ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
ಅನೇಕ ಭಾರತೀಯರು ವಿದೇಶ ಪ್ರಯಾಣದಿಂದ ಹಿಂದೆ ಸರಿಯುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ, ಏಕೆಂದರೆ ಮುಖ್ಯವಾಗಿ ವೀಸಾ ಅರ್ಜಿಯು ಅನೇಕ ಅನಿಶ್ಚಿತತೆಗಳನ್ನು ಒಳಗೊಂಡಿರುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದಾಗ್ಯೂ, ಅನೇಕ ದೇಶಗಳು ವೀಸಾ-ಆನ್-ಅರೈವಲ್ ಅಥವಾ ಇ-ವೀಸಾ ಸೌಲಭ್ಯಗಳನ್ನು ನೀಡುತ್ತವೆ. ಆದ್ದರಿಂದ, ನೀವು ವಿದೇಶಿ ನೆಲಕ್ಕೆ ಬಂದ ನಂತರ, ಅಗತ್ಯವಿರುವ ಎಲ್ಲಾ ಪೇಪರ್‌ವರ್ಕ್ ಅನ್ನು ಪೂರ್ಣಗೊಳಿಸಬಹುದು. ಮಾರ್ಚ್ 2023 ರಂತೆ ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ ಪ್ರಕಾರ ಈ ಸ್ಥಳಗಳಿಗೆ ಪ್ರಯಾಣಿಸುವ ಭಾರತೀಯರಿಗೆ 60 ದೇಶಗಳು ವೀಸಾ-ಆನ್-ಅರೈವಲ್ ಮತ್ತು ವೀಸಾ-ಫ್ರೀ ಸೌಲಭ್ಯವನ್ನು ನೀಡುತ್ತವೆ.
ನೀವು ಮಾಡಬೇಕಾಗಿರುವುದು ಇಷ್ಟೇ, ಕೆಲವು ಡಾಕ್ಯುಮೆಂಟ್‌ಗಳನ್ನು ಸಬ್ಮಿಟ್ ಮಾಡುವುದು ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಭೇಟಿ ನೀಡುವ ದೇಶಕ್ಕೆ ಸಂಪೂರ್ಣ ಆ್ಯಕ್ಸೆಸ್ ಅನ್ನು ಪಡೆಯಲು ಅಗತ್ಯವಿರುವ ಫೀಸ್ ಅನ್ನು ಪಾವತಿಸಿ.
ಭಾರತೀಯ ನಾಗರಿಕರಿಗೆ ವೀಸಾ-ಆನ್-ಅರೈವಲ್ ಅನ್ನು ನೀಡುವ ಎಲ್ಲಾ ದೇಶಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:
ಮಾಲ್ಡೀವ್ಸ್ ದ್ವೀಪ ರಾಷ್ಟ್ರವು, ಸಮುದ್ರದ ಕೆಳಗೆ ಅಡ್ವೆಂಚರ್ ಅನ್ನು ಬಯಸುವ ಟ್ರಾವೆಲರ್‌ಗಳಿಗೆ ಸರಿಯಾದ ತಾಣವಾಗಿದೆ. ಈ ಉಷ್ಣವಲಯದ ಸ್ವರ್ಗದಲ್ಲಿ ನಿಮ್ಮ ಆಗಮನಕ್ಕೆಂದೇ ರಿಲ್ಯಾಕ್ಸಿಂಗ್ ಬೀಚ್‌ಗಳು, ಮೋಜಿನಿಂದ ಕೂಡಿದ ವಾಟರ್ ಗೇಮ್‌ಗಳು ಮತ್ತು ಅದ್ಭುತ ಸೂರ್ಯಾಸ್ತಗಳು ಕಾಯುತ್ತಿವೆ.
ಹಿಂದೂ ಮಹಾಸಾಗರದ ಮುತ್ತು ಎಂದು ಕರೆಯಲ್ಪಡುವ ಈ ದ್ವೀಪ ರಾಷ್ಟ್ರವು ಸಾಕಷ್ಟು ಆಕರ್ಷಕ ಬೀಚ್‌ಗಳು, ಸೊಗಸಾದ ಆಹಾರ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು, ಸ್ನೇಹಿತರೊಂದಿಗೆ ಅಥವಾ ಕುಟುಂಬದವರೊಂದಿಗೆ ಆನಂದಿಸಲು ಅತ್ಯುತ್ತಮವಾಗಿದೆ.
ವರ್ಷವಿಡೀ ತನ್ನ ಸುಂದರ ಹವಾಮಾನ, ರಮಣೀಯ ಸೌಂದರ್ಯ, ದೇವಾಲಯಗಳು, ಅರಮನೆಗಳು ಮತ್ತು ಬೀಚ್‌ಗಳ ಕಾರಣದಿಂದಾಗಿ ಥೈಲ್ಯಾಂಡ್ ದೇಶವು ಭಾರತೀಯ ಟ್ರಾವೆಲರ್‌ಗಳಿಗೆ ನೆಚ್ಚಿನ ತಾಣವಾಗಿದೆ.
ಇಂಡೋನೇಷ್ಯಾ ದೇಶವು ಪ್ರತಿಯೊಬ್ಬರಿಗೂ ಕಣ್ಸೆಳೆಯುವ ಆಕರ್ಷಣೆಯನ್ನು ಮತ್ತು ಅಡ್ರಿನಾಲಿನ್-ರಶ್ ಮಾಡುವ ಚಟುವಟಿಕೆಗಳನ್ನು ನೀಡುತ್ತದೆ. ಜಕಾರ್ತಾ, ಕೊಮೊಡೊ, ಬಾಲಿ ಮತ್ತು ಪೆನಿಡಾದಂತಹ ನಗರಗಳಲ್ಲಿ ಮೋಜು ಮಾಡಲು ಮತ್ತು ನೋಡಲು ಬಹಳಷ್ಟು ಇವೆ.
ಇರಾನ್ ದೇಶವು ಪ್ರತಿಯೊಬ್ಬರಿಗೂ ಕಲೆ, ಸಾಹಿತ್ಯ, ಕಾವ್ಯ, ಪಾಕಪ್ರಾವಿಣ್ಯತೆ, ವಾಸ್ತುಶಿಲ್ಪಗಳ ಮೂಲಕ ಪ್ರವಾಸಿಗರಿಗೆ ಶ್ರೀಮಂತ ಸಾಂಸ್ಕೃತಿಕ ಇತಿಹಾಸವನ್ನು ಉಣಬಡಿಸುತ್ತದೆ. ಮತ್ತು ಕಣ್ಸೆಳೆಯುವ ಆಕರ್ಷಣೆಯನ್ನು ಹಾಗೂ ಅಡ್ರಿನಾಲಿನ್-ರಶ್ ಮಾಡುವ ಚಟುವಟಿಕೆಗಳನ್ನು ನೀಡುತ್ತದೆ.
ಇರಾನ್‌ಗೆ ಭೇಟಿ ನೀಡಲು ಉತ್ತಮ ಸಮಯ - ಇರಾನ್‌ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮೇ ನಿಂದ ಸೆಪ್ಟೆಂಬರ್ ವರೆಗಿನ ದಿನಗಳು ಶುಷ್ಕವಾಗಿಯೂ, ತಂಪಾಗಿಯೂ ಇರುವುದರಿಂದ ಔಟ್‌ಡೋರ್ ಅಡ್ವೆಂಚರ್‌ಗೆ ಸೂಕ್ತವಾಗಿದೆ.
ಭಾರತೀಯರಿಗಾಗಿ ಇರಾನ್ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 90 ದಿನಗಳವರೆಗೆ ಮಾನ್ಯವಾಗಿರುತ್ತದೆ.
ವೆಚ್ಚ - INR 5,400 (€60 ಅಥವಾ $64*)
ಕೆಂಪು ಸಮುದ್ರ (Red Sea)!ಮತ್ತು ಮೃತ ಸಮುದ್ರ (Dead Sea) ದ ಬಳಿ ಇರುವ ಜೋರ್ಡಾನ್, ಭಾರತೀಯರಿಗೆ ವೀಸಾ-ಆನ್-ಅರೈವಲ್ ಅನ್ನು ನೀಡುವ ಮತ್ತೊಂದು ದೇಶವಾಗಿದೆ. ಜೋರ್ಡಾನ್‌ನ ನೈಸರ್ಗಿಕ ಆಕರ್ಷಣೆಗಳು ನಿಮ್ಮನ್ನು ಮೂಕವಿಸ್ಮಿತಗೊಳಿಸಿ, ಆ ತಾಣದ ಪ್ರಭಾವಶಾಲಿ ಇತಿಹಾಸದ ಬಗ್ಗೆ ನೀವು ಕಲಿಯುವಂತೆ ಪ್ರೇರೇಪಿಸುತ್ತದೆ.
ಜೋರ್ಡಾನ್‌ಗೆ ಭೇಟಿ ನೀಡಲು ಉತ್ತಮ ಸಮಯ - ಈ ದೇಶಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ವಸಂತಕಾಲ (spring season); ಅಂದರೆ ಮಾರ್ಚ್‌ನಿಂದ ಮೇ ವರೆಗೆ. ತಾಪಮಾನವು ಸ್ವಲ್ಪಮಟ್ಟಿಗೆ ತಂಪಾಗಿರುತ್ತದೆ. ಇದು ದೇಶವು ನಮಗೆ ನೋಡಲು ಒದಗಿಸುವ ಸ್ಥಳಗಳ ಆರಾಮದಾಯಕ ಅನ್ವೇಷಣೆಗೆ ಅನುವು ಮಾಡಿಕೊಡುತ್ತದೆ.
