ಟ್ರಾವೆಲಿಂಗ್ ಎನ್ನುವುದು ನಮ್ಮ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸುತ್ತದೆ. ಇದು ಮೋಜುಭರಿತ ಅನುಭವವಾಗಿರಬಹುದು ಅಥವಾ ಜೀವನದಲ್ಲಿನ ಒಂದು ಪ್ರಮುಖ ಪಾಠವಾಗಿರಬಹುದು- ನಿಮಗದು ಏನೇ ಆಗಿರಲಿ, ಹೊಸ ಸ್ಥಳಗಳನ್ನು ಅನ್ವೇಷಿಸುವುದು ಯಾವಾಗಲೂ ನಮ್ಮನ್ನು ಪ್ರಕೃತಿಗೆ ಇನ್ನಷ್ಟು ಹತ್ತಿರಕ್ಕೆ ತರುತ್ತದೆ ಮತ್ತು ಬಹುಶಃ ನಮ್ಮನ್ನೂ ಸಹ. ಬೇರೆ ರೀತಿಯಲ್ಲಿ ಹೇಳುವುದಾದರೆ, ಟ್ರಾವೆಲಿಂಗ್ ನಮ್ಮ ಕಂಫರ್ಟ್ ಝೋನ್ಗಳನ್ನು ದಾಟಿ ಹೋಗಲು ಮತ್ತು ನಾವು ವಾಸಿಸುತ್ತಿರುವ ವಿಶಾಲ ಪ್ರಪಂಚದ ನಮ್ಮ ಪರಿಧಿಯನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ. ಸ್ಪೇನ್ನ ವಿಷಯಕ್ಕೆ ಬಂದರೆ, ಬೀಚ್ಗಳು, ಸಾಂಗ್ರಿಯಾ ಮತ್ತು ಅಲ್ಲಿನ ಫುಡ್, ಬಹುಶಃ ಇವುಗಳೇ ಮೊದಲು ನಿಮ್ಮ ಮನಸ್ಸಿಗೆ ಬರುವ ಕೆಲ ವಿಷಯಗಳು. ಅನೇಕರು ಇದನ್ನು ಅದ್ಭುತ ಪಾಕಶಾಲೆಯ ಅನುಭವ ಎಂದು ಕರೆಯುತ್ತಾರೆ. ಇನ್ನೂ ಕೆಲವರು ಅಲ್ಲಿನ ಅನೇಕ ಬೀಚ್ಗಳು, ಕಲೆ, ಇತಿಹಾಸ ಮತ್ತು ಪಾರ್ಟಿಗಳಿಂದ ಮಂತ್ರಮುಗ್ಧರಾಗಿದ್ದಾರೆ!
ಸ್ಪೇನ್ನ ನೀವು ಬಯಸಿದ ಟ್ರಿಪ್ನಲ್ಲಿ ನೀವು ಮಂತ್ರಮುಗ್ಧರಾಗುವ ಮೊದಲು, ಒಂದು ಚಿಕ್ಕ ನೋಟ್ಪ್ಯಾಡ್ ಅನ್ನು ತೆಗೆದುಕೊಂಡು ನಿಮ್ಮ ಪ್ಲ್ಯಾನ್ಗಳನ್ನು ಮ್ಯಾಪಿಂಗ್ ಮಾಡಲು ಪ್ರಾರಂಭಿಸಿ. ಅದನ್ನು ಮ್ಯಾಜಿಕ್ ಎಂಟ್ರಿ ಟಿಕೆಟ್ನಿಂದಲೇ ಪ್ರಾರಂಭಿಸಿ - ಅದುವೇ ನಿಮ್ಮ ವೀಸಾ ಮತ್ತು ನಿಮ್ಮನ್ನು ಸುರಕ್ಷಿತವಾಗಿರಿಸುವ - ಟ್ರಾವೆಲ್ ಇನ್ಶೂರೆನ್ಸ್.
ಹೌದು, ಎಲ್ಲಾ ಭಾರತೀಯರಿಗೆ ಸ್ಪೇನ್ಗಾಗಿ ವ್ಯಾಲಿಡ್ ಆದ ಷೆಂಗೆನ್ ವೀಸಾದ ಅಗತ್ಯವಿದೆ. ಟೂರಿಸ್ಟ್ ವೀಸಾವು 90 ದಿನಗಳ ವಾಸ್ತವ್ಯದವರೆಗೆ ವ್ಯಾಲಿಡ್ ಆಗಿರುತ್ತದೆ ಮತ್ತು ಪ್ರೊಸೆಸಿಂಗ್ ಟೈಮ್ ಜಾಸ್ತಿಯಿರಬಹುದು ಮತ್ತು ನೀವು ಕೊನೆ ಕ್ಷಣದಲ್ಲಿ ಯಾವುದೇ ಅಚ್ಚರಿಗಳನ್ನು ನೋಡಲು ಬಯಸುವುದಿಲ್ಲವಾದ್ದರಿಂದ ಸರಿಸುಮಾರು ಒಂದರಿಂದ ಎರಡು ತಿಂಗಳ ಮುಂಚಿತವಾಗಿ ಅಪ್ಲೈ ಮಾಡಬೇಕಾಗುತ್ತದೆ!
ಇಲ್ಲ, ದುರದೃಷ್ಟವಶಾತ್ ಭಾರತೀಯ ಪಾಸ್ಪೋರ್ಟ್ ಹೋಲ್ಡರ್ಗಳು ಸ್ಪೇನ್ಗಾಗಿ ವೀಸಾ ಆನ್ ಅರೈವಲ್ ಅನ್ನು ಪಡೆಯಲು ಅರ್ಹರಾಗಿರುವುದಿಲ್ಲ.
ನಿಮ್ಮ ವೀಸಾ ಅಪ್ಲಿಕೇಶನ್ ಅನ್ನು ನೇರವಾಗಿ ನವದೆಹಲಿಯಲ್ಲಿರುವ ಸ್ಪೇನ್ ಎಂಬೆಸಿಗೆ ಅಥವಾ ನಿಮ್ಮ ಹತ್ತಿರದ ವೀಸಾ ಔಟ್ಸೋರ್ಸಿಂಗ್ ಸೆಂಟರ್ ಅಥವಾ ಏಜೆಂಟ್ಗೆ ಸಬ್ಮಿಟ್ ಮಾಡುವ ಮೊದಲು ನಿಮಗೆ ಈ ಕೆಳಗಿನ ಡಾಕ್ಯುಮೆಂಟುಗಳು ಬೇಕಾಗುತ್ತವೆ.
ಕನಿಷ್ಠ 2 ಖಾಲಿ ಪೇಜುಗಳಿರುವ ಪಾಸ್ಪೋರ್ಟ್. ನೀವು ಸ್ಪೇನ್ಗೆ ಆಗಮಿಸಿದ ನಂತರ ಕನಿಷ್ಠ 3 ತಿಂಗಳವರೆಗೆ ನಿಮ್ಮ ಪಾಸ್ಪೋರ್ಟ್ ವ್ಯಾಲಿಡ್ ಆಗಿರಬೇಕು.
ಕಳೆದ 6 ತಿಂಗಳೊಳಗೆ ಕ್ಲಿಕ್ ಮಾಡಲಾದ 4.5cms X 3.5 cm ಆಯಾಮದ 2 ಫೋಟೋಗಳು. ಫೋಟೋ ಕಡ್ಡಾಯವಾಗಿ ವೈಟ್ ಬಿಳಿ ಬ್ಯಾಕ್ಗ್ರೌಂಡ್ ಅನ್ನು ಹೊಂದಿರಬೇಕು.
ಭೇಟಿಯ ಸ್ಪಷ್ಟ ಉದ್ದೇಶ ಮತ್ತು ದಿನಾಂಕವನ್ನು ತಿಳಿಸುವ ಕವರಿಂಗ್ ಲೆಟರ್.
ಸ್ಪೇನ್ಗೆ ಟ್ರಾವೆಲ್ ಇನ್ಶೂರೆನ್ಸ್. (ಸ್ಪೇನ್ಗೆ ಡಿಜಿಟ್ ಟ್ರಾವೆಲ್ ಇನ್ಶೂರೆನ್ಸ್ ಒಬ್ಬ ವಯಸ್ಕರಿಗೆ 7 ದಿನಗಳವರೆಗೆ ₹225 ರಿಂದ ಪ್ರಾರಂಭವಾಗುತ್ತದೆ)
ಐಟಿನರರಿ ಮತ್ತು ಕನ್ಫರ್ಮ್ಡ್ ರಿಟರ್ನ್ ಟಿಕೆಟ್ಗಳು.
ನಿಮ್ಮ ಸ್ಯಾಲರಿ ಸ್ಲಿಪ್ಗಳ ಜೊತೆಗೆ ಕಳೆದ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ಗಳು.
ವಯಸ್ಸು |
ಫೀಸ್ ರೂಪಾಯಿಯಲ್ಲಿ |
12 ವರ್ಷ ಮೇಲ್ಪಟ್ಟ ವ್ಯಕ್ತಿಗಳು |
₹6883 |
6 ವರ್ಷದಿಂದ 12 ವರ್ಷದೊಳಗಿನ ಮಕ್ಕಳು |
₹3441 |
ಸ್ಪೇನ್ ಟೂರಿಸ್ಟ್ ವೀಸಾಗಾಗಿ ಅಪ್ಲೈ ಮಾಡುವ ಪ್ರಕ್ರಿಯೆಯು ಕಷ್ಟಕರವಾಗಿಲ್ಲ. ಆದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ:
ಸ್ಪೇನ್ ಎಂಬೆಸಿಯಿಂದ ಕನ್ಫರ್ಮ್ ಆಗಿರುವಂತೆ ವೀಸಾದ ಕನಿಷ್ಠ ಪ್ರೊಸೆಸಿಂಗ್ ಟೈಮ್ 15 ದಿನಗಳು.
ಹೌದು, ಸ್ಪೇನ್ಗಾಗಿ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದುವುದು ಕಡ್ಡಾಯವಾಗಿದೆ.
ಯುರೋಪ್ನಲ್ಲಿ ಸ್ಪೇನ್ ಎರಡನೇ ಅತಿದೊಡ್ಡ ದೇಶವಾಗಿದ್ದು, ಫ್ರಾನ್ಸ್ ಮೊದಲನೇ ಸ್ಥಾನದಲ್ಲಿದೆ. ಬೀಚ್ಗಳು, ಅದರ ಸಂಸ್ಕೃತಿ, ಅಲ್ಲಿನ ಆಹಾರ ಮತ್ತು ಸಹಜವಾಗಿ, ಅದರ ಕಲೆ ಹಾಗೂ ಇತಿಹಾಸದಿಂದ ಈ ದೇಶದಲ್ಲಿ ಅನ್ವೇಷಣೆ ಮಾಡಲು ಸಾಕಷ್ಟಿದೆ. ಯಾರಾದರೂ ವಿದೇಶಕ್ಕೆ ಟ್ರಾವೆಲ್ ಮಾಡುವಾಗ, ಅದರ ಹಿಂದೆ ಸಾಕಷ್ಟು ಪ್ಲ್ಯಾನಿಂಗ್ ಇರುತ್ತದೆ- ಜರ್ನಿಯಿಂದ, ಟ್ರಾವೆಲ್ನ ಅಗತ್ಯತೆಗಳಿಂದ ಹಿಡಿದು ಹಣಕಾಸಿನವರೆಗೆ ಒಂದು ಸರಿಯಾದ ಪ್ಲ್ಯಾನಿಂಗ್ ಇರುತ್ತದೆ.
ಟ್ರಾವೆಲ್ ಇನ್ಸೂರೆನ್ಸ್ ನೀವು ವಿಶೇಷವಾಗಿ ಹಣಕಾಸಿಗೆ ಸಂಬಂಧಿಸಿದಂತೆ ಯಾವುದೇ ಅಚ್ಚರಿಯನ್ನು ಪಡದಿರುವುದನ್ನು ಖಚಿತಪಡಿಸುತ್ತದೆ! ಇದಲ್ಲದೆ, ನಾವೆಲ್ಲರೂ ಎಷ್ಟೇ ಟ್ರಾವೆಲ್ ಮಾಡಿದರೂ, ನಾವು ಮನೆಯಿಂದ ದೂರದಲ್ಲಿರುವ ಸ್ಥಳದಲ್ಲಿದ್ದಾಗ ಯಾವಾಗಲೂ ಸ್ವಲ್ಪ ದುರ್ಬಲರಾಗಿ ಬಿಡುತ್ತೇವೆ.
ಅದಕ್ಕಾಗಿಯೇ ಸದಾಕಾಲ ಟ್ರಾವೆಲ್ ಇನ್ಶೂರೆನ್ಸ್ ಯಾವಾಗಲೂ ನಿಮ್ಮೊಂದಿಗಿರುತ್ತದೆ! ಸ್ಪೇನ್ಗೆ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ನೀಡಬಹುದಾದ ಕೆಲವು ಪ್ರಯೋಜನಗಳು ಇಲ್ಲಿವೆ: