ಟಾಟಾ ಪಂಚ್ ಕಾರ್ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

source

ಸ್ವದೇಶದಲ್ಲಿ ಬೆಳೆದ ಆಟೋ ಮೇಜರ್ ಟಾಟಾ ಮೋಟಾರ್ಸ್ ಲಿಮಿಟೆಡ್, 2021 ರ ಹಬ್ಬದ ಸೀಸನ್‌ನಲ್ಲಿ ತನ್ನ ಮೈಕ್ರೋ ಎಸ್‌ಯುವಿ ಪಂಚ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಸ್ಥಳೀಯ ಆಟೋಮೇಕರ್‌ಗಳು ಪಂಚ್‌ಗಾಗಿ ಹಲವಾರು ವೇರಿಯಂಟ್‌ಗಳನ್ನು ನೀಡಲಿದ್ದಾರೆ. 

ಆದ್ದರಿಂದ, ನೀವು ಈ ಮಾಡೆಲ್ ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ಯಾವುದೇ ಹಾನಿಯಿಂದಾಗಿ ಹಣಕಾಸಿನ ನಷ್ಟವನ್ನು ತ್ವರಿತವಾಗಿ ನಿಭಾಯಿಸಲು, ಟಾಟಾ ಪಂಚ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಕಡ್ಡಾಯವಾಗಿದೆ.

ಮೋಟಾರ್ ವೆಹಿಕಲ್ಸ್ ಆ್ಯಕ್ಟ್ 1988 ರ ಪ್ರಕಾರ, ಯಾವುದೇ ಥರ್ಡ್ ಪಾರ್ಟಿ ಹಾನಿಯಿಂದ ಉಂಟಾಗುವ ವೆಚ್ಚವನ್ನು ತಪ್ಪಿಸಲು, ಎಲ್ಲಾ ಭಾರತೀಯ ಕಾರು ಮಾಲೀಕರು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಕಡ್ಡಾಯವಾಗಿದೆ. ಆದಾಗ್ಯೂ, ಹೆಚ್ಚಿನ ಕಾರ್ ಮಾಲೀಕರು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯನ್ನು ಇಷ್ಟಪಡುತ್ತಾರೆ. ಏಕೆಂದರೆ ಇದು ಥರ್ಡ್ ಪಾರ್ಟಿ ಲಯಬಿಲಿಟಿಗಳನ್ನು ಮತ್ತು ಓನ್ ಡ್ಯಾಮೇಜ್, ಎರಡನ್ನೂ ಕವರ್ ಮಾಡುತ್ತದೆ.

ಕೈಗೆಟುಕುವ ಮತ್ತು ಲಾಭದಾಯಕವಾದ ಟಾಟಾ ಪಂಚ್ ಇನ್ಶೂರೆನ್ಸ್‌ಗಾಗಿ ನೀವು ದೇಶದ ಪ್ರಮುಖ ಕಾರ್ ಇನ್ಶೂರೆನ್ಸ್ ಪೂರೈಕೆದಾರರಲ್ಲಿ ಒಂದಾದ ಡಿಜಿಟ್ ಅನ್ನು ಪ್ರಮುಖವಾಗಿ ಪರಿಗಣಿಸಬಹುದು.

ಟಾಟಾ ಪಂಚ್ ಕಾರ್ ಇನ್ಶೂರೆನ್ಸ್‌ನ ರಿನೀವಲ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಕಾಂಪ್ರೆಹೆನ್ಸಿವ್ ಪಾಲಿಸಿಗಾಗಿ)
ಜುಲೈ-2018 5,306
ಜುಲೈ-2017 5,008
ಜುಲೈ-2016 4,710

** ಡಿಸ್‌ಕ್ಲೈಮರ್ - ಟಾಟಾ ಟಿಯಾಗೊ ಮಾಡೆಲ್ HTP ಪೆಟ್ರೋಲ್ 1199 ಗಾಗಿ ಪ್ರೀಮಿಯಂ ಕ್ಯಾಲ್ಕುಲೇಶನ್ ಅನ್ನು ಮಾಡಲಾಗಿದೆ. ಜಿಎಸ್‌ಟಿಯನ್ನು ಹೊರತುಪಡಿಸಲಾಗಿದೆ.

