115 ವಿಭಿನ್ನ ದ್ವೀಪಗಳನ್ನು ಒಳಗೊಂಡಿರುವ ಸೀಶೆಲ್ಸ್ ಪೂರ್ವ ಆಫ್ರಿಕಾದ ಕರಾವಳಿಯಿಂದ ಸುಮಾರು 1450 ಕಿಮೀ ದೂರದಲ್ಲಿದೆ. ರಾಷ್ಟ್ರದ ಬಹುಪಾಲು ದ್ವೀಪಗಳು ಜನವಸತಿಯಿಲ್ಲದೆ ಉಳಿದಿದ್ದರೂ, ವಾಸಯೋಗ್ಯವಾದ ಸ್ಥಳಗಳು ಪ್ರವಾಸಿಗರಿಗೆ ಹೆಮ್ಮೆಪಡುವಂಥ, ಅತ್ಯಂತ ಮೋಡಿಮಾಡುವ ಸ್ಥಳಗಳಾಗಿವೆ ಮತ್ತು ಚಟುವಟಿಕೆಗಳನ್ನು ಒದಗಿಸುತ್ತವೆ.
ಭಾರತೀಯ ಪ್ರವಾಸಿಗರಿಗೂ ಇದು ಜನಪ್ರಿಯ ಡೆಸ್ಟಿನೇಷನ್ ಆಗಿ ಮುಂದುವರಿದಿದೆ. 2018ರ ವರದಿಯ ಪ್ರಕಾರ, ಅದೇ ವರ್ಷದ ಮೊದಲಾರ್ಧದಲ್ಲಿ ದೇಶದಿಂದ 8000ಕ್ಕೂ ಹೆಚ್ಚು ನಾಗರಿಕರು ಸೀಶೆಲ್ಸ್ ದ್ವೀಪಗಳಿಗೆ ಭೇಟಿ ನೀಡಿದ್ದಾರೆ.
ಪ್ರಾಚೀನವಾದ ಬೀಚ್ಗಳು ಮತ್ತು ನೀಲಿಯಾದ ಸಮುದ್ರದ ನೀರು ನಿಮ್ಮನ್ನು ಕರೆಯುತ್ತದೆಯೇ?
ಭಾರತೀಯರಿಗೆ ಸೀಶೆಲ್ಸ್ ವೀಸಾದ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಓದುವುದನ್ನು ಮುಂದುವರಿಸಿ ಇದರಿಂದ ನೀವು ಈ ಆಕರ್ಷಕ ಡೆಸ್ಟಿನೇಷನ್ನಲ್ಲಿ ವೆಕೇಷನ್ ಅನ್ನು ಆನಂದಿಸಬಹುದು.
ಇಲ್ಲ, ಸೀಶೆಲ್ಸ್ಗೆ ಭೇಟಿ ನೀಡುವ ಭಾರತೀಯ ನಾಗರಿಕರಿಗೆ ದೇಶವನ್ನು ಪ್ರವೇಶಿಸಲು ವೀಸಾ ಅಗತ್ಯವಿಲ್ಲ. ಆದಾಗ್ಯೂ, ಪ್ರವಾಸಿಗರಾಗಿ ನೀವು ದ್ವೀಪ ರಾಷ್ಟ್ರವನ್ನು ತಲುಪಿದ ನಂತರವೂ ದೇಶದ ಇಮಿಗ್ರೇಷನ್ ಡಿಪಾರ್ಟ್ಮೆಂಟ್ನಿಂದ ಪರ್ಮಿಟ್ ಅನ್ನು ಪಡೆದುಕೊಳ್ಳಬೇಕು. ಈ ಪರ್ಮಿಟ್ ನೀಡಿದ ನಂತರ 30 ದಿನಗಳವರೆಗೆ ವ್ಯಾಲಿಡ್ ಆಗಿರುತ್ತದೆ ಮತ್ತು ಅದರ ವಿತರಣೆಯ ದಿನಾಂಕದಿಂದ 3 ತಿಂಗಳವರೆಗೆ ವಿಸ್ತರಿಸಬಹುದು.
ಆದಾಗ್ಯೂ, ಪ್ರತೀ ವ್ಯಕ್ತಿಯ ಆಧಾರದ ಮೇಲೆ ಪ್ರಯಾಣಿಕರು ಸೀಶೆಲ್ಸ್ ಪ್ರಯಾಣದ ಪರ್ಮಿಟ್ಗೆ ಅರ್ಹರಾಗಲು ಸೀಶೆಲ್ಸ್ನಲ್ಲಿ ತಂಗುವ ಅವಧಿಯಲ್ಲಿ ದಿನಕ್ಕೆ ಕನಿಷ್ಠ $163 ಅನ್ನು ಹೊಂದಿರಬೇಕಾದ ಅವಶ್ಯಕತೆ ಇದೆ.
ಇಲ್ಲ, ಸೀಶೆಲ್ಸ್ ಭಾರತೀಯ ನಾಗರಿಕರಿಗೆ ವೀಸಾ ಫ್ರೀ ರಾಷ್ಟ್ರವಾಗಿರುವುದರಿಂದ, ದೇಶವನ್ನು ಪ್ರವೇಶಿಸಲು ನಿಮಗೆ ವೀಸಾ ಆನ್ ಅರೈವಲ್ ಅಥವಾ ಇ-ವೀಸಾ ಅಗತ್ಯವಿಲ್ಲ. ಆದಾಗ್ಯೂ, ಪ್ರಯಾಣಿಕರು ಇನ್ನೂ ಪರ್ಮಿಟ್ ಪಡೆಯುವ ಅವಶ್ಯಕತೆ ಇದೆ. ನೀವು ಆನ್ಲೈನ್ನಲ್ಲಿ ಪರ್ಮಿಟ್ಗೆ ಅಪ್ಲೈ ಮಾಡಲು ಸಾಧ್ಯವಿಲ್ಲ. ಬದಲಾಗಿ, ಮೊದಲೇ ಹೇಳಿದಂತೆ ದ್ವೀಪ ರಾಷ್ಟ್ರಕ್ಕೆ ಆಗಮಿಸಿದ ನಂತರ ನೀವು ಪರ್ಮಿಟ್ ಅನ್ನು ಪಡೆದುಕೊಳ್ಳುವ ಅವಶ್ಯಕತೆ ಇದೆ.
ಸೀಶೆಲ್ಸ್ ಭಾರತೀಯರಿಗೆ ವೀಸಾ ಫ್ರೀ ದೇಶವಾಗಿರುವುದರಿಂದ, ದೇಶಕ್ಕೆ ಭೇಟಿ ನೀಡುವ ಭಾರತೀಯ ನಾಗರಿಕರಿಗೆ ಯಾವುದೇ ವೀಸಾ ಶುಲ್ಕವನ್ನು ವಿಧಿಸಲಾಗುವುದಿಲ್ಲ.
ಇದಲ್ಲದೆ, ಸೀಶೆಲ್ಸ್ಗೆ ಭೇಟಿ ನೀಡಲು ಅಗತ್ಯವಿರುವ ಪರ್ಮಿಟ್ ಅನ್ನು ಸಹ ಉಚಿತವಾಗಿ ನೀಡಲಾಗುತ್ತದೆ ಮತ್ತು 3 ತಿಂಗಳವರೆಗೆ ದೇಶದಲ್ಲಿ ಉಳಿಯಲು ನಿಮಗೆ ಅನುಮತಿ ನೀಡಲಾಗುತ್ತದೆ.
ಸೀಶೆಲ್ಸ್ಗೆ ಪರ್ಮಿಟ್ ಪಡೆಯಲು, ನಿಮ್ಮ ವೆಕೇಷನ್ನಲ್ಲಿ ನೀವು ಈ ಕೆಳಗಿನ ಡಾಕ್ಯುಮೆಂಟ್ಗಳನ್ನು ಕೊಂಡೊಯ್ಯಬೇಕು.
ಎರಡು ಪಾಸ್ಪೋರ್ಟ್ ಸೈಜ್ನ ಫೋಟೋಗ್ರಾಫ್ಗಳು
ಸೀಶೆಲ್ಸ್ನಿಂದ ದೃಢೀಕರಿಸಲಾಗಿರುವ ರಿಟರ್ನ್ ಟಿಕೆಟ್ಗಳು
ಸೀಶೆಲ್ಸ್ಗೆ ಆಗಮಿಸಿದ ದಿನಾಂಕದಿಂದ ಕನಿಷ್ಠ ಆರು ತಿಂಗಳ ವ್ಯಾಲಿಡಿಟಿ ಹೊಂದಿರುವ ಭಾರತೀಯ ಪಾಸ್ಪೋರ್ಟ್
ರಶೀದಿಗಳು ಅಥವಾ ಬಿಲ್ಗಳ ರೂಪದಲ್ಲಿ ಹೋಟೆಲ್ ವಸತಿ ಪುರಾವೆ
ಭಾರತೀಯ ಪ್ರಯಾಣಿಕರು ವಾಸ್ತವ್ಯಕ್ಕೆ ಪ್ರತಿ ವ್ಯಕ್ತಿಗೆ ದಿನಕ್ಕೆ $163 ಅಥವಾ ಸುಮಾರು ರೂ.13,480 ಹೊಂದಿರಬೇಕು.
ಸೀಶೆಲ್ಸ್ ಪ್ರಯಾಣಿಕರು ಪರ್ಮಿಟ್ ಅನ್ನು ಪಡೆಯಲು ಪೂರೈಸಬೇಕಾದ ಕೆಲವು ಮೂಲಭೂತ ಅವಶ್ಯಕತೆಗಳು ಇವು.
ಈಗಾಗಲೇ ಹೇಳಿದಂತೆ, ಸೀಶೆಲ್ಸ್ ಭಾರತೀಯರಿಗೆ ವೀಸಾ ಫ್ರೀ ದೇಶವಾಗಿದೆ, ಇದರಿಂದ ಈ ಡೆಸ್ಟಿನೇಷನ್ಗೆ ಪ್ರಯಾಣಿಸಲು ಅತ್ಯಂತ ಅನುಕೂಲಕರವಾಗಿದೆ. ಆದಾಗ್ಯೂ, ನೀವು ರಾಷ್ಟ್ರಕ್ಕೆ ಟ್ರಿಪ್ ಮಾಡಲು ಪ್ಲಾನ್ ಮಾಡುತ್ತಿರುವಾಗ ಟ್ರಾವೆಲ್ ಪರ್ಮಿಟ್ ಅಗತ್ಯವಿದೆ.
ದೇಶವನ್ನು ತಲುಪಿದ ನಂತರ ನೀವು ಟ್ರಾವೆಲ್ ಪರ್ಮಿಟ್ ಅನ್ನು ಸಂಗ್ರಹಿಸಬೇಕು. ರಾಷ್ಟ್ರಕ್ಕೆ ಅನುಕೂಲಕರ ಪ್ರವೇಶಕ್ಕಾಗಿ ಮೇಲೆ ತಿಳಿಸಲಾದ ಎಲ್ಲಾ ಅಗತ್ಯ ಡಾಕ್ಯುಮೆಂಟ್ಗಳನ್ನು ನೀವು ಹೊಂದಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಸೀಶೆಲ್ಸ್ ವಿದೇಶಿ ಪ್ರಯಾಣಿಕರಿಗೆ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅನ್ನು ಪಡೆಯುವುದನ್ನು ಕಡ್ಡಾಯಗೊಳಿಸಿಲ್ಲ. ಆದರೂ, ಅಂತಹ ಕವರ್ ಅನ್ನು ಆರಿಸಿಕೊಳ್ಳುವುದು ಯಾವಾಗಲೂ ಆರ್ಥಿಕವಾಗಿ ನಿಮ್ಮನ್ನು ರಕ್ಷಿಸಿಕೊಳ್ಳುವ ಬುದ್ಧಿವಂತ ಕ್ರಮವಾಗಿದೆ.
ನೀವು ಯಾವಾಗಲೂ ದೇಶದಿಂದ ಹೊರಗೆ ಕಾಲಿಟ್ಟಾಗ ವಿಶೇಷವಾಗಿ ಡಿಜಿಟ್ನಿಂದ, ಸೀಶೆಲ್ಸ್ಗೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಪಡೆಯುವುದು ಅತ್ಯಗತ್ಯ ಎಂಬುದಕ್ಕೆ ಕೆಲವು ಕಾರಣಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
ಇವುಗಳ ಹೊರತಾಗಿ, ಸಾಮಾನು ಸರಂಜಾಮು ವಿಳಂಬಗಳು, ತುರ್ತು ಮೆಡಿಕಲ್ ವೆಚ್ಚಗಳು, ತಪ್ಪಿದ ಸಂಪರ್ಕಗಳು, ತುರ್ತು ನಗದು ಅವಶ್ಯಕತೆಗಳು ಎಲ್ಲವನ್ನೂ ನಿಮ್ಮ ಸೀಶೆಲ್ಸ್ ಟ್ರಿಪ್ ಸಮಯದಲ್ಲಿ ನಾವು ಕವರ್ ಮಾಡಿದ್ದೇವೆ - ಅದೂ ಸಹ ರೂ.214 ನಾಮಿನಲ್ ಬೆಲೆಯಲ್ಲಿ (ಜಿಎಸ್ಟಿ ಹೊರತುಪಡಿಸಿ.) 1 ಅಡಲ್ಟ್ಗೆ ಒಂದು ದಿನಕ್ಕೆ $50,000 ಸಮ್ ಇನ್ಶೂರ್ಡ್ಗೆ!
ಆದಾಗ್ಯೂ, ವೈಯಕ್ತಿಕ ಲಯಬಿಲಿಟಿಯನ್ನು ಕವರ್ ಮಾಡುವ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ನೊಂದಿಗೆ, ನಿಮ್ಮ ಇನ್ಶೂರರ್ ಅಂತಹ ಘಟನೆಗಳಿಂದ ಉಂಟಾಗುವ ಲಯಬಿಲಿಟಿಯನ್ನು ಪಾವತಿಸುತ್ತಾರೆ, ನಿಮ್ಮ ಟ್ರಾವೆಲ್ ಹಣದ ನಿರ್ಣಾಯಕ ಭಾಗವನ್ನು ನಿಮಗೆ ಉಳಿಸುತ್ತಾರೆ.