ಮೋಟಾರ್
ಹೆಲ್ತ್
ಮೋಟಾರ್
ಹೆಲ್ತ್
More Products
ಮೋಟಾರ್
ಹೆಲ್ತ್
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
Select Number of Travellers
24x7
Missed Call Facility
Affordable
Premium
1-Day Adventure
Activities Covered
Terms and conditions apply*
ಷೆಂಗೆನ್ ವೀಸಾ ಷೆಂಗೆನ್ ಝೋನ್ನೊಳಗೆ ಬರುವ ಯಾವುದೇ ಸದಸ್ಯ ದೇಶಗಳಿಗೆ ತಂಗಲು ಅಥವಾ ಟ್ರಾವೆಲ್ ಮಾಡಲು ಅನುಮತಿ ನೀಡುತ್ತದೆ. ಆದ್ದರಿಂದ ನೀವು ಆಸ್ಟ್ರಿಯಾ, ಡೆನ್ಮಾರ್ಕ್ ಮುಂತಾದ ದೇಶಗಳಿಗೆ ಭೇಟಿ ನೀಡಲು ಪ್ಲ್ಯಾನ್ ಮಾಡುತ್ತಿದ್ದರೆ, ನೀವು ಬಹುಶಃ ಷೆಂಗೆನ್ ವೀಸಾಗಾಗಿ ಅಪ್ಲೈ ಮಾಡಬಹುದು.
ಹಾಗೆ ಮಾಡುವಾಗ, ಡಾಕ್ಯುಮೆಂಟೇಶನ್ ಮುಗಿದ ನಂತರ ನೀವು ಇಂಟರ್ವ್ಯೂಗೆ ಹಾಜರಾಗಬೇಕಾಗುತ್ತದೆ. ಷೆಂಗೆನ್ ವೀಸಾ ಇಂಟರ್ವ್ಯೂನಲ್ಲಿ ಕೇಳಲಾಗುವ ಪ್ರಶ್ನೆಗಳ ಹಿಂದಿರುವ ಮುಖ್ಯ ಉದ್ದೇಶವೆಂದರೆ, ಭೇಟಿ ನೀಡುವುದರ ಹಿಂದಿರುವ ಯಾವುದೇ ಕಾನೂನುಬಾಹಿರ ಉದ್ದೇಶವನ್ನು ಪತ್ತೆಹಚ್ಚುವುದು ಮತ್ತು ಅವುಗಳನ್ನು ರಿಜೆಕ್ಟ್ ಮಾಡುವುದು.
ಸಾಮಾನ್ಯ ಪ್ರಶ್ನೆಗಳ ಸಮಗ್ರ ಚಿತ್ರಣ ಮತ್ತು ಅವುಗಳಿಗೆ ಉತ್ತರಿಸಲು ಕೆಲವು ಟಿಪ್ಸ್ ಇಲ್ಲಿವೆ.
ಷೆಂಗೆನ್ ವೀಸಾ ಇಂಟರ್ವ್ಯೂನಲ್ಲಿ ಕೇಳಲಾಗುವ ಪ್ರಶ್ನೆಗಳು ಸಾಮಾನ್ಯವಾಗಿ ನಿಮ್ಮ ಭೇಟಿಯ ಉದ್ದೇಶ, ವಾಸ್ತವ್ಯದ ಅವಧಿ ಮತ್ತು ಇತರ ವಿವರಗಳಿಗೆ ಸಂಬಂಧಿಸಿರುತ್ತದೆ. ಈ ಇಂಟರ್ವ್ಯೂಗೆ ಅನ್ನು ನಿಭಾಯಿಸುವ ಕೀಲಿ ಯಾವುದೆಂದರೆ, ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವಾಗ ಪ್ರಾಮಾಣಿಕ, ಶಾಂತವಾಗಿ ಮತ್ತು ಕಮ್ಯುನಿಕೇಟಿವ್ ಆಗಿರುವುದು.
ಕೆಲವು ಸಾಮಾನ್ಯ ಷೆಂಗೆನ್ ವೀಸಾ ಇಂಟರ್ವ್ಯೂನ ಪ್ರಶ್ನೆಗಳು ಮತ್ತು ಉತ್ತರಗಳು ಈ ಕೆಳಗಿನಂತಿವೆ -
ಇಂಟರ್ವೀವಿಂಗ್ ಅಧಿಕಾರಿಗೆ ನೀವು ಕೆಲಸ, ಅಭ್ಯಾಸ, ಹಾಲಿಡೇ, ಬಿಸಿನೆಸ್, ಅಥವಾ ಮೆಡಿಕಲ್ ಟ್ರೀಟ್ಮೆಂಟ್ ಮುಂತಾದ ನಿಮ್ಮ ಉದ್ದೇಶ ತಿಳಿಸಿ. ನೀವು ಈ ಪ್ರಶ್ನೆಗೆ ಉತ್ತರಿಸುವಾಗ ಯಾವುದೇ ಹಿಂಜರಿಕೆಯನ್ನು ಅನುಭವಿಸಬಾರದು.
