ಭಾರತೀಯರಿಗೆ ಸಿಂಗಾಪುರ್ ಟೂರಿಸ್ಟ್ ವೀಸಾ
ಭಾರತೀಯ ನಾಗರಿಕರಿಗೆ ಸಿಂಗಾಪುರ್ ಟೂರಿಸ್ಟ್ ವೀಸಾ ಬಗ್ಗೆ ಎಲ್ಲಾ
ಹವೆಯಲ್ಲಿ ರೋಮಾಂಚನ, ವಿನೋದ ಮತ್ತು ಸಂತೋಷವನ್ನು ಕಂಡುಕೊಳ್ಳುವ ಸ್ಥಳವನ್ನು ನೀವು ಹುಡುಕುತ್ತಿರುವಿರಾ? ಹಾಗಾದರೆ ಸಿಂಗಾಪುರ ನೀವು ಪರಿಗಣಿಸಬಹುದಾದ ಒಂದು ಆಯ್ಕೆಯಾಗಿದೆ!
ಅದರ ನೈಟ್-ಲೈಫ್ ಮತ್ತು ಅದ್ಭುತವಾದ ಹಸಿರು ಅಭಯಾರಣ್ಯಗಳಿಗೆ ಪ್ರಸಿದ್ಧವಾಗಿರುವ ಸಿಂಗಾಪುರದಲ್ಲಿ ಟೂರಿಸ್ಟ್ ಗಳಿಗೆ ಅನ್ವೇಷಿಸಲು ಮತ್ತು ಅನುಭವಿಸಲು ಸಾಕಷ್ಟು ವಿಷಯಗಳಿವೆ. ಸಿಂಗಾಪುರ ಚಾಂಗಿ ವಿಮಾನ ನಿಲ್ದಾಣವು ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ ಮತ್ತು ಇದು ಸ್ವತಃ ಪ್ರಪಂಚದಾದ್ಯಂತದ ಟೂರಿಸ್ಟ್ ಗಳು ಮತ್ತು ಸಂಚಾರಿ ಪ್ರಯಾಣಿಕರಿಗೆ ಒಂದು ಆಕರ್ಷಣೆಯಾಗಿದೆ.
ಕುಟುಂಬಗಳು, ಏಕಾಂಗಿ ಪ್ರಯಾಣಿಕರು ಮತ್ತು ಯುವ ಪ್ರಯಾಣಿಕರನ್ನು ಸಮಾನವಾಗಿ ಆಕರ್ಷಿಸುವ ಇದೊಂದು ಭವ್ಯವಾದ ಸ್ಥಳವಾಗಿದೆ. ಅದರ ಕೆಲವು ಪ್ರಸಿದ್ಧ ಆಕರ್ಷಣೆಗಳಲ್ಲಿ ಸಿಂಗಾಪುರ್ ಶಾಪಿಂಗ್ ಫೆಸ್ಟಿವಲ್, ಒಳಾಂಗಣ ಸ್ಕೈಡೈವಿಂಗ್ ಗಾಗಿ ವಿಶ್ವದ ಅತಿದೊಡ್ಡ ವಿಂಡ್ ಟನಲ್, ಕ್ರೀಡಾ ಚಟುವಟಿಕೆಗಳು ಮತ್ತು ಕುಖ್ಯಾತ ಮತ್ತು ಕಲಾ ಪ್ರೇಮಿಗಳ ಸ್ವರ್ಗವಾದ ನ್ಯಾಷನಲ್ ಆರ್ಟ್ ಮ್ಯೂಸಿಯಂ ಸೇರಿವೆ! ನಾವು ಅದರ ಇತರ ಆಕರ್ಷಣೆಗಳು ಮತ್ತು ಸುದೀರ್ಘ ಪ್ರಯಾಣದ ವಿವರಗಳನ್ನು ಆಳವಾಗಿ ತಿಳಿಯುವ ಮೊದಲು, ಎಲ್ಲಕ್ಕಿಂತ ಪ್ರಮುಖವಾದ ವಿಷಯಕ್ಕೆ ಬರೋಣ, ವೀಸಾ!
ಪ್ರಪಂಚದಾದ್ಯಂತದ ಹಲವಾರು ಸ್ಥಳಗಳಿಗೆ ಪ್ರಯಾಣಿಸಲು ಭಾರತೀಯ ನಾಗರಿಕರಿಗೆ ಒಂದು ಅನುಮೋದಿತ ವೀಸಾ ಅಗತ್ಯವಿದೆ, ಸಿಂಗಾಪುರ ಕೂಡ ಅವುಗಳಲ್ಲಿ ಒಂದಾಗಿದೆ!
ಭಾರತೀಯರಿಗೆ ಸಿಂಗಾಪುರಕ್ಕೆ ವೀಸಾ ಬೇಕಾಗುತ್ತದೆಯೇ?
ಹೌದು, ಭಾರತೀಯರಿಗೆ ಸಿಂಗಾಪುರಕ್ಕೆ ವೀಸಾ ಅಗತ್ಯವಿದೆ ಆದಾಗ್ಯೂ, ಸಿಂಗಾಪುರಕ್ಕೆ ಪ್ರಯಾಣಿಸುವ ಟೂರಿಸ್ಟ್ ಗಳಲ್ಲಿ ಆಗಿರುವ ಬಿರುಸಿನ ಹೆಚ್ಚಳವು ಇದರ ಪ್ರಕ್ರಿಯೆಯನ್ನು ಹೆಚ್ಚು ಸುಲಭ ಮತ್ತು ತ್ವರಿತಗೊಳಿಸಿದೆ.
ರಾಯಭಾರ ಕಚೇರಿಯಿಂದ ನೀಡಲಾದ ಟೂರಿಸ್ಟ್ ವೀಸಾ ಟೂರಿಸ್ಟ್ ಗಳಿಗೆ ಗರಿಷ್ಠ 30 ದಿನಗಳ ಕಾಲ ಉಳಿಯಲು ಅನುಮತಿ ನೀಡುತ್ತದೆ ಮತ್ತು 2 ವರ್ಷಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದು ಮಲ್ಟಿಪಲ್ ಎಂಟ್ರಿ ಪರ್ಮಿಟ್ ಆಗಿದೆ ಅಂದರೆ ನೀವು ಪ್ರತಿ ಬಾರಿ ಸಿಂಗಾಪುರಕ್ಕೆ ಪ್ರಯಾಣಿಸಿದಾಗ, ನೀವು ವೀಸಾಕ್ಕೆ ಅಪ್ಲಿಕೇಶನ್ ಸಲ್ಲಿಸಬೇಕಾಗಿಲ್ಲ!
ವೀಸಾ ಅಪ್ರುವಲ್ ಕೆಲವು ಮೂಲಭೂತ ಷರತ್ತುಗಳನ್ನು ಆಧರಿಸಿದೆ, ಅವು ಈ ರೀತಿ ಇವೆ:
ಸಿಂಗಾಪುರಕ್ಕೆ ಆಗಮಿಸಿದ ದಿನಾಂಕದಿಂದ ಭಾರತೀಯ ನಾಗರಿಕರು ಹೊಂದಿರಬೇಕಾದ 6 ತಿಂಗಳ ಮಾನ್ಯತೆ ಇರುವ ಒಂದು ವ್ಯಾಲಿಡ್ ಪಾಸ್‌ಪೋರ್ಟ್.
ಈ ದೇಶದಲ್ಲಿ ತಂಗಿರುವ ಅವಧಿಯಲ್ಲಿ ಪಾಸ್‌ಪೋರ್ಟ್ ಹೊಂದಿರುವವರ ಬ್ಯಾಂಕ್ ಅಕೌಂಟ್ ನಲ್ಲಿ ಸಾಕಷ್ಟು ಹಣ.
ಭಾರತೀಯ ನಾಗರಿಕರಿಗೆ ಸಿಂಗಾಪುರಕ್ಕೆ ವೀಸಾ ಆನ್ ಅರೈವಲ್ ಇದೆಯೇ?
ಇಲ್ಲ, ಸಿಂಗಾಪುರದಲ್ಲಿ ಆಗಮನದ ಮೇಲೆ ವೀಸಾ ಆಯ್ಕೆಯು ಭಾರತೀಯ ನಾಗರಿಕರಿಗೆ ಅನ್ವಯಿಸುವುದಿಲ್ಲ. ಆದ್ದರಿಂದ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಈ ದೇಶಕ್ಕೆ ಭೇಟಿ ನೀಡಲು ಮೊದಲೇ ಅನುಮೋದಿತ ವೀಸಾ ಅಗತ್ಯವಿದೆ. ಆದಾಗ್ಯೂ, ಒಂದು ಮೂರನೇ ದೇಶದಿಂದ ಅಥವಾ ಅಲ್ಲಿಗೆ ವಿಮಾನದಲ್ಲಿ ಪ್ರಯಾಣಿಸುವ ಭಾರತೀಯರು 96-ಗಂಟೆಗಳ ವೀಸಾ ಉಚಿತ ಸಾರಿಗೆ ಸೌಲಭ್ಯ (ವೀಸಾ ಫ್ರೀ ಟ್ರಾನ್ಸಿಟ್ ಫೆಸಿಲಿಟಿ -ವಿ.ಎಫ್.ಟಿ.ಎಫ್) ಗೆ ಅರ್ಹರಾಗಬಹುದು.
ಭಾರತದಿಂದ ಸಿಂಗಾಪುರ ಟೂರಿಸ್ಟ್ ವೀಸಾಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಪ್ರತಿಯೊಂದು ದೇಶವೂ ವೀಸಾ ಪ್ರಕ್ರಿಯೆಗೆ ತನ್ನದೇ ಆದ ನಿಯಮಗಳನ್ನು ಹೊಂದಿದೆ. ವೀಸಾ ಅಪ್ಲಿಕೇಶನ್ ಗಾಗಿ ನಿಮ್ಮ ಅಪ್ರುವಲ್ ಪಡೆಯಲು ರುಜುವಾತುಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಸಿಂಗಾಪುರದ ಸಂದರ್ಭದಲ್ಲಿ, ನೀವು ಈ ರೀತಿಯ ಡಾಕ್ಯುಮೆಂಟ್‌ಗಳನ್ನು ಹೊಂದಿರಬೇಕು:
ಭಾರತೀಯ ಪಾಸ್‌ಪೋರ್ಟ್, ಸಿಂಗಾಪುರಕ್ಕೆ ಪ್ರವೇಶಿಸುವ ನಿರೀಕ್ಷಿತ ದಿನಾಂಕದಿಂದ ಕನಿಷ್ಠ 6 ತಿಂಗಳವರೆಗೆ ವ್ಯಾಲಿಡ್ ಆಗಿರುತ್ತದೆ.
ನೀವು ಹಳೆಯ ಪಾಸ್‌ಪೋರ್ಟ್ ಹೊಂದಿದ್ದರೆ, ಅದನ್ನು ಸಹ ಲಗತ್ತಿಸಿ.
35ಮಿಮೀ X45ಮಿಮೀ ಆಯಾಮದ 2 ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋಗಳು 80% ಮುಖದ ಕ್ಲೋಸ್ ಅಪ್, ಮ್ಯಾಟ್ ಫಿನಿಶ್ ಮತ್ತು ಬಿಳಿ ಹಿನ್ನೆಲೆಯೊಂದಿಗೆ. ನೀವು ಧರಿಸಿರುವ ಟಾಪ್ ನ ಬಣ್ಣವು ಬಿಳಿ ಬಣ್ಣಕ್ಕೆ ವ್ಯತಿರಿಕ್ತವಾಗಿರಬೇಕು. ಒಂದು ಫೋಟೋ ಅನ್ನು ಪಾಸ್‌ಪೋರ್ಟ್‌ನಲ್ಲಿ ಗ್ಲೂ ಸಹಾಯದೊಂದಿಗೆ ಅಂಟಿಸಬೇಕು ಮತ್ತು ಅಡ್ಡಲಾಗಿ ಸಹಿ ಮಾಡಬೇಕು. ಎರಡನೇ ಫೋಟೋ ವೀಸಾ ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಹೋಗುತ್ತದೆ.
ಒಳ ಮತ್ತು ಹೊರ ಪ್ರಯಾಣಕ್ಕಾಗಿ ಏರ್ ಟಿಕೆಟ್‌ಗಳು.
ಕಳೆದ 3 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್.
ವೀಸಾ ಅಪ್ಲಿಕೇಶನ್ ಫಾರ್ಮ್-14 ಎ.
ಸಿಂಗಾಪುರಕ್ಕೆ ನಿಮ್ಮ ಭೇಟಿಯ ಉದ್ದೇಶದ ವಿವರಗಳನ್ನು ಒಳಗೊಂಡ ಕವರ್ ಲೆಟರ್.
ಭಾರತೀಯ ನಾಗರಿಕರಿಗೆ ಸಿಂಗಾಪುರ ವೀಸಾ ಶುಲ್ಕ
ಭಾರತೀಯ ನಾಗರಿಕರಿಗೆ ವೀಸಾ ಪ್ರಕ್ರಿಯೆ ಶುಲ್ಕವು ಪ್ರತಿ ವ್ಯಕ್ತಿಗೆ 30 ಎಸ್.ಜಿ.ಡಿ ಆಗಿದೆ. ಈ ಶುಲ್ಕವನ್ನು ಎಲ್ಲಾ ಸಂದರ್ಭಗಳಲ್ಲಿ ರಿಫಂಡ್ ಮಾಡಲಾಗುವುದಿಲ್ಲ ಮತ್ತು ನೀವು ರಾಯಭಾರ ಕಚೇರಿಯ ಮೂಲಕ ಹೋದರೆ ಇದು ಅನ್ವಯಿಸುತ್ತದೆ. ಇದನ್ನು ಹೊರತುಪಡಿಸಿ, ನಿಮಗಾಗಿ ವೀಸಾವನ್ನು ಪಡೆಯುವ ಕೆಲವು ಏಜೆಂಟ್‌ಗಳಿದ್ದಾರೆ ಆದರೆ ಅವರು ಅದಕ್ಕಾಗಿ ಶುಲ್ಕವನ್ನು ವಿಧಿಸುತ್ತಾರೆ.
ಭಾರತದಿಂದ ಸಿಂಗಾಪುರ ಟೂರಿಸ್ಟ್ ವೀಸಾಗೆ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?
ಭಾರತದಿಂದ ಸಿಂಗಾಪುರ ಟೂರಿಸ್ಟ್ ವೀಸಾಗೆ ಅಪ್ಲಿಕೇಶನ್ ಸಲ್ಲಿಸುವ ವಿಧಾನವು ಸರಳವಾಗಿದೆ ಮತ್ತು ಇದು ಈ ರೀತಿ ಇದೆ:
ಸಿಂಗಾಪುರ ಟೂರಿಸ್ಟ್ ವೀಸಾ ಪ್ರಕ್ರಿಯೆ ಸಮಯ
ಸಿಂಗಾಪುರ ಟೂರಿಸ್ಟ್ ವೀಸಾ ಪಡೆಯಲು ಸುಮಾರು 3-4 ದಿನಗಳು ಬೇಕಾಗುತ್ತವೆ. ಆದರೆ ಬುದ್ಧಿವಂತರಾಗಿರಿ ಮತ್ತು ಕನಿಷ್ಠ 7 ದಿನಗಳ ಮೊದಲು ಅಪ್ಲಿಕೇಶನ್ ಸಲ್ಲಿಸಿ, ಅವೆಲ್ಲವನ್ನೂ ಕೆಲಸದ ದಿನಗಳು ಎಂದು ಪರಿಗಣಿಸಿ, ನಂತರ ಪ್ರಯಾಣಿಸಿ.
ನೀವು ಏಜೆಂಟ್ ಮೂಲಕ ಅಪ್ಲಿಕೇಶನ್ ಸಲ್ಲಿಸಿದರೆ, ವೀಸಾ ಪ್ರಕ್ರಿಯೆಯ ಸಮಯವನ್ನು ತ್ವರಿತಗೊಳಿಸಬಹುದು ಆದರೆ ಅವರು ತಮ್ಮ ಸೇವೆಗಳಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಾರೆ.
ನಾನು ಸಿಂಗಾಪುರಕ್ಕೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕೇ?
ನೀವು ಹಾಲಿಡೇಗಾಗಿ ವಿದೇಶಕ್ಕೆ ಪ್ರಯಾಣಿಸುವಾಗ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸುವ ಪ್ರಶ್ನೆಯು ನಿರ್ವಿವಾದವಾಗಿರಬೇಕು. ಖಂಡಿತವಾಗಿಯೂ, ನೀವು ಸ್ವಲ್ಪ ವಿಶ್ರಾಂತಿ ಮತ್ತು ಸಂತೋಷವನ್ನು ಬಯಸುವಾಗ ನಿಮಗೆ ಯಾವುದೇ ರೀತಿಯ ಗೊಂದಲವಾಗಬಾರದು. ನಿಮ್ಮ ಸಿಂಗಾಪುರ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ನೀವು ಸಂಪೂರ್ಣವಾಗಿ ಕ್ಲೂಲೆಸ್ ಆಗಿ ಸಹಾಯವನ್ನು ಬಯಸುವ ಸಂದರ್ಭಗಳಲ್ಲಿ ನಿಮ್ಮನ್ನು ರಕ್ಷಿಸುತ್ತದೆ. ಟ್ರಾವೆಲ್ ಪಾಲಿಸಿಯು ನಿಮಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಇಲ್ಲಿ ನೀಡಲಾಗಿದೆ:
ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಸಿಂಗಾಪುರ ಟೂರಿಸ್ಟ್ ವೀಸಾ ಪ್ರಕ್ರಿಯೆಯ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು
ನಾನು ಈ ವರ್ಷ ಮಾರ್ಚ್ 29 ರಂದು ಸಿಂಗಾಪುರಕ್ಕೆ ಹೊರಡಲು ಪ್ಲಾನ್ ಮಾಡಿದ್ದೇನೆ. ನಾನು ವೀಸಾಗೆ ಯಾವಾಗ ಅಪ್ಲಿಕೇಶನ್ ಸಲ್ಲಿಸಬೇಕು?
ನೀವು ಕನಿಷ್ಟ 30 ದಿನಗಳ ಮುಂಚಿತವಾಗಿ ವೀಸಾಗೆ ಅಪ್ಲಿಕೇಶನ್ ಸಲ್ಲಿಸಲು ಶಿಫಾರಸು ಮಾಡಲಾಗಿದೆ. ನಿಮ್ಮ ನಿದರ್ಶನದಲ್ಲಿ, ನೀವು ಫೆಬ್ರವರಿ ಅಂತ್ಯದೊಳಗೆ ಅಪ್ಲಿಕೇಶನ್ ಸಲ್ಲಿಸಬೇಕು.
ನಾನು ಸಿಂಗಾಪುರದಲ್ಲಿದ್ದಾಗ ನನ್ನ ಪಾಸ್‌ಪೋರ್ಟ್ ಅನ್ನು ಆಕಸ್ಮಿಕವಾಗಿ ಕಳೆದುಕೊಂಡರೆ ಏನಾಗುತ್ತದೆ?
ಇದು ಸಂಭವಿಸಿದಲ್ಲಿ ನೀವು ತಕ್ಷಣ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು. ಲಾಸ್ಟ್ ಪ್ರಾಪರ್ಟಿ ರಿಪೋರ್ಟ್ ನ ಪ್ರತಿಗಾಗಿ ಕೇಳಿ, ಇದನ್ನು ನಂತರ ಪಾಸ್‌ಪೋರ್ಟ್ ರಿನೀವಲ್ ಪ್ರಕ್ರಿಯೆಯಲ್ಲಿ ನಿಮ್ಮಲ್ಲಿ ಕೇಳಲಾಗುತ್ತದೆ. ನಿಮ್ಮ ಪಾಸ್‌ಪೋರ್ಟ್‌ನ ರಿನೀವಲ್ ಗಾಗಿ ರಿಇಂಬರ್ಸ್‌ಮೆಂಟ್ ಕ್ಲೈಮ್ ಮಾಡುವಾಗ ಸಹ ಈ ಡಾಕ್ಯುಮೆಂಟ್ ಮುಖ್ಯವಾಗಿದೆ.
ನನ್ನ ವೀಸಾವನ್ನು ಸ್ವೀಕಾರವಾಗದಿದ್ದರೆ, ಆದರೆ ನಾನು ಶುಲ್ಕವನ್ನು ಪಾವತಿಸಿದ್ದಲ್ಲಿ, ನಾನು ರಿಫಂಡ್ ಅನ್ನು ನಿರೀಕ್ಷಿಸಬಹುದೇ?
ಇಲ್ಲ, ದುರದೃಷ್ಟವಶಾತ್, ಪ್ರಸ್ತುತ ನಿಯಮಗಳ ಪ್ರಕಾರ ರಿಫಂಡ್ ಯಾವುದೇ ಅವಕಾಶಗಳಿಲ್ಲ. ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ, ಅವುಗಳನ್ನು ಯಾವುದೇ ಸಂದರ್ಭದಲ್ಲೂ ಹಿಂತಿರುಗಿಸಲಾಗುವುದಿಲ್ಲ.
ಸಿಂಗಾಪುರ ಭಾರತೀಯರಿಗೆ ವೀಸಾ ಆನ್ ಅರೈವಲ್ ಅನ್ನು ನೀಡುತ್ತದೆಯೇ?
ಇಲ್ಲ, ಸದ್ಯಕ್ಕೆ ವೀಸಾ ಆನ್ ಅರೈವಲ್ ಗಳಿಗೆ ಯಾವುದೇ ಅವಕಾಶವಿಲ್ಲ. ಸ್ಟ್ಯಾಂಡರ್ಡ್ ವೀಸಾ ಅಥವಾ ಇ-ವೀಸಾಗಾಗಿ ನೀವು ರಾಯಭಾರ ಕಚೇರಿಯನ್ನು ಸಂಪರ್ಕಿಸಬೇಕು.
ನಾನು ಸಿಂಗಾಪುರಕ್ಕೆ ಏಕೆ ಭೇಟಿ ನೀಡಲು ಉದ್ದೇಶಿಸಿದ್ದೇನೆ ಎಂಬುದಕ್ಕೆ ಯಾವುದೇ ಕಾರಣಗಳನ್ನು ತೋರಿಸುವ ಅಗತ್ಯವಿದೆಯೇ?
ನೀವು ಸಿಂಗಾಪುರಕ್ಕೆ ಏಕೆ ಭೇಟಿ ನೀಡಲು ಬಯಸುತ್ತೀರಿ ಎಂಬ ವಿವರಗಳನ್ನು ಒಳಗೊಂಡಿರುವ ಕವರ್ ಲೆಟರ್ ಇಲ್ಲದೆ ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯು ಅಪೂರ್ಣವಾಗಿರುತ್ತದೆ. ದಯವಿಟ್ಟು ಸಮಗ್ರವಾಗಿರಿ.