Third-party premium has changed from 1st June. Renew now
ಕಾರ್ ಇನ್ಶೂರೆನ್ಸ್‌ನಲ್ಲಿ ಡೈಲಿ ಅಲೋವೆನ್ಸ್ ಬೆನಿಫಿಟ್ ಆ್ಯಡ್-ಆನ್ ಕವರ್ ಎಂದರೇನು?
ಡಿಜಿಟ್‌ನ ಡೈಲಿ ಕನ್ವೇಯನ್ಸ್ ಬೆನಿಫಿಟ್ ಅಥವಾ ಸಾಗಣೆ ಮತ್ತು ದೈನಂದಿನ ಭತ್ಯೆ ಒಂದು ಆ್ಯಡ್-ಆನ್ ಕವರ್ ಆಗಿದ್ದು, ರಿಪೇರಿ ಅವಧಿಯಲ್ಲಿ ಇನ್ಶೂರ್ಡ್ ವೆಹಿಕಲ್‌ನ ಅಲಭ್ಯತೆ ಕಾರಣದಿಂದ ಪಾಲಿಸಿಹೋಲ್ಡರ್‌ಗೆ ತಗುಲುವ ಸಾಗಣೆ ವೆಚ್ಚವನ್ನು ಇನ್ಶೂರರ್ ಭರಿಸುತ್ತಾರೆ.
ಇನ್ಶೂರ್ಡ್ ವೆಹಿಕಲ್ ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಆ್ಯಡ್-ಆನ್ ಕವರ್ ನಿರಂತರ ಸಂಪರ್ಕ ಸಾಧ್ಯವಾಗುವಂತೆ ನೋಡಿಕೊಳ್ಳುತ್ತದೆ ಮತ್ತು ಅದರಿಂದ ಉಂಟಾಗಬಹುದಾದ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವುದರ ಮೂಲಕ ಈ ಬೆನಿಫಿಟ್ ನೆರವಿಗೆ ಬರುತ್ತದೆ.
ಇನ್ಶೂರರ್‌ಗೆ ಫೈಲ್ ಮಾಡಿದ ಡ್ಯಾಮೇಜ್ ಅಥವಾ ಅಪಘಾತ ನಷ್ಟದ ಕ್ಲೈಮ್ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿನ ಓನ್ ಡ್ಯಾಮೇಜ್ ಸೆಕ್ಷನ್ ಅಡಿಯಲ್ಲಿ ಸ್ವೀಕಾರಾರ್ಹವಾಗಿದ್ದರೆ ಮಾತ್ರ ಡೈಲಿ ಕನ್ವೇಯನ್ಸ್ ಆ್ಯಡ್-ಆನ್ ಕವರ್‌ನ ಉಪಯೋಗ ಲಭ್ಯವಾಗುತ್ತದೆ.
ಸೂಚನೆ: ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್‌ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್‌ಡಿಎಐ) ನಲ್ಲಿ ಯುಐಎನ್ ನಂಬರ್ IRDAN158RP0005V01201718/A0011V01201718 ನಲ್ಲಿ ಡಿಜಿಟ್ ಪ್ರೈವೇಟ್ ಕಾರ್ ಡೈಲಿ ಕನ್ವೇಯನ್ಸ್ ಬೆನಿಫಿಟ್ ಎಂಬ ಹೆಸರಿನಲ್ಲಿ ಕಾರ್ ಇನ್ಶೂರೆನ್ಸ್‌ನಲ್ಲಿ ಡೈಲಿ ಅಲೋವೆನ್ಸ್ ಆ್ಯಡ್-ಆನ್ ಕವರ್ ಫೈಲ್ ಆಗಿದೆ.
ಡೈಲಿ ಕನ್ವೇಯನ್ಸ್ ಬೆನಿಫಿಟ್ ಒಂದು ಕ್ರಿಟಿಕಲ್ ಆಗಿರುವ ಆ್ಯಡ್-ಆನ್ ಕವರ್ ಯಾಕೆ?
ಆ್ಯಡ್-ಆನ್ ಕವರ್‌ನ ಪ್ರಾಮುಖ್ಯತೆಯ ಕುರಿತು ಪ್ರಶ್ನೆ ಬಂದಾಗಲೆಲ್ಲಾ, ಹಲವು ಸಲ ಇನ್ಶೂರ್ಡ್ ವೆಹಿಕಲ್‌ನ ಡ್ಯಾಮೇಜ್ ರಿಪೇರಿ ಮಾಡುವ ವೆಚ್ಚಗಳಲ್ಲಿ ದೈನಂದಿನ ಸಾಗಾಟ ವ್ಯವಸ್ಥೆ ಮಾಡುವ ಸಲುವಾಗಿ ಉಂಟಾಗುವ ಇನ್ನಿತರ ಖರ್ಚುಗಳನ್ನೂ ಒಳಗೊಂಡಿರಬಹುದು ಎಂಬ ವಾಸ್ತವ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ.