ನಗರ - ಬೆಂಗಳೂರು, ಪಾಲಿಸಿಯ ಮುಕ್ತಾಯ ದಿನಾಂಕ - 31 ಜುಲೈ, ಎನ್‌ಸಿಬಿ - 50%, ಯಾವುದೇ ಆ್ಯಡ್-ಆನ್‌ಗಳಿಲ್ಲ. ಪ್ರೀಮಿಯಂ ಕ್ಯಾಲ್ಕುಲೇಶನ್ ಅನ್ನು ಜುಲೈ-2020 ರಲ್ಲಿ ಮಾಡಲಾಗಿದೆ. ದಯವಿಟ್ಟು ನಿಮ್ಮ ವೆಹಿಕಲ್‌ನ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಫೈನಲ್ ಪ್ರೀಮಿಯಂ ಅನ್ನು ಚೆಕ್ ಮಾಡಿ.

ಟಾಟಾ ಪಂಚ್ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ

ನೀವು ಡಿಜಿಟ್‌ನ ಟಾಟಾ ಪಂಚ್ ಕಾರ್‌ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಟಾಟಾ ಪಂಚ್ ಕಾರ್‌ಗಾಗಿ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದ ಕಾರಣದಿಂದಾಗಿ ಸ್ವಂತ ಕಾರ್‌ಗೆ ಉಂಟಾಗುವ ಹಾನಿ/ನಷ್ಟಗಳು

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರ್‌ಗೆ ಉಂಟಾಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರ್‌ಗೆ ಉಂಟಾಗುವ ಹಾನಿ/ನಷ್ಟಗಳು

×

ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ

×

ವೈಯಕ್ತಿಕ ಅಪಘಾತದ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಸಾವು

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಸಾವು

×

ನಿಮ್ಮ ಕಾರ್‌ನ ಕಳ್ಳತನ

×

ಡೋರ್‌ಸ್ಟೆಪ್ ಪಿಕಪ್ ಮತ್ತು ರಿಪೇರಿ

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್‌ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ

ಕ್ಲೈಮ್ ಸಲ್ಲಿಸುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!

ಹಂತ 1

1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸ್ವಯಂ ತಪಾಸಣೆಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ಮರುಪಾವತಿ ಅಥವಾ ಕ್ಯಾಶ್‌ಲೆಸ್ ಆಯ್ಕೆಗಳೆರಡರಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಡಿಜಿಟ್‌ನ ಟಾಟಾ ಪಂಚ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಕಾರಣಗಳು?

ಡಿಜಿಟ್‌ನಂತಹ ವಿಶ್ವಾಸಾರ್ಹ ಮತ್ತು ಆ್ಯಕ್ಸೆಸ್ ಮಾಡಬಹುದಾದ ಇನ್ಶೂರೆನ್ಸ್ ಪೂರೈಕೆದಾರರು, ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಲು ಅಥವಾ ರಿನೀವಲ್ ಮಾಡಲು ತೊಂದರೆ-ಮುಕ್ತ ಪ್ರಕ್ರಿಯೆಗಳನ್ನು ಹೊಂದಿದ್ದಾರೆ. 

ಕೆಳಗಿನ ಕಾರಣಗಳು ಈ ಇನ್ಶೂರೆನ್ಸ್ ಕಂಪನಿಯನ್ನು ದೇಶದ ಪ್ರಮುಖ ಇನ್ಶೂರೆನ್ಸ್ ಪೂರೈಕೆದಾರರಲ್ಲಿ ಒಬ್ಬರನ್ನಾಗಿ ಮಾಡುತ್ತದೆ.

  1. ಅಧಿಕ ಕ್ಲೈಮ್ ಸೆಟಲ್‌ಮೆಂಟ್ ರೇಶಿಯೋವನ್ನು ನೀಡುತ್ತದೆ - ಅಧಿಕ ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವುದರ ಜೊತೆಗೆ, ಡಿಜಿಟ್, ತನ್ನ ಗ್ರಾಹಕರು ಹೆಚ್ಚಿನ ಕ್ಲೈಮ್ ಸೆಟಲ್‌ಮೆಂಟ್ ರೇಶಿಯೋವನ್ನು ಪಡೆಯುತ್ತಾರೆ ಎಂಬುದನ್ನು ಖಚಿತಪಡಿಸುತ್ತದೆ (ಅಂದರೆ, ಮಾಡಿರುವ ಕ್ಲೈಮ್‌ಗಳ ಸಂಖ್ಯೆಗೆ ಇತ್ಯರ್ಥಗೊಂಡ ಕ್ಲೈಮ್‌ಗಳ ಸಂಖ್ಯೆಯ ಅನುಪಾತ). ಅಲ್ಲದೆ, ತೊಂದರೆ-ಮುಕ್ತ ಅನುಭವಕ್ಕಾಗಿ, ಇದು ತ್ವರಿತ ಪರಿಹಾರವನ್ನು ಸಹ ನೀಡುತ್ತದೆ.

