ಭಾರತೀಯರಿಗೆ ಸೀಶೆಲ್ಸ್ ವೀಸಾ
ಭಾರತೀಯ ನಾಗರಿಕರಿಗೆ ಸೀಶೆಲ್ಸ್ ವೀಸಾದ ಬಗ್ಗೆ ಅಲ್ಟಿಮೇಟ್ ಗೈಡ್
115 ವಿಭಿನ್ನ ದ್ವೀಪಗಳನ್ನು ಒಳಗೊಂಡಿರುವ ಸೀಶೆಲ್ಸ್ ಪೂರ್ವ ಆಫ್ರಿಕಾದ ಕರಾವಳಿಯಿಂದ ಸುಮಾರು 1450 ಕಿಮೀ ದೂರದಲ್ಲಿದೆ. ರಾಷ್ಟ್ರದ ಬಹುಪಾಲು ದ್ವೀಪಗಳು ಜನವಸತಿಯಿಲ್ಲದೆ ಉಳಿದಿದ್ದರೂ, ವಾಸಯೋಗ್ಯವಾದ ಸ್ಥಳಗಳು ಪ್ರವಾಸಿಗರಿಗೆ ಹೆಮ್ಮೆಪಡುವಂಥ, ಅತ್ಯಂತ ಮೋಡಿಮಾಡುವ ಸ್ಥಳಗಳಾಗಿವೆ ಮತ್ತು ಚಟುವಟಿಕೆಗಳನ್ನು ಒದಗಿಸುತ್ತವೆ.
ಭಾರತೀಯ ಪ್ರವಾಸಿಗರಿಗೂ ಇದು ಜನಪ್ರಿಯ ಡೆಸ್ಟಿನೇಷನ್ ಆಗಿ ಮುಂದುವರಿದಿದೆ. 2018ರ ವರದಿಯ ಪ್ರಕಾರ, ಅದೇ ವರ್ಷದ ಮೊದಲಾರ್ಧದಲ್ಲಿ ದೇಶದಿಂದ 8000ಕ್ಕೂ ಹೆಚ್ಚು ನಾಗರಿಕರು ಸೀಶೆಲ್ಸ್ ದ್ವೀಪಗಳಿಗೆ ಭೇಟಿ ನೀಡಿದ್ದಾರೆ.
ಪ್ರಾಚೀನವಾದ ಬೀಚ್‌ಗಳು ಮತ್ತು ನೀಲಿಯಾದ ಸಮುದ್ರದ ನೀರು ನಿಮ್ಮನ್ನು ಕರೆಯುತ್ತದೆಯೇ?
ಭಾರತೀಯರಿಗೆ ಸೀಶೆಲ್ಸ್ ವೀಸಾದ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಓದುವುದನ್ನು ಮುಂದುವರಿಸಿ ಇದರಿಂದ ನೀವು ಈ ಆಕರ್ಷಕ ಡೆಸ್ಟಿನೇಷನ್‌ನಲ್ಲಿ ವೆಕೇಷನ್ ಅನ್ನು ಆನಂದಿಸಬಹುದು.
ಸೀಶೆಲ್ಸ್‌ಗೆ ಭೇಟಿ ನೀಡಲು ಭಾರತೀಯರಿಗೆ ವೀಸಾ ಅಗತ್ಯವಿದೆಯೇ?
ಇಲ್ಲ, ಸೀಶೆಲ್ಸ್‌ಗೆ ಭೇಟಿ ನೀಡುವ ಭಾರತೀಯ ನಾಗರಿಕರಿಗೆ ದೇಶವನ್ನು ಪ್ರವೇಶಿಸಲು ವೀಸಾ ಅಗತ್ಯವಿಲ್ಲ. ಆದಾಗ್ಯೂ, ಪ್ರವಾಸಿಗರಾಗಿ ನೀವು ದ್ವೀಪ ರಾಷ್ಟ್ರವನ್ನು ತಲುಪಿದ ನಂತರವೂ ದೇಶದ ಇಮಿಗ್ರೇಷನ್ ಡಿಪಾರ್ಟ್‌ಮೆಂಟ್‌ನಿಂದ ಪರ್ಮಿಟ್ ಅನ್ನು ಪಡೆದುಕೊಳ್ಳಬೇಕು. ಈ ಪರ್ಮಿಟ್ ನೀಡಿದ ನಂತರ 30 ದಿನಗಳವರೆಗೆ ವ್ಯಾಲಿಡ್ ಆಗಿರುತ್ತದೆ ಮತ್ತು ಅದರ ವಿತರಣೆಯ ದಿನಾಂಕದಿಂದ 3 ತಿಂಗಳವರೆಗೆ ವಿಸ್ತರಿಸಬಹುದು.
ಆದಾಗ್ಯೂ, ಪ್ರತೀ ವ್ಯಕ್ತಿಯ ಆಧಾರದ ಮೇಲೆ ಪ್ರಯಾಣಿಕರು ಸೀಶೆಲ್ಸ್ ಪ್ರಯಾಣದ ಪರ್ಮಿಟ್‌ಗೆ ಅರ್ಹರಾಗಲು ಸೀಶೆಲ್ಸ್‌ನಲ್ಲಿ ತಂಗುವ ಅವಧಿಯಲ್ಲಿ ದಿನಕ್ಕೆ ಕನಿಷ್ಠ $163 ಅನ್ನು ಹೊಂದಿರಬೇಕಾದ ಅವಶ್ಯಕತೆ ಇದೆ.
ಭಾರತೀಯರಿಗೆ ಸೀಶೆಲ್ಸ್‌ನಲ್ಲಿ ವೀಸಾ ಆನ್ ಅರೈವಲ್/ಇ-ವೀಸಾ ಲಭ್ಯವಿದೆಯೇ?
ಇಲ್ಲ, ಸೀಶೆಲ್ಸ್ ಭಾರತೀಯ ನಾಗರಿಕರಿಗೆ ವೀಸಾ ಫ್ರೀ ರಾಷ್ಟ್ರವಾಗಿರುವುದರಿಂದ, ದೇಶವನ್ನು ಪ್ರವೇಶಿಸಲು ನಿಮಗೆ ವೀಸಾ ಆನ್ ಅರೈವಲ್ ಅಥವಾ ಇ-ವೀಸಾ ಅಗತ್ಯವಿಲ್ಲ. ಆದಾಗ್ಯೂ, ಪ್ರಯಾಣಿಕರು ಇನ್ನೂ ಪರ್ಮಿಟ್ ಪಡೆಯುವ ಅವಶ್ಯಕತೆ ಇದೆ. ನೀವು ಆನ್‌ಲೈನ್‌ನಲ್ಲಿ ಪರ್ಮಿಟ್‌ಗೆ ಅಪ್ಲೈ ಮಾಡಲು ಸಾಧ್ಯವಿಲ್ಲ. ಬದಲಾಗಿ, ಮೊದಲೇ ಹೇಳಿದಂತೆ ದ್ವೀಪ ರಾಷ್ಟ್ರಕ್ಕೆ ಆಗಮಿಸಿದ ನಂತರ ನೀವು ಪರ್ಮಿಟ್ ಅನ್ನು ಪಡೆದುಕೊಳ್ಳುವ ಅವಶ್ಯಕತೆ ಇದೆ.
ಭಾರತೀಯರಿಗೆ ಸೀಶೆಲ್ಸ್ ವೀಸಾ ಶುಲ್ಕ
ಸೀಶೆಲ್ಸ್ ಭಾರತೀಯರಿಗೆ ವೀಸಾ ಫ್ರೀ ದೇಶವಾಗಿರುವುದರಿಂದ, ದೇಶಕ್ಕೆ ಭೇಟಿ ನೀಡುವ ಭಾರತೀಯ ನಾಗರಿಕರಿಗೆ ಯಾವುದೇ ವೀಸಾ ಶುಲ್ಕವನ್ನು ವಿಧಿಸಲಾಗುವುದಿಲ್ಲ.
ಇದಲ್ಲದೆ, ಸೀಶೆಲ್ಸ್‌ಗೆ ಭೇಟಿ ನೀಡಲು ಅಗತ್ಯವಿರುವ ಪರ್ಮಿಟ್ ಅನ್ನು ಸಹ ಉಚಿತವಾಗಿ ನೀಡಲಾಗುತ್ತದೆ ಮತ್ತು 3 ತಿಂಗಳವರೆಗೆ ದೇಶದಲ್ಲಿ ಉಳಿಯಲು ನಿಮಗೆ ಅನುಮತಿ ನೀಡಲಾಗುತ್ತದೆ.
ಸೀಶೆಲ್ಸ್‌ಗೆ ಭೇಟಿ ನೀಡಲು ಪರ್ಮಿಟ್ ಪಡೆಯಲು ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಸೀಶೆಲ್ಸ್‌ಗೆ ಪರ್ಮಿಟ್ ಪಡೆಯಲು, ನಿಮ್ಮ ವೆಕೇಷನ್‌ನಲ್ಲಿ ನೀವು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಕೊಂಡೊಯ್ಯಬೇಕು.
ಎರಡು ಪಾಸ್‌ಪೋರ್ಟ್ ಸೈಜ್‌ನ ಫೋಟೋಗ್ರಾಫ್‌ಗಳು
ಸೀಶೆಲ್ಸ್‌ನಿಂದ ದೃಢೀಕರಿಸಲಾಗಿರುವ ರಿಟರ್ನ್ ಟಿಕೆಟ್‌ಗಳು
ಸೀಶೆಲ್ಸ್‌ಗೆ ಆಗಮಿಸಿದ ದಿನಾಂಕದಿಂದ ಕನಿಷ್ಠ ಆರು ತಿಂಗಳ ವ್ಯಾಲಿಡಿಟಿ ಹೊಂದಿರುವ ಭಾರತೀಯ ಪಾಸ್‌ಪೋರ್ಟ್
ರಶೀದಿಗಳು ಅಥವಾ ಬಿಲ್‌ಗಳ ರೂಪದಲ್ಲಿ ಹೋಟೆಲ್ ವಸತಿ ಪುರಾವೆ
ಭಾರತೀಯ ಪ್ರಯಾಣಿಕರು ವಾಸ್ತವ್ಯಕ್ಕೆ ಪ್ರತಿ ವ್ಯಕ್ತಿಗೆ ದಿನಕ್ಕೆ $163 ಅಥವಾ ಸುಮಾರು ರೂ.13,480 ಹೊಂದಿರಬೇಕು.
ಸೀಶೆಲ್ಸ್ ಪ್ರಯಾಣಿಕರು ಪರ್ಮಿಟ್ ಅನ್ನು ಪಡೆಯಲು ಪೂರೈಸಬೇಕಾದ ಕೆಲವು ಮೂಲಭೂತ ಅವಶ್ಯಕತೆಗಳು ಇವು.
ಭಾರತೀಯ ನಾಗರಿಕರಿಗೆ ಸೀಶೆಲ್ಸ್ ಪರ್ಮಿಟ್‌ಗಾಗಿ ಅಪ್ಲೈ ಮಾಡುವ ಪ್ರೊಸೆಸ್
ಈಗಾಗಲೇ ಹೇಳಿದಂತೆ, ಸೀಶೆಲ್ಸ್ ಭಾರತೀಯರಿಗೆ ವೀಸಾ ಫ್ರೀ ದೇಶವಾಗಿದೆ, ಇದರಿಂದ ಈ ಡೆಸ್ಟಿನೇಷನ್‌ಗೆ ಪ್ರಯಾಣಿಸಲು ಅತ್ಯಂತ ಅನುಕೂಲಕರವಾಗಿದೆ. ಆದಾಗ್ಯೂ, ನೀವು ರಾಷ್ಟ್ರಕ್ಕೆ ಟ್ರಿಪ್ ಮಾಡಲು ಪ್ಲಾನ್ ಮಾಡುತ್ತಿರುವಾಗ ಟ್ರಾವೆಲ್ ಪರ್ಮಿಟ್ ಅಗತ್ಯವಿದೆ.
ದೇಶವನ್ನು ತಲುಪಿದ ನಂತರ ನೀವು ಟ್ರಾವೆಲ್ ಪರ್ಮಿಟ್ ಅನ್ನು ಸಂಗ್ರಹಿಸಬೇಕು. ರಾಷ್ಟ್ರಕ್ಕೆ ಅನುಕೂಲಕರ ಪ್ರವೇಶಕ್ಕಾಗಿ ಮೇಲೆ ತಿಳಿಸಲಾದ ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ನೀವು ಹೊಂದಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನಾನು ಸೀಶೆಲ್ಸ್‌ಗಾಗಿ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕೇ?
ಸೀಶೆಲ್ಸ್ ವಿದೇಶಿ ಪ್ರಯಾಣಿಕರಿಗೆ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅನ್ನು ಪಡೆಯುವುದನ್ನು ಕಡ್ಡಾಯಗೊಳಿಸಿಲ್ಲ. ಆದರೂ, ಅಂತಹ ಕವರ್ ಅನ್ನು ಆರಿಸಿಕೊಳ್ಳುವುದು ಯಾವಾಗಲೂ ಆರ್ಥಿಕವಾಗಿ ನಿಮ್ಮನ್ನು ರಕ್ಷಿಸಿಕೊಳ್ಳುವ ಬುದ್ಧಿವಂತ ಕ್ರಮವಾಗಿದೆ.
ನೀವು ಯಾವಾಗಲೂ ದೇಶದಿಂದ ಹೊರಗೆ ಕಾಲಿಟ್ಟಾಗ ವಿಶೇಷವಾಗಿ ಡಿಜಿಟ್‌ನಿಂದ, ಸೀಶೆಲ್ಸ್‌ಗೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಪಡೆಯುವುದು ಅತ್ಯಗತ್ಯ ಎಂಬುದಕ್ಕೆ ಕೆಲವು ಕಾರಣಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
- ಚಿಂತಿಸದೆಯೇ ಅಡ್ವೆಂಚರ್‌ಗಳನ್ನು ಮುಂದುವರಿಸಿ - ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ನೀವು ಸೀಶೆಲ್ಸ್‌ನಲ್ಲಿ ಚಿಂತೆ ಇಲ್ಲದೆಯೇ ಯಾವುದೇ ಅಡ್ವೆಂಚರ್ ಕ್ರೀಡೆಗಳಲ್ಲಿ ಭಾಗವಹಿಸಬಹುದು (ಒಂದೇ ದಿನದ ಚಟುವಟಿಕೆಗಳು ಮಾತ್ರ ಕವರ್ ಆಗುತ್ತದೆ), ಯಾಕೆಂದರೆ ಪಾಲಿಸಿಯು ಸಂಭವಿಸುವ ಅಪಘಾತಗಳಿಗೆ ಸರಿಯಾದ ಸಮಯದಲ್ಲಿ ಕವರೇಜ್ ಒದಗಿಸುತ್ತದೆ.
- ಕಳೆದುಹೋದ ಅಥವಾ ಕಳುವಾದ ಪಾಸ್‌ಪೋರ್ಟ್/ಪರ್ಮಿಟ್‌ನ ರಿಪ್ಲೇಸ್‌ಮೆಂಟ್ ಅನ್ನು ಸುಲಭಗೊಳಿಸಿ - ನಿಮ್ಮ ಪ್ರಯಾಣದ ಸಮಯದಲ್ಲಿ ಯಾರಾದರೂ ನಿಮ್ಮ ಪಾಸ್‌ಪೋರ್ಟ್‌ನಂತಹ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಹೊಂದಿರುವ ನಿಮ್ಮ ಬ್ಯಾಗನ್ನು ಕದಿಯಬಹುದು. ಅಂತಹ ಸಂದರ್ಭಗಳಲ್ಲಿ, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪರ್ಮಿಟ್/ಪಾಸ್‌ಪೋರ್ಟ್ ರಿಪ್ಲೇಸ್‌ಮೆಂಟ್‌ಗೆ ಉಂಟಾಗುವ ವೆಚ್ಚವನ್ನು ಕವರ್ ಮಾಡುತ್ತದೆ.
- ಜನವಾಸವಿಲ್ಲದ ಸೀಶೆಲ್ಸ್ ಅನ್ನು ಅನ್ವೇಷಿಸಿ! - ನಿಮ್ಮ ಟ್ರಾವೆಲ್ ಸಮಯದಲ್ಲಿ ಅಪಘಾತ ಅಥವಾ ಯಾವುದೇ ಇತರ ವೈದ್ಯಕೀಯ ತುರ್ತುಸ್ಥಿತಿಗಳಂತಹ ರಸ್ತೆಯಲ್ಲಿ ಉದ್ಭವಿಸಬಹುದಾದ ಅನಿರೀಕ್ಷಿತ ಸಂದರ್ಭಗಳಿಂದ ನೀವು ಆರ್ಥಿಕವಾಗಿ ರಕ್ಷಿಸಲ್ಪಟ್ಟಿದ್ದೀರಿ ಎಂಬುದನ್ನು ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ನೀವು ಖಚಿತಪಡಿಸಿಕೊಳ್ಳಬಹುದು. ಅಪಘಾತವನ್ನು ಒಳಗೊಂಡ ಸನ್ನಿವೇಶಗಳ ಅಡಿಯಲ್ಲಿ ಟ್ರಾವೆಲ್ ಇನ್ಶೂರೆನ್ಸ್, ಬಾಡಿಗೆ ಕಾರಿನ ಡ್ಯಾಮೇಜ್, ಥರ್ಡ್ ಪಾರ್ಟಿ ಲಯಬಿಲಿಟಿಗಳು ಇತ್ಯಾದಿಗಳಿಂದ ಉಂಟಾಗುವ ಆರ್ಥಿಕ ಲಯಬಿಲಿಟಿಗಳನ್ನು ಕವರ್ ಮಾಡುತ್ತದೆ.
- ಟ್ರಿಪ್ ಕ್ಯಾನ್ಸಲ್ ಆಗಿದೆಯೇ? ಎಲ್ಲಾ ಪ್ರೀ-ಬುಕಿಂಗ್‌ಗಳಿಗೆ ರಿಇಂಬರ್ಸ್‌ಮೆಂಟ್ ಪಡೆದುಕೊಳ್ಳಿ - ನಿಮ್ಮ ಟ್ರಿಪ್ ಕ್ಯಾನ್ಸಲ್ ಆದಾಗ ನಿಮ್ಮ ನಿರಾಶೆಯನ್ನು ನಾವು ಯಾವುದೇ ರೀತಿಯಲ್ಲಿ ನಿವಾರಿಸಲು ಸಾಧ್ಯವಿಲ್ಲ, ಆದರೆ ನಿಮ್ಮ ಎಲ್ಲಾ ಪ್ರೀ-ಬುಕ್ ಮಾಡಲಾದ ಮರುಪಾವತಿಸಲಾಗದ ವೆಚ್ಚಗಳನ್ನು ರಿಇಂಬರ್ಸ್ ಮಾಡುವ ಮೂಲಕ ನಾವು ಪರಿಸ್ಥಿತಿಯನ್ನು ಸ್ವಲ್ಪ ಹಗುರಗೊಳಿಸಬಹುದು.
ಇವುಗಳ ಹೊರತಾಗಿ, ಸಾಮಾನು ಸರಂಜಾಮು ವಿಳಂಬಗಳು, ತುರ್ತು ಮೆಡಿಕಲ್ ವೆಚ್ಚಗಳು, ತಪ್ಪಿದ ಸಂಪರ್ಕಗಳು, ತುರ್ತು ನಗದು ಅವಶ್ಯಕತೆಗಳು ಎಲ್ಲವನ್ನೂ ನಿಮ್ಮ ಸೀಶೆಲ್ಸ್ ಟ್ರಿಪ್ ಸಮಯದಲ್ಲಿ ನಾವು ಕವರ್ ಮಾಡಿದ್ದೇವೆ - ಅದೂ ಸಹ ರೂ.214 ನಾಮಿನಲ್ ಬೆಲೆಯಲ್ಲಿ (ಜಿಎಸ್‌ಟಿ ಹೊರತುಪಡಿಸಿ.) 1 ಅಡಲ್ಟ್‌ಗೆ ಒಂದು ದಿನಕ್ಕೆ $50,000 ಸಮ್ ಇನ್ಶೂರ್ಡ್‌ಗೆ!
ಆದಾಗ್ಯೂ, ವೈಯಕ್ತಿಕ ಲಯಬಿಲಿಟಿಯನ್ನು ಕವರ್ ಮಾಡುವ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ, ನಿಮ್ಮ ಇನ್ಶೂರರ್ ಅಂತಹ ಘಟನೆಗಳಿಂದ ಉಂಟಾಗುವ ಲಯಬಿಲಿಟಿಯನ್ನು ಪಾವತಿಸುತ್ತಾರೆ, ನಿಮ್ಮ ಟ್ರಾವೆಲ್ ಹಣದ ನಿರ್ಣಾಯಕ ಭಾಗವನ್ನು ನಿಮಗೆ ಉಳಿಸುತ್ತಾರೆ.
ಭಾರತೀಯ ನಾಗರಿಕರಿಗಾಗಿ ಸೀಶೆಲ್ಸ್ ಟೂರಿಸ್ಟ್ ವೀಸಾ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು
ನಾನು ಸೀಶೆಲ್ಸ್‌ನಲ್ಲಿ ಮೂರು ತಿಂಗಳಿಗಿಂತ ಹೆಚ್ಚು ಕಾಲ ಇರಬೇಕಾದ ಅಗತ್ಯ ಉಂಟಾದರೆ ನಾನು ಏನು ಮಾಡಬೇಕು?
ಲೊಕೇಶನ್‌ನಲ್ಲಿ ಮೂರು ತಿಂಗಳಿಗಿಂತ ಹೆಚ್ಚು ಕಾಲ ಕಳೆಯಬೇಕಾದ ಪ್ರಯಾಣಿಕರು ರೂ.30,000 ಶುಲ್ಕಕ್ಕೆ ಟ್ರಾವೆಲ್ ಪರ್ಮಿಟ್ ವಿಸ್ತರಣೆಗೆ ಅಪ್ಲೈ ಮಾಡಬಹುದು (ಬದಲಾವಣೆಗೆ ಒಳಪಟ್ಟಿರುತ್ತದೆ). ಆದಾಗ್ಯೂ, ವಿಸ್ತರಣೆಯು ಇನ್ನೂ 3 ತಿಂಗಳವರೆಗೆ ವ್ಯಾಲಿಡ್ ಆಗಿರುತ್ತದೆ, ನಂತರ ಅವನು/ಅವಳು ಮತ್ತೆ ಪರ್ಮಿಟ್ ಅನ್ನು ರಿನೀವ್ ಮಾಡಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ.
4-ದಿನದ ಸೀಶೆಲ್ಸ್ ಪ್ರವಾಸಕ್ಕಾಗಿ ನಾನು ನನ್ನೊಂದಿಗೆ ಎಷ್ಟನ್ನು ಕೊಂಡೊಯ್ಯುವ ಅವಶ್ಯಕತೆ ಇದೆ?
ಸೀಶೆಲ್ಸ್ ಪ್ರಯಾಣಿಕರು ಒಂದು ದಿನಕ್ಕೆ ಒಬ್ಬ ವ್ಯಕ್ತಿಗೆ ಕೊಂಡೊಯ್ಯಬೇಕಾದ ಕನಿಷ್ಠ ಅಮೌಂಟ್ ಸುಮಾರು ರೂ.13,480. ಆದ್ದರಿಂದ, 4-ದಿನದ ಪ್ರವಾಸಕ್ಕಾಗಿ, ನೀವು ಪ್ರತಿ ವ್ಯಕ್ತಿಗೆ ಕನಿಷ್ಟ ರೂ.54,000 ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಸೀಶೆಲ್ಸ್ ಪ್ರವೇಶಕ್ಕೆ ವೀಸಾ ಅಗತ್ಯವಿಲ್ಲ. ನನಗೆ ನನ್ನ ಪಾಸ್‌ಪೋರ್ಟ್ ಅಗತ್ಯವಿದೆಯೇ?
ಹೌದು. ಸೀಶೆಲ್ಸ್‌ಗೆ ಪ್ರವೇಶಿಸಲು ಪಾಸ್‌ಪೋರ್ಟ್ ಕಡ್ಡಾಯವಾಗಿದೆ. ಇದು ವೀಸಾ ಫ್ರೀ ದೇಶವಾಗಿದ್ದರೂ ಸಹ, ಟ್ರಾವೆಲ್ ಸಮಯದಲ್ಲಿ ಪಾಸ್‌ಪೋರ್ಟ್ ಪ್ರಾಥಮಿಕ ಗುರುತಿನ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ.