ಕಿಯಾ ಸೆಲ್ಟೋಸ್ ಇನ್ಶುರೆನ್ಸ್

Get Instant Policy in Minutes*

Third-party premium has changed from 1st June. Renew now

ಕಿಯಾ ಸೆಲ್ಟೋಸ್ ಇನ್ಶೂರೆನ್ಸ್: ಕಿಯಾ ಸೆಲ್ಟೋಸ್ ಕಾರ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಖರೀದಿಸಿ/ರಿನೀವಲ್ ಮಾಡಿ.

ಕಿಯಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮೊದಲ ಬಾರಿಗೆ 2017 ರಲ್ಲಿ ಇಂಡಿಯನ್ ವೆಹಿಕಲ್ ಮಾರ್ಕೆಟ್‌ಗೆ ತನ್ನ ಕಾಲಿಟ್ಟಿತು ಮತ್ತು ಅಂದಿನಿಂದ ತಲೆ ಎತ್ತಿದೆ. 2019 ರಲ್ಲಿ ಬಿಡುಗಡೆಯಾದ ಕಿಯಾ ಸೆಲ್ಟೋಸ್, ಭಾರತೀಯ ಮಾರ್ಕೆಟ್‌ನಲ್ಲಿ ಕಿಯಾ ವಿಭಾಗದ ಮೊದಲ ಎಸ್‌ಯುವಿ ಆಗಿದೆ.

ಮೋಟಾರ್ ವೆಹಿಕಲ್ಸ್ ಆ್ಯಕ್ಟ್, 1988, ಪ್ರತಿ ಕಾರ್ ಮಾಲೀಕರು ತಮ್ಮ ಕಾರಿಗೆ ಆ್ಯಕ್ಟಿವ್ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬೇಕೆಂದು ಹೇಳುತ್ತದೆ. ಅಂತೆಯೇ, ನಿಮ್ಮ ಕಿಯಾ ಸೆಲ್ಟೋಸ್‌ಗೆ ನಿಮ್ಮ ಸ್ವಂತ ಅಥವಾ ಥರ್ಡ್-ಪಾರ್ಟಿ ಕಾರ್ ಹಾನಿ ವೆಚ್ಚಗಳನ್ನು ತಪ್ಪಿಸಲು, ನಿಮಗೆ ವ್ಯಾಲಿಡ್ ಆಗಿರುವ ಇನ್ಶೂರೆನ್ಸ್ ಪಾಲಿಸಿಯ ಅಗತ್ಯವಿದೆ.

ಆದ್ದರಿಂದ, ನೀವು ಡಿಜಿಟ್‌ನಂತಹ ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರಿಂದ ನಿಮ್ಮ ಕಿಯಾ ಸೆಲ್ಟೋಸ್ ಕಾರ್ ಇನ್ಶೂರೆನ್ಸ್ ಅನ್ನು ರಿನೀವಲ್ ಮಾಡಿಸಬೇಕು ಅಥವಾ ಖರೀದಿಸಬೇಕು.

ಕಿಯಾ ಸೆಲ್ಟೋಸ್ ಕಾರ್ ಇನ್ಶೂರೆನ್ಸ್ ರಿನೀವಲ್‌ನ ಬೆಲೆ

ರಿಜಿಸ್ಟ್ರೇಶನ್ ದಿನಾಂಕ ಪ್ರೀಮಿಯಂ (ಕಾಂಪ್ರೆಹೆನ್ಸಿವ್ ಪಾಲಿಸಿಗಾಗಿ)
ಜೂನ್ - 2021 23,421 ಜೂನ್ - 2020 8,998 ಜೂನ್ - 2019 7,879

** ಡಿಸ್‌ಕ್ಲೈಮರ್ - ಕಿಯಾ ಸೆಲ್ಟೋಸ್ 1.4 GTX ಪ್ಲಸ್ DCT BSV1I 1353.0 ಗಾಗಿ ಪ್ರೀಮಿಯಂ ಕ್ಯಾಲ್ಕುಲೇಶನ್ ಮಾಡಲಾಗಿದೆ, ಜಿಎಸ್‌ಟಿ ಅನ್ನು ಹೊರತುಪಡಿಸಿ)

ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಜೂನ್, ಎನ್‌ಸಿಬಿ - 0%, ಯಾವುದೇ ಆ್ಯಡ್-ಆನ್‌ಗಳಿಲ್ಲ ಮತ್ತು ಐಡಿವಿ-ಲೋವೆಸ್ಟ್ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಶನ್ ಅನ್ನು ಅಕ್ಟೋಬರ್-2021 ರಲ್ಲಿ ಮಾಡಲಾಗಿದೆ. ಮೇಲೆ ನಿಮ್ಮ ವೆಹಿಕಲ್‌ನ ವಿವರಗಳನ್ನು ನಮೂದಿಸುವ ಮೂಲಕ ದಯವಿಟ್ಟು ಫೈನಲ್ ಪ್ರೀಮಿಯಂ ಅನ್ನು ಚೆಕ್ ಮಾಡಿ.

