Third-party premium has changed from 1st June. Renew now
ಸುಜುಕಿ ಆಕ್ಸೆಸ್ ಇನ್ಶೂರೆನ್ಸ್ ಅನ್ನು ಆನ್ಲೈನ್ ನಲ್ಲಿ ಖರೀದಿಸಿ/ರಿನ್ಯೂ ಮಾಡಿ
ಸ್ಕೂಟರ್ ಅನ್ನು ಖರೀದಿಸುವ ಮೊದಲು ಅದರ ಎಲ್ಲಾ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವುದು ಮುಖ್ಯವಾದರೂ, ಅದರ ಸಂರಕ್ಷಣೆಗಾಗಿ ನೀವು ಪಡೆಯುವ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಿಂದ ನೀವು ಆನಂದಿಸಬಹುದಾದ ಲಾಭದ ಬಗ್ಗೆ ತಿಳಿಯುವುದೂ ಅಷ್ಟೇ ಮುಖ್ಯವಾಗಿದೆ,ಇಲ್ಲಿ, ಸುಜುಕಿ ಆಕ್ಸೆಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ನೀವು ಪಡೆಯಬಹುದಾದ ಲಾಭಗಳ ಬಗ್ಗೆ ಎಲ್ಲವನ್ನೂ ತಿಳಿಯೋಣ, ಇತರ ವಿಷಯಗಳೊಂದಿಗೆ!
ನೀವು ದಿನಬಳಕೆಯ ವಾಹನದ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ, ಸುಜುಕಿ ಆಕ್ಸೆಸ್ಸ್ ನೀವು ಹುಡುಕುತ್ತಿರುವ ವಾಹನವಾಗಿದೆ. ಭಾರತದ ಟು ವೀಲರ್ ವಾಹನ ಸುಜುಕಿ ಮಾರುಕಟ್ಟೆಯಲ್ಲಿ ಕೈಗೆಟಕುವ ದರದ ವಿಷಯ ಬಂದಾಗ ಸುಜುಕಿ ಆಕ್ಸೆಸ್ ಅತೀ ವಿಶ್ವಾಸಹ್ರ ಹೆಸರುಗಳಲ್ಲಿ ಒಂದಾಗಿದೆ. 2007 ರಲ್ಲಿ, ಸುಮಾರು 13 ವರ್ಷಗಳ ಹಿಂದೆ ಪರಿಚಯಿಸಲಾದ ಸುಜುಕಿ ಆಕ್ಸೆಸ್ ಸಮಯದೊಂದಿಗೆ ನವೀಕರಣಗೊಂಡಿದೆ.
ಇಂತಹ ವಾಹನವನ್ನು ಹೊಂದಿರುವುದು ನಿಮಗೊಂದು ಹೆಮ್ಮೆಯ ವಿಷಯವಾಗಿರಬಹುದು. ಆದ್ದರಿಂದಲೇ, ಯಾವುದೇ ಅಪಘಾತ ಅಥವಾ ಇತರ ದುರ್ಘಟನೆಗಳು ನಿಮಗೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಆಘಾತವನ್ನುಂಟು ಮಾಡಬಹುದು.
