ಹೋಂಡಾ ಆಕ್ಟಿವಾ ಇನ್ಶೂರೆನ್ಸ್ ಆನ್‌ಲೈನ್

ಹೋಂಡಾ ಆಕ್ಟಿವಾ ಇನ್ಶೂರೆನ್ಸ್ ಕೇವಲ ₹714 ರಿಂದ ಪ್ರಾರಂಭವಾಗುತ್ತದೆ.

Third-party premium has changed from 1st June. Renew now

ಹೋಂಡಾ ಆಕ್ಟಿವಾ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ/ರಿನೀವ್ ಮಾಡಿಸಿ

ಹೋಂಡಾ ಆಕ್ಟಿವಾ ಖರೀದಿಸಲು ಬಯಸುತ್ತಿರುವಿರಾ? ಮಾಡೆಲ್ ವೇರಿಯಂಟ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.  ಯಾವ ವಿಷಯಗಳು ಇವನ್ನು ಅಪೇಕ್ಷಿತಗೊಳಿಸುತ್ತದೆ ಮತ್ತು ಹೋಂಡಾ ಆಕ್ಟಿವಾ ಇನ್ಶೂರೆನ್ಸ್ ಪಾಲಿಸಿಯಲ್ಲಿ ನೀವು ಗಮನಿಸಬೇಕಾದ ವಿಷಯಗಳು ಇಲ್ಲಿವೆ!

ಹೋಂಡಾ ಆಕ್ಟಿವಾ ವಾಹನವು, ಹೋಂಡಾ ಮೋಟಾರ್ ಕಂಪನಿಯ ಬೈಕ್/ಸ್ಕೂಟರ್ ವಲಯದಲ್ಲಿ ಅತಿ ಹೆಚ್ಚು ಮಾರಾಟವಾಗುವ ವಾಹನವಾಗಿದ್ದು, ಭಾರತೀಯ ಟು ವೀಲರ್ ವಾಹನಗಳ ಮಾರಾಟದಲ್ಲಿ 14% ಕ್ಕಿಂತ ಹೆಚ್ಚು ಪಾಲು ಹೊಂದಿದೆ. ಕೈಗೆಟುಕುವ, ಸೊಗಸಾದ ಮತ್ತು ತಾಂತ್ರಿಕತೆಯ ಅದ್ಭುತಗಳ ಕಾರಣಕ್ಕೆ, ಆಕ್ಟಿವಾ ವಾಹನವು ಸರಾಸರಿ ಭಾರತೀಯ ಗ್ರಾಹಕರಿಂದ ಎಲ್ಲ ಸರಿಯಾದ ಬಾಕ್ಸ್‌ಗಳನ್ನು ಟಿಕ್ ಮಾಡಿಸುತ್ತದೆ. (1)

ಈಗ ನೀವು ಈ ಮಾಡೆಲ್ ಅನ್ನು ಖರೀದಿಸಲು ನಿರ್ಧರಿಸಿದ್ದೀರಿ, ಆಕ್ಟಿವಾ ಇನ್ಶೂರೆನ್ಸ್ ಖರೀದಿಸುವುದು ಮುಂದಿನ ತಾರ್ಕಿಕ ಹಂತವಾಗಿದೆ. ಆಕ್ಟಿವಾದ ಪ್ರತಿಯೊಂದು ಮಾಡೆಲ್ ಇನ್ನೂ BS-VI ಕಂಪ್ಲೈಂಟ್ ಆಗಿಲ್ಲ. ಆದಾಗ್ಯೂ, ಈ ವಿಶೇಷತೆಗಳನ್ನು ಒಳಗೊಂಡಂತೆ ಹೆಚ್ಚಿನ ಮಾಡೆಲ್'ಗಳನ್ನು ಬಿಡುಗಡೆ ಮಾಡಲು ಹೋಂಡಾ ಯೋಜಿಸುತ್ತಿದೆ.

ಈಗ, ಹೋಂಡಾ ಆಕ್ಟಿವಾ ವಾಹನವು ಉದ್ಯಮ-ಪ್ರಥಮ ವೈಶಿಷ್ಟ್ಯಗಳನ್ನು ಹೊಂದಿದ್ದರೂ ಸಹ, ಇದು ಯಾವುದೇ ಇತರ ಟು ವೀಲರ್ ವಾಹನಗಳಂತೆ ಅಪಘಾತಗಳು ಮತ್ತಿತರ ಅಪಾಯಗಳಿಗೆ ಗುರಿಯಾಗುತ್ತದೆ. ಇಲ್ಲಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಮುಖ್ಯವಾಗುತ್ತದೆ.

ಇದಲ್ಲದೆ, ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಪ್ರತಿಯೊಂದು ಟು ವೀಲರ್  ಮೋಟಾರ್ ವಾಹನವು, 'ಥರ್ಡ್ ಪಾರ್ಟಿ ಲೈಬಿಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು' ಹೊಂದುವುದು ಕಾನೂನುಬದ್ಧವಾಗಿ ಖಡ್ಡಾಯವಾಗಿದೆ. ಈ ಪಾಲಿಸಿ ಇಲ್ಲದಿದ್ದರೆ, ಮೋಟಾರ್ ವೆಹಿಕಲ್ (ತಿದ್ದುಪಡಿ) ಆಕ್ಟ್ 2019 ರ ಪ್ರಕಾರ, ನಿಮಗೆ 2000 ರೂಗಳ ದಂಡ ವಿಧಿಸಬಹುದು. ಮತ್ತು ಪುನರಾವರ್ತಿತ ಅಪರಾಧಕ್ಕಾಗಿ 4000 ರೂಗಳ ದಂಡ ವಿಧಿಸಬಹುದು.

ಆದರೆ, ನಾವು ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳ ಬಗ್ಗೆ ಹೆಚ್ಚು ಪರಿಶೀಲಿಸುವ ಮೊದಲು, ಒಂದು ನಿಮಿಷ ಕಾಯಿರಿ!

ಹೋಂಡಾ ಆಕ್ಟಿವಾ ಕುರಿತು ಕೆಲವು ಆಸಕ್ತಿದಾಯಕ ಸಂಗತಿಗಳನ್ನು ನೋಡೋಣ. ಆಕ್ಟಿವಾ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಿಂದ ನಿಮ್ಮ ಪ್ರಯೋಜನಗಳನ್ನು ನೀವು ಹೇಗೆ ಗರಿಷ್ಠಗೊಳಿಸಬಹುದು ಮತ್ತು ನೀವು ಪಾಲಿಸಿಯನ್ನು ಪಡೆದುಕೊಳ್ಳಲು ಬಯಸುವ ರೂಪಾಂತರಗಳು.

