ಆನ್ಲೈನ್ನಲ್ಲಿ ಹೋಂಡಾ ಏವಿಯೇಟರ್ ಬೈಕ್ ಇನ್ಶೂರೆನ್ಸ್ ಬೆಲೆ ಮತ್ತು ಪಾಲಿಸಿ ರಿನೀವಲ್
ಹೋಂಡಾದ ಏವಿಯೇಟರ್ 2015 ರಿಂದ 2020 ರವರೆಗೆ ಐದು ವರ್ಷಗಳ ಕಾಲ ಭಾರತದಲ್ಲಿ ದೀರ್ಘಕಾಲ ನಿಂತಿರುವ ಮೋಟಾರ್ಸೈಕಲ್ಗಳಲ್ಲಿ ಒಂದಾಗಿದೆ. 2018 ರಲ್ಲಿ, ಹೋಂಡಾ ಸಣ್ಣ ಆಕರ್ಷಕ ಮತ್ತು ಪ್ರಾಕ್ಟಿಕಲ್ ಮಾರ್ಪಾಡುಗಳೊಂದಿಗೆ ಏವಿಯೇಟರ್ನ ಪುನರಾವರ್ತನೆಯನ್ನು ಅನಾವರಣಗೊಳಿಸಿತು.
ಈ ಸ್ಕೂಟರ್ನ ಮಾಲೀಕರು ರಿಪೇರಿ ಮತ್ತು ರಿಪ್ಲೇಸ್ಮೆಂಟ್ ವೆಚ್ಚಗಳಿಂದಾಗಿ ಹಣಕಾಸು ಬರಿದಾಗುವುದನ್ನು ತಪ್ಪಿಸುವ ಮಾರ್ಗಗಳನ್ನು ಹುಡುಕಬೇಕು. ಈ ನಿಟ್ಟಿನಲ್ಲಿ, ಹೋಂಡಾ ಏವಿಯೇಟರ್ ಇನ್ಶೂರೆನ್ಸ್ ಸೂಕ್ತ ಪರಿಹಾರವಾಗಿದೆ.
ಡಿಜಿಟ್ ಇನ್ಶೂರೆನ್ಸ್ನಂತಹ ಹಲವಾರು ಹೆಸರಾಂತ ಇನ್ಶೂರೆನ್ಸ್ ಪೂರೈಕೆದಾರರು ವೆಚ್ಚ-ಪರಿಣಾಮಕಾರಿ ಪ್ರೀಮಿಯಂಗಳ ವಿರುದ್ಧ ಹೆಚ್ಚುವರಿ ಪ್ರಯೋಜನಗಳ ಜೊತೆಗೆ ಅನುಕೂಲಕರವಾದ ಪಾಲಿಸಿ ಕವರ್ಗಳನ್ನು ನೀಡುತ್ತಾರೆ.
ಹೋಂಡಾ ಏವಿಯೇಟರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ
ನೀವು ಡಿಜಿಟ್ನ ಹೋಂಡಾ ಏವಿಯೇಟರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?
ಹೋಂಡಾ ಏವಿಯೇಟರ್ಗಾಗಿ ಇನ್ಶೂರೆನ್ಸ್ ಪ್ಲ್ಯಾನ್ಗಳು
ಥರ್ಡ್ ಪಾರ್ಟಿ
ಕಾಂಪ್ರೆಹೆನ್ಸಿವ್
ಅಪಘಾತದ ಕಾರಣದಿಂದಾಗಿ ಸ್ವಂತ ಟು ವೀಲರ್ಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಟು ವೀಲರ್ಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟು ವೀಲರ್ಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಥರ್ಡ್ ಪಾರ್ಟಿ ವೆಹಿಕಲ್ಗೆ ಉಂಟಾಗುವ ಹಾನಿ |
✔
|
✔
|
ಥರ್ಡ್ ಪಾರ್ಟಿ ಆಸ್ತಿಗೆ ಉಂಟಾಗುವಹಾನಿ |
✔
|
✔
|
ವೈಯಕ್ತಿಕ ಅಪಘಾತದ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಸಾವು |
✔
|
✔
|
ನಿಮ್ಮ ಸ್ಕೂಟರ್ ಅಥವಾ ಬೈಕಿನ ಕಳ್ಳತನ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಟು ವೀಲರ್ ಇನ್ಶೂರೆನ್ಸ್ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ
ಕ್ಲೈಮ್ ಸಲ್ಲಿಸುವುದು ಹೇಗೆ?
