ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
ಷೆಂಗೆನ್ ಎಂದರೆ ಸಾಮಾನ್ಯ ವೀಸಾ ಪಾಲಿಸಿ ಅನುಸರಿಸುವ 27 ದೇಶಗಳಿಂದ ರಚಿಸಲಾಗಿರುವ ಯುರೋಪಿಯನ್ ಯೂನಿಯನ್ನ ಒಂದು ಝೋನ್ ಆಗಿದೆ. ಯೂನಿಯನ್ನಲ್ಲಿರುವ ಎಲ್ಲರೂ, ತಮ್ಮೊಳಗೆ ಪಾಸ್ಪೋರ್ಟ್ ಬಳಕೆಯನ್ನು ಅಧಿಕೃತವಾಗಿ ದುರ್ಬಲಗೊಳಿಸಿದ್ದಾರೆ. ಷೆಂಗೆನ್ ಅನ್ನು ಅದರ ಭಾಗವಾಗಿರುವ ದೇಶಗಳಿಗೆ ವಿಶ್ವದ ಅತಿ ದೊಡ್ಡ ವೀಸಾ ಫ್ರೀ ಝೋನ್ ಎಂದು ಕರೆಯಲ್ಪಡುತ್ತದೆ.
ಷೆಂಗೆನ್ ಪ್ರದೇಶವು ಪ್ರಪಂಚದ ಎಲ್ಲಾ ಕಡೆಗಳ ಸಂದರ್ಶಕರು ಮತ್ತು ಸ್ಥಳೀಯರು ಎಲ್ಲರನ್ನೂ ಸ್ವಾಗತಿಸುತ್ತದೆ. ಆದರೂ ಕೆಲವು ಆಯ್ದ ದೇಶಗಳು ಯಾವುದೇ ಷೆಂಗೆನ್ ದೇಶಗಳಲ್ಲಿ ವೀಸಾ ಇಲ್ಲದೆ ಪ್ರಯಾಣಿಸಲು ಅನುಮತಿ ಹೊಂದಿರುತ್ತವೆ, ಭಾರತ ಈ ಕೆಟಗರಿ ಕೆಳಗೆ ಬರುವುದಿಲ್ಲ.
ಇಲ್ಲ, ಭಾರತೀಯ ನಾಗರಿಕರಿಗೆ ಆನ್ ಅರೈವಲ್ ಷೆಂಗೆನ್ ವೀಸಾ ಆಯ್ಕೆ ಲಭ್ಯ ಇರುವುದಿಲ್ಲ.
ಭಾರತೀಯ ಪಾಸ್ಪೋರ್ಟ್ ಹೋಲ್ಡರ್ಗಳು ಕೆಲಸ, ಸಾರಿಗೆ, ಪ್ರಯಾಣ ಮತ್ತು ಇತರ ಕಾರಣಗಳಿಗೆ 27ರಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಷೆಂಗೆನ್ ದೇಶಗಳಲ್ಲಿ ಪ್ರಯಾಣ ಮಾಡಲು ಬಯಸಿದರೆ ಷೆಂಗೆನ್ ವೀಸಾಗೆ ಅಪ್ಲೈ ಮಾಡುವುದು ಅವಶ್ಯ.
ಭಾರತೀಯರು 90 ದಿನಗಳವರೆಗಿನ ವಾಸ್ತವ್ಯಕ್ಕಾಗಿ ಷೆಂಗೆನ್ ವೀಸಾ ಪಡೆಯಬಹುದು, ಇದು 6 ತಿಂಗಳವರೆಗೆ ವ್ಯಾಲಿಡ್ ಆಗಿರುತ್ತದೆ. ಷೆಂಗೆನ್ ವೀಸಾಗಾಗಿ, ನೀವು ಒಂದು ಪ್ರವಾಸದಲ್ಲಿ ಒಂದಕ್ಕಿಂತ ಹೆಚ್ಚು ದೇಶಗಳಿಗೆ ಪ್ರಯಾಣಿಸಲು ಬಯಸಿದರೆ ನಿಮಗೆ ಮಲ್ಟಿಪಲ್ ಎಂಟ್ರಿ ವೀಸಾ ಅವಶ್ಯಕತೆ ಉಂಟಾಗಬಹುದು.
ಷೆಂಗೆನ್ ಪ್ರದೇಶದ 27 ದೇಶಗಳ ಪಟ್ಟಿ
27 ದೇಶಗಳ ಗುಂಪು ಅತಿದೊಡ್ಡ ಷೆಂಗೆನ್ ಪ್ರದೇಶವನ್ನು ರೂಪಿಸಿದೆ. ಈ 27 ದೇಶಗಳಲ್ಲಿ 22 ಯುರೋಪಿಯನ್ ಯೂನಿಯನ್ ಮೆಂಬರ್ ಸ್ಟೇಟ್ಗಳಾಗಿವೆ ಮತ್ತು ಬಾಕಿ ಉಳಿದ 4 ಮುಖ್ಯವಾಗಿ ಇಎಫ್ಟಿಎ ಸದಸ್ಯರಾಗಿರುವ ನಾನ್-ಯುರೋಪಿಯನ್ ಯೂನಿಯನ್ ದೇಶಗಳಾಗಿವೆ. ಈ 4 ನಾನ್-ಇಯು ದೇಶಗಳೆಂದರೆ ಐಸ್ಲ್ಯಾಂಡ್, ಲಿಚ್ಟೆನ್ಸ್ಟೈನ್, ನಾರ್ವೆ ಮತ್ತು ಸ್ವಿಟ್ಜರ್ಲ್ಯಾಂಡ್.
ಷೆಂಗೆನ್ ವೀಸಾ ಕೆಟಗರಿ |
ರೂಪಾಯಿಯಲ್ಲಿ ಶುಲ್ಕ |
ಯುರೋನಲ್ಲಿ ಶುಲ್ಕ |
ವಯಸ್ಕರು |
₹6,964 |
€80 |
6-12 ವರ್ಷಗಳ ಒಳಗಿನ ವಯಸ್ಸಿನ ಮಕ್ಕಳು |
₹3,482 |
€40 |
6 ವರ್ಷಗಳಿಗಿಂತ ಕೆಳಗಿನ ವಯಸ್ಸಿನ ಮಕ್ಕಳು |
Free |
Free |
ನೀವು ಷೆಂಗೆನ್ ದೇಶಗಳಲ್ಲಿ ಒಂದೇ ಒಂದು ದೇಶಕ್ಕೆ ಭೇಟಿ ನೀಡಲು ಬಯಸುತ್ತಿದ್ದರೆ, ಆ ನಿರ್ದಿಷ್ಟ ದೇಶದ ವೀಸಾಗಾಗಿ ಮಾತ್ರ ಅಪ್ಲೈ ಮಾಡಬೇಕು. ಒಂದು ವೇಳೆ ಒಂದಕ್ಕಿಂತ ಜಾಸ್ತಿ ಷೆಂಗೆನ್ ದೇಶಗಳಿಗೆ ನೀವು ಭೇಟಿಯನ್ನು ನೀಡಲು ಬಯಸುವಿರಾದರೆ, ಆಗ ಷೆಂಗೆನ್ ವೀಸಾಗೆ ಅಪ್ಲೈ ಮಾಡಿ ಮತ್ತು ನಿಮ್ಮ ಪ್ರಾಥಮಿಕ ಡೆಸ್ಟಿನೇಷನ್ ಆಗಿರುವ ದೇಶವನ್ನು ತಿಳಿಸಿ.
ಉದ್ಯೋಗಿ/ವಿದ್ಯಾರ್ಥಿ/ಸ್ವ-ಉದ್ಯೋಗಿ ಆಗಿದ್ದರೆ ಅದಕ್ಕೆ ಸ್ಟೇಟಸ್ ಪುರಾವೆ.
a. ಉದ್ಯೋಗಿಗಳಾಗಿದ್ದರೆ, ಎಂಪ್ಲಾಯ್ಮೆಂಟ್ ಕಾಂಟ್ರಾಕ್ಟ್, ರಜೆ ಅನುಮತಿ, ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಬ್ಮಿಟ್ ಮಾಡಬೇಕು.
b. ಸ್ವ-ಉದ್ಯೋಗಿಗಳಿಗೆ, ಬಿಸಿನೆಸ್ ಲೈಸೆನ್ಸ್ ಕಾಪಿ, ಕಂಪನಿಯ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್, ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್.
c. ವಿದ್ಯಾರ್ಥಿಗಳಿಗೆ, ಎನ್ರೋಲ್ಮೆಂಟ್ ಪುರಾವೆ ಮತ್ತು ಯುನಿವರ್ಸಿಟಿ ಅಥವಾ ಕಾಲೇಜಿನಿಂದ ಎನ್ಓಸಿ.
