ಭಾರತೀಯರಿಗೆ ಮಾರಿಷಸ್ ವೀಸಾ
ಭಾರತೀಯರಿಗೆ ಮಾರಿಷಸ್ ವೀಸಾದ ಬಗ್ಗೆ ಉತ್ತಮ ಗೈಡ್
ನೀವು ಮಾರಿಷಸ್‌ನಲ್ಲಿ ನಿಮ್ಮ ಸುಂದರ ಕುಟುಂಬದೊಂದಿಗೆ ವೆಕೇಶನ್ ಕಳೆಯಲು ಪ್ಲ್ಯಾನ್ ಮಾಡುತ್ತಿದ್ದೀರಾ? ಸರಿ ಹಾಗಿದ್ರೆ, ಖಂಡಿತ ನೀವು ಸಂತೋಷದಿಂದ ಹೋಗಬಹುದು!
ಮಾರಿಷಸ್ ಒಂದು ಸಣ್ಣ ದೇಶವಾಗಿದ್ದು, ದೆಹಲಿಗಿಂತ ಸರಿಸುಮಾರು ಒಂದೂವರೆ ಪಟ್ಟು ದೊಡ್ಡದಾಗಿದೆ. ಅದೇನೇ ಇದ್ದರೂ, ಇದು ಭಾರತೀಯ ಟ್ರಾವೆಲರ್‌ಗಳಿಗೆ ಅತ್ಯಂತ ಜನಪ್ರಿಯ ಟೂರಿಸ್ಟ್ ಡೆಸ್ಟಿನೇಷನ್ ಆಗಿದೆ.
ಈ ಸ್ವರ್ಗದಂತಹ ಲೊಕೇಶನ್‌ನಲ್ಲಿ ನಿಮ್ಮ ಹನಿಮೂನ್ ಕಳೆಯಲು ನೀವು ಬಯಸುತ್ತೀರಾ ಅಥವಾ ನಿಮ್ಮ ಸ್ನೇಹಿತರೊಂದಿಗೆ ಇಲ್ಲಿ ಎಂಜಾಯ್ ಮಾಡಲು ಬಯಸುತ್ತೀರಾ, ಹಾಗಿದ್ದರೆ ಮಾರಿಷಸ್‌ಗಿಂತ ಉತ್ತಮವಾದ ಡೆಸ್ಟಿನೇಷನ್ ಅನ್ನು ನೀವು ಆಯ್ಕೆ ಮಾಡಲು ಸಾಧ್ಯವಿಲ್ಲ. ಆದಾಗ್ಯೂ, ನಿಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡುವ ಮೊದಲು, ಭಾರತೀಯರಿಗಾಗಿ ಮಾರಿಷಸ್ ವೀಸಾದ ಬಗ್ಗೆ ಸ್ವಲ್ಪ ಯೋಚಿಸಿ. ಈ ಪೇಪರ್‌ವರ್ಕ್‌ಗಳನ್ನು ಜೋಡಿಸುವುದು ಟ್ರಿಪ್‌ನಲ್ಲಿ ನಿಮ್ಮ ತೊಂದರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಮಾರಿಷಸ್‌ಗೆ ಭೇಟಿ ನೀಡಲು ಭಾರತೀಯರಿಗೆ ವೀಸಾದ ಅಗತ್ಯವಿದೆಯೇ?
ಹೌದು, ಮಾರಿಷಸ್‌ಗೆ ಟ್ರಾವೆಲ್ ಮಾಡುವ ಇಂಡಿಯನ್ ಪಾಸ್‌ಪೋರ್ಟ್ ಹೋಲ್ಡರ್‌ಗಳಿಗೆ ಆ ದೇಶದಲ್ಲಿ ಎಂಟ್ರಿ ಪಡೆಯಲು ವೀಸಾದ ಅಗತ್ಯವಿದೆ.
ಭಾರತೀಯರಿಗೆ ಮಾರಿಷಸ್‌ನಲ್ಲಿ ವೀಸಾ ಆನ್ ಅರೈವಲ್/ಇ-ವೀಸಾ ಲಭ್ಯವಿದೆಯೇ?
ಹೌದು, ಭಾರತದಿಂದ ಮಾರಿಷಸ್‌ಗೆ ಟ್ರಾವೆಲ್ ಮಾಡಲು ಬಯಸುವ ಭಾರತೀಯರಿಗೆ ವೀಸಾ ಆನ್ ಅರೈವಲ್‌ನ ಪ್ರಾವಿಷನ್ ಅನ್ನು ನೀಡಲಾಗಿದೆ. ಹೇಳಬೇಕೆಂದರೆ, ಭಾರತೀಯರಿಗಾಗಿ ಮಾರಿಷಸ್ ಟೂರಿಸ್ಟ್ ವೀಸಾವನ್ನು ಹುಡುಕುತ್ತಿದ್ದರೆ, ನಿಮಗೆ ಒಂದೇ ಒಂದು ಆಯ್ಕೆ ಇದೆ, ಅದುವೇ ವೀಸಾ ಆನ್ ಅರೈವಲ್. ಭಾರತೀಯರು ತಮ್ಮ ಟ್ರಿಪ್ ಅನ್ನು ಪ್ರಾರಂಭಿಸುವ ಮೊದಲು ವೀಸಾವನ್ನು ಪಡೆಯಲು ಸಾಧ್ಯವಿಲ್ಲ.
ನೀವು ಮಾರಿಷಸ್ ಏರ್‌ಪೋರ್ಟ್‌ಗೆ ಬರಬಹುದು ಮತ್ತು ಅಲ್ಲಿನ ಎಮಿಗ್ರೇಷನ್ ಡೆಸ್ಕ್‌ನಿಂದ ನಿಮ್ಮ ವೀಸಾ ಡಾಕ್ಯುಮೆಂಟ್ ಅನ್ನು ತೆಗೆದುಕೊಳ್ಳಬಹುದು.
ಭಾರತೀಯರಿಗಾಗಿ ಮಾರಿಷಸ್ ವೀಸಾ ಫೀಸ್
ಟ್ರಾವೆಲರ್‌ಗಳಿಗೆ ಒಳ್ಳೆಯ ಸುದ್ದಿ ಎಂದರೆ ಭಾರತೀಯರಿಗಾಗಿ ಮಾರಿಷಸ್ ವೀಸಾ ಸಂಪೂರ್ಣವಾಗಿ ಉಚಿತವಾಗಿದೆ. ಇದರರ್ಥ ನೀವು ಅಧಿಕೃತವಾಗಿ ದೇಶದಲ್ಲಿ ಎಂಟ್ರಿ ಆಗುವ ಮೊದಲು ನಿಮ್ಮ ವೀಸಾ ಡಾಕ್ಯುಮೆಂಟುಗಳನ್ನು ತೆಗೆದುಕೊಳ್ಳಬೇಕಾಗಿದ್ದರೂ, ನೀವು ವೀಸಾಗಾಗಿ ಫೀಸ್ ಅನ್ನು ಪಾವತಿಸಬೇಕಾಗಿಲ್ಲ.
ಭಾರತೀಯರಿಗಾಗಿ ವೀಸಾ ಫ್ರೀ ದೇಶಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
ಭಾರತೀಯರಿಗಾಗಿ ಮಾರಿಷಸ್ ವೀಸಾಗೆ ಅಗತ್ಯವಿರುವ ಡಾಕ್ಯುಮೆಂಟುಗಳು
ಆದರೂ, ಕೇವಲ ಅವಶ್ಯಕತೆಗಳನ್ನಷ್ಟೇ ಅರ್ಥಮಾಡಿಕೊಳ್ಳುವುದು ಸಾಕಾಗುವುದಿಲ್ಲ. ಮಾರಿಷಸ್‌ನಲ್ಲಿರುವ ಇಂಡಿಯನ್ ಪಾಸ್‌ಪೋರ್ಟ್ ಹೋಲ್ಡರ್‌ಗಳಿಗಾಗಿ ತೊಂದರೆ-ಮುಕ್ತ ವೀಸಾ ಆನ್ ಅರೈವಲ್ ಅನ್ನು ಖಚಿತಪಡಿಸಿಕೊಳ್ಳಲು ನೀವು ಕೆಲವು ಡಾಕ್ಯುಮೆಂಟುಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಕೆಳಗಿನ ಪಟ್ಟಿಯನ್ನು ನೋಡೋಣ:
ಎಲ್ಲಾ ಅಗತ್ಯ ವಿವರಗಳು ಮತ್ತು ಮಾಹಿತಿಯೊಂದಿಗೆ ತುಂಬಿದ ವೀಸಾ ಫಾರ್ಮ್‌ಗಳು
ಎರಡು ಇತ್ತೀಚಿನ ಪಾಸ್‌ಪೋರ್ಟ್ ಸೈಜಿನ ಫೋಟೋಗಳು
ಮಾರಿಷಸ್ ಭೇಟಿಯ ದಿನಾಂಕದಿಂದ ಕನಿಷ್ಠ 6 ತಿಂಗಳವರೆಗೆ ವ್ಯಾಲಿಡ್ ಆಗಿರುವ ಪಾಸ್‌ಪೋರ್ಟ್.