ಇಂತಹ ದುರಾದೃಷ್ಟಕರ ಸಂದರ್ಭದಲ್ಲಿ ಒಂದು ಸುಜುಕಿ ಆಕ್ಸೆಸ್ ಇನ್ಶೂರೆನ್ಸ್ ಪಾಲಿಸಿ ನಿಮಗಾಗಿ ಸೂಕ್ತ ಸಂರಕ್ಷಣೆಯಾಗಬಹುದು. ಇಂತಹ ಯೋಜನೆಗಳು, ಅಪಘಾತವನ್ನು ತಡೆಯುವುದಿಲ್ಲವಾದರೂ, ದುರ್ಘಟನೆಯ ನಂತರ ನಿಮ್ಮ ಸ್ಕೂಟರಿನ ರಿಪೇರಿ ಸಮಯದಲ್ಲಿ ನಿಮಗೆ ಉಂಟಾಗುವ ಆರ್ಥಿಕ ಹೊಣೆಗಾರಿಕೆಗಳನ್ನು ಸೀಮಿತಗೊಳಿಸುತ್ತದೆ. ಇದರೊಂದಿಗೆ, 1988ರ ಮೋಟಾರ್ ವಾಹನ ಅಧಿನಿಯಮದ ಪ್ರಕಾರ ಎಲ್ಲ ಮೋಟರ್ ವಾಹನಗಳಿಗೂ ಇನ್ಶೂರೆನ್ಸ್ ಪಾಲಿಸಿಗಳು ಕಡ್ಡಾಯವಾಗಿರುವ ಕಾರಣ, ಇಂತಹ ಒಂದು ಕವರ್ ನೀವು ದಂಡಕ್ಕೆ ಪಾತ್ರವಾಗದಂತೆಯೂ ನೋಡಿಕೊಳ್ಳುತ್ತದೆ. ನೀವು ಥರ್ಡ್-ಪಾರ್ಟಿ ಹೊಣೆಗಾರಿಕೆಯ ಇನ್ಶೂರೆನ್ಸ್ ಪಾಲಿಸಿ ಪಡೆಯುವಲ್ಲಿ ವಿಫಲರಾದರೆ, ರೂ 2000 ದಂಡ, ಹಾಗೂ ತಪ್ಪು ಪುನರಾವರ್ತನೆಗಾಗಿ Rs. 4000 ದಂಡಕ್ಕೆ ಪಾತ್ರರಾಗುತ್ತೀರಿ.
ಇದನ್ನು ನಂತರ ನೋಡೋಣ! ಮೊದಲಿಗೆ ನಾವು ಸುಜುಕಿ ಆಕ್ಸೆಸ್ ಭಾರತದಲ್ಲಿ ಇಷ್ಟು ಬೇಡಿಕೆಯ ಬೈಕ್ ಆಗಲು ಕಾರಣವೇನೆಂದು ತಿಳಿಯೋಣ.
ಸುಜುಕಿ ಆಕ್ಸೆಸ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿದೆ
ನೀವು ಡಿಜಿಟ್ ನ ಸುಜುಕಿ ಆಕ್ಸೆಸ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?
ಸುಜುಕಿ ಆಕ್ಸೆಸ್ ಇನ್ಶೂರೆನ್ಸ್ ಯೋಜನೆಗಳ ವಿಧಗಳು
ಥರ್ಡ್ ಪಾರ್ಟೀ | ಕಾಂಪ್ರಹೆನ್ಸಿವ್ |
ಅಪಘಾತದಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ |
|
ಬೆಂಕಿಯಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ |
|
ಪ್ರಕೃತಿ ವಿಕೋಪದಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ |
|
ಥರ್ಡ್ ಪಾರ್ಟೀ ವಾಹನಕ್ಕಾದ ಹಾನಿ |
|
ಥರ್ಡ್ ಪಾರ್ಟೀ ಸ್ವತ್ತಿಗಾದ ಹಾನಿ |
|
ವೈಯಕ್ತಿಕ ಅಪಘಾತ ಕವರ್ |
|
ಥರ್ಡ್ ಪಾರ್ಟೀ ವ್ಯಕ್ತಿಗೆ ಹಾನಿ/ಸಾವು |
|
ನಿಮ್ಮ ಸ್ಕೂಟರ್ ಅಥವಾ ಬೈಕ್ ನ ಕಳವು |
|
ನಿಮ್ಮ ಐಡಿವಿ ಅನ್ನು ಕಸ್ಟಮೈಜ್ ಮಾಡುವುದು |
|
ಕಸ್ಟಮೈಜ್ ಮಾಡಲಾದ ಆಡ್-ಆನ್ ಗಳೊಂದಿಗೆ ಹೆಚ್ಚುವರಿ ಸಂರಕ್ಷಣೆ |
|
Get Quote | Get Quote |
ಕಾಂಪ್ರೆಹೆನ್ಸಿವ್ ಹಾಗೂ ಥರ್ಡ್ ಪಾರ್ಟೀ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.