ಹೋಂಡಾ ಆಕ್ಟಿವಾ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ

ನೀವು ಡಿಜಿಟ್‌ ನ ಹೋಂಡಾ ಆಕ್ಟಿವಾ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಹೋಂಡಾ ಆಕ್ಟಿವಾ ಇನ್ಶೂರೆನ್ಸ್ ಯೋಜನೆಗಳ ವಿಧಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟಗಳು

×

ಥರ್ಡ್ ಪಾರ್ಟಿಯ ವಾಹನಕ್ಕೆ ಆಗುವ ಹಾನಿ

×

ಥರ್ಡ್ ಪಾರ್ಟಿಯ ಆಸ್ತಿಗೆ ಆಗುವ ಹಾನಿ

×

ಪರ್ಸನಲ್ ಆಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

×

ನಿಮ್ಮ ಬೈಕ್/ಸ್ಕೂಟರಿನ ಕಳ್ಳತನ

×

ನಿಮ್ಮ ಐಡಿವಿ(IDV) ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಿದ ಆಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್  ಮತ್ತು ಥರ್ಡ್ ಪಾರ್ಟಿ ಟು ವೀಲರ್ ವಾಹನ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಕುರಿತು ಇನ್ನಷ್ಟು ತಿಳಿಯಿರಿ

ಹೋಂಡಾ ಆಕ್ಟಿವಾ - ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್‌ಗಳು ಎಕ್ಸ್ ಶೋರೂಂ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು
ಆಕ್ಟಿವಾ ಐ ಎಸ್ಟಿಡಿ, 66 kmpl, 109.19 ₹ 51,254
ಆಕ್ಟಿವಾ 3G ಎಸ್ಟಿಡಿ, 60 Kmpl, 109.19 ಸಿಸಿ. ನಿಲ್ಲಿಸಲಾಗಿದೆ ₹ 48,503
ಆಕ್ಟಿವಾ 4G ಎಸ್ಟಿಡಿ , 60 Kmpl, 109.19 ಸಿಸಿ ನಿಲ್ಲಿಸಲಾಗಿದೆ ₹ 51,460
ಆಕ್ಟಿವಾ 5G ಎಸ್ಟಿಡಿ , 60 Kmpl, 109.19 ಸಿಸಿ ₹ 54,911
ಆಕ್ಟಿವಾ 5G ಲಿಮಿಟೆಡ್ ಆವೃತ್ತಿ STD, 60 Kmpl, 109.19 ಸಿಸಿ ₹ 55,311
ಆಕ್ಟಿವಾ 5G ಡಿಎಲ್ಎಕ್ಸ್ , 60 Kmpl, 109.19 ಸಿಸಿ ₹ 56,776
ಆಕ್ಟಿವಾ 5G ಲಿಮಿಟೆಡ್ ಆವೃತ್ತಿ ಡಿಎಲ್ಎಕ್ಸ್, 60 Kmpl, 109.19 ಸಿಸಿ ₹ 57,176
ಆಕ್ಟಿವಾ 125 ಸ್ಟ್ಯಾಂಡರ್ಡ್, 60 Kmpl, 124.9 ಸಿಸಿ ₹ 60,628
ಆಕ್ಟಿವಾ 125 ಡ್ರಮ್ ಬ್ರೇಕ್ ಅಲಾಯ್, 60 Kmpl, 124.9 ಸಿಸಿ ₹ 62,563
ಆಕ್ಟಿವಾ 125 ಡಿಲಕ್ಸ್, 60 Kmpl, 124.9 ಸಿಸಿ ₹ 65,012

ಕ್ಲೇಮ್ ಸಲ್ಲಿಸುವುದು ಹೇಗೆ ?

ನಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ ನಂತರ ಅಥವಾ ರಿನೀವಲ್ ಮಾಡಿಸಿದ ನಂತರ ನೀವು ಚಿಂತಾ-ಮುಕ್ತರಾಗಿ ಜೀವಿಸುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೇಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

ಕೇವಲ 1800-258-5956 ಸಂಖ್ಯೆಗೆ ಕರೆ ಮಾಡಿ. ನೀವು ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ ಲಿಂಕ್ ಪಡೆಯಿರಿ. ಮಾರ್ಗದರ್ಶಿಯ ಮೂಲಕ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ಮರುಪಾವತಿ ಅಥವಾ ನಗದುರಹಿತದ ಆಯ್ಕೆಯನ್ನು ಪಡೆಯಲು 'ರಿಪೇರಿ ವಿಧಾನವನ್ನು' ಆಯ್ದುಕೊಳ್ಳಿ.

ಡಿಜಿಟ್ ಇನ್ಶೂರೆನ್ಸ್ ಕ್ಲೇಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೇಮ್‌ಗಳ ವರದಿ ಕಾರ್ಡ್ ಅನ್ನು ಓದಿ

ಹೋಂಡಾ ಆಕ್ಟಿವಾ: ನೀವು ತಿಳಿದುಕೊಳ್ಳಬೇಕಾದದ್ದು.

ಹೋಂಡಾ 2001 ರಲ್ಲಿ ಆಕ್ಟಿವಾ ಶ್ರೇಣಿಯನ್ನು ಪರಿಚಯಿಸಿತು. ಇದು  ತಕ್ಷಣವೇ ಭಾರತೀಯ ಗ್ರಾಹಕರಿಂದ ಅನುಮೋದನೆಯ ಮುದ್ರೆಯನ್ನು ಪಡೆಯಿತು. ಇಂದು ಹೋಂಡಾ ಕಂಪನಿಯು, ಸ್ಕೂಟರ್‌ನ ನಾಲ್ಕು ಪ್ರಮುಖ ವೇರಿಯಂಟ್‌ಗಳನ್ನು ಉತ್ಪಾದಿಸುತ್ತಿದೆ. ಪ್ರತಿಯೊಂದೂ ಸಹ ಮಾರುಕಟ್ಟೆಯ ನಿರ್ದಿಷ್ಟ ವಿಭಾಗಕ್ಕೆ ಸೂಕ್ತವಾಗಿವೆ.