ಮೈನರ್ಗಳಿಗೆ, ಪೋಷಕರು ಸಹಿ ಮಾಡಿದ ಪತ್ರ ಸಾಕು.
ಷೆಂಗೆನ್ ವೀಸಾಗೆ ಅಪ್ಲೈ ಮಾಡುವ ಪ್ರೊಸೆಸ್ ಸರಳವಾಗಿದೆ. ನೀವು ಈ ರೀತಿ ಮುಂದುವರಿಯಬಹುದು:
ಷೆಂಗೆನ್ ಎಂಬೆಸಿಯ ವೆಬ್ಸೈಟ್ನಲ್ಲಿ ವೀಸಾ ಅಪ್ಲಿಕೇಷನ್ ಫಾರ್ಮ್ಗೆ ಬ್ರೌಸ್ ಮಾಡಿ. ಫಾರ್ಮ್ ಅನ್ನು ಡೌನ್ಲೋಡ್ ಮಾಡಿ.
ಫಾರ್ಮ್ನಲ್ಲಿರುವ ಮಾಹಿತಿಗಳನ್ನೂ ಪೂರ್ತಿಗೊಳಿಸಿ ಮತ್ತು ಸಹಿ ಮಾಡಿದ ನಂತರ ಸಬ್ಮಿಟ್ ಮಾಡಿ.
ವೀಸಾಗೆ ಅವಶ್ಯವಿರುವ ಎಲ್ಲಾ ಡಾಕ್ಯುಮೆಂಟ್ಗಳನ್ನು ಸಂಗ್ರಹಿಸಿ. ವೀಸಾ ಸೆಂಟರ್ನಲ್ಲಿ ಅಪ್ಲಿಕೇಷನ್ ಫಾರ್ಮ್ ಜೊತೆಗೆ ಅವುಗಳನ್ನು ಸಬ್ಮಿಟ್ ಮಾಡಿ.
ಎ. ನೀವು ಒಂದು ದೇಶಕ್ಕೆ ಮಾತ್ರ ಭೇಟಿ ಕೊಡುತ್ತಿರುವಿರಾದರೆ, ಆ ದೇಶದ ಎಂಬೆಸಿ/ಕಾನ್ಸುಲೇಟ್ಗೆ ವೀಸಾ ಅಪ್ಲೈ ಮಾಡಬೇಕು.
ಬಿ. ಒಂದು ವೇಳೆ ನೀವು ಒಂದಕ್ಕಿಂತ ಹೆಚ್ಚು ದೇಶಗಳಿಗೆ ಭೇಟಿ ಕೊಡುತ್ತೀರಾದರೆ, ನೀವು ಹೆಚ್ಚು ದಿನ ವಾಸ ಮಾಡುವ ದೇಶದ ಕೇಂದ್ರದಲ್ಲಿ ವೀಸಾ ಸಬ್ಮಿಟ್ ಮಾಡಬೇಕು. ಮತ್ತು ಒಂದು ವೇಳೆ ಎರಡು ದೇಶಗಳಲ್ಲಿ ನೀವು ವಾಸ ಮಾಡುವ ದಿನಗಳ ಸಂಖ್ಯೆ ಒಂದೇ ಆಗಿದ್ದರೆ ನೀವು ಮೊದಲು ಪ್ರಯಾಣ ಮಾಡುವ ದೇಶದಲ್ಲಿ ವೀಸಾ ಅಪ್ಲಿಕೇಷನ್ ಸಬ್ಮಿಟ್ ಮಾಡಿ.
ವೀಸಾ ಪ್ರೊಸೆಸ್ ಮಾಡಲು ಅಪಾಯಿಂಟ್ಮೆಂಟ್ ಶೆಡ್ಯೂಲ್ ಮಾಡಿ.
ಸಂದರ್ಶನವನ್ನು ಎದುರಿಸಿ ಮತ್ತು ನಿಮ್ಮ ಪಾಸ್ಪೋರ್ಟ್ ಅನ್ನು ಕಲೆಕ್ಟ್ ಮಾಡಿ.
ಷೆಂಗೆನ್ ವೀಸಾ ಪ್ರೊಸೆಸ್ ಆಗಲು 15 ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ, ನೀವು ವೀಸಾ ಅಪ್ಲೈ ಮಾಡುವ ಮೊದಲು ಈ ವಿಚಾರ ಗಮನದಲ್ಲಿಟ್ಟುಕೊಳ್ಳಿ.
ಷೆಂಗೆನ್ 27 ದೇಶಗಳ ಗ್ರೂಪ್ ಆಗಿದೆ ಮತ್ತು ಆ ವೀಸಾ ಹೊಂದುವುದರಿಂದ ಅದರದೇ ಆದ ಪ್ರಯೋಜನಗಳಿವೆ:
ಇದು ಪ್ರವಾಸಿಗರು ಒಂದೇ ವೀಸಾದಲ್ಲಿ ಹಲವು ದೇಶಗಳಿಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.
ಇದು ಪ್ರತೀ ದೇಶಗಳಿಗೆ ಸೆಪರೇಟ್ ಆದ ವೀಸಾ ಹೊಂದುವ ಮತ್ತು ಅದಕ್ಕೆ ಪಾವತಿಸುವ ಸಮಯ ಮತ್ತು ಪ್ರಯತ್ನವನ್ನು ಉಳಿಸುತ್ತದೆ.
ಹೌದು, ಷೆಂಗೆನ್ ವೀಸಾ ಅಪ್ಲಿಕೇಷನ್ಗೆ ಟ್ರಾವೆಲ್ ಇನ್ಶೂರೆನ್ಸ್ ಬಹುತೇಕ ಕಡ್ಡಾಯವಾಗಿದೆ. ಅದು ಯಾಕೆಂದರೆ, ಷೆಂಗೆನ್ ವೀಸಾ ಅವಶ್ಯಕತೆಗಳ ಭಾಗವಾಗಿ, ಪ್ರತೀ ಪ್ರವಾಸಿಯು ಅವರನ್ನು €30,000ಗಳಷ್ಟು ಕವರ್ ಮಾಡಬಲ್ಲ ಹೆಲ್ತ್ ಇನ್ಶೂರೆನ್ಸ್ ಅಥವಾ ಮೆಡಿಕಲ್ ಪಾಲಿಸಿ ಹೊಂದಿರಲೇಬೇಕು.
ಈಗ, ಭಾರತದ ಹೊರತಾಗಿ ನಿಮ್ಮನ್ನು ಕವರ್ ಮಾಡಬಲ್ಲ ಹೆಲ್ತ್ ಪಾಲಿಸಿ ನೀವು ಹೊಂದಿಲ್ಲವಾದರೆ ಟ್ರಾವೆಲ್ ಇನ್ಶೂರೆನ್ಸ್ ಆಯ್ಕೆ ಮಾಡುವುದು ಒಳಿತು. ಯಾಕೆಂದರೆ ಇದು ಮೆಡಿಕಲ್ ತುರ್ತುಪರಿಸ್ಥಿತಿಗಳ ಜೊತೆಗೆ ಈ ಕೆಳಗೆ ನಮೂದಿಸಿರುವ ಇನ್ನಿತರ ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿಯೂ ನಿಮ್ಮ ರಕ್ಷಣೆ ಮಾಡುತ್ತದೆ:
ಸೂಚನೆ: ಪ್ರತೀ ದೇಶದಕ್ಕೂ ವೀಸಾ ಅವಶ್ಯಕತೆಗಳು ಬದಲಾಗುತ್ತಿರುತ್ತವೆ. ಯಾವುದೇ ಟ್ರಾವೆಲ್ ಬುಕಿಂಗ್ಗಳನ್ನು ಮಾಡುವ ಮೊದಲು ದಯವಿಟ್ಟು ಆಯಾ ದೇಶದ ಅಧಿಕೃತ ವೆಬ್ಸೈಟ್ನಲ್ಲಿ ಪಾಸ್ಪೋರ್ಟ್ ಮತ್ತು ವೀಸಾ ಅವಶ್ಯಕತೆಗಳನ್ನು ಚೆಕ್ ಮಾಡಿ ಖಚಿತಪಡಿಸಿಕೊಳ್ಳಿ.