ಬಂಪರ್ ಟು ಬಂಪರ್ ಇನ್ಶೂರೆನ್

Get Instant Policy in Minutes*

Third-party premium has changed from 1st June. Renew now

ಬಂಪರ್ ಟು ಬಂಪರ್ ಕಾರ್ ಇನ್ಶೂರೆನ್ಸ್ ಕವರ್

ಕಲ್ಪನೆ ಮಾಡಿ!ತಿಂಗಳಾನುಗಟ್ಟಲೆಗಳ ಯೋಜನೆ, ಬಜೆಟಿಂಗ್, ವಿಚಾರಣೆ, ಸಲಹೆಗಳ ನಂತರ ಕೊನೆಗೂ ನೀವು ನಿಮ್ಮ ಕನಸಿನ ಕಾರನ್ನು ಖರೀದಿಸಲು ನಿರ್ಧರಿಸುತ್ತೀರಿ. ಕೆಲಕಾಲದ ಕಾತರದ ಕಾಯುವಿಕೆಯ ನಂತರ ನಿಮಗೆ ನಿಮ್ಮ ಹೊಚ್ಚಹೊಸ ಕಾರಿನ ಕೀಯನ್ನು ನೀಡಲಾಗುತ್ತದೆ, ಹಾಗೂ ನೀವು ಚಾಲಕನ ಸೀಟಿನಲ್ಲಿ ಕುಳಿತು, ರಸ್ತೆಯಲ್ಲಿ ತೇಲಾಡುತ್ತಿದ್ದೀರಿ.

ಈ ಅಲೌಕಿಕ ಅನುಭವವು ಹಠಾತ್ ಆಗಿ ನೆಲಕ್ಕಪಳಿಸುತ್ತದೆ, ನೀವು ಅಪಘಾತದ ಆ ಭೀಕರ ಶಬ್ದವನ್ನು ಕೇಳಿದಾಗ. 

ಆ ಗೊಂದಲದ ನಡುವೆ ನಿಮಗೆ ಅಪಘಾತಕ್ಕೀಡಾದ ಕಾರು ನಿಮ್ಮದೇ ಎಂಬುದರ ಅರಿವಾಗುತ್ತದೆ. ಹೃದಯ ಒಡೆಯುವ ಕ್ಷಣ… ಶೋರೂಂ ನಿಂದ ಬಂದ ಹೊಚ್ಚ ಹೊಸ ಕಾರು ಕೆಲ ಸೆಕೆಂಡುಗಳಲ್ಲೇ, ಸೆಕೆಂಡ್ ಹ್ಯಾಂಡ್ ಆಗಿದೆ.

ಇಲ್ಲಿ ನಿಮ್ಮ ಕಾರ್ ಇನ್ಶೂರೆನ್ಸ್ ಉಪಯೋಗಕ್ಕೆ ಬರುತ್ತದೆ ಹಾಗೂ ನೀವು ಬಂಪರ್ ಟು ಬಂಪರ್ ಕಾರ್ ಇನ್ಶೂರೆನ್ಸ್ ಕವರ್ ಅನ್ನು ಆಯ್ಕೆ ಮಾಡಿದ್ದರೆ ಅದಕ್ಕಿಂತ ಉತ್ತಮೆ ಏನೂ ಇಲ್ಲ; ನೀವು ಕ್ಷಣಮಾತ್ರದಲ್ಲಿ ಒತ್ತಡದಿಂದ ಮುಕ್ತರಾಗುತ್ತೀರಿ ಯಾಕೆಂದರೆ ನಿಮ್ಮ ಕಾರು ಯಾವುದೇ ನಷ್ಟವಿಲ್ಲದೇ ಮತ್ತೆ ಹೊಚ್ಚ ಹೊಸದಾಗಲಿದೆ!

ಬಂಪರ್ ಟು ಬಂಪರ್ ಇನ್ಶೂರೆನ್ಸ್ ಎಂದರೇನು?

