Third-party premium has changed from 1st June. Renew now
ಬಜಾಜ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಖರೀದಿ/ರಿನ್ಯೂವಲ್ ಮಾಡಿ
ಬಜಾಜ್ ಟು ವೀಲರ್ ವಾಹನಗಳನ್ನು ನೋಡಿ -ಇದು ಅತ್ಯಂತ ಜನಪ್ರಿಯ ಟು ವೀಲರ್ ವಾಹನ ತಯಾರಕರಲ್ಲಿ ಒಂದಾಗಲು ಕಾರಣವೇನು?, ಬಜಾಜ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳು ಹಾಗೂ ನೀವು ಒಂದನ್ನು ಖರೀದಿಸುವ ಮೊದಲು ಗಮನಿಸಬೇಕಾದ ಅಂಶಗಳು.
ಭಾರತವು 22 ಟು ವೀಲರ್ ವಾಹನ ತಯಾರಕರಿಗೆ ತವರಾಗಿದ್ದು, ಬಜಾಜ್ ಆಟೋ ಲಿಮಿಟೆಡ್ ಪ್ರಸ್ತುತ ಪಡಿಸಿದೆ ಅದರ ಟು ವೀಲರ್ ವಾಹನಗಳ ಶ್ರೇಣಿಯನ್ನು, ವಿವಿಧ ಗ್ರಾಹಕ ವರ್ಗಗಳಿಗಾಗಿ. ಕ್ರೂಸರ್, ಕಮ್ಯೂಟರ್ ನಿಂದ ಸ್ಪೋರ್ಟ್ಸ್ ಬೈಕ್ ವರೆಗೆ, ತಯಾರಕರು ಭಾರತೀಯರ ರೈಡಿಗಾಗಿ ಆಯ್ಕೆಗಳ ಮಹಾಪೂರವನ್ನೇ ಪರಿಚಯಿಸಿದ್ದಾರೆ.
408 ಭಾರತೀಯ ನಗರಗಳಾದ್ಯಂತ 660 ಡೀಲರ್ ಶಿಪ್ ಇದ್ದು, ಕಂಪನಿಯು ಟು ವೀಲರ್ ವಾಹನವನ್ನು ಅರಸುತ್ತಿರುವ ಭಾರತೀಯ ಬಳಕೆದಾರರ ಒಂದು ಗಣನೀಯ ವರ್ಗಕ್ಕೆ ಸೇವೆ ಒದಗಿಸುತ್ತದೆ.
ಟು ವೀಲರ್ ವಾಹನಗಳು ದೈನಂದಿನ ಪ್ರಯಾಣದ ಅವಿಭಾಜ್ಯ ಅಂಗವಾಗಿದ್ದು, ರಸ್ತೆಯಲ್ಲಿ ಇವುಗಳು ತಮ್ಮದೇ ಆದ ಅಪಾಯ ಹಾಗೂ ಅನಿಶ್ಚಿತತೆಗಳನ್ನು ತಂದೊಡ್ಡಬಹುದು. ಬಜಾಜ್ ಬೈಕ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮನ್ನು ಹಾಗೂ ನಿಮ್ಮ ವಾಹನವನ್ನು ಹಲವು ಆರ್ಥಿಕ ಅಪಾಯ ಹಾಗೂ ಹಾನಿಗಳಿಂದ ಸಂರಕ್ಷಿಸುತ್ತದೆ.
ಮೋಟಾರ್ ವಾಹನ ಅಧಿನಿಯಮ 1988 ರ ಪ್ರಕಾರ, ಕಾನೂನಾತ್ಮಕವಾಗಿ ಕಡ್ಡಾಯವಾಗಿರುವುದರ ಜೊತೆಗೆ, ಈ ಯೋಜನೆಗಳು ಸಂಪೂರ್ಣ ಆರ್ಥಿಕ ಸಂರಕ್ಷಣೆ ಒದಗಿಸಿ ನೀವು ನೆಮ್ಮದಿಯಿಂದ ರೈಡ್ ಆನಂದಿಸುವಂತೆ ಮಾಡುತ್ತದೆ.
ಆದರೆ ಬಜಾಜ್ ಟು ವೀಲರ್ ಇನ್ಶೂರೆನ್ಸ್ ಯೋಜನೆಗಳ ಕಡೇ ಹೋಗುವುದಕ್ಕಿಂತ ಮೊದಲು, ಬಜಾಜ್ ಆಟೋ ಲಿಮಿಟೆಡ್ ಅಡಿಯಲ್ಲಿ ತಯಾರಿಸಲಾಗುವ ಟು ವೀಲರ್ ವಾಹನಗಳಿಂದ ಪರಿಚಿತರಾಗಿರಿ.
ಬಜಾಜ್ ಬೈಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ
ಏನೆಲ್ಲಾ ಕವರ್ ಆಗಿರುವುದಿಲ್ಲ
ನಿಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲಾ ಕವರ್ ಆಗಿರುವುದಿಲ್ಲ ಎಂದು ತಿಳಿದಿರುವುದೂ ಅಷ್ಟೇ ಮುಖ್ಯ ಏಕೆಂದರೆ ಕ್ಲೈಮ್ ಸಮಯದಲ್ಲಿ ನೀವು ಆಶ್ಚರ್ಯಕ್ಕೊಳಗಾಗಬಾರದು. ಇಲ್ಲಿ ಇಂತಹ ಕೆಲವು ಸಂದರ್ಭಗಳನ್ನು ನೀಡಲಾಗಿದೆ:
ಥರ್ಡ್ ಪಾರ್ಟೀ ಹೊಣೆಗಾರಿಕೆ ಮಾತ್ರದ ಬೈಕ್ ಪಾಲಿಸಿಯಲ್ಲಿ, ಸ್ವಂತ ವಾಹನಕ್ಕಾದ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ.
ನೀವು ಲೈಸನ್ಸ್ ಇಲ್ಲದೆ ಅಥವಾ ಕುಡಿದ ಮತ್ತಿನಲ್ಲಿ ವಾಹನ ಚಲಾವಣೆ ಮಾಡುತ್ತಿದ್ದ ಸಂದರ್ಭದಲ್ಲಿ ನಿಮ್ಮ ಬೈಕ್ ಇನ್ಶೂರೆನ್ಸ್ ನಿಮಗೆ ಕವರ್ ನೀಡುವುದಿಲ್ಲ.
ನಿಮ್ಮ ಬಳಿ ಲರ್ನರ್ಸ್ ಲೈಸನ್ಸ್ ಇದ್ದು ನೀವು ಹಿಂದಿನ ಸೀಟಿನಲ್ಲಿ ಮಾನ್ಯ ಡ್ರೈವಿಂಗ್ ಲೈಸನ್ಸ್ ಹೊಂದಿದ ವ್ಯಕ್ತಿಯನ್ನು ಕೂರಿಸದೆಯೇ ಟು ವೀಲರ್ ವಾಹನವನ್ನು ಚಲಾಯಿಸುತ್ತಿದರೆ ಅಂತಹ ಸಂದರ್ಭದಲ್ಲಿ ನಿಮ್ಮ ಬೈಕ್ ಇನ್ಶೂರೆನ್ಸ್ ನಿಮಗೆ ಕವರ್ ನೀಡುವುದಿಲ್ಲ.