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳವರೆಗೆ
ವೆಚ್ಚ - $97
ಟ್ರಾವೆಲ್ ಇನ್ಶೂರೆನ್ ವೆಚ್ಚ – ಡಿಜಿಟ್‌ನ ಜೋರ್ಡಾನ್ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಮ್ಯಾನ್ಮಾರ್ ದಕ್ಷಿಣ ಏಷ್ಯಾದ ಪಶ್ಚಿಮ ಭಾಗದಲ್ಲಿರುವ ಒಂದು ಸಣ್ಣ ದೇಶವಾಗಿದೆ. ಇದು ದೇವಾಲಯಗಳು ಮತ್ತು ತನ್ನ ನೈಸರ್ಗಿಕ ಭೂದೃಶ್ಯದಲ್ಲಿ ನೇಯ್ದ ಕಣ್ಸೆಳೆಯುವ ವೈವಿಧ್ಯಮಯ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಬೆಚ್ಚಗಿನ ಸೂರ್ಯನ ರಶ್ಮಿಯ ವಿರುದ್ಧದ ಕಲೋನಿಯಲ್ ವಾಸ್ತುಶಿಲ್ಪವು, ಪ್ರವಾಸಿಗರನ್ನು ಎಲ್ಲೆಡೆಯಿಂದಲೂ ವರ್ಷದ ಯಾವುದೇ ಸಮಯದಲ್ಲೂ ತನ್ನತ್ತ ಸೆಳೆಯುತ್ತದೆ.
ಮ್ಯಾನ್ಮಾರ್‌ಗೆ ಭೇಟಿ ನೀಡಲು ಉತ್ತಮ ಸಮಯ - ಮ್ಯಾನ್ಮಾರ್‌ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್‌ನಿಂದ ಫೆಬ್ರವರಿ. ತಾಪಮಾನವು ತಂಪಾಗಿರುತ್ತದೆ ಮತ್ತು ಮಳೆಯ ಸಾಧ್ಯತೆಯು ಕಡಿಮೆಯಿರುವುದರಿಂದ, ಇದು ದೇಶವನ್ನು ಅನ್ವೇಷಿಸಲು ಅತ್ಯಂತ ಸೂಕ್ತ ಸಮಯವಾಗಿದೆ.
ಭಾರತೀಯರಿಗಾಗಿ ಮ್ಯಾನ್ಮಾರ್ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳವರೆಗೆ
ವೆಚ್ಚ - $ 50
ಕಾಂಬೋಡಿಯಾ ಒಂದು ಚಿಕ್ಕ ದೇಶವಾದರೂ, ಅದು ಪ್ರವಾಸಿಗರಿಗೆ ಉಣಬಡಿಸಲು ಸಾಕಷ್ಟನ್ನು ಹೊಂದಿದೆ. ತನ್ನ ಶ್ರೀಮಂತ ಇತಿಹಾಸ ಮತ್ತು ಪರಂಪರೆಯಿಂದ ಹಿಡಿದು ಪ್ರಭಾವಶಾಲಿ ನೈಸರ್ಗಿಕ ದೃಶ್ಯಾವಳಿಯವೆರೆಗೆ ಕಾಂಬೋಡಿಯಾ ದೇಶವು ಪ್ರಪಂಚದಾದ್ಯಂತದ ಜನರಿಗೆ ಜನಪ್ರಿಯ ಪ್ರವಾಸಿ ತಾಣವಾಗಿದೆ.
ಭೇಟಿ ನೀಡಲು ಉತ್ತಮ ಸಮಯ - ನವೆಂಬರ್ ನಿಂದ ಏಪ್ರಿಲ್ ನಡುವೆ ಕಾಂಬೋಡಿಯಾವು ಕಡಿಮೆ ಮಳೆಯನ್ನು ಪಡೆಯುತ್ತದೆ. ಆದ್ದರಿಂದ, ಪ್ರವಾಸಿಗರು ಆಹ್ಲಾದಕರ ಹವಾಮಾನವನ್ನು ಅನುಭವಿಸಬಹುದು ಮತ್ತು ವಿವಿಧ ತಾಣಗಳಿಗೆ ಭೇಟಿ ನೀಡುವುದನ್ನು ಆನಂದಿಸಬಹುದು.
ಭಾರತೀಯರಿಗಾಗಿ ಕಾಂಬೋಡಿಯಾ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳವರೆಗೆ
ವೆಚ್ಚ - $ 30
ಟ್ರಾವೆಲ್ ಇನ್ಶೂರೆನ್ ವೆಚ್ಚ - ಒಬ್ಬ ವಯಸ್ಕರಿಗೆ ಕಾಂಬೋಡಿಯಾ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಪ್ರವಾಸಿಗರಿಗೆ ಅನ್ವೇಷಿಸಲು ಮಡಗಾಸ್ಕರ್ ಒಂದು ಆಸಕ್ತಿದಾಯಕವಾದ ಸಸ್ಯ ಮತ್ತು ಪ್ರಾಣಿಗಳಿಂದ ತುಂಬಿದ ಉಷ್ಣವಲಯದ ಸ್ವರ್ಗ ತಾಣವಾಗಿದೆ. ವಿಶ್ವದ ನಾಲ್ಕನೇ ಅತಿದೊಡ್ಡ ದ್ವೀಪವಾಗಿರುವ ಮಡಗಾಸ್ಕರ್, ವಿಸ್ತಾರವಾದ ಭೂದೃಶ್ಯವನ್ನು ಹೊಂದಿದ್ದು ಒಂದು ಪರಿಪೂರ್ಣ ವೆಕೇಶನ್‌ಗೆ ಉತ್ತಮ ತಾಣವಾಗಿದೆ.
ಮಡಗಾಸ್ಕರ್‌ಗೆ ಭೇಟಿ ನೀಡಲು ಉತ್ತಮ ಸಮಯ - ದೇಶಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಶುಷ್ಕ, ತಂಪಾದ ಋತುವಿನಲ್ಲಿ, ಅಂದರೆ, ಏಪ್ರಿಲ್ ಮತ್ತು ಅಕ್ಟೋಬರ್. ತಾಪಮಾನವು ಸ್ವಲ್ಪಮಟ್ಟಿಗೆ ತಂಪಾಗಿರುತ್ತದೆ ಮತ್ತು ಪ್ರಾಣಿಗಳು (ವಿಶೇಷವಾಗಿ ಲೆಮರ್ಸ್) ವರ್ಷದ ಈ ಸಮಯದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿರುತ್ತವೆ.
ಭಾರತೀಯರಿಗಾಗಿ ಮಡಗಾಸ್ಕರ್ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳವರೆಗೆ
ವೆಚ್ಚ - MGA 115,000 ($37)
ಟ್ರಾವೆಲ್ ಇನ್ಶೂರೆನ್ ವೆಚ್ಚ - ಒಬ್ಬ ವಯಸ್ಕರಿಗೆ ಡಿಜಿಟ್‌ನ ಮಡಗಾಸ್ಕರ್ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಸೀಶೆಲ್ಸ್ ಪ್ರವಾಸಿಗರಿಗೆ ಸ್ವರ್ಗವಾಗಿದ್ದು, 115 ಹವಳ ಮತ್ತು ಗ್ರಾನೈಟ್ ದ್ವೀಪಗಳನ್ನು ಒಳಗೊಂಡಿದೆ. ಅದರ ಅತ್ಯಾಕರ್ಷಕ ಬೀಚ್‌ಗಳು ಮತ್ತು ಕರಾವಳಿ, ವರ್ಣರಂಜಿತ ಭೂದೃಶ್ಯ ಮತ್ತು ಸುಂದರವಾದ ದ್ವೀಪಗಳ ಸಮೂಹವನ್ನು ಹೊರತುಪಡಿಸಿ, ಈ ದೇಶವು ಅಪರೂಪದ ವನ್ಯಜೀವಿ ಪ್ರಭೇದಗಳಿಗೂ ನೆಲೆಯಾಗಿದೆ.
ಸೀಶೆಲ್ಸ್‌ಗೆ ಭೇಟಿ ನೀಡಲು ಉತ್ತಮ ಸಮಯ: ಏಪ್ರಿಲ್ ನಿಂದ ಅಕ್ಟೋಬರ್ - ಈ ತಿಂಗಳುಗಳಲ್ಲಿ ಸೀಶೆಲ್ಸ್‌ನಲ್ಲಿ ತಂಪಾದ ಮತ್ತು ತಕ್ಕಮಟ್ಟಿಗಿನ ಶುಷ್ಕ ಹವಾಮಾನವು ಪ್ರವಾಸಿಗರಿಗೆ ಸೂಕ್ತವಾಗಿದೆ.
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 3 ತಿಂಗಳವರೆಗೆ ಮಾನ್ಯವಾಗಿರುತ್ತದೆ.
