ಭಾರತದಿಂದ ಜಪಾನ್ ಟೂರಿಸ್ಟ್ ವೀಸಾ
ಭಾರತೀಯರಿಗೆ ಜಪಾನ್ ಟೂರಿಸ್ಟ್ ವೀಸಾ ಬಗ್ಗೆ ಸಂಪೂರ್ಣ ಮಾಹಿತಿ
ಜಪಾನ್ ಏಷ್ಯಾ ಖಂಡಕ್ಕೆ ಸೇರಿದೆ ಮತ್ತು ಅದರ ವಿಭಿನ್ನ ಸಂಸ್ಕೃತಿ ಮತ್ತು ಸಂಪ್ರದಾಯಗಳ ವಿಚಾರದಿಂದಾಗಿ ಬಹಳ ವಿಶಿಷ್ಟವಾಗಿದೆ. ಇದು ಪ್ರತ್ಯೇಕವಾದ ದ್ವೀಪ-ರಾಷ್ಟ್ರದಲ್ಲಿ ನೆಲೆಗೊಂಡಿರುವ ದೇಶವಾಗಿದೆ, ಇದು ಬಹುಶಃ ಪ್ರಪಂಚದ ಉಳಿದ ಭಾಗಗಳಿಗಿಂತ ಭಿನ್ನವಾಗಿದೆ. ಜಪಾನ್ ತನ್ನ ವಿಶಿಷ್ಟವಾದ ಚೆರ್ರಿ ಹೂವಿನ ಉದ್ಯಾನಗಳು, ಶಿಲ್ಪಗಳು ಮತ್ತು ಕಾವ್ಯಗಳಿಗೆ ಹೆಸರುವಾಸಿಯಾಗಿದೆ. ಇದು ಹತ್ತು ಜನಪ್ರಿಯ ಪ್ರವಾಸಿ ಡೆಸ್ಟಿನೇಷನ್‌ಗಳಿಗೆ ನೆಲೆಯಾಗಿದೆ, ಇದು ಒಳಗೊಂಡಿರುವ ಮೌಂಟ್ ಫ್ಯೂಜಿ ಅದರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ಹಿರೋಷಿಮಾ ಪೀಸ್ ಮೆಮೋರಿಯಲ್ ಪಾರ್ಕ್, ಒಸಾಕಾ ಕ್ಯಾಸಲ್ ಮತ್ತು ದಿ ಐಲ್ಯಾಂಡ್ ಶ್ರೈನ್ ಆಫ್ ಇಟ್ಸುಕುಶಿಮಾ ಸೇರಿದಂತೆ ಕೆಲವು ಸ್ಥಳಗಳು ಅದರ ಇನ್ನಿತರ ಪ್ರಸಿದ್ಧ ಆಕರ್ಷಣೆಗಳು. ಜಪಾನ್‌ಗೆ ಪ್ರಯಾಣಿಸಲು ಉತ್ತಮ ಸಮಯವೆಂದರೆ ಮಾರ್ಚ್‌ನಿಂದ ಮೇ ಮತ್ತು ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ.
ಭಾರತೀಯರಿಗೆ ಜಪಾನ್‌ಗೆ ವೀಸಾ ಅವಶ್ಯವೇ?
ಹೌದು, ಎಲ್ಲಾ ಭಾರತೀಯ ಪಾಸ್‌ಪೋರ್ಟ್ ಹೋಲ್ಡರ್‌ಗಳಿಗೆ ಜಪಾನ್‌ಗೆ ಭೇಟಿ ನೀಡಲು ವೀಸಾ ಪಡೆಯುವುದು ಕಡ್ಡಾಯವಾಗಿದೆ.
ಭಾರತೀಯ ನಾಗರಿಕರಿಗೆ ಜಪಾನ್‌ನಲ್ಲಿ ವೀಸಾ ಆನ್ ಅರೈವಲ್ ಇದೆಯೇ?
ಇಲ್ಲ, ದುರದೃಷ್ಟವಶಾತ್ ಜಪಾನ್‌ಗೆ ಪ್ರಯಾಣಿಸುವ ಭಾರತೀಯ ಪಾಸ್‌ಪೋರ್ಟ್ ಹೋಲ್ಡರ್‌ಗಳಿಗೆ ಯಾವುದೇ ವೀಸಾ ಆನ್ ಅರೈವಲ್ ಲಭ್ಯವಿಲ್ಲ. ನಿಮ್ಮ ಜಪಾನ್ ವೀಸಾಕ್ಕೆ ನೀವು ಅಪ್ಲೈ ಮಾಡಿದಾಗಿನಿಂದ ನಿರ್ಗಮನ ಪ್ಲಾನ್ ಮಾಡಿದ ದಿನಾಂಕದವರೆಗೆ ನೀವು ಕೈಯಲ್ಲಿ ಸುಮಾರು 60-90 ದಿನಗಳನ್ನು ಹೊಂದಿರಬೇಕು ಎಂಬುದನ್ನು ನೆನಪಿನಲ್ಲಿಡಿ.