ಅಂತಹಸಂದರ್ಭಗಳಲ್ಲಿ ಡೈಲಿ ಕನ್ವೇಯನ್ಸ್ ಅಥವಾ ದೈನಂದಿನ ಭತ್ಯೆ ಆ್ಯಡ್-ಆನ್ ಕವರ್ ಹೊಂದಿರುವುದು ಒದಗಿ ಬರುತ್ತದೆ, ಅಲ್ಲದೇ ಇನ್ಶೂರರ್‌ಗೆ ಕನ್ವೇಯನ್ಸ್ ಅಲೋವೆನ್ಸ್ ಒದಗಿಸುವ ಭರವಸೆ ನೀಡುತ್ತದೆ. ಅದೇ ಸಮಯದಲ್ಲಿ, ಇನ್ಶೂರ್ಡ್ ವೆಹಿಕಲ್‌ಗೆ ಆಗಿರುವ ಡ್ಯಾಮೇಜನ್ನು ಗ್ಯಾರೇಜ್‌ನಲ್ಲಿ ಸರಿಪಡಿಸಲಾಗುತ್ತದೆ.
ಡಿಜಿಟ್‌ನ ಕಾರ್ ಇನ್ಶೂರೆನ್ಸ್ ಡೈಲಿ ಕನ್ವೇಯನ್ಸ್ ಆ್ಯಡ್-ಆನ್ ಕವರ್ ಅಡಿಯಲ್ಲಿ ಏನೆಲ್ಲಾ ಕವರ್ ಆಗುತ್ತದೆ?
ಪಾಲಿಸಿ ಅವಧಿಯಲ್ಲಿ ಒಂದು ವೇಳೆ ವೆಹಿಕಲ್‌ನ ಕೀ ಕಳ್ಳತನ ಅಥವಾ ಕನ್ನಹಾಕುವಿಕೆ ಅಥವಾ ಆಕಸ್ಮಿಕ ನಷ್ಟ ಸಂಭವಿಸಿದರೆ ಅದಕ್ಕೆ ತಗುಲುವ ವೆಚ್ಚದ ಪರಿಹಾರವನ್ನು ಲಾಸ್ಟ್ ಕೀ ಕವರ್ ಮೂಲಕ ಇನ್ಶೂರರ್ ಭರಿಸುವಂತೆ ಕಾರ್ ಕೀ ರಿಪ್ಲೇಸ್‌ಮೆಂಟ್ ಆ್ಯಡ್-ಆನ್ ಕವರ್ ಮಾಡುತ್ತದೆ. ಆದಾಗ್ಯೂ, ಕಳ್ಳತನ ಅಥವಾ ಕನ್ನಹಾಕುವಿಕೆ ನಡೆದ ಸಂದರ್ಭದಲ್ಲಿ ಅಪರಾಧ ಉಲ್ಲೇಖ ಅಥವಾ ಲಾಸ್ಟ್ ಪ್ರಾಪರ್ಟಿ ರಿಪೋರ್ಟ್ ಪಡೆಯಲು ಪಾಲಿಸಿಹೋಲ್ಡರ್ ತಕ್ಷಣವೇ ಅಥವಾ ಮೂರು ದಿನಗಳ ಒಳಗಾಗಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಬೇಕು.
ಡ್ಯಾಮೇಜ್ ರಿಪೇರಿಯಾಗುತ್ತಿರುವ ಅವಧಿಯಲ್ಲಿ ನಿಮ್ಮ ದೈನಂದಿನ ಓಡಾಟಕ್ಕೆ ಅನುಕೂಲವಾಗುವ ಹಾಗೆ ಬೇರೊಂದು ವೆಹಿಕಲ್ ಅನ್ನು ಒದಗಿಸಲಾಗುತ್ತದೆ.
ಡೈಲಿ ಫಿಕ್ಸ್‌ಡ್ ಅಲೋವೆನ್ಸ್‌ಗೆ ಸರಿ ಹೋಂದುವ ಮೊತ್ತದ ವೋಚರ್‌ಗಳನ್ನು ಓಲಾ ಅಥವಾ ಉಬರ್‌ನಿಂದ ಪಡೆಯುವುವುದು ಇನ್ನೊಂದು ಪ್ರಯೋಜನ.
ಏನೆಲ್ಲಾ ಕವರ್ ಆಗುವುದಿಲ್ಲ?
