Third-party premium has changed from 1st June. Renew now
ಕಮರ್ಷಿಯಲ್ ವೆಹಿಕಲ್ ಗಳಲ್ಲಿ ಕೀ ಮತ್ತು ಲಾಕ್ ರಿಪ್ಲೇಸ್‌ಮೆಂಟ್ ಆ್ಯಡ್-ಆನ್ ಕವರ್
ಕೀ ಮತ್ತು ಲಾಕ್ ರಿಪ್ಲೇಸ್‌ಮೆಂಟ್ ಒಂದು ಆ್ಯಡ್-ಆನ್ ಆಗಿದ್ದು, ಇನ್ಶೂರೆನ್ಸ್ ಕಂಪನಿಗಳು ಇದನ್ನು ಒದಗಿಸುತ್ತವೆ. ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನಲ್ಲಿ ಈ ಕವರ್ ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಗಳಿಗೆ ಮಾತ್ರ ಲಭ್ಯವಿದೆ ಮತ್ತು ಇನ್ಶೂರ್ಡ್ ವೆಹಿಕಲ್ ಗಳ ಕೀ ಅಥವಾ ಲಾಕ್ ಸೆಟ್ ಡ್ಯಾಮೇಜ್ ಆಗಿದ್ದರೆ ಅದರ ನಷ್ಟ ಭರಿಸುವ ಭರವಸೆಯನ್ನು ಒದಗಿಸುತ್ತದೆ. ಪ್ರೀಮಿಯಂ ಆಗಿ ಅತ್ಯಲ್ಪ ಶುಲ್ಕ ಪಾವತಿಸುವ ಮೂಲಕ ಈ ಆ್ಯಡ್-ಆನ್ ಪಡೆದುಕೊಳ್ಳಬಹುದು.
ಸೂಚನೆ: ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐರ್‌ಡಿಎಐ)ದಲ್ಲಿ ಯುಐಎನ್ ನಂಬರ್ IRDAN158RP0002V01201819/A0049V01201920 ನಲ್ಲಿ ಡಿಜಿಟ್ ಕಮರ್ಷಿಯಲ್ ವೆಹಿಕಲ್ ಪ್ಯಾಕೇಜ್ ಪಾಲಿಸಿ (ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್) - ಕೀ ಮತ್ತು ಲಾಕ್ ರಿಪ್ಲೇಸ್‌ಮೆಂಟ್ ಎಂಬ ಹೆಸರಿನಲ್ಲಿ ಕಮರ್ಷಿಯಲ್ ವೆಹಿಕಲ್ ಗಳಲ್ಲಿ ಕೀ ಮತ್ತು ಲಾಕ್ ರಿಪ್ಲೇಸ್‌ಮೆಂಟ್ ಆ್ಯಡ್-ಆನ್ ಕವರ್ ಫೈಲ್ ಆಗಿದೆ.
ಕಮರ್ಷಿಯಲ್ ವೆಹಿಕಲ್ ಗಳಲ್ಲಿ ಕೀ ಮತ್ತು ಲಾಕ್ ರಿಪ್ಲೇಸ್‌ಮೆಂಟ್ ಆ್ಯಡ್-ಆನ್ ಕವರ್ ನಲ್ಲಿ ಏನೆಲ್ಲಾ ಕವರ್ ಆಗುತ್ತವೆ
ಕಮರ್ಷಿಯಲ್ ವೆಹಿಕಲ್ ಗಳಲ್ಲಿ ಕೀ ಮತ್ತು ಲಾಕ್ ರಿಪ್ಲೇಸ್‌ಮೆಂಟ್ ಆ್ಯಡ್-ಆನ್ ಕವರ್ ಈ ಕೆಳಗಿನ ಕವರೇಜ್ ಗಳನ್ನು ಒದಗಿಸುತ್ತದೆ:
ಪಾಲಿಸಿ ಅವಧಿಯಲ್ಲಿ ಕಳ್ಳತನ, ಕನ್ನ ಹಾಕುವಿಕೆ, ಆಕಸ್ಮಿಕ ನಷ್ಟ ಮತ್ತು ಡ್ಯಾಮೇಜ್ ಮುಂತಾದ ಸಂದರ್ಭಗಳಲ್ಲಿ ಇನ್ಶೂರ್ಡ್ ವೆಹಿಕಲ್ ನ ಕೀ ರಿಪ್ಲೇಸ್‌ಮೆಂಟ್ ಮಾಡಲು ತಗುಲುವ ವೆಚ್ಚ.