ಬಂಪರ್ ಟು ಬಂಪರ್ ಕವರ್ ನಿಮ್ಮ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ ಸ್ವಲ್ಪ ಹೆಚ್ಚುವರಿ ಪ್ರೀಮಿಯಮ್ ಪಾವತಿಯೊಂದಿಗೆ ನಿಮಗೆ ಆಡ್ ಆನ್ ಆಗಿ ಲಭ್ಯವಿದೆ. ಮೊಟ್ಟಮೊದಲು ಬಂಪರ್ ಟು ಬಂಪರ್ ಕವರ್ ಎಂದರೇನು ಎಂದು ತಿಳಿಯೋಣ.

 ಸಾಮಾನ್ಯ ಶಬ್ದಗಳಲ್ಲಿ ಹೇಳಬೇಕೆಂದರೆ ಇದೊಂದು ಕಾರ್ ಇನ್ಶೂರೆನ್ಸ್ ಆಡ್ - ಆನ್ ಆಗಿದೆ ಹಾಗೂ ಇದು ನಿಮ್ಮ ಕಾರಿನ ಕೆಲವು ಹಾನಿಗಳಾದ ಎಂಜಿನ್ ಹಾನಿ, ಟಯರ್ ಗಳು, ಬ್ಯಾಟರಿ, ಗಾಜು ಇವುಗಳನ್ನು ಹೊರತುಪಡಿಸಿ, ನಿಮ್ಮ ಕಾರಿನ ಪ್ರತೀ ಇಂಚನ್ನೂ ಕವರ್ ಮಾಡುತ್ತದೆ. ಇದು ನಿಮ್ಮ ಕಾರನ್ನು ಸಂರಕ್ಷಿಸುವ ಸೂಪರ್ ಹೀರೋ ಆಗಿದ್ದು ದುರಾದೃಷ್ಟಕರ ಅಪಘಾತಗಳ ಸಮಯದಲ್ಲಿ ನಿಮ್ಮ ಕಾರಿಗಾದ ಹಾನಿಯ ಮೇಲೆ 100% ಕವರೇಜ್ ನೀಡುತ್ತದೆ, ನಿಮ್ಮ ಸಾಧಾರಣ ಕಾರ್ ಇನ್ಶೂರೆನ್ಸ್ ಪಾಲಿಸಿ ತರಹ ಅಲ್ಲ.

ಇದನ್ನು ಝೀರೋ ಡಿಪ್ರಿಸಿಯೇಷನ್ ಅಥವಾ ನಿಲ್ ಡಿಪ್ರಿಸಿಯೇಷನ್ ಕಾರ್ ಇನ್ಶೂರೆನ್ಸ್ ಎಂದೂ ಕರೆಯಲಾಗುತ್ತದೆ. ಯಾಕೆಂದರೆ ಇದು ನಿಮ್ಮ ಇನ್ಶೂರೆನ್ಸ್ ಕವರ್ ನಿಂದ ಕಾರಿನ ಡಿಪ್ರಿಸಿಯೇಷನ್ ಅನ್ನು ಹೊರಗಿಟ್ಟು ನಿಮಗೆ ಸಂಪೂರ್ಣ ಕವರೇಜ್ ನೀಡುತ್ತದೆ.

ಈ ಕವರ್ ಅನ್ನು ಭಾರತದಲ್ಲಿ 2009 ರಲ್ಲಿ ಪರಿಚಯಿಸಲಾಯಿತು, ಆ ದಿನದಿಂದ ಇದು ಕಾರು ಮಾಲೀಕರಿಗೆ, ವಿಶೇಷವಾಗಿ ಕೆಳಗಡೆ ಉಲ್ಲೇಖಿಸಲಾದವರಿಗೆ, ಒಂದು ವರವಾಗಿ ಪರಿಣಮಿಸಿದೆ:

  • ಹೊಸ ಕಾರು ಮಾಲಕ ಅಥವಾ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರು ಹೊಂದಿದವರಿಗೆ
  • ಹೊಸ ಹಾಗೂ ಅನುಭವ ರಹಿತ ಚಾಲಕರಿಗೆ
  • ದುಬಾರಿ ಬಿಡಿಭಾಗಗಳನ್ನು ಹೊಂದಿದ ಐಷಾರಾಮಿ ಸೂಪರ್ ಕಾರುಗಳ ಮಾಲೀಕರಿಗೆ
  • ಹೆಚ್ಚಾಗಿ ಅಪಘಾತವಾಗುವ ಪ್ರದೇಶದಲ್ಲಿ ನೆಲೆಸಿರುವ/ ಅದರ ಹತ್ತಿರವಿರುವ ಮಾಲೀಕರಿಗೆ
  • ತಮ್ಮ ಕಾರಿನ ಸಣ್ಣ ಪುಟ್ಟ ಡೇಂಟ್ ಗಳ ಹಾಗೂ ಉಬ್ಬುಗಳ ಬಗ್ಗೆ ಚಿಂತಿಸುವವರಿಗೆ

 

ಇದು ತಮ್ಮ ಕಾರಿನ ಸಣ್ಣ ಪುಟ್ಟ ಡೇಂಟ್ ಗಳ ಹಾಗೂ ಉಬ್ಬುಗಳ ಬಗ್ಗೆ ಚಿಂತಿಸುವ ಹೊಸ್ ಕಾರು ಮಾಲೀಕರಲ್ಲಿ ಅಥವಾ ದುಬಾರಿ ಹಾಗೂ ಅಪರೂಪದ ಬಿಡಿಭಾಗಗಳನ್ನು ಹೊಂದಿದ ಐಷಾರಾಮಿ ಸೂಪರ್ ಕಾರುಗಳ ಮಾಲೀಕರಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇಂತಹ ಮಾಲೀಕರಲ್ಲಿ 100% ಕವರೇಜ್ ಗಾಗಿ ಹೆಚ್ಚುವರಿ ಪ್ರೀಮಿಯಮ್ ಪಾವತಿಸಲು ಹೇಳಿದರೆ, ಅವರಿಗೆ ಈ ಮೊತ್ತವು ತಮ್ಮ ಕಾರಿನ ಸಂರಕ್ಷಣೆಯ ಮುಂದೆ ಕ್ಷುಲ್ಲಕ ಎನಿಸುತ್ತದೆ.

ಬಳಕೆ : ಬಂಪರ್ ಟು ಬಂಪರ್ ಕವರ್ ಹೊಂದಿರುವ ಕಾರ್ ಇನ್ಶೂರೆನ್ಸ್ ಪ್ರೀಮಿಯಮ್ ಕ್ಯಾಲ್ಕುಲೇಟ್ ಮಾಡುವ ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್

ಹೋಲಿಕೆ : ಬಂಪರ್ ಟು ಬಂಪರ್ ಕವರ್ ಇರುವ ಹಾಗೂ ಇಲ್ಲದೇ ಇರುವ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿ ಮಧ್ಯೆ

ಬಂಪರ್ ಟು ಬಂಪರ್ ಕವರ್ ಇದ್ದರೆ ಬಂಪರ್ ಟು ಬಂಪರ್ ಕವರ್ ಇಲ್ಲದೆ ಇದ್ದರೆ
100% ಕವರೇಜ್ ನೀಡುತ್ತದೆ ನಿಲ್(ಶೂನ್ಯ) ಡಿಪ್ರಿಸಿಯೇಷನ್ ಜೊತೆ ಕವರೇಜ್ ನೀಡುತ್ತದೆ ಆದರೆ ಡಿಪ್ರಿಸಿಯೇಶನ್ ಜೊತೆ
ಸ್ವಲ್ಪ ಹೆಚ್ಚು ಪ್ರೀಮಿಯಮ್ ಸ್ಟಾಂಡರ್ಡ್ ಪಾಲಿಸಿ ಪ್ರೀಮಿಯಮ್
5 ವರ್ಷಕ್ಕಿಂತ ಹೆಚ್ಚು ವಯಸ್ಸಿನ ವಾಹನಗಳನ್ನು ಕವರ್ ಮಾಡುವುದಿಲ್ಲ ಹಳೆಯ ವಾಹನಗಳನ್ನು ಕವರ್ ಮಾಡುತ್ತದೆ