ಕಿಯಾ ಸೆಲ್ಟೋಸ್ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ

ನೀವು ಡಿಜಿಟ್‌ನ ಕಿಯಾ ಸೆಲ್ಟೋಸ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಕಿಯಾ ಸೆಲ್ಟೋಸ್‌ಗಾಗಿ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದ ಕಾರಣದಿಂದಾಗಿ ಸ್ವಂತ ಕಾರ್‌ಗೆ ಉಂಟಾಗುವ ಹಾನಿ/ನಷ್ಟಗಳು

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರ್‌ಗೆ ಉಂಟಾಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರ್‌ಗೆ ಉಂಟಾಗುವ ಹಾನಿ/ನಷ್ಟಗಳು

×

ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ

×

ಥರ್ಡ್ ಪಾರ್ಟಿ ಆಸ್ತಿಗೆ ಉಂಟಾಗುವಹಾನಿ

×

ವೈಯಕ್ತಿಕ ಅಪಘಾತದ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಸಾವು

×

ನಿಮ್ಮ ಕಾರ್‌ನ ಕಳ್ಳತನ

×

ಡೋರ್‌ಸ್ಟೆಪ್ ಪಿಕಪ್ ಮತ್ತು ರಿಪೇರಿ

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್‌ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ

ಕ್ಲೈಮ್ ಸಲ್ಲಿಸುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!

ಹಂತ 1

1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸ್ವಯಂ ತಪಾಸಣೆಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ಮರುಪಾವತಿ ಅಥವಾ ಕ್ಯಾಶ್‌ಲೆಸ್ ಆಯ್ಕೆಗಳೆರಡರಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಕಿಯಾ ಸೆಲ್ಟೋಸ್ ಇನ್ಶೂರೆನ್ಸ್‌ಗಾಗಿ ಡಿಜಿಟ್ ಅನ್ನೇ ಆಯ್ಕೆ ಮಾಡಲು ಕಾರಣಗಳು

ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆಮಾಡುವ ಮೊದಲು, ನೀವು ಕಿಯಾ ಸೆಲ್ಟೋಸ್ ಕಾರ್ ಇನ್ಶೂರೆನ್ಸ್ ಬೆಲೆಯನ್ನು ಹೊರತುಪಡಿಸಿ ಹಲವಾರು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಡಿಜಿಟ್ ಇನ್ಶೂರೆನ್ಸ್ ಅನೇಕ ಲಾಭದಾಯಕ ಪ್ರಯೋಜನಗಳನ್ನು ನೀಡುತ್ತಿದ್ದು, ಇದು ಕಿಯಾ ಕಾರ್ ಮಾಲೀಕರಿಗೆ ಸೂಕ್ತವಾದ ಆಯ್ಕೆಯಾಗಿದೆ.

  • ಅನುಕೂಲಕರ ಆನ್‌ಲೈನ್ ಪ್ರಕ್ರಿಯೆ - ನಿಮ್ಮ ಸೆಲ್ಟೋಸ್ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡಲು ಮತ್ತು ಖರೀದಿಸಲು ಡಿಜಿಟ್ ಅನುಕೂಲಕರ ಆನ್‌ಲೈನ್ ಪ್ರಕ್ರಿಯೆಯನ್ನು ಒದಗಿಸುತ್ತದೆ. ನಿಮ್ಮ ಕ್ಲೈಮ್ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಲು ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನೇರವಾಗಿ ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ಇದು ಯೂಸರ್-ಫ್ರೆಂಡ್ಲಿ ಇಂಟರ್ಫೇಸ್ ಅನ್ನು ನೀಡುತ್ತದೆ.

  • ಯಾವುದೇ ಹಿಡನ್ ವೆಚ್ಚವಿಲ್ಲ - ವೆಬ್‌ಸೈಟ್‌ನಲ್ಲಿ ತನ್ನ ಇನ್ಶೂರೆನ್ಸ್ ಪಾಲಿಸಿಗಳನ್ನು ಡಿಸ್‌ಪ್ಲೇ ಮಾಡುವಾಗ ಡಿಜಿಟ್ ಇನ್ಶೂರೆನ್ಸ್ ತನ್ನ ಗ್ರಾಹಕರಿಗೆ ಅತ್ಯುತ್ತಮವಾದ ಸ್ಪಷ್ಟತೆಯನ್ನು ನೀಡುತ್ತದೆ. ಆದ್ದರಿಂದ, ನೀವು ಆಯ್ಕೆ ಮಾಡಿದ ಪಾಲಿಸಿಗೆ ಮಾತ್ರ ಪಾವತಿಸುತ್ತೀರಿ. ಅಂತೆಯೇ, ನೀವು ನಿರ್ದಿಷ್ಟವಾಗಿ ಆಯ್ಕೆ ಮಾಡಿದ್ದಕ್ಕಾಗಿ ಮಾತ್ರ ನೀವು ರಕ್ಷಣೆಯನ್ನು ಪಡೆಯುತ್ತೀರಿ.

  • ಇನ್ಶೂರೆನ್ಸ್ ಪಾಲಿಸಿ ಆಯ್ಕೆಗಳು - ಡಿಜಿಟ್ ಇನ್ಶೂರೆನ್ಸ್ ನಿಮಗೆ ಕಾಂಪ್ರೆಹೆನ್ಸಿವ್ ಪಾಲಿಸಿ ಮತ್ತು ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿ ಎರಡನ್ನೂ ನೀಡುತ್ತದೆ. ಆದ್ದರಿಂದ, ನೀವು ಲಭ್ಯವಿರುವ ಆಯ್ಕೆಗಳಲ್ಲಿ ಸೂಕ್ತವೆಂದು ಭಾವಿಸುವ ಯಾವುದೇ ಪಾಲಿಸಿಯನ್ನು ಮುಕ್ತವಾಗಿ ಆಯ್ಕೆ ಮಾಡಿಕೊಳ್ಳಿ. 

  • ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳು - ಹೆಚ್ಚುವರಿಯಾಗಿ, ಡಿಜಿಟ್‌ನ ಗ್ಯಾರೇಜ್‌ಗಳು, ನೀವು ರೋಡ್ ಸೈಡ್ ಅಪಘಾತದಲ್ಲಿ ಸಿಲುಕಿಕೊಂಡರೆ ನಿಮ್ಮ ಹಾನಿಯ ರಿಪೇರಿಗಾಗಿ ಡೋರ್‌ಸ್ಟೆಪ್ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳನ್ನು ನೀಡುವುದನ್ನು ಖಚಿತಪಡಿಸುತ್ತದೆ.

  • ಐಡಿವಿ (IDV) ಕಸ್ಟಮೈಸೇಶನ್  - ಇದಲ್ಲದೆ, ಡಿಜಿಟ್ ನಿಮಗೆ ಸೆಲ್ಟೋಸ್‌ನಂತಹ ಕಿಯಾ ಕಾರ್‌ಗಳ ಐಡಿವಿಯನ್ನು ಬದಲಾಯಿಸಲು ಅವಕಾಶ ನೀಡುತ್ತದೆ. ನಿಮ್ಮ ಕಾರ್ ಬದಲಾಯಿಸಲಾಗದ ಹಾನಿಗೆ ಒಳಗಾಗಿದ್ದರೆ, ಕಡಿಮೆ ಐಡಿವಿಗಿಂತ ಹೆಚ್ಚಿನ ಐಡಿವಿ ಹೆಚ್ಚು ಹಣಕಾಸಿನ ಕವರೇಜ್ ಅನ್ನು ಒದಗಿಸುತ್ತದೆ. ಆದಾಗ್ಯೂ, ನಿಮ್ಮ ಐಡಿವಿ ನಿಮ್ಮ ಪಾಲಿಸಿ ಪ್ರೀಮಿಯಂಗೆ ನೇರವಾದ ಅನುಪಾತದಲ್ಲಿರುತ್ತದೆ. ಡಿಜಿಟ್‌ನೊಂದಿಗೆ, ಕಡಿಮೆ ಐಡಿವಿಯನ್ನು ಆರಿಸಿಕೊಳ್ಳುವ ಮೂಲಕ, ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡಲು ನೀವು ಆಯ್ಕೆ ಮಾಡಬಹುದು.

  • ತ್ವರಿತ ಕ್ಲೈಮ್ ಸೆಟಲ್‌ಮೆಂಟ್ - ಡಿಜಿಟ್ ನಿಮಗೆ ತ್ವರಿತ ಕ್ಲೈಮ್ ಸೆಟಲ್‌ಮೆಂಟ್ ಸೇವೆಗಳನ್ನು ನೀಡುತ್ತದೆ. ಡಿಜಿಟ್‌ನೊಂದಿಗೆ, ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ ತಪಾಸಣೆಯ ಮೂಲಕ, ಕೆಲವೇ ಕೆಲವು ಸರಳ ಹಂತಗಳಲ್ಲಿ ನಿಮ್ಮ ಕ್ಲೈಮ್‌ಗಳನ್ನು ತಕ್ಷಣವೇ ಫೈಲ್ ಮಾಡಲು ಮತ್ತು ಇತ್ಯರ್ಥಗೊಳಿಸಲು ನಿಮಗೆ ಸಾಧ್ಯವಾಗುತ್ತದೆ.

  • ಗ್ಯಾರೇಜ್‌ಗಳ ವಿಶಾಲ ನೆಟ್‌ವರ್ಕ್ - ಡಿಜಿಟ್ ದೇಶಾದ್ಯಂತ 5800+ ಗ್ಯಾರೇಜ್‌ಗಳ ವಿಶಾಲ ನೆಟ್‌ವರ್ಕ್‌ನೊಂದಿಗೆ ಟೈ-ಅಪ್‌ಗಳನ್ನು ಹೊಂದಿದೆ. ಪರಿಣಾಮವಾಗಿ, ನಿಮಗೆ ಯಾವಾಗಾದರೂ ಅಪಘಾತವುಂಟಾದಾಗ ನಿಮ್ಮ ಕಿಯಾ ಸೆಲ್ಟೋಸ್‌ಗಾಗಿ ಕ್ಯಾಶ್‌ಲೆಸ್ ರಿಪೇರಿಯನ್ನು ನೀಡುವ ಪಾರ್ಟ್ನರ್ ಗ್ಯಾರೇಜ್ ಅನ್ನು ನೀವು ಯಾವಾಗಲೂ ನಿಮ್ಮ ಸಮೀಪದಲ್ಲಿಯೇ ಕಾಣಬಹುದು.

  • ವಿಶ್ವಾಸಾರ್ಹ ಕಸ್ಟಮರ್ ಸರ್ವೀಸ್ - ನಿಮ್ಮ ಕಿಯಾ ಸೆಲ್ಟೋಸ್ ಕಾರ್ ಇನ್ಶೂರೆನ್ಸ್‌ನೊಂದಿಗೆ 24x7 ಅಸಿಸ್ಟೆನ್ಸ್ ಅನ್ನು ಖಾತ್ರಿಪಡಿಸುವ ರೆಸ್ಪಾನ್ಸಿವ್ ಕಸ್ಟಮರ್ ಸರ್ವೀಸ್ ಟೀಮ್‌ನೊಂದಿಗೆ ಡಿಜಿಟ್ ಕಾರ್ಯನಿರ್ವಹಿಸುತ್ತದೆ.

ಹೆಚ್ಚುವರಿಯಾಗಿ, ಸಣ್ಣ ಕ್ಲೈಮ್‌ಗಳನ್ನು ತಪ್ಪಿಸುವ ಮೂಲಕ ಮತ್ತು ಹೆಚ್ಚಿನ ಡಿಡಕ್ಟಿಬಲ್ ಅನ್ನು ಆರಿಸಿಕೊಳ್ಳುವ ಮೂಲಕ ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡಲು, ಡಿಜಿಟ್ ಇನ್ಶೂರೆನ್ಸ್ ನಿಮಗೆ ಅನುಮತಿಸುತ್ತದೆ. ಆದಾಗ್ಯೂ, ಕಡಿಮೆ ಪ್ರೀಮಿಯಂಗಳಿಗೆ ಆಯ್ಕೆ ಮಾಡಿಕೊಂಡು ಅಂತಹ ಲಾಭದಾಯಕ ಪ್ರಯೋಜನಗಳನ್ನು ಕಳೆದುಕೊಳ್ಳುವುದು ಬುದ್ಧಿವಂತರ ಲಕ್ಷಣವಲ್ಲ.

ಆದ್ದರಿಂದ, ನಿಮ್ಮ ಕಿಯಾ ಸೆಲ್ಟೋಸ್ ಕಾರ್ ಇನ್ಶೂರೆನ್ಸ್ ಕುರಿತು ಹೆಚ್ಚಿನ ಸ್ಪಷ್ಟತೆಯನ್ನು ಪಡೆಯಲು ಡಿಜಿಟ್‌ನಂತಹ ಜವಾಬ್ದಾರಿಯುತ ಇನ್ಶೂರೆನ್ಸ್ ಪೂರೈಕೆದಾರರನ್ನು ಮುಕ್ತವಾಗಿ ಸಂಪರ್ಕಿಸಿ.

ಕಿಯಾ ಸೆಲ್ಟೋಸ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯವಾಗಿದೆ?

ನೀವು ಪೆನಲ್ಟಿಗಳು ಮತ್ತು ಹಾನಿಗಳ ವೆಚ್ಚಗಳಿಂದ ದೂರವಿರಲು ಬಯಸಿದರೆ, ಕಿಯಾ ಸೆಲ್ಟೋಸ್ ಇನ್ಶೂರೆನ್ಸ್ ವೆಚ್ಚವನ್ನು ಭರಿಸುವುದು ಈಗ ಹೆಚ್ಚು ಲಾಜಿಕಲ್ ಆಗಿ ಕಾಣುತ್ತದೆ. ಉತ್ತಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ಸಾಕಷ್ಟು ಪ್ರಯೋಜನಗಳೊಂದಿಗೆ ಬರುತ್ತದೆ.

  • ಪೆನಲ್ಟಿ/ಶಿಕ್ಷೆಯಿಂದ ರಕ್ಷಣೆ - ಮೋಟಾರ್ ವೆಹಿಕಲ್ಸ್ ಆ್ಯಕ್ಟ್, 1988, ನೀವು ಓಡಿಸುವ ಕಾರನ್ನು ವ್ಯಾಲಿಡ್ ಆಗಿರುವ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕೆಂದು ಹೇಳುತ್ತದೆ. ಒಂದುವೇಳೆ ಹಾಗೆ ಮಾಡದಿದ್ದರೆ, ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಆದ್ದರಿಂದ, ನಿಮ್ಮ ಮೊದಲ ಅಪರಾಧಕ್ಕೆ ನೀವು ₹2,000 ಮತ್ತು ನಂತರದ ಅಪರಾಧಗಳಿಗೆ ₹4,000 ದಂಡವನ್ನು ಪಾವತಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಇದು ನಿಮ್ಮ ಲೈಸೆನ್ಸ್ ಕ್ಯಾನ್ಸಲ್‌ಗೆ ಮತ್ತು ಮೂರು ತಿಂಗಳ ಜೈಲು ಶಿಕ್ಷೆಗೆ ಕಾರಣವಾಗಬಹುದು.

  • ಓನ್ ಡ್ಯಾಮೇಜಿನಿಂದ ರಕ್ಷಣೆ - ನೈಸರ್ಗಿಕ ವಿಕೋಪ, ಅಪಘಾತ ಅಥವಾ ಬೆಂಕಿಯ ಸಂದರ್ಭದಲ್ಲಿ ನಿಮ್ಮ ಸೆಲ್ಟೋಸ್ ದೊಡ್ಡ ಹಾನಿಯನ್ನು ಅನುಭವಿಸಬಹುದು. ಇಂತಹ ಪರಿಸ್ಥಿತಿಯಲ್ಲಿ, ಹಾನಿಯ ರಿಪೇರಿಯಿಂದ ನೀವು ಅನುಭವಿಸುವ ವ್ಯಾಪಕ ನಷ್ಟವನ್ನು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ಆರ್ಥಿಕವಾಗಿ ಭರಿಸುತ್ತದೆ.

  • ವೈಯಕ್ತಿಕ ಅಪಘಾತದ ಕವರ್ - ಐ.ಆರ್.ಡಿ.ಎ.ಐ (ಇಂಡಿಯನ್ ಇನ್ಶೂರೆನ್ಸ್ ಕಂಟ್ರೋಲ್ ಮತ್ತು ಡೆವಲಪ್ಮೆಂಟ್ ಅಥಾರಿಟಿ) ವ್ಯಾಲಿಡ್ ಆಗಿರುವ ಕಾರ್ ಇನ್ಶೂರೆನ್ಸ್ ಪಾಲಿಸಿಯು ಮಾಲೀಕರ ಕುಟುಂಬಕ್ಕೆ ದೈಹಿಕ ಗಾಯಗಳು ಅಥವಾ ಅಪಘಾತದಲ್ಲಿ ಕಾರ್ ಮಾಲೀಕರ ಸಾವಿನಿಂದ ಉಂಟಾಗುವ ಹಣಕಾಸಿನ ಹೊಣೆಗಾರಿಕೆಗಳ ವಿರುದ್ಧ ಗಮನಾರ್ಹ ಕವರೇಜನ್ನು ನೀಡುತ್ತದೆ ಎಂದು ಹೇಳುತ್ತದೆ.

  • ಥರ್ಡ್-ಪಾರ್ಟಿ ಡ್ಯಾಮೇಜ್ ಕವರ್ - ನಿಮ್ಮ ಕಿಯಾ ಸೆಲ್ಟೋಸ್ ಕಾರ್, ಅಪಘಾತದಲ್ಲಿ ಥರ್ಡ್-ಪಾರ್ಟಿ ಆಸ್ತಿಗೆ ಯಾವುದೇ ಹಾನಿಯನ್ನುಂಟುಮಾಡಿದರೆ, ನೀವು ಥರ್ಡ್ ಪಾರ್ಟಿ ಡ್ಯಾಮೇಜ್ ವೆಚ್ಚವನ್ನು ಸಹ ಪಾವತಿಸಬೇಕಾಗುತ್ತದೆ. ಇಲ್ಲಿ, ನೀವು ಆ್ಯಕ್ಟಿವ್ ಥರ್ಡ್ ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ಇದು ಈ ದೊಡ್ಡ ಥರ್ಡ್ ಪಾರ್ಟಿ ಫೈನಾನ್ಸಿಯಲ್ ಕ್ಲೈಮ್‌ಗಳನ್ನು ಕವರ್ ಮಾಡಬಹುದು. ಇದಲ್ಲದೆ, ವ್ಯಾಲಿಡ್ ಆಗಿರುವ ಕಿಯಾ ಸೆಲ್ಟೋಸ್ ಕಾರ್ ಇನ್ಶೂರೆನ್ಸ್ ಯಾವುದೇ ದುರದೃಷ್ಟಕರ ಘಟನೆಯಿಂದ ಉಂಟಾಗುವ ಎಲ್ಲಾ ವ್ಯಾಜ್ಯ ಸಮಸ್ಯೆಗಳಿಂದ ನಿಮ್ಮನ್ನು ಬಿಡುಗಡೆಗೊಳಿಸುತ್ತದೆ.

  • ನೋ ಕ್ಲೈಮ್ ಬೋನಸ್ ಪ್ರಯೋಜನಗಳು - ಇದಲ್ಲದೆ, ಜವಾಬ್ದಾರಿಯುತ ಇನ್ಶೂರೆನ್ಸ್ ಕಂಪನಿಯು ಪ್ರತಿ ಕ್ಲೈಮ್-ಫ್ರೀ ವರ್ಷಕ್ಕೆ ಪಾಲಿಸಿಯ ಅವಧಿಯ ಕೊನೆಯಲ್ಲಿ ಬೋನಸ್ ಅನ್ನು ನೀಡುತ್ತದೆ. ಈ ಬೋನಸ್ ನಿಮ್ಮ ಪ್ರೀಮಿಯಂನಲ್ಲಿ ಡಿಸ್ಕೌಂಟ್‌ನಂತೆ ಕೆಲಸ ಮಾಡುತ್ತದೆ ಮತ್ತು ಪಾಲಿಸಿ ರಿನೀವಲ್ ಸಮಯದಲ್ಲಿ ಅದನ್ನು ಕಡಿಮೆ ಮಾಡುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಿಮ್ಮ ಕಿಯಾ ಸೆಲ್ಟೋಸ್ ಕಾರ್ ಇನ್ಶೂರೆನ್ಸ್ ರಿನೀವಲ್‌ನೊಂದಿಗೆ ನೀವು ಅಂತಹ ನೋ ಕ್ಲೈಮ್ ಬೋನಸ್ ಪ್ರಯೋಜನಗಳನ್ನು ಸಹ ಪಡೆಯಬಹುದು.

ಈ ಆಕರ್ಷಕ ಪ್ರಯೋಜನಗಳನ್ನು ಪರಿಗಣಿಸಿ, ಹಾನಿಯ ರಿಪೇರಿಗಳಿಂದ ಮತ್ತು ಪೆನಲ್ಟಿಗಳಿಂದ ಉಂಟಾಗುವ ಭವಿಷ್ಯದ ಲಯಬಿಲಿಟಿಗಳನ್ನು ತಪ್ಪಿಸಲು ಈಗ ಕಿಯಾ ಸೆಲ್ಟೋಸ್ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸುವುದು ಸರಿಯಾದ ಆಯ್ಕೆಯಾಗಿದೆ.

ಆದ್ದರಿಂದ, ಕಾರು ಇನ್ಶೂರೆನ್ಸ್ ಅನ್ನು ಖರೀದಿಸಲು ಅಥವಾ ರಿನೀವಲ್ ಮಾಡಿಸಲು ಡಿಜಿಟ್ ಇನ್ಶೂರೆನ್ಸ್ ನಿಮ್ಮ ಅತ್ಯುತ್ತಮ ಆಯ್ಕೆಯಾಗಿದೆ.

ಕಿಯಾ ಸೆಲ್ಟೋಸ್ ಕುರಿತು ಇನ್ನಷ್ಟು ತಿಳಿಯಿರಿ

ಟ್ರಾನ್ಸಮಿಶನ್ ಮತ್ತು ಫ್ಯೂಯೆಲ್ ಪ್ರಕಾರವನ್ನು ಆಧರಿಸಿ, ಕಿಯಾ ಸೆಲ್ಟೋಸ್ ಒಟ್ಟು 18 ವೇರಿಯಂಟ್‌ಗಳಲ್ಲಿ ಬರುತ್ತದೆ. ಈ ಕಾರ್ ಮಾಡೆಲ್ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

  • ಕಿಯಾ ಸೆಲ್ಟೋಸ್ 1353ಸಿಸಿ ನಿಂದ 1497ಸಿಸಿ ವರೆಗಿನ ಎಂಜಿನ್ ಡಿಸ್‌ಪ್ಲೇಸ್‌ಮೆಂಟ್ ರೇಂಜ್ ಅನ್ನು ಆರಿಸಿಕೊಳ್ಳಲು, ಪೆಟ್ರೋಲ್ ಮತ್ತು ಡೀಸೆಲ್ ನಡುವೆ ಆಯ್ಕೆಗಳನ್ನು ನೀಡುತ್ತದೆ. 

  • ವೇರಿಯಂಟ್‌ಗಳು ನಿಮಗೆ ಆಯ್ಕೆ ಮಾಡಲು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸಮಿಶನ್ ಸಿಸ್ಟಮ್ ಅನ್ನು ನೀಡುತ್ತವೆ.

  • ಕಿಯಾ ಸೆಲ್ಟೋಸ್ 12 ಕಲರ್ ವೇರಿಯಂಟ್‌ಗಳ ಬರುತ್ತದೆ - ಇಂಟೆನ್ಸ್ ರೆಡ್, ಗ್ಲೇಸಿಯರ್ ಪರ್ಲ್ ವೈಟ್, ಸ್ಟೀಲ್ ಸಿಲ್ವರ್, ಗ್ರಾವಿಟಿ ಗ್ರೇ, ಅರೋರಾ ಬ್ಲ್ಯಾಕ್ ಪರ್ಲ್, ಇಂಟೆಲಿಜೆನ್ಸಿ ಬ್ಲೂ, ಪಂಚಿ ಆರೆಂಜ್, ವೈಟ್ ಪರ್ಲ್ + ಬ್ಲಾಕ್, ಆರೆಂಜ್ + ವೈಟ್, ವೈಟ್ ಪರ್ಲ್ + ಆರೆಂಜ್, ರೆಡ್ + ಬ್ಲ್ಯಾಕ್, ಸಿಲ್ವರ್ + ಆರೆಂಜ್.

  • ಈ ಕಾರ್ ಮಾಡೆಲ್ 16.1 kmpl ನಿಂದ 20.86 kmpl ಫ್ಯೂಯೆಲ್ ಎಕಾನಮಿ ರೇಂಜ್ ಅನ್ನು ಹೊಂದಿದೆ.

  • ಕಿಯಾ ಸೆಲ್ಟೋಸ್ 5 ಜನರಿಗೆ ಅವಕಾಶ ಕಲ್ಪಿಸುತ್ತದೆ.

ಕಿಯಾ ಕಾರ್‌ಗಳು ತಮ್ಮ ಅದ್ಭುತ ಡಿಸೈನ್ ಮತ್ತು ಅತ್ಯುತ್ತಮ ನಿರ್ವಹಣೆಗೆ ಹೆಸರುವಾಸಿಯಾಗಿದೆ. ಆದಾಗ್ಯೂ, ನಿಮ್ಮ ಕಿಯಾ ಸೆಲ್ಟೋಸ್ ಭಾರೀ ಹಾನಿಯನ್ನು ಅನುಭವಿಸಬಹುದಾದ ದುರದೃಷ್ಟಕರ ಸಾಧ್ಯತೆಗಳನ್ನು ಸಹ ನೀವು ಎಂದಿಗೂ ಅಲ್ಲಗಳೆಯಬಾರದು. ಅಂತಹ ಸನ್ನಿವೇಶಗಳಲ್ಲಿ, ಆ್ಯಕ್ಟಿವ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಹಾನಿಯ ರಿಪೇರಿ ವೆಚ್ಚಗಳನ್ನು ಕವರ್ ಮಾಡುತ್ತವೆ.

ಆದ್ದರಿಂದ, ನೀವು ಯಾವಾಗಲೂ ಜವಾಬ್ದಾರಿಯುತ ಇನ್ಶೂರೆನ್ಸ್ ಪೂರೈಕೆದಾರರಿಂದ ಕಿಯಾ ಸೆಲ್ಟೋಸ್‌ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕು ಅಥವಾ ರಿನೀವಲ್ ಮಾಡಿಸಬೇಕು.

