Third-party premium has changed from 1st June. Renew now
ಕಾರ್ ಇನ್ಶೂರೆನ್ಸ್ ನಲ್ಲಿ ಕೀ ರಿಪ್ಲೇಸ್ ಮೆಂಟ್ ಆ್ಯಡ್-ಆನ್ ಕವರ್ ಎಂದರೇನು?
ಕೀ ಮತ್ತು ಲಾಕ್ ಪ್ರೊಟೆಕ್ಟ್ ಒಂದು ಆ್ಯಡ್ ಆನ್ ಕವರ್ ಆಗಿದ್ದು, ಇದರಲ್ಲಿ ಇನ್ಶೂರರ್ ಕೀ ರಿಪ್ಲೇಸ್ ಮೆಂಟ್ ಅಥವಾ ರಿಪೇರಿ ಖರ್ಚು, ಇನ್ಶೂರೆನ್ಸ್ ಮಾಡಿದ ವಾಹನಕ್ಕೆ ಹೊಸ ಲಾಕ್ ಇನ್ ಸ್ಟಾಲ್ ಮಾಡುವ ಖರ್ಚು ಮತ್ತು ಬೀಗ ರಿಪೇರಿ ಮಾಡುವವನ ಖರ್ಚಿನ ವೆಚ್ಚವನ್ನು ಭರಿಸಲಾಗುತ್ತದೆ.
ಪ್ರೀಮಿಯಂ ನಲ್ಲಿ ಹೆಚ್ಚುವರಿ ಮೊತ್ತವನ್ನು ಪಾವತಿಸುವ ಮೂಲಕ ಈ ಆ್ಯಡ್-ಆನ್ ಕವರ್ ಪಡೆಯಬಹುದಾಗಿದೆ. ಈ ಆ್ಯಡ್-ಆನ್ ಕವರ್ ಪಡೆಯುವುದರಿಂದ ಕಾರ್ ಕೀ ಅಥವಾ ಲಾಕ್ ಸೆಟ್ ಬದಲಿಸಲು ಉಂಟಾಗುವ ವೆಚ್ಚವನ್ನು ಇನ್ಶೂರೆನ್ಸ್ ಪೂರೈಕೆದಾರರು ಭರಿಸುತ್ತಾರೆ.
ಸೂಚನೆ: ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್ ಡಿಎಐ) ದಲ್ಲಿ ಯುಐಎನ್ (UIN) ಸಂಖ್ಯೆ IRDAN158RP0005V01201718/A0068V01202021 ಯಲ್ಲಿ ಡಿಜಿಟ್ ಪ್ರೈವೇಟ್ ಕಾರ್ ಕೀ ಆ್ಯಂಡ್ ಲಾಕ್ ಪ್ರೊಟೆಕ್ಟ್ ಎಂಬ ಕಾರ್ ಇನ್ಶೂರೆನ್ಸ್ ನಲ್ಲಿ ಕೀ ರಿಪ್ಲೇಸ್ ಮೆಂಟ್ ಆ್ಯಡ್-ಆನ್ ಕವರ್ ಫೈಲ್ ಆಗಿದೆ.
ಕೀ ಮತ್ತು ಲಾಕ್ ರಿಪ್ಲೇಸ್ ಮೆಂಟ್ ಆ್ಯಡ್-ಆನ್ ಕವರ್ ಬಳಸುವುದು ಯಾಕೆ ಮುಖ್ಯ?
ಕೀ ಮತ್ತು ಲಾಕ್ ರಿಪ್ಲೇಸ್ ಮೆಂಟ್ ಆ್ಯಡ್-ಆನ್ ಕವರ್ ಪಡೆಯುವುದು ತುಂಬಾ ಮುಖ್ಯ, ಯಾಕೆಂದರೆ ನೀವು ಎಷ್ಟೇ ಜಾಗರೂಕರಾಗಿದ್ದರೂ ನೀವು ಇನ್ಶೂರೆನ್ಸ್ ಮಾಡಿದ ಕಾರಿನ ಕೀ ಡ್ಯಾಮೇಜ್ ಆಗಬಹುದು, ಕಳ್ಳತನವಾಗಬಹುದು, ಕಳೆದುಹೋಗಬಹುದು ಅಥವಾ ನೀವಿಟ್ಟಲ್ಲಿ ಇಲ್ಲದೇ ಹೋಗಬಹುದು. ಕೀ ರಿಪ್ಲೇಸ್ ಮೆಂಟ್ ಕವರ್ ಇಂತಹ ಸಂದರ್ಭಗಳಲ್ಲಿ ನೆರವಿಗೆ ಬರುತ್ತದೆ ಮತ್ತು ಖರ್ಚು ವೆಚ್ಚ ನಿಭಾಯಿಸಲು ಸಹಾಯ ಮಾಡುತ್ತದೆ.