  1. ಡಿಜಿಟಲೈಸ್ಡ್ ಪ್ರೊಸೆಸಿಂಗ್ ಸಿಸ್ಟಮ್‌ಗಳನ್ನು ವಿಸ್ತರಿಸುತ್ತದೆ - ಟಾಟಾ ಪಂಚ್ ಕಾರ್ ಇನ್ಶೂರೆನ್ಸ್‌ಗಾಗಿ, ಡಿಜಿಟ್ 100% ಡಿಜಿಟಲ್ ಪ್ರಕ್ರಿಯೆಗಳನ್ನು ಹೊಂದಿರುವುದರಿಂದ, ಜನರು ತಮ್ಮ ಸಮಯವನ್ನು ಉಳಿಸಬಹುದು. ಇದಲ್ಲದೆ, ಪ್ರಕ್ರಿಯೆಯನ್ನು ಸುಗಮಗೊಳಿಸಲು ಇದು ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ-ತಪಾಸಣಾ ವಿಧಾನವನ್ನು ಹೊಂದಿದೆ. 

ಸೂಚನೆ : ಪ್ರಕ್ರಿಯೆಯನ್ನು ವೇಗಗೊಳಿಸಲು ಪಾಲಿಸಿದಾರರು ತಮ್ಮ ವೆಹಿಕಲ್‌ಗಳಿಗೆ ಸಂಭವಿಸಿದ ಹಾನಿಗಳ ಇಮೇಜುಗಳನ್ನು ಕಳುಹಿಸಬೇಕು.

  1. ಐಡಿವಿಯನ್ನು ಕಸ್ಟಮೈಸ್ ಮಾಡುವ ಆಯ್ಕೆಗಳು - ಇನ್ಶೂರೆನ್ಸ್ ಪಾಲಿಸಿಯಿಂದ ಡೆಪ್ರಿಸಿಯೇಶನ್ ವೆಚ್ಚವನ್ನು ಡಿಡಕ್ಟ್ ಮಾಡಿದ ನಂತರ ಡಿಜಿಟ್, ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ಸೆಟ್ ಮಾಡುತ್ತದೆ. ಆದಾಗ್ಯೂ, ಡಿಜಿಟ್ ತನ್ನ ಗ್ರಾಹಕರಿಗೆ ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ಈ ಐಡಿವಿಯನ್ನು ಕಸ್ಟಮೈಸ್ ಮಾಡಿಕೊಳ್ಳುವ ಆಯ್ಕೆಯನ್ನು ನೀಡುತ್ತದೆ. ಈ ರೀತಿಯಾಗಿ, ಪಾಲಿಸಿದಾರರು ತಮ್ಮ ಕಾರ್ ಕಳುವಾದರೆ ಅಥವಾ ಸರಿಪಡಿಸಲಾಗದ ಹಾನಿಗಳನ್ನು ಹೊಂದಿದ್ದರೆ, ಸೂಕ್ತ ಪರಿಹಾರದ ಮೊತ್ತವನ್ನು ಪಡೆದುಕೊಳ್ಳಬಹುದು.

  1. ಆ್ಯಡ್-ಆನ್ ಪ್ರಯೋಜನಗಳನ್ನು ನೀಡುತ್ತದೆ - ಪಂಚ್ ಕಾರ್ ಇನ್ಶೂರೆನ್ಸ್ ಬೆಲೆಯಲ್ಲಿ ಕನಿಷ್ಠ ಹೆಚ್ಚಳದ ವಿರುದ್ಧ ಅನೇಕ ಹೆಚ್ಚುವರಿ ಪ್ರಯೋಜನಗಳನ್ನು, ಡಿಜಿಟ್ ನೀಡುತ್ತದೆ. ಅವುಗಳಲ್ಲಿ ಕೆಲವು ಹೀಗಿವೆ