ಇಲ್ಲಿ ಗಮನಿಸಬೇಕಾದದ್ದು ಏನು ಎಂದರೆ, ಖಂಡಿಯವಾಗಿಯೂ, ನೀವು ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ, ಬಂಪರ್ ಟು ಬಂಪರ್ ಆಡ್ - ಆನ್ ಅನ್ನು ಆಯ್ಕೆ ಮಾಡಿದರೆ, ಸ್ವಲ್ಪ ಹೆಚ್ಚು ಪ್ರೀಮಿಯಮ್ ಅನ್ನು ಪಾವತಿಸಬೇಕಾಗುತ್ತದೆ. ಲಾಭ ನಷ್ಟ ಇದ್ದೇ ಇರುತ್ತದೆ, ಆದರೆ ಇಲ್ಲಿ ನೀವು ಸ್ವಲ್ಪ ಹೆಚ್ಚು ಪ್ರೀಮಿಯಮ್ ಅನ್ನು ಪಾವತಿಸಿ ನೆಮ್ಮದಿಯಿಂದಿರಬಹುದು.

ಬಂಪರ್ ಟ್ ಬಂಪರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವ ಮೊದಲು ಈ ಅಂಶಗಳನ್ನು ಪರಿಗಣಿಸಿ

ಈ ಕವರ್ ಅನ್ನು ಆಯ್ಕೆ ಮಾಡುವ ಮೊದಲು, ಕೆಳಗಡೆ ನೀಡಿರುವ ಈ ಅಂಶಗಳನ್ನು ನೀವು ಪರಿಗಣಿಸಬೇಕಾಗುತ್ತದೆ:

ಕ್ಲೈಮ್ ಗಳ ಸಂಖ್ಯೆ: ನಿಮ್ಮ ಇನ್ಶೂರರ್, ನೀವು ಒಂದು ವರ್ಷದಲ್ಲಿ ಮಾಡಬಹುದಾದ ಕಾರ್ ಇನ್ಶೂರರ್ ಕ್ಲೈಮ್ ಗಳ ಸಂಖ್ಯೆಗೆ ಮಿತಿಯನ್ನು ಹೇರಬಹುದು. ಗ್ರಾಹಕರು ಪ್ರತೀ ಡೆಂಟಿಗೂ ಕ್ಲೈಮ್ ಫೈಲ್ ಮಾಡದೇ ಇರುವ ಹಾಗೆ ಇದನ್ನು ಮಾಡಲಾಗಿದೆ. ಅದಕ್ಕಾಗಿ, ನಿಮ್ಮ ಇನ್ಶೂರರ್ ನಿಮಗೆ ನೀಡುವ ಕ್ಲೈಮ್ ಗಳ ಸಂಖ್ಯೆಯನ್ನು ಪರಿಗಣಿಸಿ.

