ಎಂಜಿ ಹೆಕ್ಟರ್ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

ಎಂಜಿ ಹೆಕ್ಟರ್ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ/ರಿನೀವ್ ಮಾಡಿ

ಎಂಜಿ ಹೆಕ್ಟರ್ ಜೂನ್ 27, 2019ರಂದು ಭಾರತಕ್ಕೆ ಪಾದಾರ್ಪಣೆ ಮಾಡಿತು. ಹಿಂದಿನ ಎರಡು ಹಣಕಾಸಿನ ವರ್ಷಗಳನ್ನು ನೋಡುವುದಾದರೆ, ಎಂಜಿ ಮೋಟಾರ್ಸ್ ಆರ್ಥಿಕ ವರ್ಷ 2020ರಲ್ಲಿ 21,954 ಯೂನಿಟ್ ಗಳನ್ನು ಮತ್ತು ಆರ್ಥಿಕ ವರ್ಷ 2021ರಲ್ಲಿ 35,597 ಯೂನಿಟ್ ಗಳನ್ನು ಮಾರಾಟ ಮಾಡಿದೆ. ಅಂತಹ ಭಾರಿ ಜನಪ್ರಿಯತೆಯನ್ನು ಪರಿಗಣಿಸಿ, ಎಂಜಿ ಮೋಟಾರ್ಸ್ ಇಂಡಿಯಾ ಹೊಸ ಏಳು-ಆಸನಗಳ ಹೆಕ್ಟರ್ ಪ್ಲಸ್ ಅನ್ನು ಜನವರಿ 7, 2021ರಂದು ಬಿಡುಗಡೆ ಮಾಡಿತು. ಸಂಪೂರ್ಣ ಹೆಕ್ಟರ್ ಲೈನ್-ಅಪ್ ಈಗ ಐದು, ಆರು ಮತ್ತು ಏಳು-ಸೀಟರ್ ಗಳ ಆಯ್ಕೆಗಳ ಕಾನ್ಫಿಗರೇಷನ್ ಅನ್ನು ನೀಡುತ್ತದೆ.

ಆದ್ದರಿಂದ, ನೀವು ಹೊಚ್ಚ ಹೊಸ ಮಾಡೆಲ್ ಅನ್ನು ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಅನುಕೂಲಕರ ಎಂಜಿ ಹೆಕ್ಟರ್ ಕಾರ್ ಇನ್ಶೂರೆನ್ಸ್ ಪಾಲಿಸಿ ಆಯ್ಕೆಗಳನ್ನೂ ಹುಡುಕಲು ಪ್ರಾರಂಭಿಸಿ.

ಇದಲ್ಲದೆ, ಮೋಟಾರ್ ವೆಹಿಕಲ್ಸ್ ಆ್ಯಕ್ಟ್ 1988ರ ಪ್ರಕಾರ, ಭಾರತೀಯ ಬೀದಿಗಳಲ್ಲಿ ಸಂಚರಿಸುವ ಎಲ್ಲಾ ಕಾರುಗಳು ಥರ್ಡ್ ಪಾರ್ಟಿ ಕವರೇಜ್‌ನೊಂದಿಗೆ ಸುರಕ್ಷಿತವಾಗಿರಬೇಕು. ಈ ಕವರ್ ನಿಮ್ಮ ವಾಹನದಿಂದ ಉಂಟಾಗುವ ಯಾವುದೇ ಥರ್ಡ್ ಪಾರ್ಟಿ ಲಯಬಿಲಿಟಿಯನ್ನು ಸರಿದೂಗಿಸುತ್ತದೆ.

ಆದಾಗ್ಯೂ, ಆಕಸ್ಮಿಕ ಡ್ಯಾಮೇಜ್ ಗಳು ಮತ್ತು ಇತರ ಅಪಘಾತಗಳ ವಿರುದ್ಧ ಗರಿಷ್ಠ ಕವರೇಜ್ ಅನ್ನು ಪಡೆದುಕೊಳ್ಳಲು ನೀವು ಕಾಂಪ್ರೆಹೆನ್ಸಿವ್ ಕವರ್ ಅನ್ನು ಸಹ ಆರಿಸಿಕೊಳ್ಳಬಹುದು.