  • ಝೀರೋ ಡೆಪ್ರಿಸಿಯೇಶನ್ ಕವರ್

  • ರೋಡ್ ಸೈಡ್ ಅಸಿಸ್ಟೆನ್ಸ್

  • ಎಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಷನ್

  • ರಿಟರ್ನ್ ಟು ಇನ್‌ವಾಯ್ಸ್ ಕವರ್

  • ಕನ್ಸ್ಯೂಮೆಬಲ್ ಕವರ್ ಮತ್ತು ಇನ್ನಷ್ಟು

  1. ಆಯ್ಕೆ ಮಾಡಲು 5800 ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳು - ನೀವು ದೇಶದೊಳಗೆ ಎಲ್ಲಿದ್ದೀರಿ ಎಂಬುದನ್ನು ಲೆಕ್ಕಿಸದೆ, ಡಿಜಿಟ್‌ನ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳು ಎಲ್ಲೆಡೆಯೂ ಲಭ್ಯವಿವೆ. ಈ ಎಲ್ಲಾ ನೆಟ್‌ವರ್ಕ್ ವರ್ಕ್‌ಸ್ಟೇಷನ್‌ಗಳು ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ಯಾವುದೇ ಹಾನಿಗಾಗಿ ಕ್ಯಾಶ್‌ಲೆಸ್ ರಿಪೇರಿಗಳನ್ನು ಒದಗಿಸುತ್ತವೆ.

  1. ಡೋರ್‌ಸ್ಟೆಪ್ ಪಿಕ್-ಅಪ್, ಡ್ರಾಪ್ ಮತ್ತು ರಿಪೇರಿ ಸೌಲಭ್ಯ - ನಿಮ್ಮ ಪಂಚ್ ಕಾರ್ ಅನ್ನು ನಿಮ್ಮ ಹತ್ತಿರದ ಡಿಜಿಟ್ ನೆಟ್‌ವರ್ಕ್ ಗ್ಯಾರೇಜ್‌ಗೆ ಕೊಂಡೊಯ್ಯುವ ಸ್ಥಿತಿಯಲ್ಲಿ ಇಲ್ಲದಿದ್ದರೆ, ಡೋರ್‌ಸ್ಟೆಪ್ ಕಾರ್ ಪಿಕ್-ಅಪ್, ರಿಪೇರಿ ಮತ್ತು ಡ್ರಾಪ್ ಸೇವೆಯನ್ನು ಆಯ್ಕೆ ಮಾಡುವ ಮೂಲಕ ಇಂತಹ ತೊಂದರೆಗಳನ್ನು ತಪ್ಪಿಸಿ.

  1. 24X7 ಕಸ್ಟಮರ್ ಸಪೋರ್ಟ್ ಲಭ್ಯತೆ - ಅಪಘಾತಗಳು ಅತ್ಯಂತ ಅನಿರೀಕ್ಷಿತ ಸಮಯದಲ್ಲಿ ಸಂಭವಿಸಬಹುದು. ಹೀಗಾಗಿ, ಸಂಕಷ್ಟದ ಸಮಯದಲ್ಲೂ ನಿಮ್ಮ ಸೇವೆಯಲ್ಲಿರಲು, ಡಿಜಿಟ್ ನಿಮಗಾಗಿ 24X7 ಕಸ್ಟಮರ್ ಸಪೋರ್ಟ್‌ಗಳನ್ನು ವಿಸ್ತರಿಸುತ್ತದೆ. ಟಾಟಾ ಪಂಚ್ ಇನ್ಶೂರೆನ್ಸ್ ರಿನೀವಲ್ ಅಥವಾ ಖರೀದಿ ಪ್ರಕ್ರಿಯೆಗಳಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳಿಗೆ, ಎಕ್ಸಿಕ್ಯೂಟಿವ್‌ಗಳು ಸಂತೋಷದಿಂದ ಉತ್ತರಿಸುತ್ತಾರೆ.

ಡಿಜಿಟ್‌ನ ವೆಚ್ಚ-ಪರಿಣಾಮಕಾರಿ ಟಾಟಾ ಪಂಚ್ ಕಾರ್ ಇನ್ಶೂರೆನ್ಸ್, 100% ಗ್ರಾಹಕರ ತೃಪ್ತಿ ಪಡಿಸಲು, ಈ ಎಲ್ಲಾ ಫೀಚರ್‌ಗಳು ಮತ್ತು ಪ್ರಯೋಜನಗಳನ್ನು ಒಳಗೊಂಡಿದೆ.

ಅದೇನೇ ಇದ್ದರೂ, ಕೆಲವು ಇನ್ಶೂರೆನ್ಸ್ ಪೂರೈಕೆದಾರರನ್ನು ಶಾರ್ಟ್‌ಲಿಸ್ಟ್ ಮಾಡಲು ಮತ್ತು ಅವರ ಫೀಚರ್‌ಗಳನ್ನು ಹೋಲಿಸುವಂತೆ ಯಾವಾಗಲೂ ಶಿಫಾರಸು ಮಾಡಲಾಗುತ್ತದೆ. ನಂತರ, ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಅವಶ್ಯಕತೆಗಳಿಗೆ ಅನುಗುಣವಾಗಿ ಹೆಚ್ಚು ಸೂಕ್ತವಾದ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಟಾಟಾ ಪಂಚ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು/ರಿನೀವಲ್ ಮಾಡುವುದು ಏಕೆ ಮುಖ್ಯ?

ಟಾಟಾ ಪಂಚ್ ಇನ್ಶೂರೆನ್ಸ್ ವೆಚ್ಚವನ್ನು ಭರಿಸುವುದು ನಿಮಗೆ ಭಾರಿ ಪೆನಲ್ಟಿಗಳು ಮತ್ತು ವೆಚ್ಚಗಳನ್ನು ಇತ್ಯರ್ಥಪಡಿಸುವುದಕ್ಕಿಂತ ಹೆಚ್ಚು ಕೈಗೆಟುಕುವಂತಿದೆ. 

ಆದರೆ ಯಾಕೆ? ಓದುವುದನ್ನು ಮುಂದುವರೆಸಿ

  1.  ಫೈನಾನ್ಸಿಯಲ್ ಲಯಬಿಲಿಟಿಗಳ ವಿರುದ್ಧ ರಕ್ಷಣೆ - ಟಾಟಾ ಪಂಚ್ ಇನ್ಶೂರೆನ್ಸ್ ಪಾಲಿಸಿಯ ಪ್ರಾಥಮಿಕ ಉದ್ದೇಶವು ಅಪಘಾತದ ಸಂದರ್ಭದಲ್ಲಿ ಉಚಿತ ರಿಪೇರಿ ಅಥವಾ ರಿಇಂಬರ್ಸಮೆಂಟ್ ನೀಡುವುದು. ಟಾಟಾ ಪಂಚ್ ಇನ್ನೂ ಮಾರುಕಟ್ಟೆಗೆ ಬಿಡುಗಡೆಯಾಗದಿರುವುದರಿಂದ, ರಿಪೇರಿ ಮತ್ತು ಬಿಡಿಭಾಗಗಳ ವೆಚ್ಚವು ಹೆಚ್ಚಿರಬಹುದೆಂದು ನಿರೀಕ್ಷಿಸಬಹುದು. ಹಾಗಾಗಿ, ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಒಂದು ಬುದ್ಧಿವಂತ ಹೆಜ್ಜೆಯಾಗುತ್ತದೆ.

  1. ಥರ್ಡ್-ಪಾರ್ಟಿ ಲಯಬಿಲಿಟಿಗಳ ವಿರುದ್ಧ ರಕ್ಷಣೆ - ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ಯಾವುದೇ ಥರ್ಡ್ ಪಾರ್ಟಿ ಹಾನಿಯ ವಿರುದ್ಧ ನಿಮಗೆ ರಕ್ಷಣೆಯನ್ನು ಖಾತ್ರಿಗೊಳಿಸುತ್ತದೆ. ಅದು ವ್ಯಕ್ತಿಯಾಗಿರಬಹುದು ಅಥವಾ ಆಸ್ತಿಯಾಗಿರಬಹುದು. ಈ ಪಾಲಿಸಿಯು ನಿಮ್ಮ ಕಾರಿನಿಂದ ಥರ್ಡ್ ಪಾರ್ಟಿ ವ್ಯಕ್ತಿಗಳಿಗೆ ಅಥವಾ ಅವರ ಆಸ್ತಿಗಳಿಗೆ ಉಂಟಾದ ಎಲ್ಲಾ ಹಾನಿಯ ವೆಚ್ಚಗಳನ್ನು ಕವರ್ ಮಾಡುತ್ತದೆ.

  1. ಕಾಂಪ್ರೆಹೆನ್ಸಿವ್ ಕವರ್‌ನೊಂದಿಗೆ ಹೆಚ್ಚುವರಿ ರಕ್ಷಣೆ - ವ್ಯಕ್ತಿಗಳು ತಮ್ಮ ಪಂಚ್‌ಗಾಗಿ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ರಕ್ಷಣೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಓನ್ ಕಾರ್ ಡ್ಯಾಮೇಜ್ ಮತ್ತು ಥರ್ಡ್ ಪಾರ್ಟಿ ಲಯಬಿಲಿಟಿಗಳ ಹೊರತಾಗಿ, ಈ ಪಾಲಿಸಿಯು ಬೆಂಕಿ, ಕಳ್ಳತನ, ಮಾನವ ನಿರ್ಮಿತ ವಿಪತ್ತುಗಳು, ನೈಸರ್ಗಿಕ ವಿಕೋಪಗಳು, ವಿಧ್ವಂಸಕತೆ ಮತ್ತು ಹೆಚ್ಚಿನವುಗಳಿಂದ ಉಂಟಾಗುವ ಹಾನಿಗಳನ್ನು ವಿಶಾಲವಾಗಿ ಕವರ್ ಮಾಡುತ್ತದೆ.

  1. ಪೆನಲ್ಟಿಗಳ ವಿರುದ್ಧ ರಕ್ಷಣೆ - ಕಾರ್ ಇನ್ಶೂರೆನ್ಸ್ ಪಾಲಿಸಿಯು ವೆಹಿಕಲ್ ಮಾಲೀಕರನ್ನು ಭಾರಿ ದಂಡದಿಂದ ಮತ್ತು ಡ್ರೈವಿಂಗ್ ಲೈಸೆನ್ಸ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರಿಂದ ಉಳಿಸುತ್ತದೆ. ಮೋಟಾರ್ ವೆಹಿಕಲ್ಸ್ ಆ್ಯಕ್ಟ್ 2019 ರ ಪ್ರಕಾರ, ಇನ್ಶೂರೆನ್ಸ್ ಇಲ್ಲದೆ ಚಾಲನೆ ಮಾಡುವ ಪ್ರತಿಯೊಬ್ಬ ಭಾರತೀಯ ಕಾರ್ ಮಾಲೀಕರು ₹ 2000 ವರೆಗಿನ ದಂಡವನ್ನು ಅಥವಾ 3 ತಿಂಗಳವರೆಗೆ ಜೈಲು ಶಿಕ್ಷೆಯನ್ನು ನೀಡಬಹುದು. ಈ ದಂಡದ ಮೊತ್ತವು ಮೊದಲ ಬಾರಿಯ ಅಪರಾಧಗಳಿಗೆ ಮಾತ್ರ ಎರಡನೇ ಬಾರಿ ಪುನರಾವರ್ತನೆಯಾದರೆ, ಅವರು ₹4000 ಗಳ ದಂಡ ಅಥವಾ 3 ತಿಂಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ.

  1. ನೋ ಕ್ಲೈಮ್ ಬೋನಸ್ ಪ್ರಯೋಜನಗಳು - ಕಾರ್ ಇನ್ಶೂರೆನ್ಸ್ ಪಾಲಿಸಿದಾರರು ತಮ್ಮ ಟಾಟಾ ಪಂಚ್ ಇನ್ಶೂರೆನ್ಸ್ ಪಾಲಿಸಿಯನ್ನು ಸಮಯಕ್ಕೆ ಸರಿಯಾಗಿ ರಿನೀವಲ್ ಮಾಡಿದರೆ, ನೋ-ಕ್ಲೈಮ್ ಬೋನಸ್ ಪ್ರಯೋಜನಗಳನ್ನು ಆನಂದಿಸಲು ಅರ್ಹರಾಗಿರುತ್ತಾರೆ. ಅವರು ಪ್ರತಿ ನಾನ್-ಕ್ಲೈಮ್ ವರ್ಷಕ್ಕೆ ತಮ್ಮ ಪಂಚ್ ಇನ್ಶೂರೆನ್ಸ್ ರಿನೀವಲ್ ಬೆಲೆಯಲ್ಲಿ ಡಿಸ್ಕೌಂಟ್‌ಗಳನ್ನು ಗಳಿಸಬಹುದು.

ಡಿಜಿಟ್‌ನಂತಹ ಹೆಸರಾಂತ ಇನ್ಶೂರೆನ್ಸ್ ಪೂರೈಕೆದಾರರು ಹಾನಿಗಾಗಿ ರಿಪೇರಿ, ಥರ್ಡ್ ಪಾರ್ಟಿ ನಷ್ಟಗಳು ಮತ್ತು ಹೆಚ್ಚಿನವುಗಳಿಗೆ ಅಗತ್ಯ ಹಣಕಾಸಿನ ರಕ್ಷಣೆಯನ್ನು ಖಚಿತಪಡಿಸುತ್ತಾರೆ. ಇದಲ್ಲದೆ, ಟಾಟಾ ಪಂಚ್‌ಗಾಗಿ ಡಿಜಿಟ್‌ನ ಕಾರ್ ಇನ್ಶೂರೆನ್ಸ್ ಕಳ್ಳತನ ಅಥವಾ ನೈಸರ್ಗಿಕ ವಿಪತ್ತುಗಳು, ಬೆಂಕಿ ಮತ್ತು ಇತರ ರೀತಿಯ ಅಪಘಾತಗಳಿಂದ ಉಂಟಾಗುವ ಹಾನಿಯನ್ನು ಭರಿಸುತ್ತದೆ.