ಅಪಘಾತದ ನೇರ ಪರಿಣಾಮವಾಗಿರದ (ಉದಾ; ಅಪಘಾತದ ನಂತರ ಹಾನಿಗೊಳಗಾದ ಟು ವೀಲರ್ ವಾಹನವನ್ನು ಸರಿಯಾಗಿ ಬಳಸದೇ ಇದ್ದು ಅದರ ಎಂಜಿನ್ ಕೆಟ್ಟುಹೋದರೆ ಅದನ್ನು ಕವರ್ ಮಾಡಲಾಗುವುದಿಲ್ಲ).
ಯಾವುದೇ ರೀತಿಯ ಸಹಾಯಕ ನಿರ್ಲಕ್ಷ್ಯತೆ(ಉದಾ, ಟು ವೀಲರ್ ವಾಹನವನ್ನು ಪ್ರವಾಹದ ಸಮಯದಲ್ಲಿ ಚಲಾಯಿಸಿ ಅದು ಹಾನಿಗೊಳಗಾದರೆ, ಇಂತಹ ತಯಾರಕರ ಕೈಪಿಡಿಯಲ್ಲಿ ಶಿಫಾರಸು ಮಾಡದೇ ಇರುವಂತಹ ಸನ್ನಿವೇಶಗಳನ್ನು, ಕವರ್ ಮಾಡಲಾಗುವುದಿಲ್ಲ).
ಕೆಲವು ಸಂದರ್ಭಗಳನ್ನು ಆಡ್-ಆನ್ ಗಳಿಂದ ಕವರ್ ಮಾಡಲಾಗುತ್ತದೆ. ನೀವು ಆ ಆಡ್-ಆನ್ ಗಳನ್ನು ಖರೀದಿಸದೇ ಇದ್ದರೆ ಅಂತಹ ಸಂದರ್ಭಗಳನ್ನು ಕವರ್ ಮಾಡಲಾಗುವುದಿಲ್ಲ.
ನೀವು ಡಿಜಿಟ್ ನ ಬಜಾಜ್ ಬೈಕ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?
ನಿಮ್ಮ ಅಗತ್ಯಕ್ಕೆ ಹೊಂದಿಕೊಳ್ಳುವ ಯಮಹಾ ಇನ್ಶೂರೆನ್ಸ್ ಯೋಜನೆಗಳು
ಥರ್ಡ್ ಪಾರ್ಟೀ | ಕಾಂಪ್ರೆಹೆನ್ಸಿವ್ |
ಅಪಘಾತದಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ |
|
ಬೆಂಕಿಯಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ |
|
ಪ್ರಕೃತಿ ವಿಕೋಪದಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ |
|
ಥರ್ಡ್ ಪಾರ್ಟೀ ವಾಹನಕ್ಕಾದ ಹಾನಿ |
|
ಥರ್ಡ್ ಪಾರ್ಟೀ ಸ್ವತ್ತಿಗಾದ ಹಾನಿ |
|
ವಯಕ್ತಿಕ ಅಪಘಾತ ಕವರ್ |
|
ಥರ್ಡ್ ಪಾರ್ಟೀ ವ್ಯಕ್ತಿಗೆ ಹಾನಿ/ಸಾವು |
|
ನಿಮ್ಮ ಸ್ಕೂಟರ್ ಅಥವಾ ಬೈಕ್ ನ ಕಳವು |
|
ನಿಮ್ಮ ಐಡಿವಿ ಅನ್ನು ಕಸ್ಟಮೈಜ್ ಮಾಡುವುದು |
|
ಕಸ್ಟಮೈಜ್ ಮಾಡಲಾದ ಆಡ್-ಆನ್ ಗಳೊಂದಿಗೆ ಹೆಚ್ಚುವರಿ ಸಂರಕ್ಷಣೆ |
|
Get Quote | Get Quote |
ಕಾಂಪ್ರೆಹೆನ್ಸಿವ್ ಹಾಗೂ ಥರ್ಡ್ ಪಾರ್ಟೀ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ
ಕ್ಲೈಮ್ ಫೈಲ್ ಮಾಡುವುದು ಹೇಗೆ?
ನಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ ಅಥವಾ ರಿನ್ಯೂ ಮಾಡಿದ ನಂತರ ನೀವು ನೆಮ್ಮದಿಯ ಜೀವನವನ್ನು ನಡೆಸುತ್ತೀರಿ, ಕಾರಣ ನಮ್ಮ ಬಳಿ ಇರುವ 3 ಹೆಜ್ಜೆಗಳ ಸಂಪೂರ್ಣ ಡಿಜಿಟಲ್ ಆದ ಕ್ಲೈಮ್ ಗಳ ಪ್ರಕ್ರಿಯೆ!
ಹಂತ 1
ಕೇವಲ 1800-258-5956 ಗೆ ಕರೆ ನೀಡಿ. ಯಾವುದೇ ಫಾರ್ಮ್ ತುಂಬಿಸಬೇಕಾಗಿಲ್ಲ.
ಹಂತ 2
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವ ಪರಿಶೀಲನೆಯ ಲಿಂಕ್ ಅನ್ನು ಪಡೆಯಿರಿ.ನಮ್ಮ ಹಂತ ಹಂತದ ಮಾರ್ಗದರ್ಶನದೊಂದಿಗೆ ನಿಮ್ಮ ಸ್ಮಾರ್ಟ್ ಫೋನಿನಿಂದ ನಿಮ್ಮ ವಾಹನದ ಹಾನಿಗಳನ್ನು ಸೆರೆಹಿಡಿಯಿರಿ.
ಹಂತ 3
ನೀವು ಆಯ್ಕೆ ಮಾಡಲು ಬಯಸುವ ಪಾವತಿಯ ವಿಧಾನವನ್ನು ನಿರ್ಧರಿಸಿ ಅಂದರೆ ಮರುಪಾವತಿ ಅಥವಾ ನಮ್ಮ ನೆಟ್ವರ್ಕ್ ಗ್ಯಾರೇಜ್ ಗಳಲ್ಲಿ ಕ್ಯಾಶ್ ಲೆಸ್ .