ಕಿಯಾ ಸೆಲ್ಟೋಸ್ - ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್‌ಗಳು ಎಕ್ಸ್ ಶೋರೂಂ ಬೆಲೆ (ಆಯಾ ನಗರಕ್ಕೆ ಅನುಗುಣವಾಗಿ ಬದಲಾಗಬಹುದು)
ಸೆಲ್ಟೋಸ್ HTE G ₹9.95 ಲಕ್ಷ
ಸೆಲ್ಟೋಸ್ HTE D ₹10.65 ಲಕ್ಷ
ಸೆಲ್ಟೋಸ್ HTK G ₹10.84 ಲಕ್ಷ
ಸೆಲ್ಟೋಸ್ HTK ಪ್ಲಸ್ G ₹11.89 ಲಕ್ಷ
ಸೆಲ್ಟೋಸ್ HTK D ₹11.99 ಲಕ್ಷ
ಸೆಲ್ಟೋಸ್ HTK ಪ್ಲಸ್ iMT ₹12.29 ಲಕ್ಷ
ಸೆಲ್ಟೋಸ್ HTK ಪ್ಲಸ್ D ₹13.19 ಲಕ್ಷ
ಸೆಲ್ಟೋಸ್ HTX G ₹13.75 ಲಕ್ಷ
ಸೆಲ್ಟೋಸ್ HTK ಪ್ಲಸ್ AT D ₹14.15 ಲಕ್ಷ
ಸೆಲ್ಟೋಸ್ HTX IVT G ₹14.75 ಲಕ್ಷ
ಸೆಲ್ಟೋಸ್ HTX D ₹14.95 ಲಕ್ಷ
ಸೆಲ್ಟೋಸ್ GTX ಆಪ್ಷನ್ ₹15.45 ಲಕ್ಷ
ಸೆಲ್ಟೋಸ್ HTX ಪ್ಲಸ್ D ₹15.99 ಲಕ್ಷ
ಸೆಲ್ಟೋಸ್ GTX ಪ್ಲಸ್ ₹16.75 ಲಕ್ಷ
ಸೆಲ್ಟೋಸ್ GTX ಪ್ಲಸ್ DCT ₹17.54 ಲಕ್ಷ
ಸೆಲ್ಟೋಸ್ ಎಕ್ಸ್-ಲೈನ್ DCT ₹17.79 ಲಕ್ಷ
ಸೆಲ್ಟೋಸ್ GTX ಪ್ಲಸ್ AT D ₹17.85 ಲಕ್ಷ
ಸೆಲ್ಟೋಸ್ ಎಕ್ಸ್-ಲೈನ್ AT D ₹18.10 ಲಕ್ಷ

ಭಾರತದಲ್ಲಿ ಕಿಯಾ ಸೆಲ್ಟೋಸ್ ಕಾರ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನಿಮ್ಮ ಕಿಯಾ ಸೆಲ್ಟೋಸ್ ಟೈರ್ ಡ್ಯಾಮೇಜ್ ಅನ್ನು ಡಿಜಿಟ್ ಇನ್ಶೂರೆನ್ಸ್ ಕವರ್ ಮಾಡುತ್ತದೆಯೇ?

ಒಂದು ಸ್ಟ್ಯಾಂಡರ್ಡ್ ಇನ್ಶೂರೆನ್ಸ್ ಪಾಲಿಸಿಯು ಸಾಮಾನ್ಯವಾಗಿ, ಅಪಘಾತದ ಸಂದರ್ಭದಲ್ಲಿ ಸಂಭವಿಸದ ಡ್ಯಾಮೇಜಿನ ಹೊರತು, ಟೈರ್ ಡ್ಯಾಮೇಜುಗಳನ್ನು ಕವರ್ ಮಾಡುವುದಿಲ್ಲ. ಆದಾಗ್ಯೂ, ಡಿಜಿಟ್ ಆ್ಯಡ್-ಆನ್ ಟೈರ್-ಪ್ರೊಟೆಕ್ಟ್ ಪಾಲಿಸಿಯನ್ನು ನೀಡುತ್ತದೆ. ಅದು ಎಲ್ಲಾ ಸಂದರ್ಭಗಳಲ್ಲಿ ಉಬ್ಬುಗಳು, ಟೈರ್ ಸ್ಫೋಟಗಳು ಅಥವಾ ಕಟ್‌ಗಳಿಂದ ಉಂಟಾಗುವ ನಿಮ್ಮ ಹಣಕಾಸಿನ ಲಯಬಿಲಿಟಿಗಳನ್ನು ಕವರ್ ಮಾಡುತ್ತದೆ.

ಕಿಯಾ ಸೆಲ್ಟೋಸ್ ಕಾರ್ ಇನ್ಶೂರೆನ್ಸ್ ವಿರುದ್ಧ ನೀವು ಎಷ್ಟು ಡಿಡಕ್ಟಿಬಲ್‌ಗಳನ್ನು ಭರಿಸಬೇಕು?

ಐ.ಆರ್.ಡಿ.ಎ.ಐ ನಿಯಮಗಳ ಪ್ರಕಾರ, ಕಿಯಾ ಸೆಲ್ಟೋಸ್‌ನ ಎಂಜಿನ್ ಡಿಸ್‌ಪ್ಲೇಸ್‌ಮೆಂಟ್ 1500ಸಿಸಿ ಗಿಂತ ಕಡಿಮೆಯಿರುವುದರಿಂದ, ನಿಮ್ಮ ಕಾರ್ ಇನ್ಶೂರೆನ್ಸ್ ವಿರುದ್ಧ ನೀವು ₹1,000 ಕಂಪಲ್ಸರಿ ಡಿಡಕ್ಟಿಬಲ್‌ಗಳನ್ನು ಪಾವತಿಸಬೇಕು.