ಟಾಟಾ ಪಂಚ್ ಕಾರ್ ಬಗ್ಗೆ ಇನ್ನಷ್ಟು ತಿಳಿಯಿರಿ

ಹೊಚ್ಚ ಹೊಸ ಟಾಟಾ ಮಾಡೆಲ್, ಡಿಸೈನ್ ಮತ್ತು ಟೆಕ್ನಾಲಜಿಯನ್ನು ಪ್ರತಿನಿಧಿಸುತ್ತದೆ. ಮುಂದಿನ ಜನರೇಶನ್‌ಗಾಗಿ ಡಿಸೈನ್ ಮಾಡಲಾದ ಟಾಟಾ ಪಂಚ್ ಒರಟಾದ ಉಪಯುಕ್ತತೆ ಮತ್ತು ಸ್ಪೋರ್ಟಿಂಗ್ ಡೈನಾಮಿಕ್ಸ್‌ನ ಪ್ರಭಾವಶಾಲಿ ಕಾಂಬಿನೇಶನ್‌ನನ್ನು ನೀಡುತ್ತದೆ.

ಟಾಟಾ ಪಂಚ್‌ನ ಫೀಚರ್‌ಗಳು

  • ಮಿನಿ ಎಸ್‌ಯುವಿ ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳು, ಡ್ಯುಯಲ್-ಟೋನ್ ಬಂಪರ್, ಸಿಂಗಲ್ ಸ್ಲ್ಯಾಟ್ ಬ್ಲ್ಯಾಕ್ ಗ್ರಿಲ್ ಮತ್ತು ಕಪ್ಪು ಸುತ್ತುವರೆದಿರುವ ಫಾಗ್ ಲೈಟ್‌ಗಳನ್ನು ಒಳಗೊಂಡಿದೆ. 

  • ಪಂಚ್‌ನ ಇತರ ಡಿಸೈನ್‌ ಮುಖ್ಯಾಂಶಗಳು ಸಿ-ಪಿಲ್ಲರ್ ಮೌಂಟೆಡ್ ರಿಯರ್ ಡೋರ್ ಹ್ಯಾಂಡಲ್‌ಗಳು, ಕಾಂಟ್ರಾಸ್ಟಿಂಗ್ ಶೇಡ್‌ಗಳ ಒ.ಆರ್.ವಿ.ಎಮ್ ಗಳು, ಸ್ಕ್ವೇರ್-ಆಫ್ ವೀಲ್ ಆರ್ಚ್‌ಗಳು, ಡ್ಯುಯಲ್-ಟೋನ್ ಅಲಾಯ್ ವ್ಹೀಲ್ಸ್ ಮತ್ತು ಬಾಡಿ ಕವರಿಂಗ್.

  • ಪಂಚ್, ಮೊದಲ ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಜೊತೆಗೆ ಸಹ ಬರಬಹುದು.

  • ಇದು 1198 ಸಿಸಿ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ ಮತ್ತು ಇದು ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯೊಂದಿಗೆ ಮಾತ್ರ ಲಭ್ಯವಿದೆ.

  • ಈ 5-ಸೀಟ್‌ಗಳ ಎಸ್‌ಯುವಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್ ಮತ್ತು ರಿಯರ್ ಪಾರ್ಕಿಂಗ್ ಅಸಿಸ್ಟೆನ್ಸ್ ಅನ್ನು ಹೊಂದಿದೆ.

  • ಟಾಟಾ ಪಂಚ್ (HBX) 7-ಇಂಚಿನ ಟಚ್‌ಸ್ಕ್ರೀನ್, ಸೆಮಿ-ಡಿಜಿಟಲ್ ಕ್ಲಸ್ಟರ್ ಮತ್ತು ಆಟೋಮ್ಯಾಟಿಕ್ ಏರ್ ಕಂಡಿಷನರ್ ವ್ಯವಸ್ಥೆಯನ್ನು ಸಹ ನೀಡುತ್ತದೆ.

