Third-party premium has changed from 1st June. Renew now
ಮಾರುತಿ ಸುಜುಕಿ ಸೆಲೆರಿಯೊ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಿ ಅಥವಾ ರಿನೀವ್ ಮಾಡಿ
ಜಪಾನಿನ ಆಟೋಮೊಬೈಲ್ ತಯಾರಕರಾದ ಸುಜುಕಿ ಕಂಪನಿಯು 2008 ರಲ್ಲಿ ಮಾರುತಿ ಸುಜುಕಿ ಸೆಲೆರಿಯೊ, 5-ಡೋರ್ ಹ್ಯಾಚ್‌ಬ್ಯಾಕ್ ಅನ್ನು ಬಿಡುಗಡೆ ಮಾಡಿತು. ಈ ಕಾರಿನ ಸೆಕೆಂಡ್ ಜನರೇಶನ್ 2014 ರಲ್ಲಿ ಸ್ಟ್ಯಾಂಡ್‌ಲೋನ್ ಮಾಡೆಲ್ ಆಗಿ ಭಾರತದ ಕಮ್ಯೂಟರ್ ಮಾರ್ಕೆಟ್ ಅನ್ನು ಪ್ರವೇಶಿಸಿತು. ಪ್ರಸ್ತುತ, ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಫ್ಯೂಯೆಲ್ ಆಯ್ಕೆಗಳಲ್ಲಿ ಲಭ್ಯವಿದೆ. ನವೆಂಬರ್ 2021 ರಲ್ಲಿ ಭಾರತದ ಮಾರ್ಕೆಟ್, ಈ ಮಾಡೆಲ್‌ನ ಮೂರನೇ ಜನರೇಶನ್‌ಗೆ ಸಾಕ್ಷಿಯಾಯಿತು.
ಅದರ ಪ್ರಾರಂಭದ ದಿನಾಂಕದಿಂದ, ಈ ಮಾಡೆಲ್‌ನ ಹಲವಾರು ಅಪ್‌ಗ್ರೇಡ್‌ಗಳು, ಕಾರಿನ ಶಕ್ತಿಯುತ ಪರ್ಫಾರ್ಮೆನ್ಸ್‌ಗೆ ಮತ್ತು ರಾಜಿಯಾಗದ ಸುರಕ್ಷತೆಗೆ ಕಾರಣವಾಗಿವೆ. ಈ ಕಾರಣದಿಂದಾಗಿ, ಮಾರುತಿ ಕಂಪನಿಯು ಸೆಲೆರಿಯೊ ಸೇರಿದಂತೆ ಹಲವಾರು ಮಾಡೆಲ್‌ಗಳ ಒಟ್ಟು 57000 ಯುನಿಟ್‌ಗಳನ್ನು ಮಾರಾಟ ಮಾಡಿದೆ.
ನೀವು ಈ ಕಾರನ್ನು ಡ್ರೈವ್ ಮಾಡುತ್ತಿದ್ದರೆ ಅಥವಾ ಹೊಸದನ್ನು ಖರೀದಿಸಲು ಪ್ಲ್ಯಾನ್ ಮಾಡುತ್ತಿದ್ದರೆ, ನೀವು ಮಾರುತಿ ಸುಜುಕಿ ಸೆಲೆರಿಯೊ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದು ಮುಖ್ಯವೆಂದು ಪರಿಗಣಿಸಬೇಕು. ವ್ಯಾಲಿಡ್ ಆಗಿರುವ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಜೇಬಿಗೆ ಹೊರೆಯಾಗುವ ಹಾನಿಗಳ ರಿಪೇರಿ ವೆಚ್ಚವನ್ನು ಕವರ್ ಮಾಡುತ್ತದೆ.
ನಿಮ್ಮ ಇನ್ಶೂರೆನ್ಸ್‌ನ ಅಗತ್ಯಗಳನ್ನು ಪರಿಗಣಿಸಿ, ಭಾರತದಲ್ಲಿನ ಹಲವಾರು ಕಂಪನಿಗಳು ನಿಮ್ಮ ಕಾರ್ ಇನ್ಶೂರೆನ್ಸ್‌ನ ಮೇಲೆ ಆಕರ್ಷಕ ಡೀಲ್‌ಗಳು ಮತ್ತು ಇತರ ಸರ್ವೀಸ್ ಪ್ರಯೋಜನಗಳನ್ನು ನೀಡುತ್ತವೆ. ಅಂತಹ ಇನ್ಶೂರರ್‌ಗಳಲ್ಲಿ ಡಿಜಿಟ್ ಕೂಡ ಒಂದು.
ಕೆಳಗಿನ ವಿಭಾಗವು ಡಿಜಿಟ್‌ನಂತಹ ಇನ್ಶೂರೆನ್ಸ್ ಪೂರೈಕೆದಾರರಿಂದ ಇನ್ಶೂರೆನ್ಸ್ ಪಡೆಯುವ ಪ್ರಯೋಜನಗಳನ್ನು ವಿವರಿಸುತ್ತದೆ.