ಗರಿಷ್ಠ ಆರ್ಥಿಕ ಭದ್ರತೆಯನ್ನು ಪಡೆದುಕೊಳ್ಳಲು, ಡಿಜಿಟ್‌ನಂತಹ ಪ್ರತಿಷ್ಠಿತ ಇನ್ಶೂರೆನ್ಸ್ ಪೂರೈಕೆದಾರರು ಎಂಜಿ ಹೆಕ್ಟರ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಲಾಭದಾಯಕ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ಒದಗಿಸುತ್ತಾರೆ.

ಮುಂದಿನ ವಿಭಾಗದಲ್ಲಿ, ನಾವು ಎಂಜಿ ಹೆಕ್ಟರ್ ಮಾಡೆಲ್ ಗಳ ವೈಶಿಷ್ಟ್ಯಗಳು, ಕಾರ್ ಇನ್ಶೂರೆನ್ಸ್ ಪಾಲಿಸಿಯ ಪ್ರಾಮುಖ್ಯತೆ ಮತ್ತು ಡಿಜಿಟ್ ಕೊಡುಗೆಗಳ ಯೋಜನೆಗಳನ್ನು ಚರ್ಚಿಸಲಿದ್ದೇವೆ.

ಎಂಜಿ ಹೆಕ್ಟರ್ ಬಗ್ಗೆ ಮತ್ತಷ್ಟು ತಿಳಿಯಿರಿ

ಎಂಜಿ ಹೆಕ್ಟರ್ ಡೀಸೆಲ್, ಪೆಟ್ರೋಲ್-ಮ್ಯಾನ್ಯುವಲ್, ಪೆಟ್ರೋಲ್-ಆಟೋಮ್ಯಾಟಿಕ್ಸ್ ಮತ್ತು ಪೆಟ್ರೋಲ್ ಹೈಬ್ರಿಡ್ ಆಯ್ಕೆಗಳನ್ನು ಒಳಗೊಂಡಂತೆ 14 ವೇರಿಯಂಟ್‌ಗಳಲ್ಲಿ ಲಭ್ಯವಿದೆ.

ಎಂಜಿ ಹೆಕ್ಟರ್ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಓನ್ ಡ್ಯಾಮೇಜ್ ಓನ್ಲಿ ಪಾಲಿಸಿಗೆ)
ಜೂನ್- 2021 38,077

** ಡಿಸ್‌ಕ್ಲೈಮರ್‌ - ಎಂಜಿ ಹೆಕ್ಟರ್ 1.5 ಶಾರ್ಪ್ ಸಿವಿಟಿ ಬಿಎಸ್ VIಗೆ ಮಾಡಲಾದ ಪ್ರೀಮಿಯಂ ಕ್ಯಾಲ್ಕುಲೇಷನ್ 1451.0 ಜಿಎಸ್‌ಟಿ ಎಕ್ಸ್‌ಕ್ಲೂಡೆಡ್‌.

ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಜೂನ್, ಎನ್‌ಸಿಬಿ- 0%, ಯಾವುದೇ ಆ್ಯಡ್‌-ಆನ್‌ಗಳಿಲ್ಲ, ಪಾಲಿಸಿ ಎಕ್ಸ್ಪೈರ್ಡ್ ಆಗಿಲ್ಲ & ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಅಕ್ಟೋಬರ್-2021ರಲ್ಲಿ ಮಾಡಲಾಗಿದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.

ಎಂಜಿ ಹೆಕ್ಟರ್ ಕಾರ್ ಇನ್ಶೂರೆನ್ಸ್‌ ನಲ್ಲಿ ಏನೆಲ್ಲಾ ಕವರ್‌ ಆಗುತ್ತದೆ

ಡಿಜಿಟ್‌ನ ಎಂಜಿ ಹೆಕ್ಟರ್ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ಎಂಜಿ ಹೆಕ್ಟರ್‌ಗೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಡಿಜಿಟ್‌ನ ಎಂಜಿ ಹೆಕ್ಟರ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಕಾರಣಗಳು?

