಎಸ್ ಬೈಕ್ ನ ಇನ್ಶೂರೆನ್ಸ್ ಪಾಲಿಸಿಯನ್ನು ರಿನ್ಯೂ ಮಾಡಲು ನಾನು ಯಾವ ವಿವರಗಳನ್ನು ನೀಡಬೇಕಾಗುತ್ತದೆ?
ನಿಮ್ಮ ಟಿವಿಎಸ್ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ರಿನ್ಯೂ ಮಾಡಲು, ನೀವು ಕೆಳಗೆ ಉಲ್ಲೇಖಿಸಿರುವ ವಿವರಗಳನ್ನು ನೀಡಬೇಕಾಗುತ್ತದೆ-
ವಾಹನ ನೋಂದಣಿ ಸಂಖ್ಯೆ.
ವಾಹನ ಖರೀದಿಸಿದ ಸ್ಥಳ ಹಾಗೂ ದಿನಾಂಕ.
ನಿಮ್ಮ ಹೆಸರು.
ನಿಮ್ಮ ವಿಳಾಸ ಹಾಗೂ ಸಂಪರ್ಕ ವಿವರಗಳು.
ನಿಮ್ಮ ಟಿವಿಎಸ್ ಟು ವೀಲರ್ ವಾಹನದ ಮಾದರಿ ಹಾಗೂ ಅದರ ತಯಾರಿಕೆಯ ದಿನಾಂಕ.