ಇಂತಹ ಹೈ-ಟೆಕ್ ಫೀಚರ್‌ಗಳ ಹೊರತಾಗಿಯೂ, ಟಾಟಾ ಪಂಚ್ ಯಾವುದೇ ಇತರ ಕಾರ್ ಮಾಡೆಲ್‌ಗಳಂತೆ ಅಪಘಾತಗಳಿಗೆ ಗುರಿಯಾಗುತ್ತದೆ. ಹೀಗಾಗಿ, ಅಪಘಾತದ ಸಂದರ್ಭದಲ್ಲಿ ವೆಚ್ಚಗಳನ್ನು ಭರಿಸಲು ಮತ್ತು ನಿಮ್ಮ ಹಣಕಾಸುಗಳನ್ನು ರಕ್ಷಿಸಲು ಟಾಟಾ ಪಂಚ್‌ಗೆ ಇನ್ಶೂರೆನ್ಸ್ ಕಡ್ಡಾಯವಾಗಿದೆ.

ಟಾಟಾ ಪಂಚ್ - ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್‌ಗಳು ಎಕ್ಸ್ ಶೋರೂಂ ಬೆಲೆ (ಆಯಾ ನಗರಕ್ಕೆ ಅನುಗುಣವಾಗಿ ಬದಲಾಗಬಹುದು)
ಪಂಚ್ XE ₹5.50 ಲಕ್ಷ

ಭಾರತದಲ್ಲಿ ಟಾಟಾ ಪಂಚ್ ಕಾರ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಟಾಟಾ ಪಂಚ್ ಅನ್ನು ಯಾರೋ ಬೇರೆಯವರು ಚಾಲನೆ ಮಾಡಿ ಅಪಘಾತಕ್ಕೆ ಒಳಗಾದರೆ, ಡಿಜಿಟ್ ಆ ನಷ್ಟವನ್ನು ಕವರ್ ಮಾಡುತ್ತದೆಯೇ?

ಹೌದು. ಅಪಘಾತದ ಸಂದರ್ಭದಲ್ಲಿ ನಿಮ್ಮ ಟಾಟಾ ಪಂಚ್ ಅನ್ನು ಯಾರೇ ಚಾಲನೆ ಮಾಡುತ್ತಿದ್ದರೂ, ಡಿಜಿಟ್ ನಷ್ಟಕ್ಕೆ ನಿಮಗೆ ಹಣಕಾಸಿನ ರಕ್ಷಣೆ ನೀಡುತ್ತದೆ. ಆದಾಗ್ಯೂ, ಡ್ರೈವರ್ ಆ ಸಮಯದಲ್ಲಿ ವ್ಯಾಲಿಡ್ ಆಗಿರುವ ಲೈಸೆನ್ಸ್ ಅನ್ನು ಹೊಂದಿಲ್ಲದಿದ್ದರೆ, ಯಾವುದೇ ವೆಚ್ಚವನ್ನು ಭರಿಸಲು ಡಿಜಿಟ್ ಜವಾಬ್ದಾರನಾಗಿರುವುದಿಲ್ಲ.

ನನ್ನ ಟಾಟಾ ಪಂಚ್‌ನ ಟೈರ್‌ಗಳ ಹಾನಿಗಾಗಿ ನಾನು ಯಾವುದಾದಾರೂ ಪರಿಹಾರವನ್ನು ಪಡೆಯುತ್ತೇನೆಯೇ?

ಅಪಘಾತದಿಂದಾಗಿ ಟೈರ್‌ಗಳು ಹಾನಿಗೊಳಗಾದಾಗ ಸ್ಟ್ಯಾಂಡರ್ಡ್ ಇನ್ಶೂರೆನ್ಸ್ ಪಾಲಿಸಿಯು ಪರಿಹಾರವನ್ನು ನೀಡುತ್ತದೆ.. ಆದಾಗ್ಯೂ, ಡಿಜಿಟ್ ನೀಡುವ ಟೈರ್ ಕವರ್ ಪ್ರೊಟೆಕ್ಟ್‌ನಂತಹ ಆ್ಯಡ್-ಆನ್ ಪಾಲಿಸಿಗಳಿವೆ. ಇವುಗಳನ್ನು ನೀವು ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯ ಜೊತೆಗೆ ಆಯ್ಕೆ ಮಾಡಿಕೊಳ್ಳಬಹುದು. ಇತರ ಘಟನೆಗಳಲ್ಲಿ, ನಿಮ್ಮ ಟಾಟಾ ಪಂಚ್‌ನ ಟೈರ್‌ಗಳ ಹಾನಿಗಳಿಗೆ ಇದು ಪರಿಹಾರ ನೀಡುತ್ತದೆ.