ಇನ್ನಷ್ಟು ತಿಳಿಯಲು ಓದುವುದನ್ನು ಮುಂದುವರೆಸಿ.
ಮಾರುತಿ ಸೆಲೆರಿಯೊ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?
ನೀವು ಡಿಜಿಟ್‌ನ ಮಾರುತಿ ಸೆಲೆರಿಯೊ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?
ಮಾರುತಿ ಸುಜುಕಿ ಸೆಲೆರಿಯೊಗಾಗಿ ಕಾರ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು
ಥರ್ಡ್ ಪಾರ್ಟಿ | ಕಾಂಪ್ರೆಹೆನ್ಸಿವ್ |
ಅಪಘಾತದಿಂದಾಗಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ |
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟಗಳು |
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ |
|
ಥರ್ಡ್ ಪಾರ್ಟಿ ವಾಹನಕ್ಕೆ ಆಗುವ ಹಾನಿ |
|
ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಆಗುವ ಹಾನಿ |
|
ಪರ್ಸನಲ್ ಆಕ್ಸಿಡೆಂಟ್ ಕವರ್ |
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು |
|
ನಿಮ್ಮ ಕಾರಿನ ಕಳ್ಳತನ |
|
ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
|
ಕಸ್ಟಮೈಸ್ ಮಾಡಿದ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ |
|
Get Quote | Get Quote |
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.
ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.
ಹಂತ 1
1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ
ಹಂತ 2
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.
ಹಂತ 3
ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ರಿಇಂಬರ್ಸಮೆಂಟ್ ಅಥವಾ ಕ್ಯಾಶ್‌ಲೆಸ್ ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ.
ಮಾರುತಿ ಸುಜುಕಿ ಸೆಲೆರಿಯೊ ಕಾರ್ ಇನ್ಶೂರೆನ್ಸ್‌ಗಾಗಿ ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕು?
ನಿಮ್ಮ ಮಾರುತಿ ಸುಜುಕಿ ಸೆಲೆರಿಯೊ ಕಾರಿಗೆ ಉತ್ತಮ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು, ನೀವು ಸರಿಯಾದ ರಿಸರ್ಚ್ ಮಾಡಬೇಕಾಗುತ್ತದೆ ಮತ್ತು ಆನ್‌ಲೈನ್‌ನಲ್ಲಿ ವಿವಿಧ ಇನ್ಶೂರರ್‌ಗಳ ಪ್ಲ್ಯಾನ್‌ಗಳನ್ನು ಹೋಲಿಕೆ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ, ನೀವು ಡಿಜಿಟ್ ಇನ್ಶೂರೆನ್ಸ್ ಅನ್ನು ಪರಿಗಣಿಸಬಹುದು. ಏಕೆಂದರೆ ಇದು ಈ ಕೆಳಗಿರುವ ಹಲವಾರು ಪ್ರಯೋಜನಗಳನ್ನು ಹೊಂದಿದೆ:
1. ಹಲವಾರು ಇನ್ಶೂರೆನ್ಸ್ ಆಯ್ಕೆಗಳು
ನೀವು ಡಿಜಿಟ್‌ನಿಂದ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿಕೊಂಡರೆ, ನೀವು ಈ ಕೆಳಗಿನ ವಿಧಗಳಲ್ಲಿ ನಿಮಗೆ ಸೂಕ್ತವಾದುದನ್ನು ಆಯ್ಕೆ ಮಾಡಬಹುದು:
- ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿ : ಇದು ಮೋಟಾರ್ ವೆಹಿಕಲ್ಸ್ ಆ್ಯಕ್ಟ್ ಆಫ್ ಇಂಡಿಯಾ, 1989 ರಿಂದ ಕಡ್ಡಾಯವಾಗಿರುವ ಬೇಸಿಕ್ ಇನ್ಶೂರೆನ್ಸ್ ಪ್ಲ್ಯಾನ್ ಆಗಿದೆ. ಇದು ಥರ್ಡ್ ಪಾರ್ಟಿಯ ಹಾನಿ ಮತ್ತು ಲಿಟಿಗೇಶನ್ ಸಮಸ್ಯೆಗಳನ್ನು ಕವರ್ ಮಾಡುತ್ತದೆ. ನೀವು ಈ ಪ್ಲ್ಯಾನ್ ಅನ್ನು ಡಿಜಿಟ್‌ನಿಂದ ಪಡೆಯಬಹುದು. ಅಲ್ಲದೇ, ನಿಮ್ಮ ಮಾರುತಿ ಕಾರ್ ಮತ್ತು ಥರ್ಡ್ ಪಾರ್ಟಿ ನಡುವಿನ ಅಪಘಾತಗಳಿಂದ ಉಂಟಾಗುವ ಲಯಬಿಲಿಟಿಗಳನ್ನು ತಪ್ಪಿಸಬಹುದು.
- ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ : ಕಳ್ಳತನ, ಬೆಂಕಿ, ನೈಸರ್ಗಿಕ ಅಥವಾ ಕೃತಕ ವಿಪತ್ತುಗಳು ಮತ್ತು ಇತರ ದುರದೃಷ್ಟಕರ ಅಪಘಾತಗಳಿಂದಾಗಿ ನಿಮ್ಮ ಮಾರುತಿ ಕಾರ್ ಸ್ವಂತ ಹಾನಿಯನ್ನು ಅನುಭವಿಸಬಹುದು. ಅಂತಹ ಸಂದರ್ಭಗಳಲ್ಲಿ, ಡಿಜಿಟ್‌ನ ಉಪಯುಕ್ತವಾದ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯು, ನಿಮಗೆ ಹಣಕಾಸಿನ ಸಹಾಯವನ್ನು ಒದಗಿಸುತ್ತದೆ ಮತ್ತು ನಿಮ್ಮ ಲಯಬಿಲಿಟಿಗಳನ್ನು ಕಡಿಮೆ ಮಾಡುತ್ತದೆ.
2. ಆ್ಯಡ್-ಆನ್ ಪ್ರಯೋಜನಗಳು
ನೀವು ಮಾರುತಿ ಸುಜುಕಿ ಸೆಲೆರಿಯೊಗಾಗಿ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಂಡರೆ, ಆ್ಯಡ್-ಆನ್ ಕವರ್‌ಗಳನ್ನು ಸೇರಿಸುವ ಆಯ್ಕೆ ಪಡೆಯುತ್ತೀರಿ. ಮತ್ತು ಹೆಚ್ಚುವರಿ ಶುಲ್ಕಗಳ ವಿರುದ್ಧ ಚಾಲ್ತಿಯಲ್ಲಿರುವ ನಿಮ್ಮ ಪಾಲಿಸಿ ಕವರೇಜನ್ನು ಹೆಚ್ಚಿಸುವ ಆಯ್ಕೆಯನ್ನು ನೀವು ಹೊಂದುತ್ತೀರಿ. ನೀವು ಸೇರಿಸಬಹುದಾದ ಕೆಲವು ಆ್ಯಡ್-ಆನ್ ಕವರ್‌ಗಳೆಂದರೆ ಝೀರೋ ಡೆಪ್ರಿಸಿಯೇಶನ್ ಕವರ್, ರೋಡ್‌ಸೈಡ್ ಅಸಿಸ್ಟೆನ್ಸ್, ರಿಟರ್ನ್-ಟು-ಇನ್‌ವಾಯ್ಸ್ ಕವರ್, ಇಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಇತ್ಯಾದಿ. ನಿಮ್ಮ ಮಾರುತಿ ಸುಜುಕಿ ಸೆಲೆರಿಯೊ ಕಾರ್ ಇನ್ಶೂರೆನ್ಸ್‌ನ ರಿನೀವಲ್ ಬೆಲೆಯ ಜೊತೆಗೆ ಸ್ವಲ್ಪ ಮೊತ್ತವನ್ನು ಪಾವತಿಸುವ ಮೂಲಕ ನೀವು ಈ ಪಾಲಿಸಿಗಳನ್ನು ಸೇರಿಸಬಹುದು ಎಂಬುದನ್ನು ಗಮನಿಸಿ.
3. ಸರಳ ಆನ್‌ಲೈನ್ ಪ್ರಕ್ರಿಯೆ
ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ಆನ್‌ಲೈನ್‌ನಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಕಾರ್ ಇನ್ಶೂರೆನ್ಸ್‌ಗೆ ಅರ್ಜಿ ಸಲ್ಲಿಸಲು ಡಿಜಿಟ್ ನಿಮ್ಮನ್ನು ಅನುಮತಿಸುತ್ತದೆ. ಈ ಸರಳ ಆ್ಯಪ್ ಪ್ರಕ್ರಿಯೆಯು, ಡಾಕ್ಯುಮೆಂಟ್ ಹಾರ್ಡ್ ಕಾಪಿಗಳನ್ನು ಸಲ್ಲಿಸುವ ಅಗತ್ಯವನ್ನು ದೂರ ಮಾಡುತ್ತದೆ. ಈ ಕಾರಣದಿಂದಾಗಿ, ನೀವು ಕೇವಲ ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
4. ಬೋನಸ್ ಮತ್ತು ಡಿಸ್ಕೌಂಟ್‌ಗಳು
ಮಾರುತಿ ಸುಜುಕಿ ಸೆಲೆರಿಯೊ ಕಾರ್ ಇನ್ಶೂರೆನ್ಸ್‌ನ ರಿನೀವಲ್ ಸಮಯದಲ್ಲಿ, ನಿಮ್ಮ ಪಾಲಿಸಿ ಅವಧಿಯೊಳಗೆ ನೀವು ಕ್ಲೈಮ್-ಫ್ರೀ ವರ್ಷವನ್ನು ನಿಭಾಯಿಸಿದರೆ, ಡಿಜಿಟ್‌ನಂತಹ ಇನ್ಶೂರೆನ್ಸ್ ಕಂಪನಿಗಳು ನಿಮ್ಮ ಪಾಲಿಸಿ ಪ್ರೀಮಿಯಂಗಳ ಮೇಲೆ ನಿಮಗೆ ಡಿಸ್ಕೌಂಟ್‌ಗಳನ್ನು ನೀಡುತ್ತಾರೆ. ನೋ ಕ್ಲೈಮ್ ಬೋನಸ್ ಎಂದೂ ಕರೆಯಲ್ಪಡುವ ಈ ಡಿಸ್ಕೌಂಟ್‌ಗಳು, ನಿಮ್ಮ ಪ್ರೀಮಿಯಂನ ಗರಿಷ್ಠ 50% ವರೆಗೆ ಹೋಗಬಹುದು.
5. ಹಲವಾರು ನೆಟ್‌ವರ್ಕ್ ಗ್ಯಾರೇಜ್‌ಗಳು
ಡಿಜಿಟ್ ಭಾರತದಾದ್ಯಂತ ಹಲವಾರು ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳನ್ನು ಹೊಂದಿದೆ. ಇದರಿಂದ ನೀವು ನಿಮ್ಮ ಮಾರುತಿ ಕಾರಿಗೆ ಪ್ರೊಫೆಷನಲ್ಸ್ ರಿಪೇರಿ ಸರ್ವೀಸ್‌ಗಳನ್ನು ಪಡೆಯಬಹುದು. ಇದಲ್ಲದೆ, ಜನರು ಈ ಗ್ಯಾರೇಜ್‌ಗಳಿಂದ ಕ್ಯಾಶ್‌ಲೆಸ್ ಸೌಲಭ್ಯವನ್ನು ಪಡೆಯಬಹುದು ಮತ್ತು ರಿಪೇರಿ ಸೆಂಟರ್‌ಗಳಿಗೆ ಹಣ ಪಾವತಿಸುವುದನ್ನು ತಪ್ಪಿಸಬಹುದು.
6. ಸುಲಭ ಕ್ಲೈಮ್ ಪ್ರಕ್ರಿಯೆ
ಡಿಜಿಟ್‌ನ ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸೆಲ್ಫ್-ಇನ್‌ಸ್ಪೆಕ್ಷನ್ ಪ್ರಕ್ರಿಯೆಯು ತನ್ನ ಕಸ್ಟಮರ್‌ಗಳಿಗೆ ತೊಂದರೆ-ಮುಕ್ತ ಕ್ಲೈಮ್ ಪ್ರಕ್ರಿಯೆಯನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಟೆಕ್ನಿಷಿಯನ್‌ಗಳು ನಿಮ್ಮ ಕಾರಿನ ಹಾನಿಯನ್ನು ಪರಿಶೀಲಿಸುವ ಸಾಂಪ್ರದಾಯಿಕ ಪ್ರಕ್ರಿಯೆಗೆ ಹೋಲಿಸಿದರೆ ಈ ವಿಧಾನವು ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ, ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ನೀವು ಹಾನಿಗಳನ್ನು ಆಯ್ಕೆ ಮಾಡಬಹುದು ಮತ್ತು ಸುಲಭವಾಗಿ ಕ್ಲೈಮ್‌ಗಳನ್ನು ಸಲ್ಲಿಸಬಹುದು.
7. 24x7 ಕಸ್ಟಮರ್ ಸರ್ವೀಸ್
ಮಾರುತಿ ಸುಜುಕಿ ಸೆಲೆರಿಯೊ ಇನ್ಶೂರೆನ್ಸ್ ವೆಚ್ಚದ ಬಗ್ಗೆ ನಿಮಗೆ ಖಚಿತವಿತೆ ಇಲ್ಲದಿದ್ದರೆ ಅಥವಾ ನಿಮಗೆ ಯಾವುದಾದರೂ ಇತರ ಪ್ರಶ್ನೆಗಳಿದ್ದರೆ, ನೀವು ಡಿಜಿಟ್‌ನ ಕಸ್ಟಮರ್ ಸಪೋರ್ಟ್ ಟೀಮ್ ಅನ್ನು ಸಂಪರ್ಕಿಸಬಹುದು. ಮತ್ತು ತ್ವರಿತ ಪರಿಹಾರಗಳನ್ನು ಪಡೆಯಬಹುದು. ಇದರ ಕ್ರಿಯಾಶೀಲ ಕಸ್ಟಮರ್ ಸರ್ವೀಸ್ ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24x7 ಲಭ್ಯವಿರುತ್ತದೆ.
