ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ
Instant Policy, No Medical Check-ups
Image Source

ಹೆಚ್ಚಿನ ಜನಪ್ರಿಯ ಪಾಸ್‌ಪೋರ್ಟ್ ಇಂಡೆಕ್ಸ್‌ಗಳು 2023 ರ ವರ್ಷಕ್ಕೆ ತಮ್ಮ ರ‍್ಯಾಂಕಿಂಗ್‌ಗಳನ್ನು ಪ್ರಕಟಿಸಿವೆ ಮತ್ತು ಆಸಕ್ತಿಯುಳ್ಳ ಟ್ರಾವೆಲರ್‌ಗಳು ಅವುಗಳಲ್ಲಿ ಭಾರತವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಕಂಡುಹಿಡಿಯಲು ಹರಸಾಹಸ ಪಡುತ್ತಿದ್ದಾರೆ!

ದೇಶಗಳು ಕೋವಿಡ್ ಮಾನದಂಡಗಳನ್ನು ಸಡಿಲಿಸಿರುವುದರಿಂದ, ಇತರ ದೇಶಗಳಿಗೆ ಆಗಾಗ ವಿಸಿಟ್ ಮಾಡುವವರು ಇಂಡಿಯನ್ ಪಾಸ್‌ಪೋರ್ಟ್ ರ‍್ಯಾಂಕ್‌ ಅನ್ನು ತಿಳಿದುಕೊಳ್ಳುವುದು ಖಂಡಿತವಾಗಿಯೂ ಪ್ರಮುಖ ವಿಷಯವಾಗಿದೆ - ಅದು ಬಿಸಿನೆಸ್ ಅಥವಾ ವಿರಾಮಕ್ಕಾಗಿ ಆಗಿರಬಹುದು. ಅತ್ಯಂತ ನ್ಯಾಯಯುತವಾಗಿ ಅನುಸರಿಸಿದ ಎರಡು ಇಂಡೆಕ್ಸ್‌ಗಳ ಪ್ರಕಾರ ಇಂಡಿಯನ್ ಪಾಸ್‌ಪೋರ್ಟ್ ರ‍್ಯಾಂಕ್‌ ಕುರಿತು ನಾವಿಲ್ಲಿ ನಿಮಗೆ ತಿಳಿಸುತ್ತೇವೆ: 

1. ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ ಮತ್ತು

2. ಆರ್ಟನ್ ಕ್ಯಾಪಿಟಲ್‌ನಿಂದ ಗ್ಲೋಬಲ್ ಪಾಸ್‌ಪೋರ್ಟ್ ಪವರ್ ರ‍್ಯಾಂಕ್‌. 

ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್‌ನಲ್ಲಿ ಭಾರತದ ರ‍್ಯಾಂಕ್‌

 

ಪಾಸ್‌ಪೋರ್ಟ್‌ಗಳ ವಿಷಯಕ್ಕೆ ಬಂದರೆ, ಜನರು ಅದನ್ನು ಇಡೀ ಜಗತ್ತಿಗೆ ತಮ್ಮ ಗೇಟ್‌ವೇ ಎಂದು ಅಥವಾ ಅವರ ಟ್ರಾವೆಲ್ ಸ್ವಾತಂತ್ರ್ಯಕ್ಕೆ ತಡೆಗೋಡೆ ಎಂಬುದಾಗಿ ನೋಡುತ್ತಾರೆ.

ಯಾವುದೇ ನಿರ್ದಿಷ್ಟ ದೇಶದ ಪಾಸ್‌ಪೋರ್ಟ್ ಹೋಲ್ಡರ್‌ ಜಗತ್ತನ್ನು ಟ್ರಾವೆಲ್ ಮಾಡುವ ತನ್ನ ಸಾಹಸದಲ್ಲಿ ಎಷ್ಟು ಸ್ವಾತಂತ್ರ್ಯವನ್ನು ಆನಂದಿಸಬಹುದು ಎಂಬುದರ ನಿಖರವಾದ ಅಳತೆಯನ್ನು ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ ಒದಗಿಸುತ್ತದೆ.

ಅತ್ಯಂತ ವಿಶ್ವಾಸಾರ್ಹ ಇಂಡೆಕ್ಸ್‌ಗಳಲ್ಲಿ ಇದು ಒಂದಾಗಿದೆ - ಈ ಇಂಡೆಕ್ಸ್, ವೀಸಾಗಾಗಿ ಅಪ್ಲೈ ಮಾಡದೇ, ಪಾಸ್‌ಪೋರ್ಟ್‌ ಹೋಲ್ಡರ್‌ಗಳು ವಿಸಿಟ್ ಮಾಡಬಹುದಾದ ದೇಶಗಳ ಸಂಖ್ಯೆಗೆ ಅನುಗುಣವಾಗಿ ಪಾಸ್‌ಪೋರ್ಟ್‌ಗಳನ್ನು ರ‍್ಯಾಂಕ್‌ಗೊಳಿಸುತ್ತದೆ.

ಈ ನಿರ್ದಿಷ್ಟ ಇಂಡೆಕ್ಸ್ ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್‌ನಿಂದ ಅದರ ಡೇಟಾವನ್ನು ಕಲೆಕ್ಟ್ ಮಾಡುತ್ತದೆ ರ‍್ಯಾಂಕ್‌ಗೊಳಿಸುತ್ತದೆ. 

ಕಳೆದ ಐದು ವರ್ಷಗಳಿಂದ ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್‌ನಲ್ಲಿ ಭಾರತದ ರ‍್ಯಾಂಕ್‌ ಇಲ್ಲಿದೆ:

ವರ್ಷ ಪಾಸ್‌ಪೋರ್ಟ್ ರ‍್ಯಾಂಕ್‌ ಇಂಡಿಯನ್ ಪಾಸ್‌ಪೋರ್ಟ್ ಹೋಲ್ಡರ್‌ಗಳು ವೀಸಾ ಇಲ್ಲದೆ ವಿಸಿಟ್ ಮಾಡಬಹುದಾದ ದೇಶಗಳ ಸಂಖ್ಯೆ
2023 81 57
2022 87 60
2021 90 60
2020 82 58
2019 82 59

ಈ ಹೊಸ ರ‍್ಯಾಂಕಿಂಗ್ ಪ್ರಕಾರ, ಇಂಡಿಯನ್ ಪಾಸ್‌ಪೋರ್ಟ್ ಹೋಲ್ಡರ್‌ಗಳು ಓಷಿಯಾನಿಯಾ, ಮಿಡಲ್ ಈಸ್ಟ್, ಏಷ್ಯಾ, ಕೆರಿಬಿಯನ್, ಅಮೆರಿಕ ಮತ್ತು ಆಫ್ರಿಕಾ ದೇಶಗಳಿಗೆ 59 ದೇಶಗಳಿಗೆ ವೀಸಾ ಫ್ರೀ ಟ್ರಾವೆಲ್ ಅನ್ನು ಆನಂದಿಸಬಹುದು.

ಸದ್ಯಕ್ಕೆ, ಇಂಡಿಯನ್ ಪಾಸ್‌ಪೋರ್ಟ್ ಉಜ್ಬೇಕಿಸ್ತಾನ್ ಮತ್ತು ಮೌರಿಟಾನಿಯಾದೊಂದಿಗೆ ಟೈ ಅಪ್ ಹೊಂದಿದೆ.

ಡಿಸ್‌ಕ್ಲೈಮರ್  - ಈ ಡೇಟಾವನ್ನು ಜನವರಿ 2023 ರಲ್ಲಿ ಅಪ್ಡೇಟ್ ಮಾಡಲಾಗಿದೆ.

ಗ್ಲೋಬಲ್ ಪಾಸ್‌ಪೋರ್ಟ್ ಇಂಡೆಕ್ಸ್‌ನಲ್ಲಿ ಭಾರತದ ರ‍್ಯಾಂಕ್ಸ್

 

ಆರ್ಟನ್ ಕ್ಯಾಪಿಟಲ್‌ನಿಂದ ಅಧಿಕಾರ ಪಡೆದ ಗ್ಲೋಬಲ್ ಪಾಸ್‌ಪೋರ್ಟ್ ಇಂಡೆಕ್ಸ್, ವಿಶ್ವದ ಒರಿಜಿನಲ್ ಇಂಟರ‍್ಯಾಕ್ಟಿವ್ ಪಾಸ್‌ಪೋರ್ಟ್ ರ‍್ಯಾಂಕಿಂಗ್ ಸಿಸ್ಟಮ್ ಆಗಿದೆ. ಇದು ಹೊಸ ವೀಸಾ ಬದಲಾವಣೆಗಳು ಮತ್ತು ಮನ್ನಾಗಳಿಗೆ ಸಂಬಂಧಿಸಿದ ರಿಯಲ್-ಟೈಮ್ ಅಪ್ಡೇಟ್‌ಗಳನ್ನು ನೀಡುತ್ತದೆ.