ನೀವು ಮಾರಿಷಸ್‌ನಿಂದ ಮತ್ತೊಂದು ಡೆಸ್ಟಿನೇಷನ್‌ಗೆ ಟ್ರಾವೆಲ್ ಮಾಡುತ್ತಿದ್ದರೆ, ನೀವು ಆ ದೇಶಕ್ಕೆ ವ್ಯಾಲಿಡ್ ಆಗಿರುವ ವೀಸಾವನ್ನು ತೋರಿಸಬೇಕು. ಇಲ್ಲದಿದ್ದರೆ, ನೀವು ಕನ್ಫರ್ಮ್ಡ್ ರಿಟರ್ನ್ ಫ್ಲೈಟ್ ಟಿಕೆಟ್‌ಗಳನ್ನು ತೋರಿಸಸಬೇಕಾಗುತ್ತದೆ.
ಎಲ್ಲಾ ವಸತಿ ವಿವರಗಳು ಅಂದರೆ ಇದು ರೂಮ್ ಬುಕಿಂಗ್ ರಿಸಿಪ್ಟ್‌ಗಳು ಮತ್ತು ಇತರ ವಿವರಗಳನ್ನು ಒಳಗೊಂಡಿರಬೇಕು
ಮಾರಿಷಸ್ ಪ್ರಜೆಯು ಆ ದೇಶದಲ್ಲಿ ನಿಮ್ಮ ವಾಸ್ತವ್ಯವನ್ನು ಪ್ರಾಯೋಜಿಸುತ್ತಿದ್ದರೆ, ನೀವು ಪ್ರಾಯೋಜಕರಿಂದ ಅದರ ಕುರಿತಾದ ಪತ್ರವನ್ನು ತೋರಿಸಬೇಕಾಗುತ್ತದೆ. ಇದಲ್ಲದೆ, ಈ ಪ್ರಾಯೋಜಕತ್ವ ಪತ್ರದಲ್ಲಿ ಆ ಪ್ರಜೆಯ ವಿಳಾಸ ಮತ್ತು ನಿಮ್ಮೊಂದಿಗಿರುವ ಅವರ ಸಂಬಂಧವನ್ನು ಸಹ ನಮೂದಿಸಬೇಕು.
ದೇಶದಲ್ಲಿ ಉಳಿದುಕೊಳ್ಳುವಾಗ ವಿವಿಧ ವೆಚ್ಚಗಳನ್ನು ಭರಿಸಲು ಸಾಕಷ್ಟು ಹಣವಿರುವುದರ ಬಗ್ಗೆ ಪ್ರೂಫ್
ಬ್ಯಾಂಕ್ ಸ್ಟೇಟ್‌ಮೆಂಟ್ ಕೂಡ ಅಗತ್ಯವಾಗಬಹುದು
ಮಾರಿಷಸ್ ವೀಸಾ ಆನ್ ಅರೈವಲ್‌ಗೆ ಅಪ್ಲೈ ಮಾಡುವುದು ಹೇಗೆ?
ಟೂರ್‌ಗಾಗಿ ಮಾರಿಷಸ್‌ಗೆ ಭೇಟಿ ನೀಡಿದಾಗ ಭಾರತೀಯರು ದೀರ್ಘ ಮತ್ತು ಶ್ರಮದಾಯಕ ವೀಸಾ ಅಪ್ಲಿಕೇಶನ್ ಪ್ರೊಸೆಸ್‌ಗಾಗಿ ಕಾಯುವ ಅಗತ್ಯವಿಲ್ಲ. ನಿಜ ಹೇಳಬೇಕೆಂದರೆ, ಅನುಸರಿಸಲು ಯಾವುದೇ ಪ್ರೀ-ರಿಜಿಸ್ಟ್ರೇಷನ್ ಪ್ರೊಸೆಸ್ ಇಲ್ಲ. ನೀವು ಟ್ರಿಪ್‌ನಲ್ಲಿ ಎಲ್ಲಾ ಅಗತ್ಯ ಡಾಕ್ಯುಮೆಂಟುಗಳನ್ನು ತೆಗೆದುಕೊಳ್ಳಬೇಕು ಮತ್ತು ಏರ್‌ಪೋರ್ಟ್‌ನ ಎಮಿಗ್ರೇಶನ್ ಡಿಪಾರ್ಟ್‌ಮೆಂಟ್‌ನಿಂದ ವೀಸಾ ಆನ್ ಅರೈವಲ್ ಅನ್ನು ಪಡೆದುಕೊಳ್ಳಬೇಕು.
ಮಾರಿಷಸ್‌ನಲ್ಲಿರುವ ಇಂಡಿಯನ್ ಎಂಬೆಸಿ
ಮಾರಿಷಸ್ ತುಲನಾತ್ಮಕವಾಗಿ ಸುರಕ್ಷಿತ ದೇಶವಾಗಿದೆ. ಇದು ಆಂತರಿಕ ಕಲಹ, ಭಯೋತ್ಪಾದನೆ ಅಥವಾ ಯಾವುದೇ ಇತರ ಬೆದರಿಕೆಗಳಿಂದ ಮುಕ್ತವಾಗಿದೆ. ಆದರೂ, ದೇಶದಲ್ಲಿರುವ ಇಂಡಿಯನ್ ಎಂಬೆಸಿಯ ವಿಳಾಸ ಮತ್ತು ಸಂಪರ್ಕ ವಿವರಗಳನ್ನು ಗಮನಿಸುವುದು ಬುದ್ಧಿವಂತ ಕ್ರಮವಾಗಿದೆ.
ವಿಳಾಸ - ಹೈ ಕಮಿಷನ್ ಆಫ್ ಇಂಡಿಯಾ, 6 ನೇ ಫ್ಲೋರ್, ಎಲ್.ಎಲ್.ಸಿ. ಬಿಲ್ಡಿಂಗ್, ಪ್ರೆಸ್. ಜಾನ್ ಕೆನಡಿ ಸ್ಟ್ರೀಟ್, ಪಿ.ಓ. ಬಾಕ್ಸ್ 162, ಪೋರ್ಟ್ ಲೂಯಿಸ್, ಮಾರಿಷಸ್.
ಸಂಪರ್ಕ ಸಂಖ್ಯೆ - +(230) 208 3775/76, 208 0031, 211 1400
ಕೆಲಸದ ಸಮಯ - ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9.30 ಮತ್ತು ಸಂಜೆ 5 ರ ನಡುವೆ
ಯಾವುದೇ ಎಮರ್ಜೆನ್ಸಿ ಸಂದರ್ಭಗಳಲ್ಲಿ, ನೀವು ಇಂಡಿಯನ್ ಎಂಬೆಸಿಯ ಪ್ರತಿನಿಧಿಯನ್ನು ಸಂಪರ್ಕಿಸುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನಿಮ್ಮ ಮಾರಿಷಸ್ ಟ್ರಾವೆಲ್ ಸಮಯದಲ್ಲಿ ಎಮರ್ಜೆನ್ಸಿ ಪರಿಸ್ಥಿತಿಗಳಿಂದ ಹಣಕಾಸಿನ ರಿಸ್ಕ್‌ಗಳನ್ನು ಕಡಿಮೆ ಮಾಡಲು ನೀವು ಬಯಸಿದರೆ, ಇನ್ಶೂರೆನ್ಸ್ ಪಾಲಿಸಿಯನ್ನು ಆರಿಸಿಕೊಳ್ಳುವುದು ನಿಮ್ಮ ಅತ್ಯುತ್ತಮ ಆಯ್ಕೆಯಾಗಿದೆ.
ನೀವು ಮಾರಿಷಸ್‌ಗಾಗಿ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬೇಕೇ?
ನೀವು ಎಲ್ಲಿಗೆ ಹೋದರೂ ಟ್ರಾವೆಲ್ ಇನ್ಶೂರೆನ್ಸ್ ಅತ್ಯಗತ್ಯವಾಗಿದೆ. ಮಾರಿಷಸ್ ಟ್ರಾವೆಲ್‌ಗೆ ಕಡ್ಡಾಯವಲ್ಲದಿದ್ದರೂ, ಅಂತಹ ಕವರ್ ಅನ್ನು ಖರೀದಿಸುವುದರಿಂದ ನಿಮ್ಮ ಹಣಕಾಸಿನ ರಿಸ್ಕ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.
ನಿಮಗೆ ಮಾರಿಷಸ್ ಟ್ರಾವೆಲ್ ಇನ್ಶೂರೆನ್ಸಿನ ಅಗತ್ಯವಿಲ್ಲ ಎಂದು ನೀವು ಭಾವಿಸಿದರೆ, ಮತ್ತೊಮ್ಮೆ ಯೋಚಿಸಿ!
ಇಂಟರ್‌ನ್ಯಾಷನಲ್ ಡೆಸ್ಟಿನೇಷನ್‌ಗಳಲ್ಲಿ ವೈದ್ಯಕೀಯ ಸಹಾಯದ ವೆಚ್ಚವು ಭಾರತದಲ್ಲಿರುವುದಕ್ಕಿಂತ ಹೆಚ್ಚು ದುಬಾರಿಯಾಗಿದೆ. ಆದ್ದರಿಂದ, ಅನಾರೋಗ್ಯಗಳು ಮತ್ತು ಗಾಯಗಳು ನಿಮ್ಮ ಸ್ವಂತ ಜೇಬಿಗೆ ಹೆಚ್ಚು ಹೊರೆಯಾಗಬಹುದು, ವಿಶೇಷವಾಗಿ ನೀವು ಮಾರಿಷಸ್‌ನಲ್ಲಿರುವಾಗ. ಅಂತಹ ಅನ್‌ಪ್ಲ್ಯಾನ್ಡ್ ವೆಚ್ಚಗಳನ್ನು ಮೊಟಕುಗೊಳಿಸಲು ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಸುಲಭವಾದ ಮಾರ್ಗವಾಗಿದೆ.
ಇಂತಹ ಪಾಲಿಸಿಗಳು ಕೇವಲ ಮೆಡಿಕಲ್ ಎಮರ್ಜೆನ್ಸಿ ಸಂದರ್ಭಗಳಲ್ಲಿ ಹಣಕಾಸಿನ ನೆರವು ನೀಡುವುದು ಮಾತ್ರವಲ್ಲದೆ, ಟ್ರಾನ್ಸಿಟ್ ಮತ್ತು ಪಾಸ್‌ಪೋರ್ಟ್‌ನಲ್ಲಿ ಕಾಣೆಯಾದ/ಕಳುವಾದ ಸಾಮಾನುಗಳಿಗೆ ಸಹ ರಕ್ಷಣೆ ನೀಡುತ್ತದೆ. ಇದಲ್ಲದೆ, ಡಿಜಿಟ್‌ನಂತಹ ಹೆಸರಾಂತ ಇನ್ಶೂರೆನ್ಸ್ ಪೂರೈಕೆದಾರರು ತಮ್ಮ ಟ್ರಾವೆಲ್ ಪ್ಲ್ಯಾನ್‌ಗಳ ಅಡಿಯಲ್ಲಿ ಟ್ರಿಪ್ ಕ್ಯಾನ್ಸಲೇಶನ್ ಕವರ್ ಅನ್ನು ನೀಡುತ್ತಾರೆ. ಕೊನೆಯ ಕ್ಷಣದಲ್ಲಿ ನೀವು ಪ್ಲ್ಯಾನ್ ಮಾಡಿರುವ ವೆಕೇಶನ್ ಅನ್ನು ಮುಂದೂಡಬೇಕಾದರೆ, ಇದು ನಿಮ್ಮ ಆರ್ಥಿಕ ಹೊರೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.
ಭಾರತೀಯರಿಗಾಗಿ ಮಾರಿಷಸ್ ವೀಸಾ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು
ನಾನು ಮಾರಿಷಸ್‌ನಲ್ಲಿ ನನ್ನ ವಾಸ್ತವ್ಯವನ್ನು 60 ದಿನಗಳವರೆಗೆ ವಿಸ್ತರಿಸಬಹುದೇ?
ವೀಸಾ ಆನ್ ಅರೈವಲ್ ಅನ್ನು ಪಡೆದಿರುವ ಟ್ರಾವೆಲರ್‌ಗಳು, ಮಾರಿಷಸ್‌ನಲ್ಲಿ ಗರಿಷ್ಠ 60 ದಿನಗಳವರೆಗೆ ಉಳಿಯಲು ನಿರ್ಬಂಧಿಸಲಾಗಿದೆ. ಆದಾಗ್ಯೂ, ನೀವು ಹೆಚ್ಚು ಕಾಲ ಉಳಿಯಲು ಬಯಸಿದರೆ, ನೀವು ಎಕ್ಸ್‌ಟೆನ್ಷನ್‌ಗಾಗಿ ಅಪ್ಲೈ ಮಾಡಬಹುದು. ಅಂತಹ ಸಂದರ್ಭದಲ್ಲಿ, ನಿಮಗೆ ಬೇರೆ ವೀಸಾದ ಅಗತ್ಯವಿರುತ್ತದೆ.
ನನ್ನ ಪಾಸ್‌ಪೋರ್ಟ್ ಮೂರು ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ನಾನು ಮಾರಿಷಸ್‌ಗಾಗಿ ವೀಸಾ ಆನ್ ಅರೈವಲ್ ಅನ್ನು ಪಡೆಯಲು ಅರ್ಹನಾಗಿದ್ದೇನೆಯೇ?
ಇಲ್ಲ. ವಿಸಿಟರ್ ತಮ್ಮ ಮಾರಿಷಸ್ ಭೇಟಿಯ ದಿನಾಂಕದಿಂದ ಕನಿಷ್ಠ ಆರು ತಿಂಗಳವರೆಗೆ ವ್ಯಾಲಿಡ್ ಆಗಿರುವ ಪಾಸ್‌ಪೋರ್ಟ್ ಅನ್ನು ಹೊಂದಿರಬೇಕು. ಇದು ವಿಫಲವಾದರೆ, ಪ್ರಾಸ್ಪೆಕ್ಟಿವ್ ಟ್ರಾವೆಲರ್‌ಗಳು ತಮ್ಮ ಟ್ರಿಪ್‌ನ ಮೊದಲು ಪಾಸ್‌ಪೋರ್ಟ್ ರಿನೀವಲ್‌ಗಾಗಿ ಮೊದಲು ಅಪ್ಲೈ ಮಾಡಬೇಕು.
ನಾನು ಆನ್‌ಲೈನ್‌ನಲ್ಲಿ ಮಾರಿಷಸ್ ವೀಸಾಗಾಗಿ ಅಪ್ಲೈ ಮಾಡಬಹುದೇ?
ಇಲ್ಲ. ಟ್ರಾವೆಲರ್‌ಗಳು ಮಾರಿಷಸ್‌ನ ವೀಸಾ ಆನ್ ಅರೈವಲ್‌ಗಾಗಿ ರಿಜಿಸ್ಟರ್ ಮಾಡಿಕೊಳ್ಳುವ ಅಗತ್ಯವಿಲ್ಲ. ಅವರು ದೇಶದ ಏರ್‌ಪೋರ್ಟ್‌ನಲ್ಲಿ ಅಗತ್ಯ ಡಾಕ್ಯುಮೆಂಟುಗಳನ್ನು ನೀಡಬೇಕು ಮತ್ತು ಸಂಬಂಧಿತ ಅಥಾರಿಟಿಯಿಂದ ತಮ್ಮ ವೀಸಾವನ್ನು ಪಡೆದುಕೊಳ್ಳಬೇಕಾಗುತ್ತದೆ.