ನೀವು ಭೇಟಿ ನೀಡಲು ಪ್ಲ್ಯಾನ್ ಮಾಡುತ್ತಿರುವ ಸ್ಥಳದ ಕುರಿತು ನೀವು ತಿಳಿದಿರಬೇಕು. ಆದ್ದರಿಂದ, ಮುಂಚಿತವಾಗಿಯೇ ನೀವು ಹೋಗಲಿರುವ ದೇಶದ ಬಗ್ಗೆ ಕೆಲವು ಮಾಹಿತಿ ಪಡೆಯಲು ಮರೆಯದಿರಿ.
ಉದಾಹರಣೆಗೆ, ಇದು ಷೆಂಗೆನ್ ಸ್ಟೂಡೆಂಟ್ ವೀಸಾ ಇಂಟರ್ವ್ಯೂನ ಪ್ರಶ್ನೆಯಾಗಿದ್ದರೆ, ನೀವು ಅಧ್ಯಯನ ಮಾಡಲು ಪ್ಲ್ಯಾನ್ ಮಾಡುತ್ತಿರುವ ಯೂನಿವರ್ಸಿಟಿ, ನೀವು ಎದುರು ನೋಡುತ್ತಿರುವ ವೃತ್ತಿ ಅವಕಾಶಗಳ ಕುರಿತು ಮಾತನಾಡಿ.
ಪ್ರತಿಯಾಗಿ, ನೀವು ಇನ್ವೆಸ್ಟ್ ಮಾಡಲು ಸಿದ್ಧರಿರುವ ಮಾರ್ಕೆಟ್ನ ಕುರಿತು ಅಥವಾ ಷೆಂಗೆನ್ ಬಿಸಿನೆಸ್ ವೀಸಾ ಇಂಟರ್ವ್ಯೂ ಪ್ರಶ್ನೆಗಳಿಗಾಗಿ ನಿಮ್ಮ ತವರು ದೇಶದ ಬೆಳವಣಿಗೆಯ ನಿರೀಕ್ಷೆಯು ಹೇಗೆ ಭಿನ್ನವಾಗಿದೆ ಎಂಬುದರ ಕುರಿತು ಮಾತನಾಡಿ.
ಇದಕ್ಕೆ ತಕ್ಷಣವೇ ಸ್ಪಷ್ಟವಾಗಿ ಹೌದು ಅಥವಾ ಇಲ್ಲ ಎಂದು ಉತ್ತರಿಸಿ. ಮದುವೆಯ ದಿನಾಂಕ ಮತ್ತು ವರ್ಷವನ್ನು ನೆನಪಿಟ್ಟುಕೊಳ್ಳುವುದು ಸೂಕ್ತ. ಇದರಿಂದ ನಿಮ್ಮ ಉತ್ತರ ನಂಬಲರ್ಹರಾಗುತ್ತದೆ. ನಂತರ, ನಿಮ್ಮ ಸಂಗಾತಿಯ ಬಗ್ಗೆ ಮತ್ತು ಅವರ ವೃತ್ತಿಯ ಬಗ್ಗೆ ಸ್ವಲ್ಪ ಮಾತನಾಡಿ. ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಟ್ರಾವೆಲ್ ಮಾಡುತ್ತಿದ್ದರೆ ಹೌದು ಎಂದು ಹೇಳಿ. ಇಲ್ಲದಿದ್ದರೆ, ಕಾರಣವನ್ನು ಸ್ಪಷ್ಟವಾಗಿ ತಿಳಿಸಿ.
ನೀವು ಬೇರೆ ದೇಶಕ್ಕೆ ಟ್ರಾವೆಲ್ ಮಾಡಲು ಪ್ಲ್ಯಾನಿಂಗ್ ಮಾಡುತ್ತಿರುವುದರಿಂದ, ನೀವು ಉಳಿದುಕೊಳ್ಳುವ ಸ್ಥಳಗಳನ್ನು ಮುಂಚಿತವಾಗಿಯೇ ಪ್ಲ್ಯಾನ್ ಮಾಡಬೇಕು ಎಂದು ನಿರೀಕ್ಷಿಸಲಾಗಿರುತ್ತದೆ. ವೀಸಾ ಇಂಟರ್ವ್ಯೂನ ಸಮಯದಲ್ಲಿ ಇದನ್ನು ಚೆನ್ನಾಗಿ ವಿವರಿಸಿ.