ಬೆಲೆ:  ಬಂಪರ್ ಟು ಬಂಪರ್ ಕವರ್ ಗೆ ಹೆಚ್ಚು ಪ್ರೀಮಿಯಮ್ ಇರಲು ಸ್ಪಷ್ಟವಾದ ಕಾರಣವಿದೆ. ಇದು ಡಿಪ್ರಿಸಿಯೇಷನ್ ಅನ್ನು ಪರಿಗಣಿಸದೆಯೇ ಸಂಪೂರ್ಣ ಕವರೇಜ್ ಅನ್ನು ನೀಡುತ್ತದೆ. ಅದ್ದರಿಂದಲೇ, ಇದಕ್ಕೆ ಸಮಗ್ರ ಕಾರು ಇನ್ಶೂರೆನ್ಸ್ ಪಾಲಿಸಿಗಿಂತ ಸ್ವಲ್ಪ ಹೆಚ್ಚು ಪ್ರೀಮಿಯಮ್ ಅನ್ನು ನೀಡಬೇಕಾಗುತ್ತದೆ.

ಹೊಸ ಕಾರುಗಳಿಗೆ ಲಭ್ಯ: ಇದು ಪ್ರಾಥಮಿಕವಾಗಿ ಹೊಸ ಅಥವಾ 5  ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರುಗಳಿಗೆ ಲಭ್ಯವಿದೆ. ಗ್ರಾಹಕರಿಗೂ ಇದು ಲಾಭದಾಯಕವಾಗಿದೆ; ಯಾಕೆಂದರೆ ತಮ್ಮ ಹೋಚ್ಚಹೊಸ ಕಾರಿನ ರಕ್ಷಣೆಗಾಗಿ ಸ್ವಲ್ಪ ಹೆಚ್ಚು ಪ್ರೀಮಿಯಮ್ ನೀಡಲು ಜನರು ಬೇಸರಪಡುವುದಿಲ್ಲ.

ಬಂಪರ್ ಟು ಬಂಪರ್ ಕಾರ್ ಇನ್ಶೂರೆನ್ಸ್ ನ ಲಾಭಗಳು

ನಿಮ್ಮ ಕಾರು ಒಂದು ಸಾಧಾರಣ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದು, ನಿಮ್ಮ ಕಾರಿಗೆ ಸುಮಾರು ರೂ. 15000 ವೆಚ್ಚದ ಹಾನಿಯಾಗಿದ್ದರೆ, ನಿಮಗೆ ಸುಲಭದಲ್ಲಿ ಈ ಮೊತ್ತದ 50% ಅನ್ನು ನಿಮ್ಮ ಜೇಬಿನಿಂದಲೇ ನೀಡಬೇಕಾಗುತ್ತದೆ ಹಾಗೂ ಹಾನಿಯಾದ ಭಾಗಗಳ ಡಿಪ್ರಿಸಿಯೇಷನ್ ಮಾರುಕಟ್ಟೆ ಮೌಲ್ಯ ಪಡೆದ ನಂತರ, ನಿಮ್ಮ ಇನ್ಶೂರೆನ್ಸ್ ಕಂಪನಿ ನಿಮಗೆ ಉಳಿದ ಮೊತ್ತವನ್ನಷ್ಟೇ ನೀಡಬಲ್ಲದು. ಡಿಪ್ರಿಸಿಯೇಷನ್ ಎಂದರೆ ನಿಮ್ಮ ಕಾರಿನ ನಿಯಮಿತ ಸವೆತ ಅಥವಾ ಹಾನಿಯಿಂದಾಗುವ ಮೌಲ್ಯದ ಕುಸಿತವಾಗಿದೆ.

  • ಫೈಬರ್ ಗ್ಲಾಸ್ ಭಾಗಗಳು - 30% ಡಿಪ್ರಿಸಿಯೇಷನ್ ಕಡಿತ
  • ರಬ್ಬರ್, ಪ್ಲಾಸ್ಟಿಕ್ ಭಾಗಗಳು, ರಬ್ಬರ್ ಮತ್ತು ಬ್ಯಾಟರಿಗಳು - 50%  ಡಿಪ್ರಿಸಿಯೇಷನ್ ಕಡಿತ
  • ಗಾಜಿನಿಂದ ತಯಾರಿಸಿದ ಭಾಗಗಳು - ಶೂನ್ಯ