ಜಪಾನ್ ಟೂರಿಸ್ಟ್ ವೀಸಾಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಇತ್ತೀಚೆಗೆ, ಜಪಾನ್ ಭಾರತೀಯರ ಅತ್ಯಂತ ಜನಪ್ರಿಯ ಪ್ರವಾಸಿ ಡೆಸ್ಟಿನೇಷನ್‌ಗಳಲ್ಲಿ ಒಂದಾಗಿದೆ. ಮೊದಲು, ಜಪಾನ್‌ಗೆ ಟೂರಿಸ್ಟ್ ವೀಸಾ ಪಡೆದುಕೊಳ್ಳುವುದು ತುಂಬಾ ಸುಲಭವಾಗಿರಲಿಲ್ಲ. ಆದರೆ ನಂತರ, ಜಪಾನಿನ ಎಂಬೆಸಿಯು ವೀಸಾ ನಿಯಮಗಳಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಿತು. ನೀವು ಜಪಾನ್‌ಗೆ ಟೂರಿಸ್ಟ್ ವೀಸಾಗೆ ಅಪ್ಲೈ ಮಾಡುವ ಮೊದಲು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.
ಜಪಾನ್‌ಗೆ ಆಗಮಿಸಿದ ದಿನಾಂಕದಿಂದ 6 ತಿಂಗಳವರೆಗಿನ ವ್ಯಾಲಿಡಿಟಿ ಹೊಂದಿರುವ ಒರಿಜಿನಲ್ ಪಾಸ್‌ಪೋರ್ಟ್.
ಮ್ಯಾಟ್ ಫಿನಿಶ್ ಬಿಳಿ ಬ್ಯಾಕ್‌ಗ್ರೌಂಡ್‌ನಲ್ಲಿ ಎರಡು ಬಣ್ಣದ ಫೋಟೋಗಳು.
ದೃಢೀಕೃತ ವಿಮಾನ ಟಿಕೆಟ್‌ಗಳು.
ಸೂಕ್ತ ವಿವರಗಳೊಂದಿಗೆ ಸರಿಯಾಗಿ ಭರ್ತಿ ಮಾಡಿರುವ ವೀಸಾ ಅಪ್ಲಿಕೇಷನ್.
ನಿಮ್ಮ ಪ್ರಯಾಣದ ವಿವರ
ಅಭ್ಯರ್ಥಿಯು ಉದ್ಯೋಗದಲ್ಲಿದ್ದರೆ ಕಳೆದ 3 ತಿಂಗಳ ಸ್ಯಾಲರಿ ಸ್ಲಿಪ್.
ಅಭ್ಯರ್ಥಿಯು ಉದ್ಯೋಗದಲ್ಲಿದ್ದರೆ ಎಂಪ್ಲಾಯ್‌ಮೆಂಟ್ ಸರ್ಟಿಫಿಕೇಟ್.
ಬ್ಯಾಂಕ್ ಅಧಿಕಾರಿಗಳಿಂದ ಸಹಿ ಮತ್ತು ಸ್ಟ್ಯಾಂಪ್ ಮಾಡಲಾದ ಕಳೆದ 6 ತಿಂಗಳುಗಳ ಒರಿಜಿನಲ್ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು.
ಕಳೆದ 3 ವರ್ಷಗಳಲ್ಲಿ ಫೈಲ್ ಮಾಡಿರುವ ಐಟಿಆರ್ ಅಥವಾ ಫಾರ್ಮ್ 16.
ಶಾಲೆ/ಕಾಲೇಜು/ಕಚೇರಿಯಿಂದ ಒರಿಜಿನಲ್ ಲೀವ್ ಲೆಟರ್.
ಅಪ್ಲಿಕೆಂಟ್ ವಿದ್ಯಾರ್ಥಿಯಾಗಿದ್ದರೆ, ನಿಮ್ಮ ಕಾಲೇಜು/ಸ್ಕೂಲ್ ಐಡಿ.
ಅಪ್ಲಿಕೆಂಟ್ ನಿವೃತ್ತ ವೃತ್ತಿಪರರಾಗಿದ್ದರೆ, ಪಿಂಚಣಿ ಪಾಸ್‌ಬುಕ್.
ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ.
ಭಾರತೀಯ ನಾಗರಿಕರಿಗೆ ಜಪಾನ್ ವೀಸಾ ಶುಲ್ಕಗಳು
ಭಾರತೀಯ ನಾಗರಿಕರು ಎಂಬೆಸಿಗೆ ಪಾವತಿಸಬೇಕಾದ ಅಪ್ಲಿಕೇಷನ್ ಶುಲ್ಕಗಳು, ಸಿಂಗಲ್ ಎಂಟ್ರಿಗಾಗಿ 3000 ಯೆನ್ ಹಾಗೂ ಡಬಲ್ ಮತ್ತು ಮಲ್ಟಿಪಲ್ ಎಂಟ್ರಿಗಳಿಗೆ 6000 ಯೆನ್. ಇದಲ್ಲದೆ, ಟೂರಿಸ್ಟ್ ವೀಸಾಗೆ 700 ಯೆನ್.
ಜಪಾನ್ ವೀಸಾಗೆ ಅಪ್ಲೈ ಮಾಡುವುದು ಹೇಗೆ?
ಭಾರತದಾದ್ಯಂತ ಪ್ರಮುಖ ನಗರಗಳಲ್ಲಿ ಸುಮಾರು 16 ವೀಸಾ ಅಪ್ಲಿಕೇಷನ್ ಸೆಂಟರ್‌ಗಳಿವೆ. ಜಪಾನಿನ ಪ್ರವಾಸಿ ವೀಸಾಗೆ ಅಪ್ಲೈ ಮಾಡುವ ಪ್ರೊಸೀಜರ್ ಅನುಸರಿಸಲು ಸರಳವಾಗಿದೆ.
ಜಪಾನ್ ಟೂರಿಸ್ಟ್ ವೀಸಾ ಪ್ರೊಸೆಸಿಂಗ್ ಸಮಯ
ವೀಸಾ ಪ್ರೊಸೆಸ್ ಮಾಡಲು ಜಪಾನ್ ಎಂಬೆಸಿಯು 5 ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತದೆ. ನೀವು ಅಪ್ಲಿಕೇಶನ್ ಅನ್ನು ಡಿಪೋಸಿಟ್ ಮಾಡುವ ದಿನವನ್ನು ಇದರಿಂದ ಹೊರತುಪಡಿಸಲಾಗಿದೆ.
ನಾನು ಜಪಾನ್‌ಗೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕೇ?
ಜಪಾನ್‌ಗೆ ಟ್ರಾವೆಲ್ ಇನ್ಶೂರೆನ್ಸ್ ಪಡೆಯುವುದನ್ನು ವಿಶೇಷವಾಗಿ ಶಿಫಾರಸು ಮಾಡಲಾಗಿದೆ. ಇನ್ಶೂರ್ಡ್‌ಗೆ ವಿದೇಶದಲ್ಲಿ ಮೆಡಿಕಲ್ ಚಿಕಿತ್ಸೆ ಅಥವಾ ಹಾಸ್ಪಿಟಲೈಸೇಷನ್ ಅವಶ್ಯ ಬಿದ್ದ ಸಂದರ್ಭದಲ್ಲಿ ಮೆಡಿಕಲ್ ವೆಚ್ಚವನ್ನು ನಿಗ್ರಹಿಸಲು ಇದು ಸಹಾಯ ಮಾಡುತ್ತದೆ. ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಮೂಲಕ ನೀವು ಪಡೆಯಬಹುದಾದ ಇತರ ಪ್ರಯೋಜನಗಳೆಂದರೆ:
ಟ್ರಾವೆಲ್ ಇನ್ಶೂರೆನ್ಸ್ ಅನ್ನು ಆಯ್ಕೆಮಾಡುವಾಗ, ನಿಮಗೆ ಅಗತ್ಯವಿರುವ ಎಲ್ಲವನ್ನೂ ನಿಮ್ಮ ಪಾಲಿಸಿ ಕವರ್ ಮಾಡುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಎಲ್ಲಾ ಕವರ್‌ಗಳು ಮತ್ತು ಪ್ರಯೋಜನಗಳನ್ನು ಓದಿ ತಿಳಿದುಕೊಳ್ಳಿ.