ಈ ಇಂಡೆಕ್ಸ್‌ನೊಂದಿಗೆ, ವ್ಯಕ್ತಿಗಳು ತಮ್ಮ ಪಾಸ್‌ಪೋರ್ಟ್‌ನ ಮೊಬಿಲಿಟಿ ಸ್ಕೋರ್ ಅನ್ನು ಕ್ಯಾಲ್ಕುಲೇಟ್ ಮಾಡಲು ಸಾಧ್ಯವಾಗುತ್ತದೆ, ಇದನ್ನು ವೀಸಾ ಆನ್ ಅರೈವಲ್, ವೀಸಾ-ಫ್ರೀ, ಇ-ವೀಸಾ ಮತ್ತು eTA ಸವಲತ್ತುಗಳ ಪ್ರಕಾರ ಪಾಸ್‌ಪೋರ್ಟ್‌ನಿಂದ ನೀಡಲಾಗುತ್ತದೆ.

ಕಳೆದ ಐದು ವರ್ಷಗಳಲ್ಲಿ ಇಂಡಿಯನ್ ಗ್ಲೋಬಲ್ ಪಾಸ್‌ಪೋರ್ಟ್ ಇಂಡೆಕ್ಸ್ ರ‍್ಯಾಂಕ್ ಈ ಕೆಳಗಿನಂತಿದೆ:

ವರ್ಷ ಪಾಸ್‌ಪೋರ್ಟ್ ರ‍್ಯಾಂಕ್‌ ವೀಸಾ-ಫ್ರೀ ಮತ್ತು ವೀಸಾ ಆನ್ ಅರೈವಲ್ ಸೌಲಭ್ಯಗಳನ್ನು ನೀಡುವ ದೇಶಗಳ ಸಂಖ್ಯೆ.
2023 72 ವೀಸಾ-ಫ್ರೀ: 24 | ವೀಸಾ ಆನ್ ಅರೈವಲ್: 48
2022 66 ವೀಸಾ-ಫ್ರೀ: 20 | ವೀಸಾ ಆನ್ ಅರೈವಲ್: 48
2021 73 ವೀಸಾ-ಫ್ರೀ: 21 | ವೀಸಾ ಆನ್ ಅರೈವಲ್: 38
2020 48 ವೀಸಾ-ಫ್ರೀ: 17 | ವೀಸಾ ಆನ್ ಅರೈವಲ್ :30
2019 71 ವೀಸಾ-ಫ್ರೀ: 26 |ವೀಸಾ ಆನ್ ಅರೈವಲ್: 45

ಪ್ರಸ್ತುತ, ಗ್ಲೋಬಲ್ ಪಾಸ್‌ಪೋರ್ಟ್ ಇಂಡೆಕ್ಸ್ ರ‍್ಯಾಂಕಿಂಗ್‌ಗಳ ಪ್ರಕಾರ, ಇಂಡಿಯನ್ ಪಾಸ್‌ಪೋರ್ಟ್ ಉಗಾಂಡಾ, ರುವಾಂಡಾ ಮತ್ತು ತಜಕಿಸ್ತಾನ್ ಪಾಸ್‌ಪೋರ್ಟ್‌ಗಳೊಂದಿಗೆ ಟೈ ಅಪ್ ಹೊಂದಿದೆ. 

 

ಈಗ ನಾವು ಪಾಸ್‌ಪೋರ್ಟ್ ರ‍್ಯಾಂಕಿಂಗ್‌ನಲ್ಲಿ ಭಾರತದ ಸ್ಥಾನದ ಬಗ್ಗೆ ತಿಳಿದುಕೊಂಡಿದ್ದೇವೆ, ಮೇಲೆ ತಿಳಿಸಿದ ಎರಡು ಇಂಡೆಕ್ಸ್‌ಗಳ ಪ್ರಕಾರ ವಿಶ್ವದ ಟಾಪ್ 10 ಮತ್ತು ಕಡಿಮೆ ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಬಗ್ಗೆಯೂ ತಿಳಿಯೋಣ.

ಡಿಸ್‌ಕ್ಲೈಮರ್  - ಈ ಡೇಟಾವನ್ನು ಜನವರಿ 2023 ರಲ್ಲಿ ಅಪ್ಡೇಟ್ ಮಾಡಲಾಗಿದೆ.

ವಿಶ್ವದ ಅತ್ಯಂತ ಪವರ್‌ಫುಲ್ ಟಾಪ್ 10 ಪಾಸ್‌ಪೋರ್ಟ್‌ಗಳು

ಕೆಳಗಿನ ಟೇಬಲ್ 2023 ರಲ್ಲಿ ವಿಶ್ವದ ಅತ್ಯಂತ ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಮೊದಲ ಹತ್ತು ರ‍್ಯಾಂಕ್‌ ಹೊಂದಿರುವವರನ್ನು ತೋರಿಸುತ್ತದೆ. ಟ್ರಿಪ್ ಪ್ರಾರಂಭವಾಗುವ ಮೊದಲು ವೀಸಾಗಾಗಿ ಅಪ್ಲೈ ಮಾಡದೇ, ಟ್ರಾವೆಲ್ ಮಾಡುವ ಸ್ವಾತಂತ್ರ್ಯದ ವಿಷಯದಲ್ಲಿ ಅವರ ಪಾಸ್‌ಪೋರ್ಟ್ ಹೋಲ್ಡರ್‌ಗಳಿಗೆ ಅವರು ನೀಡುವ ಪ್ರಯೋಜನಗಳ ಪ್ರಕಾರ ಈ ಪಟ್ಟಿಯನ್ನು ಕ್ಯುರೇಟ್ ಮಾಡಲಾಗಿದೆ.

ಪಾಸ್‌ಪೋರ್ಟ್ ರ‍್ಯಾಂಕ್‌ ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ ಗ್ಲೋಬಲ್ ಪಾಸ್‌ಪೋರ್ಟ್ ಇಂಡೆಕ್ಸ್
1 ಸಿಂಗಾಪುರ ಸಂಯುಕ್ತ ಅರಬ್ ಸಂಸ್ಥಾಪನೆಗಳು
2 ಜರ್ಮನಿ, ಇಟಲಿ, ಸ್ಪೇನ್ ಜರ್ಮನಿ, ಸ್ವೀಡನ್, ಫಿನ್ಲ್ಯಾಂಡ್, ಲಕ್ಸೆಂಬರ್ಗ್, ಸ್ಪೇನ್, ಫ್ರಾನ್ಸ್ ಇಟಲಿ, ನೆದರ್ಲ್ಯಾಂಡ್ಸ್, ಆಸ್ಟ್ರಿಯಾ, ದಕ್ಷಿಣ ಕೊರಿಯಾ, ಸ್ವಿಜರ್ಲ್ಯಾಂಡ್
3 ಆಸ್ಟ್ರಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜಪಾನ್, ಲಕ್ಸೆಂಬರ್ಗ್, ದಕ್ಷಿಣ ಕೊರಿಯಾ, ಸ್ವೀಡನ್ ಡೆನ್ಮಾರ್ಕ್, ಬೆಲ್ಜಿಯಂ, ನಾರ್ವೆ, ಪೋರ್ಚುಗಲ್, ಪೋಲೆಂಡ್, ಐರ್ಲೆಂಡ್, ಯುಕೆ, ನ್ಯೂಜಿಲೆಂಡ್
4 ಡೆನ್ಮಾರ್ಕ್, ಐರ್ಲೆಂಡ್, ನೆದರ್ಲ್ಯಾಂಡ್ಸ್, ಯುಕೆ ಗ್ರೀಸ್, ಹಂಗೇರಿ, ಜಪಾನ್, ಆಸ್ಟ್ರೇಲಿಯಾ, ಜೆಕ್ ರಿಪಬ್ಲಿಕ್, ಕೆನಡಾ, ಯುಎಸ್ಎ
5 ಬೆಲ್ಜಿಯಂ, ಜೆಕ್ ರಿಪಬ್ಲಿಕ್, ಮಾಲ್ಟಾ, ನ್ಯೂಜಿಲ್ಯಾಂಡ್, ನಾರ್ವೆ, ಪೋರ್ಚುಗಲ್, ಸ್ವಿಟ್ಜರ್ಲೆಂಡ್ ಸಿಂಗಾಪುರ, ಮಾಲ್ಟಾ, ಲಿಥುವೇನಿಯಾ, ಸ್ಲೋವಾಕಿಯಾ
6 ಆಸ್ಟ್ರೇಲಿಯಾ, ಹಂಗೇರಿ, ಪ್ಲಾಂಡ್ ಎಸ್ಟೋನಿಯಾ, ಲಾಟ್ವಿಯಾ, ಸ್ಲೊವೇನಿಯಾ, ಲಿಚ್ಟೆನ್‌ಸ್ಟೈನ್
7 ಕೆನಡಾ, ಗ್ರೀಸ್ ಐಸ್ಲ್ಯಾಂಡ್
8 ಲಿಥುವೇನಿಯಾ, ಯುಎಸ್ಎ ಸೈಪ್ರಸ್, ಕ್ರೊಯೇಷಿಯಾ, ರೊಮೇನಿಯಾ, ಬಲ್ಗೇರಿಯಾ
9 ಲಾಟ್ವಿಯಾ, ಸ್ಲೋವಾಕಿಯಾ, ಸ್ಲೊವೇನಿಯಾ ಮಲೇಷ್ಯಾ
10 ಎಸ್ಟೋನಿಯಾ, ಐಸ್ಲ್ಯಾಂಡ್ ಮೊನಾಕೊ

2023 ರಲ್ಲಿ, ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ ಪ್ರಕಾರ, ಜಪಾನ್ 193 ದೇಶಗಳಿಗೆ ವೀಸಾ ಫ್ರೀ ಆ್ಯಕ್ಸೆಸ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ. 

ಆದಾಗ್ಯೂ, ಗ್ಲೋಬಲ್ ಪಾಸ್‌ಪೋರ್ಟ್ ಇಂಡೆಕ್ಸ್‌ನಲ್ಲಿ ಅಳವಡಿಸಲಾದ ಪ್ರತ್ಯೇಕ ಮೆಟ್ರಿಕ್‌ಗಳಿಂದಾಗಿ, ಈ ಇಂಡೆಕ್ಸ್‌ನ ರ‍್ಯಾಂಕಿಂಗ್‌ಗಳು ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್‌ನಿಂದ ಭಿನ್ನವಾಗಿವೆ.

ಜಿಪಿಐ ಪ್ರಕಾರ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪಾಸ್‌ಪೋರ್ಟ್‌ಗಳು ತನ್ನ ಹೋಲ್ಡರ್‌ಗಳಿಗೆ ವಿಶ್ವಾದ್ಯಂತ ಗರಿಷ್ಠ ಮೊಬಿಲಿಟಿಯ ಸ್ವಾತಂತ್ರ್ಯವನ್ನು ನೀಡುತ್ತವೆ. 

ಡಿಸ್‌ಕ್ಲೈಮರ್  - ಈ ಡೇಟಾವನ್ನು ಜನವರಿ 2023 ರಲ್ಲಿ ಅಪ್ಡೇಟ್ ಮಾಡಲಾಗಿದೆ.

ವಿಶ್ವದ ಕಡಿಮೆ ಪವರ್‌ಫುಲ್ ಟಾಪ್ 10 ಪಾಸ್‌ಪೋರ್ಟ್‌ಗಳು

ವೀಸಾ-ಫ್ರೀ ಟ್ರಾವೆಲ್ ಐಷಾರಾಮಿಯಾಗಿದ್ದರೂ, ಕೆಲವು ಪಾಸ್‌ಪೋರ್ಟ್‌ಗಳು ತಮ್ಮ ಹೋಲ್ಡರ್‌ಗಳಿಗೆ ಅಂತಹ ಸವಲತ್ತುಗಳಿಗೆ ಲಿಮಿಟೆಡ್ ಆ್ಯಕ್ಸೆಸ್ ಅನ್ನು ನೀಡುತ್ತವೆ. 

ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ ಮತ್ತು ಗ್ಲೋಬಲ್ ಪಾಸ್‌ಪೋರ್ಟ್ ಇಂಡೆಕ್ಸ್‌ನ ಪ್ರಕಾರ ಕಡಿಮೆ ಪವರ್‌ಫುಲ್ ಪಾಸ್‌ಪೋರ್ಟ್‌ಗಳ ರ‍್ಯಾಂಕಿಂಗ್‌ಗಳನ್ನು ವಿವರಿಸುವ ಟೇಬಲ್ ಈ ಕೆಳಗಿನಂತಿದೆ:

ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ ರ‍್ಯಾಂಕ್‌ ಗ್ಲೋಬಲ್ ಪಾಸ್‌ಪೋರ್ಟ್ ಇಂಡೆಕ್ಸ್ ರ‍್ಯಾಂಕ್‌
104 - ಅಫ್ಘಾನಿಸ್ತಾನ 98 - ಅಫ್ಘಾನಿಸ್ತಾನ
103 - ಇರಾಕ್ 97 - ಸಿರಿಯಾ
102 - ಸಿರಿಯಾ 96 - ಇರಾಕ್
101 - ಪಾಕಿಸ್ತಾನ 95 - ಸೊಮಾಲಿಯಾ
100 - ಯೆಮೆನ್, ಸೊಮಾಲಿಯಾ 94 - ಯೆಮೆನ್, ಪಾಕಿಸ್ತಾನ
99 - ನೇಪಾಳ, ಪ್ಯಾಲೇಸ್ಟಿನಿಯನ್ ಪ್ರದೇಶ 93 - ಬಾಂಗ್ಲಾದೇಶ
98 - ಉತ್ತರ ಕೊರಿಯಾ 92 - ಉತ್ತರ ಕೊರಿಯಾ
97 - ಬಾಂಗ್ಲಾದೇಶ 91 - ಪ್ಯಾಲೇಸ್ಟಿನಿಯನ್ ಪ್ರಾಂತ್ಯಗಳು, ಲಿಬಿಯಾ, ಇರಾನ್
96 - ಶ್ರೀಲಂಕಾ, ಲಿಬಿಯಾ 90 - ದಕ್ಷಿಣ ಸುಡಾನ್, ಎರಿಟ್ರಿಯಾ
95 - ಕೊಸೊವೊ 89 - ಸುಡಾನ್, ಇಥಿಯೋಪಿಯಾ
94 - ಲೆಬನಾನ್ 88 – ಶ್ರೀಲಂಕಾ, ನೇಪಾಳ, ಕಾಂಗೋ (DEM .REP)
93 - ಸುಡಾನ್, ಇರಾನ್, ಎರಿಟ್ರಿಯಾ 87 - ನೈಜೀರಿಯಾ
92 – ಕಾಂಗೋ (ಡೆಂ. ರೆಪ್.) 86 - ಕೊಸೊವೊ, ಮ್ಯಾನ್ಮಾರ್, ಲೆಬನಾನ್

ಈ ಎರಡೂ ಇಂಡೆಕ್ಸ್‌ಗಳಿಂದ ನಿರ್ಧರಿಸಲ್ಪಟ್ಟ ರ‍್ಯಾಂಕಿಂಗ್‌ಗಳ ಪ್ರಕಾರ, ಅಫ್ಘಾನಿಸ್ತಾನದ ಪಾಸ್‌ಪೋರ್ಟ್‌ಗಳು ವೀಸಾ-ಫ್ರೀ ಇಂಟರ್‌ನ್ಯಾಷನಲ್ ಟ್ರಾವೆಲ್‌ನಲ್ಲಿ ಟ್ರಾವೆಲರ್‌ಗಳಿಗೆ ಕನಿಷ್ಠ ಸ್ವಾತಂತ್ರ್ಯವನ್ನು ನೀಡುತ್ತದೆ.

2024 ಮತ್ತು ಆ ನಂತರ, ವಿಶ್ವದಲ್ಲಿ ಇಂಡಿಯನ್ ಪಾಸ್‌ಪೋರ್ಟ್ ರ‍್ಯಾಂಕಿಂಗ್‌ನ ಕುರಿತು ಇನ್ನಷ್ಟು ತಿಳಿಯಲು, ಮೇಲೆ ತಿಳಿಸಿದ ಇಂಡೆಕ್ಸ್‌ಗಳ ಮೇಲೆ ಕಣ್ಣಿಡಿ.

ಡಿಸ್‌ಕ್ಲೈಮರ್  - ಈ ಡೇಟಾವನ್ನು ಜನವರಿ 2023 ರಲ್ಲಿ ಅಪ್ಡೇಟ್ ಮಾಡಲಾಗಿದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ವಿಶ್ವದಲ್ಲಿ ಪಾಸ್‌ಪೋರ್ಟ್‌ಗಳನ್ನು ರ‍್ಯಾಂಕ್‌ಗೊಳಿಸುವ ಇತರ ಕೆಲವು ಇಂಡೆಕ್ಸ್‌ಗಳು ಯಾವುವು?

ಬಯಾತ್ ಮೈಗ್ರೇಶನ್ ಇಂಡೆಕ್ಸ್, ಲ್ಯಾಟಿಟ್ಯುಡ್ಸ್ ಕಂಟ್ರಿ ಆ್ಯಕ್ಸೆಸ್ ಟೂಲ್, ನೋಮಾಡ್ ಕ್ಯಾಪಿಟಲಿಸ್ಟ್ ಪಾಸ್‌ಪೋರ್ಟ್ ಇಂಡೆಕ್ಸ್, ಇತ್ಯಾದಿಗಳಂತಹ ಹಲವಾರು ಇತರ ಇಂಡೆಕ್ಸ್‌ಗಳು ಪಾಸ್‌ಪೋರ್ಟ್‌ಗಳನ್ನು ರ‍್ಯಾಂಕ್‌ಗೊಳಿಸುತ್ತವೆ.

ಅದೇನೇ ಇದ್ದರೂ, ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ ಮತ್ತು ಗ್ಲೋಬಲ್ ಪಾಸ್‌ಪೋರ್ಟ್ ಇಂಡೆಕ್ಸ್ ಹೆಚ್ಚು ಫಾಲೋ ಮಾಡುವಂತಹ ಇಂಡೆಕ್ಸ್‌ಗಳಾಗಿವೆ.

ಗ್ಲೋಬಲ್ ಪಾಸ್‌ಪೋರ್ಟ್ ಇಂಡೆಕ್ಸ್‌ನ ರ‍್ಯಾಂಕಿಂಗ್ ಅನ್ನು ಹೇಗೆ ನಿರ್ಧರಿಸಲಾಗುತ್ತದೆ?

ಗ್ಲೋಬಲ್ ಪಾಸ್‌ಪೋರ್ಟ್ ಇಂಡೆಕ್ಸ್ ಪ್ರತಿಯೊಬ್ಬ ಪಾಸ್‌ಪೋರ್ಟ್‌ ಹೋಲ್ಡರ್‌ನ ರ‍್ಯಾಂಕ್‌ ಅನ್ನು ನಿರ್ಧರಿಸಲು ಮೂರು ಹಂತದ ವಿಧಾನವನ್ನು ಅಳವಡಿಸುತ್ತದೆ.

ಇವುಗಳಲ್ಲಿ ಅವರ ಮೊಬಿಲಿಟಿ ಸ್ಕೋರ್ ಅನ್ನು ಕ್ಯಾಲ್ಕುಲೇಟ್ ಮಾಡುವುದು, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್‌ನಲ್ಲಿ ದೇಶದ ಸ್ಥಿತಿಯನ್ನು ಪರಿಶೀಲಿಸುವುದು ಮತ್ತು ಪ್ರತಿ ದೇಶದ ವೀಸಾ-ಫ್ರೀ ಸವಲತ್ತನ್ನು ಅವರ ವೀಸಾ ಆನ್ ಅರೈವಲ್ ವಿರುದ್ಧ ಹೋಲಿಸುವುದು ಮುಂತಾದವು ಸೇರಿವೆ.

ಇತರ ಪಾಸ್‌ಪೋರ್ಟ್‌ಗಳಿಗೆ ಹೋಲಿಸಿದರೆ ಇಂಡಿಯನ್ ಪಾಸ್‌ಪೋರ್ಟ್‌ನ ಪ್ರಸ್ತುತ ಸ್ಥಿತಿ ಏನು?

ಇತರ ದೇಶಗಳಿಗೆ ಹೋಲಿಸಿದರೆ, ಭಾರತದ ಪಾಸ್‌ಪೋರ್ಟ್ ರ‍್ಯಾಂಕ್‌ ಅನ್ನು ಸಾಮಾನ್ಯವಾಗಿ ಸ್ಪೆಕ್ಟ್ರಮ್‌ನ ಕೆಳ ಭಾಗದಲ್ಲಿ ಪರಿಗಣಿಸಲಾಗುತ್ತದೆ.

ವೀಸಾ-ಫ್ರೀ ಟ್ರಾವೆಲ್‌ಗೆ ಸಂಬಂಧಿಸಿದಂತೆ, ಇದು ಪಾಸ್‌ಪೋರ್ಟ್ ಹೋಲ್ಡರ್‌ಗಳಿಗೆ ಒಂದು ನಿರ್ದಿಷ್ಟ ಮಟ್ಟದ ಸ್ವಾತಂತ್ರ್ಯವನ್ನು ಅನುಮತಿಸಿದರೆ, 2022 ರ ಹೊತ್ತಿಗೆ 138 ದೇಶಗಳಿವೆ. ಇದಕ್ಕಾಗಿ ಇಂಡಿಯನ್ ಪಾಸ್‌ಪೋರ್ಟ್ ಹೋಲ್ಡರ್‌ಗಳು ತಮ್ಮ ಟ್ರಿಪ್ ಅನ್ನು ಪ್ರಾರಂಭಿಸುವ ಮೊದಲು ವೀಸಾವನ್ನು ಪಡೆಯಬೇಕಾಗುತ್ತದೆ.

ಪಾಸ್‌ಪೋರ್ಟ್ ಎಷ್ಟು ಪವರ್‌ಫುಲ್ ಆಗಿದೆ ಎಂಬುದನ್ನು ಯಾವುದು ನಿರ್ಧರಿಸುತ್ತದೆ?

ಹೆಚ್ಚಾಗಿ, ಮೊಬಿಲಿಟಿ ಸ್ಕೋರ್-ಅಥವಾ, ಹೆಚ್ಚು ಸರಳವಾಗಿ, ನಿರ್ದಿಷ್ಟ ಪಾಸ್‌ಪೋರ್ಟ್‌ನೊಂದಿಗೆ ವೀಸಾ ಇಲ್ಲದೆ ನೀವು ಎಂಟ್ರಿ ಪಡೆಯಬಹುದಾದ ದೇಶಗಳು ಅಥವಾ ಟೆರಿಟರಿಗಳ ಸಂಖ್ಯೆ-ಅತ್ಯಂತ ಪವರ್‌ಫುಲ್ ಪಾಸ್‌ಪೋರ್ಟ್‌ಗಳನ್ನು ರ‍್ಯಾಂಕ್‌ಗೊಳಿಸಲು ಬಳಸಲಾಗುತ್ತದೆ.

ಭಾರತದಲ್ಲಿ ಯಾವ ರೀತಿಯ ಪಾಸ್‌ಪೋರ್ಟ್ ಉತ್ತಮವಾಗಿದೆ?

ಇತರ ಎಲ್ಲಾ ಪಾಸ್‌ಪೋರ್ಟ್‌ಗಳಲ್ಲಿ ವೈಟ್ ಪಾಸ್‌ಪೋರ್ಟ್ ಅನ್ನು, ಅತ್ಯಂತ ಪವರ್‌ಫುಲ್ ಪಾಸ್‌ಪೋರ್ಟ್ ಎಂದು ಪರಿಗಣಿಸಲಾಗುತ್ತದೆ. ಭಾರತ ಸರ್ಕಾರದ ಅಧಿಕಾರಿಗಳು ಮಾತ್ರ ವೈಟ್ ಪಾಸ್‌ಪೋರ್ಟ್‌ಗೆ ಅರ್ಹರಾಗಿರುತ್ತಾರೆ.