ವೆಚ್ಚ - ಉಚಿತ
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ– ಡಿಜಿಟ್‌ನ ಸೀಶೆಲ್ಸ್ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಇಥಿಯೋಪಿಯಾದಲ್ಲಿ ಹೊಸದಾಗಿರುವ ಮತ್ತು ವಿಭಿನ್ನವಾಗಿರುವುದನ್ನು ಅನುಭವಿಸಿ. ಆಫ್ರಿಕಾದ ಹಾರ್ನ್‌ನಲ್ಲಿರುವ ಈ ದೇಶವು ಆಫ್ರಿಕಾ ಖಂಡದ 10 ನೇ ಅತಿದೊಡ್ಡ ದೇಶವಾಗಿದೆ ಮತ್ತು ಉತ್ತಮ ಗುಣಮಟ್ಟದ ಕಾಫಿ, ನಂಬಲಾಗದ ಪ್ರಾಚೀನ ಸಂಸ್ಕೃತಿ ಮತ್ತು ಸುಂದರವಾದ ಭೂದೃಶ್ಯಕ್ಕೆ ಹೆಸರುವಾಸಿಯಾಗಿದೆ.
ಇಥಿಯೋಪಿಯಾಕ್ಕೆ ಭೇಟಿ ನೀಡಲು ಉತ್ತಮ ಸಮಯ - ಶುಷ್ಕ ಋತುವಿನ ಆರಂಭದಿಂದ ಇಥಿಯೋಪಿಯಾಕ್ಕೆ ಭೇಟಿ ನೀಡಲು ಸೆಪ್ಟೆಂಬರ್ ನಿಂದ ಮಾರ್ಚ್ ಅತ್ಯುತ್ತಮ ಸಮಯ. ಕಡಿಮೆ ಮಳೆಯೊಂದಿಗೆ ತಾಪಮಾನವು ಹದವಾಗಿದ್ದು, ಟ್ರೆಕ್ಕಿಂಗ್ ಮತ್ತು ವನ್ಯಜೀವಿ ವೀಕ್ಷಣೆಗೆ ಪರಿಪೂರ್ಣವಾಗಿದೆ.
ಭಾರತೀಯರಿಗಾಗಿ ಇಥಿಯೋಪಿಯಾ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್/ಇ-ವೀಸಾ
ಅವಧಿ - 30 ದಿನಗಳವರೆಗೆ
ವೆಚ್ಚ - $ 82
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ಇಥಿಯೋಪಿಯಾ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ನೀವು ತಾಂಜಾನಿಯಾದ ಬಗ್ಗೆ ಕೇಳಿದ್ದರೆ, ಪೂರ್ವ ಆಫ್ರಿಕಾ ಖಂಡದ ಪ್ರಸಿದ್ಧ ಹಿಮ-ಶಿಖರದ ಕಿಲಿಮಂಜಾರೋ ಪರ್ವತದ ಬಗ್ಗೆಯೂ ಬಹುಶಃ ಕೇಳಿರಬಹುದು. ನೈಸರ್ಗಿಕ ಹೊಳಪು, ಆಕರ್ಷಕ ಬೀಚ್‌ಗಳು, ವನ್ಯಜೀವಿಗಳು, ಪುರಾತತ್ತ್ವ ಶಾಸ್ತ್ರದ ಸ್ಥಳಗಳು ಮತ್ತು ಪ್ರಾಚೀನ ಪಟ್ಟಣಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾದ ತಾಂಜಾನಿಯಾ ದೇಶವು ನೀವು ಭೇಟಿ ನೀಡಲೇಬೇಕಾದ ಅದ್ಭುತ ದೇಶವಾಗಿದೆ!
ತಾಂಜಾನಿಯಾಗೆ ಭೇಟಿ ನೀಡಲು ಉತ್ತಮ ಸಮಯ - ಜೂನ್ ನಿಂದ ಅಕ್ಟೋಬರ್ ತಾಂಜಾನಿಯಾಗೆ ಭೇಟಿ ನೀಡಲು ಉತ್ತಮ ಸಮಯ. ಶುಷ್ಕ ಋತುವಿನಲ್ಲಿ, ಸ್ಪಷ್ಟವಾದ ಆಕಾಶದೊಂದಿಗೆ, ನೀವು ಗ್ರೇಟ್ ಮೈಗ್ರೇಶನ್‌ನ ರಿವರ್ ಕ್ರಾಸಿಂಗ್ ಅನ್ನು ವೀಕ್ಷಿಸಲು ಅನುಮತಿಸುತ್ತದೆ.
ಭಾರತೀಯರಿಗಾಗಿ ತಾಂಜಾನಿಯಾ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 90 ದಿನಗಳವರೆಗೆ
ವೆಚ್ಚ - $ 50
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ತಾಂಜಾನಿಯಾ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಜಿಂಬಾಬ್ವೆ ತನ್ನ ಪ್ರವಾಸಿಗರಿಗೆ ತನ್ನ ಸಮ್ಮೋಹನಗೊಳಿಸುವ ಸಂಸ್ಕೃತಿ, ರಮಣೀಯ ಭೂದೃಶ್ಯ, ಪ್ರಾಚೀನ ಇತಿಹಾಸ, ವಾಸ್ತುಶಿಲ್ಪ ಮತ್ತು ಹೆಚ್ಚಿನವುಗಳೊಂದಿಗೆ ಹಿಂದೆಂದೂ ಕಂಡಿರದಂತಹ ಅನುಭವವನ್ನು ನೀಡುವುದಲ್ಲದೇ, ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಜಿಂಬಾಬ್ವೆಗೆ ಭೇಟಿ ನೀಡಲು ಉತ್ತಮ ಸಮಯ - ಜಿಂಬಾಬ್ವೆಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮೇ ನಿಂದ ಅಕ್ಟೋಬರ್ ನಡುವೆ. ಶುಷ್ಕ ತಾಪಮಾನವು ಭೂದೃಶ್ಯಗಳನ್ನು ಮತ್ತು ಪ್ರಾಣಿಗಳನ್ನು, ಸರಿಯಾಗಿ ವೀಕ್ಷಿಸಲು ಅನುಮತಿಸುತ್ತದೆ.
ಭಾರತೀಯರಿಗಾಗಿ ಜಿಂಬಾಬ್ವೆ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳವರೆಗೆ
ವೆಚ್ಚ - $ 30
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ಜಿಂಬಾಬ್ವೆ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಆಫ್ರಿಕಾದ ಮುತ್ತು ಉಗಾಂಡಾಕ್ಕೆ ಭೇಟಿ ನೀಡಿ ಮತ್ತು ವಿವಿಧ ರೀತಿಯ ಪ್ರಾಣಿ ಪ್ರಭೇದಗಳಿಂದ ಹಿಡಿದು ಸರೋವರಗಳು, ಜಲಪಾತಗಳು, ಪರ್ವತಗಳು ಮತ್ತು ಸಾಂಸ್ಕೃತಿಕ ತಾಣಗಳವರೆಗೆ ವೈವಿಧ್ಯಮಯ ನೈಸರ್ಗಿಕ ಭೂದೃಶ್ಯವನ್ನು ಅನ್ವೇಷಿಸಿ.
ಉಗಾಂಡಾಗೆ ಭೇಟಿ ನೀಡಲು ಉತ್ತಮ ಸಮಯ - ಡಿಸೆಂಬರ್- ಫೆಬ್ರವರಿ ಮತ್ತು ಜೂನ್ - ಆಗಸ್ಟ್ ನಡುವೆ ಉಗಾಂಡಾಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಈ ತಿಂಗಳುಗಳು ಹೆಚ್ಚಾಗಿ ಶುಷ್ಕ ತಾಪಮಾನವನ್ನು ಹೊಂದಿರುತ್ತವೆ. ಮತ್ತು ಔಟ್‌ಡೋರ್ ಆ್ಯಕ್ಟಿವಿಟಿಗಳಲ್ಲಿ ಪಾಲ್ಗೊಳ್ಳಲು ಅತ್ಯುತ್ತಮ ಸಮಯವಾಗಿದೆ.
ಭಾರತೀಯರಿಗಾಗಿ ಉಗಾಂಡಾ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್/ಇ-ವೀಸಾ
ಅವಧಿ - 30 ದಿನಗಳವರೆಗೆ
ವೆಚ್ಚ - $ 50
ಆಗ್ನೇಯ ಏಷ್ಯಾದ ಶಾಂತ ಹೃದಯ (Quiet Heart) ಎಂದು ಕರೆಯಲ್ಪಡುವ ಲಾವೋಸ್ ದೇಶವು ಅನ್ವೇಷಣೆಯಾಗಲು ಕಾಯುತ್ತಿರುವ ಒಂದು ಟೈಮ್‌ಲೆಸ್ ಬ್ಯೂಟಿಯಾಗಿದೆ. ಲಾವೋಸ್ ತನ್ನ ಶ್ರೀಮಂತ ಇತಿಹಾಸ, ಪದ್ಧತಿಗಳು, ಭೂದೃಶ್ಯಗಳು ಮತ್ತು ನಾಗರಿಕತೆಗಳೊಂದಿಗೆ ನಿಮ್ಮೊಳಗಿನ ಟ್ರಾವೆಲರ್‌ನನ್ನು ಆಕರ್ಷಿಸುತ್ತದೆ.
ಲಾವೋಸ್‌ಗೆ ಭೇಟಿ ನೀಡಲು ಉತ್ತಮ ಸಮಯ - ಅಕ್ಟೋಬರ್ ಮತ್ತು ಏಪ್ರಿಲ್ ನಡುವಿನ ಶುಷ್ಕ ಚಳಿಗಾಲದ ತಿಂಗಳುಗಳು ಲಾವೋಸ್‌ಗೆ ಭೇಟಿ ನೀಡಲು ಉತ್ತಮ ಸಮಯವಾಗಿವೆ.
ಭಾರತೀಯರಿಗಾಗಿ ಲಾವೋಸ್ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳವರೆಗೆ
ವೆಚ್ಚ - $ 40
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ಲಾವೋಸ್ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಒಂದು ಸಣ್ಣ, ಲ್ಯಾಂಡ್‌ಲಾಕ್ಡ್ ದೇಶ, ಸೊಮಾಲಿಯಾ, ಆಫ್ರಿಕಾದ ಕೊಂಬಿನಲ್ಲಿ ಯೋಜಿತವಾಗಿ ನೆಲೆಗೊಂಡಿದೆ. ಪರ್ವತಗಳು, ಬೆಟ್ಟಗಳು ಮತ್ತು ಸೆಮಿ-ಡೆಸರ್ಟ್‌ಗಳು ಭೂದೃಶ್ಯವನ್ನು ಇನ್ನಷ್ಟು ಸುಂದರಗೊಳಿಸುತ್ತವೆ. ಮತ್ತು ಸೊಮಾಲಿಯಾವನ್ನು ಕವಿಗಳ ರಾಷ್ಟ್ರವೆಂದು ಪರಿಗಣಿಸಲಾಗಿದೆ.
ಸೊಮಾಲಿಯಾಕ್ಕೆ ಭೇಟಿ ನೀಡಲು ಉತ್ತಮ ಸಮಯ - ಸೊಮಾಲಿಯಾಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಚಳಿಗಾಲದ ಅವಧಿ, ಅಂದರೆ ಅಕ್ಟೋಬರ್ ಮಧ್ಯದಿಂದ ಫೆಬ್ರವರಿ ನಡುವೆ.
ಭಾರತೀಯರಿಗಾಗಿ ಸೊಮಾಲಿಯಾ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳವರೆಗೆ
ವೆಚ್ಚ - $ 40
ಮಧ್ಯ ದಕ್ಷಿಣ ಅಮೆರಿಕಾದಲ್ಲಿರುವ ಬೊಲಿವಿಯಾ ದೇಶವು ಅನೇಕ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ಈ ದೇಶವು ಆರು ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ. ಇದರ ಜೊತೆಗೆ, ದೇಶವು ಟ್ರೆಕ್ಕಿಂಗ್‌ಗೆ ಹೆಸರುವಾಸಿಯಾದ ಅನೇಕ ಅದ್ಭುತವಾದ ಎತ್ತರದ ಪ್ರದೇಶಗಳನ್ನು ಮತ್ತು ತಗ್ಗು ಪ್ರದೇಶಗಳನ್ನು ಹೊಂದಿದೆ.
ಬೊಲಿವಿಯಾಕ್ಕೆ ಭೇಟಿ ನೀಡಲು ಉತ್ತಮ ಸಮಯ - ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಸಮಯ ಬೊಲಿವಿಯಾಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಶುಷ್ಕ ಹವಾಮಾನ ಅಂದರೆ ನೀಲಿ ಆಗಸ ಮತ್ತು ಅನೇಕ ಸ್ಥಳಗಳನ್ನು ಅನ್ವೇಷಿಸಲು ತುಂಬಾ ಆಹ್ಲಾದಕರವಾಗಿರುತ್ತದೆ.
ಭಾರತೀಯರಿಗಾಗಿ ಬೊಲಿವಿಯಾ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳು
ವೆಚ್ಚ - $60*
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ಬೊಲಿವಿಯಾ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಆಫ್ರಿಕನ್ ಲ್ಯಾಂಡ್‌ಲಾಕ್ಡ್ ದೇಶವಾದ ಬೋಟ್ಸ್‌ವಾನಾ ದೇಶವು ವಿಶ್ವದ ಕೆಲವು ಅತ್ಯುತ್ತಮ ಅರಣ್ಯ ಪ್ರದೇಶಗಳನ್ನು ಹೊಂದಿದ್ದು, ಹೆಸರುವಾಸಿಯಾಗಿದೆ. ದೇಶದ ಹಲವಾರು ಪ್ರದೇಶಗಳಿಗೆ ಪ್ರಯಾಣಿಸುವುದರಿಂದ, ನೀವೊಂದು ವಿಶಾಲವಾದ ನೈಸರ್ಗಿಕ ಅದ್ಭುತಲೋಕದಲ್ಲಿ ಹಾದುಹೋಗುತ್ತಿರುವಿರಿ ಎಂಬ ಭಾವನೆಯನ್ನು ನೀಡುತ್ತದೆ.
ಬೋಟ್ಸ್‌ವಾನಕ್ಕೆ ಭೇಟಿ ನೀಡಲು ಉತ್ತಮ ಸಮಯ - ಶುಷ್ಕ ಋತುವು ಮೇ ನಿಂದ ಅಕ್ಟೋಬರ್ ವರೆಗೆ ಇರುತ್ತದೆ. ಈ ಸಮಯದಲ್ಲಿ ನೀವು ಪ್ರಕಾಶಮಾನವಾದ, ಬಿಸಿಲಿನಿಂದ ಕೂಡಿದ ದಿನಗಳನ್ನು ಮತ್ತು ತಂಪಾದ ರಾತ್ರಿಗಳನ್ನು ನಿರೀಕ್ಷಿಸಬಹುದಾದ ಕಾರಣ, ಬೋಟ್ಸ್‌ವಾನಕ್ಕೆ ಭೇಟಿ ನೀಡಲು ಇದು ಸೂಕ್ತ ಸಮಯವಾಗಿದೆ.
ಭಾರತೀಯರಿಗಾಗಿ ಬೋಟ್ಸ್‌ವಾನಾ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳು
ವೆಚ್ಚ - BWP 300 ($30)
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ಬೋಟ್ಸ್‌ವಾನಾ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಬುರುಂಡಿಯು ಮಧ್ಯ ಆಫ್ರಿಕಾದಲ್ಲಿ ಲ್ಯಾಂಡ್‌ಲಾಕ್ಡ್ ದೇಶವಾಗಿದ್ದು, ಅದರ ನೈಋತ್ಯ ಭಾಗದಲ್ಲಿ ಟ್ಯಾಂಗನಿಕಾ ಸರೋವರದ ಗಡಿಯನ್ನು ಹೊಂದಿದೆ. ಈ ದೇಶದ ಕಾಫಿ ಮತ್ತು ಚಹಾದಷ್ಟೆಯೇ ಅವರ ಆತಿಥ್ಯವು ಸಹ ಅಷ್ಟೇ ಹೆಸರುವಾಸಿಯಾಗಿದೆ. ದೇಶದ ಅತ್ಯಂತ ಪ್ರಸಿದ್ಧ ವೈಶಿಷ್ಟ್ಯವೆಂದರೆ ಭೇಟಿ ನೀಡಲೇಬೇಕಾದಂತಹ 'ಮೀಸಲು ಮತ್ತು ರಾಷ್ಟ್ರೀಯ ಉದ್ಯಾನವನಗಳ' ಸಂಖ್ಯೆ.
ಬುರುಂಡಿಗೆ ಭೇಟಿ ನೀಡಲು ಉತ್ತಮ ಸಮಯ - ಬುರುಂಡಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಜನವರಿ, ಫೆಬ್ರವರಿ ಮತ್ತು ಮೇ ನಿಂದ ಅಕ್ಟೋಬರ್. ಈ ಸಮಯದಲ್ಲಿ ನೀವು ಉತ್ತಮ ತಾಪಮಾನ ಮತ್ತು ಕಡಿಮೆ ಮಳೆಯನ್ನು ಆನಂದಿಸಬಹುದು.
ಭಾರತೀಯರಿಗಾಗಿ ಬುರುಂಡಿ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 90 ದಿನಗಳು
ವೆಚ್ಚ - $ 90
ಮೊಜಾಂಬಿಕ್ ದಕ್ಷಿಣ ಆಫ್ರಿಕಾದ ಒಂದು ದೇಶವಾಗಿದ್ದು, ಹಿಂದೂ ಮಹಾಸಾಗರದುದ್ದಕ್ಕೂ ಉದ್ದವಾದ ಕರಾವಳಿಯನ್ನು ಹೊಂದಿದೆ, ಇದು ಟೋಫೊ ಮತ್ತು ಆಫ್‌ಶೋರ್ ಮರೈನ್ ಪಾರ್ಕ್‌ಗಳಂತಹ ಪ್ರಸಿದ್ಧ ಬೀಚ್‌ಗಳಿಂದ ಕೂಡಿದೆ.
ಮೊಜಾಂಬಿಕ್‌ಗೆ ಭೇಟಿ ನೀಡಲು ಉತ್ತಮ ಸಮಯ - ಶುಷ್ಕ ಋತು, ಅಂದರೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ, ಮೊಜಾಂಬಿಕ್‌ಗೆ ಭೇಟಿ ನೀಡುವುದನ್ನು ಉತ್ತಮ ಸಮಯವೆಂದು ಪರಿಗಣಿಸಲಾಗಿದೆ ಮತ್ತು ಇದು ಪೀಕ್ ಟೂರಿಸ್ಟ್ ಸೀಸನ್‌ನ ಅವಧಿಯಾಗಿದೆ.
ಭಾರತೀಯರಿಗಾಗಿ ಮೊಜಾಂಬಿಕ್ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳು
ವೆಚ್ಚ - $ 50
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನಿಂದ ಒಬ್ಬ ವಯಸ್ಕರಿಗೆ ಮೊಜಾಂಬಿಕ್ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಸಾವಿರ ಬೆಟ್ಟಗಳ ದೇಶ ಎಂದೂ ಕರೆಯಲ್ಪಡುವ, ಅದ್ಭುತ ರೋಮಾಂಚನಕಾರಿ ಭೂದೃಶ್ಯ ಮತ್ತು ಸ್ಥಳೀಯರನ್ನು ಸ್ವಾಗತಿಸುವ ರೀತಿಯು ರುವಾಂಡಾದ ಮರೆಯಲಾಗದ ಅನುಭವವನ್ನು ನೀಡುತ್ತದೆ. ಇದು ಗಮನಾರ್ಹವಾದ ಜೀವವೈವಿಧ್ಯತೆಯನ್ನು ಮತ್ತು ಜ್ವಾಲಾಮುಖಿಗಳು, ಎತ್ತರದ ಮಳೆಕಾಡುಗಳು ಹಾಗೂ ವಿಸ್ತಾರವಾದ ಬಯಲು ಪ್ರದೇಶಗಳಲ್ಲಿ ವಾಸಿಸುವ ನಂಬಲಾಗದ ಅಸಂಖ್ಯಾತ ವನ್ಯಜೀವಿಗಳನ್ನು ಹೊಂದಿದೆ.
ರುವಾಂಡಾಗೆ ಭೇಟಿ ನೀಡಲು ಉತ್ತಮ ಸಮಯ - ಮೌಂಟೇನ್ ಗೊರಿಲ್ಲಾವನ್ನು ವೀಕ್ಷಿಸಲು ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮತ್ತು ಚಿಂಪಾಂಜಿಗಳನ್ನು ಪತ್ತೆಹಚ್ಚಲು ಮಾರ್ಚ್‌ನಿಂದ ಮೇ ಮತ್ತು ನವೆಂಬರ್‌ವರೆಗೆ ಅತ್ಯುತ್ತಮ ಸಮಯವಾಗಿದೆ.
ಭಾರತೀಯರಿಗಾಗಿ ರುವಾಂಡಾ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳು
ವೆಚ್ಚ - $ 50
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನಿಂದ ಒಬ್ಬ ವಯಸ್ಕರಿಗೆ ರುವಾಂಡಾ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಮೌರಿಟಾನಿಯಾ ವಾಯುವ್ಯ ಆಫ್ರಿಕಾದ ಸಾರ್ವಭೌಮ ರಾಷ್ಟ್ರವಾಗಿದೆ. ಇದು ಮರುಭೂಮಿ ಮತ್ತು ಸಾಗರದ ನೆಲೆಯಾಗಿದೆ. ಅಟ್ಲಾಂಟಿಕ್ ಕರಾವಳಿಯ ಎದುರು ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ಕಾರವಾನ್ ಪಟ್ಟಣಗಳೊಂದಿಗೆ ಸಹಾರಾನ್ ಅದ್ರಾರ್ ಪ್ರದೇಶವು ಒಂದು ಸುಂದರವಾದ ದೃಶ್ಯವಾಗಿದೆ. 'ಪಾರ್ಕ್ ನ್ಯಾಶನಲ್ ಡು ಬ್ಯಾಂಕ್ ಡಿ'ಅರ್ಗುಯಿನ್‌ನಲ್ಲಿ' ಕರಾವಳಿಯುದ್ದಕ್ಕೂ ಲಕ್ಷಾಂತರ ವಲಸೆ ಹಕ್ಕಿಗಳಿಂದ ಕೂಡಿದ ಚಳಿಗಾಲವನ್ನು ನೀವು ವೀಕ್ಷಿಸಬಹುದು.
ಮಾರಿಟಾನಿಯಾಗೆ ಭೇಟಿ ನೀಡಲು ಉತ್ತಮ ಸಮಯ - ಜುಲೈನಿಂದ ಸೆಪ್ಟೆಂಬರ್ ವರೆಗೆ ಮಾರಿಟಾನಿಯಾಗೆ ಭೇಟಿ ನೀಡಲು ಉತ್ತಮ ಸಮಯ. ಮಳೆಯ ಸುಳಿವಿನೊಂದಿಗೆ ತಾಪಮಾನವು ತಕ್ಕಮಟ್ಟಿಗೆ ತಂಪಾಗಿರುತ್ತದೆ.
ಭಾರತೀಯರಿಗಾಗಿ ಮೌರಿಟಾನಿಯಾ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 90 ದಿನಗಳವರೆಗೆ
ವೆಚ್ಚ - €95 ($100*)
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ಮೌರಿಟಾನಿಯಾ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಗ್ಯಾಬೊನ್ ತನ್ನ ದಟ್ಟವಾದ ಮಳೆಕಾಡುಗಳು ಮತ್ತು ವಿಶಾಲವಾದ ಹುಲ್ಲುಗಾವಲುಗಳಲ್ಲಿ ಪ್ರಕೃತಿ ಪ್ರಿಯರನ್ನು ಆಕರ್ಷಿಸಲು ಅದ್ಭುತವಾದ ವೈವಿಧ್ಯಮಯ ಪ್ರಾಣಿಗಳನ್ನು ಹೊಂದಿದೆ. ಆಫ್ರಿಕಾದ ಈ ಅನ್ವೇಷಿಸದ ಭಾಗದಲ್ಲಿ ಅದ್ಭುತವಾದ ವೈಟ್-ಸ್ಯಾಂಡ್ ಬೀಚ್‌ಗಳು, ಹರಿಯುವ ನದಿಗಳು ಮತ್ತು ಕಣ್ಮನ ಸೆಳೆಯುವ ಭೂದೃಶ್ಯಗಳು, ಈಡನ್ ತರಹದ ಪ್ರಯಾಣದ ಅನುಭವವನ್ನು ನೀಡುತ್ತದೆ.
ಗ್ಯಾಬೊನ್‌ಗೆ ಭೇಟಿ ನೀಡಲು ಉತ್ತಮ ಸಮಯ - ಮೇ ನಿಂದ ಸೆಪ್ಟೆಂಬರ್‌ವರೆಗಿನ ಶುಷ್ಕ ಅವಧಿಯು ಗ್ಯಾಬೊನ್‌ಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
ಭಾರತೀಯರಿಗಾಗಿ ಗ್ಯಾಬೊನ್ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 90 ದಿನಗಳು
ವೆಚ್ಚ– CFA 45,000 ($75*)
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ಗ್ಯಾಬೊನ್ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಸಮೋವಾ ದಕ್ಷಿಣ ಪೆಸಿಫಿಕ್ ಮಧ್ಯಭಾಗದಲ್ಲಿರುವ ಒಂದು ಸಣ್ಣ ದ್ವೀಪ ದೇಶವಾಗಿದೆ. ಇದು ಒಂಬತ್ತು ದ್ವೀಪಗಳ ಗುಂಪಾಗಿದೆ, ಅವುಗಳಲ್ಲಿ ಪ್ರಸ್ತುತ ನಾಲ್ಕರಲ್ಲಿ ವಾಸ ಮಾಡಲಾಗುತ್ತಿದೆ ಹಾಗೂ ಇದು ನ್ಯೂಜಿಲೆಂಡ್ ಮತ್ತು ಹವಾಯಿ ನಡುವೆ ಸರಿಸುಮಾರು ಅರ್ಧದಾರಿಯಲ್ಲೇ ಇದೆ. ಅಲ್ಲಿಯ ಸ್ನೇಹಮಯ ಜನರು ಮತ್ತು ಬೆರಗುಗೊಳಿಸುವ ದೃಶ್ಯಾವಳಿಗಳಿಂದಾಗಿ, ಸಮೋವಾ ದೇಶವು ನಿಸ್ಸಂದೇಹವಾಗಿ ಭೂಮಿಯ ಮೇಲಿನ ಸ್ವರ್ಗವಾಗಿದೆ.
ಸಮೋವಾಕ್ಕೆ ಭೇಟಿ ನೀಡಲು ಉತ್ತಮ ಸಮಯ - ಜೂನ್ ನಿಂದ ಸೆಪ್ಟೆಂಬರ್ ವರೆಗೆ ಸಮೋವಾಕ್ಕೆ ಭೇಟಿ ನೀಡಲು ಉತ್ತಮ ಸಮಯ. ಉಷ್ಣವಲಯದ ದ್ವೀಪವು ವರ್ಷಪೂರ್ತಿ ಪ್ರವಾಸಿಗರನ್ನು ಸ್ವಾಗತಿಸುತ್ತದೆ ಆದರೂ ದ್ವೀಪಗಳನ್ನು ನೋಡಲು ಶುಷ್ಕ ಋತುವು ಸೂಕ್ತವಾದ ಹವಾಮಾನವನ್ನು ಹೊಂದಿದೆ.
