Third-party premium has changed from 1st June. Renew now
ಹ್ಯುಂಡೈ ಗ್ರ್ಯಾಂಡ್ i10 ಇನ್ಶೂರೆನ್ಸ್ ಪಾಲಿಸಿ ಖರೀದಿಸಿ ಅಥವಾ ರಿನೀವ್ ಮಾಡಿ
ಹ್ಯುಂಡೈ ಗ್ರ್ಯಾಂಡ್ i10 ಭಾರತದಲ್ಲಿ 2007ರಲ್ಲಿ ಬಿಡುಗಡೆಯಾಯಿತು. ಈ ಕಾರು ಒಂದು ಡೀಸೆಲ್ ಎಂಜಿನ್ ಮತ್ತು ಒಂದು ಪೆಟ್ರೋಲ್ ಎಂಜಿನ್ ವೇರಿಯಂಟ್ ಅನ್ನು ಒದಗಿಸುತ್ತದೆ. ಹ್ಯುಂಡೈ ಗ್ರ್ಯಾಂಡ್ i10 ಅಟೋಮ್ಯಾಟಿಕ್ ಮತ್ತು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಎರಡರಲ್ಲೂ ಲಭ್ಯವಿದೆ. ಫ್ಯುಯಲ್ ವಿಧಾನ ಮತ್ತು ವೇರಿಯಂಟ್ ಆಧರಿಸಿಕೊಂಡು, ಇದು 17.0 kmpl-24.0 kmpl ಆ್ಯವರೇಜ್ ಮೈಲೇಜ್ ಒದಗಿಸುತ್ತದೆ.
ಈ ಕಾರು ಡ್ರೈವರ್ ಮತ್ತು 256 ಲೀಟರ್‌ಗಳ ಬೂಟ್ ಸ್ಪೇಸ್ ಒಳಗೊಂಡು ಐದು ಜನರ ಸೀಟಿಂಗ್ ಕೆಪಾಸಿಟಿ ಹೊಂದಿದೆ. ಹ್ಯುಂಡೈ ಗ್ರ್ಯಾಂಡ್ i10 3765 ಎಂಎಂ ಉದ್ದ, 1660 ಎಂಎಂ ಅಗಲ ಮತ್ತು 2425 ವೀಲ್‌ಬೇಸ್ ಅಳತೆಯನ್ನು ಹೊಂದಿದೆ.
ಗ್ರ್ಯಾಂಡ್ i10 81.86bhp@6000rpm ಗರಿಷ್ಠ ಪವರ್ ಮತ್ತು 113.75Nm@4000rpm ಗರಿಷ್ಠ ಟಾರ್ಕ್ ಸಾಮರ್ಥ್ಯದ ಫೋರ್-ಸಿಲಿಂಡರ್ ಎಂಜಿನ್ ಹೊಂದಿದೆ. ಫ್ಯುಯಲ್ ಟ್ಯಾಂಕ್ 43 ಲೀಟರ್‌ವರೆಗಿನ ಫ್ಯುಯಲ್ ಅನ್ನು ಸ್ಟೋರ್ ಮಾಡಬಲ್ಲು ಮತ್ತು ಕಾರು ಗಂಟೆಗೆ 165 ಕಿಮೀಗಳ ಟಾಪ್ ಸ್ಪೀಡ್ ಒದಗಿಸುತ್ತದೆ.
ಬ್ಲೂ ಇಂಟೀರಿಯರ್ ಇಲ್ಯುಮಿನೇಶನ್, ರೇರ್ ಮತ್ತು ಫ್ರಂಟ್ ಡೋರ್ ಮ್ಯಾಪ್ ಪಾಕೆಟ್‌ಗಳು, ಎಲೆಕ್ಟ್ರಾನಿಕ್ ಮಲ್ಟಿ-ಟ್ರಿಪ್‌ಮೀಟರ್ ಇತ್ಯಾದಿಗಳಿಂದ ಈ ಕಾರಿನ ಇಂಟೀರಿಯರ್ ಸುಸಜ್ಜಿತವಾಗಿದೆ. ವೆಹಿಕಲ್ ಬಾಡಿ-ಕಲರ್‌ಡ್, ಅಡ್ಜಸ್ಟೆಬಲ್ ಹೆಡ್‌ಲೈಟ್ಸ್, ಪವರ್ ಆ್ಯಂಟೆನಾ ಇತ್ಯಾದಿ ಒಳಗೊಂಡು ಎಕ್ಸ್‌ಟೀರಿಯರ್ ವೈಶಿಷ್ಟ್ಯಗಳನ್ನು ಹೊಂದಿದೆ.
ಹ್ಯುಂಡೈ ಗ್ರ್ಯಾಂಡ್ i10 ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಡ್ರೈವರ್ ಮತ್ತು ಪ್ಯಾಸೆಂಜರ್ ಏರ್‌ಬ್ಯಾಗ್‌ಗಳನ್ನು ಒಳಗೊಂಡು ಎರಡು ಏರ್‌ಬ್ಯಾಗ್‌ಗಳು ಮತ್ತು ಕ್ರ್ಯಾಶ್ ಸೆನ್ಸರ್‌ನಂತಹ ಸೇಫ್ಟಿ ಸ್ಪೆಸಿಫಿಕೇಷನ್‌ಗಳನ್ನು ಹೊಂದಿದೆ. ಇದು ಮಧ್ಯದಲ್ಲಿ ಜೋಡಿಸಲಾದ ಫ್ಯುಯಲ್ ಟ್ಯಾಂಕ್, ಎಂಜಿನ್ ಇಮ್ಮೊಬಿಲೈಸರ್ ಮತ್ತು ಅಡ್ಜಸ್ಟೆಬಲ್ ಸೀಟುಗಳನ್ನೂ ಹೊಂದಿದೆ.
ಅದೇನೇ ಇದ್ದರೂ, ಯಾವುದೇ ಇತರ ಕಾರ್‌ಗಳಂತೆ ಹ್ಯುಂಡೈ ಗ್ರ್ಯಾಂಡ್ i10 ಕೂಡ ಆನ್-ರೋಡ್ ವ್ಯತ್ಯಾಸಗಳು ಮತ್ತು ಅಪಾಘಾತದ ಡ್ಯಾಮೇಜ್‌ಗಗಳಿಗೆ ಗುರಿಯಾಗಬಹುದು. ಹಾಗಾಗಿ, ನೀವು ಗ್ರ್ಯಾಂಡ್ i10 ಮಾಲೀಕರಾಗಿದ್ದರೆ ಅಥವಾ ಹೊಸ ಕಾರನ್ನು ಖರೀದಸಲು ಆಲೋಚಿಸುತ್ತಿದ್ದರೆ, ಹ್ಯುಂಡೈ ಗ್ರ್ಯಾಂಡ್ i10 ಕಾರ್ ಇನ್ಶೂರೆನ್ಸ್ ಆರಿಸಿಕೊಳ್ಳುವುದು ಅತ್ಯವಶ್ಯವಾಗಿದೆ.
ಹ್ಯುಂಡೈ ಗ್ರ್ಯಾಂಡ್ i10 ಕಾರ್ ಇನ್ಶೂರೆನ್ಸ್‌ನಲ್ಲಿ ಏನೆಲ್ಲಾ ಕವರ್ ಆಗುತ್ತದೆ
ಡಿಜಿಟ್‌ನ ಮಾರುತಿ ಹ್ಯುಂಡೈ ಗ್ರ್ಯಾಂಡ್ i10 ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?
ಹ್ಯುಂಡೈ ಗ್ರ್ಯಾಂಡ್ i10ಗೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು
ಥರ್ಡ್-ಪಾರ್ಟಿ | ಕಾಂಪ್ರೆಹೆನ್ಸಿವ್ |
ಅಪಘಾತದಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ |
|
ಬೆಂಕಿಯಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ |
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಹಾನಿ/ನಷ್ಟಗಳು |
|
ಥರ್ಡ್-ಪಾರ್ಟಿ ವಾಹನಕ್ಕೆ ಹಾನಿ |
|
ಥರ್ಡ್-ಪಾರ್ಟಿ ಆಸ್ತಿಗೆ ಹಾನಿ |
|
ವೈಯಕ್ತಿಕ ಅಪಘಾತ ಕವರ್ |
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು |
|
ನಿಮ್ಮ ಕಾರಿನ ಕಳ್ಳತನ |
|
ಡೋರ್ ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
|
ಕಸ್ಟಮೈಸ್ ಮಾಡಲಾದ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ |
|
Get Quote | Get Quote |
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್-ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ
ಕ್ಲೈಮ್ ಫೈಲ್ ಮಾಡುವುದು ಹೇಗೆ?
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನ್ಯೂ ಮಾಡಿದ ನಂತರ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಆದ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಚಿಂತೆಯಿಲ್ಲದೆ ಹಾಯಾಗಿ ಬದುಕುತ್ತೀರಿ!
ಹಂತ 1
1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ
ಹಂತ 2
ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಲ್ಲಿ ಸ್ವ ತಪಾಸಣೆಗಾಗಿ ಲಿಂಕ್ ಅನ್ನು ಪಡೆಯಿರಿ. ಮಾರ್ಗದರ್ಶನವಿರುವ ಹಂತ ಹಂತವಾದ ಪ್ರಕ್ರಿಯೆಯಿಂದ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನಕ್ಕಾದ ಡ್ಯಾಮೇಜ್ ಗಳನ್ನು ಶೂಟ್ ಮಾಡಿ.
ಹಂತ 3
ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆರಿಸಿ, ಅಂದರೆ, ರಿಇಂಬರ್ಸ್‌ಮೆಂಟ್ ಅಥವಾ ನಮ್ಮ ಗ್ಯಾರೇಜ್ ಗಳ ನೆಟ್‌ವರ್ಕ್ ಮೂಲಕ ಕ್ಯಾಶ್‌ಲೆಸ್ ರಿಪೇರಿ.
ಡಿಜಿಟ್‌ನ ಮಾರುತಿ ಹ್ಯುಂಡೈ ಗ್ರ್ಯಾಂಡ್ i10 ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಯಾಕೆ ಆಯ್ಕೆ ಮಾಡಿಕೊಳ್ಳಬೇಕು?
ಡಿಜಿಟ್‌ನ ಕೈಗೆಟಕುವ ಹ್ಯುಂಡೈ ಗ್ರ್ಯಾಂಡ್ i10 ಕಾರ್ ಇನ್ಶೂರೆನ್ಸ್ ಬೆಲೆಯ ಹೊರತಾಗಿ, ಇದು ಒದಗಿಸುವ ಹಲವು ವೈಶಿಷ್ಟ್ಯಗಳೆಂದರೆ -
1. ಹಲವಾರು ಇನ್ಶೂರೆನ್ಸ್ ಪಾಲಿಸಿಗಳು
ಡಿಜಿಟ್ ಥರ್ಡ್-ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್ ಗ್ರ್ಯಾಂಡ್ i10 ಇನ್ಶೂರೆನ್ಸ್‌ಗಳನ್ನು ಒದಗಿಸುತ್ತದೆ. ಈ ಯೋಜನೆಗಳ ಅಡಿಯಲ್ಲಿ ಏನೆಲ್ಲಾ ಕವರ್ ಆಗುತ್ತದೆ ಎಂದು ನಾವು ಈಗ ನೋಡೋಣ.
- ಥರ್ಡ್-ಪಾರ್ಟಿ ಪಾಲಿಸಿ
ಒಂದು ವೇಳೆ ನಿಮ್ಮ ವೆಹಿಕಲ್ ಇನ್ನೊಬ್ಬ ವ್ಯಕ್ತಿ ಅಥವಾ ಪ್ರಾಪರ್ಟಿಗೆ ಡ್ಯಾಮೇಜ್ ಉಂಟು ಮಾಡಿದಾಗ ಆಗುವ ನಷ್ಟ ಮತ್ತು ಡ್ಯಾಮೇಜ್‌ಗಳನ್ನು ಈ ಪಾಲಿಸಿ ಕವರ್ ಮಾಡುತ್ತದೆ. ಮೇಲಾಗಿ, ಯಾವುದಾದರೂ ಮೊಕದ್ದಮೆ ಸಮಸ್ಯೆಗಳು ಇದ್ದರೆ, ಅದರಿಂದಲೂ ನಿಮ್ಮನ್ನು ರಕ್ಷಣೆ ಮಾಡುತ್ತದೆ. 1988ರ ಮೋಟಾರ್ ವೆಹಿಕಲ್ ಆ್ಯಕ್ಟ್ ಪ್ರತೀ ವೆಹಿಕಲ್ ಮಾಲೀಕರು ಕಡ್ಡಾಯವಾಗಿ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಆರಿಸಿಕೊಳ್ಳಬೇಕು ಎಂದು ಹೇಳುತ್ತದೆ.
- ಕಾಂಪ್ರೆಹೆನ್ಸಿವ್ ಪಾಲಿಸಿ
ಡಿಜಿಟ್‌ನ ಕಾಂಪ್ರೆಹೆನ್ಸಿವ್ ಹ್ಯುಂಡೈ ಗ್ರ್ಯಾಂಡ್ i10 ಕಾರ್ ಇನ್ಶೂರೆನ್ಸ್ ಪಾಲಿಸಿ ಥರ್ಡ್-ಪಾರ್ಟಿ ಮತ್ತು ಓನ್ ಡ್ಯಾಮೇಜ್‌ಗಳನ್ನು ಕವರ್ ಮಾಡುತ್ತದೆ. ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಎಂದರೆ ಪಾಲಿಸಿಹೋಲ್ಡರ್ ಮರಣ ಹೊಂದಿದರೆ ಅಥವಾ ಶಾಶ್ವತ ಅಂಗವೈಕಲ್ಯ ಹೊಂದಿದರೆ ಇನ್ಶೂರರ್ ಅವರ ಕುಟುಂಬಕ್ಕೆ ಒದಗಿಸುವ ಆರ್ಥಿಕ ನೆರವು. ಇದು ನಿಮ್ಮ ಕಾರಿನ ಯಾವುದೇ ಅಪಘಾತದ ಡ್ಯಾಮೇಜ್‌ಗೆ ಆಗುವ ಭಾರಿ ಸರ್ವೀಸ್ ಚಾರ್ಜ್‌ಗಳನ್ನೂ ಕವರ್ ಮಾಡುತ್ತದೆ.
2. ಹೆಚ್ಚುವರಿ ಪ್ರಯೋಜನಗಳು
ಡಿಜಿಟ್‌ನಲ್ಲಿ ಹ್ಯುಂಡೈ ಗ್ರ್ಯಾಂಡ್ i10ಗೆ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಡೆದರೆ ಆನಂದಿಸಬಹುದಾದ ಆ್ಯಡ್-ಆನ್‌ಗಳೆಂದರೆ -
- ಝೀರೋ ಡೆಪ್ರಿಸಿಯೇಷನ್ ಕವರ್
- ಕನ್ಯ್ಸೂಮೇಬಲ್ ಕವರ್
- ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್
- ರಿಟರ್ನ್ ಟು ಇನ್‌ವಾಯ್ಸ್ ಕವರ್
- ಟೈರ್ ಪ್ರೊಟೆಕ್ಷನ್
3. ಪ್ರೀಮಿಯಂಗಳಲ್ಲಿ ರಿಯಾಯಿತಿ
ಡಿಜಿಟ್‌ನಲ್ಲಿ ಪಾಲಿಸಿಹೋಲ್ಡರ್‌ಗಳು ಅವರು ಶೇಖರಿಸಿದ ಕ್ಲೈಮ್-ಫ್ರೀ ವರ್ಷಗಳ ಸಂಖ್ಯೆಯ ಆಧಾರದ ಮೇಲೆ ಪ್ರೀಮಿಯಂಗಳ ಮೇಲೆ 20%-50%ರಷ್ಟು ರಿಯಾಯಿತಿ ಪಡೆಯುತ್ತಾರೆ.
4. ಎಲ್ಲಾ ದಿನ ಮತ್ತು ರಾತ್ರಿ ಗ್ರಾಹಕ ನೆರವು
ಡಿಜಿಟ್‌ನ ಗ್ರಾಹಕ ನೆರವು ತಂಡ ನೀವು ಯಾವುದೇ ಇನ್ಶೂರೆನ್ಸ್ ಅಥವಾ ವೆಹಿಕಲ್ ಕುರಿತಾಗಿ ಹೊಂದಿರಬಹುದಾದ ಪ್ರಶ್ನೆಗಳಿಗೆ ಅಸಿಸ್ಟ್ ಮಾಡಲು ಕಾರ್ಯನಿರ್ವಹಿಸುತ್ತದೆ. 1800 258 5956ಗೆ ನಿಮ್ಮ ರಿಜಿಸ್ಟರ್‌ಡ್ ಕಾಂಟಾಕ್ಟ್ ನಂಬರ್‌ನಿಂದ ಕಾಲ್ ಮಾಡಿ ಮತ್ತು ಶೀಘ್ರದಲ್ಲೇ ನಿಮ್ಮ ಸಮಸ್ಯೆಗಳನ್ನು ಪರಿಹಿಸಿಕೊಳ್ಳಿ.
5. ನೆಟ್‌ವರ್ಕ್ ಗ್ಯಾರೇಜ್‌ಗಳ ವ್ಯಾಪಕ ರೇಂಜ್
ಡಿಜಿಟ್ ದೇಶದಾದ್ಯಂತ ಹಲವಾರು ಅಟೋಮೊಬೈಲ್ ಗ್ಯಾರೇಜ್‌ಗಳು ಮತ್ತು ವರ್ಕ್‌ಶಾಪ್‌ಗಳೊಂದಿಗೆ ಟೈ-ಅಪ್ ಮಾಡಿಕೊಂಡಿದೆ. ಹಾಗಾಗಿ, ನಿಮಗೆ ಯಾವುದೇ ವೆಹಿಕಲ್ ಅಥವಾ ಇನ್ಶೂರೆನ್ಸ್ ಸಂಬಂಧಿಸಿದ ಅಸಿಸ್ಟೆನ್ಸ್ ಅವಶ್ಯವಿದ್ದರೆ, ನೀವು ಯಾವಾಗಲೂ ನಿಮ್ಮ ಸಮೀಪದಲ್ಲಿಯೇ ನೆಟ್‌ವರ್ಕ್ ಗ್ಯಾರೇಜ್ ಅನ್ನು ಕಾಣಬಹುದು. ಗ್ಯಾರೇಜ್‌ಗೆ ಭೇಟಿ ಕೊಡಿ ಮತ್ತು ಕ್ಯಾಶ್‌ಲೆಸ್ ಸರ್ವೀಸ್‌ಗಳನ್ನು ಮತ್ತು ರಿಪೇರಿಗಳನ್ನು ಪಡೆಯಿರಿ.
6. ಆನ್‌ಲೈನ್ ಉತ್ಪನ್ನಗಳು ಮತ್ತು ಸರ್ವೀಸ್‌ಗಳು
ನೀವು ಹ್ಯುಂಡೈ ಗ್ರ್ಯಾಂಡ್ i10 ಕಾರ್ ಇನ್ಶೂರೆನ್ಸ್ ರಿನೀವಲ್ ಆಯ್ಕೆ ಮಾಡಬಹುದು ಮತ್ತು ನಮ್ಮ ಪೋರ್ಟಲ್‌ನಿಂದ ಹೊಸ ಇನ್ಶೂರೆನ್ಸ್ ಪಾಲಿಸಿ ಖರೀದಿ ಮಾಡಬಹುದು. ಆನ್‌ಲೈನ್ ವೆಬ್‌ಸೈಟ್‌ಗೆ ಭೇಟಿ ಕೊಡು ಮತ್ತು ನಾವು ಒದಗಿಸುವ ಎಲ್ಲಾ ಇನ್ಶೂರೆನ್ಸ್ ಪಾಲಿಸಿಗಳನ್ನು ಮತ್ತು ಸರ್ವೀಸ್‌ಗಳನ್ನು ತಿಳಿದುಕೊಳ್ಳಿ.
7. ಸರಳ ಮತ್ತು ಪೇಪರ್‌ಲೆಸ್ ಸರ್ವೀಸ್‌ಗಳು
ಸಮಯ ತಿನ್ನುವ ಮತ್ತು ಭಾರಿ ಕ್ಲೈಮ್ ಫೈಲಿಂಗ್ ಪ್ರೊಸೆಸ್ ಅನ್ನು ಅವಾಯ್ಡ್ ಮಾಡಿ. ನಿಮ್ಮ ರಿಜಿಸ್ಟರ್‌ಡ್ ಕಾಂಟಾಕ್ಟ್ ನಂಬರ್‌ಗೆ ಸ್ವ-ತಪಾಸಣೆ ಲಿಂಕ್ ಪಡೆಯಲು1800 258 5956ಗೆ ಡಯಲ್ ಮಾಡಿ. ನಿಮ್ಮ ಡ್ಯಾಮೇಜ್ ಆದ ವೆಹಿಕಲ್‌ನ ಫೋಟೋ ಅಟ್ಯಾಚ್ ಮಾಡಿ ಮತ್ತು ‘ಕ್ಯಾಶ್‌ಲೆಸ್’ ಅಥವಾ ‘ರಿಇಂಬರ್ಸ್‌ಮೆಂಟ್’ ಇವುಗಳಲ್ಲಿ ಆದ್ಯತೆಯ ರಿಪೇರಿ ಮೋಡ್ ಆರಿಸಿಕೊಳ್ಳಿ.
ನಿಮ್ಮ ಹ್ಯುಂಡೈ ಗ್ರ್ಯಾಂಡ್ i10 ಕಾರ್ ಇನ್ಶೂರೆನ್ಸ್‌ನಲ್ಲಿ ನೀವು ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್ ಸೌಲಭ್ಯವನ್ನೂ ಆರಿಸಿಕೊಳ್ಳಬಹುದು. ಇಂಥಾ ಸಂದರ್ಭಗಳಲ್ಲಿ, ನಮ್ಮ ತಂಡ ನಿಮ್ಮ ಸ್ಥಳದಿಂದ ನಿಮ್ಮ ವೆಹಿಕಲ್ ಅನ್ನು ಪಿಕಪ್ ಮಾಡುತ್ತದೆ ಮತ್ತು ರಿಪೇರಿಗಾಗಿ ಗ್ಯಾರೇಜ್‌ಗೆ ಕೊಂಡೊಯ್ಯುತ್ತದೆ.
ಅಪಘಾತಗಳಿಂದ ಉಂಟಾಗಬಹುದಾದ ಹಲವಾರು ಸಮಸ್ಯೆಗಳಿಂದ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ರಕ್ಷಣೆ ಮಾಡುವುದರಿಂದ ನಿಮ್ಮ ವೆಹಿಕಲ್‌ಗೆ ಸೂಕ್ತವಾದ ಇನ್ಶೂರೆನ್ಸ್ ಆರಿಸಿಕೊಳ್ಳುವುದು ಅವಶ್ಯ. ಎಲ್ಲಾ ಸಂಭವನೀಯ ಪ್ರಕರಣಗಳನ್ನು ಗಮನಿಸಿದಾಗ, ಈ ನಿಟ್ಟಿನಲ್ಲಿ ಡಿಜಿಟ್‌ನ ಹ್ಯುಂಡೈ ಗ್ರ್ಯಾಂಡ್ i10 ಕಾರ್ ಇನ್ಶೂರೆನ್ಸ್ ಪರ್ಫೆಕ್ಟ್ ಆಯ್ಕೆ ಆಗಬಹುದು.
ಹ್ಯುಂಡೈ ಗ್ರ್ಯಾಂಡ್ i10ಗೆ ಕಾರ್ ಇನ್ಶೂರೆನ್ಸ್ ಖರೀದಿಸುವುದು ಯಾಕೆ ಮುಖ್ಯ?
ನೀವು ಕಾರು ಖರೀದಿಸಲು ಭಾರಿ ಅಮೌಂಟ್ ಅನ್ನು ಹೂಡಿಕೆ ಮಾಡುವಾಗ, ಕಾರ್ ಇನ್ಶೂರೆನ್ಸ್ ಕೂಡ ಅಷ್ಟೇ ಮುಖ್ಯವಾಗುತ್ತದೆ. ಇದು ನಿಮ್ಮ ಕಾರುಗಳ ರಕ್ಷಣೆ ಮಾಡುವುದಷ್ಟೇ ಅಲ್ಲ ಅಥವಾ ಶ್ರೇಷ್ಠ ಸರ್ವೀಸ್‌ಗಳಿಗೆ ಶುಲ್ಕ ಒದಗಿಸುವುದಷ್ಟೇ ಅಲ್ಲ, ಇದು ನಿಮ್ಮ ಕಾರನ್ನು ದೀರ್ಘಕಾಲದವರೆಗೆ ನಿರ್ವಹಣೆ ಮಾಡಲು ನೆರವಾಗುತ್ತದೆ. ಹ್ಯುಂಡೈ ಗ್ರ್ಯಾಂಡ್ i10 ಕಾರ್ ಇನ್ಶೂರೆನ್ಸ್ ನಿಮ್ಮ ಕಾರನ್ನು ಆರೋಗ್ಯವಾಗಿಡಲು ನೆರವಾಗುತ್ತದೆ ಮತ್ತು ನಿಮಗೆ ಅಸಿಸ್ಟೆನ್ಸ್ ಒದಗಿಸುತ್ತದೆ.
ಕಾನೂನುಬದ್ಧ ಅನುಸರಣೆ: ಮೋಟಾರ್ ವೆಹಿಕಲ್ ಆ್ಯಕ್ಟ್ ಪ್ರಕಾರ, ನಿಮ್ಮ ವೆಹಿಕಲ್ ಇನ್ಶೂರ್ಡ್ ಆಗಿರದಿದ್ದರೆ ನೀವು ಕಾನೂನಿನ ಪ್ರಕಾರ ರೂ.2000 ದಂಡ ಪಾವತಿಸಬೇಕಾಗುತ್ತದೆ.
ಥರ್ಡ್-ಪಾರ್ಟಿ ಲಯಬಿಲಿಟಿ ಕವರ್: ಕೆಲವೊಮ್ಮೆ, ಘರ್ಷಣೆಗಳು ಥರ್ಡ್ ಪಾರ್ಟಿಯ ಪ್ರಾಪರ್ಟಿ ಅಥವಾ ದೈಹಿಕ ಗಾಯಕ್ಕೆ ಕಾರಣವಾಗಬಹುದು. ಆನ್‌ಲೈನ್ ಕಾರ್ ಇನ್ಶೂರೆನ್ಸ್ ರಿನೀವಲ್‌ಗೆ ಟ್ರೈ ಮಾಡಿ ಅದರಿಂದ ನೀವು ಸ್ವಂತವಾಗಿ ಪಾವತಿ ಭರಿಸುವುದನ್ನು ತಪ್ಪಿಸಬಹುದು.
ಆ್ಯಡ್-ಆನ್‌ಗಳೊಂದಿಗೆ ಎಕ್ಷ್ಟ್ರಾ ಕವರೇಜ್: ಝೀರೋ ಡೆಪ್ರಿಸಿಯೇಷನ್, ಎಂಜಿನ್ ಪ್ರೊಟೆಕ್ಷನ್, ಕನ್ಸ್ಯೂಮೇಬಲ್ ಕವರ್, ಗೇರ್‌ಬಾಕ್ಸ್ ಪ್ರೊಟೆಕ್ಷನ್ ಮತ್ತಿತ್ಯಾದಿ ಆ್ಯಡ್-ಆನ್ ಕವರ್‌ಗಳನ್ನು ಒದಗಿಸುವ ಮೂಲಕ ಹ್ಯುಂಡೈ ಗ್ರ್ಯಾಂಡ್ i10 ಕಾರ್ ಇನ್ಶೂರೆನ್ಸ್ ನಿಮಗೆ ಇನ್ಶೂರೆನ್ಸ್ ಪಾಲಿಸಿಯ ವ್ಯಾಪ್ತಿಯನ್ನು ವಿಸ್ತರಿಸುವ ಅವಕಾಶ ನೀಡುತ್ತದೆ.
ಆರ್ಥಿಕ ಲಯಬಿಲಿಟಿಗಳಿಂದ ರಕ್ಷಣೆ: ನೈಸರ್ಗಿಕ ವಿಪತ್ತುಗಳೇ ಆಗಲಿ ಅಥವಾ ಘರ್ಷಣೆಯೇ ಇರಲಿ ಅದು ಸಂಭವಿಸಿದಾಗ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ವೆಹಿಕಲ್‌ನ ಸೇಫ್ಟಿಯನ್ನು ಖಚಿತಪಡಿಸುತ್ತದೆ.
ಓನ್ ಡ್ಯಾಮೇಜ್ ಇನ್ಶೂರೆನ್ಸ್ ಅಡಿಯಲ್ಲಿ ಈ ನಷ್ಟಗಳು ಅಕೌಂಟೇಬಲ್ ಆಗಿರುತ್ತವೆ ಮತ್ತು ಕಳ್ಳತನ ಆದ ಸಂದರ್ಭದಲ್ಲಿ ನಿಮಗೆ ಪಾವತಿ ಮಾಡುತ್ತದೆ. ಹ್ಯುಂಡೈ ತಡೆರಹಿತ ಪ್ರೊಸೆಸ್ ಅನ್ನು ಹೊಂದಿದೆ ಮತ್ತು ನಿಮ್ಮ ಕ್ಲೈಮ್‌ಗಳ ಸಂದರ್ಭದಲ್ಲಿ ನೀವು ಯಾವುದೇ ತೊಂದರೆ ಎದುರಿಸದಂತೆ ಖಚಿತಪಡಿಸುತ್ತದೆ.
ಓನ್ ಡ್ಯಾಮೇಜ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ.
ಹ್ಯುಂಡೈ ಗ್ರ್ಯಾಂಡ್ i10 ಕುರಿತು ಇನ್ನಷ್ಟು ತಿಳಿಯಿರಿ
ಹ್ಯುಂಡೈ ಗ್ರ್ಯಾಂಡ್ i10 ಆರಾಮ ಮತ್ತು ಹೊಂದಾಣಿಕೆ ಎರಡನ್ನೂ ಒದಗಿಸುವ ಫ್ಯಾಮಿಲಿ ಕಾರಿಗೆ ಒಂದು ಅದ್ಭುತ ಉದಾಹರಣೆ. ಕಾಂಪಾಕ್ಟ್ ಡೈಮೆನ್ಶನ್‌ನಲ್ಲಿ ಡೈನಾಮಿಕ್ ಸ್ಪೇಸ್ ಜೊತೆಗೆ ಹಲವು ಬಣ್ಣಗಳಲ್ಲಿ ಇದು ಲಭ್ಯವಿದೆ. ಈ ಕಾರು ರೋಡ್-ಫ್ರೆಂಡ್ಲಿಯೂ ಆಗಿದೆ ಮತ್ತು ಸಮಯಕ್ಕೆ ಸರಿಯಾಗಿ ಗಮ್ಯ ಸ್ಥಾನಕ್ಕೆ ನಿಮ್ಮನ್ನು ತಲುಪಿಸುತ್ತದೆ. ಹ್ಯುಂಡೈ ಗ್ರ್ಯಾಂಡ್ i10ನ ಬೆಲೆ 4.91 ಲಕ್ಷಕ್ಕೆ ಆರಂಭವಾಗುತ್ತಿದ್ದು, ನೀವು ಆಯ್ಕೆ ಮಾಡುವ ವೇರಿಯಂಟ್‌ಗಳಿಗೆ ಅನುಗುಣವಾಗಿ 7.51 ಲಕ್ಷದವರೆಗೂ ಸುಲಭವಾಗಿ ಏರಬಹುದು.
ಈ ಕಾರಿನ ವರ್ಷನ್ ಪ್ರಾಥಮಿಕವಾಗಿ ಮ್ಯಾಗ್ನಾ ಸ್ಪೋರ್ಟ್ಸ್, ಎರಾ, ಆಸ್ತಾ ಮತ್ತು ಸ್ಪೋರ್ಟ್ಸ್ ಡ್ಯುಯಲ್ ಟೋನ್ ಎಂಬ ನಾಲ್ಕು ಪೆಟ್ರೋಲ್ ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಮತ್ತೊಂದೆಡೆ, ಗ್ರ್ಯಾಂಡ್ i10ನ ಡೀಸೆಲ್ ವರ್ಷನ್ ಆಸ್ತಾ, ಸ್ಪೋರ್ಟ್ಸ್, ಮ್ಯಾಗ್ನಾ ಮತ್ತು ಎರಾ ಎಂಬ ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, ಹೊಸ ಸಿಎನ್‌ಜಿ ಪವರ್‌ಡ್ ವೇರಿಯಂಟ್ ಕೂಡ ನೀವು ಪಡೆಯಬಹುದು, ಇದು ಮ್ಯಾಗ್ನಾ ಟ್ರಿಮ್ ವೇರಿಯಂಟ್‌ನಲ್ಲಿ ಮಾತ್ರ ಲಭ್ಯವಿದೆ. ಕುತೂಹಲಕರ ಅಂಶವೆಂದರೆ, ನೀವು ಈ ಅದ್ಭುತ ಖರೀದಿಯನ್ನು ಮಾಡಿದ ನಂತರ ಹ್ಯುಂಡೈ ಗ್ರ್ಯಾಂಡ್ i10 ಇನ್ಶೂರೆನ್ಸ್ ಮೇಲೆ ಅತ್ಯಾಕರ್ಷಕ ಆಫರ್‌ಗಳನ್ನು ಪಡೆಯುತ್ತೀರಿ.
ನೀವು ಯಾಕೆ ಹ್ಯುಂಡೈ ಗ್ರ್ಯಾಂಡ್ i10 ಖರೀದಿ ಮಾಡಬೇಕು?
ಸುಗಮ ರೈಡ್‌ಗಳು, ಉತ್ತಮ ಜೀವನ: ಹ್ಯುಂಡೈ ಗ್ರ್ಯಾಂಡ್ i10 1.2 ಲೀಟರ್‌ಗಳ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಿಗೆ ಹೆಸರುವಾಸಿಯಾಗಿದೆ, ಅವು ಪ್ರತಿಯೊಂದು ರೈಡ್ ಅನ್ನು ಎಂದಿನಂತೆ ಸುಗಮವಾಗಿಸುತ್ತದೆ. ಈ ಎಂಜಿನ್‌ನ ಪೆಟ್ರೋಲ್ ವರ್ಷನ್ 83 ಪಿಎಲ್ ಮತ್ತು 14ಎನ್‌ಎಂ ಉತ್ಪಾದಿಸುತ್ತದೆ, ಡೀಸೆಲ್ ವರ್ಷನ್ ಸುಮಾರು 75ಪಿಎಸ್ ಮತ್ತು 190 ಎನ್‌ಎಂ ಹೊರಗೆ ಹಾಕುತ್ತದೆ. ಈ ಎರಡೂ ಎಂಜಿನ್‌ಗಳಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಸಮಾನವಾಗಿ ಜೋಡಿಸಲಾಗಿದೆ, ಆದರೆ ಪೆಟ್ರೋಲ್ ಎಂಜಿನ್ ನಾಲ್ಕು-ಸ್ಪೀಡ್ ಅಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳಲ್ಲೂ ಲಭ್ಯವಿದೆ.
ಭಿನ್ನವಾಗಿ ನಿಲ್ಲಿಸುವ ವೈಶಿಷ್ಟ್ಯಗಳು: ಈ ಮಾಡೆಲ್‌ನ ವೈಶಿಷ್ಟ್ಯಗಳು ಅತ್ಯಾಧುನಿಕವಾಗಿದ್ದು, ಮಾಸ್‌ಗಳ ಮಧ್ಯೆ ಜನಪ್ರಿಯ ಆಯ್ಕೆಯಾಗುವಂತೆ ಮಾಡಿದೆ! ಈ ಸೆಗ್‌ಮೆಂಟಿನ ಇತರ ಕಾರುಗಳಿಗಿಂತ ಭಿನ್ನವಾಗಿ, ಹ್ಯುಂಡೈನ ಗ್ರ್ಯಾಂಡ್ i10 7 ಇಂಚಿನ ಇನ್‌ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಸಿಸ್ಟಮ್, ಅಟೋ-ಡಿಮ್ಮಿಂಗ್ ರೇರ್ ವ್ಯೂ ಮಿರರ್, ಡೋರ್ ಅಜರ್ ವಾರ್ನಿಂಗ್ ಮತ್ತು ಇತ್ಯಾದಿ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಇದು ಆ್ಯಂಡ್ರಾಯ್ಡ್ ಅಟೋ ಮತ್ತು ಆ್ಯಪಲ್ ಕಾರ್ ಪ್ಲೇ ಜೊತೆ ಹೊಂದಿಕೊಂಡು ಬರುತ್ತದೆ. ಇದಲ್ಲದೇ, ಈ ಬೀಸ್ಟ್ ರೇರ್ ಏಸಿ ವೆಂಟ್‌ಗಳೊಂದಿಗೆ ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಜೊತೆಗೆ ಬರುತ್ತದೆ(ಇದು ಇತರ ಹ್ಯಾಚ್‌ಗಳಲ್ಲಿ ಇಲ್ಲದಿರುವುದರಿಂದ ದೊಡ್ಡ ಪ್ಲಸ್ ಆಗಿದೆ).
ನೀವು ಪ್ರೀತಿಸಬಹುದಾದ ಆ್ಯಡ್-ಆನ್‌ಗಳು: ಹ್ಯುಂಡೈ ಗ್ರ್ಯಾಂಡ್ i10 ಎಲೆಕ್ಟ್ರಿಕಲಿ ಅಡ್ಜಸ್ಟೆಬಲ್ ಮತ್ತು ಫೋಲ್ಡಬಲ್ ಓಆರ್‌ವಿಎಂಗಳು, ಸೆನ್ಸರ್‌ಗಳೊಂದಿಗೆ ರೇರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಪುಶ್-ಬಟ್ ಸ್ಟಾರ್ಟ್ ಹೊಂದಿದೆ. ಮತ್ತೊಂದಷ್ಟು ಇದೆ! ಖರೀದಿ ವರ್ತ್ ಅನ್ನಿಸುವಂತೆ ಮಾಡುವ ಟೆಲಿಸ್ಕೋಪಿಕ್ ಮತ್ತು ಟಿಲ್ಟ್ ಸೇರಿಂಗ್ ಅನ್ನು ನೀವು ಹೊಂದುತ್ತೀರಿ. ಹ್ಯುಂಡೈ ಗ್ರ್ಯಾಂಡ್ i10 ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗು ಮತ್ತು ಇಬಿಡಿ ಜೊತೆಗೆ ಎಬಿಎಸ್ ಒಳಗೊಂಡಿದೆ.
ಅಸಿಸ್ಟೆನ್ಸ್ ಮತ್ತು ವಾರಂಟಿ: ಈ ಮಾಡೆಲ್‌ನ ಭಾಗಗಳು 3 ವರ್ಷದ ವಾರಂಟಿಯೊಂದಿಗೆ ಅಥವಾ 100,000 ಕಿಮೀ ಕಿಮೀ ವಾರಂಟಿ ಸರ್ವೀಸ್‌ಗಳೊಂದಿಗೆ ಬರುತ್ತವೆ. ಇದಲ್ಲದೇ, ಕಾರು ಮಾಲೀಕರಿಗೆ ಪರ್ಫೆಕ್ಟ್ ಆಗಿ ಅನುಕೂಲಕರವಾಗಿರುವಂತಹ ರೋಡ್‌ಸೈಡ್ ಅಸಿಸ್ಟೆನ್ಸ್ ಅನ್ನು ಯಾವಾಗಲೂ ಸ್ವೀಕರಿಸುತ್ತೀರಿ.
ಚೆಕ್: ಹ್ಯುಂಡೈ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಹ್ಯುಂಡೈ ಗ್ರ್ಯಾಂಡ್ i10ನ ವೇರಿಯಂಟ್‌ಗಳು
ವೇರಿಯಂಟ್‌ನ ಹೆಸರು | ವೇರಿಯಂಟ್‌ನ ಬೆಲೆ (ದೆಹಲಿಯಲ್ಲಿ, ಬೇರೆ ರಾಜ್ಯಗಳಿಗೆ ತಕ್ಕಂತೆ ಬದಲಾಗಬಹುದು) |
---|---|
1.2 ಕಪ್ಪ ಏರಾ (ಪೆಟ್ರೋಲ್) | ₹ 5,15,036 |
1.2 ಕಪ್ಪ ಮ್ಯಾಗ್ನಾ (ಪೆಟ್ರೋಲ್) | ₹ 5,84,040 |
1.2 ಕಪ್ಪ ಸ್ಪೋರ್ಟ್ಸ್ (ಪೆಟ್ರೋಲ್) | ₹ 6,29,367 |
1.2 CRDi ಏರಾ (ಡೀಸೆಲ್) | ₹ 6,40,049 |
1.2 ಕಪ್ಪ ಸ್ಪೋರ್ಟ್ಸ್ Option (ಪೆಟ್ರೋಲ್) | ₹ 6,61,700 |
1.2 ಕಪ್ಪ ಮ್ಯಾಗ್ನಾ AT (ಪೆಟ್ರೋಲ್) | ₹ 6,64,357 |
1.2 CRDi ಮ್ಯಾಗ್ನಾ (ಡೀಸೆಲ್) | ₹ 7,15,289 |
1.2 ಕಪ್ಪ ಆಸ್ತಾ(ಪೆಟ್ರೋಲ್) | ₹ 7,27,069 |
1.2 CRDi ಸ್ಪೋರ್ಟ್ಸ್ (ಡೀಸೆಲ್) | ₹ 7,63,621 |
1.2 ಕಪ್ಪ ಸ್ಪೋರ್ಟ್ಸ್ ಆಪ್ಷನ್ AT (ಪೆಟ್ರೋಲ್) | ₹ 7,74,156 |
1.2 CRDi ಸ್ಪೋರ್ಟ್ಸ್ ಆಪ್ಷನ್ (ಡೀಸೆಲ್) | ₹ 7,96,365 |
1.2 CRDi ಆಸ್ತಾ(ಡೀಸೆಲ್) | ₹ 8,44,725 |
[1]
ಪದೇ ಪದೇ ಕೇಳಲಾದ ಪ್ರಶ್ನೆಗಳು
ನಾನು ಡಿಜಿಟ್‌ನಿಂದ ನನ್ನ ಕಾರಿಗೆ ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಖರೀದಿಸಬಹುದೇ?
ಡಿಜಿಟ್ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಮಾತ್ರ ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಕವರೇಜ್ ಒದಗಿಸುತ್ತದೆ, ಮತ್ತು ಅದನ್ನು ಸೆಪರೇಟ್ ಆಗಿ ಖರೀದಿಸಲು ಸಾಧ್ಯವಿಲ್ಲ.
ಡಿಜಿಟ್‌ನಲ್ಲಿ ಆನ್‌ಲೈನ್ ಮೂಲಕ ನಾನು ನನ್ನ ಕಾರ್ ಇನ್ಶೂರೆನ್ಸ್ ರಿನೀವ್ ಮಾಡಬಹುದೇ?
ಹೌದು, ಡಿಜಿಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮ್ಮ ಎಕ್ಸಿಸ್ಟಿಂಗ್ ಕಾರ್ ಇನ್ಶೂರೆನ್ಸ್ ಅನ್ನು ನೀವು ಈಗ ರಿನೀವ್ ಮಾಡಬಹುದು. ನಿಮ್ಮ ಕ್ರೆಡೆನ್ಷಿಯಲ್‌ಗಳ ಜೊತೆ ಲಾಗಿನ್ ಆಗಿ ಮತ್ತು ಸರಿಯಾದ ಆಯ್ಕೆಯನ್ನು ಆರಿಸಿಕೊಳ್ಳಿ.