ಕ್ಲೈಮ್ ಫೈಲ್ ಮಾಡುವುದು ಹೇಗೆ?
ನಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ ಅಥವಾ ರಿನ್ಯೂ ಮಾಡಿದ ನಂತರ ನೀವು ನೆಮ್ಮದಿಯ ಜೀವನವನ್ನು ನಡೆಸುತ್ತೀರಿ, ಕಾರಣ ನಮ್ಮ ಬಳಿ ಇರುವ 3 ಹೆಜ್ಜೆಗಳ ಸಂಪೂರ್ಣ ಡಿಜಿಟಲ್ ಆದ ಕ್ಲೈಮ್ ಗಳ ಪ್ರಕ್ರಿಯೆ!
ಹಂತ 1
ಕೇವಲ 1800-258-5956 ಗೆ ಕರೆ ನೀಡಿ. ಯಾವುದೇ ಫಾರ್ಮ್ ತುಂಬಿಸಬೇಕಾಗಿಲ್ಲ.
ಹಂತ 2
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವ ಪರಿಶೀಲನೆಯ ಲಿಂಕ್ ಅನ್ನು ಪಡೆಯಿರಿ.ನಮ್ಮ ಹಂತ ಹಂತದ ಮಾರ್ಗದರ್ಶನದೊಂದಿಗೆ ನಿಮ್ಮ ಸ್ಮಾರ್ಟ್ ಫೋನಿನಿಂದ ನಿಮ್ಮ ವಾಹನದ ಹಾನಿಗಳನ್ನು ಸೆರೆಹಿಡಿಯಿರಿ.
ಹಂತ 3
ನೀವು ಆಯ್ಕೆ ಮಾಡಲು ಬಯಸುವ ಪಾವತಿಯ ವಿಧಾನವನ್ನು ನಿರ್ಧರಿಸಿ ಅಂದರೆ ಮರುಪಾವತಿ ಅಥವಾ ನಮ್ಮ ನೆಟ್ವರ್ಕ್ ಗ್ಯಾರೇಜ್ ಗಳಲ್ಲಿ ಕ್ಯಾಷ್ಲೆಸ್.
ಸುಜುಕಿ ಆಕ್ಸೆಸ್ : ಇದು ಭಾರತದಾದ್ಯಂತ ಅತೀ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿರಲು ಕಾರಣವೇನು?
ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಹಲವಾರು ಸ್ಕೂಟರ್ ಗಳ ಮಧ್ಯೆ ಸುಜುಕಿ ಆಕ್ಸೆಸ್ ಸಮಯದ ಪರೀಕ್ಷೆಯಲ್ಲಿ ಯಶಸ್ವಿಯಾಗಿ ನೆಲೆನಿಂತಿದೆ.
- 125 ಸಿಸಿ ಎಂಜಿನ್ ಸಾಮರ್ಥ್ಯ, 64ಕಿಮಿ/ಲಿ ಮೈಲೇಜ್ ಜೊತೆ, ಸುಜುಕಿ ಆಕ್ಸೆಸ್ ಅನ್ನು ನಿತ್ಯ ಬಳಕೆಗಾಗಿ ತಯಾರಿಸಲಾಗಿದೆ.
- ಇದಕ್ಕೆ ಹವಾನಿಯಂತ್ರಿತ ಎಂಜಿನ್ ಹಾಗೂ ಸಿಂಗಲ್ ಫ್ಯುಯೆಲ್ ಸಿಲಿಂಡರ್ ಪಡೆದಿರುವ ಹೆಗ್ಗಳಿಕೆ ಇದೆ.
- ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್, 7000 ಆರ್ ಪಿ ಎಂ ರಲ್ಲಿ 8.7 ಪಿಎಸ್ ಟಾರ್ಕ್, ಇದನ್ನು ಪ್ರತೀ ಬಾರಿಯೂ ಆರಾಮದಾಯಕ ಸಮಸ್ಯೆ ರಹಿತ ರೈಡ್ ಅನ್ನಾಗಿಸುತ್ತದೆ.
- ಇತ್ತೀಚೆಗೆ ಸುಜುಕಿ, ಭಾರತ ಸರಕಾರದ ನಿಯಮದ ಪ್ರಕಾರ, ಸುಜುಕಿ ಆಕ್ಸೆಸ್ ನ BS6 ರೂಪಾಂತರವನ್ನು ಲಾಂಚ್ ಮಾಡಿತು. ಈ ಮಾದರಿಯು ಎಮಿಷನ್ ದರವನ್ನು ಗಣನೀಯವಾಗಿ ಕಡಿತಗೊಳಿಸುತ್ತದೆ.
ಇಂತಹ ಹಾಗೂ ಇನ್ನೂ ಹೆಚ್ಚಿನ ಹಲವು ವೈಶಿಷ್ಟ್ಯಗಳೊಂದಿಗೆ, ಸುಜುಕಿ ಆಕ್ಸೆಸ್ ತನ್ನ ರೈಡರ್ ಗಳಿಗೆ ಸುಗಮವಾದ ಆನ್-ರೋಡ್ ಕಾರ್ಯಕ್ಷ್ಮತೆಯನ್ನು ನೀಡುತ್ತದೆ. ಆದರೂ ಸಹ, ಇದು ಅಪಘಾತ, ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಪತ್ತುಗಳಿಗೆ, ಕಳ್ಳತನದಂತಹ ರಸ್ತೆಬದಿ ಅಪಾಯಗಳಿಗೆ ತುತ್ತಾಗುವ ಸಂಭವವಿದೆ.
ಆದ್ದರಿಂದಲೇ, ನೀವು ಇದನ್ನು ಹಲವು ವರ್ಷಗಳವರೆಗೆ ಬಳಸುತ್ತಿರಲು ನಿಮ್ಮ ವಾಹನಕ್ಕೆ ಸಮರ್ಪಕವಾದ ಸಂರಕ್ಷಣೆಯನ್ನು ಒದಗಿಸತಕ್ಕದ್ದು. ಸುಜುಕಿ ಆಕ್ಸೆಸ್ ಬೈಕ್ ಇನ್ಶೂರೆನ್ಸ್ ಈ ಉದ್ದೇಶವನ್ನು ಪೂರೈಸುತ್ತದೆ.
ನಮ್ಮ ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುವ ಸುಜುಕಿ ಆಕ್ಸೆಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳನ್ನು ನೋಡಿ.
ಡಿಜಿಟ್ ನ ಸುಜುಕಿ ಆಕ್ಸೆಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಏಕೆ ಆಯ್ಕೆ ಮಾಡಬೇಕು?
ಟು ವೀಲರ್ ವಾಹನಗಳಿಗಾಗಿ ಇನ್ಶೂರೆನ್ಸ್ ಅನ್ನು ಒದಗಿಸಲು ಇತರ ಹಲವು ಬ್ರ್ಯಾಂಡ್ ಗಳು ಇರುವಾಗ ನಾವು ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕೆಂಬ ಯೋಚನೆ ನಿಮಗೆ ಸಹಜವಾಗಿ ಮೂಡಬಹುದು. ಡಿಜಿಟ್ ಯೋಜನೆಗಳಡಿಯಲ್ಲಿ ಒದಗಿಸಲಾದ ಕೆಲವು ವೈಶಿಷ್ಟ್ಯಗಳನ್ನು ನೋಡಿ:
ಸರಳ ರಿನ್ಯೂವಲ್ ಹಾಗೂ ಖರೀದಿ
ಡಿಜಿಟ್ ಭಾರತದಲ್ಲಿ ಗೊಂದಲರಹಿತ ಆನ್ಲೈನ್ ಇನ್ಶೂರೆನ್ಸ್ ಖರೀದಿ ಹಾಗೂ ರಿನ್ಯೂವಲ್ ಗೆ ಆದ್ಯತೆ ನೀಡುವ ಕಂಪನಿಗಳಲ್ಲಿ ಒಂದಾಗಿದೆ. ಏಜಂಟ್ ಹಾಗೂ ಬ್ರೋಕರ್ ಗಳನ್ನು ಭೇಟಿ ಮಾಡಿ ನಿಮ್ಮ ಸಮಯ ಹಾಗೂ ಹಣವನ್ನು ಪೋಲು ಮಾಡುವ ಬದಲು ನೀವು ಡಿಜಿಟ್ ನ ವೆಬ್ಸೈಟ್ ಗೆ ಹೋಗಿ ಸುಜುಕಿ ಆಕ್ಸೆಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಖರೀದಿಯ ಬಗ್ಗೆ ಓದಿಕೊಳ್ಳಬಹುದಾಗಿದೆ.
ಕಾಗದರಹಿತ ಕ್ಲೈಮ್ ಪ್ರಕ್ರಿಯೆ
ನೀವು ಸದಾ ಮುಖ್ಯ ದಾಖಲೆಗಳಲ್ಲಿ ಕಳೆದುಹೋಗುತ್ತೀರಾ? ಹೌದಾದರೆ, ಡಿಜಿಟ್ ನ ಆಕ್ಸೆಸ್ 125 ಪಾಲಿಸಿಯು ನಿಮಗೆ ಹೇಳಿ ಮಾಡಿಸಿದಂತಿದೆ. ಡಿಜಿಟ್, ಕ್ಲೈಮ್ ಫೈಲಿಂಗ್ ಹಾಗೂ ಸೆಟ್ಲ್ಮೆಂಟ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್ಲೈನ್ ವ್ಯವಸ್ಥೆಯನ್ನಾಗಿಸಿ ಗಣನೀಯವಾಗಿ ಸರಳೀಕರಿಸಿದೆ.
ಇದರ ಜೊತೆ, ಇದರ ಸ್ಮಾರ್ಟ್ಫೋನ್ ಅಳವಡಿಕೆಯಿರುವ ಸ್ವ-ಪರಿಶೀಲನಾ ಪ್ರಕ್ರಿಯೆಯಿಂದಾಗಿ ಕ್ಲೈಮ್ ರೈಸ್ ಮಾಡುವುದನ್ನು ಗೊಂದಲ ರಹಿತವಾಗಿಸಿದೆ.
ನಿಮ್ಮ ಆಯ್ಕೆಗಾಗಿ ಹಲವು ವಿಧಗಳ ಇನ್ಶೂರೆನ್ಸ್ ಪಾಲಿಸಿಗಳು
ನಿಮ್ಮ ನಿರ್ದಿಷ್ಟ ಅಗತ್ಯಗಳಿಗೆ ಸರಿಹೊಂದುವಂತೆ ಡಿಜಿಟ್ ಹಲವು ಸುಜುಕಿ ಆಕ್ಸೆಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತಿದೆ. ಇಲ್ಲಿ ಉಲ್ಲೇಖಿಸಲಾದ ಯಾವುದೇ ಪಾಲಿಸಿಯನ್ನು ನೀವು ಆಯ್ಕೆ ಮಾಡಬಹುದಾಗಿದೆ:
- ಥರ್ಡ್-ಪಾರ್ಟಿ ಹೊಣೆಗಾರಿಕೆಯ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ - ನೀವು ಒಂದು ಅಪಘಾತದಲ್ಲಿ ಸಿಲುಕಿ, ಥರ್ಡ್-ಪಾರ್ಟಿ ವಾಹನ, ವ್ಯಕ್ತಿ ಅಥವಾ ಸ್ವತ್ತಿಗೆ ಹಾನಿ ಉಂಟು ಮಾಡಿದರೆ, ನೀವು ಆ ಹಾನಿಗಾಗಿ ಆರ್ಥಿಕ ಹೊಣೆಗಾರಿಕೆಯನ್ನು ಹೊಂದಿರುತ್ತೀರಿ. ಈ ಕವರ್ ನೊಂದಿಗೆ, ಅಪಘಾತದಲ್ಲಿ ಉಂಟಾದ ಎಲ್ಲಾ ಥರ್ಡ್-ಪಾರ್ಟಿ ಹೊಣೆಗಾರಿಕೆಗಳಿಗಾಗಿ ನೀವು ಕವರೇಜ್ ಅನ್ನು ಪಡೆಯಬಹುದಾಗಿದೆ.