ಕಾರ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಪಟ್ಟಿಮಾಡಲಾಗಿರುವ ನಿರ್ದಿಷ್ಟ ಹೊರಗಿಡುವಿಕೆಗಳಿಗೆ ಹೆಚ್ಚುವರಿ ಸೇರ್ಪಡೆಯೊಂದಿಗೆ ಡೈಲಿ ಕನ್ವೇಯನ್ಸ್ ಬೆನಿಫಿಟ್ ಆ್ಯಡ್-ಆನ್ ಕವರ್ ಬರುತ್ತದೆ. ಅವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ:
ಒಂದು ವೇಳೆ ಪಾಲಿಸಿಹೋಲ್ಡರ್, ಪಾಲಿಸಿ ಶೆಡ್ಯೂಲ್ ನಲ್ಲಿ ನಮೂದಾಗಿರುವವರು ಹೆಚ್ಚುವರಿ ಸಮಯವನ್ನು ಆರಿಸಿಕೊಂಡಿದ್ದರೆ ಇನ್ಶೂರರ್ ಕ್ಲೈಮ್ ಅನ್ನು ಪರಿಗಣಿಸುವುದಿಲ್ಲ.
ಒಂದು ವೇಳೆ ಕಾರ್ ಇನ್ಶೂರೆನ್ಸ್ ಪಾಲಿಸಿ ಇನ್‌ವ್ಯಾಲಿಡ್ ಆಗಿದ್ದರೆ, ಇನ್ಶೂರರ್ ಯಾವುದೇ ಕ್ಲೈಮ್ ಪಾವತಿ ಮಾಡುವ ಹೊಣೆಗಾರಿಕೆ ಹೊಂದಿರುವುದಿಲ್ಲ.
ಡಿಜಿಟ್‌ನ ಅಧಿಕೃತ ರಿಪೇರಿ ಮಳಿಗೆಗಳಲ್ಲಿ ಡ್ಯಾಮೇಜ್ ರಿಪೇರಿ ಮಾಡಿಸದಿದ್ದರೆ ಅಂತಹಕ್ಲೈಮ್ ಅನ್ನು ಪರಿಗಣಿಸಲಾಗುವುದಿಲ್ಲ.
ಆ್ಯಕ್ಟ್ ಆಫ್ ಗಾಡ್, ಗಲಭೆ ಮತ್ತು ಮುಷ್ಕರದಂತಹ ಗಂಭೀರ ಅಪಾಯಗಳಿಂದ ನಷ್ಟ/ ಡ್ಯಾಮೇಜ್ ಆಗಿದ್ದರೆ ಪರಿಗಣಿಸಲಾಗುವುದಿಲ್ಲ.
ಸ್ಟಾಂಡ್‌ಬೈ ವೆಹಿಕಲ್ ಒದಗಿಸಿದ್ದರೆ ಅದಕ್ಕೆ ತಗುಲುವ ಯಾವುದೇ ನಿರ್ವಹಣಾ ವೆಚ್ಚವನ್ನು ಭರಿಸುವ ಹೊಣೆಗಾರಿಕೆ ಇನ್ಶೂರರ್ ಹೊಂದಿರುವುದಿಲ್ಲ.
ಕಾರ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕೇವಲ ವಿಂಡ್ ಸ್ಕ್ರೀನ್ ಅಥವಾ ಗ್ಲಾಸ್ ಡ್ಯಾಮೇಜ್ ಕ್ಲೈಮ್ ಮಾಡಿದ್ದರೆ ಕವರ್ ಆಗುವುದಿಲ್ಲ.
ಯಾವುದೇ ಇನ್ನಿತರ ಇನ್ಶೂರೆನ್ಸ್ ಪಾಲಿಸಿ ವಿಧಾನಗಳಲ್ಲಿ ನಷ್ಟ ಕವರ್ ಆಗಿದ್ದರೆ/ ಕ್ಲೈಮ್ ಮಾಡಿದ್ದರೆ ಕವರ್ ಆಗುವುದಿಲ್ಲ.
ಇನ್ಶೂರ್ಡ್ ವೆಹಿಕಲ್ ನ ಹಳೆಯ ಡ್ಯಾಮೇಜ್ ಗಳನ್ನು ರಿಪೇರಿ ಮಾಡುವುದಕ್ಕಾಗಿ ಗ್ಯಾರೇಜಿನವರು ಹೆಚ್ಚುವರಿ ಸಮಯ ತೆಗೆದುಕೊಂಡರೆ ಇನ್ಶೂರರ್ ಅದನ್ನು ಪರಿಗಣಿಸುವುದಿಲ್ಲ.
ಕಾರ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಮಾಡಲಾದ ಓನ್ ಡ್ಯಾಮೇಜ್ ಕ್ಲೈಮ್ ಸ್ವೀಕಾರಾರ್ಹವಲ್ಲ/ ಪಾವತಿಗೆ ಅರ್ಹವಲ್ಲ.