ಡಿಜಿಟ್ ನ ಕಾರ್ ಇನ್ಶೂರೆನ್ಸ್ ಕೀ ಮತ್ತು ಲಾಕ್ ಪ್ರೊಟೆಕ್ಟ್ ಆ್ಯಡ್-ಆನ್ ಕವರ್ ನಲ್ಲಿ ಏನೇನು ಕವರ್ ಆಗುತ್ತದೆ?
ಕಾರ್ ಕೀ ರಿಪ್ಲೇಸ್ ಮೆಂಟ್ ಇನ್ಶೂರೆನ್ಸ್ ಆ್ಯಡ್-ಆನ್ ಕವರ್ ಹೊಂದಿದ್ದರೆ ಪಾಲಿಸಿ ಅವಧಿಯಲ್ಲಿ ವೆಹಿಕಲ್ ಗಳ ಕೀ ಕಳ್ಳತನ ಮೂಲಕ, ಆಕಸ್ಮಿಕ ನಷ್ಟದ ಮೂಲಕ ಅಥವಾ ಕನ್ನ ಹಾಕಿದ ಕಾರಣ ನಷ್ಟವಾದರೆ ಅದಕ್ಕೆ ಸಂಬಂಧಿಸಿದ ಖರ್ಚುವೆಚ್ಚಗಳನ್ನು ಲಾಸ್ಟ್ ಕೀ ಕವರ್ ಭಾಗವಾಗಿ ಇನ್ಶೂರೆನ್ಸ್ ಪೂರೈಕೆದಾರರು ಒದಗಿಸಬೇಕಾಗುತ್ತದೆ. ವಿಮಾದಾರರು ಘಟನೆ ಸಂಭವಿಸಿದ ತಕ್ಷಣ ಅಥವಾ ಮೂರು ದಿನಗಳ ಒಳಗಾಗಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಅಥವಾ ಕನ್ನಹಾಕಿದ ಕುರಿತ ವರದಿ ಒಪ್ಪಿಸಿ ಎಫ್ಐಆರ್ ದಾಖಲಿಸಬೇಕು. ಆ ಮೂಲಕ ಅಪರಾಧ ಉಲ್ಲೇಖ ಮತ್ತು ಲಾಸ್ಟ್ ಪ್ರಾಪರ್ಟಿ ರಿಪೋರ್ಟ್ ಪಡೆಯಲು ಕ್ರಮ ಕೈಗೊಳ್ಳಬೇಕು.
ವೆಹಿಕಲ್ ಕೀ ಕಳೆದುಹೋದ ಸಂದರ್ಭದಲ್ಲಿ ಭದ್ರತಾ ಅಪಾಯ ಎದುರಾಗುತ್ತದೆ. ಆಗ ಒಂದು ವೇಳೆ ಇನ್ಶೂರೆನ್ಸ್ ಮಾಡಿದ ವೆಹಿಕಲ್ ನ ಲಾಕ್ ಸೆಟ್ ರಿಪ್ಲೇಸ್ ಮೆಂಟ್ ಮಾಡಬೇಕಾಗಿ ಬಂದರೆ ಹೊಸ ಲಾಕ್ ಸೆಟ್ ಇನ್ ಸ್ಟಾಲೇಷನ್ ಗೆ ತಗುಲುವ ವೆಚ್ಚದ ನಷ್ಟ ಭರ್ತಿಯನ್ನು ಇನ್ಶೂರೆನ್ಸ್ ಪೂರೈಕೆದಾರರು ತುಂಬಿಸಿಕೊಡುತ್ತಾರೆ. ಲಾಕ್ ರಿಪೇರಿ ಮಾಡುವವನ ಶುಲ್ಕದ ಖರ್ಚುಗಳನ್ನು ಕೂಡ ಕವರ್ ಭರಿಸುತ್ತದೆ. ಕ್ಲೈಮ್ ಮಾಡುವ ಸಂದರ್ಭದಲ್ಲಿ ರಿಪ್ಲೇಸ್ ಮಾಡಿದ ಹೊಸ ಲಾಕ್ ಸೆಟ್ ಅದೇ ಮಾಡೆಲ್, ಅದೇ ತಯಾರಿಕೆ ಮತ್ತು ಅದೇ ಸ್ಪೆಸಿಫಿಕೇಷನ್ ನದ್ದು ಎಂಬ ವಿಚಾರವನ್ನು ನಮೂದಿಸಬೇಕಾದದ್ದು ಅತ್ಯವಶ್ಯಕ.
ಇನ್ಶೂರೆನ್ಸ್ ಮಾಡಿದ ವೆಹಿಕಲ್ ಮುರಿದಿದ್ದರೆ ಮತ್ತು ಡ್ಯಾಮೇಜ್ ಆಗಿದ್ದರೆ ಇನ್ಶೂರೆನ್ಸ್ ಪೂರೈಕೆದಾರರು ಲಾಕ್ ಸೆಟ್ ರಿಪೇರಿ ಅಥವಾ ರಿಪ್ಲೇಸ್ ಮೆಂಟ್ ಮತ್ತು ಬೀಗ ರಿಪೇರಿಯವನ ಶುಲ್ಕದ ಖರ್ಚುವೆಚ್ಚಗಳನ್ನು ಕೂಡ ಭರಿಸುತ್ತಾರೆ.
ಏನೆಲ್ಲಾ ಕವರ್ ಆಗುವುದಿಲ್ಲ?
ಕಾರ್ ಕೀ ಕವರ್ ಇನ್ಶೂರೆನ್ಸ್ ನಲ್ಲಿ ಇನ್ಶೂರೆನ್ಸ್ ಪೂರೈಕೆದಾರರು ಯಾವೆಲ್ಲಾ ಖರ್ಚುವೆಚ್ಚಗಳನ್ನು ಭರಿಸುವುದಿಲ್ಲ ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ:
ಇನ್ಶೂರೆನ್ಸ್ ಮಾಡಿದ ವೆಹಿಕಲ್ ನ ಕೀ ಕಳೆದುಹೋಗಿದ್ದಾಗ ಕಾರ್ ಕೀ ರಿಪ್ಲೇಸ್ ಮೆಂಟ್ ಮಾಡಿದ ಸಂದರ್ಭದಲ್ಲಿ ವಿಮಾದಾರರು ಪೇಮೆಂಟ್ ರಿಸಿಟ್ ಗಳನ್ನು ಒದಗಿಸದಿದ್ದರೆ ಕ್ಲೈಮ್ ಮಾಡಿದ್ದನ್ನು ಪರಿಗಣಿಸಲಾಗುವುದಿಲ್ಲ.
ಡಿಜಿಟ್ ನ ಅಧಿಕೃತ ರಿಪೇರಿ ಶಾಪ್ ಗಳಲ್ಲಿ ಅಥವಾ ತಯಾರಿಕ ಕಂಪನಿಗಳ ಅಧಿಕೃತ ಡೀಲರ್ ಶಿಪ್ ಗಳಲ್ಲಿ ರಿಪೇರಿ ಮಾಡದೇ ಇದ್ದರೆ ಇನ್ಶೂರೆನ್ಸ್ ಪೂರೈಕೆದಾರರು ನಷ್ಟ ಭರಿಸುವುದಿಲ್ಲ.
ವೆಹಿಕಲ್ ನ ಕೀ/ಲಾಕ್ ಸೆಟ್ ಕಾಲಕ್ರಮೇಣ ಬಳಸುತ್ತಾ ಹಾಳಾದರೆ, ಮೆಕ್ಯಾನಿಕಲ್/ ಎಲೆಕ್ಟ್ರಿಕಲ್ ಬ್ರೇಕ್ ಡೌನ್ ಆದರೆ, ಸ್ವಚ್ಛ ಮಾಡುವಾಗ, ರಿಪೇರಿ ಮಾಡುವಾಗ, ರಿಸ್ಟೋರ್ ಮಾಡುವಾಗ ಹಾನಿಯಾದರೆ ಅಥವಾ ಕಾಲ ಕಳೆದಂತೆ ತನ್ನಷ್ಟಕ್ಕೆ ಏನಾದರೂ ಸಂಭವಿಸಿದರೆ ಕವರ್ ಆಗುವುದಿಲ್ಲ.
ಘಟನೆ ಸಂಭವಿಸಿದ ಮೂರು ದಿನಗಳ ಬಳಿಕ ಪೊಲೀಸ್ ಅಥಾರಿಟಿಗಳಿಗೆ ಸೂಚನೆ ಅಥವಾ ವರದಿ ನೀಡಿದ್ದರೆ ಅಂಥಾ ಕ್ಲೈಮ್ ಗಳನ್ನು ಇನ್ಶೂರೆನ್ಸ್ ಪೂರೈಕೆದಾರರು ಪರಿಗಣಿಸುವುದಿಲ್ಲ.
ಇನ್ಶೂರೆನ್ಸ್ ಮಾಡಿದ ವೆಹಿಕಲ್ ಗಳ ಕೀಗಳು/ಲಾಕ್ ಸೆಟ್ ನ ಸೂಕ್ಷ್ಮ ಭಾಗಗಳನ್ನು ರಿಪ್ಲೇಸ್ ಮಾಡುವ ವೆಚ್ಚಗಳನ್ನು ಮಾತ್ರ ಭರಿಸಲಾಗುತ್ತದೆ.
ಉದ್ದೇಶಪೂರ್ವಕವಾಗಿ ಇನ್ಶೂರೆನ್ಸ್ ಮಾಡಿದ ವೆಹಿಕಲ್ ನ ಕೀ/ಲಾಕ್ ಸೆಟ್ ಅನ್ನು ಡ್ಯಾಮೇಜ್ ಮಾಡಲ್ಪಟ್ಟಿದ್ದರೆ.
ತಯಾರಿಕಾ ಕಂಪನಿಯ ವಾರಂಟಿಯ ಕೆಳಗೆ ನಷ್ಟ/ಡ್ಯಾಮೇಜ್ ಕವರ್ ಮಾಡಲಾಗುತ್ತದೆ.
ಯಾವುದಾದರೂ ಹಳೆಯ ಡ್ಯಾಮೇಜ್ ಗಳಿದ್ದರೆ.
ಡೂಪ್ಲಿಕೇಟ್ ವೆಹಿಕಲ್ ಕೀಗಳಿಗಾಗಿ ಮಾಡಿದ ಕ್ಲೈಮ್.
ಡಿಸ್ಕ್ಲೈಮರ್ - ಇಂಟರ್ ನೆಟ್ ನ ಮೂಲಗಳಿಂದ ಸಂಗ್ರಹಿಸಿ ರಚಿಸಿದ ಈ ಬರಹವನ್ನು ಮಾಹಿತಿ ಒದಗಿಸುವ ಉದ್ದೇಶದಿಂದ ಮತ್ತು ಡಿಜಿಟ್ ಪಾಲಿಸಿ ವರ್ಡಿಂಗ್ಸ್ ಡಾಕ್ಯುಮೆಂಟ್ ಕಾರಣದಿಂದ ರೂಪಿಸಲಾಗಿದೆ. ಡಿಜಿಟ್ ಪ್ರೈವೇಟ್ ಕಾರ್ ಕೀ ಮತ್ತು ಲಾಕ್ ಪ್ರೊಟೆಕ್ಟ್ ಆ್ಯಡ್-ಆನ್ ಕವರ್ (UIN: IRDAN158RP0005V01201718/A0068V01202021) ಕುರಿತ ವಿವರವಾದ ಕವರೇಜ್, ಎಕ್ಸ್ ಕ್ಲೂಷನ್ ಮತ್ತು ಕಂಡಿಷನ್ ಗಳನ್ನು ತಿಳಿಯಲು, ಪಾಲಿಸಿ ಡಾಕ್ಯುಮೆಂಟ್ ಗಳವನ್ನು ವಿವರವಾಗಿ ಓದಿ ತಿಳಿಯಿರಿ.
ಕಾರ್ ಇನ್ಶೂರೆನ್ಸ್ ನಲ್ಲಿ ಕೀ ರಿಪ್ಲೇಸ್ ಮೆಂಟ್ ಆ್ಯಡ್-ಆನ್ ಕವರ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು
ಡೇಲಿ ಕನ್ವೆಯನ್ಸ್ ವಾಯೋ ಸ್ವೀಕಾರ್ಯ?
ಡಿಜಿಟಲ್ ದ್ವಾರಾ ಓಫರ್ ಕರಾಯಲಾ ಆ ಎಡಿ-ಓನ್ ಕವಿತೆ ಸಮಾಗಾದ ದರಾಮಿಯಾನ ಮಹತ್ತಮ್
ಜೋ ವಾಹನ ವಧಾರಣಾ ದಿವಸೋ ಸುದ್ದಿ ಎಂ.ಮಾರೆ ಸ್ಟೇಂಡಬಾಯಿ ಕಾರ್ ಮಾಟೆ. ಶೇ?
ಹಾ, ಜೋ ವೈಕಲ್ಪಿಕ್ ವಾಹನ್ ಯೋಗ್ ದಿವಸೋನಿ ಸಂಖ್ಯಾಬಲ ವಧು ರಕ್ಷಕ ಊಕವಣಿ ಕರವಾನಿ ಜರೂರ್ ಪಡಶೆ.