ಅಪ್ಲಿಕೆಂಟ್ನ ಆರ್ಥಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಷೆಂಗೆನ್ ವೀಸಾ ಇಂಟರ್ವ್ಯೂನಲ್ಲಿ ಕೇಳಲಾಗುವ ಸಾಮಾನ್ಯ ಪ್ರಶ್ನೆಗಳಲ್ಲಿ ಇದು ಒಂದಾಗಿದೆ. ವಿಸಿಟ್ನ ಸಮಯದಲ್ಲಿ ನೀವು ಖರ್ಚು ಮಾಡಲು ಪ್ಲ್ಯಾನ್ ಮಾಡಿರುವ ಅಂದಾಜು ಮೊತ್ತವನ್ನು ಇಂಟರ್ವ್ಯೂವರ್ಗೆ ತಿಳಿಸಿ. ಥರ್ಡ್ ಪಾರ್ಟಿ ನಿಮ್ಮ ಟ್ರಿಪ್ ಅನ್ನು ಸ್ಪಾನ್ಸರ್ ಮಾಡಿದ್ದರೆ, ಫಂಡ್ ಮೂಲವನ್ನು ತಿಳಿಸಿ. ನಿಮ್ಮ ಮೊತ್ತವನ್ನು ನೀವೇ ಪಾವತಿಸುತ್ತಿದ್ದರೆ, ನೀವು ಉತ್ತಮ ಆದಾಯದ ಮೂಲ ಮತ್ತು ಸಾಕಷ್ಟು ಉಳಿತಾಯವನ್ನು ಹೊಂದಿದ್ದೀರಿ ಎಂದು ತಿಳಿಸಿ.
ನಿಮ್ಮ ಉತ್ತರವು ಸ್ಪಷ್ಟವಾಗಿ ಹೌದು ಎಂದಿರಬೇಕು. ಇದಲ್ಲದೆ, ನಿಮ್ಮ ತವರು ದೇಶಕ್ಕೆ ಹಿಂತಿರುಗಲು ನಿಮ್ಮನ್ನು ಒತ್ತಾಯಿಸುವ ಕಾರಣಗಳನ್ನು ತಿಳಿಸಿ. ಇವುಗಳು ನಿಮ್ಮ ಕುಟುಂಬ, ಪ್ರಾಪರ್ಟಿ, ಉದ್ಯೋಗ ಮತ್ತು ಇತರ ಪ್ರೊಫೆಷನಲ್ ಮತ್ತು ವೈಯಕ್ತಿಕ ಬದ್ಧತೆಗಳನ್ನು ಒಳಗೊಂಡಿರಬಹುದು. ಅಲ್ಲದೆ, ನೀವು ಕಾನೂನು ಪಾಲಿಸುವ ಪ್ರಜೆಯಾಗಿದ್ದೀರಿ ಮತ್ತು ನೀವು ವೀಸಾ ನಿರ್ಬಂಧಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೀರಿ ಎಂದು ಹೇಳಿ.
ಇದು ಷೆಂಗೆನ್ ಸ್ಟೂಡೆಂಟ್ ವೀಸಾ ಇಂಟರ್ವ್ಯೂನ ಪ್ರಶ್ನೆಗಳ ಒಂದು ಭಾಗವಾಗಿದ್ದು, ಅಲ್ಲಿ ನಿಮ್ಮ ಸ್ಕಾಲರ್ಶಿಪ್ನ ವಿವರಗಳು, ಅದು ಯಾವ ವೆಚ್ಚಗಳನ್ನು ಒಳಗೊಂಡಿರುತ್ತದೆ ಮತ್ತು ಅದರ ಅವಧಿಯನ್ನು ನೀವು ನಮೂದಿಸಬೇಕಾಗುತ್ತದೆ. ಅಲ್ಲದೆ, ನಿಮಗೆ ನೀಡಲಾದ ಸ್ಕಾಲರ್ಶಿಪ್ನ ವಿವಿಧ ಷರತ್ತುಗಳನ್ನು ಚರ್ಚಿಸಿ.
ನೀವು ಸ್ಕಾಲರ್ಶಿಪ್ ಅನ್ನು ಹೊಂದಿಲ್ಲದಿದ್ದರೆ, ವಿದೇಶದಲ್ಲಿ ನಿಮ್ಮ ಅಧ್ಯಯನಕ್ಕಾಗಿ ನೀವು ಹೇಗೆ ಪಾವತಿಸಲು ಪ್ಲ್ಯಾನ್ ಮಾಡುತ್ತೀರಿ ಎಂಬುದರ ಕುರಿತು ಇಂಟರ್ವ್ಯೂವರ್ಗೆ ತಿಳಿಸಿ.
ಇಲ್ಲಿ, ಯೂನಿವರ್ಸಿಟಿಯು ನೀಡುವ ವಿವಿಧ ಬೆಳವಣಿಗೆಯ ಅಂಶಗಳ ಬಗ್ಗೆ ಮಾತನಾಡಿ. ನಂತರ, ನಿಮ್ಮ ಆಸಕ್ತಿಯಿರುವ ವಿಷಯದ ಬಗ್ಗೆ ಮತ್ತು ನಿಮ್ಮ ವೃತ್ತಿ ಬೆಳವಣಿಗೆಯನ್ನು ಹೆಚ್ಚಿಸುವ ಸಂಸ್ಥೆಯನ್ನು ನೀವು ಹೇಗೆ ಹುಡುಕುತ್ತಿದ್ದೀರಿ ಎಂಬುದರ ಕುರಿತು ಇಂಟರ್ವ್ಯೂವರ್ಗೆ ತಿಳಿಸಿ. ಅಲ್ಲದೆ, ನೀವು ಟ್ರಾವೆಲ್ ಮಾಡಲು ಪರಿಗಣಿಸುತ್ತಿರುವ ಇತರ ಸ್ಥಳಗಳ ಬಗ್ಗೆ ಮತ್ತು ನೀವು ಅಧ್ಯಯನ ಮಾಡಲು ನಿರ್ಧರಿಸಿದ ಯೂನಿವರ್ಸಿಟಿಯ ವಿಶಿಷ್ಟ ಫೀಚರ್ಗಳ ಬಗ್ಗೆ ಮಾತನಾಡಿ.
ವಿಸಿಟ್ನಲ್ಲಿ ನಿಮ್ಮೊಂದಿಗೆ ಯಾರಿದ್ದಾರೆ ಎಂಬುದರ ಕುರಿತು ಅವರಿಗೆ ತಿಳಿಸಿ. ಅಲ್ಲದೆ, ಅವರ ವಿಸಿಟ್ನ ಹಿಂದಿರುವ ಕಾರಣವನ್ನು ತಿಳಿಸಿ. ಉದಾಹರಣೆಗೆ, ನೀವು ಟೂರಿಸ್ಟ್ ವೀಸಾದಲ್ಲಿ ಹೋಗುತ್ತಿದ್ದರೆ, ನಿಮ್ಮೊಂದಿಗೆ ಬರುತ್ತಿರುವ ಆ ವ್ಯಕ್ತಿಯೂ ನಿಮ್ಮಂತೆಯೇ ಇದೇ ಕಾರಣಕ್ಕಾಗಿ ಹೋಗುತ್ತಿದ್ದಾರೆ ಎಂದು ತಿಳಿಸಿ. ನೀವು ಬಿಸಿನೆಸ್ ವೀಸಾವನ್ನು ಆಯ್ಕೆ ಮಾಡುತ್ತಿದ್ದರೆ, ಅವರ ವಿಸಿಟ್ನ ಹಿಂದಿರುವ ಉದ್ದೇಶವನ್ನು ತಿಳಿಸಿ. ಇದಕ್ಕೆ ಉತ್ತರಿಸುವಾಗ ನೀವು ಹಿಂಜರಿಯಬಾರದು ಮತ್ತು ನಿಮ್ಮ ಉದ್ದೇಶವನ್ನು ಸ್ಪಷ್ಟಪಡಿಸಬೇಕು.
ನೀವು ಆರ್ಗನೈಸೇಶನ್ನಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಜಾಬ್ ಪ್ರೊಫೈಲ್ ಪ್ರಕಾರ ನಿಮ್ಮ ವಾರ್ಷಿಕ ಆದಾಯವನ್ನು ತಿಳಿಸಿ. ಆದರೆ ನೀವು ಸೆಲ್ಫ್ ಎಂಪ್ಲಾಯ್ಡ್ ಆಗಿದ್ದರೆ, ಎಸ್ಟಿಮೇಟೆಡ್ ಅಂಕಿ ಅಂಶವನ್ನು ನೀಡಿ. ಇದು ವೈಯಕ್ತಿಕ ಪ್ರಶ್ನೆಯಂತೆ ಕಾಣಿಸಬಹುದು, ಆದರೆ ಯಾವುದೇ ವೀಸಾ ಇಂಟರ್ವ್ಯೂಗೆ ಇದು ಪ್ರಮುಖ ಪ್ರಶ್ನೆಯಾಗಿದೆ. ಆದ್ದರಿಂದ, ನೀವು ಹೇಳುವ ಮೊತ್ತವನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಇದು ವೀಸಾ ಅಪ್ರುವಲ್ಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಇಲ್ಲಿ, ನಿಮ್ಮ ಜಾಬ್ ರೋಲ್ ಬಗ್ಗೆ ಮಾತನಾಡಿ, ನೀವು ಅದೇ ಕ್ಷೇತ್ರದಲ್ಲಿ ಎಷ್ಟು ದಿನ ಕೆಲಸ ಮಾಡುತ್ತಿದ್ದೀರಿ. ಅಲ್ಲದೆ, ನಿಮ್ಮ ಶೈಕ್ಷಣಿಕ ಹಿನ್ನೆಲೆ ಏನು ಮತ್ತು ನೀವೀಗ ಮಾಡುತ್ತಿರುವ ಕೆಲಸಕ್ಕೆ ಅದು ಹೇಗೆ ಸಂಬಂಧಿಸಿದೆ. ಹೆಚ್ಚುವರಿಯಾಗಿ, ನಿಮ್ಮ ಪ್ರೊಫೆಷನಲ್ ಕರಿಯರ್ನಲ್ಲಿ ನಿಮಗಿರುವ ಅನುಭವ ಮತ್ತು ನೀವು ಪಡೆದ ಯಾವುದೇ ಇತ್ತೀಚಿನ ಪ್ರಮೋಷನ್ಗಳ ಕುರಿತು ಮಾತನಾಡಿ. ಕೊನೆಯದಾಗಿ, ನೀವು ಕೆಲಸ ಮಾಡುವ ಕಂಪನಿಯ ಹಿನ್ನೆಲೆ ಮತ್ತು ಕಳೆದ ವರ್ಷಗಳಲ್ಲಿ ನೀವು ಯಶಸ್ವಿಯಾಗಲು ಅದು ಹೇಗೆ ಸಹಾಯ ಮಾಡಿದೆ ಎಂಬುದರ ಕುರಿತು ಮಾತನಾಡಿ.
ನೀವು ಕೆಲಸದಲ್ಲಿರುವಿರಿ ಮತ್ತು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವಿರಿ ಎಂದು ಇಂಟರ್ವ್ಯೂವರ್ಗೆ ಭರವಸೆ ನೀಡಲು ನೀವು ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಕೊಂಡೊಯ್ಯಬಹುದು. ಆದ್ದರಿಂದ, ನೀವು ನಿಮ್ಮಷ್ಟಕ್ಕೆ ಸ್ವಂತವಾಗಿ ವಿದೇಶದಲ್ಲಿ ಉಳಿಯಲು ವ್ಯವಸ್ಥೆ ಮಾಡಿಕೊಳ್ಳಬಹುದು.
ನೀವು ಅಪ್ಲೈ ಮಾಡಿದ ವೀಸಾ ಪ್ರಕಾರದನ್ವಯ ಈ ಪ್ರಶ್ನೆಗೆ ಉತ್ತರಿಸಿ. ಪ್ರತಿಯೊಂದು ವೀಸಾ ಅಪ್ಲಿಕೇಶನ್ ವಿಧವು, ಕೆಲವು ಲಿಮಿಟೇಶನ್ಗಳನ್ನು ಹೊಂದಿದೆ ಮತ್ತು ನೀವದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಉದಾಹರಣೆಗೆ, ಇದು ಷೆಂಗೆನ್ ಟೂರಿಸ್ಟ್ ವೀಸಾ ಇಂಟರ್ವ್ಯೂನ ಪ್ರಶ್ನೆಗಳು ಮತ್ತು ಉತ್ತರಗಳಾಗಿದ್ದರೆ, ಟೂರಿಸ್ಟ್ ವೀಸಾದಲ್ಲಿರುವ ನಿರ್ಬಂಧಗಳನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಮತ್ತು ಅಲ್ಲಿ ಯಾವುದೇ ಕೆಲಸವನ್ನು ಹುಡುಕುವುದಿಲ್ಲ ಎಂದು ಅವರಿಗೆ ತಿಳಿಸಿ.
ಆದಾಗ್ಯೂ, ನೀವು ಸ್ಟೂಡೆಂಟ್ ವೀಸಾಗಾಗಿ ಅಪ್ಲೈ ಮಾಡುತ್ತಿದ್ದರೆ, ಜಾಬ್/ಇಂಟರ್ನ್ಶಿಪ್ ಆಯ್ಕೆ ಮಾಡಿಕೊಳ್ಳುವ ನಿಮ್ಮ ಭವಿಷ್ಯದ ಸಾಧ್ಯತೆಗಳನ್ನು ಚರ್ಚಿಸಿ.
ಇದು ಷೆಂಗೆನ್ ವೀಸಾ ಇಂಟರ್ವ್ಯೂನಲ್ಲಿ ಕೇಳಲಾದ ಮತ್ತೊಂದು ಪ್ರಮುಖ ಪ್ರಶ್ನೆಯಾಗಿದೆ. ನೀವು ಲೀವ್ಗಾಗಿ ಅಪ್ಲೈ ಮಾಡುತ್ತಿರುವುದರಿಂದ, ಅದರ ಅಪ್ರುವಲ್ಡ್ ಕಾಪಿಯನ್ನು ತರಲು ಖಚಿತಪಡಿಸಿಕೊಳ್ಳಿ ಮತ್ತು ಅದನ್ನೇ ಈ ಪ್ರಶ್ನೆಗೆ ಉತ್ತರವಾಗಿ ಪ್ರಸ್ತುತಪಡಿಸಿ. ಇಂಟರ್ವ್ಯೂವರ್ ತನಗೆ ಬೇಕಾದ ಯಾವುದೇ ಮಾಹಿತಿಯನ್ನು ಪಡೆಯುತ್ತಾನೆ.
ಟ್ರಿಪ್ಗಾಗಿ ನೀವು ಈಗಾಗಲೇ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ಅದರ ಕವರೇಜಿನ ವಿವರಗಳೊಂದಿಗೆ ನೀವದನ್ನು ತಿಳಿಸಿ. ಇದಕ್ಕೆ ಪ್ರತಿಯಾಗಿ, ನೀವು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದಿಲ್ಲದಿದ್ದರೆ ಇಲ್ಲ ಎಂದು ಹೇಳಿ. ಟ್ರಾವೆಲ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳುವುದರ ಪ್ರಾಮುಖ್ಯತೆ ಮತ್ತು ಸುರಕ್ಷತೆಯನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ನೀವು ಹೇಳಬಹುದು. ಮತ್ತು ನೀವು ಹೊರಡುವ ಮೊದಲು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯೊಂದನ್ನು ಪಡೆದುಕೊಳ್ಳಲು ನೀವು ಯೋಚಿಸಬಹುದು.
ಷೆಂಗೆನ್ ಪ್ರದೇಶಕ್ಕೆ ವಿಸಿಟ್ ಮಾಡಲು ನೀವು ತಿಳಿಸಿದ ಸಮಯ ಏಕೆ ಬೇಕೆಂದು ವಿವರಿಸುವ ಮೂಲಕ ಇದಕ್ಕೆ ಉತ್ತರಿಸಿ. ಇದು ವೀಸಾದ ವಿಧಗಳ ಮೇಲೆ ಬದಲಾಗಬಹುದು.
ಉದಾಹರಣೆಗೆ, ಸ್ಟೂಡೆಂಟ್ ವೀಸಾಗಾಗಿ ಅಪ್ಲೈ ಮಾಡುವ ವ್ಯಕ್ತಿಗಳು ತಾವು ಅಧ್ಯಯನ ಮಾಡಲು ಆಯ್ಕೆ ಮಾಡಿಕೊಳ್ಳುತ್ತಿರುವ ಕೋರ್ಸ್ ಅವಧಿಯನ್ನು ಹೇಳಬಹುದು. ಅಂತೆಯೇ, ಇದು ಷೆಂಗೆನ್ ಟೂರಿಸ್ಟ್ ವೀಸಾ ಇಂಟರ್ವ್ಯೂನ ಪ್ರಶ್ನೆಗಳಲ್ಲಿ ಒಂದಾಗಿದ್ದರೆ, ನೀವು ಇಡೀ ಪ್ರದೇಶದಲ್ಲಿ ವಿಸಿಟ್ ಮಾಡಲು ಇರುವ ಹಲವಾರು ಟೂರಿಸ್ಟ್ ಸ್ಥಳಗಳನ್ನು ಹೆಸರಿಸಬಹುದು, ಸಹಜವಾಗಿ ಅದು ನಿರ್ದಿಷ್ಟ ಸಮಯವನ್ನು ತೆಗೆದುಕೊಳ್ಳುತ್ತದೆ.
ಷೆಂಗೆನ್ ವೀಸಾ ಇಂಟರ್ವ್ಯೂನಲ್ಲಿ ಕೇಳಲಾಗುವ ಅತ್ಯಂತ ಸಾಮಾನ್ಯ ಮತ್ತು ಪ್ರಮುಖ ಪ್ರಶ್ನೆಗಳಲ್ಲಿ ಇದು ಒಂದಾಗಿದೆ. ನಿಮಗೆ ಅಲ್ಲಿ ವಾಸಿಸುವ ಯಾರೊಬ್ಬರ ಸಂಪರ್ಕಗಳು ಇಲ್ಲದಿದ್ದರೆ, ಇಲ್ಲ ಎಂದು ಹೇಳಿ. ಆದಾಗ್ಯೂ, ಅಲ್ಲಿ ನಿಮ್ಮ ಕುಟುಂಬ ಅಥವಾ ಸ್ನೇಹಿತರು ವಾಸಿಸುತ್ತಿದ್ದರೆ, ಅವರ ಹೆಸರನ್ನು ಸರಿಯಾಗಿ ತಿಳಿಸಿ. ನೀವು ಅವರ ಬಗ್ಗೆ ಕೆಲವು ವಿವರಗಳನ್ನು ಸಹ ಹಂಚಿಕೊಳ್ಳಬೇಕಾಗುತ್ತದೆ.
ನೀವು ಅಪ್ಲೈ ಮಾಡುತ್ತಿರುವ ವೀಸಾಗೆ ಅನ್ವಯವಾಗುವಂತೆ ಈ ಪ್ರಶ್ನೆಗೆ ಉತ್ತರಿಸಿ. ಉದಾಹರಣೆಗೆ, ಇದು ಟೂರಿಸ್ಟ್ ವೀಸಾ ಆಗಿದ್ದರೆ, ನೀವು ಮತ್ತೇ ಬೇರೆ ಸಮಯದಲ್ಲಿ ಅಪ್ಲೈ ಮಾಡುತ್ತೀರಿ ಎಂದು ಹೇಳಿ. ಆದಾಗ್ಯೂ, ಇದು ಸ್ಟೂಡೆಂಟ್ ವೀಸಾ ಆಗಿದ್ದರೆ, ದೇಶದಲ್ಲಿಯೇ ನಿಮಗೆ ಬೇರೆ ಆಯ್ಕೆಗಳಿವೆ ಎಂದು ಹೇಳಿ.
ಈ ಪ್ರಶ್ನೆಗೆ, ನಿಮ್ಮ ಉತ್ತರ ಸ್ಪಷ್ಟವಾಗಿ ಇಲ್ಲ ಎನ್ನುವುದಾಗಿರಬೇಕು.
ನಿಮ್ಮ ಉತ್ತರ ಹೌದು ಅಥವಾ ಇಲ್ಲ ಆಗಿರಬೇಕು. ನಿಮಗೆ ಮಕ್ಕಳಿದ್ದರೆ, ಅವರ ಬಗ್ಗೆ ಮಾತನಾಡಿ, ಅಂದರೆ, ಅವರು ಯಾವ ವಯಸ್ಸಿನವರು, ಅವರು ಜೀವನದಲ್ಲಿ ಏನು ಮಾಡುತ್ತಿದ್ದಾರೆ, ಇತ್ಯಾದಿ. ಅವರಿಲ್ಲದೆ ಟ್ರಾವೆಲ್ ಮಾಡುತ್ತಿದ್ದರೆ, ಅದಕ್ಕೆ ಕಾರಣಗಳನ್ನು ತಿಳಿಸಿ.
ಷೆಂಗೆನ್ ವೀಸಾ ಇಂಟರ್ವ್ಯೂನಲ್ಲಿ ಕೇಳಲಾಗುವ ಕೆಲವು ಸಾಮಾನ್ಯ ಪ್ರಶ್ನೆಗಳು ಇಂಟರ್ವ್ಯೂ ಅನ್ನು ಸುಲಭವಾಗಿ ಮುಗಿಸಲು ನಿಮಗೆ ಸಹಾಯ ಮಾಡುತ್ತವೆ. ಆದಾಗ್ಯೂ, ಅಧಿಕಾರಿಗಳು ಯಾವಾಗಲೂ ಇದೇ ರೀತಿಯಲ್ಲಿಯೇ ಪ್ರಶ್ನೆಗಳನ್ನು ಕೇಳುವುದಿಲ್ಲ. ಪ್ರಶ್ನೆಗಳಲ್ಲಿ ವ್ಯತ್ಯಾಸಗಳಿರಬಹುದು, ಆದ್ದರಿಂದ ಜನರು ಅದಕ್ಕೆ ತಕ್ಕಂತೆ ಸಿದ್ಧರಾಗಿರಬೇಕು.