- ಕಾಂಪ್ರೆಹೆನ್ಸಿವ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ - ನಿಮ್ಮ ಥರ್ಡ್-ಪಾರ್ಟಿ ಹೊಣೆಗಾರಿಕೆಗಳಿಗಾಗಿ ಪಾವತಿಸುವುದರ ಜೊತೆ, ಕಾಂಪ್ರೆಹೆನ್ಸಿವ್ ಕವರೇಜ್, ನಿಮ್ಮ ಸ್ವಂತ ಸ್ಕೂಟರಿಗೆ ಅಪಘಾತ, ಬೆಂಕಿ, ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಪತ್ತುಗಳು ಇತ್ಯಾದಿಗಳಿಂದ ಆದ ಹಾನಿಗಳಿಗಾಗಿ ಪಾಲಿಸಿಯನ್ನು ಕ್ಲೈಮ್ ಮಾಡಲು ಸಾಧ್ಯವಾಗಿಸುತ್ತದೆ. ಇದರ ಜೊತೆ, ನೀವು ಕಳ್ಳತನ ಹಾಗೂ ರಿಪೇರಿಗೂ ಮೀರಿದ ಹಾನಿ ಸಂದರ್ಭದಲ್ಲಿ ಕೂಡಾ ನೆರವನ್ನು ಪಡೆಯಬಹುದು.
ಹಾಗೂ, ನೀವು ಸೆಪ್ಟೆಂಬರ್ 2018 ಬಳಿಕ ನಿಮ್ಮ ಸುಜುಕಿ ಆಕ್ಸೆಸ್ ಅನ್ನು ಖರೀದಿಸಿದ್ದರೆ ನೀವು ಅದಕ್ಕಾಗಿ ಪ್ರತ್ಯೇಕವಾದ ಸ್ವಂತ ಹಾನಿ ಕವರ್ ಅನ್ನು ಪಡೆಯಬಹುದಾಗಿದೆ. ಇದು ನಿಮಗೆ ಥರ್ಡ್-ಪಾರ್ಟಿ ಹೊಣೆಗಾರಿಕೆಯ ಕವರ್ ಇಲ್ಲದೆಯೇ ಕಾಂಪ್ರೆಹೆನ್ಸಿವ್ ಕವರಿನ ಲಾಭಗಳನ್ನು ನೀಡುತ್ತದೆ. ಆದರೆ, ಈ ಪಾಲಿಸಿಯು ಹೊಸ ಸುಜುಕಿ ಆಕ್ಸೆಸ್ ಮಾಲೀಕರಿಗೆ ಮಾತ್ರ ಸೂಕ್ತವಾಗಿದೆ, ಸೆಕೆಂಡ್-ಹ್ಯಾಂಡ್ ಆಕ್ಸೆಸ್ ಮಾಲೀಕರಿಗೆ ಅಲ್ಲ.
ಸುರಕ್ಷತೆಯನ್ನು ಹೆಚ್ಚಿಸಲು ಆಡ್-ಆನ್ ಗಳು
ಹೆಚ್ಚಾಗಿ ಬೇಸಿಕ್ ಪಾಲಿಸಿಗಳು ನಿಮ್ಮ ಸ್ಕೂಟರಿಗೆ ಸಮರ್ಪಕವಾದ ಆರ್ಥಿಕ ಸಂರಕ್ಷಣೆಯನ್ನು ನೀಡುವುದಿಲ್ಲ. ಇಂತಹ ಸಂದರ್ಭಗಳಲ್ಲಿ, ನೀವು ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಡಿಜಿಟ್ ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಸಂಪೂರ್ಣವಾಗಿಸಲು ಹಲವು ಆಡ್-ಆನ್ ಕವರ್ ಗಳನ್ನು ನೀಡುತ್ತದೆ. ಅದರಲ್ಲಿ ಕೆಲವು ಈ ರೀತಿ ಇವೆ.
- ಶೂನ್ಯ ಡಿಪ್ರಿಸಿಯೇಷನ್ ಕವರ್
- ರಿಟರ್ನ್ ಟು ಇನ್ವಾಯ್ಸ್ ಕವರ್
- ಬಳಕೆಯ ವಸ್ತುಗಳ ಕವರ್
- ಬ್ರೇಕ್ಡೌನ್ ಗಾಗಿ ನೆರವ
- ಎಂಜಿನ್ ಹಾಗೂ ಗೇರ್ ಸಂರಕ್ಷಣಾ ಕವರ್
ನಿಮ್ಮ ಹಣವನ್ನು ಹಿಂಪಡೆಯಲು ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ಕಸ್ಟಮೈಜ್ ಮಾಡಿ
ಭೀಕರ ಅಪಘಾತಗಳ ಸಂದರ್ಭದಲ್ಲಿ, ನಿಮ್ಮ ಸ್ಕೂಟರ್ ರಿಪೇರಿಗೂ ಮೀರಿದ ಹಾನಿಗಳಿಗೆ ಒಳಗಾಗಬಹುದು. ಈ ಸ್ಥಿತಿಯನ್ನು ಸಾಮಾನ್ಯವಾಗಿ ಟೋಟಲ್ಡ್ ಎಂದು ಕರೆಯುತ್ತಾರೆ. ಇಂತಹ ಸಂದರ್ಭಗಳಲ್ಲಿ ಹಾಗೂ ಕಳವಿನ ಸಂದರ್ಭಗಳಲ್ಲಿ ಕೂಡಾ, ನೀವು ನಿಮ್ಮ ಇನ್ಶೂರರ್ ನಿಂದ ಪರಿಹಾರವನ್ನು ಕ್ಲೈಮ್ ಮಾಡಬಹುದಾಗಿದೆ. ಈ ಸಂದರ್ಭಗಳಲ್ಲಿ ನಿಮಗೆ ಎಷ್ಟು ಹಣದ ಅಗತ್ಯವಿದೆ ಎಂದು ತಿಳಿಸಲು, ಡಿಜಿಟ್ ನಿಮಗೆ ಐಡಿವಿ ಮೊತ್ತವನ್ನು ಕಸ್ಟಮೈಜ್ ಮಾಡುವ ಆಯ್ಕೆಯನ್ನು ನೀಡುತ್ತದೆ. ಇದರಿಂದ ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಗರಿಷ್ಠ ಲಾಭಗಳನ್ನು ಪಡೆಯಬಹುದಾಗಿದೆ.
ಆದ್ದರಿಂದ, ನಿಮ್ಮ ಅಮೂಲ್ಯ ಸ್ವತ್ತಿಗಾಗಿ ಸಂಪೂರ್ಣ ಸಂರಕ್ಷಣೆಯನ್ನು ಪಡೆಯುವ ವಿಷಯ ಬಂದಾಗ, ಡಿಜಿಟ್ ನ ಸುಜುಕಿ ಆಕ್ಸೆಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯು ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ.