ಡಿಜಿಟ್ ಈ ಕೆಳಗಿನ ಲಾಭದಾಯಕ ಪ್ರಯೋಜನಗಳನ್ನು ಒದಗಿಸುತ್ತದೆ-

1.  ತ್ವರಿತ ಆನ್‌ಲೈನ್ ಕ್ಲೈಮ್ ಸೆಟಲ್‌ಮೆಂಟ್‌ಗಳು - ಎಂಜಿ ಹೆಕ್ಟರ್ ಇನ್ಶೂರೆನ್ಸ್ ವಿರುದ್ಧ ಮಾಡಲಾದ ಹೆಚ್ಚಿನ ಸಂಖ್ಯೆಯ ಕ್ಲೈಮ್‌ಗಳನ್ನು ಸೆಟಲ್ ಮಾಡಲು ಡಿಜಿಟ್ ಪ್ರಯತ್ನಿಸುತ್ತದೆ. ಇದಲ್ಲದೆ, ಡಿಜಿಟ್‌ನ ಸ್ಮಾರ್ಟ್‌ಫೋನ್-ಎನೇಬಲ್ಡ್ ಸ್ವಯಂ-ತಪಾಸಣಾ ವ್ಯವಸ್ಥೆಯ ಮೂಲಕ ನಿಮ್ಮ ಕ್ಲೈಮ್‌ಗೆ ಸಂಬಂಧಿಸಿದ ಚಿತ್ರಗಳನ್ನು ಕಳುಹಿಸಿ ನೀವು ಕ್ಲೈಮ್ ಅನ್ನು ಫೈಲ್ ಮಾಡಬಹುದು ಮತ್ತು ಸಮಯವನ್ನು ಉಳಿಸಬಹುದು. ಅಲ್ಲದೆ, 100% ಗ್ರಾಹಕ ತೃಪ್ತಿಯನ್ನು ಒದಗಿಸುವ ನಿಟ್ಟಿನಲ್ಲಿ ಡಿಜಿಟ್ ಹೆಚ್ಚಿನ ಕ್ಲೈಮ್ ಸೆಟಲ್‌ಮೆಂಟ್‌ ಅನುಪಾತವನ್ನು ನೀಡುತ್ತದೆ.

2.  ಕಸ್ಟಮೈಸ್ ಮಾಡಿದ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ - ನಿಮ್ಮ ಅನುಕೂಲಕ್ಕಾಗಿ ಐಡಿವಿ ಅನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ಡಿಜಿಟ್ ನಿಮಗೆ ನೀಡುತ್ತದೆ. ಎಂಜಿ ಹೆಕ್ಟರ್ ಇನ್ಶೂರೆನ್ಸ್ ಬೆಲೆಯಲ್ಲಿನ ನಿಮ್ಮ ಪ್ರೀಮಿಯಂಗಳಲ್ಲಿ ನಾಮಮಾತ್ರದ ಹೆಚ್ಚಳದ ಮೂಲಕ ನೀವು ವ್ಯಾಲ್ಯೂ ಅನ್ನು ಹೆಚ್ಚಿಸಬಹುದು. ನಿಮ್ಮ ಹೆಕ್ಟರ್ ದುರಸ್ತಿ ಮೀರಿದ ಡ್ಯಾಮೇಜ್ ಗೊಳಗಾದರೆ ಅಥವಾ ಕಳ್ಳತನವಾದರೆ ಹೆಚ್ಚಿನ ಪರಿಹಾರವನ್ನು ಒದಗಿಸುವುದನ್ನು ಇದು ಖಚಿತಪಡಿಸುತ್ತದೆ.

3.  ಆ್ಯಡ್-ಆನ್ ಕವರ್‌ಗಳ ಪ್ರಯೋಜನಗಳು - ನಿಮ್ಮ ಎಂಜಿ ಹೆಕ್ಟರ್‌ಗೆ ಸುಸಜ್ಜಿತ ರಕ್ಷಣೆಯನ್ನು ನೀಡಲು, ನೀವು ಡಿಜಿಟ್ ಒದಗಿಸುವ ಈ ಕೆಳಗಿನ ಆ್ಯ ಡ್-ಆನ್ ಕವರ್‌ಗಳನ್ನು ಆರಿಸಿಕೊಳ್ಳಬಹುದು-

ಈ ಯಾವುದೇ ಕವರ್‌ಗಳನ್ನು ಸೇರಿಸಲು, ನಿಮ್ಮ ಎಂಜಿ ಹೆಕ್ಟರ್ ಇನ್ಶೂರೆನ್ಸ್ ರಿನೀವಲ್ ಬೆಲೆಯನ್ನು ನೀವು ಸ್ವಲ್ಪಮಟ್ಟಿಗೆ ಹೆಚ್ಚಿಸುವ ಅಗತ್ಯವಿದೆ.