ಭಾರತೀಯರಿಗಾಗಿ ಸಮೋವಾ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್/ವಿಸಿಟರ್ ಪರ್ಮಿಟ್
ಅವಧಿ - 90 ದಿನಗಳು
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ಸಮೋವಾ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಸಿಯೆರಾ ಲಿಯೋನ್, ಪಶ್ಚಿಮ ಆಫ್ರಿಕಾದ ಒಂದು ದೇಶವಾಗಿದೆ. ಪ್ರವಾಸಿಗರು ಔಟ್‌ಡೋರ್ ಅಡ್ವೆಂಚರ್‌ಗಳಲ್ಲಿ ಪಾಲ್ಗೊಳ್ಳುವ ಮತ್ತು ಬೆರಗುಗೊಳಿಸುವ ಪರಿಸರ-ಪ್ರಾಣಿಸಂಕುಲ ಮೆಚ್ಚುವ ಅದ್ಭುತ ಸ್ವರ್ಗವೆಂದು ಇದನ್ನು ಪರಿಗಣಿಸಲಾಗಿದೆ. ಅಟ್ಲಾಂಟಿಕ್ ಗುಲಾಮಿ ವ್ಯಾಪಾರದ ಇತಿಹಾಸದಲ್ಲಿ ಇದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.
ಸಿಯೆರಾ ಲಿಯೋನ್‌ಗೆ ಭೇಟಿ ನೀಡಲು ಉತ್ತಮ ಸಮಯ - ನವೆಂಬರ್‌ನಿಂದ ಏಪ್ರಿಲ್‌ವರೆಗೆ ಇರುವ ಶುಷ್ಕ ಋತುವು ಸಿಯೆರಾ ಲಿಯೋನ್‌ಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಏಕೆಂದರೆ ರಸ್ತೆಗಳು ಸಂಚಾರಯೋಗ್ಯವಾಗಿದ್ದು, ಬೀಚ್‌ಗೆ ಪ್ರಯಾಣಿಸಲು ಮತ್ತು ವನ್ಯಜೀವಿಗಳನ್ನು ಗುರುತಿಸಲು ಹವಾಮಾನವು ಅತ್ಯಂತ ಸೂಕ್ತವಾಗಿರುತ್ತದೆ.
ಭಾರತೀಯರಿಗಾಗಿ ಸಿಯೆರಾ ಲಿಯೋನ್ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳು
ವೆಚ್ಚ - $ 80
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ಸಿಯೆರಾ ಲಿಯೋನ್ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಗಿನಿಯಾ ಕೊಲ್ಲಿಯಲ್ಲಿ ನೆಲೆಗೊಂಡಿರುವ ಪಶ್ಚಿಮ ಆಫ್ರಿಕಾದ ದೇಶವಾದ ಟೋಗೊ, ಅದರ ಪರ್ವತ ಶಿಖರದ ಸಮುದಾಯಗಳಿಗೆ ಮತ್ತು ಪಾಮ್-ಲೈನ್ ಬೀಚ್‌ಗಳಿಗೆ ಹೆಸರುವಾಸಿಯಾಗಿದೆ. ಹೊಸದಾದ ಜಾಗಗಳನ್ನು ನೋಡಿ ಆನಂದಿಸುವ ಜನರಿಗೆ ಇದೊಂದು ಅದ್ಭುತ ವೆಕೇಶನ್ ತಾಣವಾಗಿದೆ.
ಟೋಗೋಗೆ ಭೇಟಿ ನೀಡಲು ಉತ್ತಮ ಸಮಯ - ನವೆಂಬರ್ ನಿಂದ ಏಪ್ರಿಲ್ ನಡುವೆ ಟೋಗೋಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಈ ತಿಂಗಳುಗಳು ಶುಷ್ಕ ಚಳಿಗಾಲದ ಅವಧಿಯಾಗಿದ್ದು, ಕಡಿಮೆ ಮಳೆಯೊಂದಿಗೆ ಇಲ್ಲಿನ ತಾಪಮಾನವು ತಂಪಾಗಿರುತ್ತದೆ.
ಭಾರತೀಯರಿಗಾಗಿ ಟೋಗೊ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 90 ದಿನಗಳು
ವೆಚ್ಚ- $25*
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ಟೋಗೊ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಪೂರ್ವ ಟಿಮೋರ್, ಅಥವಾ ಟಿಮೋರ್-ಲೆಸ್ಟೆ, ಆಗ್ನೇಯ ಏಷ್ಯಾದ ಒಂದು ದೇಶವಾಗಿದ್ದು, ಇದು ಟಿಮೋರ್ ದ್ವೀಪದ ಅರ್ಧದಷ್ಟು ಭಾಗವನ್ನು ಹೊಂದಿದೆ. ಹವಳದ ಬಂಡೆಗಳು ಈ ದೇಶವನ್ನು ಸುತ್ತುವರೆದಿರುವ ಸಮುದ್ರ ಜೀವಿಗಳಿಂದ ಸಮೃದ್ಧವಾಗಿವೆ. ಬೆರಗುಗೊಳಿಸುವ ಮತ್ತು ಹೊಸ ಪ್ರವಾಸಿ ತಾಣವಾದ ಟಿಮೋರ್-ಲೆಸ್ಟೆ ಒಂದು ವಿಶಿಷ್ಟವಾದ ಸಾಂಸ್ಕೃತಿಕ ಅನುಭವವನ್ನು ನೀಡುತ್ತದೆ.
ಟಿಮೋರ್-ಲೆಸ್ಟೆಗೆ ಭೇಟಿ ನೀಡಲು ಉತ್ತಮ ಸಮಯ - ಶುಷ್ಕ ಋತುವಿನ ತಿಂಗಳುಗಳು ಅಂದರೆ ಮೇ ನಿಂದ ಅಕ್ಟೋಬರ್ ವರೆಗೆ ಟಿಮೋರ್-ಲೆಸ್ಟೆಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಏಕೆಂದರೆ ಈ ತಿಂಗಳುಗಳಲ್ಲಿ ಮಳೆಯ ದಿನಗಳು ಕಡಿಮೆಯಿರುತ್ತವೆ ಮತ್ತು ಆರ್ದ್ರತೆಯೂ ಕಡಿಮೆಯಿರುತ್ತದೆ.
ಭಾರತೀಯರಿಗಾಗಿ ಟಿಮೋರ್-ಲೆಸ್ಟೆ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳು
ವೆಚ್ಚ - $ 30
ಟುವಾಲು ದೇಶವು ಪೆಸಿಫಿಕ್ ಕರಾವಳಿಯಲ್ಲಿರುವ ಸ್ವತಂತ್ರ ದ್ವೀಪ ರಾಷ್ಟ್ರವಾಗಿದೆ. ಇದು ಚಿಕ್ಕ ಮತ್ತು ಅತ್ಯಂತ ದೂರದ ಸ್ಥಳಗಳಲ್ಲಿ ಒಂದಾಗಿದ್ದು, ಇದು ವಿಶ್ರಾಂತಿ ಪಡೆಯಲು, ದೈನಂದಿನ ಗಡಿಬಿಡಿಯಿಂದ ದೂರವಿರಲು ಸೂಕ್ತ ಸ್ಥಳವಾಗಿದೆ. ಮತ್ತು ಸಮುದ್ರ, ಪ್ರಕೃತಿ ಮತ್ತು ಸಂಸ್ಕೃತಿಯಲ್ಲಿ ಪಾಲ್ಗೊಳ್ಳಲು ಒಂದು ಸರಿಯಾದ ತಾಣವಾಗಿದೆ.
ಟುವಾಲುಗೆ ಭೇಟಿ ನೀಡಲು ಉತ್ತಮ ಸಮಯ - ಜೂನ್ ನಿಂದ ಅಕ್ಟೋಬರ್ ವರೆಗೆ ಟುವಾಲುಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಟುವಾಲು ದೇಶವು ಆಹ್ಲಾದಕರ ಉಷ್ಣವಲಯದ ಹವಾಮಾನವನ್ನು ಹೊಂದಿದ್ದು, ಸಮುದ್ರ ಮತ್ತು ದ್ವೀಪವನ್ನು ನೋಡಲು, ತಿಳಿಯಲು ಸೂಕ್ತವಾಗಿದೆ.
ಭಾರತೀಯರಿಗಾಗಿ ಟುವಾಲು ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳು
ವೆಚ್ಚ - AUD 100 ($67*)
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ಟುವಾಲು ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಸೇಂಟ್ ಲೂಸಿಯಾ ಎನ್ನುವುದು ಕೆರಿಬಿಯನ್ ಸಮುದ್ರದಲ್ಲಿರುವ ಒಂದು ದ್ವೀಪ ರಾಜ್ಯವಾಗಿದೆ. ಈ ದ್ವೀಪವು ನಿಮ್ಮಲ್ಲಿ ಸಾಹಸ ಮತ್ತು ಸ್ಫೂರ್ತಿಯನ್ನು ಹೆಚ್ಚಿಸುತ್ತವೆ. ಸೇಂಟ್ ಲೂಸಿಯಾ ತನ್ನ ಹಿತ ನೀಡುವ ಅಲೆಗಳು, ಬೆಚ್ಚಗಿನ ಕಡಲತೀರಗಳು ಮತ್ತು ಆತಿಥ್ಯ ನೀಡುವ ಜನರೊಂದಿಗೆ ತನ್ನ ಕರಾವಳಿಯ ತೀರದಲ್ಲಿ ಹೆಜ್ಜೆ ಹಾಕುವ ಯಾರನ್ನಾದರೂ ಆಕರ್ಷಿಸುತ್ತದೆ.
ಸೇಂಟ್ ಲೂಸಿಯಾಕ್ಕೆ ಭೇಟಿ ನೀಡಲು ಉತ್ತಮ ಸಮಯ - ಸೇಂಟ್ ಲೂಸಿಯಾಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಡಿಸೆಂಬರ್ ನಿಂದ ಏಪ್ರಿಲ್ ವರೆಗೆ. ಅಂದರೆ ವಸಂತ ಋತುವಿನ ಕೊನೆಯ ತಿಂಗಳು ಹಾಗೂ ಬೇಸಿಗೆಯ ಆರಂಭದ ತಿಂಗಳುಗಳು ಪ್ರವಾಸಿಗರಿಗೆ ಸರಿಯಾದ ವಾತಾವರಣವನ್ನು ಒದಗಿಸುತ್ತವೆ.
ಭಾರತೀಯರಿಗಾಗಿ ಸೇಂಟ್ ಲೂಸಿಯಾ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 42 ದಿನಗಳು
ವೆಚ್ಚ - EC $125 ($46*)
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ಸೇಂಟ್ ಲೂಸಿಯಾ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಪೆಸಿಫಿಕ್ ಮಹಾಸಾಗರದ ಮಧ್ಯಭಾಗದಲ್ಲಿ ಮಾರ್ಷಲ್ ದ್ವೀಪಗಳ ಗಣರಾಜ್ಯವಿದೆ. ಇದು ಅನ್ವೇಷಿಸದ ಪ್ರಪಂಚದ ಕೊನೆಯ ತಾಣಗಳಲ್ಲಿ ಒಂದಾಗಿದೆ. ಪ್ರಾಚೀನತೆ, ಶಾಂತ ರೀತಿಯ ಬೀಚ್‌ಗಳು ಮತ್ತು ಸ್ಫಟಿಕದಷ್ಟು ಸ್ಪಷ್ಟವಿರುವ ನೀರಿನೊಂದಿಗೆ ಕಂಗೊಳಿಸುವ ಪ್ರಕೃತಿಯನ್ನು ಅತ್ಯುತ್ತಮವಾಗಿ ಆನಂದಿಸಬಹುದು.
ಮಾರ್ಷಲ್ ದ್ವೀಪಗಳಿಗೆ ಭೇಟಿ ನೀಡಲು ಉತ್ತಮ ಸಮಯ - ಜನವರಿಯಿಂದ ಏಪ್ರಿಲ್ ವರೆಗೆ ಮಾರ್ಷಲ್ ದ್ವೀಪಗಳಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಈ ಉಷ್ಣವಲಯ ಪ್ರದೇಶದ ಶುಷ್ಕ ಋತುವು, ಪ್ರವಾಸಿಗರಿಗೆ ಈ ತಿಂಗಳುಗಳಲ್ಲಿ ಸರಿಯಾದ ಹವಾಮಾನದ ಅನುಕೂಲತೆಯನ್ನು ನೀಡುತ್ತದೆ.
ಭಾರತೀಯರಿಗಾಗಿ ಮಾರ್ಷಲ್ ದ್ವೀಪಗಳ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳು
ವೆಚ್ಚ - $ 100
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ಮಾರ್ಷಲ್ ದ್ವೀಪಗಳ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಈ ಹಿಂದಿನ ಪೋರ್ಚುಗೀಸ್ ಪ್ರದೇಶವನ್ನು ಸೆನೆಗಲ್ ಮತ್ತು ಗಿನಿಯಾ ನಡುವೆ ಸೇರಿಸಲಾಗಿದ್ದು, ಈ ಪ್ರದೇಶವು ಸಾಂಸ್ಕೃತಿಕ ಸಂಪತ್ತು, ಜೀವವೈವಿಧ್ಯ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದೆ. ಉಪ್ಪುನೀರಿನ ಹಿಪ್ಪೋಗಳು ಮತ್ತು ಪವಿತ್ರ ಆಚರಣೆಗಳು ಸೇರಿದಂತೆ ವಿಚಿತ್ರ ಆಕರ್ಷಣೆಗಳೊಂದಿಗೆ 80 ಆಡ್ ದ್ವೀಪಗಳ ಸಮೂಹವಾದ ಬಿಜಾಗೋಸ್ ದ್ವೀಪಸಮೂಹವು ಗಿನಿಯಾ-ಬಿಸ್ಸೌನ ಕಿರೀಟ ರತ್ನವಾಗಿದೆ.
ಗಿನಿ-ಬಿಸ್ಸೌಗೆ ಭೇಟಿ ನೀಡಲು ಉತ್ತಮ ಸಮಯ - ನವೆಂಬರ್ ನಿಂದ - ಏಪ್ರಿಲ್ ವರೆಗೆ ಗಿನಿಯಾ-ಬಿಸ್ಸೌಗೆ ಭೇಟಿ ನೀಡಲು ಉತ್ತಮ ತಿಂಗಳುಗಳಾಗಿವೆ. ಏಕೆಂದರೆ ಈ ಸಮಯದಲ್ಲಿ ಬೆಚ್ಚಗಿನ, ಆರ್ದ್ರ ಆದಾಗ್ಯೂ ಒಣ ಹವಾಮಾನವಿರುತ್ತದೆ.
ಭಾರತೀಯರಿಗಾಗಿ ಗಿನಿ-ಬಿಸ್ಸೌ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳು
ವೆಚ್ಚ - GNF 900,000 ($100)
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ಗಿನಿಯಾ-ಬಿಸ್ಸೌ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಪೋರ್ಚುಗೀಸ್ ಪರಿಶೋಧಕರು 1460 ರಲ್ಲಿ ಕ್ಯಾಬೊ ವರ್ಡೆ ಅಥವಾ ಕೇಪ್ ವರ್ಡೆ ದ್ವೀಪಸಮೂಹವನ್ನು ಕಂಡುಹಿಡಿದರು. ಐದು ಶತಮಾನಗಳ ಪೋರ್ಚುಗೀಸ್ ವಸಾಹತುಶಾಹಿಯು ಈ ದ್ವೀಪಗಳ ಮೇಲೆ ಶಾಶ್ವತವಾದ ಪ್ರಭಾವವನ್ನು ಬಿಟ್ಟುಹೋಗಿದ್ದರೂ, ಆಫ್ರಿಕನ್ ಸಂಪ್ರದಾಯಗಳು ಮತ್ತು ಕ್ರಿಯೋಲ್ ಗುರುತುಗಳು ಅವರ ಸಾಹಿತ್ಯ ಮತ್ತು ಸಂಗೀತ ಕೃತಿಗಳಲ್ಲಿ ಬಲವಾಗಿ ಚಿತ್ರಿತವಾಗಿವೆ.
ಕೇಪ್ ವರ್ಡೆ ದ್ವೀಪಗಳಿಗೆ ಭೇಟಿ ನೀಡಲು ಉತ್ತಮ ಸಮಯ - ವರ್ಷಪೂರ್ತಿ ಮಧ್ಯಮ ತಾಪಮಾನದೊಂದಿಗೆ, ನವೆಂಬರ್ ನಿಂದ ಜೂನ್ ನಡುವಿನ ತಿಂಗಳುಗಳು ಕೇಪ್ ವರ್ಡೆಗೆ ಭೇಟಿ ನೀಡಲು ಉತ್ತಮ ಸಮಯವಾಗಿವೆ.
ಭಾರತೀಯರಿಗಾಗಿ ಕೇಪ್ ವರ್ಡೆ ದ್ವೀಪಗಳ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್/ಇ-ವೀಸ
ಅವಧಿ - 60 ದಿನಗಳು / 30 ದಿನಗಳು
ವೆಚ್ಚ– €22.67 ($25*)
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ಕೇಪ್ ವರ್ಡೆ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
ಮೊಜಾಂಬಿಕ್ ಮತ್ತು ಮಡಗಾಸ್ಕರ್ ನಡುವೆ ನೆಲೆಗೊಂಡಿರುವ ಕೊಮೊರೊ ದ್ವೀಪಗಳು, ದೇಶವನ್ನು ನೋಡಬಯಸುವ ಪ್ರವಾಸಿಗರಿಗಾಗಿ ವಿಭಿನ್ನ ಸಂಸ್ಕೃತಿಗಳು, ಮನಸೂರೆಗೊಳ್ಳುವ ದೃಶ್ಯಾವಳಿಗಳು, ಪ್ರಾಚೀನ ಬೀಚ್‌ಗಳು ಮತ್ತು ವನ್ಯಜೀವಿಗಳ ಆಕರ್ಷಣೆಯನ್ನು ಉಣಬಡಿಸುತ್ತವೆ.
ಕೊಮೊರೊ ದ್ವೀಪಗಳಿಗೆ ಭೇಟಿ ನೀಡಲು ಉತ್ತಮ ಸಮಯ - ಕೊಮೊರೊ ದ್ವೀಪಗಳಿಗೆ ಭೇಟಿ ನೀಡಲು ಏಪ್ರಿಲ್ ನಿಂದ ನವೆಂಬರ್ ವರೆಗಿನ ತಿಂಗಳುಗಳು ಉತ್ತಮ ಸಮಯವಾಗಿವೆ. ವರ್ಷಪೂರ್ತಿ ಉಷ್ಣವಲಯದ ಹವಾಮಾನವನ್ನು ಅನುಭವಿಸಬಹುದಾದರೂ, ಈ ತಿಂಗಳುಗಳಲ್ಲಿ ಒಣ ಮತ್ತು ತಂಪಾದ ಹವಾಮಾನವಿರುತ್ತದೆ.
ಭಾರತೀಯರಿಗಾಗಿ ಕೊಮೊರೊ ದ್ವೀಪಗಳ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 45 ದಿನಗಳವರೆಗೆ
ವೆಚ್ಚ– KMF 15,000 ($32*)
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಡಿಜಿಟ್‌ನ ಕೊಮೊರೊಸ್ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
500 ದ್ವೀಪಗಳ ದ್ವೀಪಸಮೂಹವಾದ ಪಲೌ, ಪಶ್ಚಿಮ ಪೆಸಿಫಿಕ್ ಮಹಾಸಾಗರದ ಮೈಕ್ರೋನೇಷಿಯಾ ಪ್ರದೇಶದ ಒಂದು ಭಾಗವಾಗಿದೆ. ಪ್ರವಾಸೋದ್ಯಮದ ಭಾಗದಲ್ಲಿ ಈ ದೇಶವು ಸ್ಕೂಬಾ ಡೈವಿಂಗ್ ಮತ್ತು ಸ್ನಾರ್ಕ್ಲಿಂಗ್‌ಗೆ ಬಹಳಷ್ಟು ಅವಕಾಶಗಳನ್ನು ನೀಡುತ್ತದೆ.
ಪಲೌಗೆ ಭೇಟಿ ನೀಡಲು ಉತ್ತಮ ಸಮಯ - ಪಲೌಗೆ ಭೇಟಿ ನೀಡಲು ಜೂನ್ - ಆಗಸ್ಟ್ ಉತ್ತಮ ಸಮಯವಾಗಿದೆ. ವರ್ಷದ ಈ ಸಮಯದಲ್ಲಿ, ತಾಪಮಾನವು ಸಾಧಾರಣವಾಗಿರುವುದರಿಂದ, ದೇಶದಲ್ಲಿ ಪ್ರವಾಸ ಮಾಡುವುದು ಆಹ್ಲಾದಕರವಾಗಿರುತ್ತದೆ.
ಭಾರತೀಯರಿಗಾಗಿ ಪಲೌ ವೀಸಾ
ವೀಸಾ ಪ್ರಕಾರ - ವೀಸಾ-ಆನ್-ಅರೈವಲ್
ಅವಧಿ - 30 ದಿನಗಳು
ವೆಚ್ಚ - $ 50
ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ - ಒಬ್ಬ ವಯಸ್ಕರಿಗೆ ಡಿಜಿಟ್‌ನ ಪಲೌ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯು ಒಬ್ಬ ವಯಸ್ಕರಿಗೆ $50,000 ಕವರೇಜ್‌ನೊಂದಿಗೆ ₹225 ರಿಂದ ಪ್ರಾರಂಭವಾಗುತ್ತವೆ.
35. ಅಲ್ಬೇನಿಯಾ |
48. ಮಾರಿಷಸ್ |
36. ಬಾರ್ಬಡೋಸ್ |
49. ಮೈಕ್ರೋನೇಷಿಯಾ |
37. ಭೂತಾನ್ |
50. ಮಾಂಟ್ಸೆರಾಟ್ |
38. ಬ್ರಿಟಿಷ್ ವರ್ಜಿನ್ ದ್ವೀಪಗಳು |
51. ನೇಪಾಳ |
39. ಕುಕ್ ದ್ವೀಪಗಳು |
52. ನಿಯು |
40. ಡೊಮಿನಿಕಾ |
53. ಒಮನ್ |
41. ಎಲ್ ಸಾಲ್ವಡಾರ್ |
54. ಕತಾರ್ |
42. ಫಿಜಿ |
55. ಸೆನೆಗಲ್ |
43. ಗ್ರೆನಡಾ |
56. ಸೇಂಟ್ ಕಿಟ್ಸ್ ಮತ್ತು ನೆವಿಸ್ |
44. ಹೈಟಿ |
57. ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ |
45. ಜಮೈಕಾ |
58. ಟ್ರಿನಿಡಾಡ್ ಮತ್ತು ಟೊಬಾಗೊ |
46. ಕಝಾಕಿಸ್ತಾನ್ |
59. ಟುನೀಶಿಯಾ |
47. ಮಕಾವೊ (SAR ಚೀನಾ) |
60. ವನುವಾಟು |
ಇ-ವೀಸಾ ಎಂಬುದು ಒಂದು ದೇಶದ ರಾಯಭಾರ ಕಚೇರಿಯಿಂದ ನೀಡಲಾಗುವ ಸಾಮಾನ್ಯ ಕಾಗದ ಆಧಾರಿತ ವೀಸಾಗಳಿಗೆ ಪರ್ಯಾಯವಾಗಿದೆ. ಸಂದರ್ಶಕರು/ವಿಸಿಟರ್ಸ್ ದೇಶವನ್ನು ಪ್ರವೇಶಿಸಲು ಅನುಮತಿಸುವ, ಇಮಿಗ್ರೇಷನ್ ಅಧಿಕಾರಿಯಿಂದ ಇದನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತದೆ.
ವಿದೇಶಿಗರು ಒಂದು ನಿರ್ದಿಷ್ಟ ಅವಧಿಗೆ ಕಾನೂನುಬದ್ಧವಾಗಿ ದೇಶದಲ್ಲಿ ಉಳಿಯಲು ಅನುಮತಿಸುವ ವೀಸಾದ ಬದಲಿಗೆ, ಪ್ರವೇಶ ಪರವಾನಗಿ/ಎಂಟ್ರಿ ಪರ್ಮಿಟ್ ಅನ್ನು ನೀಡಲಾಗುತ್ತದೆ.
ಭಾರತೀಯ ನಾಗರಿಕರಿಗೆ ಇ-ವೀಸಾ ಮತ್ತು ಪ್ರವೇಶ ಪರವಾನಗಿ/ಎಂಟ್ರಿ ಪರ್ಮಿಟ್ ಅನ್ನು ನೀಡುವ ದೇಶಗಳನ್ನು ನಾವು ಕೆಳಗೆ ಪಟ್ಟಿ ಮಾಡಿದ್ದೇವೆ:
61. ಅಂಗೋಲಾ |
74. ಮಲೇಷ್ಯಾ |
62. ಆಂಟಿಗುವಾ ಮತ್ತು ಬಾರ್ಬುಡಾ |
75. ಮೊಲ್ಡೊವಾ |
63. ಆಸ್ಟ್ರೇಲಿಯಾ |
76. ಮೊರಾಕೊ |
64. ಅಜೆರ್ಬೈಜಾನ್ |
77. ರಷ್ಯಾ |
65. ಬಹ್ರೇನ್ |
78. ಸಾವೊ ಟೋಮ್ ಮತ್ತು ಪ್ರಿನ್ಸಿಪೆ |
66. ಬೆನಿನ್ |
79. ಸಿಂಗಪುರ್ |
67. ಕೊಲಂಬಿಯಾ |
80. ಸುರಿನಾಮ್ |
68. ಜಿಬೌಟಿ |
81. ತೈವಾನ್ |
69. ಜಾರ್ಜಿಯಾ |
82. ತಜಕಿಸ್ತಾನ್ |
70. ಕೀನ್ಯಾ |
83. ಟರ್ಕಿ |
71. ಕುವೈತ್ |
84. ಉಜ್ಬೇಕಿಸ್ತಾನ್ |
72. ಕಿರ್ಗಿಸ್ತಾನ್ |
85. ವಿಯೆಟ್ನಾಂ |
73. ಲೆಸೊಥೊ |
86. ಜಾಂಬಿಯಾ |
ಗಮನಿಸಿ: ಪ್ರತಿ ದೇಶದಲ್ಲೂ ವೀಸಾ ಅಗತ್ಯತೆಗಳು ಬದಲಾಗುತ್ತಲೇ ಇರುತ್ತವೆ. ಯಾವುದೇ ಟ್ರಾವೆಲ್ ಬುಕಿಂಗ್ ಮಾಡುವ ಮೊದಲು ನಿರ್ದಿಷ್ಟ ದೇಶದ ಅಧಿಕೃತ ವೆಬ್‌ಸೈಟ್‌ನಲ್ಲಿ ಎಲ್ಲಾ ಪಾಸ್‌ಪೋರ್ಟ್ ಮತ್ತು ವೀಸಾ ಅವಶ್ಯಕತೆಗಳನ್ನು ಪರಿಶೀಲಿಸಿ.
ನಿಮ್ಮ ಪ್ರವಾಸದ ತಾಣವನ್ನು ಆಯ್ಕೆ ಮಾಡಿದ ನಂತರ, ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಉತ್ತಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ನೀವು ಸ್ವಲ್ಪ ಸಮಯವನ್ನು ಕಳೆಯಬೇಕು. ಇನ್ಸೂರೆನ್ಸ್ ಅನ್ನು ಪಡೆಯುವುದು ಏಕೆ ಮುಖ್ಯ ಎಂಬುದಕ್ಕೆ ಕೆಲವು ಸರಿಯಾದ ಕಾರಣಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ: