ವೀಸಾ ಅಪ್ಲಿಕೇಶನ್‌ನ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಲು ಇರುವ ಹಂತಗಳು ಯಾವುವು?
ವಿದೇಶಕ್ಕೆ ಪ್ರಯಾಣಿಸಲು ವೀಸಾಗಾಗಿ ಅಪ್ಲೈ ಮಾಡುವುದು ಮತ್ತು ಆಪ್ರುವಲ್ ಪಡೆಯುವುದು ಕಡ್ಡಾಯವಾಗಿದೆ. ಆದಾಗ್ಯೂ, ಈ ಪ್ರಕ್ರಿಯೆಯು ಸ್ವಲ್ಪ ಟ್ರಿಕಿ ಆಗಿರಬಹುದು. ಮೊದಲಿಗೆ, ನೀವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅಪ್ಲಿಕೇಶನ್ ಅನ್ನು ಪೂರ್ಣಗೊಳಿಸಿದ ನಂತರವೂ, ಸಂಭವನೀಯ ಪ್ರಕ್ರಿಯೆಯು ತೆಗೆದುಕೊಳ್ಳುವ ಸಮಯದ ಅಂದಾಜನ್ನು ಪಡೆಯಲು ವ್ಯಕ್ತಿಗಳು ವೀಸಾ ಸ್ಟೇಟಸ್ ಅನ್ನು ಚೆಕ್ ಮಾಡುವ ಪಾತ್ರವನ್ನು ಹೊಂದಿರುತ್ತಾರೆ.
ವೀಸಾ ಸ್ಟೇಟಸ್ ಅನ್ನು ಹೇಗೆ ಚೆಕ್ ಮಾಡುವುದು ಎಂಬುದನ್ನು ತಿಳಿಯಲು ನಿಮಗೆ ಕುತೂಹಲವಿದೆಯೇ? ಹಾಗಿದ್ದರೆ, ಕಾಂಪ್ರೆಹೆನ್ಸಿವ್ ಗೈಡ್ ಪಡೆಯಲು ಈ ಆರ್ಟಿಕಲ್ ಅನ್ನು ಓದಿ.
ವೀಸಾ ಅಪ್ಲಿಕೇಶನ್‌ನ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡುವುದು ಹೇಗೆ?
1. ಪಾಸ್‌ಪೋರ್ಟ್ ನಂಬರ್ ಅನ್ನು ಬಳಸುವುದು
ವೀಸಾ ಅಪ್ಲಿಕೇಶನ್‌ಗಳನ್ನು ಟ್ರ್ಯಾಕ್ ಮಾಡುವ ಒಂದು ಸಾಮಾನ್ಯ ವಿಧಾನವೆಂದರೆ ಪಾಸ್‌ಪೋರ್ಟ್ ನಂಬರ್‌ಗಳನ್ನು ಬಳಸಿಕೊಳ್ಳುವ ಮೂಲಕ ಟ್ರ್ಯಾಕ್ ಮಾಡುವುದು. ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡುವಾಗ, ವ್ಯಕ್ತಿಗಳು ತಮ್ಮ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ ತಮ್ಮ ಪಾಸ್‌ಪೋರ್ಟ್ ನಂಬರ್ ಅನ್ನು ನಮೂದಿಸಬೇಕಾಗುತ್ತದೆ. ನೀವು ಭಾರತದ ವೀಸಾವನ್ನು ಪಡೆಯಲು ಪ್ಲ್ಯಾನ್ ಮಾಡುತ್ತಿದ್ದರೆ, ನೀವು ಈ ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಬಹುದು.
ಹಂತ 1: ಇಂಡಿಯನ್ ಬ್ಯೂರೋ ಆಫ್ ಇಮಿಗ್ರೇಷನ್‌ನ ಆಫೀಷಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಿ. ಈ ಹೋಮ್ ಪೇಜ್‌ನಿಂದ "ಭಾರತಕ್ಕೆ ಭೇಟಿ ನೀಡಲು ಉದ್ದೇಶಿಸಿರುವ ವಿದೇಶಿಯರಿಗಾಗಿ ಆನ್‌ಲೈನ್ ವೀಸಾ ಅಪ್ಲಿಕೇಶನ್" ಲಿಂಕ್ ಅನ್ನು ಸೆಲೆಕ್ಟ್ ಮಾಡಿ.
ಹಂತ 2: ಈ ಪೇಜ್‌ನಲ್ಲಿ "ಆನ್‌ಲೈನ್ ವೀಸಾ ಅಪ್ಲಿಕೇಶನ್ ರಿಜಿಸ್ಟ್ರೇಷನ್" ಮೇಲೆ ಕ್ಲಿಕ್ ಮಾಡಿ. ಇದು ಹೊಸ ಪೇಜ್‌ಗೆ ರಿಡೈರೆಕ್ಟ್ ಮಾಡುತ್ತದೆ.
ಹಂತ 3: "ನಿಮ್ಮ ವೀಸಾ ಸ್ಟೇಟಸ್ ಅನ್ನು ಚೆಕ್ ಮಾಡಿ" ಅನ್ನು ಕ್ಲಿಕ್ ಮಾಡಿ. ನಂತರ, ನಿಮ್ಮ ಪಾಸ್‌ಪೋರ್ಟ್ ನಂಬರ್ ಅನ್ನು ನಮೂದಿಸಿ ಮತ್ತು "ಸಬ್ಮಿಟ್ ಮಾಡಿ" ಅನ್ನು ಕ್ಲಿಕ್ ಮಾಡಿ.
2. ಅಪ್ಲಿಕೇಶನ್ ಐಡಿಯನ್ನು ಬಳಸುವುದು
ನಿಮ್ಮ ವೀಸಾ ಅಪ್ಲಿಕೇಶನ್‌ನ ಸ್ಟೇಟಸ್ ಅನ್ನು ಚೆಕ್ ಮಾಡುವ ಇನ್ನೊಂದು ವಿಧಾನವೆಂದರೆ ನಿಮ್ಮ ಅಪ್ಲಿಕೇಶನ್ ಐಡಿ. ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯನ್ನು ನೀವು ಪೂರ್ಣಗೊಳಿಸಿದ ನಂತರ, ಈ ಪೇಜ್ ಒಂದು ನಂಬರ್ ಅನ್ನು ಡಿಸ್‌ಪ್ಲೇ ಮಾಡುತ್ತದೆ. ಇದು ನಿಮ್ಮ ಯುನಿಕ್ ಅಪ್ಲಿಕೇಶನ್ ಐಡಿ, ಮತ್ತು ಇದನ್ನು ನೀವು ನೆನಪಿಟ್ಟುಕೊಳ್ಳುವಂತೆ ನಿಮಗೆ ಸಲಹೆ ನೀಡಲಾಗುತ್ತದೆ. ನಿಮ್ಮ ಇಂಡಿಯನ್ ವೀಸಾ ಸ್ಟೇಟಸ್ ಅನ್ನು ಹೇಗೆ ಚೆಕ್ ಮಾಡುವುದು ಎಂಬುದರ ಕುರಿತು ಒಂದು ಉದಾಹರಣೆಯನ್ನು ನಾವೀಗ ನೋಡೋಣ.
ಹಂತ 1: ಇಂಡಿಯನ್ ಬ್ಯೂರೋ ಆಫ್ ಇಮಿಗ್ರೇಷನ್‌ನ ಆಫೀಷಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಿ. ಈ ಹೋಮ್ ಪೇಜ್‌ನಿಂದ "ಭಾರತಕ್ಕೆ ಭೇಟಿ ನೀಡಲು ಉದ್ದೇಶಿಸಿರುವ ವಿದೇಶಿಯರಿಗಾಗಿ ಆನ್‌ಲೈನ್ ವೀಸಾ ಅಪ್ಲಿಕೇಶನ್" ಲಿಂಕ್ ಅನ್ನು ಸೆಲೆಕ್ಟ್ ಮಾಡಿ.
ಹಂತ 2: ಈ ಪೇಜ್‌ನಲ್ಲಿ "ಆನ್‌ಲೈನ್ ವೀಸಾ ಅಪ್ಲಿಕೇಶನ್ ರಿಜಿಸ್ಟ್ರೇಷನ್" ಮೇಲೆ ಕ್ಲಿಕ್ ಮಾಡಿ. ಇದು ಹೊಸ ಪೇಜ್‌ಗೆ ರಿಡೈರೆಕ್ಟ್ ಮಾಡುತ್ತದೆ.
ಹಂತ 3: "ನಿಮ್ಮ ವೀಸಾ ಸ್ಟೇಟಸ್ ಅನ್ನು ಚೆಕ್ ಮಾಡಿ" ಅನ್ನು ಕ್ಲಿಕ್ ಮಾಡಿ. ನಿಮ್ಮ ಅಪ್ಲಿಕೇಶನ್ ನಂಬರ್ ಅನ್ನು ನಮೂದಿಸಿ
ಹಂತ 4: ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು "ಸಬ್ಮಿಟ್ ಮಾಡಿ" ಮೇಲೆ ಕ್ಲಿಕ್ ಮಾಡಿ.
ವಿವಿಧ ದೇಶಗಳಿಗೆ ವೀಸಾ ಅಪ್ಲಿಕೇಶನ್‌ನ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?
ನೀವು ನೋಡುತ್ತಿರುವಂತೆ, ವೀಸಾ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡುವುದು ಸರಳ ಪ್ರಕ್ರಿಯೆಯಾಗಿದೆ. ಮೇಲೆ ತಿಳಿಸಿದ ಸೆಕ್ಷನ್‌ಗಳು ಇಂಡಿಯನ್ ವೀಸಾವನ್ನು ಪಡೆಯುವುದರ ಬಗ್ಗೆ ಮಾತ್ರ ಫೋಕಸ್ ಮಾಡಿದರೆ, ಈ ಕೆಳಗಿನ ಹಂತಗಳು ವಿವಿಧ ದೇಶಗಳಿಗೆ ವೀಸಾ ಸ್ಟೇಟಸ್ ಅನ್ನು ಚೆಕ್ ಮಾಡಲು ಜನರಲ್ ಗೈಡ್‌ನಲೈನ್ಸ್ ಅನ್ನು ನೀಡುತ್ತದೆ.
ಹಂತ 1: ಸಂಬಂಧಪಟ್ಟ ದೇಶದ ಆಫೀಷಿಯಲ್ ಗವರ್ನಮೆಂಟ್ ಇಮಿಗ್ರೇಷನ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿ. ಹೋಮ್ ಪೇಜ್ ಅನ್ನು ಪರೀಕ್ಷಿಸಿ ಮತ್ತು ವೀಸಾ ಅಪ್ಲಿಕೇಶನ್‌ನ ಆಯ್ಕೆಯನ್ನು ನೋಡಿ.
ಹಂತ 2: ಒಮ್ಮೆ ನೀವು ಅದರ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮನ್ನು ವೀಸಾ ಅಪ್ಲಿಕೇಶನ್ ವಿವರಗಳ ಪೇಜ್‌ಗೆ ರಿಡೈರೆಕ್ಟ್ ಮಾಡಲಾಗುತ್ತದೆ. ಈಗ 'ವೀಸಾ ಸ್ಟೇಟಸ್ ಚೆಕ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: ಅಪ್ಲಿಕೇಶನ್ ಐಡಿ ಯ ನಿಮ್ಮ ಪಾಸ್‌ವರ್ಡ್ ನಂಬರ್ ಅನ್ನು ನಮೂದಿಸಿ. ಹೆಚ್ಚುವರಿಯಾಗಿ, ಅಗತ್ಯವಿರುವಂತೆ ನಿಮ್ಮ ಜನ್ಮದಿನಾಂಕ ಅಥವಾ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
ಹಂತ 4: ಅಂತಿಮವಾಗಿ, 'ಸಬ್ಮಿಟ್ ಮಾಡಿ' ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮ ವೀಸಾ ಅಪ್ಲಿಕೇಶನ್‌ನ ಸ್ಟೇಟಸ್ ಅನ್ನು ಡಿಸ್‌ಪ್ಲೇ ಮಾಡುತ್ತದೆ.
ಹೀಗಾಗಿ, ಈ ಆರ್ಟಿಕಲ್‌ನಲ್ಲಿ ಸೂಚಿಸಿದಂತೆ, ವೀಸಾ ಸ್ಟೇಟಸ್ ಅನ್ನು ಚೆಕ್ ಮಾಡುವ ಹಂತಗಳು ಟ್ರಿಕಿ ಆಗಿಲ್ಲ. ಮತ್ತು ಇದು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿದೆ. ಅಪ್ಲಿಕಂಟ್‌ಗಳು ಸರ್ಕಾರದ ಆಫೀಷಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅದನ್ನು ತ್ವರಿತವಾಗಿ ಚೆಕ್ ಮಾಡಬಹುದು. ಇದಲ್ಲದೆ, ಇದು ಅವರ ಅಪ್ಲಿಕೇಶನ್ ಅನ್ನು ಟ್ರ್ಯಾಕ್ ಮಾಡಲು ಮತ್ತು ಅದರ ಸಂಭವನೀಯ ಅಪ್ರುವಲ್‌ನ ಬಗ್ಗೆ ಅಂದಾಜು ಮಾಡಲು ಅವರಿಗೆ ಅನುವು ಮಾಡಿಕೊಡುತ್ತದೆ.
ವೀಸಾ ಅಪ್ಲಿಕೇಶನ್‌ನ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡುವ ಹಂತಗಳ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ವೀಸಾ ಅಪ್ಲಿಕೇಶನ್‌ಗಳ ವಿವಿಧ ಸ್ಟೇಟಸ್‌ಗಳು ಯಾವುವು?
ವೀಸಾ ಅಪ್ಲಿಕೇಶನ್‌ಗಳ ಕೆಲವು ಸಾಮಾನ್ಯ ಸ್ಟೇಟಸ್‌ಗಳು "ಅಡ್ಮಿನಿಸ್ಟ್ರೇಟಿವ್ ಪ್ರೊಸೆಸಿಂಗ್‌ನಲ್ಲಿದೆ", "ಇಶ್ಯೂ ಮಾಡಲಾಗಿದೆ", "ರೆಫ್ಯೂಸ್ ಮಾಡಲಾಗಿದೆ" ಮತ್ತು "ಇಮಿಗ್ರಂಟ್ ವೀಸಾ" ಇವುಗಳನ್ನು ಒಳಗೊಂಡಿರುತ್ತದೆ. ನೀವು ಕೊನೆಯದನ್ನು ಹೊಂದಿದ್ದರೆ, ಆಗ ಇತರ ಸ್ಟೇಟಸ್‌ಗಳನ್ನು ನೀವು ಕಾಣಬಹುದು. ಅವುಗಳೆಂದರೆ, "ಅವಧಿ ಮುಗಿದಿದೆ," "ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ," "ಎನ್‌ವಿಸಿ ಗೆ ಹಿಂತಿರುಗಿ, ಅಥವಾ "ಟ್ರಾನ್ಸ್‌ಫರ್ ಪ್ರೊಗ್ರೆಸ್‌ನಲ್ಲಿದೆ."
ನಾನು ನನ್ನ ಅಪ್ಲಿಕೇಶನ್ ಐಡಿಯನ್ನು ಕಳೆದುಕೊಂಡರೆ ನನ್ನ ವೀಸಾ ಅಪ್ಲಿಕೇಶನ್‌ನ ಸ್ಟೇಟಸ್ ಅನ್ನು ನಾನು ಚೆಕ್ ಮಾಡಬಹುದೇ?
ಹೌದು, ನಿಮ್ಮ ಪಾಸ್‌ಪೋರ್ಟ್ ನಂಬರ್ ಮತ್ತು ಜನ್ಮದಿನಾಂಕದ ಮೂಲಕ ನಿಮ್ಮ ವೀಸಾ ಅಪ್ಲಿಕೇಶನ್‌ನ ಸ್ಟೇಟಸ್ ಅನ್ನು ನೀವು ಈಗಲೂ ಚೆಕ್ ಮಾಡಬಹುದು. ಆದಾಗ್ಯೂ, ಅಪ್ಲಿಕೇಶನ್ ಐಡಿಯನ್ನು ನೆನಪಿಟ್ಟುಕೊಳ್ಳುವುದು ಉತ್ತಮ. ಏಕೆಂದರೆ ಇದು ಭವಿಷ್ಯದ ರೆಫರೆನ್ಸ್‌ಗಳಿಗೆ ಅಗತ್ಯವಾಗಿ ಬೇಕಾಗಬಹುದು.