ಷೆಂಗೆನ್ ವೀಸಾ ಇಂಟರ್ವ್ಯೂನ ಪ್ರಶ್ನೆಗಳಿಗೆ ಉತ್ತರಿಸುವಾಗ ನೆನಪಿನಲ್ಲಿಡಬೇಕಾದ ಕೆಲವು ಟಿಪ್ಸ್ ಇಲ್ಲಿವೆ -
ಷೆಂಗೆನ್ ವೀಸಾ ಇಂಟರ್ವ್ಯೂನಲ್ಲಿ ಕೇಳಲಾದ ಪ್ರಶ್ನೆಗಳ ವಿವರವಾದ ಜ್ಞಾನದಿಂದ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚುತ್ತದೆ ಮತ್ತು ಅದನ್ನು ಸುಲಭವಾಗಿ ಜಯಿಸಲು ನಿಮಗೆ ಸಹಾಯವಾಗುತ್ತದೆ. ಅಲ್ಲದೆ, ಉತ್ತಮ ಬಳಕೆಗೆ ಹೆಚ್ಚುವರಿ ಟಿಪ್ಸ್ ಸೇರಿಸಲು ಮರೆಯಬೇಡಿ!
Please try one more time!
ಹಕ್ಕು ನಿರಾಕರಣೆ -
ನಿಮ್ಮ ಪಾಲಿಸಿಯು ನಿಮ್ಮ ಪಾಲಿಸಿ ವೇಳಾಪಟ್ಟಿ ಮತ್ತು ನೀತಿ ಪದಗಳಲ್ಲಿ ನಮೂದಿಸಲಾದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ದಯವಿಟ್ಟು ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
ದೇಶಗಳು, ವೀಸಾ ಶುಲ್ಕಗಳು ಮತ್ತು ಇತರರ ಬಗ್ಗೆ ಇಲ್ಲಿ ಉಲ್ಲೇಖಿಸಲಾದ ಮಾಹಿತಿಯನ್ನು ವಿವಿಧ ಮೂಲಗಳಿಂದ ತೆಗೆದುಕೊಳ್ಳಲಾಗಿದೆ. ಅಂಕಿ ವಿಮೆ ಇಲ್ಲಿ ಯಾವುದನ್ನೂ ಪ್ರಚಾರ ಮಾಡುತ್ತಿಲ್ಲ ಅಥವಾ ಶಿಫಾರಸು ಮಾಡುತ್ತಿಲ್ಲ. ನಿಮ್ಮ ಟಿಕೆಟ್ಗಳನ್ನು ಕಾಯ್ದಿರಿಸುವ ಮೊದಲು, ವೀಸಾಕ್ಕೆ ಅರ್ಜಿ ಸಲ್ಲಿಸುವ ಮೊದಲು, ಪ್ರಯಾಣ ನೀತಿಯನ್ನು ಖರೀದಿಸುವ ಅಥವಾ ಯಾವುದೇ ಇತರ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ಅದನ್ನು ಪರಿಶೀಲಿಸಿ.
Get 10+ Exclusive Features only on Digit App
closeAuthor: Team Digit
Last updated: 25-10-2024
CIN: U66010PN2016PLC167410, IRDAI Reg. No. 158.
ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಹಿಂದೆ ಒಬೆನ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) - ರಿಜಿಸ್ಟರ್ಡ್ ಆಫೀಸ್ ವಿಳಾಸ - 1 ರಿಂದ 6ನೇ ಮಹಡಿಗಳು, ಅನಂತ ಒನ್ (ಎಆರ್ ಒನ್), ಪ್ರೈಡ್ ಹೋಟೆಲ್ ಲೇನ್, ನರ್ವೀರ್ ತಾನಾಜಿ ವಾಡಿ, ಸಿಟಿ ಸರ್ವೆ ನಂ.1579, ಶಿವಾಜಿ ನಗರ, ಪುಣೆ -411005, ಮಹಾರಾಷ್ಟ್ರ | ಕಾರ್ಪೊರೇಟ್ ಆಫೀಸ್ ವಿಳಾಸ - ಅಟ್ಲಾಂಟಿಸ್, 95, 4ನೇ B ಕ್ರಾಸ್ ರೋಡ್, ಕೋರಮಂಗಲ ಇಂಡಸ್ಟ್ರಿಯಲ್ ಲೇಔಟ್, 5ನೇ ಬ್ಲಾಕ್, ಬೆಂಗಳೂರು-560095, ಕರ್ನಾಟಕ | ಮೇಲೆ ಡಿಸ್ಪ್ಲೇ ಮಾಡಲಾದ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂಬ ಟ್ರೇಡ್ ಲೋಗೋ, ಗೋ ಡಿಜಿಟ್ ಇನ್ಫೋವರ್ಕ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿದೆ ಮತ್ತು ಇದನ್ನು ಲೈಸೆನ್ಸ್ನ ಅಡಿಯಲ್ಲಿ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಒದಗಿಸಿದೆ ಮತ್ತು ಬಳಸುತ್ತದೆ.