ಹಲವಾರು ಕಾರಣಗಳಿಂದಾಗಿ ಭಾರತೀಯರು ನೇಪಾಳವನ್ನು ತಮ್ಮ ರಜೆ ತಾಣವನ್ನಾಗಿ ಫೈನಲ್ ಮಾಡುತ್ತಾರೆ. ಇದು ವಿದೇಶವಾಗಿದ್ದರೂ, ಭಾರತದ ಅತ್ಯಂತ ಸಮೀಪದ ದೇಶಗಳಲ್ಲಿ ಒಂದಾಗಿದೆ. ಇದರ ಜೊತೆ, ನೇಪಾಳದಲ್ಲಿ ರಜೆ ಕಳೆಯುವುದು ತುಂಬಾ ದುಬಾರಿಯಾಗಿರದ ಕಾರಣ ಇದು ಭಾರತೀಯ ಪ್ರಯಾಣಿಕರಿಗೆ ಒಂದು ಜನಪ್ರಿಯ ಆಯ್ಕೆಯಾಗಲು ಪ್ರಾಥಮಿಕ ಕಾರಣಗಳಲ್ಲಿ ಒಂದಾಗಿದೆ.
ಅನೇಕ ಭಾರತೀಯರು ನೇಪಾಳಕ್ಕೆ ಭೇಟಿ ನೀಡಲು ಆಯ್ಕೆ ಮಾಡಿಕೊಂಡಿರುವುದರಿಂದ, ರಜೆಯನ್ನು ಪ್ಲಾನ್ ಮಾಡುವ ಮೊದಲು ಸಂಬಂಧಿತ ವೀಸಾ ರಿಕ್ವೈರ್ಮೆಂಟ್ಸ್ ಅನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಇದಲ್ಲದೆ, ಭಾರತದಿಂದ ನೇಪಾಳಕ್ಕಾಗಿ ಇರುವ ಎಮಿಗ್ರೇಶನ್ ನಿಯಮಗಳು ಇತರೆ ದೇಶಗಳಿಗಿಂತ ಯೂನಿಕ್ ಆಗಿರುವ ಕಾರಣ, ಇದರ ಬಗ್ಗೆ ನ್ಯಾಯಯುತ ಜ್ಞಾನವನ್ನು ಹೊಂದಿರುವುದು ಮುಖ್ಯವಾಗಿದೆ.
ಇಲ್ಲ, ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ನೇಪಾಳಕ್ಕೆ ಪ್ರಯಾಣಿಸಲು ವೀಸಾ ಅಗತ್ಯವಿಲ್ಲ. ಬಹುತೇಕ ಇತರೆ ರಾಷ್ಟ್ರಗಳ ನಾಗರಿಕರು ನೇಪಾಳಕ್ಕೆ ಪ್ರವೇಶಿಸಲು ವೀಸಾವನ್ನು ಹೊಂದಿರಬೇಕು ಎಂಬುದನ್ನು ನೋಟ್ ಮಾಡಿಕೊಳ್ಳುವುದು ಮುಖ್ಯವಾಗಿದೆ. ಈ ವಿನಾಯಿತಿಯನ್ನು ಭಾರತೀಯ ನಾಗರಿಕರಿಗೆ ಮಾತ್ರ ವಿಸ್ತರಿಸಲಾಗಿದೆ.
ಆದಾಗ್ಯೂ, ಭಾರತೀಯರು ಭಾರತ ಸರ್ಕಾರ, ಭಾರತದ ಚುನಾವಣಾ ಆಯೋಗ ಇತ್ಯಾದಿಗಳಿಂದ ನೀಡಲಾದ ಸರಿಯಾದ ರುಜುವಾತುಗಳನ್ನು ಹೊಂದಿರಬೇಕು.
ಇಲ್ಲ, ಭಾರತೀಯ ಪ್ರಯಾಣಿಕರಿಗೆ ನೇಪಾಳಕ್ಕೆ ಪ್ರಯಾಣಿಸಲು ವೀಸಾ ಅಗತ್ಯವಿಲ್ಲದ ಕಾರಣ, ವೀಸಾ ಆನ್ ಅರೈವಲ್ ಅಥವಾ ಇ-ವೀಸಾ ಸಹ ಅನಗತ್ಯವಾಗುತ್ತದೆ.
ಭಾರತೀಯರು ನೇಪಾಳಕ್ಕೆ ಪ್ರವೇಶ ಪಡೆಯಲು ತಮ್ಮ ಪಾಸ್ಪೋರ್ಟ್ ಅಥವಾ, ಈ ಆರ್ಟಿಕಲ್ ನಲ್ಲಿ ಮುಂದೆ ತಿಳಿಸಲಾದ, ಇತರ ಅನ್ವಯವಾಗುವ ಡಾಕ್ಯುಮೆಂಟ್ಗಳೊಂದಿಗೆ ಪ್ರಯಾಣಿಸಬಹುದು, ಅದು ಕಠ್ಮಂಡು ವಿಮಾನ ನಿಲ್ದಾಣದ ಎಮಿಗ್ರೇಶನ್ ಕೇಂದ್ರವಿರಲಿ ಅಥವಾ ಬೇರೆ ಎಲ್ಲಾದರೂ ಆಗರಿಲಿ.
ಹೌದು, ನೇಪಾಳಕ್ಕೆ ಪ್ರಯಾಣಿಸುವ ಭಾರತೀಯರು ತಮ್ಮ ವ್ಯಾಲಿಡ್ ಪಾಸ್ಪೋರ್ಟ್ಗಳನ್ನು ಹೊಂದಿರುವುದು ಅತ್ಯಗತ್ಯ. ಆದಾಗ್ಯೂ, ಭಾರತದಿಂದ ನೇಪಾಳಕ್ಕೆ ತಮ್ಮ ಪಾಸ್ಪೋರ್ಟ್ ಹೊಂದಿರದ ಪ್ರವಾಸಿಗರು ಈ ದೇಶವನ್ನು ಪ್ರವೇಶಿಸಲು ಅದರ ಬದಲಾಗಿ ಕೆಲವು ಇತರೆ ಡಾಕ್ಯುಮೆಂಟ್ಗಳನ್ನು ಸಲ್ಲಿಸಬಹುದು. ಈ ಡಾಕ್ಯುಮೆಂಟ್ಗಳನ್ನು ಈ ಆರ್ಟಿಕಲ್ ನ ಮುಂದಿನ ಭಾಗದಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ನಾಗರಿಕರಿಗೆ ನೇಪಾಳ ವೀಸಾ ರಿಕ್ವೈರ್ಮೆಂಟ್ಸ್ ಅನಗತ್ಯವಾಗಿದ್ದರೂ, ಭಾರತೀಯರು ಪ್ರವೇಶ ಪಡೆಯಲು ಕೆಳಗೆ ನೀಡಲಾದ ಡಾಕ್ಯುಮೆಂಟ್ ಗಳನ್ನು ಒಯ್ಯಬೇಕು.
ಕೇಂದ್ರ/ರಾಜ್ಯ/ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು ನೀಡಿರುವ ಯಾವುದೇ ಫೋಟೋ-ಐಡೆಂಟಿಟಿ ಪ್ರೂಫ್.
ಭಾರತದ ಚುನಾವಣಾ ಆಯೋಗವು ನೀಡಿರುವ ವೋಟರ್ ಐಡಿ ಕಾರ್ಡ್.
ಕಠ್ಮಂಡುವಿನಲ್ಲಿ ಭಾರತೀಯ ರಾಯಭಾರ ಕಚೇರಿಯಿಂದ ನೀಡಲಾಗುವ ಎಮರ್ಜೆನ್ಸಿ ಸರ್ಟಿಫಿಕೇಟ್.
ಭಾರತೀಯ ನಾಗರಿಕರಿಗಾಗಿ ಇರುವ ಈ ಕೆಳಗಿನ ನೇಪಾಳ ಪ್ರವೇಶದ ರಿಕ್ವೈರ್ಮೆಂಟ್ಸ್ ಅನ್ನು ಸಹ ಎಚ್ಚರಿಕೆಯಿಂದ ನೋಟ್ ಮಾಡಿಕೊಳ್ಳಬೇಕು.
65 ವರ್ಷಕ್ಕಿಂತ ಮೇಲ್ಪಟ್ಟ ಅಥವಾ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾರತೀಯರು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ರೇಶನ್ ಕಾರ್ಡ್ ಮುಂತಾದ ಫೋಟೋ-ಐಡೆಂಟಿಟಿ ಪ್ರೂಫ್ ಗಳನ್ನು ನೀಡುವ ಮೂಲಕ ನೇಪಾಳವನ್ನು ಪ್ರವೇಶಿಸಬಹುದು.
15 ಮತ್ತು 18 ವರ್ಷ ವಯಸ್ಸಿನ ಭಾರತೀಯರು ತಮ್ಮ ಶೈಕ್ಷಣಿಕ ಸಂಸ್ಥೆಯ ಪ್ರಾಂಶುಪಾಲರು ನೀಡಿದ ಐಡೆಂಟಿಟಿ ಸರ್ಟಿಫಿಕೇಟ್ ಅನ್ನು ಬಳಸಿಕೊಂಡು ನೇಪಾಳವನ್ನು ಪ್ರವೇಶಿಸಬಹುದು.
ತಮ್ಮ ಸ್ವಂತ ವಾಹನದೊಂದಿಗೆ ರಸ್ತೆಯ ಮೂಲಕ ನೇಪಾಳಕ್ಕೆ ಪ್ರವೇಶಿಸುವ ಭಾರತೀಯ ನಾಗರಿಕರು ನೇಪಾಳ ಗಡಿಯಲ್ಲಿ ತಮ್ಮ ಸಿಟಿಜನ್ಶಿಪ್ ಪ್ರೂಫ್ ಜೊತೆ ಈ ಕೆಳಗಿನ ಡಾಕ್ಯುಮೆಂಟ್ಗಳನ್ನು ಸಲ್ಲಿಸಬೇಕಾಗುತ್ತದೆ:
ವಾಹನದ ರಿಜಿಸ್ಟ್ರೇಷನ್ ಸರ್ಟಿಫಿಕೇಟ್
ಡ್ರೈವಿಂಗ್ ಲೈಸೆನ್ಸ್
ಯಾತಾಯಾತ್ ಅನುಮತಿ ಅಥವಾ ವಾಹನದ ಪರ್ಮಿಟ್
ಭಾನ್ಸರ್ ಅಥವಾ ಕಸ್ಟಮ್ಸ್ ಪರ್ಮಿಟ್
ಭಾರತಕ್ಕೆ ನೇಪಾಳ ಎಮಿಗ್ರೇಶನ್ ನಿಯಮಗಳು ಈ ದೇಶದಲ್ಲಿ ಪ್ರವೇಶ ಪಡೆಯಲು ಭಾರತೀಯರಿಗೆ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಕಡ್ಡಾಯಗೊಳಿಸುವುದಿಲ್ಲ. ಆದಾಗ್ಯೂ, ಟ್ರೆಕ್ಕಿಂಗ್ಗಾಗಿ ಈ ದೇಶಕ್ಕೆ ಭೇಟಿ ನೀಡುವವರು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಕಡ್ಡಾಯವಾಗಿದೆ.
ಈ ಪಾಲಿಸಿಗಳು ಸಾಮಾನ್ಯವಾಗಿ ಆಸ್ಪತ್ರೆ ದಾಖಲಾತಿ ಶುಲ್ಕಗಳವರೆಗೆ ವಿಸ್ತರಿಸಬಹುದಾದ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ, ಅವು ಸಾಹಸ ಕ್ರೀಡೆಯನ್ನು ಆನಂದಿಸುತ್ತಿರುವಾಗ ಉಂಟಾದರೂ ಸಹ. ಕಳೆದುಹೋದ ಪಾಸ್ಪೋರ್ಟ್ಗಳ ಎಪ್ಲಿಕೇಶನ್ ಗಳ ಜೊತೆ ಈ ಪ್ಲಾನ್ ಗಳ ಅಡಿಯಲ್ಲಿ ಸಾಮಾನ್ಯವಾಗಿ ಲಗೇಜ್ ನಷ್ಟವನ್ನು ರಿಇಂಬರ್ಸ್ ಮಾಡಲಾಗುತ್ತದೆ. ಎಲ್ಲಾ ಸಮಯದಲ್ಲೂ, ಅಂದರೆ ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ ಲಭ್ಯವಿರುವ ಅನುಕೂಲಕರ ಕಸ್ಟಮರ್ ಸರ್ವಿಸ್ ಜೊತೆಗೆ, ಈ ಪ್ಲಾನ್ ಗಳು ಸಾಕಷ್ಟು ಮಿತವ್ಯಯದ್ದಾಗಿದ್ದು $50,000 ದ ಸಮ್ ಇನ್ಶೂರ್ಡ್ ಗಾಗಿ ಒಬ್ಬ ವಯಸ್ಕರಿಗೆ ರೂ. 175 ಪ್ರತಿದಿನದ ಪ್ರೀಮಿಯಂನೊಂದಿಗೆ ಆರಂಭವಾಗುತ್ತವೆ.
ಒಂದು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವುದು, ನೇಪಾಳಕ್ಕೆ ಪ್ರಯಾಣಿಸುವಾಗ ಬರಬಹುದಾದ ಅನಿರೀಕ್ಷಿತ ವೆಚ್ಚಗಳನ್ನು ಆರ್ಥಿಕವಾಗಿ ನಿಭಾಯಿಸಲು ಸಹಾಯ ಮಾಡುವುದು ಮಾತ್ರವಲ್ಲದೆ, ತುರ್ತು ಸಮಯದಲ್ಲಿ ತಕ್ಷಣದ ಬೆಂಬಲದೊಂದಿಗೆ ಸಹಾಯ ಮಾಡುತ್ತದೆ. ಇದು ಫ್ಲೈಟ್ ಡಿಲೇಗಳು ಮತ್ತು ಪ್ರಯಾಣದಲ್ಲಿರುವಾಗ ಬರಬಹುದಾದ ಇತರ ರೀತಿಯ ಸಮಸ್ಯೆಗಳಿಗೆ ಸಹ ವಿಸ್ತರಿಸುತ್ತದೆ. ಈ ಪಾಲಿಸಿಗಳು ಪ್ರವಾಸಿಗರಿಗೆ ಪರಿಚಿತವಲ್ಲದ ಒಂದು ಪರದೇಶದಲ್ಲಿರುವಾಗ ವಿಶೇಷವಾಗಿ ಸಹಾಯಕವಾಗಬಹುದು.