ಈ  ಟು ವೀಲರ್ ವಾಹನಗಳ ಪೊಟೆನ್ಷಿಯಲ್ ಖರೀದಿದಾರರಾಗಿ ಆಕ್ಟಿವಾ ಕುರಿತು ನೀವು ಕಲಿಯಬೇಕಾದ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ -

  • 2009 ರಲ್ಲಿ, ಕಂಪನಿಯು ಭಾರತದಲ್ಲಿ ನವೀಕರಿಸಿದ, ವೆಚ್ಚದಲ್ಲಿ ಹೆಚ್ಚಿನ ಏರಿಕೆ ಇಲ್ಲದ ಹಾಗೂ ಉತ್ತಮ ಎಂಜಿನ್ ಶಕ್ತಿಯುಳ್ಳ 109cc ಮಾದರಿಯ ವಾಹನವನ್ನು ಬಿಡುಗಡೆ ಮಾಡಿತು. ವಾಸ್ತವವಾಗಿ, ಹೊಸ ಮಾದರಿಯ ಪರಿಚಯದೊಂದಿಗೆ ಹೋಂಡಾ ಸ್ಕೂಟರ್, ಹೆಚ್ಚು ಇಂಧನ-ಸಮರ್ಥವಾಗಿದೆ ಎಂದು ಹೋಂಡಾ ಕಂಪನಿಯು ಹೇಳಿಕೊಂಡಿದೆ.
  • ಆಕ್ಟಿವಾ 125 ಬಿಡುಗಡೆಯೊಂದಿಗೆ, 125cc ಎಂಜಿನ್ ಕ್ಯೂಬಿಕ್ ಕೆಪಾಸಿಟಿಯೊಂದಿಗೆ ಈ ಸ್ಕೂಟರ್ ಮಾದರಿಯು ಮತ್ತೊಂದು ಪ್ರಮುಖ ನವೀಕರಣವನ್ನು ಪಡೆಯಿತು.
  • 2019 ರಲ್ಲಿ, ಕಂಪನಿಯು ಆಕ್ಟಿವಾ 5G ಅನ್ನು ಭಾರತೀಯ ಮಾರುಕಟ್ಟೆಗೆ ತಂದಿತು. ಇದು ರಾಯಲ್ ಸೀಟ್, ಸಂಪೂರ್ಣವಾಗಿ ಬ್ಲ್ಯಾಕ್ ಔಟ್ ಎಂಜಿನ್, ಬ್ಲ್ಯಾಕ್ ರಿಮ್ಸ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಸುಮಾರು 10 ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.
  • ಆಕ್ಟಿವಾ ಶ್ರೇಣಿಯು ಪ್ರಾಥಮಿಕವಾಗಿ ಬಜೆಟ್ ಸ್ನೇಹಿ ವಲಯವನ್ನು ಪೂರೈಸುತ್ತದೆ. ಇದಲ್ಲದೆ, ಕಂಪನಿಯು ತನ್ನ ಮಾದರಿಗಳ (model) ಬೆಲೆಯಲ್ಲಿ ಹಠಾತ್ ಮತ್ತು ವ್ಯಾಪಕವಾದ ಹೆಚ್ಚಳವಿಲ್ಲದೆ, ನಿಯಮಿತವಾಗಿ ಮಾದರಿಗಳ ನವೀಕರಣವನ್ನು ಮ್ಯಾನೇಜ್ ಮಾಡುತ್ತದೆ. ಆದ್ದರಿಂದ, ಅವುಗಳನ್ನು ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ.

ಇಂತಹ ವೈಶಿಷ್ಟ್ಯಗಳು ಮತ್ತು ಹೆಚ್ಚಿನವುಗಳೊಂದಿಗೆ, ಹೋಂಡಾ ಆಕ್ಟಿವಾ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚು ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಬೈಕುಗಳಲ್ಲಿ ಒಂದಾಗಿದೆ.

ಆದರೆ ನಿಮ್ಮ ಆಕ್ಟಿವಾ ನಿಮ್ಮ ಪ್ರಯಾಣವನ್ನು ಸುಲಭಗೊಳಿಲೆಂದು ಇರುವಾಗ, ಅದು ಹಾನಿಗೊಳಗಾದ ಸಂದರ್ಭಗಳಲ್ಲಿ ಏನಾಗುತ್ತದೆ ಎಂಬುದರ ಕುರಿತು ನೀವು ಯೋಚಿಸಿದ್ದೀರಾ? ಅಥವಾ, ಕಳ್ಳತನವಾದರೆ ಏನಾಗುತ್ತದೆ?

ಗಮನಾರ್ಹವಾದ ಆರ್ಥಿಕ ನಷ್ಟವನ್ನು ಉಂಟುಮಾಡುವುದರ ಜೊತೆಗೆ, ಅದನ್ನು ಸರಿಪಡಿಸಲು ಅಥವಾ ಬದಲಿಸಲು ನೀವು ಸಹಜವಾಗಿ ತೊಂದರೆ ಅನುಭವಿಸಬೇಕಾಗುತ್ತದೆ. ಅಂತಹ ಸನ್ನಿವೇಶಗಳಲ್ಲಿ ನೀವು ಆರ್ಥಿಕವಾಗಿ ರಕ್ಷಿಸಲ್ಪಟ್ಟಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು, ನಿಮ್ಮ ಹೋಂಡಾ ಆಕ್ಟಿವಾಗೆ ನೀವು ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವಿರಿ ಎಂದು ಖಚಿತಪಡಿಸಿಕೊಳ್ಳಿ.

ಇನ್ಶೂರೆನ್ಸ್ ಪಾಲಿಸಿಯ ಅಗತ್ಯತೆಗಳ ಆಧಾರದ ಮೇಲೆ, ನಿಮ್ಮ ವಾಹನಕ್ಕಾಗಿ ನೀವು ಪರಿಗಣಿಸಬಹುದಾದ ಇನ್ಶೂರೆನ್ಸ್ ಆಯ್ಕೆಗಳಲ್ಲಿ ಡಿಜಿಟ್ ಒಂದಾಗಿದೆ.

ನಿಮ್ಮ ಹೋಂಡಾ ಆಕ್ಟಿವಾ ಇನ್ಶುರೆನ್ಸ್ ಪಾಲಿಸಿಗಾಗಿ ಡಿಜಿಟ್ ಅನ್ನು ಏಕೆ ಆಯ್ದುಕೊಳ್ಳಬೇಕು?

ಹೋಂಡಾ ಆಕ್ಟಿವಾ ಖರೀದಿಸಿದ ನಂತರ, ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಸೂಕ್ತವಾದ ಇನ್ಶೂರೆನ್ಸ್ ಪೂರೈಕೆದಾರರನ್ನು ಕಂಡುಹಿಡಿಯುವುದು. ನೀವು ಪರಿಗಣಿಸಬಹುದಾದ ಭಾರತದ ಪ್ರಮುಖ ಇನ್ಶೂರೆನ್ಸ್ ಪೂರೈಕೆದಾರರಲ್ಲಿ ಡಿಜಿಟ್ ಸಹ ಒಂದಾಗಿದೆ.

ಇತರ ಎಲ್ಲ ಇನ್ಶೂರೆನ್ಸ್ ಪೂರೈಕೆದಾರರಿಂದ ಡಿಜಿಟ್ ಅನ್ನು ಯಾವ ಅಂಶ ಪ್ರತ್ಯೇಕಿಸುತ್ತದೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಕೆಳಗೆ ಪಟ್ಟಿ ಮಾಡಲಾದ ಕಂಪನಿಯ ಕೆಲವು ವಿಶೇಷತೆಗಳನ್ನು ನೋಡೋಣ:

  • ನೆಟ್‌ವರ್ಕ್ ಗ್ಯಾರೇಜ್‌ಗಳ ವ್ಯಾಪಕ ಶ್ರೇಣಿ- ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ನಿಮಗೆ ವ್ಯಾಪಕ ಶ್ರೇಣಿಯ ನೆಟ್‌ವರ್ಕ್ ಗ್ಯಾರೇಜ್‌ಗಳನ್ನು ಒದಗಿಸಿದಾಗ, ನಗದುರಹಿತ ಕ್ಲೇಮ್‌ಗಳನ್ನು ಪಡೆಯುವುದು ಸರಳವಾಗುತ್ತದೆ. ಭಾರತದಾದ್ಯಂತ 2900 ಕ್ಕೂ ಹೆಚ್ಚು ಗ್ಯಾರೇಜ್‌ಗಳೊಂದಿಗೆ ಡಿಜಿಟ್ ಸಹಯೋಗವನ್ನು ಹೊಂದಿದೆ. ಆದ್ದರಿಂದ, ನೀವು ಎಲ್ಲಿದ್ದರೂ, ನಿಮಗೆ ಹತ್ತಿರವಿರುವ  ನೆಟ್ವರ್ಕ್ ಗ್ಯಾರೇಜ್ ಅನ್ನು ಸುಲಭವಾಗಿ ಹುಡುಕಬಹುದು.
  • ಇನ್ಶೂರೆನ್ಸ್ ಕ್ಲೇಮ್ ಮಾಡಲು ಬಹುತೇಕ ಯಾವುದೇ ದಾಖಲೆಗಳ ಅಗತ್ಯವಿಲ್ಲ - ಸಾಮಾನ್ಯವಾಗಿ, ನೀವು ಕ್ಲೇಮ್  ಮಾಡಿದಾಗ, ವಾಹನಕ್ಕಾದ ಹಾನಿಯನ್ನು ಪರೀಕ್ಷಿಸಲು, ಇನ್ಶೂರೆನ್ಸ್ ಕಂಪನಿಯ ಪ್ರತಿನಿಧಿಯು ನಿಮ್ಮ ಮನೆಗೆ ತಲುಪುತ್ತಾರೆ. ಇದಲ್ಲದೆ, ಇನ್ಶೂರೆನ್ಸ್ ಸಂಸ್ಥೆಗಳು ಸಾಮಾನ್ಯವಾಗಿ ಕ್ಲೇಮ್ ಅನ್ನು ಅನುಮೋದಿಸುವ ಅಥವಾ ತಿರಸ್ಕರಿಸುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಅದೃಷ್ಟವಶಾತ್, ಕ್ಲೇಮ್‌ಗಳನ್ನು ಹೆಚ್ಚಿಸಲು ಬಹುತೇಕ ಇನ್ಶೂರೆನ್ಸ್ ಕಂಪನಿಗಳು ವಿಧಿಸುವಂತಹ ಔಪಚಾರಿಕತೆಗಳನ್ನು, ಡಿಜಿಟ್ ದೂರ ಮಾಡುತ್ತದೆ. ಕಂಪನಿಯು ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ-ತಪಾಸಣಾ ಪ್ರಕ್ರಿಯೆಯನ್ನು ಸಹ ಪರಿಚಯಿಸಿದೆ. ಅದು ಎಲ್ಲವನ್ನೂ ಮತ್ತಷ್ಟು ಸರಳಗೊಳಿಸುತ್ತದೆ. ಇದಲ್ಲದೆ, ನೀವು ಆನ್‌ಲೈನ್‌ನಲ್ಲಿ ಹೋಂಡಾ ಆಕ್ಟಿವಾ ಇನ್ಶೂರೆನ್ಸ್ ಅನ್ನು ಖರೀದಿಸುವಂತೆಯೇ, ಡಿಜಿಟ್ ನಿಮಗೆ ಇಂಟರ್ನೆಟ್ ಮೂಲಕ ಪಾಲಿಸಿಯನ್ನು ಕ್ಲೇಮ್ ಮಾಡಲು ಅನುಮತಿಸುತ್ತದೆ. ದಾಖಲೆಗಳ ಮೂಲಕ ಕ್ಲೇಮ್ ಸಲ್ಲಿಸುವ ಹಳೆಯ ವಿಧಾನಕ್ಕಿಂತ, ಡಿಜಿಟ್ ನ ಕಾಗದರಹಿತ ಪ್ರಕ್ರಿಯೆಯು ಸರಳವಾಗಿದೆ ಮತ್ತು ಹೆಚ್ಚು ಅನುಕೂಲಕರವಾಗಿದೆ.
  • ಆಯ್ಕೆ ಮಾಡಲು ಹಲವಾರು ಇನ್ಶೂರೆನ್ಸ್ ಆಯ್ಕೆಗಳು- ಹೋಂಡಾ ಆಕ್ಟಿವಾ ಇನ್ಶೂರೆನ್ಸ್ ಅನ್ನು ಖರೀದಿಸುವಾಗ, ಸ್ಕೂಟರ್ ಅಪಘಾತಗಳ ಸಂದರ್ಭದಲ್ಲಿ ನಿಮ್ಮ ಹಣಕಾಸನ್ನು ರಕ್ಷಿಸುವ ಸರಿಯಾದ ಪಾಲಿಸಿಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನೀವು ಆಯ್ಕೆ ಮಾಡಿಕೊಳ್ಳಲು, ಡಿಜಿಟ್ ಈ ಕೆಳಗಿನ ಇನ್ಶೂರೆನ್ಸ್ ಉತ್ಪನ್ನಗಳನ್ನು ನೀಡುತ್ತದೆ:
  • ಥರ್ಡ್ ಪಾರ್ಟಿ ಹೊಣೆಗಾರಿಕೆ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿ– ಈ ಪಾಲಿಸಿಗಳು, ನಿಮ್ಮ ಟು ವೀಲರ್ ವಾಹನವನ್ನು ಒಳಗೊಂಡ ಅಪಘಾತದಲ್ಲಿ ಥರ್ಡ್ ಪಾರ್ಟಿಯ ನಿರಂತರ ಹಾನಿಗಾಗಿ, ನೀವು ಅನುಭವಿಸುವ ನಷ್ಟದ ವಿರುದ್ಧ ನಿಮಗೆ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ. ಅಂತಹ ಅಪಘಾತದಿಂದ , ಥರ್ಡ್ ಪಾರ್ಟಿಗೆ ಗಾಯವಾದಲ್ಲಿ ಅಥವಾ ಸಾವು ಸಂಭವಿಸಿದಲ್ಲಿ ಅಂತಹ ನಷ್ಟವನ್ನು ಈ ಪಾಲಿಸಿ ಕವರ್ ಮಾಡುತ್ತದೆ. ಅಂತಹ ಸಂದರ್ಭಗಳಲ್ಲಿ ಉದ್ಭವಿಸಬಹುದಾದ ಯಾವುದೇ ದಾವೆಯ ವೆಚ್ಚವನ್ನು ಸಹ ಇದು ಭರಿಸುತ್ತದೆ.
  • ಕಾಂಪ್ರೆಹೆನ್ಸಿವ್  ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ– ಕಾಂಪ್ರೆಹೆನ್ಸಿವ್  ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳು ಅಪಘಾತ, ನಷ್ಟ ಅಥವಾ ಕಳ್ಳತನದ ಸಂದರ್ಭದಲ್ಲಿ ನಿಮ್ಮ ಹೋಂಡಾ ಟು ವೀಲರ್ ವಾಹನಕ್ಕೆ ಆಗುವ ಹಾನಿಯನ್ನು ಆರ್ಥಿಕವಾಗಿ ಕವರ್ ಮಾಡುತ್ತವೆ. ಕಾಂಪ್ರೆಹೆನ್ಸಿವ್  ಯೋಜನೆಗಳು ಥರ್ಡ್ ಪಾರ್ಟಿ ಕವರ್‌ನೊಂದಿಗೆ ಬರುತ್ತವೆ. ಆದ್ದರಿಂದ, ನೀವು ಮತ್ತು ಇತರ ಪಾರ್ಟಿಗಳು, ಅಪಘಾತದ ಸಂದರ್ಭದಲ್ಲಿ ನಿಮ್ಮ ಇನ್ಶೂರೆನ್ಸ್ ಸಂಸ್ಥೆಗಳಿಂದ, ಹಾನಿಯ ವಿರುದ್ಧ ಫೈಲ್ ಮಾಡಬಹುದು. ಇದಲ್ಲದೆ, ನೈಸರ್ಗಿಕ ವಿಪತ್ತುಗಳು, ಬೆಂಕಿ ಮತ್ತು ಮಾನವ ನಿರ್ಮಿತ ವಿಪತ್ತುಗಳಿಂದಾಗಿ ನಿಮ್ಮ ಹೋಂಡಾ ಆಕ್ಟಿವಾಕ್ಕೆ ಹಾನಿಯಾದಲ್ಲಿ, ಪಾಲಿಸಿಯು ಅದನ್ನು ಪಾವತಿಸುತ್ತದೆ.

ಮತ್ತೊಮ್ಮೆ, ಯಾರು ಸೆಪ್ಟೆಂಬರ್ 2018 ರ ನಂತರ ಆಕ್ಟಿವಾ ಟು ವೀಲರ್ ವಾಹನವನ್ನು ಖರೀದಿಸಿದ್ದಾರೋ, ಅವರು ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಅನ್ನು ಪಡೆಯಬಹುದು. ಇದರ ಅಡಿಯಲ್ಲಿ, ಪಾಲಿಸಿದಾರರು ತಮ್ಮ ಸ್ವಂತ ಟು ವೀಲರ್ ವಾಹನಕ್ಕಾಗಿ, ಪಾಲಿಸಿಯ ಥರ್ಡ್ ಪಾರ್ಟಿ ಹೊಣೆಗಾರಿಕೆಯ ಭಾಗವನ್ನು ಹೊರತುಪಡಿಸಿ, ವ್ಯಾಪಕ ರಕ್ಷಣೆಯ ಆಕ್ಸೆಸ್ ಪಡೆಯುತ್ತಾರೆ.  ಅದಕ್ಕಾಗಿಯೇ, ಈಗಾಗಲೇ ದೀರ್ಘಾವಧಿಯ 'ಥರ್ಡ್ ಪಾರ್ಟಿ ಲೈಬಿಲಿಟಿ ಟೂ ವ್ಹೀಲರ್ ಇನ್ಶೂರೆನ್ಸ್ ಪಾಲಿಸಿ' ಅನ್ನು ಖರೀದಿಸಿದವರು ತಮ್ಮ ಹೋಂಡಾ ಆಕ್ಟಿವಾಗೆ ಬೆಟರ್ ರೌಂಡೆಡ್ ರಕ್ಷಣೆಗಾಗಿ 'ಸ್ಟ್ಯಾಂಡ್ ಲೋನ್ ಓನ್ ಡ್ಯಾಮೇಜ್ ಕವರ್' ಅನ್ನು ಪಡೆಯಬಹುದು.

  • ಆಕರ್ಷಕ 24x7 ಗ್ರಾಹಕ ಸೇವೆ- ನೀವು ನಿಮ್ಮ ಇನ್ಶೂರೆನ್ಸ್ ಸಂಸ್ಥೆಯಿಂದ ಪಾಲಿಸಿಯನ್ನು ಖರೀದಿಸಿದ ನಂತರ,  ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ಸಹ ತಾವು ಒದಗಿಸುವ ಸೇವೆಯಷ್ಟೇ ಉತ್ತಮರಾಗಿರಬೇಕು. ಈ ನಿಟ್ಟಿನಲ್ಲಿ, ಡಿಜಿಟ್ ತನ್ನ ಗ್ರಾಹಕರ ನೆಲೆಯನ್ನು ನಿರಂತರವಾಗಿ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ನಿಮ್ಮ ಪಾಲಿಸಿ ಕವರ್‌ಗೆ ಸಂಬಂಧಿಸಿದಂತೆ ನೀವು ಪ್ರಶ್ನೆಗಳನ್ನು ಹೊಂದಿದ್ದರೆ ಅಥವಾ ಸ್ಪಷ್ಟೀಕರಣವನ್ನು ಬಯಸಿದರೆ , ಡಿಜಿಟ್‌ನ  ಸೂಪರ್-ರೆಸ್ಪಾನ್ಸಿವ್ ಕಸ್ಟಮರ್ ಕೇರ್ ವಿಭಾಗಕ್ಕೆ ಕರೆ ಮಾಡಿ. ದಿನದ 24 ಗಂಟೆಯೂ ನಿಮ್ಮ ಕರೆಗಳನ್ನು ಸ್ವೀಕರಿಸಲು ನಾವು ಲಭ್ಯರಿದ್ದೇವೆ. ಅಗತ್ಯವಿದ್ದಾಗ ಸಹಾಯವನ್ನು ಪಡೆಯುವ ಈ ಸಾಮರ್ಥ್ಯವು, ಡಿಜಿಟ್‌ನ ಪ್ರಮುಖ ಸಕಾರಾತ್ಮಕ ಅಂಶವಾಗಿದೆ. ಇದು ಗ್ರಾಹಕರು ಮತ್ತು ಸೇವಾ ಪೂರೈಕೆದಾರರ ನಡುವಿನ ಪರಸ್ಪರ ಕ್ರಿಯೆಯನ್ನು ಸುಗಮಗೊಳಿಸುತ್ತದೆ.
  • ಉಪಯುಕ್ತ ಮತ್ತು ಅನುಕೂಲಕರ ಆಡ್-ಆನ್‌ಗಳು- ಡಿಜಿಟ್‌ನಲ್ಲಿ ನೀಡಲಾಗುವ ಮೂಲ ಪಾಲಿಸಿಗಳೊಂದಿಗೆ ನೀವು ಸಂತೋಷವಾಗಿ ಇಲ್ಲದಿರಬಹುದು. ಅದಕ್ಕಾಗಿಯೇ ನಿಮ್ಮ ಅಗತ್ಯತೆಗಳು ಮತ್ತು ಇಚ್ಛೆಗೆ ಅನುಸಾರವಾಗಿ ನಿಮ್ಮ ರಕ್ಷಣೆಯನ್ನು ಕಸ್ಟಮೈಸ್ ಮಾಡಿಕೊಳ್ಳಲು, ಕಂಪನಿಯು ನಿಮ್ಮನ್ನು ಅನುಮತಿಸುತ್ತದೆ. ಡಿಜಿಟ್ ವಿವಿಧ ಆಡ್-ಆನ್‌ಗಳನ್ನು ನೀಡುತ್ತದೆ. ಅವನ್ನು ನಿಮ್ಮ ಸ್ಕೂಟರ್‌ನ ಕವರ್  ಹೆಚ್ಚಿಸಲು ನೀವು ಖರೀದಿಸಬಹುದು. ಈ ಕಂಪನಿಯು ನೀಡುವ ಕೆಲವು ಆಡ್-ಆನ್‌ಗಳು ಹೀಗಿವೆ:
  • ಝೀರೋ ಡೆಪ್ರಿಸಿಯೇಷನ್ ಕವರ್.
  • ಬ್ರೇಕ್ ಡೌನ್ ಅಸಿಸ್ಟೆನ್ಸ್
  • ಎಂಜಿನ್ ಮತ್ತು ಗೇರ್ ರಕ್ಷಣೆ ಕವರ್.
  • ಬ್ರೇಕ್ ಡೌನ್ ಅಸಿಸ್ಟೆನ್ಸ್ .
  • ರಿಟರ್ನ್ ಟು ಇನ್‌ವಾಯ್ಸ್ ಕವರ್
  • ಸರಳ ರಿನೀವಲ್ ಮತ್ತು ಖರೀದಿ ಪ್ರಕ್ರಿಯೆ- ಜಟಿಲವಾದ ಕಾರ್ಯವಿಧಾನವನ್ನು ರಚಿಸುವ ಬದಲು, ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಗಳನ್ನು ಪಡೆಯುವ ಮತ್ತು ರಿನೀವಲ್ ಮಾಡುವ ಪ್ರಕ್ರಿಯೆಯನ್ನು ಆದಷ್ಟು ಸರಳಗೊಳಿಸುವ ಗುರಿಯನ್ನು ಡಿಜಿಟ್ ಹೊಂದಿದೆ. ನೀವು ನಮ್ಮ ಪಾಲಿಸಿಗಳನ್ನು, ನಮ್ಮ ಅಧಿಕೃತ ವೆಬ್‌ಸೈಟ್ ಅನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಖರೀದಿಸಬಹುದು. ಈಗ ಅಸ್ತಿತ್ವದಲ್ಲಿರುವ ಗ್ರಾಹಕರು ತಮ್ಮ ಬೈಕ್/ಸ್ಕೂಟರ್‌ನ ಪಾಲಿಸಿಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು, ತೊಂದರೆ-ಮುಕ್ತ ಆನ್‌ಲೈನ್ ರಿನೀವಲ್ ಪ್ರಕ್ರಿಯೆಯನ್ನು ಬಳಸಬಹುದು.
  • ನಿಮ್ಮ ಐಡಿವಿ(IDV) ಅನ್ನು ಕಸ್ಟಮೈಸ್ ಮಾಡಿ- ವಾಹನದ ಐಡಿವಿ(IDV) ಎನ್ನುವುದು, ನೀವು ಪಾಲಿಸಿಯ ಮೇಲೆ ಪಡೆದುಕೊಳ್ಳಬಹುದಾದ ಘೋಷಿತ ಇನ್ಶೂರೆನ್ಸ್ ಮೌಲ್ಯವನ್ನು ಸೂಚಿಸುತ್ತದೆ. ನಿಮ್ಮ ವಾಹನಕ್ಕೆ ಸರಿಪಡಿಸಲಾಗದಷ್ಟು ಹಾನಿಯಾದ ಸಂದರ್ಭದಲ್ಲಿ, ಇನ್ಶೂರೆನ್ಸ್ ಸಂಸ್ಥೆಯಿಂದ ನೀವು ಕ್ಲೇಮ್ ಮಾಡಬಹುದಾದ ಪೂರ್ವನಿರ್ಧರಿತ ಮೊತ್ತ ಇದು. ನಿಮ್ಮ ಆಕ್ಟಿವಾ ಟು ವೀಲರ್ ವಾಹನ ಕಳ್ಳತನವಾದರೆ ಅದನ್ನು ನೀವು ಕ್ಲೇಮ್ ಮಾಡಬಹುದು. ಪಾಲಿಸಿಗಾಗಿ ಐಡಿವಿ(IDV) ಮೌಲ್ಯವನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಡಿಜಿಟ್ ನಿಮ್ಮನ್ನು ಅನುಮತಿಸುತ್ತದೆ. ವ್ಯಾಪಕ ರಕ್ಷಣೆ ಮತ್ತು ಕಡಿಮೆ ಪ್ರೀಮಿಯಂಗಳ ನಡುವೆ ಆಯ್ಕೆ ಮಾಡಿಕೊಳ್ಳಲು, ಡಿಜಿಟ್ ನಿಮಗೆ ಅವಕಾಶ ನೀಡುತ್ತದೆ.
  • ನೋ ಕ್ಲೇಮ್ ಬೋನಸ್- ನೀವು ಪ್ರತಿ ವರ್ಷ ಇನ್ಶೂರೆನ್ಸ್ ಅನ್ನು ಕ್ಲೇಮ್ ಮಾಡಬೇಕಾಗಿಲ್ಲ. ಅಂತಹ ಕ್ಲೇಮ್-ಫ್ರೀ ವರ್ಷಗಳ ನಂತರ, ನಿಮ್ಮ ಇನ್ಶೂರೆನ್ಸ್ ಸಂಸ್ಥೆಯವರು ನಿಮಗೆ ಕೆಲವು ಪ್ರಯೋಜನಗಳನ್ನು ಒದಗಿಸಲು ಜವಾಬ್ದಾರರಾಗಿರುತ್ತಾರೆ. ಈ ಪ್ರಯೋಜನಗಳನ್ನು ನೋ ಕ್ಲೇಮ್ ಬೋನಸ್ ಎಂದು ಕರೆಯಲಾಗುತ್ತದೆ. ಯಾವುದೇ ನೋ ಕ್ಲೇಮ್ ಬೋನಸ್ ಪ್ರಯೋಜನಗಳ ಅಡಿಯಲ್ಲಿ, ಕ್ಲೇಮ್-ಫ್ರೀ ಅವಧಿಯನ್ನು ಆನಂದಿಸಿದ ನಂತರ, ಡಿಜಿಟ್ ಕಂಪನಿಯು, ರಿನೀವಲ್ ನಂತರ ಪಾಲಿಸಿ ಪ್ರೀಮಿಯಂಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತದೆ.

ಜನಪ್ರಿಯ ಹೋಂಡಾ ಆಕ್ಟಿವಾ ಸ್ಕೂಟರ್‌ಗಳಿಗೆ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್

ವಿವಿಧ ಹೋಂಡಾ ಆಕ್ಟಿವಾ ಮಾದರಿಗಳಿಗೆ ಡಿಜಿಟ್ ನೀಡುತ್ತಿದೆ ವಿಶೇಷ ಇನ್ಶೂರೆನ್ಸ್ ಪಾಲಿಸಿಗಳನ್ನು. ಈ ನಿರ್ದಿಷ್ಟ ಶ್ರೇಣಿಯ ಸ್ಕೂಟರ್‌ಗಳಿಗಾಗಿ ಕೆಲವು ಯೋಜನೆಗಳನ್ನು ನೋಡೋಣ:

  • ಆಕ್ಟಿವಾ 3G - ಆಕ್ಟಿವಾ 3G ಒಂದು ಸ್ಟೈಲಿಶ್ ಬಾಡಿಯನ್ನು ಹೊಂದಿದೆ ಮತ್ತು ಸುಮಾರು 52 kmpl ಮೈಲೇಜ್ ನೀಡುತ್ತದೆ. ಸ್ಕೂಟರ್‌ನ ಇತರ ಎಲ್ಲ ಮಾದರಿಗಳಂತೆ, 109 CC ಎಂಜಿನ್ ವಾಹನಕ್ಕೆ ಶಕ್ತಿ ನೀಡುತ್ತದೆ. ಈ ಮಾದರಿಯು 5.3 ಲೀಟರ್ ಸಾಮರ್ಥ್ಯದ ಫ್ಯೂಯೆಲ್ ಟ್ಯಾಂಕ್ ಅನ್ನು ಹೊಂದಿದೆ.
  • ಆಕ್ಟಿವಾ 4G - ಆಕ್ಟಿವಾ 4G. ಮಾದರಿಯು , 109 CC ಎಂಜಿನ್ ಹೊಂದಿದ್ದು ಅದು ಸುಮಾರು 60 Kmpl ಮೈಲೇಜ್ ನೀಡುತ್ತದೆ. ಈ ನಿಟ್ಟಿನಲ್ಲಿ, 4G ಮಾದರಿಯು ಅದರ ಹಿಂದಿನ ಆವೃತ್ತಿಗಿಂತ ಉತ್ತಮವಾಗಿದೆ. ಆಕ್ಟಿವಾ 4G, ಗ್ರಾಹಕರಿಗೆ ಎಂಟು ಪ್ರಾಥಮಿಕ ಬಣ್ಣಗಳಲ್ಲಿ ಸಿಗುತ್ತದೆ.
  • ಆಕ್ಟಿವಾ 5G - ಹೊಂಡಾ ಆಕ್ಟಿವಾ ಶ್ರೇಣಿಯಲ್ಲಿನ ಹೊಸ ಮಾದರಿಗಳಲ್ಲಿ ಒಂದಾದ 'ಹೋಂಡಾ ಆಕ್ಟಿವಾ 5G' ತಾಂತ್ರಿಕತೆಯ ಮಾಸ್ಟರ್'ಪೀಸ್ ಆಗಿದೆ.  ಇದು 109cc ಸಿಲಿಂಡರ್ ಸೇರಿದಂತೆ ಕೆಲವು ಪರಿಣಾಮಕಾರಿಯಾದ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬರುತ್ತದೆ. ಇದಲ್ಲದೆ, ಕಂಪನಿಯ ಪ್ರಕಾರ, ಈ ಮಾದರಿಯು 60 kmpl ಅನ್ನು ಕ್ರಮಿಸಬಲ್ಲದು. ವೇಗದ ಉತ್ಸಾಹಿಗಳು ತಾವು ಗಂಟೆಗೆ 83 Kmph ನಷ್ಟು ಉನ್ನತ ವೇಗವನ್ನು ಪಡೆಯಬಹುದೆಂದು ತಿಳಿಯಲು ಸಂತೋಷಪಡುತ್ತಾರೆ. ಅಂತಹ ಹೆಚ್ಚಿನ ವೇಗವು, ಅಪಘಾತಗಳಿಂದ ನರಳುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ, ಡಿಜಿಟ್‌ನಿಂದ ಆಕ್ಟಿವಾ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.
  • ಆಕ್ಟಿವಾ 125 - ಆಕ್ಟಿವಾ 125 ಮಾದರಿಯು ಅಲಾಯ್ ಚಕ್ರಗಳು, ಮೊಬೈಲ್ ಚಾರ್ಜಿಂಗ್ ಸಾಕೆಟ್ ಮತ್ತು LED ಪೈಲಟ್ ಲ್ಯಾಂಪ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳೊಂದಿಗೆ 124.9cc- ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಸ್ಕೂಟರ್, ಸಾಮಾನ್ಯ ಹೋಂಡಾ ಆಕ್ಟಿವಾ ವೇರಿಯಂಟ್‌ಗಳಿಗಿಂತ ಸ್ವಲ್ಪ ಹೆಚ್ಚು ಶಕ್ತಿಯನ್ನು ಹೊಂದಲು, ತಮ್ಮ ಟು ವೀಲರ್ ವಾಹನಕ್ಕೆ ಆದ್ಯತೆ ನೀಡುವವರ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಹೋಂಡಾ ಆಕ್ಟಿವಾದ ಇತ್ತೀಚಿನ ವೇರಿಯಂಟ್‌ ಸಹ  BS-VI  ಸ್ಟ್ಯಾಂಡರ್ಡ್'ಗಳಿಗೆ ಅನುಗುಣವಾಗಿವೆ.  ಅವುಗಳನ್ನು ಭಾರತದಲ್ಲಿ ಪರಿಪೂರ್ಣ ಪರಿಸರ-ಸ್ನೇಹಿ ಸ್ಕೂಟರ್ ಆಯ್ಕೆಯನ್ನಾಗಿ ಮಾಡುತ್ತದೆ.
  • ಆಕ್ಟಿವಾ i  - ಗ್ರಾಹಕರಿಗೆ ಅತ್ಯಂತ ಕೈಗೆಟುಕುವ ಆಯ್ಕೆಗಳಲ್ಲಿ ಒಂದಾಗಿರುವ ಆಕ್ಟಿವಾ i ಮಾದರಿಯು, 66 kmpl ಆಕರ್ಷಕ ಮೈಲೇಜ್ ಅನ್ನು ಒದಗಿಸುತ್ತದೆ. ಅದೇನೇ ಇದ್ದರೂ, ಇನ್ಶೂರೆನ್ಸ್ ಪಾಲಿಸಿಯು ಇದಕ್ಕೆ ಜೀವಾಳವಾಗಿದೆ. ಡಿಜಿಟ್ ನಿರ್ದಿಷ್ಟವಾಗಿ ವಾಹನಗಳಿಗೆ ಸೂಕ್ತವಾಗಿರುವ ಯೋಜನೆಗಳನ್ನು ನೀಡುತ್ತದೆ. ಹಾಗೂ ಎಲ್ಲ ಸಂದರ್ಭಗಳಿಗೆ ಮತ್ತು ನಿದರ್ಶನಗಳಿಗೆ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ.

ಡಿಜಿಟ್, ಎಲ್ಲ ಸಂದರ್ಭಗಳಲ್ಲೂ ನಿಮ್ಮ ವಿಶ್ವಾಸಾರ್ಹ ಇನ್ಶೂರೆನ್ಸಿನ ಮೂಲವಾಗಿದೆ. ನಿಮ್ಮ ಪ್ರೀತಿಯ ಟು ವೀಲರ್ ವಾಹನದ ಅಪಘಾತ ಅಥವಾ ಕಳ್ಳತನದ ಸಂದರ್ಭದಲ್ಲಿ, ಡಿಜಿಟ್ ಕಂಪನಿಯ ಪಾಲಿಸಿಯು ನಿಮಗೆ ಸಂಪೂರ್ಣವಾದ ಆರ್ಥಿಕ ರಕ್ಷಣೆಯನ್ನು ಖಾತರಿಪಡಿಸುತ್ತದೆ.

ಭಾರತದಲ್ಲಿ ಹೋಂಡಾ ಆಕ್ಟಿವಾ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಪಾಲಿಸಿಯನ್ನು ಅದರ ಅಂತಿಮ ದಿನಾಂಕದೊಳಗೆ ರಿನೀವ್ ಮಾಡಿಸಲು ನಾನು ವಿಫಲನಾದರೆ ಏನಾಗುತ್ತದೆ?

ಪಾಲಿಸಿ ಅವಧಿ ಮುಗಿಯುವ ಮೊದಲು, ನಿಮ್ಮ ಯೋಜನೆಯನ್ನು ರಿನೀವ್ ಮಾಡಿಸಲು ನೀವು ವಿಫಲವಾದರೆ, ನಿಮ್ಮ ಪಾಲಿಸಿ ಕವರೇಜ್ ಕಳೆದುಹೋಗುತ್ತದೆ. ಎಲ್ಲ ಸಂಚಿತ NCB ಗಳು ಮತ್ತು ಇತರ ಪ್ರಯೋಜನಗಳು ಸಹ ಅಸ್ತಿತ್ವ ಕಳೆದುಕೊಳ್ಳುತ್ತವೆ. ಟು ವೀಲರ್ ವಾಹನದ ಮುಂದುವರೆದ ರಕ್ಷಣೆಗಾಗಿ ನೀವು ಹೊಸ ಪಾಲಿಸಿಯನ್ನು ಖರೀದಿಸಬೇಕಾಗುತ್ತದೆ. ಇದಲ್ಲದೆ, ನೀವು ಯಾವುದೇ ಪಾಲಿಸಿಯಿಲ್ಲದೆ ಉಳಿಯುವುದರಿಂದ, ಸಂಚಾರ ಉಲ್ಲಂಘನೆಗಳಿಗೆ ನಿಮಗೆ 2000 ರೂಗಳ ದಂಡವನ್ನು ವಿಧಿಸಬಹುದು.  (ಪುನರಾವರ್ತಿತ ಅಪರಾಧಕ್ಕೆ  4000 ರೂಗಳು).

ನನ್ನ ಹೋಂಡಾ ಆಕ್ಟಿವಾಗಾಗಿ ಐಡಿವಿ(IDV) ಲೆಕ್ಕಾಚಾರ ಮಾಡುವುದು ಹೇಗೆ?

ಐಡಿವಿ(IDV) ಎನ್ನುವುದು ಟು ವೀಲರ್ ವಾಹನದ ಸವಕಳಿಯನ್ನು ಹೊರತುಪಡಿಸಿ, ತಯಾರಕರು ಪಟ್ಟಿಮಾಡಿದ ಬೆಲೆಗೆ ಸಮನಾಗಿರುತ್ತದೆ. ಒಂದುವೇಳೆ ನಿಮಗೆ, ಹಸ್ತಚಾಲಿತ ಲೆಕ್ಕಾಚಾರವು ಹೆಚ್ಚು ಗೊಂದಲಮಯವೆಂದು ತೋರುತ್ತಿದ್ದರೆ, ಅದರ ಬದಲಿಗೆ ನೀವು ಆನ್‌ಲೈನ್‌ನಲ್ಲಿ ಲಭ್ಯವಿರುವ ಐಡಿವಿ(IDV) ಕ್ಯಾಲ್ಕುಲೇಟರ್‌ಗಳನ್ನು ಬಳಸಬಹುದು.

ನಾನು ನನ್ನ ಆಕ್ಟಿವಾ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು, ಕಡಿತಗಳ ಸಹಾಯದಿಂದ ಕಡಿಮೆ ಮಾಡಬಹುದೇ?

ಹೌದು, ಮಾಡಬಹುದು. ಕಡಿತಗಳು ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಗೆ ಪಾವತಿಸಬೇಕಾದ ಪ್ರೀಮಿಯಂಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ನೀವು ಸ್ವಯಂಪ್ರೇರಿತ ಕಡಿತಗಳನ್ನ ಆರಿಸಿಕೊಳ್ಳುವ ಮೂಲಕ, ನಿಮ್ಮ ಆಕ್ಟಿವಾ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಅನ್ನು ಕಡಿಮೆ ಮಾಡಬಹುದು.