ಸುಜುಕಿ ಆಕ್ಸೆಸ್ - ರೂಪಾಂತರಗಳು ಹಾಗೂ ಎಕ್ಸ್-ಶೋರೂಂ ದರ
ರೂಪಾಂತರಗಳು | ಎಕ್ಸ್-ಶೋರೂಂ ದರ |
---|---|
ಆಕ್ಸೆಸ್ 125cc53 ಕಿಮಿ/ಲಿ, 124 ಸಿಸಿ ಸ್ಥಗಿತಗೊಳಿಸಲಾಗಿದೆ | ₹ 51,932 |
ಆಕ್ಸೆಸ್ 125 ಎಸ್ ಇ 53 ಕಿಮಿ/ಲಿ, 124 ಸಿಸಿ ಸ್ಥಗಿತಗೊಳಿಸಲಾಗಿದೆ | ₹ 53,887 |
ಆಕ್ಸೆಸ್ 125 ಡ್ರಮ್ 64 ಕಿಮಿ.ಲಿ, 124 ಸಿಸಿ | ₹ 56,528 |
ಆಕ್ಸೆಸ್ 125 ಡ್ರಮ್ ಸಿಬಿಎಸ್64 ಕಿಮಿ/ಲಿ, 124 ಸಿಸಿ | ₹ 57,218 |
ಆಕ್ಸೆಸ್ 125 ಡಿಸ್ಕ್124 ಸಿಸಿ | ₹ 58,350 |
ಭಾರತದಲ್ಲಿ ಸುಜುಕಿ ಆಕ್ಸೆಸ್ ಇನ್ಶೂರೆನ್ಸ್ ಪಾಲಿಸಿ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ಸುಜುಕಿ ಆಕ್ಸೆಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗೆ ಯಾವುದೇ ಡಿಡಕ್ಟಿಬಲ್ ಗಳು ಅನ್ವಯಿಸುತ್ತವೆಯೇ?
ಹೌದು, ಐ ಆರ್ ಡಿ ಎ ಐ(IRDAI) ಯ ನಿಯಮದ ಪ್ರಕಾರ ಸುಜುಕಿ ಆಕ್ಸೆಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ ಕಡ್ಡಾಯ ಡಿಡಕ್ಟಿಬಲ್ ಅನ್ವಯಿಸುತ್ತದೆ.
ನಾನು ನನ್ನ ಇನ್ಶೂರೆನ್ಸ್ ಪ್ರೊವೈಡರ್ ಅನ್ನು ಬದಲಿಸಿದರೆ ನನ್ನ ನೋ ಕ್ಲೈಮ್ ಬೋನಸ್ ಲಭ್ಯವಿರುತ್ತದೆಯೇ?
ಹೌದು, ನೀವು ನಿಮ್ಮ ಇನ್ಶೂರೆನ್ಸ್ ಪ್ರೊವೈಡರ್ ಅನ್ನು ಬದಲಿಸಿದರೂ ನಿಮ್ಮ ಪ್ರಸ್ತುತ ಇನ್ಶೂರೆನ್ಸ್ ಪಾಲಿಸಿಯ ನೋ ಕ್ಲೈಮ್ ಬೋನಸ್ ಅನ್ನು ಮುಂದಕ್ಕೆ ಒಯ್ಯಲಾಗುತ್ತದೆ.
ಸುಜುಕಿ ಆಕ್ಸೆಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ರಿನ್ಯೂ ಮಾಡಲು ಸರಿಯಾದ ಸಮಯ ಯಾವುದು?
ನೀವು ಆದರ್ಶವಾಗಿ ನಿಮ್ಮ ಸುಜುಕಿ ಆಕ್ಸೆಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಅದರ ಅವಧಿ ಕೊನೆಯಾಗುವ ಒಂದು ತಿಂಗಳ ಮೊದಲೇ ರಿನ್ಯೂ ಮಾಡಬೇಕಾಗಿದೆ. ನೀವು ರಿನ್ಯೂ ಮಾಡುವ ಮೊದಲೇ ನಿಮ್ಮ ಪಾಲಿಸಿಯ ಅವಧಿ ಕೊನೆಗೊಂಡರೆ, ಅದರ ಅಡಿಯಲ್ಲಿ ಸಂಗ್ರಹಿತವಾದ ಲಾಭಗಳನ್ನು ನೀವು ಕಳೆದುಕೊಳ್ಳಬಹುದು.