ಈ ಚಿತ್ರಣ ನಿರಾಶಾದಾಯಕವಾಗಿದೆ, ಅದಕ್ಕಾಗಿಯೇ ಸಾಮಾನ್ಯರಲ್ಲಿ ಸಾಧರಣ ವಾಹನ ಇನ್ಶೂರೆನ್ಸ್ ಗೆ ಹೊಲಿಸಿದರೆ ಬಂಪರ್ ಟು ಬಂಪರ್ ಕವರ್ ಹೆಚ್ಚು ಹೆಚ್ಚು ಜನಪ್ರಿಯತೆಯನ್ನು ಹೊಂದುತ್ತಿದೆ.

ಡಿಜಿಟ್ ಇನ್ಶೂರೆನ್ಸ್ ನಂತಹ ವಿಶ್ವಾಸಾರ್ಹ ಇನ್ಶೂರೆನ್ಸ್ ಕಂಪನಿಗಳು ತಮ್ಮ ಸಮಗ್ರ ಪಾಲಿಸಿಯ ಜೊತೆ ಈ ಆಡ್ - ಆನ್ ಕವರ್ ಅನ್ನು ನೀಡಿ, ತಮ್ಮ ಗ್ರಾಹಕರಿಗೆ ಅವರ ಪಾಲಿಸಿಯ ಸಂಪೂರ್ಣ ಲಾಭ ಪಡೆಯುವ ಹಾಗೆ ಮಾಡುತ್ತವೆ.

ಈಗ ನಿಮ್ಮ ವಾಹನದ ಇನ್ಶೂರೆನ್ಸ್ ಜೀರೋ ಡಿಪ್ರಿಸಿಯೇಷನ್ ಇನ್ಶೂರೆನ್ಸ್ ಅಗಿದ್ದು, ನಿಮ್ಮ ಕಾರಿಗೆ ಸುಮಾರು ರೂ 15000 ದ ಹಾನಿಯಾದರೆ, ನಿಮಗೆ ಡಿಪ್ರಿಸಿಯೇಷನ್ ಮೇಲೆ ಯಾವುದೇ ಕಡಿತವಿಲ್ಲದೆ ಎಲ್ಲಾ ಫೈಬರ್, ರಬ್ಬರ್ ಹಾಗೂ ಮೆಟಲ್ ಭಾಗಗಳ ಮೇಲೆ ಸಂಪೂರ್ಣ (100%)  ಕವರೇಜ್ ಸಿಗುತ್ತದೆ.

ಎಲ್ಲಾ ಲಾಭದಾಯಕ ಕೊಡುಗೆಗಳ ಹಾಗೇ, ಬಂಪರ್ ಟು ಬಂಪರ್ ಕವರ್ ಜೊತೆಗಿನ ಪಾಲಿಸಿಯು ತನ್ನದೇ ಆದ ಮಿತಿಗಳ ಜೊತೆ ಬರುತ್ತದೆ:

ಬಂಪರ್ ಟು ಬಂಪರ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುವುದಿಲ್ಲ

  • ನಿಮ್ಮ ಕಾರಿನ ವಯಸ್ಸು 5 ವರ್ಷ ಅಥವಾ ಹೆಚ್ಚಿದ್ದರೆ, ಅದು ಈ ಕವರ್ ಗೆ ಅರ್ಹ ಆಗಿರುವುದಿಲ್ಲ.
  • ನಿಮ್ಮ ಕಾರು ಯಾವುದಾದರೂ ಕಾನೂನುಬಾಹಿರ ಅಥವಾ ಅನೈತಿಕ ಚಟುವಟಿಕೆಯ ಭಾಗವಾಗಿರುವುದು ವರದಿಯಾಗಿದ್ದರೆ, ಇನ್ಶೂರೆನ್ಸ್ ಕಂಪೆನಿಯು ನಿಮ್ಮ ಕ್ಲೈಮ್ ಅನ್ನು ಸ್ವೀಕರಿಸುವುದಿಲ್ಲ
  • ಖಾಸಗಿ ವಾಹನದ ವಾಣಿಜ್ಯ ಬಳಕೆ 
  • ಕೆಲವು ಎಂಜಿನ್ ಹಾನಿ, ಬ್ಯಾಟರಿ/ಟಯರ್/ಕ್ಲಚ್ ಪ್ಲೇಟ್/ಬೇರಿಂಗ್ ಗಳ ಹಾನಿ
  • ಕಾರು ಹಾನಿಯ ಸಮಯದಲ್ಲಿ ಚಾಲಕನು ಡ್ರಗ್ಸ್ ಸೇವನೆ ಅಥವಾ ಮಧ್ಯಪಾನ ಮಾಡಿದ್ದರೆ
  • ವಾಹನದ ದಾಖಲೆಗಳು ಅಪೂರ್ಣವಾಗಿದ್ದರೆ
  • ಕ್ಲೈಮ್ ಅನ್ನು ಪಾಲಿಸಿಯ ಕಾಲಮಿತಿಯೊಳಗೆ ಮಾಡದೇ ಇದ್ದರೆ
  • ಇನ್ಶೂರ್ ಆಗಿರದ ತೊಂದರೆಗಳಿಂದ ಆದ ಹಾನಿ
  • ಯಾಂತ್ರಿಕ ಕುಸಿತದಿಂದ ಆದ ಹಾನಿ
  • ಬಿಡಿಭಾಗಗಳು, ಗ್ಯಾಸ್ ಕಿಟ್, ಟಯರ್ ಗಳಿಗಾದಂತಹ ಹಾನಿ

 

ನೀವು ಬಂಪರ್ ಟು ಬಂಪರ್ ‘ಆಡ್ - ಆನ್ ಕವರ್ ಅನ್ನು ಆಯ್ಕೆ ಮಾಡಿದಾಗ, ನೀವು ಮಾನಸಿಕ ನೆಮ್ಮದಿಯನ್ನು ಆಯ್ಕೆ ಮಾಡುತ್ತೀರಿ. ನೀವು ನಿಮ್ಮ ವಾಹನ ಹಾಗೂ ಜೇಬು ಎರಡಕ್ಕೂ ಅನಿರೀಕ್ಷಿತ ಸಂದರ್ಭಗಳಿಂದ ಸಂಪೂರ್ಣ ಸಂರಕ್ಷಣೆ ನೀಡುತ್ತೀರಿ. ಇದುನಿಮಗೆ ಅನಿರೀಕ್ಷಿತ ಘಟನೆಗಳಿಂದ ರಕ್ಷಣೆ ನೀಡುವ ಛತ್ರಿಯಂತಿದ್ದು, ನಿಮ್ಮನ್ನು ಬೇಡದ ವೆಚ್ಚಗಳಿಂದ ಕಾಪಾಡುತ್ತದೆ. ನಿಮ್ಮ ಪಾಲಿಸಿಯೊಂದಿಗೆ ಇದನ್ನು ಆಯ್ಕೆ ಮಾಡಿ ನಿಮ್ಮ ಕಾರು ಹಾಗೂ ನಿಮ್ಮ ಜೇಬಿಗಾಗಿ ಜಾಣತನದ ನಿರ್ಧಾರವನ್ನು ಮಾಡಿ.

ಬಂಪರ್ ಟು ಬಂಪರ್ ಇನ್ಶೂರೆನ್ಸ್ ನ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಅಪಘಾತದ ವರದಿಯನ್ನು 24 ಘಂಟೆಗಳ ಮುಂಚೆ ನೀಡದಿದ್ದರೆ ಏನಾಗುವುದು?