ಕೀಗಳು ಕಳೆದು ಹೋದ ಕಾರಣದಿಂದ ಉಂಟಾಗುವ ಭದ್ರತಾ ಅಪಾಯವನ್ನು ನೀಗಿಸಲು ಇನ್ಶೂರ್ಡ್ ವೆಹಿಕಲ್ ಗೆ ಹೊಸ ಲಾಕ್‌ಸೆಟ್ ಇನ್‌ಸ್ಟಾಲ್ ಮಾಡಲು ತಗುಲುವ ವೆಚ್ಚ.
ಇನ್ಶೂರ್ಡ್ ವೆಹಿಕಲ್ ಮುರಿದು ಹೋಗಿದ್ದರೆ ಕೀಗಳು ಅಥವಾ ಲಾಕ್‌ಸೆಟ್ ರಿಪೇರಿ ಮಾಡಲು ಅಥವಾ ರಿಪ್ಲೇಸ್ ಮಾಡಲು ತಗುಲುವ ವೆಚ್ಚ.
ಇನ್ಶೂರ್ಡ್ ವೆಹಿಕಲ್ ನ ಕೀ ಮತ್ತು ಲಾಕ್ ರಿಪೇರಿ ಮಾಡಲು/ ರಿಪ್ಲೇಸ್ ಮಾಡಲು ಅಥವಾ ಹೊಸ ಲಾಕ್‌ಸೆಟ್ ಇನ್‌ಸ್ಟಾಲ್ ಮಾಡಲು ಬೀಗ ರಿಪೇರಿಯವರಿಗೆ ನೀಡಬೇಕಾದ ವೆಚ್ಚ.
ಏನೆಲ್ಲಾ ಕವರ್ ಆಗುವುದಿಲ್ಲ
ಪ್ಯಾಸೆಂಜರ್ ಕ್ಯಾರಿಯಿಂಗ್ ಕಮರ್ಷಿಯಲ್ ವೆಹಿಕಲ್ ಗಳಿಗೆ ಆ್ಯಡ್-ಆನ್ ಕವರ್ ಈ ಕೆಳಗಿನ ಹೊರಗಿಡುವಿಕೆಗಳನ್ನು ಹೊಂದಿದೆ. ಪ್ರಧಾನ ಇನ್ಶೂರೆನ್ಸ್ ಪಾಲಿಸಿಯಲ್ಲಿ ಪಟ್ಟಿ ಮಾಡಲಾಗಿರುವ ಸಾಮಾನ್ಯ ಹೊರಗಿಡುವಿಕೆಗಳಿಗೆ ಇವು ಹೆಚ್ಚುವರಿ ಸೇರ್ಪಡೆಯಾಗಿದೆ:
ಡಿಜಿಟ್‌ನ ಅಧಿಕೃತ ರಿಪೇರಿ ಶಾಪ್‌ಗಳಲ್ಲಿ ಅಥವಾ ತಯಾರಿಕ ಕಂಪನಿಗಳ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ರಿಪೇರಿ ಮಾಡದೇ ಇದ್ದಾಗ ಸಲ್ಲಿಸುವ ಕ್ಲೈಮ್.
ಪಾಲಿಸಿ ಶೆಡ್ಯೂಲ್ ನಲ್ಲಿ ನಮೂದಿಸಿರುವಂತೆ ನೀವು ಸಹ ಪಾವತಿ ಆಯ್ಕೆ ಆರಿಸಿಕೊಂಡಿದ್ದರೆ ಇನ್ಶೂರರ್ ಯಾವುದೇ ಕ್ಲೈಮ್ ಪಾವತಿಸುವ ಹೊಣೆಗಾರಿಕೆ ಹೊಂದಿರುವುದಿಲ್ಲ.
ಇನ್ಶೂರ್ಡ್ ವೆಹಿಕಲ್ ಗಾಗಿ ಹೆಚ್ಚುವರಿ/ ಡೂಪ್ಲಿಕೇಟ್ ಕೀ ಪಡೆಯಲು ಫೈಲ್ ಮಾಡಿದ ಕ್ಲೈಮ್.
ಕೇವಲ ಸೂಕ್ಷ್ಮಭಾಗಗಳನ್ನು ಮಾತ್ರ ರಿಪ್ಲೇಸ್ ಮಾಡಬಹುದಾಗಿರುವ ಸಂದರ್ಭದಲ್ಲಿ ವೆಹಿಕಲ್ ನ ಕೀ/ ಲಾಕ್ ಸೆಟ್ ರಿಪ್ಲೇಸ್ ಮಾಡಲು ಸಲ್ಲಿಸಿದ ಕ್ಲೈಮ್.
ಇನ್ಶೂರ್ಡ್ ವೆಹಿಕಲ್ ನಲ್ಲಿರುವ ಯಾವುದಾದರೂ ಹಳೆಯ ಡ್ಯಾಮೇಜ್ ಗಳಿಗಾಗಿ ಮಾಡಿದ ಕ್ಲೈಮ್.
ತಯಾರಕರ ವಾರಂಟಿಯಲ್ಲಿ ಕವರ್ ಆಗಬಹುದಾಗಿದ್ದ ನಷ್ಟ/ಡ್ಯಾಮೇಜ್ ಕವರ್ ಆಗಿಲ್ಲದಿದ್ದಾಗ ಮಾಡಿದ ಕ್ಲೈಮ್.
ಒಂದು ವೇಳೆ ರಿಪ್ಲೇಸ್ ಮಾಡಿದ ಕೀಗಳು/ಲಾಕ್‌ಸೆಟ್ ಇನ್ಶೂರ್ಡ್ ವೆಹಿಕಲ್ ನ ಒರಿಜಿನಲ್ ಕೀಗಳು/ ಲಾಕ್‌ಸೆಟ್ ಗೆ ಹೋಲಿಸಿದಾಗ ಉನ್ನತ ಗುಣಮಟ್ಟ ಅಥವಾ ಉನ್ನತ ಸ್ಪೆಸಿಫಿಕೇಷನ್ ಹೊಂದಿದ್ದರೆ ಅಂತಹ ಕ್ಲೈಮ್ ಗಳನ್ನು ಪರಿಗಣಿಸಲಾಗುವುದಿಲ್ಲ.
ವೆಹಿಕಲ್‌ನ ಕೀ/ಲಾಕ್ ಸೆಟ್ ಕಾಲಕ್ರಮೇಣ ಬಳಸುತ್ತಾ ಹಾಳಾದಾಗ, ಮೆಕ್ಯಾನಿಕಲ್/ ಎಲೆಕ್ಟ್ರಿಕಲ್ ಬ್ರೇಕ್‌ಡೌನ್ ಆದಾಗ, ರಿಪೇರಿ ಮಾಡುವಾಗ, ರಿಸ್ಟೋರ್ ಮಾಡುವಾಗ, ಸ್ವಚ್ಛ ಮಾಡುವ ಸಂದರ್ಭದಲ್ಲಿ ಹಾನಿಯಾದಾಗ ಅಥವಾ ಕಾಲ ಕಳೆದಂತೆ ತನ್ನಷ್ಟಕ್ಕೆ ಏನಾದರೂ ಸಂಭವಿಸಿದಾಗ ಮಾಡುವ ಕ್ಲೈಮ್.
ಘಟನೆ ಜರುಗಿದ ಎರಡು (2) ದಿನಗಳ ಬಳಿಕ ಕ್ಲೈಮ್ ವರದಿ ಮಾಡಿದರೆ/ ಸೂಚನೆ ನೀಡಿದರೆ ತಡವಾಗಿ ಕ್ಲೈಮ್ ಪ್ರಕಟಣೆ ನೀಡಿದ್ದಕ್ಕೆ ಲಿಖಿತ ರೂಪದ ವಿವರಣೆಯನ್ನು ನೀಡಿದರೆ ಅದರ ಅರ್ಹತೆಯ ಆಧಾರ ಮೇಲೆ ನಾವು ನಮ್ಮ ವಿವೇಚನೆ ಬಳಸಿ ತಡವಾಗಿದ್ದನ್ನು ಪರಿಗಣಿಸದೆ ಇರಬಹುದು.
ಉದ್ದೇಶಪೂರ್ವಕವಾಗಿ ಇನ್ಶೂರ್ಡ್ ವೆಹಿಕಲ್ ಗಳ ಕೀ/ ಲಾಕ್ ಸೆಟ್ ಡ್ಯಾಮೇಜ್ ಆಗಿದ್ದಾಗ ಮಾಡಿದ ಕ್ಲೈಮ್.
ವೆಹಿಕಲ್ ಗಳ ಕೀ ಅಥವಾ ಲಾಕ್‌ಸೆಟ್ ರಿಪೇರಿ ಅಥವಾ ರಿಪ್ಲೇಸ್ ಮೆಂಟ್ ಮಾಡಿದ ಸಂದರ್ಭದಲ್ಲಿ ನೀವು ಪಾವತಿಸಿದ ಮೊತ್ತದ ರಶೀದಿ ಅಥವಾ ಇನ್ ವಾಯ್ಸ್ ಒದಗಿಸಲು ಅಸಮರ್ಥರಾದರೆ ಇನ್ಶೂರರ್ ಮೊತ್ತ ಪಾವತಿಸಲು ಹೊಣೆಗಾರರಾಗಿರುವುದಿಲ್ಲ.
ಡಿಸ್‌ಕ್ಲೈಮರ್ - ಇಂಟರ್‌ನೆಟ್‌ನ ಮೂಲಗಳಿಂದ ಸಂಗ್ರಹಿಸಿ ರಚಿಸಿದ ಈ ಬರಹವನ್ನು ಮಾಹಿತಿ ಒದಗಿಸುವ ಉದ್ದೇಶದಿಂದ ಮತ್ತು ಡಿಜಿಟ್ ಪಾಲಿಸಿ ವರ್ಡಿಂಗ್ಸ್ ಡಾಕ್ಯುಮೆಂಟ್‌ಗೆ ಸಂಬಂಧಿಸಿದಂತೆ ರೂಪಿಸಲಾಗಿದೆ. ಡಿಜಿಟ್ ಕಮರ್ಷಿಯಲ್ ವೆಹಿಕಲ್ ಪ್ಯಾಕೇಜ್ ಪಾಲಿಸಿ (ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್) - ಕೀ ಮತ್ತು ಲಾಕ್ ರಿಪ್ಲೇಸ್‌ಮೆಂಟ್ (ಯುಐಎನ್: IRDAN158RP0002V01201819/A0049V01201920) ಕುರಿತ ವಿವರವಾದ ಕವರೇಜ್, ಹೊರಗಿಡುವಿಕೆ ಮತ್ತು ಷರತ್ತುಗಳನ್ನು ತಿಳಿಯಲು, ಪಾಲಿಸಿ ಡಾಕ್ಯುಮೆಂಟ್‌ಗಳನ್ನು ವಿವರವಾಗಿ ಓದಿರಿ.
ಪ್ಯಾಸೆಂಜರ್ ಕ್ಯಾರಿಯಿಂಗ್ ಕಮರ್ಷಿಯಲ್ ವೆಹಿಕಲ್ ಗಳಲ್ಲಿ ಕೀ ಮತ್ತು ಲಾಕ್ ರಿಪ್ಲೇಸ್‌ಮೆಂಟ್ ಆ್ಯಡ್-ಆನ್ ಕವರ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು
ಪಾಲಿಸಿ ಅವಧಿಯಲ್ಲಿ ನಿಗದಿಪಡಿಸಿದಷ್ಟು ಸಲ ಕೀ ಮತ್ತು ಲಾಕ್ ರಿಪ್ಲೇಸ್‌ಮೆಂಟ್ ಪ್ರಯೋಜನವನ್ನು ಪಡೆದುಕೊಂಡಾದ ಮೇಲೆ ಆ್ಯಡ್-ಆನ್ ಕವರ್ ಪಾಲಿಸಿಯು ವ್ಯಾಲಿಡ್ ಆಗಿ ಉಳಿಯುತ್ತದೆಯೇ?
ಇಲ್ಲ. ಪಾಲಿಸಿ ಶೆಡ್ಯೂಲ್ ನಲ್ಲಿ ನಿಗದಿಪಡಿಸಿದಷ್ಟು ಸಲ ಕೀ ಮತ್ತು ಲಾಕ್ ರಿಪ್ಲೇಸ್‌ಮೆಂಟ್ ಪ್ರಯೋಜನವನ್ನು ಪಡೆದುಕೊಂಡಾದ ಮೇಲೆ ವ್ಯಾಲಿಡ್ ಆಗಿ ಉಳಿಯುವುದಿಲ್ಲ.
ಕಳ್ಳತನ/ ಕನ್ನಹಾಕಿದ ಘಟನೆ/ ದುರುದ್ದೇಶಪೂರಿತ ಡ್ಯಾಮೇಜ್ ಸಂಭವಿಸಿದ ಸಂದರ್ಭದಲ್ಲಿ ಎಷ್ಟು ದಿನಗಳ ಒಳಗೆ ನಾನು ಪೊಲೀಸ್ ಕಂಪ್ಲೇಂಟ್ ಕೊಡಬೇಕು?
ಅಂತಹ ಸಂದರ್ಭಗಳಲ್ಲಿ ಅಪರಾಧ ಉಲ್ಲೇಖ ಮತ್ತು ಲಾಸ್ಟ್ ಪ್ರಾಪರ್ಟಿ ರಿಪೋರ್ಟ್ ಪಡೆಯಲು ಪೊಲೀಸ್ ಅಧಿಕಾರಿಗಳಿಗೆ ಎರಡು (2) ದಿನಗಳ ಒಳಗೆ ಘಟನೆಯನ್ನು ಕಡ್ಡಾಯವಾಗಿ ವರದಿ ಮಾಡಬೇಕು.
ಈ ಆ್ಯಡ್-ಆನ್ ಕವರ್ ಅಡಿಯಲ್ಲಿ ವಿಮಾ ಮೊತ್ತ ಎಷ್ಟು?
ಕೀ ಮತ್ತು ಲಾಕ್ ರಿಪ್ಲೇಸ್‌ಮೆಂಟ್‌ನ ಆಡ್-ಆನ್ ಕವರ್ ಅಡಿಯಲ್ಲಿ ವಿಮಾ ಮೊತ್ತವು ಪಾಲಿಸಿ ಶೆಡ್ಯೂಲ್ ನಲ್ಲಿ ನಿಗದಿಪಡಿಸಿದ ಮೊತ್ತದಷ್ಟು ಇರುತ್ತದೆ.