4.  ಆನ್‌ಲೈನ್ ಖರೀದಿ ಮತ್ತು ರಿನೀವ್ ಮಾಡುವ ಸೌಲಭ್ಯ - ಸುದೀರ್ಘ ಪೇಪರ್ ಕೆಲಸಗಳ ತೊಂದರೆಯನ್ನು ತೊಡೆದುಹಾಕಲು, ಗಣನೀಯ ಪ್ರಮಾಣದ ಸಮಯವನ್ನು ಉಳಿಸಲು ನೀವು ಆನ್‌ಲೈನ್ ಎಂಜಿ ಹೆಕ್ಟರ್ ಇನ್ಶೂರೆನ್ಸ್ ರಿನೀವಲ್ ಅಥವಾ ಖರೀದಿ ಆಯ್ಕೆಯನ್ನು ಆರಿಸಿಕೊಳ್ಳಬಹುದು.

5.  ನೆಟ್‌ವರ್ಕ್ ಗ್ಯಾರೇಜ್‌ಗಳ ವ್ಯಾಪಕ ಶ್ರೇಣಿ - ನೀವು ದೇಶದಲ್ಲಿ ಎಲ್ಲಿದ್ದರೂ, 5800ಕ್ಕಿಂತ ಹೆಚ್ಚು ಡಿಜಿಟ್ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳಿಂದ ನೀವು ಕ್ಯಾಶ್ ಲೆಸ್ ರಿಪೇರಿ ಸೌಲಭ್ಯಗಳನ್ನು ಆರಿಸಿಕೊಳ್ಳಬಹುದು.

6.  ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್ ಸೌಲಭ್ಯ - ಡಿಜಿಟ್ ಡ್ರೈವಿಂಗ್ ಮಾಡಲು ಸುಸ್ಥಿತಿಯಲ್ಲಿರದ ಕಾರುಗಳಿಗೆ ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್ ಆಯ್ಕೆಗಳನ್ನು ಒದಗಿಸುತ್ತದೆ. ಈ ಸೌಲಭ್ಯವು ಕಾಂಪ್ರೆಹೆನ್ಸಿವ್ ಪಾಲಿಸಿಗೆ ಮಾತ್ರ ಲಭ್ಯವಿದೆ.

7.  ರೌಂಡ್-ದಿ-ಕ್ಲಾಕ್ ಕಸ್ಟಮರ್ ಕೇರ್ ಸಪೋರ್ಟ್ - ಡಿಜಿಟ್‌ನ 24X7 ಕಸ್ಟಮರ್ ಕೇರ್ ಸೇವೆಯು ಕಾರ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಸಂಬಂಧಿಸಿದಂತೆ ತ್ವರಿತ ಮತ್ತು ಪರಿಣಾಮಕಾರಿ ನೆರವನ್ನು ನೀಡುತ್ತವೆ.

ಈ ಎಲ್ಲಾ ವೈಶಿಷ್ಟ್ಯಗಳು ಕಾರ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಡಿಜಿಟ್ ಅನ್ನು ಪರಿಗಣಿಸಲು

ಕಾರಣವನ್ನು ಒದಗಿಸುತ್ತದೆ.

ಆದಾಗ್ಯೂ, ನಿಮ್ಮ ಎಂಜಿ ಹೆಕ್ಟರ್ ಕಾರ್ ಇನ್ಶೂರೆನ್ಸ್ ನಿಂದ ಗರಿಷ್ಠ ಆರ್ಥಿಕ ರಕ್ಷಣೆಯನ್ನು ಪಡೆಯಲು ಹೆಚ್ಚಿನ ಡಿಡಕ್ಟಿಬಲ್ ಗಳನ್ನು ಆಯ್ಕೆಮಾಡಿ ಮತ್ತು ಸಣ್ಣ ಪುಟ್ಟ ಕ್ಲೈಮ್‌ಗಳಿಂದ ದೂರವಿರಿ.