ನಮ್ಮ ಟು ವೀಲರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!
ಹಂತ 1
1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ.
ಹಂತ 2
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ನಲ್ಲಿ ಸ್ವಯಂ ತಪಾಸಣೆಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವೆಹಿಕಲ್ನ ಹಾನಿಯನ್ನು ಶೂಟ್ ಮಾಡಿ.
ಹಂತ 3
ನಮ್ಮ ಗ್ಯಾರೇಜ್ಗಳ ನೆಟ್ವರ್ಕ್ ಮೂಲಕ ಮರುಪಾವತಿ ಅಥವಾ ಕ್ಯಾಶ್ಲೆಸ್ ಆಯ್ಕೆಗಳೆರಡರಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ
ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿಹೋಂಡಾ ಏವಿಯೇಟರ್ ಇನ್ಶೂರೆನ್ಸ್ಗಾಗಿ ಡಿಜಿಟ್ ಅನ್ನು ಆಯ್ಕೆ ಮಾಡಲು ಕಾರಣಗಳು
ತಡೆರಹಿತ ಅನುಭವವನ್ನು ಖಚಿತಪಡಿಸಿಕೊಳ್ಳಲು ಡಿಜಿಟ್ ಲಾಭದಾಯಕ ಅದ್ಭುತ ಆಫರ್ಗಳ ಶ್ರೇಣಿಯನ್ನು ನೀಡುತ್ತದೆ. ಅವರ ಬಗ್ಗೆ ತಿಳಿಯಲು ಓದುವುದನ್ನು ಮುಂದುವರಿಸಿ.
ಅನುಕೂಲಕರ ಪಾಲಿಸಿ ಕವರ್ಗಳು - ಡಿಜಿಟ್ ತನ್ನ ಗ್ರಾಹಕರ ವಿವಿಧ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ವೈವಿಧ್ಯಮಯ ಗ್ರಾಹಕರ ಬೇಡಿಕೆಯನ್ನು ಪೂರೈಸಲು ತನ್ನ ಪಾಲಿಸಿ ಸ್ಕೀಮ್ಗಳನ್ನು ರೂಪಿಸುತ್ತದೆ. ಇದು ತನ್ನ ಗ್ರಾಹಕರಿಗೆ ಇವುಗಳನ್ನು ನೀಡುತ್ತದೆ-
ಥರ್ಡ್-ಪಾರ್ಟಿ ಪಾಲಿಸಿ - ಇದು ಅತ್ಯಂತ ಬೇಸಿಕ್ ಪಾಲಿಸಿ ಕವರ್ ಆಗಿದೆ. ಮೋಟಾರ್ ವೆಹಿಕಲ್ಸ್ ಆ್ಯಕ್ಟ್ 1988 ರ ಪ್ರಕಾರ, ಪ್ರತಿ ಟು ವೀಲರ್ ವೆಹಿಕಲ್, ರಸ್ತೆಯಲ್ಲಿ-ಕಾನೂನಾತ್ಮಕವಾಗಿ ಓಡಲು, ವ್ಯಾಲಿಡ್ ಆಗಿರುವ ಥರ್ಡ್ ಪಾರ್ಟಿ ಕವರ್ ಅನ್ನು ಹೊಂದಿರಬೇಕು.
ಸೂಚನೆ: ಥರ್ಡ್-ಪಾರ್ಟಿ ಪಾಲಿಸಿದಾರರು ತಮ್ಮ ಮೂಲ ಕವರೇಜನ್ನು ಹೆಚ್ಚಿಸಲು ಸ್ಟ್ಯಾಂಡ್'ಲೋನ್ ಓನ್ ಡ್ಯಾಮೇಜ್ ಕವರ್ ಅನ್ನು ಸೇರಿಸಿಕೊಳ್ಳಬೇಕು.
ಕಾಂಪ್ರೆಹೆನ್ಸಿವ್ ಪಾಲಿಸಿ - ಇದು ಥರ್ಡ್ ಪಾರ್ಟಿ ಮತ್ತು ಓನ್ ಡ್ಯಾಮೇಜ್ ವೆಚ್ಚಗಳನ್ನು ಕವರ್ ಮಾಡುವ ವಿಸ್ತೃತ ಪ್ರೊಟೆಕ್ಷನ್ ಆಗಿದೆ. ಉದಾಹರಣೆಗೆ, ನೀವು ಇನ್ನೊಂದು ವೆಹಿಕಲ್, ವ್ಯಕ್ತಿ ಅಥವಾ ಆಸ್ತಿಯನ್ನು ಹಾನಿಗೊಳಿಸಿದರೆ, ಎರಡೂ ಪಾರ್ಟಿಗಳು ಕವರೇಜನ್ನು ಪಡೆಯುತ್ತವೆ. ಇದಲ್ಲದೆ, ನೈಸರ್ಗಿಕ ವಿಪತ್ತುಗಳು, ಬೆಂಕಿ, ಕಳ್ಳತನ ಮತ್ತು ಇತರ ಬೆದರಿಕೆಗಳ ಸಂದರ್ಭದಲ್ಲಿ, ಕಾಂಪ್ರೆಹೆನ್ಸಿವ್ ಯೋಜನೆಯು ಸುಸಜ್ಜಿತ ರಕ್ಷಣೆಯನ್ನು ನೀಡುತ್ತದೆ.
ತ್ವರಿತ ಕ್ಲೈಮ್ ಸೆಟಲ್ಮೆಂಟ್ಗಳು - ಡಿಜಿಟ್ನೊಂದಿಗೆ, ಕ್ಲೈಮ್ ಮಾಡಲು ನೀವು ಸಮಯ ತಿನ್ನುವ ಫಾರ್ಮ್ಯಾಲಿಟಿಗಳನ್ನು ಅನುಸರಿಸಬೇಕಿಲ್ಲ. ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ಸ್ವಯಂ-ತಪಾಸಣಾ ವ್ಯವಸ್ಥೆಯಲ್ಲಿ, ನಿಮ್ಮ ಕ್ಲೈಮ್ಗೆ ಸಾಕ್ಷಿಯಾಗಿರುವ ಸಂಬಂಧಿತ ಚಿತ್ರಗಳನ್ನು ಸಲ್ಲಿಸಿ.
ತೊಂದರೆ-ಮುಕ್ತ ಆನ್ಲೈನ್ ಪ್ರಕ್ರಿಯೆ - ತ್ವರಿತ ಕ್ಲೈಮ್ ಸೆಟಲ್ಮೆಂಟ್ ಜೊತೆಗೆ, ನೀವು ಈಗ ಆನ್ಲೈನ್ನಲ್ಲಿ ಹೋಂಡಾ ಏವಿಯೇಟರ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದು ಅಥವಾ ರಿನೀವಲ್ ಮಾಡಿಸಬಹುದು. ನೀವು ಮಾಡಬೇಕಿರುವುದು ಇಷ್ಟೇ, ಡಿಜಿಟ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಪ್ಲ್ಯಾನ್ ಅನ್ನು ಆಯ್ಕೆಮಾಡಿ. ಮತ್ತು ಆನ್ಲೈನ್ನಲ್ಲಿ ಹೋಂಡಾ ಏವಿಯೇಟರ್ ಇನ್ಶೂರೆನ್ಸ್ ರಿನೀವಲ್ಗಾಗಿ, ಪ್ರಸ್ತುತ ಗ್ರಾಹಕರು ತಮ್ಮ ಅಕೌಂಟ್ಗಳಿಗೆ ಲಾಗ್ ಇನ್ ಮಾಡಬಹುದು.
ಐಡಿವಿ ಮಾರ್ಪಾಡು - ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ, ನಿಮ್ಮ ಬೈಕ್ನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಆಯ್ಕೆಯನ್ನು ಡಿಜಿಟ್ ಇನ್ಶೂರೆನ್ಸ್ ಸ್ವತಃ ನಿಮಗೇ ನೀಡುತ್ತದೆ. ಈಗ, ನಿಮ್ಮ ಏವಿಯೇಟರ್ ಸ್ಕೂಟರ್ಗೆ ಹೆಚ್ಚಿನ ಪರಿಹಾರಗಳನ್ನು ಪಡೆಯಲು ನೀವು ಬಯಸಿದರೆ, ಪ್ರೀಮಿಯಂಗಳನ್ನು ನಾಮಮಾತ್ರವಾಗಿ ಹೆಚ್ಚಿಸುವ ಮೂಲಕ ಐಡಿವಿಯನ್ನು ಸುಧಾರಿಸಿ.
ಆ್ಯಡ್-ಆನ್ ಕವರ್ಗಳು - ಈ ಕೆಳಗಿನ ಪಟ್ಟಿಯಿಂದ ಆ್ಯಡ್-ಆನ್ ಕವರ್ಗಳನ್ನು ಸೇರಿಸುವ ಮೂಲಕ ನಿಮ್ಮ ಬೇಸ್ ಸ್ಕೀಮ್ ಅನ್ನು ನೀವು ಮತ್ತಷ್ಟು ಹೆಚ್ಚಿಸಬಹುದು-
- ಝೀರೋ ಡೆಪ್ರಿಸಿಯೇಶನ್ ಕವರ್
- ಕನ್ಸ್ಯೂಮೆಬಲ್ ಕವರ್
- ರಿಟರ್ನ್ ಟು ಇನ್ವಾಯ್ಸ್ ಕವರ್
- ಟೈರ್ ಪ್ರೊಟೆಕ್ಷನ್
- ರೋಡ್ ಸೈಡ್ ಅಸಿಸ್ಟೆನ್ಸ್
- 4400+ ನೆಟ್ವರ್ಕ್ ಗ್ಯಾರೇಜ್ಗಳು - ನೀವು ಭಾರತದಲ್ಲಿ ಎಲ್ಲಿದ್ದರೂ, ನಿಮ್ಮ ಸರ್ವೀಸ್ನಲ್ಲಿ ನೀವು ಡಿಜಿಟ್ ನೆಟ್ವರ್ಕ್ ಬೈಕ್ ಗ್ಯಾರೇಜ್ಗಳನ್ನು ಕಾಣಬಹುದು. ಇದಲ್ಲದೆ, ಈ ಎಲ್ಲಾ ಗ್ಯಾರೇಜ್ಗಳು ಕ್ಯಾಶ್ಲೆಸ್ ಕ್ಲೈಮ್ಗಳನ್ನು ಸ್ವೀಕರಿಸುತ್ತವೆ.
ಇದಲ್ಲದೆ, ನಿಮ್ಮ ಎಲ್ಲಾ ಇನ್ಶೂರೆನ್ಸ್-ಸಂಬಂಧಿತ ಪ್ರಶ್ನೆಗಳನ್ನು ಬಗೆಹರಿಸಲು ನೀವು ಡಿಜಿಟ್ನ 24x7 ಕಸ್ಟಮರ್ ಸಪೋರ್ಟ್ ಟೀಮ್ ಅನ್ನು ಸಂಪರ್ಕಿಸಬಹುದು.
ಆದಾಗ್ಯೂ, ನಿಮ್ಮ ಪ್ರೀಮಿಯಂಗಳನ್ನು ಮತ್ತಷ್ಟು ಕಡಿಮೆ ಮಾಡಲು, ಹೆಚ್ಚಿನ ಡಿಡಕ್ಟಿಬಲ್ಗಳನ್ನು ಆಯ್ಕೆ ಮಾಡುವುದು ಮತ್ತು ಅನಗತ್ಯ ಕ್ಲೈಮ್ಗಳಿಂದ ದೂರವಿರುವುದು ಬುದ್ಧಿವಂತ ಲಕ್ಷಣವಾಗಿದೆ.
ನಿಮ್ಮ ಹೋಂಡಾ ಏವಿಯೇಟರ್ ಇನ್ಶೂರೆನ್ಸ್ ಪಾಲಿಸಿಗಾಗಿ ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕು?
ನಿಮ್ಮ ಮೋಟಾರ್ಸೈಕಲ್ಗೆ ಟು ವೀಲರ್ ವೆಹಿಕಲ್ ಇನ್ಶೂರೆನ್ಸಸಿನ ಅಗತ್ಯವನ್ನು ಒತ್ತಿ ಹೇಳುವ ಕೆಲವು ಕಾರಣಗಳಿವೆ.
ಕಾನೂನು ಪರಿಣಾಮಗಳಿಂದ ರಕ್ಷಿಸುತ್ತದೆ - ವ್ಯಾಲಿಡ್ ಆಗಿರುವ ಇನ್ಶೂರೆನ್ಸ್ ಡಾಕ್ಯುಮೆಂಟುಗಳಿಲ್ಲದೆ, ನಿಮ್ಮ ಏವಿಯೇಟರ್ ಅನ್ನು ರೈಡ್ ಮಾಡುವುದರಿಂದ ನಿಮಗೆ ₹2,000 ಮೊತ್ತದ ದಂಡವನ್ನು ವಿಧಿಸಬಹುದು. ಅಪರಾಧವನ್ನು ಪುನರಾವರ್ತಿಸಿದರೆ, ನೀವು ₹ 4,000 ದಂಡವನ್ನು ಪಾವತಿಸಬೇಕಾಗುತ್ತದೆ. ಕೆಟ್ಟ ಸಂದರ್ಭಗಳಲ್ಲಿ, ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಕ್ಯಾನ್ಸಲ್ ಮಾಡಬಹುದು ಅಥವಾ ನೀವು 3 ತಿಂಗಳವರೆಗೆ ಜೈಲಿಗೆ ಹೋಗಬಹುದು.
ಥರ್ಡ್-ಪಾರ್ಟಿ ಚಾರ್ಜ್ಗಳನ್ನು ಕವರ್ ಮಾಡುತ್ತದೆ - ಹೋಂಡಾ ಏವಿಯೇಟರ್ಗಾಗಿ ನಿಮ್ಮ ಟು ವೀಲರ್ ಇನ್ಶೂರೆನ್ಸ್ ಪಾಲಿಸಿಯು, ಥರ್ಡ್ ಪಾರ್ಟಿ ಲಯಬಿಲಿಟಿಗಳ ವಿರುದ್ಧ ಹಣಕಾಸಿನ ರಕ್ಷಣೆಯನ್ನು ಖಚಿತಪಡಿಸುತ್ತದೆ. ನಿಮ್ಮ ಬೈಕ್ ಹಾನಿಗೊಳಗಾದರೆ ಅಥವಾ ಇನ್ನೊಂದು ವೆಹಿಕಲ್, ವ್ಯಕ್ತಿ ಅಥವಾ ಆಸ್ತಿಗೆ ಹಾನಿಯಾದರೆ, ಹಾನಿಗೊಳಗಾದ ಪಾರ್ಟಿಯು ನಿಮ್ಮ ಪಾಲಿಸಿಯ ವಿರುದ್ಧ ಪರಿಹಾರವನ್ನು ಪಡೆಯಬಹುದು.
ಓನ್ ಬೈಕ್ ಡ್ಯಾಮೇಜಿಗೆ ಪಾವತಿಸುತ್ತದೆ - ಸಂಭವನೀಯ ವೆಚ್ಚಗಳಿಂದ ನಿಮ್ಮ ಹಣಕಾಸುಗಳನ್ನು ರಕ್ಷಿಸಲು ಕಾಂಪ್ರೆಹೆನ್ಸಿವ್ ಕವರೇಜ್ ಪಾಲಿಸಿಯು, ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಅನ್ನು ನೀಡುತ್ತದೆ. ಪ್ರವಾಹ, ಭೂಕಂಪ, ಬೆಂಕಿ, ಕಳ್ಳತನ ಅಥವಾ ಯಾವುದೇ ಇತರ ಕಾರಣಗಳಿಂದಾಗಿ ನಿಮ್ಮ ಏವಿಯೇಟರ್ ಹಾನಿಗೊಳಗಾಗುತ್ತದೆ ಎಂದು ಭಾವಿಸೋಣ. ಈಗ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಂದ ರಿಪೇರಿ ವೆಚ್ಚವನ್ನು ನೀವು ಪಡೆಯಬಹುದು.
ವೈಯಕ್ತಿಕ ಅಪಘಾತದ ಕವರ್ಗಾಗಿ ಪರಿಹಾರಗಳು - ಮಾಲೀಕ-ಸವಾರರ ಮರಣ ಅಥವಾ ಶಾಶ್ವತ/ಭಾಗಶಃ ಅಂಗವೈಕಲ್ಯದ ಸಂದರ್ಭದಲ್ಲಿ, ನಾಮಿನಿಯು ಪಾಲಿಸಿಯ ವಿರುದ್ಧ ಪರಿಹಾರವನ್ನು ಪಡೆಯುತ್ತಾರೆ.
ನೋ ಕ್ಲೈಮ್ ಬೋನಸ್ ಪ್ರಯೋಜನಗಳನ್ನು ನೀಡುತ್ತದೆ - ನೀವು ಒಂದು ವರ್ಷದವರೆಗೆ ಯಾವುದೇ ಕ್ಲೈಮ್ ಅನ್ನು ಸಲ್ಲಿಸದಿದ್ದರೆ, ನೀವು ಬೋನಸ್ ಅನ್ನು ಗಳಿಸುವಿರಿ. ಈ ಬೋನಸ್ ನಿಮ್ಮ ಪಾಲಿಸಿ ಪ್ರೀಮಿಯಂಗಳ ಮೇಲಿನ ಡಿಸ್ಕೌಂಟ್ನಂತೆ ಕೆಲಸ ಮಾಡುತ್ತದೆ.
ಹೋಂಡಾ ಏವಿಯೇಟರ್ ಇನ್ಶೂರೆನ್ಸ್ ಪಾಲಿಸಿ ರಿನೀವಲ್ ನಂತರವೂ ನೀವು ಈ ಡಿಸ್ಕೌಂಟ್ ಅನ್ನು ಮುಂದುವರೆಸಬಹುದು.
ಡಿಜಿಟ್ ಇನ್ಶೂರೆನ್ಸ್ ಸತತ ಐದು ಕ್ಲೈಮ್-ಫ್ರೀ ವರ್ಷಗಳವರೆಗೆ 50% ಡಿಸ್ಕೌಂಟ್ ಅನ್ನು ನೀಡುತ್ತದೆ.
ಈಗ ನೀವು ಟು ವೀಲರ್ ವೆಹಿಕಲ್ ಇನ್ಶೂರೆನ್ಸಿನ ಪ್ರಯೋಜನಗಳನ್ನು ತಿಳಿದಿದ್ದೀರಿ. ಈಗ ನಾವು ಏವಿಯೇಟರ್ನ ಕೆಲವು ಫೀಚರ್ಗಳನ್ನು ಓದೋಣ.
ಹೋಂಡಾ ಏವಿಯೇಟರ್ ಬಗ್ಗೆ ಇನ್ನಷ್ಟು ತಿಳಿಯಿರಿ
ಏವಿಯೇಟರ್ 110 ಸಿಸಿ ಸೆಗ್ಮೆಂಟ್ನಲ್ಲಿ ಹೆಚ್ಚು ಸ್ಥಿರವಾಗಿ ಮಾರಾಟವಾದ ಹೋಂಡಾದ ಸ್ಕೂಟರ್ ಇದಾಗಿದೆ. 2018 ರ ಅ ಆದ ಮಾಡೆಲ್ಗಳೊಂದಿಗೆ, ವೆಹಿಕಲ್ ತಯಾರಕರು ಹೆಚ್ಚುವರಿ ಪರಿಷ್ಕರಣೆಗಳೊಂದಿಗೆ ಫೀಚರ್ಗಳ ಪಟ್ಟಿಯನ್ನು ಸುಧಾರಿಸಿದ್ದಾರೆ. ಅವುಗಳೆಂದರೆ:
109.19 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್ 7000 RPM ನಲ್ಲಿ 8.03 PS ಮತ್ತು 5500 rpm ನಲ್ಲಿ 8.9 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಟು ವೀಲರ್ ವೆಹಿಕಲ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಗಳು ಮತ್ತು ರಿಯರ್ ಶಾಕ್ ಅಬ್ಸಾರ್ಬರ್ನೊಂದಿಗೆ ಬಂದಿದೆ.
2018 ರ ವೇರಿಯಂಟ್, ಎಲ್ಇಡಿ ಹೆಡ್ಲೈಟ್, ಮೆಟಲ್ ಮಫ್ಲರ್ ಹೀಟ್ ಶೀಲ್ಡ್, ಇಗ್ನಿಷನ್ ಸ್ಲಾಟ್ನಿಂದ ಸೀಟ್ ಅನ್ನು ಅನ್ಲಾಕ್ ಮಾಡುವ ಫೋರ್-ಇನ್-ಒನ್ ಕೀ ಸ್ಲಾಟ್ ಮತ್ತು ಲಗೇಜ್ ಸಾಗಿಸಲು ಎರಡು ಹುಕ್ಗಳನ್ನು ಪಡೆದುಕೊಂಡಿದೆ.
ಹೀರೋ ಏವಿಯೇಟರ್ 12-ಇಂಚಿನ ಫ್ರಂಟ್ ಮತ್ತು 10-ಇಂಚಿನ ರಿಯರ್ ಅಲಾಯ್ ವೀಲ್ 130 ಎಂಎಂ ಡ್ರಮ್ ಬ್ರೇಕ್ ಮತ್ತು ಸಿಬಿಎಸ್ ಎರಡೂ ತುದಿಗಳಲ್ಲಿ ಒಳಗೊಂಡಿದೆ. 190 ಎಂಎಂ ಡಿಸ್ಕ್ನ ಆಯ್ಕೆಯೂ ಇತ್ತು.
ಏನೇ ಇರಲಿ, ಈ ಎಲ್ಲಾ ಫೀಚರ್ಗಳು ಅಪಘಾತಗಳು ಮತ್ತು ಇತರ ಘಟನೆಗಳಿಂದ 100% ರಕ್ಷಣೆಯನ್ನು ಖಾತರಿಪಡಿಸುವುದಿಲ್ಲ. ಆದ್ದರಿಂದ, ಹೋಂಡಾ ಏವಿಯೇಟರ್ ಇನ್ಶೂರೆನ್ಸ್ ಖರೀದಿಸುವುದು ಅತ್ಯಗತ್ಯ. ಏಕೆಂದರೆ ಇದು ಗರಿಷ್ಠ ಫೈನಾನ್ಸಿಯಲ್ ಕವರೇಜನ್ನು ಖಾತ್ರಿಗೊಳಿಸುತ್ತದೆ.
ಹೋಂಡಾ ಏವಿಯೇಟರ್ - ವೇರಿಯಂಟ್ಗಳು ಮತ್ತು ಎಕ್ಸ್ ಶೋರೂಂ ಬೆಲೆ
ವೇರಿಯಂಟ್ಗಳು |
ಎಕ್ಸ್ ಶೋರೂಂ ಬೆಲೆ (ಆಯಾ ನಗರಕ್ಕೆ ಅನುಗುಣವಾಗಿ ಬದಲಾಗಬಹುದು) |
||||
ಏವಿಯೇಟರ್ ಡ್ರಮ್ |
₹59,183 |
ಏವಿಯೇಟರ್ ಡ್ರಮ್ ಅಲಾಯ್ |
₹61,118 |
ಏವಿಯೇಟರ್ ಡಿಸ್ಕ್ |
₹63,537 |