8. ಐಡಿವಿ (IDV) ಕಸ್ಟಮೈಸೇಶನ್
ಮಾರುತಿ ಸುಜುಕಿ ಸೆಲೆರಿಯೊ ಇನ್ಶೂರೆನ್ಸ್ ಬೆಲೆಯು ಕಾರಿನ 'ಇನ್ಶೂರೆನ್ಸ್‌ನ ಘೋಷಿತ ಮೌಲ್ಯ'ದೊಂದಿಗೆ ಬದಲಾಗುತ್ತದೆ. ಕಾರಿನ ಕಳ್ಳತನವಾದಲ್ಲಿ ಅಥವಾ ಕಾರಿಗೆ ಸರಿಪಡಿಸಲಾಗದ ಹಾನಿಯಾದಲ್ಲಿ, ನೀವು ಪಡೆಯುವ ರಿಟರ್ನ್ ಮೊತ್ತವನ್ನು ನಿರ್ಧರಿಸುವ ಮೊದಲು, ಇನ್ಶೂರರ್‌ಗಳು ಈ ಮೌಲ್ಯವನ್ನು ಕ್ಯಾಲ್ಕುಲೇಟ್ ಮಾಡುತ್ತಾರೆ. ಅದರ ತಯಾರಕರ ಮಾರಾಟದ ಬೆಲೆಯಿಂದ ಕಾರಿನ ಡೆಪ್ರಿಸಿಯೇಶನ್ ಅನ್ನು ಕಳೆಯುವುದರ ಮೂಲಕ ಇನ್ಶೂರರ್‌ಗಳು ಈ ಮೌಲ್ಯವನ್ನು ಮೌಲ್ಯಮಾಪನ ಮಾಡುತ್ತಾರೆ. ಆದಾಗ್ಯೂ, ಡಿಜಿಟ್‌ನಂತಹ ಇನ್ಶೂರರ್‌ಗಳು ಈ ಮೌಲ್ಯವನ್ನು ಕಸ್ಟಮೈಸ್ ಮಾಡುವ ಮತ್ತು ನಿಮ್ಮ ಆದಾಯವನ್ನು ಗರಿಷ್ಠಗೊಳಿಸುವ ಅವಕಾಶವನ್ನು ಸ್ವತಃ ನಿಮಗೆ ಕೊಡುತ್ತದೆ. ಹೀಗಾಗಿ, ಸುಜುಕಿ ಸೆಲೆರಿಯೊ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸುವಾಗ, ಇನ್ಶೂರ್ಡ್ ಡಿಕ್ಲರೇಡ್ ವಾಲ್ಯೂ ಪರಿಗಣಿಸುವ ಒಂದು ಮುಖ್ಯ ಅಂಶವಾಗಿದೆ.
ಮಾರುತಿ ಸುಜುಕಿ ಸೆಲೆರಿಯೊ ಕಾರ್ 3 ಮತ್ತು ಡಿಜಿಟ್ ನೀಡುವ ಪ್ರಯೋಜನಗಳ ಬಗ್ಗೆ ಈಗ ನಿಮಗೆ ತಿಳಿದಿದೆ. ಇದರಿಂದ ನೀವು ತಿಳುವಳಿಕೆಯುತ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಇದಲ್ಲದೆ, ಹೆಚ್ಚಿನ ಡಿಡಕ್ಟಿಬಲ್ ಪ್ಲ್ಯಾನ್ ಅನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನೀವು ಕಡಿಮೆ ಪ್ರೀಮಿಯಂನ ಪಾಲಿಸಿಯನ್ನು ಆಯ್ಕೆ ಮಾಡಬಹುದು.
ಮಾರುತಿ ಸುಜುಕಿ ಸೆಲೆರಿಯೊಗೆ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯವಾಗಿದೆ?
ನಿಮ್ಮ ಮಾರುತಿ ಸೆಲೆರಿಯೊ ಹಳೆಯದಾಗಿರಲಿ ಅಥವಾ ಹೊಸದಾಗಿರಲಿ, ಎಲ್ಲಾ ಉತ್ತಮ ಕಾರುಗಳಿಗೆ ಉತ್ತಮ ರಕ್ಷಣೆಯ ಅಗತ್ಯವಿರುತ್ತದೆ ಮತ್ತು ಅದಕ್ಕಾಗಿಯೇ ನಿಮ್ಮ ಮಾರುತಿ ಸೆಲೆರಿಯೊವನ್ನು ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ರಕ್ಷಣೆ ಮಾಡಲಾಗಿದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ಕಾರ್ ಇನ್ಶೂರೆನ್ಸ್‌ನ ಕೆಲವು ಪ್ರಯೋಜನಗಳು ಹೀಗಿವೆ:
- ಫೈನಾನ್ಸಿಯಲ್ ಲಯಬಿಲಿಟಿ : ನಿಮ್ಮ ಸ್ವಂತ ಕಾರಿನ ಹಾನಿಗಳಿಂದ ಉಂಟಾದ ಫೈನಾನ್ಸಿಯಲ್ ಲಯಬಿಲಿಟಿಗಳ ವಿರುದ್ಧ, ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್‌ನಲ್ಲಿರುವ ಓನ್ ಡ್ಯಾಮೇಜ್ ಕವರ್ ನಿಮಗೆ ರಕ್ಷಣೆ ನೀಡುತ್ತದೆ. ಅಪಘಾತ, ನೈಸರ್ಗಿಕ ವಿಪತ್ತುಗಳು, ಕಳ್ಳತನ ಅಥವಾ ವಿಧ್ವಂಸಕತೆ, ಮುಷ್ಕರಗಳು ಮತ್ತು ಇತರರ ಗಲಭೆಗಳಿಂದ ಯಾವುದೇ ಹಾನಿ ಮತ್ತು ನಷ್ಟಗಳ ವಿರುದ್ಧ ಇದು ನಿಮ್ಮ ಕಾರನ್ನು ರಕ್ಷಿಸುತ್ತದೆ.
- ಕಾನೂನುಬದ್ಧ ಅನುಸರಣೆ : ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಕಾರು ಭಾರತದ ರಸ್ತೆಗಳಲ್ಲಿ ಡ್ರೈವ್ ಮಾಡಲು ಕಾನೂನುಬದ್ಧವಾಗಿದೆ ಎಂದು ಖಚಿತಪಡಿಸುತ್ತದೆ. ಕಾರ್ ಇನ್ಶೂರೆನ್ಸ್ ಪಾಲಿಸಿ ಇಲ್ಲದಿದ್ದರೆ, ನಿಮಗೆ ₹2,000 ದಂಡ ವಿಧಿಸಬಹುದು ಮತ್ತು ನಿಮ್ಮ ಲೈಸೆನ್ಸ್ ಅನ್ನು ಸಹ ಕ್ಯಾನ್ಸಲ್ ಮಾಡಲಾಗುತ್ತದೆ.
- ಥರ್ಡ್ ಪಾರ್ಟಿ ಲಯಬಿಲಿಟಿ : ತಪ್ಪುಗಳು ಸಂಭವಿಸುತ್ತವೆ. ಥರ್ಡ್ ಪಾರ್ಟಿ ವ್ಯಕ್ತಿಗೆ, ಪ್ರಾಪರ್ಟಿಗೆ ಅಥವಾ ವಾಹನಕ್ಕೆ ಹಾನಿಯಾದಲ್ಲಿ, ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ಅದೇ ಕಾರಣದಿಂದ ಉಂಟಾದ ನಷ್ಟಗಳನ್ನು ಕವರ್ ಮಾಡುತ್ತದೆ.
- ಕಾಂಪ್ರೆಹೆನ್ಸಿವ್ ಕವರ್ : ಸಂಪೂರ್ಣ ರಕ್ಷಣೆಯನ್ನು ಆಯ್ಕೆ ಮಾಡಿಕೊಳ್ಳುವುದಾದರೆ, ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯ ಆಯ್ಕೆಯು ಯಾವಾಗಲೂ ಉತ್ತಮವಾಗಿರುತ್ತದೆ. ಏಕೆಂದರೆ ಇದು ಕೇವಲ ಕಡ್ಡಾಯ ಅವಶ್ಯಕತೆಗಳಾದ ಥರ್ಡ್ ಪಾರ್ಟಿ ಹಾನಿಗಳನ್ನು ಕವರ್ ಮಾಡುವುದು ಮಾತ್ರವಲ್ಲದೇ, ಜೊತೆಗೆ ಅನಿರೀಕ್ಷಿತ ಸಂದರ್ಭಗಳಿಂದ ನಿಮ್ಮನ್ನು ಮತ್ತು ನಿಮ್ಮ ಸ್ವಂತ ಕಾರನ್ನು ಸಹ ರಕ್ಷಿಸುತ್ತದೆ. ಹೆಚ್ಚುವರಿಯಾಗಿ, ಕಾರ್ ಇನ್ಶೂರೆನ್ಸ್ ಆ್ಯಡ್-ಆನ್‌ಗಳು ಮತ್ತು ಝೀರೋ ಡೆಪ್ರಿಸಿಯೇಶನ್ ಕವರ್, ಬ್ರೇಕ್‌ಡೌನ್ ಅಸಿಸ್ಟೆನ್ಸ್, ಇಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಕವರ್ ಮುಂತಾದ ಕವರ್‌ಗಳೊಂದಿಗೆ ನಿಮ್ಮ ಪಾಲಿಸಿಯನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ಸಹ ನೀವು ಪಡೆಯುತ್ತೀರಿ.
ಮಾರುತಿ ಸುಜುಕಿ ಸೆಲೆರಿಯೊ ಕುರಿತು ಇನ್ನಷ್ಟು ತಿಳಿಯಿರಿ
ಮಾರುತಿ ಸುಜುಕಿಯು ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಕೆಲವು ಅತ್ಯುತ್ತಮ ಕಾರುಗಳನ್ನು ಪರಿಚಯಿಸಿದೆ. ಕಾಂಪ್ಯಾಕ್ಟ್ ಮತ್ತು ಅನುಕೂಲಕರವಾದ ಮಾರುತಿ ಸುಜುಕಿ ಸೆಲೆರಿಯೊ, ಉತ್ತಮ ಮೈಲೇಜ್‌ಗಾಗಿ ಅದರ ಮತ್ತೊಂದು ಸೃಷ್ಟಿಯಾಗಿದೆ. ವರ್ಲ್ಡ್ ಆಟೋ ಫೋರಮ್ ಅವಾರ್ಡ್ಸ್ 2015 ರಲ್ಲಿ , ಇದು ಬೆಸ್ಟ್ ಇನ್ನೊವೇಶನ್ ಅವಾರ್ಡ್ ಅನ್ನು ಪಡೆದಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಈ ಕಾರು ದೀರ್ಘ ಪ್ರಯಾಣಕ್ಕೆ ಅತ್ಯಂತ ವಿಶ್ವಾಸಾರ್ಹವಾಗಿದೆ ಮತ್ತು ಪ್ರತಿ ಲೀಟರ್‌ಗೆ 23.1 ಕಿಮೀ ಫ್ಯೂಯೆಲ್ ದಕ್ಷತೆಯನ್ನು ಹೊಂದಿದೆ. ಮಾರುತಿ ಸುಜುಕಿ ಸೆಲೆರಿಯೊ ಪೆಟ್ರೋಲ್ ಮತ್ತು ಸಿಎನ್‌ಜಿ ಎರಡು ಫ್ಯೂಯೆಲ್ ವೇರಿಯೆಂಟ್‌ಗಳನ್ನು ಹೊಂದಿದೆ. ಇದು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಈ ಸ್ಟೈಲಿಶ್ ಮತ್ತು ಕ್ಲಾಸಿ ಕಾರಿನ ಬೆಲೆ ₹4.41 ಲಕ್ಷದಿಂದ ಪ್ರಾರಂಭವಾಗುತ್ತದೆ.
ಮಾರುತಿ ಸುಜುಕಿ ಸೆಲೆರಿಯೊ ಮೂರು ಮ್ಯಾನುವಲ್ ಮತ್ತು ಎರಡು ಆಟೋಮ್ಯಾಟಿಕ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಕಾರನ್ನು ಹೈವೇಗಳಲ್ಲಿ ಡ್ರೈವ್ ಮಾಡಲು ಸುರಕ್ಷಿತವಾಗಿದೆ ಮತ್ತು ನಿಮ್ಮ ದೈನಂದಿನ ಪ್ರಯಾಣಕ್ಕೆ ಅತ್ಯುತ್ತಮ ಸಂಗಾತಿಯನ್ನಾಗಿ ಮಾಡುತ್ತದೆ. 2014 ರಲ್ಲಿ ಪ್ರಾರಂಭವಾದ ಇದು, ಅಂದಿನಿಂದ ಉತ್ತಮ ಪ್ರದರ್ಶನವನ್ನು ನೀಡಿದೆ.
ನೀವು ಮಾರುತಿ ಸುಜುಕಿ ಸೆಲೆರಿಯೊವನ್ನು ಏಕೆ ಖರೀದಿಸಬೇಕು?
ಮಾರುತಿ ಸೆಲೆರಿಯೊ LXI(O), VXI(O), ಮತ್ತು ZXI(O) ಪ್ರತಿ ವಿಧಗಳ ಆಪ್ಷನಲ್‌ಗಳೊಂದಿಗೆ LXI, VXI ಮತ್ತು ZXI ಎಂಬ ಮೂರು ವೇರಿಯೆಂಟ್‌ಗಳನ್ನು ಒಳಗೊಂಡಿದೆ. ಸೆಲೆರಿಯೊ VXI ಮತ್ತು ZXI ನಲ್ಲಿ ಎರಡು ಆಟೋಮ್ಯಾಟಿಕ್ ವಿಧಗಳಿವೆ. ಪ್ರತಿಯೊಂದೂ ಉತ್ತಮ ಕಂಟ್ರೋಲ್, ಫೋರ್ಸ್ ಲಿಮಿಟರ್, ಡ್ರೈವರ್‌ನ ಏರ್‌ಬ್ಯಾಗ್ ಮತ್ತು ಫ್ರಂಟ್ ಸೀಟ್ ಬೆಲ್ಟ್ ಪ್ರಿ-ಟೆನ್ಷನರ್‌ಗಾಗಿ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಡ್ರೈವರ್‌ನ ಏರ್‌ಬ್ಯಾಗ್ ಎಲ್ಲಾ ವರ್ಷನ್‌ಗಳಲ್ಲಿ ಸಾಮಾನ್ಯವಾಗಿದೆ ಆದರೆ ಆಟೋಮ್ಯಾಟಿಕ್‌ನಲ್ಲಿ ಪ್ಯಾಸೆಂಜರ್ ಏರ್‌ಬ್ಯಾಗ್ ಸಹ ಲಭ್ಯವಿದೆ.
ಗರಿಷ್ಠ 5 ಸದಸ್ಯರು ಕಾರಿನಲ್ಲಿ ಸುಲಭವಾಗಿ ಪ್ರಯಾಣಿಸಬಹುದು. ಮಾರುತಿ ಸೆಲೆರಿಯೊದ ಫೀಚರ್‌ಗಳು ಬೇಸ್ ಲೆವೆಲ್‌ನಿಂದಲೇ ಗಮನ ಸೆಳೆಯುತ್ತವೆ. ಈ ವಿಭಾಗದ ಯಾವುದೇ ಕಾರು ABS ಅನ್ನು ನೀಡುವುದಿಲ್ಲ. ನೀವು LXI ನಲ್ಲಿ ಏರ್ ಕಂಡೀಷನಿಂಗ್, ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್ ಮತ್ತು ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಪಡೆಯುತ್ತೀರಿ. VXI ಯಂತಹ ಮಾಡೆಲ್‌ಗಳಿಗೆ, ನೀವು ಹೆಚ್ಚುವರಿ ಫ್ರಂಟ್ ಮತ್ತು ರಿಯರ್ ಪವರ್ ವಿಂಡೋಗಳು, ಡೇ ಅಂಡ್ ನೈಟ್ ಇನ್‌ಸೈಡ್ ರಿಯರ್-ವ್ಯೂ ಮಿರರ್, ಅಡ್ಜಸ್ಟೆಬಲ್ ಔಟ್‌ಸೈಡ್ ರಿಯರ್-ವ್ಯೂ ಮಿರರ್, 60:40 ಸ್ಪ್ಲಿಟ್‌ನೊಂದಿಗೆ ರಿಯರ್ ಸೀಟ್‌ಗಳನ್ನು ಪಡೆಯುತ್ತೀರಿ.
ZXI ಗಾಗಿ ನಿಮ್ಮ ಬಜೆಟ್ ಅನ್ನು ಹೆಚ್ಚಿಸಿದಂತೆ, ನೀವು CD, USB, ಮತ್ತು Aux-in ನೊಂದಿಗೆ ಡಬಲ್ DIN ಆಡಿಯೋ ಸಿಸ್ಟಮ್, ಎಲೆಕ್ಟ್ರಾನಿಕಲಿ ಅಡ್ಜಸ್ಟೆಬಲ್ ಮಾಡಬಹುದಾದ ಔಟ್‌ಸೈಡ್ ರಿಯರ್-ವ್ಯೂ ಮಿರರ್, ಸೆಂಟ್ರಲ್ ಲಾಕಿಂಗ್ ಮತ್ತು ಹೆಚ್ಚಿನವುಗಳನ್ನು ಪಡೆಯುತ್ತೀರಿ.
ಚೆಕ್ ಮಾಡಿ: ಮಾರುತಿ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಮಾರುತಿ ಸುಜುಕಿ ಸೆಲೆರಿಯೊ ವೇರಿಯೆಂಟ್‌ಗಳ ಬೆಲೆ ಪಟ್ಟಿ
ವೇರಿಯಂಟ್‌ಗಳ ಹೆಸರು | ನವದೆಹಲಿಯಲ್ಲಿ ವೇರಿಯಂಟ್‌ಗಳ ಅಂದಾಜು ಬೆಲೆ |
---|---|
LXI | ₹ 5.49 ಲಕ್ಷ |
VXI | ₹ 6.17 ಲಕ್ಷ |
ZXI | ₹ 6.50 ಲಕ್ಷ |
VXI AMT | ₹ 6.84 ಲಕ್ಷ |
ZXI AMT | ₹ 7.23 ಲಕ್ಷ |
ZXI Plus | ₹ 7.23 ಲಕ್ಷ |
ZXI Plus AMT | ₹ 7.78 ಲಕ್ಷ |
[1]
ಪದೇ ಪದೇ ಕೇಳಲಾದ ಪ್ರಶ್ನೆಗಳು
ನನ್ನ ಮಾರುತಿ ಸುಜುಕಿ ಸೆಲೆರಿಯೊ ಕಾರ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ ಸರ್ವೀಸ್ ಟ್ಯಾಕ್ಸ್ ಅನ್ವಯಿಸುತ್ತದೆಯೇ?
ಹೌದು, ಚಾಲ್ತಿಯಲ್ಲಿರುವ ಕಾನೂನಿನ ಪ್ರಕಾರ, ಮಾರುತಿ ಕಾರುಗಳ ಮೋಟಾರ್ ಇನ್ಶೂರೆನ್ಸ್‌ನ ಮೇಲೆ ಸರ್ವೀಸ್ ಟ್ಯಾಕ್ಸ್ ಅನ್ವಯಿಸುತ್ತದೆ.
ಹಿಂದಿನ ಓನರ್‌ಗಳ ಹೆಸರಿನಲ್ಲಿ ನಾನು ಮಾರುತಿ ಸುಜುಕಿ ಸೆಲೆರಿಯೊ ಇನ್ಶೂರೆನ್ಸ್ ಅನ್ನು ಮುಂದುವರೆಸಬಹುದೇ?
ಇಲ್ಲ, ನೀವು ಇನ್ಶೂರೆನ್ಸ್ ಅನ್ನು ನಿಮ್ಮ ಸ್ವಂತ ಹೆಸರಿಗೆ ವರ್ಗಾಯಿಸಬೇಕು; ಇಲ್ಲದಿದ್ದರೆ, ನೀವು ಅದಕ್ಕಾಗಿ ಕ್ಲೈಮ್ ಮಾಡಲು ಸಾಧ್ಯವಾಗುವುದಿಲ್ಲ.