ಎಂಜಿ ಹೆಕ್ಟರ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ಈ ಕೆಳಗಿನ ಕಾರಣಗಳಿಂದಾಗಿ ಭಾರೀ ದುರಸ್ತಿ ವೆಚ್ಚಗಳು ಮತ್ತು ದಂಡಗಳನ್ನು ಭರಿಸುವುದಕ್ಕಿಂತ ಎಂಜಿ ಹೆಕ್ಟರ್ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸುವುದು ಉತ್ತಮ-

  1. ಥರ್ಡ್-ಪಾರ್ಟಿ ಲಯಬಿಲಿಟಿಗಳಿಂದ ರಕ್ಷಿಸುತ್ತದೆ - ನಿಮ್ಮ ಎಂಜಿ ಹೆಕ್ಟರ್ ಅಪಘಾತದಲ್ಲಿ ಭಾಗಿಯಾಗಿದ್ದರೆ ಮತ್ತು ಥರ್ಡ್ ಪಾರ್ಟಿ ವೆಹಿಕಲ್, ವ್ಯಕ್ತಿ ಅಥವಾ ಪ್ರಾಪರ್ಟಿಗೆ ಡ್ಯಾಮೇಜ್ ಅಥವಾ ಗಾಯವನ್ನು ಉಂಟುಮಾಡಿದರೆ, ನೀವು ನೇರವಾಗಿ ಶುಲ್ಕವನ್ನು ಭರಿಸಬೇಕಾಗಿಲ್ಲ. ನಿಮ್ಮ ಇನ್ಸೂರೆನ್ಸ್ ಪೂರೈಕೆದಾರರು ನಿಮ್ಮ ಪಾಲಿಸಿಯ ವಿರುದ್ಧ ಥರ್ಡ್ ಪಾರ್ಟಿ ನಷ್ಟವನ್ನು ಭರಿಸುತ್ತಾರೆ.
  2. ಓನ್ ಕಾರ್ ಡ್ಯಾಮೇಜ್‌ನಿಂದ ಭದ್ರತೆ - ನೀವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಕವರ್ ಅನ್ನು ಪಡೆದರೆ, ನಿಮ್ಮ ಎಂಜಿ ಹೆಕ್ಟರ್‌ನ ಆಕಸ್ಮಿಕ ರಿಪೇರಿಗಾಗಿ ನಿಮ್ಮ ಪಾಲಿಸಿಯ ವಿರುದ್ಧ ನೀವು ಕ್ಲೈಮ್ ಅನ್ನು ಮಾಡಬಹುದು. ಇದಲ್ಲದೆ, ಈ ಯೋಜನೆಯು ಕಳ್ಳತನ, ನೈಸರ್ಗಿಕ ವಿಕೋಪಗಳು, ಬೆಂಕಿ ಮುಂತಾದ ಘಟನೆಗಳಿಂದ ಉಂಟಾದ ನಷ್ಟವನ್ನು ಸಹ ಕವರ್ ಮಾಡುತ್ತದೆ. ಆದಾಗ್ಯೂ, ಅಂತಹ ಸಂದರ್ಭಗಳಲ್ಲಿ ಥರ್ಡ್ ಪಾರ್ಟಿ ಪಾಲಿಸಿಯು ಆರ್ಥಿಕ ಭದ್ರತೆಯನ್ನು ಒದಗಿಸುವುದಿಲ್ಲ.
  3. ವೈಯಕ್ತಿಕ ಅಪಘಾತದ ಡ್ಯಾಮೇಜ್ ಗಳಿಗೆ ಪಾವತಿಸುತ್ತದೆ - ಐಆರ್‌ಡಿಎಐ ಭಾರತದ ಎಲ್ಲಾ ವಾಹನ ಮಾಲೀಕರಿಗೆ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಅನ್ನು ಕಡ್ಡಾಯಗೊಳಿಸಿದೆ. ಈ ಯೋಜನೆಯಡಿಯಲ್ಲಿ, ಇನ್ಶೂರ್ಡ್ ಕಾರ್ ಮಾಲೀಕರ ಆಕಸ್ಮಿಕ ಮರಣ ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ಪಾಲಿಸಿಹೋಲ್ಡರ್ ಗಳ ಕುಟುಂಬದ ಸದಸ್ಯರು ಇನ್ಶೂರರ್ ರಿಂದ ಪರಿಹಾರಕ್ಕೆ ಕ್ಲೈಮ್ ಮಾಡಬಹುದು.
  4. ನೋ ಕ್ಲೈಮ್ ಬೋನಸ್ ಪ್ರಯೋಜನಗಳು - ಪ್ರತಿ ಕ್ಲೈಮ್-ಇಲ್ಲದ ವರ್ಷಕ್ಕೆ, ಎಂಜಿ ಹೆಕ್ಟರ್‌ನ ನಿಮ್ಮ ಕಾರ್ ಇನ್ಶೂರೆನ್ಸ್ ಗೆ ಪಾವತಿಸಬೇಕಾದ ನಿಮ್ಮ ಪ್ರೀಮಿಯಂಗಳಲ್ಲಿ ನೀವು ರಿಯಾಯಿತಿಗಳನ್ನು ಗಳಿಸಬಹುದು. ಡಿಜಿಟ್‌ನಂತಹ ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರು ಸತತ ಐದು ಕ್ಲೈಮ್-ಇಲ್ಲದ ವರ್ಷಗಳ ವಿರುದ್ಧ 50% ರಿಯಾಯಿತಿಯನ್ನು ನೀಡುತ್ತಾರೆ.
  5. ಕಾನೂನು ದಂಡದಿಂದ ತಡೆಯುತ್ತದೆ - ಕಾನೂನಿನ ಪ್ರಕಾರ, ಇನ್ಶೂರೆನ್ಸ್ ಕವರೇಜ್ ಇಲ್ಲದ ವಾಹನ-ಮಾಲೀಕರು ₹ 2000 ಪೆನಲ್ಟಿಯನ್ನು ಪಾವತಿಸಲು ಲಯಬಲ್ ಆಗಿದ್ದಾರೆ. ತಪ್ಪನ್ನು ಪುನರಾವರ್ತಿಸಿದರೆ ₹ 4000 ದಂಡವನ್ನು ಪಾವತಿಸಬೇಕಾಗುತ್ತದೆ.

ಎಲ್ಲಾ ಕಾರಣಗಳು ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಪಾಲಿಸಿಗಳ ಮಹತ್ವವನ್ನು ಗಟ್ಟಿಗೊಳಿಸುತ್ತವೆ.

ಈಗ, ದುಬಾರಿ ಪ್ರೀಮಿಯಂಗಳ ಹೊರೆಯನ್ನು ತಪ್ಪಿಸಲು, ನೀವು ಕೈಗೆಟುಕುವ ಮತ್ತು ಸುಸಜ್ಜಿತವಾದ ಆರ್ಥಿಕ ರಕ್ಷಣೆಯನ್ನು ನೀಡುವ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಡಿಜಿಟ್ ನೀವು ಪರಿಗಣಿಸಬಹುದಾದ ಅಂತಹ ಒಂದು ಆಯ್ಕೆಯಾಗಿದೆ.

ಎಂಜಿ ಹೆಕ್ಟರ್ ಕುರಿತು ಇನ್ನಷ್ಟು

  • ಏಳು-ಸೀಟರ್ ಮಾಡೆಲ್ ಎಂಜಿ ಶೀಲ್ಡ್ ಪ್ಯಾಕೇಜ್ ಅನ್ನು ಒಳಗೊಂಡಿದೆ. ಅದು ಐದು ವರ್ಷಗಳ ವಾರಂಟಿ, ರೋಡ್ ಸೈಡ್ ಅಸಿಸ್ಟೆನ್ಸ್ ಮತ್ತು ಕಾರ್ಮಿಕ-ಶುಲ್ಕ ಸೇರಿ ಐದು ಉಚಿತ ಸೇವೆಗಳನ್ನು ನೀಡುತ್ತದೆ. ಹಿಂದಿನ ಎಲ್ಲಾ ಮಾಡೆಲ್ ಗಳು ಸಂಪರ್ಕ ತಂತ್ರಜ್ಞಾನ ಮತ್ತು ವಾಯ್ಸ್ ಕಮಾಂಡ್ ವ್ಯವಸ್ಥೆಯನ್ನು ಹೊಂದಿದ್ದರೂ, ಹೊಸ ಎಂಜಿ ಹೆಕ್ಟರ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿನ ಕಮಾಂಡ್ ಗಳಿಗೆ ಪ್ರತಿಕ್ರಿಯಿಸುತ್ತದೆ.
  • ಐ-ಸ್ಮಾರ್ಟ್ ತಂತ್ರಜ್ಞಾನವು ಅಕ್ಯೂವೆದರ್, ಇ-ಕಾಲ್, 5ಜಿ-ರೆಡಿ ಸಿಮ್, ಪ್ರೀ ಲೋಡ್ ಮಾಡಲಾದ ಮನರಂಜನೆ, ಐ-ಕಾಲ್, ವಾಯ್ಸ್ ಸರ್ಚ್ ಇನ್ ಗಾನಾ, ರಿಮೋಟ್ ವೆಹಿಕಲ್ ಕಂಟ್ರೋಲ್, ವೈಫೈ ಸಂಪರ್ಕ ಮತ್ತು ಇತರ ಹಲವು ವೈಶಿಷ್ಟ್ಯಗಳನ್ನು ಸಪೋರ್ಟ್ ಮಾಡುತ್ತದೆ.
  • ಗರಿಷ್ಠ ಸುರಕ್ಷತೆಗಾಗಿ, ಕಾರ್ ಮೂರು-ಪಾಯಿಂಟ್ ಸೀಟ್‌ಬೆಲ್ಟ್‌ ಗಳು, ಎಬಿಎಶ್, ಇಬಿಡಿ, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಹೋಲ್ಡ್ ಕಂಟ್ರೋಲ್, ಐಸೋಫಿಕ್ಸ್ ಚೈಲ್ಡ್ ಆಂಕರ್‌ಗಳು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಇತ್ಯಾದಿಗಳನ್ನು ಹೊಂದಿದೆ,

ಆದಾಗ್ಯೂ, ಅಂತಹ ಉತ್ತಮ-ರಕ್ಷಣೆ ಒಳಗೊಂಡ ಸುರಕ್ಷತಾ ಪರಿಷ್ಕರಣೆಗಳ ಹೊರತಾಗಿಯೂ, ಎಂಜಿ ಹೆಕ್ಟರ್ ಎಲ್ಲಾ ಇತರ ಕಾರುಗಳಂತೆ ಅಪಘಾತಗಳಿಗೆ ಒಳಗಾಗುತ್ತದೆ. ಆದ್ದರಿಂದ, ಅಪಘಾತಗಳು ಮತ್ತು ಇತರ ಅಪಾಯಗಳ ಸಂದರ್ಭದಲ್ಲಿ ಭಾರಿ ವೆಚ್ಚಗಳನ್ನು ತಪ್ಪಿಸಲು, ಎಂಜಿ ಹೆಕ್ಟರ್ ಇನ್ಶೂರೆನ್ಸ್ ಪಾಲಿಸಿಯು ಮಹತ್ವದ್ದಾಗಿದೆ.

ಎಂಜಿ ಹೆಕ್ಟರ್ ​​- ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್‌ಗಳು ಎಕ್ಸ್ ಶೋರೂಂ ಬೆಲೆ (ನಗರಗಳಿಗೆ ಅನುಗುಣವಾಗಿ ಬದಲಾಗಬಹುದು)
ಪ್ಲಸ್ ಸ್ಟೈಲ್ MT 7 ಎಸ್‌ಟಿಆರ್‌ ₹ 13.96 ಲಕ್ಷಗಳು
ಪ್ಲಸ್ ಸ್ಟೈಲ್ ಡೀಸೆಲ್ MT 7 ಎಸ್‌ಟಿಆರ್‌ ₹ 15.38 ಲಕ್ಷಗಳು
ಪ್ಲಸ್ ಸೂಪರ್ ಹೈಬ್ರಿಡ್ MT 7 ಎಸ್‌ಟಿಆರ್‌ ₹ 15.46 ಲಕ್ಷಗಳು ಪ್ಲಸ್ ಸೂಪರ್ ಡೀಸೆಲ್ MT 7 ಎಸ್‌ಟಿಆರ್‌ ₹ 16.48 ಲಕ್ಷಗಳು ಪ್ಲಸ್ ಸೂಪರ್ ಡೀಸೆಲ್ MT ₹ 16.72 ಲಕ್ಷಗಳು ಪ್ಲಸ್ ಸ್ಮಾರ್ಟ್ CVT ₹ 17.91 ಲಕ್ಷಗಳು ಪ್ಲಸ್ ಸ್ಮಾರ್ಟ್ AT ₹ 17.91 ಲಕ್ಷಗಳು ಪ್ಲಸ್ ಸ್ಮಾರ್ಟ್ ಡೀಸೆಲ್ MT 7 ಎಸ್‌ಟಿಆರ್‌ ₹ 18.49 ಲಕ್ಷಗಳು ಪ್ಲಸ್ ಶಾರ್ಪ್ ಹೈಬ್ರಿಡ್ MT ₹ 18.54 ಲಕ್ಷಗಳು ಪ್ಲಸ್ ಸ್ಮಾರ್ಟ್ ಡೀಸೆಲ್ MT ₹ 18.59 ಲಕ್ಷಗಳು ಪ್ಲಸ್ ಸೆಲೆಕ್ಟ್ ಡೀಸೆಲ್ MT 7 ಎಸ್‌ಟಿಆರ್‌ ₹ 19.35 ಲಕ್ಷಗಳು ಪ್ಲಸ್ ಶಾರ್ಪ್ CVT ₹ 19.57 ಲಕ್ಷಗಳು ಪ್ಲಸ್ ಶಾರ್ಪ್ AT ₹ 19.57 ಲಕ್ಷಗಳು ಪ್ಲಸ್ ಶಾರ್ಪ್ ಡೀಸೆಲ್ MT ₹ 19.99 ಲಕ್ಷಗಳು

ಭಾರತದಲ್ಲಿ ಎಂಜಿ ಹೆಕ್ಟರ್ ಕಾರ್ ಇನ್ಶೂರೆನ್ಸ್ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು

ಕಾಂಪ್ರೆಹೆನ್ಸಿವ್ ಪಾಲಿಸಿಯು ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಅನ್ನು ಒದಗಿಸುತ್ತದೆಯೇ?

ಹೌದು, ಕಾಂಪ್ರೆಹೆನ್ಸಿವ್ ಪಾಲಿಸಿಯು ಎಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಷನ್ ಅನ್ನು ಒದಗಿಸುತ್ತದೆ. ಆದರೆ, ನಿಮ್ಮ ಪ್ರೀಮಿಯಂಗಳನ್ನು ಸ್ವಲ್ಪ ಹೆಚ್ಚಿಸುವ ಮೂಲಕ ನಿಮ್ಮ ಎಂಜಿ ಹೆಕ್ಟರ್ ಕಾರ್ ಇನ್ಶೂರೆನ್ಸ್ ವಿರುದ್ಧ ನೀವು ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಆಡ್-ಆನ್ ಕವರ್ ಅನ್ನು ಸೇರಿಸುವ ಅಗತ್ಯವಿದೆ.

ನನ್ನ ಕಾರು ಅಪಘಾತದಲ್ಲಿ ಡ್ಯಾಮೇಜ್ ಗೊಳಗಾದರೆ, ಥರ್ಡ್ ಪಾರ್ಟಿ ಪಾಲಿಸಿಯು ವೆಚ್ಚವನ್ನು ಕವರ್ ಮಾಡುತ್ತದೆಯೇ?

ಇಲ್ಲ, ಥರ್ಡ್-ಪಾರ್ಟಿ ಪಾಲಿಸಿಯು ನಿಮ್ಮ ಕಾರಿನಿಂದ ಥರ್ಡ್ ಪಾರ್ಟಿ ವೆಹಿಕಲ್, ವ್ಯಕ್ತಿ ಅಥವಾ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್ ಗಳಿಗೆ ಮಾತ್ರ ಪರಿಹಾರ ನೀಡುತ್ತದೆ.