ನೀವು ಅಪಘಾತಕ್ಕೀಡಾಗಿದ್ದರೆ ಅದನ್ನು ತಕ್ಷಣೆವೇ, ಅಂದರೆ ಇನ್ಶೂರರ್ ನೀಡಿರುವ ಕಾಲಮಿತಿಯೊಳಗೆಯೇ, ವರದಿ ಮಾಡಬೇಕು. ಹಾಗೇ ಮಾಡದೇ ಇದ್ದಲ್ಲಿ, ನಿಮ್ಮ ಕಾರ್ ಇನ್ಶೂರೆನ್ಸ್ ಕ್ಲೈಮ್ ಅನ್ನು ತಿರಸ್ಕರಿಸಲಾಗುವುದು.

ನನ್ನ ಕಾರನ್ನು ಒಂದು ಅಪಘಾತದಲ್ಲಿ ನಾನೇ ಹಾನಿಗೀಡು ಮಾಡಿದ್ದರೆ ಬಂಪರ್ ಟು ಬಂಪರ್ ಇನ್ಶೂರೆನ್ಸ್ ಕ್ಲೈಮ್ ಮಾಡಬಹುದೇ?

ಹೌದು, ನಿಮ್ಮ ಇನ್ಶೂರೆನ್ಸ್ ಜೊತೆಯಲ್ಲಿರುವ ಬಂಪರ್ ಟು ಬಂಪರ್ ಕವರ್ ನಿಮ್ಮ ಕ್ಲೈಮ್ ಪಾವತಿ ಸಮಯದಲ್ಲಿ ಡಿಪ್ರಿಸಿಯೇಷನ್ ಅನ್ನು ಪರಿಗಣಿಸುವುದಿಲ್ಲ ಎಂದಷ್ಟೇ ಹೇಳುತ್ತದೆ. ನಿಮ್ಮ ಸ್ವಂತ ಹಾನಿಗಳು ಇದರಲ್ಲಿ ಖಂಡಿತವಾಗಿಯೂ ಕವರ್ ಆಗುತ್ತದೆ.

ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಯಾಗಿದ್ದ ನನ್ನ ಕಾರಿಗೆ ಯಾರೋ ಡಿಕ್ಕಿ ಹೊಡೆದಿದ್ದಾರೆ, ಬಂಪರ್ ಟು ಬಂಪರ್ ಕವರ್ ನನ್ನ ಹಾನಿಗಳನ್ನು ಕವರ್ ಮಾಡುವುದೇ?

ಹೌದು, ನಿಮ್ಮ ಕಾರ್ ಇನ್ಶೂರೆನ್ಸ್ ನಲ್ಲಿರುವ ಇರುವ ಸ್ವಂತ ಡ್ಯಾಮೇಜ್ ಕವರ್ ಈ ಹಾನಿಗಳನ್ನು ಕವರ್ ಮಾಡುತ್ತದೆ. ಬಂಪರ್ ಟು ಬಂಪರ್ ಕವರ್ ನಿಮ್ಮ ಕ್ಲೈಮ್ ಪಾವತಿ ಸಮಯದಲ್ಲಿ ಡಿಪ್ರಿಸಿಯೇಷನ್ ಅನ್ನು ಪರಿಗಣಿಸುವುದಿಲ್ಲ ಎಂದಷ್ಟೇ ಹೇಳುತ್ತದೆ

ಕಾರ್ ಇನ್ಶೂರೆನ್ಸ್ ಅಡಿಯಲ್ಲಿ ಕಾರ್ ಬಂಪರ್ ಕವರ್ ಆಗಿದೆಯೇ

ಹೌದು, ನೀವು ಕಾಂಪ್ರೆಹೆನ್ಸಿವ್  ಕಾರ್ ಇನ್ಶೂರೆನ್ಸ್ ಅಥವಾ ಸ್ವಂತ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿದ್ದರೆ, ನಿಮ್ಮ ಕಾರ್ ಬಂಪರ್ ಕವರ್ ಆಗಿರುತ್ತದೆ.