ಬಜಾಜ್ ಆಟೋ ಲಿಮಿಟೆಡ್ ನ ಮೋಲ್ನೋಟ
ಭಾರತದಲ್ಲಿ ಬಜಾಜ್ ಗ್ರೂಪ್ ಮೊದಲ 10 ಸಮೂಹಸಂಸ್ಥೆಗಳಲ್ಲಿ ಒಂದಾಗಿದ್ದು, ಇದರ ವ್ಯಾಪ್ತಿಯು ಹಲವು ಕೈಗಾರಿಕೆಗಳವರೆಗೆ ಹಾಗೂ ವಿಭಾಗಗಳವರೆಗೆ ಇದೆ. ಇದರ ಚೊಚ್ಚಲ ಸ್ಥಾಪನೆಯಾದ ಬಜಾಜ್ ಆಟೋ ಲಿಮಿಟೆಡ್, ಬೈಕ್ ಹಾಗೂ ಸ್ಕೂಟರ್ ಗಳನ್ನೂ ಸೇರಿ, ಟು ವೀಲರ್ ವಾಹನ ತಯಾರಕರ ಮಧ್ಯೆ ಇದರ ಬ್ರ್ಯಾಂಡ್ ನ ಮೌಲ್ಯ ಹಾಗೂ ಪ್ರತಿಷ್ಠೆಯನ್ನು ಹೆಚ್ಚಾಗಿಸಲು ಸಹಾಯ ಮಾಡುವಲ್ಲಿ ಯಶಸ್ವಿಯಾಗಿದೆ.
ಸುಮಾರು ಆರೂವರೆ ದಶಮಾನದಷ್ಟು ಹಿಂದೆ ಸ್ಥಾಪನೆಯಾದ ಬಜಾಜ್ ಆಟೋ ಲಿಮಿಟೆಡ್ ಇಂದು ಜಾಗತಿಕವಾಗಿ ತಯಾರಾಗುತ್ತಿರುವ ಉತ್ತಮ ಟು ವೀಲರ್ ಹಾಗೂ ಮೂರು ಚಕ್ರ ವಾಹನ ತಯಾರಕರಲ್ಲಿ 4ನೇ ಸ್ಥಾನವನ್ನು ಪಡೆದಿದೆ. ಹೆಚ್ಚಿನ ಬೇಡಿಕೆಯಿರುವ ಕೆಲ ಜನಪ್ರಿಯ ಬಜಾಜ್ ಟು ವೀಲರ್ ವಾಹನ ಮಾದರಿಗಳನ್ನು ಇಲ್ಲಿ ನೀಡಲಾಗಿದೆ :
- ಪಲ್ಸಾರ್ 150
- ಡಾಮಿನಾರ್ 400
- ಪಲ್ಸಾರ್ ಎನ್ ಎಸ್ 200
- ಎವೆಂಜರ್ ಕ್ರೂಸ್ 220
- CT 100
- ಪಲ್ಸಾರ್ 220ಎಫ್
- ಪ್ಲಾಟಿನ 110
- ಚೇತಕ್
- ಡಿಸ್ಕವರ್
ಇದರ ಹೆಚ್ಚಿನ ಬೈಕ್ ಮಾದರಿಗಳಿಗೆ ಭಾರೀ ಬೇಡಿಕೆಯಿದ್ದು ಇವುಗಳು ಇಷ್ಟು ವರ್ಷಗಳಲ್ಲಿ ಭಾರತದ ಟು ವೀಲರ್ ವಾಹನ ಮಾರುಕಟ್ಟೆಯ ಹರಿವನ್ನೇ ಬದಲಿಸಿದೆ. ಇದರ ಪರಿಣಾಮವಾಗಿ, ಟು ವೀಲರ್ ವಾಹನ ಸಂರಕ್ಷಣೆಯ ಪ್ರತಿ ಜನರ ಹೆಚ್ಚುತ್ತಿರುವ ಅರಿವಿನಿಂದಾಗಿ ಬಜಾಜ್ ಬೈಕ್ ಇನ್ಶೂರೆನ್ಸ್ ಪಾಲಿಸಿಗಳಿಗೂ ಬೇಡಿಕೆ ಹೆಚ್ಚಿದೆ.
ಬಜಾಜ್ ಟು ವೀಲರ್ ವಾಹನಗಳು ಇಷ್ಟು ಜನಪ್ರಿಯ ಏಕಾಗಿವೆ?
KB100 ನಂತಹ ಆರಂಭಿಕ ಬಜಾಜ್ ಮಾದರಿಯಿಂದ ದುಬಾರಿ ಶ್ರೇಣಿಯ ಎವೆಂಜರ್ ಕ್ರೂಸ್ 220 ವರೆಗೆ, ಬಜಾಜ್ ಆಟೋ ದೇಶ ಹಾಗೂ ವಿದೇಶಗಳಲ್ಲೂ ಬೈಕ್ ಪ್ರಿಯರಿಗೆ ಹರ್ಷ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಬಜಾಜ್ ಆಟೋ ಭಾರತದಲ್ಲಿ ಟು ವೀಲರ್ ವಾಹನಗಳಿಗಾಗಿ ಚಿರಪರಿಚಿತ ಬ್ರ್ಯಾಂಡ್ ಆಗಲು ಕೆಲ ಪ್ರಮುಖ ಕಾರಣಗಳು ಇಲ್ಲಿವೆ-
ಕೈಗೆಟಕುವ ಶ್ರೇಣಿಯ ಟು ವೀಲರ್ ವಾಹನಗಳು - ಎಲ್ಲಾ ಆರ್ಥಿಕ ವರ್ಗದ ಜನರ ಪ್ರಯಾಣದ ಅವಶ್ಯಕತೆಗಳಿಗೆ ಇದು ಯಶಸ್ವಿಯಾಗಿ ಒದಗಿಸಿಕೊಟ್ಟಿದೆ. ಬಜಾಜ್ ಆಟೋ ನ ಟು ವೀಲರ್ ವಾಹನಗಳು ಭಾರತೀಯ ಜನಸಂಖ್ಯೆಯೊಂದಿಗೆ ಇಷ್ಟೊಂದು ಬೆರೆತುಹೋಗಲು ಎಲ್ಲಕ್ಕಿಂತ ದೊಡ್ಡ ಕಾರಣವು ಅವುಗಳ ಕೈಗೆಟಕುವ ದರವಾಗಿದೆ.
ತಂತ್ರಜ್ಞಾನದ ಭೇಟಿ ನಂಬಿಕೆಯೊಂದಿಗೆ -ಬಜಾಜ್ ಆಟೋಗೆ ಅದರ ಬೃಹತ್ ಜನಪ್ರಿಯತೆಯನ್ನು ತಂದುಕೊಡುವಲ್ಲಿ ನವೀಕರಣವು ಒಂದು ಮಹತ್ತರ ಅಂಶವಾಗಿದೆ. ಇಂದು, ಹೆಚ್ಚಿನ ಬಜಾಜ್ ಬೈಕ್ ಮಾಡೆಲ್ ಗಳು, ತಮ್ಮ ವಿಶ್ವದರ್ಜೆಯ ಡಿಟಿಎಸ್ - ಐ( DTS-i) ಎಂಜಿನ್ ತಂತ್ರಜ್ಞಾನದೊಂದಿಗೆ, ಉತ್ತಮ ನಂಬಿಕೆ ಹಾಗೂ ಅದ್ವಿತೀಯ ಶಕ್ತಿಯನ್ನು ದರ್ಶಿಸುತ್ತದೆ. ಇದರ ಜೊತೆ, ಆರಾಮದಾಯಕ ರೈಡ್, ಪವರ್ ಬ್ರೇಕಿಂಗ್ ವ್ಯವಸ್ಥೆ ಹಾಗೂ ಸುಧಾರಿತ ರಾತ್ರಿ ಗೋಚರತೆಯೊಂದಿಗೆ, ಬಜಾಜ್ ಟು ವೀಲರ್ ವಾಹನ ಮಾದರಿಗಳು ಅದ್ಭುತ ವೈಶಿಷ್ಟ್ಯ ಗಳೊಂದಿಗೆ ಗ್ರಾಹಕರ ಅಚ್ಚುಮೆಚ್ಚಿಗೆ ಪಾತ್ರವಾಗಿವೆ.
