ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ
Instant Policy, No Medical Check-ups

ಭಾರತೀಯ ನಾಗರಿಕರಿಗೆ ಮಲೇಷ್ಯಾ ಟೂರಿಸ್ಟ್ ವೀಸಾ

ಭಾರತೀಯ ನಾಗರಿಕರಿಗೆ ಮಲೇಷ್ಯಾ ಟೂರಿಸ್ಟ್ ವೀಸಾದ ಬಗ್ಗೆ ಎಲ್ಲಾ

ಏಷ್ಯಾದಲ್ಲಿ ಪ್ರಯಾಣಿಸಲು ಮಲೇಷ್ಯಾ ಅತ್ಯಂತ ಕಡಿಮೆ ಮಹತ್ವ ನೀಡಲಾದ ಸ್ಥಳಗಳಲ್ಲಿ ಒಂದಾಗಿದೆ. ವಿಶಿಷ್ಟ ಐಲ್ಯಾಂಡ್ ಲೈಫ್ ನಿಂದ ಹೌಹಾರಿಸುವ ಗಗನಚುಂಬಿ ಕಟ್ಟಡಗಳವರೆಗೆ (ಕೌಲಾಲಂಪುರ್‌ನಲ್ಲಿರುವವು ವಿಶ್ವದ ಅತಿ ಎತ್ತರದ ಕಟ್ಟಡಗಳಲ್ಲಿ ಸೇರಿವೆ!) ದಟ್ಟ ರೈನ್ ಫಾರೆಸ್ಟ್ ಗಳು ಮತ್ತು ಅರಣ್ಯಗಳವರೆಗೆ; ಈ ವರ್ಷಪೂರ್ತಿ ಬೆಚ್ಚಗಿರುವ ದೇಶವು ಎಲ್ಲಾ ರೀತಿಯ ಪ್ರಯಾಣಿಕರಿಗೆ ಒಂದು ಸಂತೋಷಕರ ಭೇಟಿಯಾಗಲಿದೆ.

ಭಾರತೀಯರಿಗೆ ಮಲೇಷ್ಯಾಕ್ಕೆ ವೀಸಾ ಬೇಕಾಗುತ್ತದೆಯೇ?

ಹೌದು, ಭಾರತೀಯರಿಗೆ ಮಲೇಷ್ಯಾಕ್ಕೆ ವೀಸಾ ಅಗತ್ಯವಿದೆ. ಆದರೆ ಚಿಂತಿಸಬೇಡಿ, ಇತರೆ ದೇಶಗಳಿಗೆ ಹೋಲಿಸಿದರೆ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಈ ಪ್ರಕ್ರಿಯೆಯು ತುಂಬಾ ಸರಳವಾಗಿದೆ.

ಭಾರತೀಯ ನಾಗರಿಕರಿಗೆ ಮಲೇಷ್ಯಾದಲ್ಲಿ ವೀಸಾ ಆನ್ ಅರೈವಲ್ ಇದೆಯೇ?

ಹೌದು, ಆದರೆ ಸಂಪರ್ಕಿತ ದೇಶಗಳಾದ ಥೈಲ್ಯಾಂಡ್, ಸಿಂಗಾಪುರ್ ಅಥವಾ ಇಂಡೋನೇಷ್ಯಾ ಮೂಲಕ ಮಾತ್ರ. ಭಾರತೀಯ ನಾಗರಿಕರು ನೇರವಾಗಿ ಮಲೇಷ್ಯಾದಲ್ಲಿ ಲ್ಯಾಂಡ್ ಆಗಿ ಟೂರಿಸ್ಟ್ ವೀಸಾ ಕೇಳುವಂತಿಲ್ಲ. ಥೈಲ್ಯಾಂಡ್, ಸಿಂಗಾಪುರ್ ಅಥವಾ ಇಂಡೋನೇಷ್ಯಾದಂತಹ ಥರ್ಡ್-ಕಂಟ್ರಿಗಳ ಮೂಲಕ ಮಲೇಷ್ಯಾಕ್ಕೆ ಪ್ರವೇಶಿಸಿದಾಗ ಮಾತ್ರ ಭಾರತೀಯ ನಾಗರಿಕರು ವೀಸಾ ಆನ್ ಅರೈವಲ್ ಗೆ ಅರ್ಹರಾಗಿರುತ್ತಾರೆ. ನೀವು ಈ ಇತರೆ ದೇಶಗಳಿಗೆ ಪ್ರಯಾಣಿಸಲು ಪ್ಲಾನ್ ಮಾಡುತ್ತಿದ್ದರೆ ಇದು ಸಮಂಜಸವೇ, ಇಲ್ಲದಿದ್ದರೆ- ನೇರವಾಗಿ ಮಲೇಷಿಯಾದ ಟೂರಿಸ್ಟ್ ವೀಸಾ ಅನ್ನು ಆರಿಸಿಕೊಳ್ಳುವುದು ಉತ್ತಮ.

ಮಲೇಷ್ಯಾ ಟೂರಿಸ್ಟ್ ವೀಸಾಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

  • ಥೈಲ್ಯಾಂಡ್, ಸಿಂಗಾಪುರ ಅಥವಾ ಇಂಡೋನೇಷ್ಯಾಕ್ಕೆ ವ್ಯಾಲಿಡ್ ಟೂರಿಸ್ಟ್ ವೀಸಾ. (ನೀವು ಈ ದೇಶಗಳಿಗೂ ಪ್ರಯಾಣಿಸುತ್ತಿದ್ದರೆ)

  • ಭಾರತಕ್ಕೆ ವ್ಯಾಲಿಡ್ ರಿಟರ್ನ್ ಟಿಕೆಟ್

  • 3 ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋಗಳು

  • ನೀವು ಮಲೇಷ್ಯಾದಲ್ಲಿ ತಂಗುವಾಗ ಜೀವನಾಂಶದ ಪ್ರೂಫ್ ಆಗಿ ತೋರಿಸಲು ಕನಿಷ್ಠ $1000

  • ನೀವು ಬಿಸಿನೆಸ್ ಉದ್ದೇಶಗಳಿಗಾಗಿ ಪ್ರಯಾಣಿಸುತ್ತಿದ್ದರೆ ಕವರ್ ಲೆಟರ್.

  • ಒಬ್ಬ ಅಪ್ರಾಪ್ತ ವಯಸ್ಕರು ಅಪ್ಲಿಕೇಶನ್ ಸಲ್ಲಿಸುತ್ತಿದ್ದರೆ, ಪೋಷಕರು ಎನ್‌ಒಸಿ ಮತ್ತು ಅವರ ಪಾಸ್‌ಪೋರ್ಟ್ ಪ್ರತಿಗಳನ್ನು ಸಹ ಸಲ್ಲಿಸಬೇಕು

ಇವೀಸಾ ಎಂದರೇನು?

ಇವೀಸಾ ಎನ್ನುವುದು ಒಂದು ಆನ್‌ಲೈನ್ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್ ಆಗಿದ್ದು ಇದು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಲೇಷ್ಯಾವನ್ನು ಪ್ರವೇಶಿಸಲು ಎಲೆಕ್ಟ್ರಾನಿಕ್ ವೀಸಾಕ್ಕೆ ಅಪ್ಲಿಕೇಶನ್ ಸಲ್ಲಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಮಲೇಷಿಯಾದ ಇವೀಸಾವನ್ನು ಟೂರಿಸಂ, ಸ್ನೇಹಿತರು ಅಥವಾ ಸಂಬಂಧಿಕರೊಂದಿಗೆ ಸಾಂದರ್ಭಿಕ ಭೇಟಿ, ಅಲ್ಪಾವಧಿಯ ವೈದ್ಯಕೀಯ ಚಿಕಿತ್ಸೆ ಅಥವಾ ಸಾಂದರ್ಭಿಕ ಬಿಸಿನೆಸ್ ವಿಸಿಟ್ ಗಳಂತಹ ಉದ್ದೇಶಗಳಿಗಾಗಿ ನೀಡಲಾಗುತ್ತದೆ. ಪ್ರವಾಸಿಗರಿಗೆ ಮೂರು ವಿಧದ ಮಲೇಷಿಯಾ ಇವೀಸಾ (ಮಲೇಶಿಯಾ ಇವೀಸಾ) ಇವೆ, ಅಂದರೆ ಮಲೇಷ್ಯಾ ಇಎನ್‌ಟಿಆರ್‌ಐ ವೀಸಾ, 30 ದಿನಗಳ ಎಂಟ್ರಿ ಟೂರಿಸ್ಟ್ ವೀಸಾ ಮತ್ತು 30 ದಿನಗಳ ಮಲ್ಟಿಪಲ್ ಎಂಟ್ರಿ ಇವೀಸಾ.