ಡಿಸ್‌ಕ್ಲೈಮರ್ - ಈ ಬರಹವನ್ನು ಮಾಹಿತಿ ನೀಡುವ ಉದ್ದೇಶದಿಂದ ಮತ್ತು ಡಿಜಿಟ್‌ನ ಪಾಲಿಸಿ ವರ್ಡಿಂಗ್ಸ್ ಗೆ ಸಂಬಂಧಿಸಿದಂತೆ ಇಂಟರ್‌ನೆಟ್‌ನ ನಾನಾ ಮೂಲಗಳಿಂದ ಸಂಗ್ರಹಿಸಿ ರೂಪಿಸಲಾಗಿದೆ. ಡಿಜಿಟ್ ಪ್ರೈವೇಟ್ ಕಾರ್‌ನ ಡೈಲಿ ಕನ್ವೇಯನ್ಸ್ ಬೆನಿಫಿಟ್ ಆ್ಯಡ್-ಆನ್ ಕವರ್ (ಯುಐಎನ್: IRDAN158RP0005V01201718/A0011V01201718) ನ ವಿವರವಾದ ಕವರೇಜ್, ಹೊರಗಿಡುವಿಕೆ ಮತ್ತು ಕಂಡಿಷನ್‌ಗಳನ್ನು ತಿಳಿಯಲು ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ಓದಿರಿ. ಯಾವುದೇ ಸ್ಟಾಂಡ್‌ಬೈ ವೆಹಿಕಲ್ ಒದಗಿಸಿದ್ದರೆ ಅದರ ನಿರ್ವಹಣಾ ವೆಚ್ಚವನ್ನು ಪಾವತಿಸುವ ಹೊಣೆಗಾರಿಕೆಯನ್ನು ಇನ್ಶೂರರ್ ಹೊಂದಿರುವುದಿಲ್ಲ.
ಕಾರ್ ಇನ್ಶೂರೆನ್ಸ್ ನಲ್ಲಿ ಡೈಲಿ ಅಲೋವೆನ್ಸ್ ಬೆನಿಫಿಟ್ ಆ್ಯಡ್-ಆನ್ ಕವರ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು
ಯಾವುದೆಲ್ಲಾ ನೈಸರ್ಗಿಕ ವಿಪತ್ತುಗಳು 'ಆ್ಯಕ್ಟ್ ಆಫ್ ಗಾಡ್' ಅಪಾಯಗಳ ಅಡಿಯಲ್ಲಿ ಬರುತ್ತವೆ?
ಅಪಾರ ಜನಸ್ತೋಮಕ್ಕೆ ಪರಿಣಾಮ ಬೀರುವಂತಹ ಭೂಕಂಪಗಳು, ಚಂಡಮಾರುತಗಳು ಮತ್ತ ಪ್ರವಾಹಗಳು 'ಆ್ಯಕ್ಟ್ ಆಫ್ ಗಾಡ್' ಅಪಾಯಗಳ ಅಡಿಯಲ್ಲಿ ಬರುತ್ತವೆ.
ಡೈಲಿ ಕನ್ವೇಯನ್ಸ್ ಬೆನಿಫಿಟ್ ಆ್ಯಡ್-ಆನ್ ಕವರ್ ಅಡಿಯಲ್ಲಿ ಎಷ್ಟು ಕ್ಲೈಮ್ ಗಳು ಸ್ವೀಕಾರಾರ್ಹವಾಗಿರುತ್ತವೆ?
ಡಿಜಿಟ್ ಒದಗಿಸುವ ಈ ಆ್ಯಡ್ ಆನ್ ಕವರ್ ನ ಪಾಲಿಸಿ ಅವಧಿಯಲ್ಲಿ ಗರಿಷ್ಠ ಎರಡು ಕ್ಲೈಮ್ ಗಳು ಸ್ವೀಕಾರಾರ್ಹವಾಗಿರುತ್ತವೆ.
ಒದಗಿಸಿರುವ ಸ್ಟಾಂಡ್ ಬೈ ಕಾರನ್ನು ಹೆಚ್ಚುವರಿ ಸಂಖ್ಯೆ ದಿನಗಳಿಗೆ ಇರಿಸಿಕೊಂಡರೆ ಅದಕ್ಕೆ ನಾನು ಪಾವತಿ ಮಾಡುವ ಅಗತ್ಯವಿದೆಯೇ?
ಹೌದು, ನಿಗದಿತ ಅರ್ಹತಾ ದಿನಗಳಿಗಿಂತ ಹೆಚ್ಚು ದಿನಗಳ ಕಾಲ ಇನ್ನೊಂದು ವೆಹಿಕಲ್ ಅನ್ನು ಇಟ್ಟುಕೊಂಡರೆ ಪಾವತಿ ಮಾಡುವುದು ಅವಶ್ಯ.