ಕಳಂಕರಹಿತ ಖ್ಯಾತಿ - ಭಾರತದ ಅಗ್ರಸ್ಥಾನೀಯ ಟು ವೀಲರ್ ವಾಹನ ತಯಾರಕರಲ್ಲಿ ಬಜಾಜ್ 2ನೇ ಸ್ಥಾನವನ್ನು ಪಡೆದಿದೆ. ಇದು ಇದರ ವಿವಿಧ ಶ್ರೇಣಿಯ ಟು ವೀಲರ್ ವಾಹನಗಳ ಮಾದರಿಗಳನ್ನು ಅಂತರರಾಷ್ಟ್ರೀಯವಾಗಿ 70 ಕ್ಕೂ ಹೆಚ್ಚು ದೇಶಗಳಿಗೆ ಸರಬರಾಜು ಮಾಡುತ್ತದೆ.
ಎಲ್ಲರಿಗೂ ಒಂದು ಟು ವೀಲರ್ ವಾಹನ : ಇವುಗಳು ದೈನಂದಿನ ಪ್ರಯಾಣಕ್ಕಾಗಿ ವ್ಯಾಪಕ ಶ್ರೇಣಿಯ ಮಾದರಿಗಳನ್ನು ನೀಡಿ ವಿಶ್ವಾದ್ಯಂತ ಕೋಟಿಗಟ್ಟಲೆ ಜನರೊಡನೆ ಸಂಪರ್ಕ ಹೊಂದುತ್ತವೆ.
ಈ ಕಾರಣಗಳಿಂದಾಗಿ, ಬಜಾಜ್ ಆಟೋ ಭಾರತದಲ್ಲಿ ಮನೆಮಾತಾಗಿದೆ ಹಾಗೂ ಜಾಗತಿಕವಾಗಿಯೂ ಜನಪ್ರಿಯ ಟು ವೀಲರ್ ವಾಹನ ಬ್ರ್ಯಾಂಡ್ ಆಗಿದೆ.
ಆದರೆ ತಡೆಯಿರಿ! ಇದರ ಜನಪ್ರಿಯತೆ ಯೋಗ್ಯವಾಗಿದ್ದರೂ, ಬಜಾಜ್ ಟು ವೀಲರ್ ವಾಹನಗಳು ಹಾನಿ ಅಥವಾ ನಷ್ಟದ ಅಪಾಯಕ್ಕೆ ತುತ್ತಾಗಬಹುದು ಹಾಗೂ ಇದರಿಂದ ನಿಮಗೆ ಭಾರೀ ಆರ್ಥಿಕ ನಷ್ಟ ಉಂಟಾಗಬಹುದು. ಬಜಾಜ್ ಬೈಕ್ ಮಾದರಿಗಳ ಮಾಲೀಕರು ಇಂತಹ ಸಂಭಾವ್ಯ ಅಪಾಯಗಳಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಗಳನ್ನು ಆಯ್ಕೆ ಮಾಡಬಹುದು.
ಹಾಗೂ ಅವರ ಅಮೂಲ್ಯ ಸ್ವತ್ತಿನ ಸಂರಕ್ಷಣೆಯ ನಿರಂತರತೆಯನ್ನು ಉಳಿಸಲು, ಪ್ರಸ್ತುತ ಪಾಲಿಸಿಯ ಅವಧಿ ಕೊನೆಗೊಳ್ಳುವ ಮೊದಲೇ ಸಮಯದಲ್ಲಿ ಬಜಾಜ್ ಬೈಕ್ ಇನ್ಶೂರೆನ್ಸ್ ರಿನ್ಯೂವಲ್ ಅನ್ನು ಮಾಡಿಸಬೇಕು.
ಬಜಾಜ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಲು 4 ಕಾರಣಗಳು
ಟು ವೀಲರ್ ವಾಹನಗಳು ಇತರ ಯಾವುದೇ ವಾಹನಗಳಿಗೆ ಹೋಲಿಸಿದರೆ ರಸ್ತೆ ಅಪಘಾತಕ್ಕೆ ಬಹಳ ಹೆಚ್ಚಾಗಿ ತುತ್ತಾಗುತ್ತಿರುತ್ತವೆ. ಇದರ ಜೊತೆ, ಕಳವಿನಂತಹ ಅಪಾಯಕ್ಕೂ ಅವುಗಳು ತುತ್ತಾಗಬಹುದು. ಇದಕ್ಕಾಗಿಯೇ ಬಜಾಜ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಕೊಳ್ಳುವುದು ಕೆಳಗಡೆ ನೀಡಿರುವ ಈ ಕಾರಣಗಳಿಗಾಗಿ ಮುಖ್ಯವಾಗುತ್ತದೆ.
ಥರ್ಡ್ ಪಾರ್ಟೀ ಇನ್ಶೂರೆನ್ಸ್ ಯೋಜನೆಗಳು ಕಡ್ಡಾಯವಾಗಿದ್ದರೂ ಕಾಂಪ್ರೆಹೆನ್ಸಿವ್ ಯೋಜನೆಗಳು ಸಂಪೂರ್ಣ ಸುರಕ್ಷತೆಯನ್ನು ಒದಗಿಸುತ್ತವೆ ಎಂಬುವುದನ್ನು ಗಮನಿಸಿ. ನೀವು ನಿಮ್ಮ ಬಜಾಜ್ ಟು ವೀಲರ್ ವಾಹನಕ್ಕಾಗಿ ಇನ್ಶೂರೆನ್ಸ್ ಯೋಜನೆಗಳನ್ನು ಏಕೆ ಖರೀದಿಸಬೇಕು ಎಂಬುವುದಕ್ಕೆ ಇಲ್ಲಿ ಕಾರಣಗಳನ್ನು ನೀಡಲಾಗಿದೆ:
ಪಾಲಿಸಿ ಇಲ್ಲದಿದ್ದರೆ ಕಾನೂನಾತ್ಮಕ ಹೊಣೆಗಾರಿಕೆ ಉಂಟಾಗುತ್ತದೆ - ಮೋಟಾರ್ ವಾಹನ ಅಧಿನಿಯಮ 1988 ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ವಾಹನದ ಓಡಾಟದಿಂದ ಉಂಟಾಗಬಹುದಾದ ಥರ್ಡ್ ಪಾರ್ಟೀ ಹೊಣೆಗಾರಿಕೆಗಳಿಂದ ಸುರಕ್ಷಿತವಾಗಿರಲು ಪ್ರತೀ ವಾಹನ ಮಾಲೀಕನು ಥರ್ಡ್ ಪಾರ್ಟೀ ಹೊಣೆಗಾರಿಕೆಯ ಕವರ್ ಹೊಂದುವುದು ಕಡ್ಡಾಯವಾಗಿದೆ.ಆದ್ದರಿಂದ, ನೀವು ಮಾನ್ಯ ಥರ್ಡ್ ಪಾರ್ಟೀ ಹೊಣೆಗಾರಿಕೆ ಮಾತ್ರ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದದಿದ್ದರೆ, ಇದು ಕಾನೂನು ಹೊಣೆಗಾರಿಕೆ ಹಾಗೂ ಟ್ರ್ಯಾಫಿಕ್ ದಂಡಕ್ಕೆ ಕಾರಣವಾಗುತ್ತದೆ. ಈ ದಂಡವು ಮೊದಲ ಬಾರಿಗೆ ರೂ. 2000 ಹಾಗೂ ತಪ್ಪು ಪುನರಾವರ್ತನೆಗೆ ರೂ. 4000 ಆಗಿದೆ.
ವಿವಿಧ ಸಂದರ್ಭಗಳಲ್ಲಿ ನಿಮ್ಮ ವಾಹನಕ್ಕದ ಹಾನಿಯ ವೆಚ್ಚವನ್ನು ಹಿಂಪಡೆಯಿರಿ - ಒಂದು ಬಜಾಜ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯು, ಅಪಘಾತ, ನೈಸರ್ಗಿಕ ವಿಪತ್ತು, ಬೆಂಕಿ ಇತ್ಯಾದಿ ಸಂದರ್ಭಗಳಿಂದ ಉಂಟಾಗುವ ಹಾನಿಗಳ ಅಥವ ನಷ್ಟಗಳ ಸಮಯದಲ್ಲಿ ಮಾಡಬೇಕಾಗುವ ಬಿಡಿಭಾಗಗಳ ಬದಲಾವಣೆ, ವಾಹನದ ರಿಪೇರಿಯಂತಹ ವೆಚ್ಚಗಳಿಗೆ ಕವರೇಜ್ ನೀಡುತ್ತದೆ. ಇದರೊಂದಿಗೆ ನೀವು ಮೇಲೆ ನೀಡಿರುವ ಸಂದರ್ಭಗಳಿಂದ ಉಂಟಾಗುವ ಎಲ್ಲಾ ಆರ್ಥಿಕ ನಷ್ಟಗಳಿಗೂ ಬಜಾಜ್ ಬೈಕ್ ಇನ್ಶೂರೆನ್ಸ್ ಯೋಜನೆ ಅಡಿಯಲ್ಲಿ ಕ್ಲೈಮ್ ಮಾಡಬಹುದು.
ವಯಕ್ತಿಕ ಅಪಘಾತದ ಸಂದರ್ಭದಲ್ಲಿ ಕವರೇಜ್ ಲಾಭಗಳು : ಒಂದು ಬಜಾಜ್ ಬೈಕ್ ಇನ್ಶೂರೆನ್ಸ್ ಯೋಜನೆಯು, ನಿಮ್ಮ ಬೈಕ್ ಅಪಘಾತಕ್ಕೀಡಾಗಿ ನಿಮ್ಮನ್ನು ಅಂಗವಿಕಲನನ್ನಾಗಿಸಿದಂತಹ ಸಂದರ್ಭಗಳಿಗೆ ವಯಕ್ತಿಕ ಅಪಘಾತ ಆಡ್-ಆನ್ ಕವರ್ ನ ಆಯ್ಕೆಯನ್ನೂ ಹೊಂದಿದೆ. ಆದ್ದರಿಂದ ಬೈಕ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸುವಾಗ ನೀವು ಈ ಆಡ್ ಆನ್ ನ ಆಯ್ಕೆಯನ್ನು ಮಾಡಿದರೆ ಇಂತಹ ಹಾನಿಗಳಿಂದ ನೀವು ಆರ್ಥಿಕವಾಗಿ ಸುರಕ್ಷಿತವಾಗಿರುತೀರಿ. ಇನ್ಶೂರೆನ್ಸ್ ನಿಯಮಗಳ ಪ್ರಕಾರ ವ್ಯಕ್ತಿಯು ವಯಕ್ತಿಕ ಅಪಘಾತ ಕವರ್ ಅನ್ನು ಹೊಂದಿರಬೇಕೆಂದು ಗಮನಿಸಿ. ಅಪಘಾತದಿಂದಾಗಿ ಇನ್ಶೂರ್ಡ್ ವ್ಯಕ್ತಿಯ ಸಾವು ಸಂಭವಿಸಿದರೂ ಇಂತಹ ಯೋಜನೆಗಳು, ಅವರ ಕುಟುಂಬದವರಿಗೆ ಪರಿಹಾರವನ್ನು ಒದಗಿಸುತ್ತದೆ. ಆದ್ದರಿಂದ ಇಂತಹ ದುರ್ಘಟನೆಯ ಸಂದರ್ಭಗಳಲ್ಲಿ ಇನ್ಶೂರ್ಡ್ ವ್ಯಕ್ತಿಯು ಅವರ ಕುಟುಂಬದ ಅರ್ಥಿಕ ಸುರಕ್ಷತೆಯನ್ನು ಧೃಢಪಡಿಸಬಹುದು.
ಥರ್ಡ್ ಪಾರ್ಟೀ ಹಾನಿಗಳಿಗಾಗಿ ಕವರೇಜ್ ಲಾಭಗಳು - ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಯೋಜನೆಯ ಆಯ್ಕೆ ಮಾಡಿದ್ದರೆ ಮೇಲೆ ನೀಡಲಾದ ಲಾಭಗಳ ಜೊತೆ ಅವನ/ಅವಳ ವಾಹನದಿಂದ ಥರ್ಡ್ ಪರ್ಟೀಗಾದ ಹಾನಿಗಳನ್ನೂ ಕವರ್ ಮಾಡುತ್ತದೆ. ಪರ್ಯಾಯವಾಗಿ, ನೀವು ಪ್ರತ್ಯೇಕ ಥರ್ಡ್ ಪಾರ್ಟೀ ಹೊಣೆಗಾರಿಕೆಯ ಕವರ್ ಅನ್ನು ನಿಮ್ಮ ಬಜಾಜ್ ಟು ವೀಲರ್ ವಾಹನಕ್ಕಾಗಿ ಪಡೆದು ಅದರ ಲಾಭಗಳನ್ನು ಆನಂದಿಸಬಹುದು. ಒಂದು ಥರ್ಡ್ ಪಾರ್ಟೀ ಕವರೇಜ್, ಇನ್ಶೂರ್ಡ್ ವಾಹನದಿಂದ ಥರ್ಡ್ ಪಾರ್ಟೀಗೆ ಆದ ಹಾನಿಗಳಿಂದ ಉಂಟಾಗಬಹುದಾದ ಆರ್ಥಿಕ ಹೊಣೆಗಾರಿಕೆಗಳಿಂದ ಇನ್ಶೂರ್ಡ್ ವ್ಯಕ್ತಿಯನ್ನು ಸಂರಕ್ಷಿಸುತ್ತದೆ. ಈ ಕವರೇಜ್ ನಿಮ್ಮನ್ನು ಥರ್ಡ್ ಪಾರ್ಟೀಯಲ್ಲಿ ಸಂಭವಿಸಿದ ಸಾವಿನಿಂದ ಉಂಟಾಗಬಲ್ಲ ಆರ್ಥಿಕ ಹಾನಿಗಳಿಂದಲೂ ಸಂರಕ್ಷಿಸುತ್ತದೆ.
ಈಗ ಇನ್ಶೂರೆನ್ಸ್ ಪಾಲಿಸಿಯ ಕವರೇಜ್ ಅನ್ನು ನೋಡುವುದು ಮುಖ್ಯವಾಗಿದ್ದರೂ, ನಿಮ್ಮ ಬೈಕ್ ಇನ್ಶೂರೆನ್ಸ್ ಪಾಲಿಸಿಗೆ ಸಂಬಂಧಿಸಿದಂತೆ ಉತ್ತಮ ವೈಶಿಷ್ಟ್ಯಗಳನ್ನು ಹಾಗೂ ಲಾಭಗಳನ್ನು ಆನಂದಿಸಲು ಒಂದು ಸ್ಪರ್ಧಾತ್ಮಕ ಇನ್ಶೂರೆನ್ಸ್ ಪ್ರೊವೈಡರ್ ಅನ್ನು ಆಯ್ಕೆ ಮಾಡುವುದೂ ಅಷ್ಟೇ ಮುಖ್ಯವಾಗಿದೆ. ಬಜಾಜ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ರಿನ್ಯೂವಲ್ ವಿಷಯದಲ್ಲೂ ಅಷ್ಟೇ
ಸರಿ, ಡಿಜಿಟ್ ಇನ್ಶೂರೆನ್ಸ್ ಅನ್ನು ನೋಡಿದರೆ ಹೇಗೆ? ನೋಡಿ!
ನಿಮ್ಮ ಬಜಾಜ್ ಬೈಕ್ ಇನ್ಶೂರೆನ್ಸ್ ಪಾಲಿಸಿಗಾಗಿ ಡಿಜಿಟ್ ಅನ್ನು ಆಯ್ಕೆ ಮಾಡಲು ಕಾರಣಗಳು
ಬಜಾಜ್ ಇನ್ಶೂರೆನ್ಸ್ ಪಾಲಿಸಿಗಳು ನೀಡುವ ಕೆಲವು ಪ್ರಯೋಜನಗಳು ಅದನ್ನು ಮಾರುಕಟ್ಟೆಯ ಶ್ರೇಷ್ಟ ಪಾಲಿಸಿ ಗಳಲ್ಲಿ ಒಂದಾಗಿಸಿದೆ. ಬಜಾಜ್ ಟು ವೀಲರ್ ವಾಹನಗಳಿಗಾಗಿ ಡಿಜಿಟ್ ವಿಸ್ತರಿಸುವ ಕೆಲ ಲಾಭಗಳ ಬಗ್ಗೆ ತಿಳಿಯೋಣ :
ನಿಮ್ಮ ಬಜಾಜ್ ಬೈಕಿಗಾಗಿ ಸೂಕ್ತ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ದುಕೊಳ್ಳುವ ಮಾಡುವ ಆಯ್ಕೆ - ಡಿಜಿಟ್ ನೊಂದಿಗೆ ನಿಮ್ಮ ಬಜಾಜ್ ಬೈಕಿಗಾಗಿ ಕಸ್ಟಮೈಜ್ ಮಾಡಲಾದ ಸೂಕ್ತ ಇನ್ಶೂರೆನ್ಸ್ ಕವರ್ ಅನ್ನು ನೀವು ಆಯ್ಕೆ ಮಾಡಬಹುದು. ನೀವು ಆಯ್ಕೆ ಮಾಡಬಹುದಾದ ಕೆಲ ಇನ್ಶೂರೆನ್ಸ್ ಯೋಜನೆಗಳನ್ನು ನೋಡಿ:
ಥರ್ಡ್ ಪಾರ್ಟೀ ಹೊಣೆಗಾರಿಕೆಯ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಕವರ್ - ಥರ್ಡ್ ಪಾರ್ಟೀ ಹೊಣೆಗಾರಿಕೆಯ ಕವರೇಜ್ ಅಡಿಯಲ್ಲಿ, ಇನ್ಶೂರ್ಡ್ ಬೈಕಿನಿಂದ ಥರ್ಡ್ ಪಾರ್ಟೀ ವಾಹನ ಅಥವಾ ಸ್ವತ್ತಿಗಾದ ಹಾನಿ ಹಾಗೂ ಥರ್ಡ್ ಪಾರ್ಟೀ ವ್ಯಕ್ತಿಯ ಹಾನಿ ಅಥವಾ ಸಾವಿನ ಸಂದರ್ಭದಲ್ಲಿ ನಿಮಗೆ ಸಂರಕ್ಷಣೆ ದೊರೆಯುತ್ತದೆ.
ಹೆಸರೇ ಸೂಚಿಸುವ ಹಾಗೆ, ಒಂದು ಕಾಂಪ್ರೆಹೆನ್ಸಿವ್ ಬಜಾಜ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯು ಸಂಪೂರ್ಣ ಕವರೇಜ್ ಅನ್ನು ಒದಗಿಸುತ್ತದೆ. ಇದು ಬೆಂಕಿ, ಕಳವು ನೈಸರ್ಗಿಕ ವಿಪತ್ತುಗಳಿಂದ ಉಂಟಾಗಬಲ್ಲ ಸ್ವಂತ ಹಾನಿಗಳಿಗೂ ಕವರ್ ನೀಡುವುದಲ್ಲದೆ ಥರ್ಡ್ ಪಾರ್ಟೀ ಹಾನಿಯಿಂದ ಉಂತಾಗಬಲ್ಲ ಹೊಣೆಗಾರಿಕೆಗಾಳಿಗೂ ಕವರ್ ನೀಡುತ್ತದೆ.
. ಸೆಪ್ಟೆಂಬರ್ 2018 ನಂತರ ತಮ್ಮ ಬಜಾಜ್ ಬೈಕ್ ಅನ್ನು ಖರೀದಿಸಿರುವ ಟು ವೀಲರ್ ವಾಹನ ಮಾಲೀಕರಿಗೆ ಸ್ವಂತ ಹಾನಿ ಬೈಕ್ ಇನ್ಶೂರೆನ್ಸ್ ಕವರ್ ಅನ್ನೂ ಪಡೆದುಕೊಳ್ಳಬಹುದು. ಈ ಪಾಲಿಸಿಯು ಥರ್ಡ್ ಪಾರ್ಟೀ ಹೊಣೆಗಾರಿಕೆಯ ಕವರೇಜ್ ಅನ್ನು ನೀಡದೆ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ನ ಲಾಭಗಳನ್ನು ಒದಗಿಸುತ್ತದೆ.
ಬಜಾಜ್ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಸರಳ ಖರೀದಿ ಹಾಗೂ ರಿನೀವಲ್ - ಡಿಜಿಟ್, ಕೆಲ ಸರಳ ಹೆಜ್ಜೆಗಳಲ್ಲೇ ಬಜಾಜ್ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಆನ್ಲೈನ್ ಖರೀದಿಯನ್ನು ಸುಲಭವಾಗಿಸಿ ಪ್ರಕ್ರಿಯೆಯನ್ನು ಗೊಂದಲರಹಿತ ಹಾಗೂ ಅನುಕೂಲಕರವಾಗಿಸುತ್ತದೆ. ಕನಿಷ್ಟ ದಾಖಲೆ ಸಲ್ಲಿಕೆ ಹಾಗೂ ಡಿಜಿಟಲ್ ಅರ್ಜಿ ಪ್ರಕ್ರಿಯೆಯು ಶೀಘ್ರ ಇನ್ಶೂರೆನ್ಸ್ ಖರೀದಿಗೆ ಕಾರಣವಾಗುತ್ತದೆ. ಅಂತೆಯೇ, ನೀವು ಡಿಜಿಟ್ ನ ಬಜಾಜ್ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಗೊಂದಲರಹಿತವಾಗಿ ಆನ್ಲೈನ್ ರಿನ್ಯೂ ಮಾಡಬಹುದು.
(4400+ ನೆಟ್ವರ್ಕ್ ಗ್ಯಾರೇಜ್ ಗಳು ನಗದುರಹಿತ ರಿಪೇರಿಗಳಿಗಾಗಿ - ಡಿಜಿಟ್ ನ ಬಜಾಜ್ ಬೈಕ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ 4400 ಕ್ಕಿಂತಲೂ ಹೆಚ್ಚು ನೆಟ್ವರ್ಕ್ ಗ್ಯಾರೇಜ್ ಗಳು ಲಭ್ಯವಿರುವ ಕಾರಣ ನೀವು ಹಾನಿಯ ಸಂದರ್ಭದಲ್ಲಿ ಸುಲಭವಾಗಿ ನಿಮ್ಮ ಬೈಕಿನ ಕ್ಯಾಶ್ ಲೆಸ್ ರಿಪೇರಿಗಳನ್ನು ಮಾಡಿಸಬಹುದು. ರಿಪೇರಿಗಳು ಸಂಪೂರ್ಣವಾಗಿ ನಗದುರಹಿತವಾಗಿರುವ ಕಾರಣ ನೀವು ನಿಮ್ಮ ಬಜಾಜ್ ಟು ವೀಲರ್ ವಾಹನಕ್ಕಾಗಿ ಡಿಜಿಟ್ ನ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ತುರ್ತು ಸಂದರ್ಭಗಳಲ್ಲಿ ನಗದನ್ನು ಇಟ್ಟುಕೊಳ್ಳುವ ಬಗ್ಗೆ ಚಿಂತಿಸಬೇಕಾಗಿರುವುದಿಲ್ಲ.
ಸರಳೀಕೃತ ಕಾಗದರಹಿತ ಕ್ಲೈಮ್ ಇತ್ಯರ್ಥ ಪ್ರಕ್ರಿಯೆ ಮೂರು ಹೆಜ್ಜೆಗಳಲ್ಲಿ- ಒಮ್ಮೆ ನೀವು ಬಜಾಜ್ ಟು ವೀಲರ್ ವಾಹನಕ್ಕಾಗಿ ಡಿಜಿಟ್ ನ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದ್ದರೆ ಅಥವಾ ರಿನ್ಯೂವಲ್ ಆಯ್ಕೆ ಮಾಡಿದ್ದರೆ, ನೀವು ಮೂರು ಸರಳ ಹೆಜ್ಜೆಗಳಲ್ಲಿ ಕ್ಲೈಮ್ ಮಾಡಬಹುದು. ಡಿಜಿಟ್ ನಲ್ಲಿ ಕ್ಲೈಮ್ ಇತ್ಯರ್ಥಕ್ಕಾಗಿ ತಗಲುವ ಸರಾಸರಿ ಸಮಯವು ಹಲವು ಇನ್ಶೂರೆನ್ಸ್ ಪ್ರೊವೈಡರ್ ಗಳಿಗಿಂತ ಕಡಿಮೆ ಇದೆ ಅಂದರೆ ಅತೀ ಶೀಘ್ರ ಕ್ಲೈಮ್ ಇತ್ಯರ್ಥ. ಇದರ ಸ್ಮಾರ್ಟ್ಫೋನ್ ಅಳವಡಿಕೆ ಇರುವ ಸ್ವ ಪರಿಶೀಲನಾ ಪ್ರಕ್ರಿಯೆಯು ಶೀಘ್ರ ಕಾಗದರಹಿತ ಕ್ಲೈಮ್ ಗಳಿಗೆ ಕಾರಣವಾಗಿದೆ. ಇದರ ಹೆಚ್ಚಿನ ಕ್ಲೈಮ್ ಸೆಟ್ಲ್ಮೆಂಟ್ ರೇಷಿಯೋ ಇಂದಾಗಿ ನಿಮ್ಮ ಕ್ಲೈಮ್ ಅಸ್ವೀಕಾರವಾಗುವ ಸಂಭಾವನೆಯು ಕಡಿಮೆಯಿರುತ್ತದೆ.
ಉನ್ನತ ಸಂರಕ್ಷಣೆಗಾಗಿ ಬಹು ಆಡ್- ಅನ್ ಕವರ್ ಗಳು - ಡಿಜಿಟ್ ನ ಬಜಾಜ್ ಬೈಕ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಲಭ್ಯವಿರುವ ಆಡ್-ಆನ್ ಕವರ್ ಗಳನ್ನು ಖರೀದಿಸುವುದರಿಂದ ನೀವು ನಿಮ್ಮ ವಾಹನದ ಉನ್ನತ ಸಂರಕ್ಷಣೆಯನ್ನು ಆನಂದಿಸಬಹುದು. ನಿಮ್ಮ ಬಜಾಜ್ ಬೈಕಿನ ಕವರೇಜ್ ಅನ್ನು ಗರಿಷ್ಠ ಗೊಳಿಸಿ ಡಿಜಿಟ್ ನೀಡುತ್ತಿರುವ ಈ ಆಡ್-ಆನ್ ಕವರ್ ಗಳ ಜೊತೆ
- 1)ಬ್ರೇಕ್ಡೌನ್ ಗಾಗಿ ನೆರವು
- 2)ಶೂನ್ಯ ಡಿಪ್ರಿಸಿಯೇಷನ್ ಕವರ್
- 3) ರಿಟರ್ನ್ ಟು ಇನ್ವಾಯ್ಸ್ ಕವರ್
- 4)ಎಂಜಿನ್ ಹಾಗೂ ಗೇರ್ ಸಂರಕ್ಷಣಾ ಕವರ್
- 5)ಬಳಕೆಯ ವಸ್ತುಗಳ ಕವರ್
24x7 ಗ್ರಾಹಕ ಬೆಂಬಲ ಸೇವೆ - ಡಿಜಿಟ್ ನ 24x7 ಗ್ರಾಹಕ ಸೇವೆಯು ನಿಮ್ಮ ಬಜಾಜ್ ಬೈಕಿಗಾಗಿ ಇದನ್ನು ನೆಚ್ಚಿನ ಇನ್ಶೂರೆನ್ಸ್ ಪ್ರೊವೈಡರ್ ಆಗಿಸುತ್ತದೆ. ನೀವು ಬೇಕಾದ ಸಮಯದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಪ್ರಶ್ನೆಗಳನ್ನು ಕೇಳಬಹುದು, ರಾಷ್ಟ್ರೀಯ ರಜಾದಿನಗಳಲ್ಲೂ ಕೂಡಾ!
ಸರಿ, ಈಗ ಡಿಜಿಟ್ ಗರಿಷ್ಠ ಲಾಭಗಳಿಗಾಗಿ ನಿಮಗೆ ವಿವಿಧ ಕವರೇಜ್ ಆಯ್ಕೆ ಗಳನ್ನು ನೀಡಿದರು, ನೀವು ನಿಮ್ಮ ಪ್ರೀಮಿಯಂ ಗಳನ್ನು ಕಡಿಮೆ ಮಾಡಿ ಪಾಲಿಸಿ ಖರೀದಿಯಲ್ಲಿ ಉಳಿತಾಯವನ್ನು ಆನಂದಿಸಬಹುದು.
ಆದ್ದರಿಂದ, ನಿಮ್ಮ ಬಜಾಜ್ ಟು ವೀಲರ್ ವಾಹನದ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವನ್ನು ಕಡಿಮೆಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ನೋಡಿ.
ನಿಮ್ಮ ಬಜಾಜ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡುವುದು ಹೇಗೆ?
ನಿಮ್ಮ ಬಜಾಜ್ ಟು ವೀಲರ್ ವಾಹನದ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವನ್ನು ಕಡಿಮೆಗೊಳಿಸಲು ಈ ಹೆಜ್ಜೆಗಳನ್ನು ಅನುಸರಿಸಿ:
ಕೇವಲ ಅಗತ್ಯ ಆಡ್-ಆನ್ ಗಳನ್ನು ಖರೀದಿಸಿ - ಅವರು ಒದಗಿಸುವ ಕವರೇಜ್ ಲಾಭಗಳನ್ನು ತಿಳಿದ ಮೇಲೆ ಎಚ್ಚರಿಕೆಯಿಂದ ಆಡ್- ಆನ್ ಗಳನ್ನು ಆಯ್ಕೆ ಮಾಡಿ. ಕಾರಣ, ನೀವು ಆಯ್ಕೆ ಮಾಡುವ ಪ್ರತಿ ಆಡ್- ಆನ್ ನಿಂದಲೂ ನೀವು ಹೆಚ್ಚಿನ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಆಡ್- ಆನ್ ಗಳನ್ನು ಆಯ್ಕೆ ಮಾಡುವುದರಿಂದ ನಿಮ್ಮ ಪ್ರೀಮಿಯಂ ಮೊತ್ತ ಮಿತಿಯಲ್ಲಿರುವುದಲ್ಲದೆ ನಿಮಗೆ ನಿಮ್ಮ ಲಾಭಗಳನ್ನೂ ಹೆಚ್ಚಿಸಬಹುದು.
ವಾಲಂಟರಿ ಡಿಡಕ್ಟಿಬಲ್ ಗಳನ್ನು ಆಯ್ಕೆ ಮಾಡಿ - ವಾಲಂಟರಿ ಡಿಡಕ್ಟಿಬಲ್ ಪಾವತಿಯ ಆಯ್ಕೆ ಮಾಡುವುದರಿಂದ, ನೀವು ರಿಪೇರಿ ಅಥವಾ ಬದಲಾವಣೆ ಶುಲ್ಕದ ಭಾಗಶಃ ಮೊತ್ತವನ್ನು ಪಾವತಿಸಬಹುದು. ಇಂತಹ ಡಿಡಕ್ಟಿಬಲ್ ಗಳ ಆಯ್ಕೆ ಮಾಡುವುದರಿಂದ ನೀವು ಕಡಿಮೆ ಪ್ರೀಮಿಯಂ ಅನ್ನು ಪಾವತಿಸಬಹುದು.
ನಿಮ್ಮ ಪಾಲಿಸಿಯನ್ನು ನೇರವಾಗಿ ಇನ್ಶೂರೆನ್ಸ್ ಕಂಪನಿಯಿಂದ ಖರೀದಿಸಿ - ನೀವು ನಿಮ್ಮ ಪಾಲಿಸಿಯನ್ನು ನೇರವಾಗಿ ಇನ್ಶೂರೆನ್ಸ್ ಕಂಪನಿಯಿಂದ ಖರೀದಿಸಿದಾಗ, ನೀವು ಥರ್ಡ್ ಪಾರ್ಟೀ ಕೇಳುವ ಹಚ್ಚುವರಿ ಶುಲ್ಕಗಳನ್ನು ತಪ್ಪಿಸಬಹುದು.
ಈ ಉಪಯುಕ್ತ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದರಿಂದ ನಿಮ್ಮ ಸೂಕ್ತ ಇನ್ಶೂರೆನ್ಸ್ ಪಾಲಿಸಿ ಖರೀದಿಯಲ್ಲಿ ನೀವು ಉಳಿತಾಯವನ್ನು ಮಾಡಬಹುದು.
ಈ ಮಾಹಿತಿಯೊಂದಿಗೆ, ಇಂದೇ ನಿಮ್ಮ ಬಜಾಜ್ ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಆಗಿ ಖರೀದಿಸಿ ಸಂಭಾವ್ಯ ಆರ್ಥಿಕ ನಷ್ಟಗಳ ಅಪಾಯದಿಂದ ಸುರಕ್ಷಿತರಾಗಿರಿ. ಹಾಗೂ, ಗರಿಷ್ಠ ಲಾಭಗಳನ್ನು ಆನಂದಿಸಲು, ನಿಮ್ಮ ಪಾಲಿಸಿಯ ಅವಧಿ ಕೊನೆಗೊಳ್ಳುವ ಮುನ್ನ ಅದನ್ನು ರಿನ್ಯೂ ಮಾಡಿ.