ಭಾರತೀಯ ನಾಗರಿಕರಿಗೆ ಮಲೇಷ್ಯಾ ಟೂರಿಸ್ಟ್ ವೀಸಾ ಪ್ರೊಸೆಸಿಂಗ್ ಶುಲ್ಕ

ಆನ್‌ಲೈನ್‌ನಲ್ಲಿ ಸಲ್ಲಿಸಿದ ಅಪ್ಲಿಕೇಶನ್ ಗೆ ಯು.ಎಸ್.ಡಿ 24.80 (ಆರ್.ಎಂ 105) ಪ್ರೊಸೆಸಿಂಗ್ ಶುಲ್ಕದ ಅಗತ್ಯವಿರುತ್ತದೆ, ರಾಷ್ಟ್ರೀಯತೆಗೆ ಅನುಗುಣವಾಗಿ ವೀಸಾ ಶುಲ್ಕ ಮತ್ತು ಇ-ಕಾಮ್/ಮಾಸ್ಟರ್‌ಕಾರ್ಡ್ ಮೂಲಕ ಪಾವತಿಸಿದರೆ ಅಮೌಂಟ್ ನ 0.8% ಮತ್ತು ಇ-ವ್ಯಾಲೆಟ್ ಮೂಲಕ 1.7% ಕನ್ವೀನಿಯೇನ್ಸ್ ಶುಲ್ಕವನ್ನು ಪಾವತಿಸಲಾಗುತ್ತದೆ.

ಭಾರತದಿಂದ ಮಲೇಷ್ಯಾ ಟೂರಿಸ್ಟ್ ವೀಸಾಗೆ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?

ಮಾರ್ಚ್ 2016 ರಲ್ಲಿ, ಮಲೇಷ್ಯಾ ಸರ್ಕಾರವು ಮಲೇಷ್ಯಾವನ್ನು ಅನ್ವೇಷಿಸಲು ಬಯಸುವ ಪ್ರಯಾಣಿಕರಿಗೆ ಇ-ವೀಸಾವನ್ನು ಪರಿಚಯಿಸಿತು. ಪ್ರಯಾಣಿಕರು ಅದಕ್ಕಾಗಿ ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಪೇಮೆಂಟ್ ಜೊತೆ ಸಲ್ಲಿಸಿದ ನಂತರ, ಪ್ರಯಾಣಿಕರು ಇಮೇಲ್ ಮೂಲಕ ತಮ್ಮ ಎಲೆಕ್ಟ್ರಾನಿಕ್ ವೀಸಾವನ್ನು ಸ್ವೀಕರಿಸುತ್ತಾರೆ. ಇ-ವೀಸಾದ ಈ ಸೌಲಭ್ಯವು ಚೀನಾ, ಭಾರತ, ಶ್ರೀಲಂಕಾ, ನೇಪಾಳ, ಮಯನ್ಮಾರ್, ಬಾಂಗ್ಲಾದೇಶ, ಭೂತಾನ್, ಸೆರ್ಬಿಯಾ ಮತ್ತು ಮಾಂಟೆನೆಗ್ರೊದ ಪ್ರಜೆಗಳಿಗೆ ಲಭ್ಯವಿದೆ.

ಇ-ವೀಸಾಗೆ ಅಪ್ಲಿಕೇಶನ್ ಸಲ್ಲಿಸಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಮಲೇಷ್ಯಾ ಟೂರಿಸ್ಟ್ ವೀಸಾ ಪ್ರೊಸೆಸಿಂಗ್ ಸಮಯ

ಮಲೇಷಿಯಾ ಇವೀಸಾ/ಇಎನ್‌ಟಿಆರ್‌ಐ ಸರಿಸುಮಾರು 2 ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತದೆ. ಈ 2 ದಿನಗಳ ಪ್ರೊಸೆಸಿಂಗ್ ಸಮಯವನ್ನು ನಿಮ್ಮ ವೀಸಾಕ್ಕೆ ನೀವು ಅಪ್ಲಿಕೇಶನ್ ಸಲ್ಲಿಸಿದ ದಿನದಿಂದ ಲೆಕ್ಕಾಚಾರ ಮಾಡಲಾಗುತ್ತದೆ.

ನಾನು ಮಲೇಷ್ಯಾಕ್ಕೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕೇ?

ನೀವು ವಿದೇಶಕ್ಕೆ ಪ್ರಯಾಣಿಸುವಾಗ, ಅನೇಕ ವಿಷಯಗಳು ತಪ್ಪಾಗಿ ನಡೆಯಬಹುದು. ಫ್ಲೈಟ್ ಡಿಲೇ ಮತ್ತು ಲಗೇಜ್ ನಷ್ಟದಿಂದ ಹಿಡಿದು ವೈದ್ಯಕೀಯ ತುರ್ತು ಪರಿಸ್ಥಿತಿಗಳು ಮತ್ತು ಹಣದ ನಷ್ಟದವರೆಗೆ; ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದಿರುವುದು ಅಂತಹ ಸಂದರ್ಭಗಳಲ್ಲಿ ನಿಮಗೆ ಆರ್ಥಿಕ ಸೌಕರ್ಯವನ್ನು ನೀಡುವುದು ಮಾತ್ರವಲ್ಲದೆ ಇಡೀ ಅನುಭವವನ್ನು ನಿಮಗೆ ಕಡಿಮೆ ಕಷ್ಟಕರವಾಗಿಸುತ್ತದೆ. ಮಲೇಷಿಯಾದ ಟ್ರಾವೆಲ್ ಇನ್ಶೂರೆನ್ಸ್ ನೀವು ತುತ್ತಾಗಬಹುದಾದ ಎಲ್ಲಾ ಅನಿರೀಕ್ಷಿತ ಸಂದರ್ಭಗಳ ವಿರುದ್ಧ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ; ನೀವು ಮನೆಯಿಂದ ದೂರದಲ್ಲಿರುವ ಅಪರಿಚಿತ ಭೂಮಿಯಲ್ಲಿರುವ ಕಾರಣ ನೀವು ದುರ್ಬಲತೆಯನ್ನು ಅನುಭವಿಸುವ ಸಂದರ್ಭಗಳನ್ನು ಸಹ ಸೇರಿ.

ಮಲೇಷಿಯಾದ ಟ್ರಾವೆಲ್ ಇನ್ಶೂರೆನ್ಸ್ ಅಂತಹ ಎಲ್ಲಾ ಸಂದರ್ಭಗಳಲ್ಲಿ ನಿಮಗೆ ಸುರಕ್ಷತೆಯನ್ನು ನೀಡುತ್ತದೆ:

ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಮಲೇಷ್ಯಾ ಟೂರಿಸ್ಟ್ ವೀಸಾ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ಮಲೇಷ್ಯಾ ಭಾರತೀಯ ನಾಗರಿಕರಿಗೆ ವೀಸಾ ಆನ್ ಅರೈವಲ್ ನೀಡುತ್ತದೆಯೇ?

ಹೌದು, ಆದರೆ ನೀವು ಇಂಡೋನೇಷ್ಯಾ, ಥೈಲ್ಯಾಂಡ್ ಅಥವಾ ಸಿಂಗಾಪುರದಿಂದ ಪ್ರಯಾಣಿಸುತ್ತಿದ್ದೀರಿ ಎಂಬ ಷರತ್ತಿನ ಮೇಲೆ. ಆದಾಗ್ಯೂ, ನೀವು 15 ದಿನಗಳಿಗಿಂತ ಕಡಿಮೆ ಅವಧಿಗೆ ಭೇಟಿ ನೀಡುತ್ತಿದ್ದರೆ, ವೀಸಾ ಮನ್ನಾ ಕಾರ್ಯಕ್ರಮದ ಅಡಿಯಲ್ಲಿ ನೀವು ಇಎನ್‌ಟಿಆರ್‌ಐ ನೋಟ್ ಅನ್ನು ಪಡೆಯಬಹುದು. ಇಎನ್‌ಟಿಆರ್‌ಐ ಎಂಬುದು ಒಂದು ಔಪಚಾರಿಕ ರಿಜಿಸ್ಟ್ರೇಷನ್ ಪ್ರಕ್ರಿಯೆಯಾಗಿದ್ದು ಅದು ನಿಮಗೆ ಈ ದೇಶಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.

ಅಧಿಕಾರಿಗಳು ನನ್ನ ಆರ್ಥಿಕ ಸ್ಥಿತಿಯನ್ನು ಹೇಗೆ ಪರಿಶೀಲಿಸುತ್ತಾರೆ?

ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ನೀವು ಹಿಂದಿನ 3 ತಿಂಗಳ ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ. ನೀವು ವೀಸಾಗೆ ಅರ್ಹರಾಗಿದ್ದೀರಾ ಎಂಬುದನ್ನು ನಿರ್ಧರಿಸಲು ಅದು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.

ಮಲೇಷಿಯಾದ ಅಧಿಕಾರಿಗಳಿಗೆ ಅಗತ್ಯವಿರುವ ಜೀವನಾಂಶದ ಮಿತಿಯ ಪ್ರೂಫ್ ಯಾವುದು?

ಈ ಮಿತಿಯು ಸಾಂದರ್ಭಿಕವಾಗಿ ಬದಲಾಗುತ್ತಿರುತ್ತದೆ. ಬರೆದಿದ್ದಾಗ, ಈ ಮೊತ್ತವು ಯು.ಎಸ್.ಡಿ 1000 ಆಗಿತ್ತು.

ಮಲೇಷ್ಯಾ ಮಲ್ಟಿಪಲ್ ಎಂಟ್ರಿ ವೀಸಾವನ್ನು ಹೊಂದಿದೆಯೇ?

ಹೌದು, ನೀವು ಇವೀಸಾಗೆ ಅಪ್ಲಿಕೇಶನ್ ಸಲ್ಲಿಸುವಾಗ, ನೀವು 30-ದಿನದ ಮಲ್ಟಿಪಲ್ ನಿರ್ಗಮನ ಮತ್ತು ಮಲ್ಟಿಪಲ್ ಪ್ರವೇಶ ವೀಸಾಕ್ಕೆ ಅರ್ಹರಾಗುತ್ತೀರಿ.

ಮಲೇಷ್ಯಾಕ್ಕೆ ಟ್ರಾವೆಲ್ ಇನ್ಶೂರೆನ್ಸ್ ಪಡೆಯುವುದು ಅಗತ್ಯವೇ?

ಹೌದು. ನೀವು ಟ್ರಾವೆಲ್ ಇನ್ಶೂರೆನ್ಸ್ ವಿವರಗಳನ್ನು ಸಲ್ಲಿಸಿದಾಗ ನಿಮ್ಮ ವೀಸಾ ಅಪ್ರುವಲ್ ಸಾಧ್ಯತೆಗಳು ಹೆಚ್ಚಾಗಿರುತ್ತವೆ.