ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
ಹಾಂಗ್ ಕಾಂಗ್ ಭಾರತೀಯರಿಗೆ ಅತ್ಯಂತ ಜನಪ್ರಿಯ ಇಂಟರ್ನ್ಯಾಷನಲ್ ಟೂರಿಸ್ಟ್ ಡೆಸ್ಟಿನೇಷನ್ ಆಗಿದೆ. 2019 ರ ಜನವರಿ ಮತ್ತು ಮಾರ್ಚ್ ತಿಂಗಳ ನಡುವೆ ಭಾರತೀಯ ಟೂರಿಸ್ಟ್ ಸಂಖ್ಯೆಯಲ್ಲಿ 7.32% ಏರಿಕೆಯಾಗಿದೆ. (1)
ಈಗ, ನೀವು ಮುಂದಿನ ದಿನಗಳಲ್ಲಿ ಹಾಂಗ್ ಕಾಂಗ್ಗೆ ವಿಸಿಟ್ ಮಾಡಲು ಪ್ಲ್ಯಾನಿಂಗ್ ಮಾಡುತ್ತಿರುವವರಲ್ಲಿ ಒಬ್ಬರಾಗಿದ್ದರೆ, ನೀವು ಈ ದೇಶಕ್ಕೆ ಟ್ರಾವೆಲ್ ಮಾಡಲು ಅಗತ್ಯವಿರುವ ಅತ್ಯಂತ ಪ್ರಮುಖವಾದ ಡಾಕ್ಯುಮೆಂಟ್ - ವೀಸಾದ ಬಗ್ಗೆ ಮೊದಲು ನೀವು ನಿಮ್ಮನ್ನು ಅಪ್ಡೇಟ್ ಮಾಡಿಕೊಳ್ಳುವುದು ಬಹಳ ಮುಖ್ಯ!
ಇಲ್ಲ, ಇಂಡಿಯನ್ ಪಾಸ್ಪೋರ್ಟ್ ಹೋಲ್ಡರ್ಗಳು 14 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಗಾಗಿ ಈ ದೇಶಕ್ಕೆ ವಿಸಿಟ್ ಮಾಡುತ್ತಿದ್ದರೆ ಹಾಂಗ್ ಕಾಂಗ್ಗೆ ಟ್ರಾವೆಲ್ ಮಾಡಲು ವೀಸಾದ ಅಗತ್ಯವಿಲ್ಲ. ಈ ಸಂದರ್ಭದಲ್ಲಿ, ಭಾರತೀಯರು ಪ್ರೀ-ಅರೈವಲ್ ರಿಜಿಸ್ಟ್ರೇಷನ್ (ಪಿಎಆರ್) ಮೂಲಕ ಹಾಂಗ್ ಕಾಂಗ್ನಲ್ಲಿ ವೀಸಾ-ಫ್ರೀ ಎಂಟ್ರಿಗೆ ಅವಕಾಶ ಹೊಂದಿದ್ದಾರೆ.
ಆದಾಗ್ಯೂ, ವ್ಯಕ್ತಿಯೋಬ್ಬರು ಹಾಂಗ್ ಕಾಂಗ್ನಲ್ಲಿ ತಮ್ಮ ವಾಸ್ತವ್ಯವನ್ನು 14 ದಿನಗಳಿಗಿಂತ ಹೆಚ್ಚು ಕಾಲ ಎಕ್ಸ್ಟೆಂಡ್ ಮಾಡಲು ಬಯಸಿದರೆ, ಅವನು/ಅವಳು ವೀಸಾಕ್ಕೆ ಅಪ್ಲೈ ಮಾಡಬೇಕಾಗುತ್ತದೆ.
ಇಲ್ಲ, ಹಾಂಗ್ ಕಾಂಗ್ ಇಂಡಿಯನ್ ಪಾಸ್ಪೋರ್ಟ್ ಹೋಲ್ಡರ್ಗಳಿಗೆ ವೀಸಾ ಆನ್ ಅರೈವಲ್ ಸೌಲಭ್ಯವನ್ನು ನೀಡುವುದಿಲ್ಲ. ಭಾರತೀಯರು ಪ್ರೀ-ಅರೈವಲ್ ರಿಜಿಸ್ಟ್ರೇಷನ್ ಫಾರ್ಮ್ಯಾಲಿಟಿಗಳನ್ನು ಪೂರ್ಣಗೊಳಿಸಿದರೆ ಮಾತ್ರ, ಈ ದೇಶಕ್ಕೆ ಎಂಟ್ರಿ ಪಡೆಯಬಹುದು.
ಇದಲ್ಲದೆ, 14 ದಿನಗಳಿಗಿಂತ ಹೆಚ್ಚು ಕಾಲ ದೇಶದಲ್ಲಿ ಉಳಿಯಲು ಬಯಸುವವರು ಹಾಂಗ್ ಕಾಂಗ್ ಎಮಿಗ್ರೇಶನ್ ಡಿಪಾರ್ಟ್ಮೆಂಟ್ ಮೂಲಕ ನೇರವಾಗಿ ಎಮಿಗ್ರೇಶನ್ ವೀಸಾಗಾಗಿ ಅಪ್ಲೈ ಮಾಡಬೇಕು.
ಹಾಂಗ್ ಕಾಂಗ್ಗೆ 14 ದಿನಗಳಿಗಿಂತ ಕಡಿಮೆ ಅವಧಿಗಾಗಿ ವಿಸಿಟ್ ಮಾಡುವ ಭಾರತೀಯರು ಆ ದೇಶದಲ್ಲಿ ಎಂಟ್ರಿ ಪಡೆಯಲು, ಆನ್ಲೈನ್ನಲ್ಲಿ ಪ್ರೀ-ಅರೈವಲ್ ರಿಜಿಸ್ಟ್ರೇಷನ್ (ಪಿಎಆರ್) ಅನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಒನ್-ಟೈಮ್ ಪಿಎಆರ್ ಮೂಲಕ ಇಂಡಿಯನ್ ಪಾಸ್ಪೋರ್ಟ್ ಹೋಲ್ಡರ್ಗಳು 6 ತಿಂಗಳ ಅವಧಿಯಲ್ಲಿ ಹಾಂಗ್ ಕಾಂಗ್ಗೆ ಮಲ್ಟಿಪಲ್ ಎಂಟ್ರಿಗಳ ಸೌಲಭ್ಯವನ್ನು ಆನಂದಿಸಬಹುದು, ಅದಕ್ಕಾಗಿ ಅವರು ಸತತ 14 ದಿನಗಳಿಗಿಂತ ಹೆಚ್ಚು ಕಾಲ ದೇಶದಲ್ಲಿ ಉಳಿಯುವುದಿಲ್ಲ ಎಂದು ನಮೂದಿಸಬೇಕು.
ವ್ಯಕ್ತಿಗಳು ಭಾರತೀಯರಿಗಾಗಿ ಹಾಂಗ್ ಕಾಂಗ್ ವೀಸಾದ ಬದಲಿಗೆ ಪಿಎಆರ್ (ಪ್ರೀ-ಅರೈವಲ್ ರಿಜಿಸ್ಟ್ರೇಷನ್) ನಲ್ಲಿ ತಮ್ಮನ್ನು ಎನ್ರೋಲ್ ಮತ್ತು ರಿಜಿಸ್ಟರ್ ಮಾಡಿಕೊಳ್ಳಬೇಕು. ಹಾಗೂ ಹಾಂಗ್ ಕಾಂಗ್ಗೆ ಎಂಟ್ರಿ ಪಡೆಯಲು ಎಮಿಗ್ರೇಶನ್ ಡಿಪಾರ್ಟ್ಮೆಂಟಿನ ಯಶಸ್ವಿ ರಿಜಿಸ್ಟ್ರೇಷನ್ ನಂತರ ಜನರೇಟ್ ಮಾಡಲಾದ ಸ್ಲಿಪ್ ಅನ್ನು ತೋರಿಸಬೇಕು.
ಕೆಳಗೆ ತಿಳಿಸಲಾದ ಕೆಟಗರಿಗಳಲ್ಲಿ ಸೇರಿಸಲಾದ ಭಾರತೀಯ ನಾಗರಿಕರು ಹಾಂಗ್ ಕಾಂಗ್ಗೆ ವಿಸಿಟ್ ಮಾಡಲು ಪಿಎಆರ್ ನ ಅಗತ್ಯವಿಲ್ಲ,. ಬದಲಿಗೆ ಅವರು ಈ ಕೆಳಗಿನ ಸಾಮಾನ್ಯ ಎಮಿಗ್ರೇಶನ್ ಅವಶ್ಯಕತೆಗಳನ್ನು ಪೂರೈಸಿಬೇಕು:
ಅಧಿಕೃತ ಪಾಸ್ಪೋರ್ಟ್ ಹೊಂದಿರುವ ಭಾರತೀಯರು.
ಡಿಪ್ಲೊಮ್ಯಾಟಿಕ್ ಪಾಸ್ಪೋರ್ಟ್ ಹೊಂದಿರುವ ಭಾರತೀಯರು.
ವಿಶ್ವಸಂಸ್ಥೆಯ ಲೈಸೆಜ್-ಪಾಸರ್ (ಅಧಿಕೃತ ವಿಶ್ವಸಂಸ್ಥೆಯ ಬಿಸಿನೆಸ್ಗಾಗಿ ಹಾಂಗ್ ಕಾಂಗ್ಗೆ ವಿಸಿಟ್ ಮಾಡುವ ವ್ಯಕ್ತಿಗಳು) ಹೊಂದಿರುವವರು.
ಇ-ಚಾನೆಲ್ ಸರ್ವೀಸ್ಗೆ ಎನ್ರೋಲ್ ಆಗಿರುವ ವ್ಯಕ್ತಿಗಳು.
ಹಾಂಕ್ ಕಾಂಗ್ ಟ್ರಾವೆಲ್ ಪಾಸ್ ಹೋಲ್ಡರ್ಗಳು.
ಇಂಡಿಯನ್ ಪಾಸ್ಪೋರ್ಟ್ ಹೋಲ್ಡರ್ಗಳಿಗೆ ಪಿಎಆರ್ ಗಾಗಿ ಯಾವುದೇ ಫೀಸ್ ಅನ್ನು ಚಾರ್ಜ್ ಮಾಡುವುದಿಲ್ಲ. ಆದಾಗ್ಯೂ, 14 ದಿನಗಳಿಗಿಂತ ಹೆಚ್ಚು ಕಾಲ ಉಳಿಯಲು ಬಯಸುವವರು ಮತ್ತು ಅದಕ್ಕಾಗಿ ವೀಸಾ ಪಡೆಯಬೇಕಾದವರು ಕೆಳಗಿನ ಟೇಬಲ್ನಲ್ಲಿ ವಿವರಿಸಿದಂತೆ ನಿಗದಿತ ವೀಸಾ ಫೀಸ್ ಅನ್ನು ಪಾವತಿಸಬೇಕಾಗುತ್ತದೆ:
ವೀಸಾದ ವಿಧ |
ಫೀಸ್ |
ಪಿಎಆರ್ |
- |
ಎಮಿಗ್ರೇಶನ್ ವೀಸಾ |
HKD 1826.61 ಇದು ಸರಿಸುಮಾರು ₹18,978 ಆಗುತ್ತದೆ. |
ಪಿಎಆರ್ ಗಾಗಿ, ಭಾರತೀಯರು ಮೊದಲು ಈ ಕೆಳಗಿನ ಅವಶ್ಯಕತೆಗಳನ್ನು ಪೂರೈಸಬೇಕು:
ಅವರು ಹಾಂಗ್ ಕಾಂಗ್ಗೆ ಎಂಟ್ರಿ ಪಡೆದ ಸಮಯದಿಂದ ಕನಿಷ್ಠ 6 ತಿಂಗಳ ಅವಧಿಯವರೆಗೆ ವ್ಯಾಲಿಡ್ ಆಗಿರುವ ಇಂಡಿಯನ್ ಪಾಸ್ಪೋರ್ಟ್ ಅನ್ನು ಹೊಂದಿರಬೇಕು.
ನೋಟಿಫಿಕೇಶನ್ ಸ್ಲಿಪ್ ಅನ್ನು ಸ್ವೀಕರಿಸಲು ವ್ಯಾಲಿಡ್ ಆಗಿರುವ ಇಮೇಲ್ ಐಡಿಯನ್ನು ಹೊಂದಿರಬೇಕು.
ಪ್ರೀ-ಅರೈವಲ್ ರಿಜಿಸ್ಟ್ರೇಷನ್ಗಾಗಿ, ಒಬ್ಬ ಭಾರತೀಯ ಪ್ರಜೆಯು ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಬೇಕು:
ಹಾಂಗ್ ಕಾಂಗ್ನ ಆಫೀಶಿಯಲ್ ಎಮಿಗ್ರೇಶನ್ ಡಿಪಾರ್ಟ್ಮೆಂಟ್ ವೆಬ್ಸೈಟ್ಗೆ ಭೇಟಿ ನೀಡಿ.
ಅಗತ್ಯವಿರುವ ಎಲ್ಲಾ ವಿವರಗಳನ್ನು ಸಬ್ಮಿಟ್ ಮಾಡುವ ಮೂಲಕ ಪಿಎಆರ್ ಗಾಗಿ ರಿಜಿಸ್ಟ್ರೇಷನ್ ಫಾರ್ಮ್ ಅನ್ನು ಭರ್ತಿ ಮಾಡಿ.
ವಿವರಗಳನ್ನು ಸಬ್ಮಿಟ್ ಮಾಡಿದ ನಂತರ, ವೆಬ್ಸೈಟ್ನಲ್ಲಿ ಡಿಸ್ಪ್ಲೇ ಮಾಡಲಾದ ರಿಜಿಸ್ಟ್ರೇಷನ್ ಫಲಿತಾಂಶದೊಂದಿಗೆ, ನಿಮ್ಮ ವಿವರಗಳನ್ನು ಸಿಸ್ಟಮ್ ತಕ್ಷಣವೇ ಪ್ರೊಸೆಸ್ ಮಾಡುತ್ತದೆ.
ವೆಬ್ಸೈಟ್ನಲ್ಲಿ ಬಿಳಿ A4 ಸೈಜಿನ ಹಾಳೆಯಲ್ಲಿ ಪಿಎಆರ್ ಗಾಗಿ ಡಿಸ್ಪ್ಲೇ ಮಾಡಲಾದ ನೋಟಿಫಿಕೇಶನ್ ಸ್ಲಿಪ್ನ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ನೀವು ದೇಶಕ್ಕೆ ಆಗಮಿಸಿದ ನಂತರ ಎಮಿಗ್ರೇಷನ್ ಕೌಂಟರ್ನಲ್ಲಿ ನೋಟಿಫಿಕೇಶನ್ ಸ್ಲಿಪ್ನ ಈ ಪ್ರಿಂಟ್ ಔಟ್ ಅನ್ನು ನೀವು ತೋರಿಸಬೇಕು. ನಂತರ ಎಮಿಗ್ರೇಷನ್ ಕೌಂಟರ್ ಹಾಂಗ್ ಕಾಂಗ್ಗೆ ವಿಸಿಟ್ ಮಾಡಲು ನಿಮಗೆ ಅನುಮತಿ ನೀಡುತ್ತದೆ.
ಹಾಂಗ್ ಕಾಂಗ್ನಲ್ಲಿ 14 ದಿನಗಳಿಗಿಂತ ಹೆಚ್ಚು ಕಾಲ ಉಳಿಯಲು ಬಯಸುವ ಮತ್ತು ವೀಸಾವನ್ನು ಪಡೆಯಲು ಬಯಸುವ ಯಾವುದೇ ಭಾರತೀಯರಿಂದ ಈ ಅವಶ್ಯಕತೆಯನ್ನು ಪೂರೈಸಬೇಕು. ಯಾರ ಪಿಎಆರ್ ರಿಕ್ವೆಸ್ಟ್ ರಿಜೆಕ್ಟ್ ಆಗಿರುತ್ತದೆಯೋ, ಅವರಿಗೂ ಸಹ ಇದು ಅನ್ವಯಿಸುತ್ತದೆ.
ವೀಸಾ ಅಪ್ಲಿಕೇಶನ್ ಅನ್ನು ನೇರವಾಗಿ ಹಾಂಗ್ ಕಾಂಗ್ ಎಮಿಗ್ರೇಶನ್ ಡಿಪಾರ್ಟ್ಮೆಂಟಿಗೆ ಮಾಡಬೇಕು ಮತ್ತು HKD190 ರ ವೀಸಾ ಫೀಸ್ ಅನ್ನು ಬ್ಯಾಂಕ್ ಡ್ರಾಫ್ಟ್ ಮೂಲಕ ಪಾವತಿಸಬೇಕಾಗುತ್ತದೆ.
ವೀಸಾಗಾಗಿ ಅಪ್ಲೈ ಮಾಡಲು 2 ಪ್ರತ್ಯೇಕ ಸೆಟ್ಗಳ ಸಬ್ಮಿಶನ್ಗಳು ಅಗತ್ಯವಾಗಿವೆ. ಹಾಂಗ್ ಕಾಂಗ್ನಲ್ಲಿ ನೆಲೆಸಿರುವ ಅಪ್ಲಿಕೆಂಟ್ ಮತ್ತು ಅಪ್ಲಿಕೆಂಟ್ನ ಸ್ಪಾನ್ಸರ್ ಆಗಿರುವವರು ಸಬ್ಮಿಟ್ ಮಾಡಬೇಕಾದ ಡಾಕ್ಯುಮೆಂಟುಗಳು.
ಹಾಂಗ್ ಕಾಂಗ್ ವೀಸಾಗಾಗಿ ಅಪ್ಲಿಕೆಂಟ್ ಸಬ್ಮಿಟ್ ಮಾಡಬೇಕಿರುವ ಡಾಕ್ಯುಮೆಂಟುಗಳು:
ಕವರ್ ಲೆಟರ್ ಜೊತೆಗೆ ಭರ್ತಿ ಮಾಡಿದ ಅಪ್ಲಿಕೇಶನ್ ಫಾರ್ಮ್.
ಹಾಂಗ್ ಕಾಂಗ್ನಲ್ಲಿ ನೆಲೆಸಿರುವ ಸ್ಪಾನ್ಸರ್ನೊಂದಿಗೆ ನಿಮಗಿರುವ ಸಂಬಂಧದ ಪ್ರೂಫ್.
ಅಪ್ಲಿಕೆಂಟ್ನ ಹಣಕಾಸಿನ ವಿವರ, ಅವರ ಮಾನಿಟರಿ ಅಕೌಂಟ್ ಮತ್ತು ಸಂಬಂಧಿತ ವಿವರಗಳು, ಟ್ಯಾಕ್ಸ್ ರಿಟರ್ನ್ಸ್, ಸ್ಯಾಲರಿ ಸ್ಲಿಪ್ಗಳು ಇತ್ಯಾದಿ.
ಅಪ್ಲಿಕೆಂಟ್ನ ಪಾಸ್ಪೋರ್ಟ್ನ ಮೊದಲ ಮತ್ತು ಕೊನೆಯ ಪೇಜಿನ ಕಾಪಿ.
ಫ್ಲೈಟ್ ಟಿಕೆಟ್ ಅಥವಾ ಅದೇ ರೀತಿಯ ಟ್ರಾನ್ಸ್ಪೋರ್ಟೇಶನ್ ವಿವರ.
ಪ್ರತಿಯಾಗಿ, ವೀಸಾ ಅಪ್ರುವಲ್ ಅನ್ನು ಪಡೆಯಲು ವಿಸಿಟರ್ಗಳ ಸ್ಪಾನ್ಸರ್ಗಳು, ಈ ಕೆಳಗಿನ ಡಾಕ್ಯುಮೆಂಟುಗಳನ್ನು ಸಬ್ಮಿಟ್ ಮಾಡಬೇಕು:
ಇನ್ವಿಟೇಶನ್ ಲೆಟರ್ನ ಕಾಪಿ.
ಭರ್ತಿ ಮಾಡಿದ ಅಪ್ಲಿಕೇಶನ್ ಫಾರ್ಮ್.
ಸ್ಪಾನ್ಸರ್ಗಳ ಪಾಸ್ಪೋರ್ಟ್ ಕಾಪಿ
ಮಾನಿಟರಿ ಅಕೌಂಟ್ಸ್, ಟ್ಯಾಕ್ಸ್ ರಿಟರ್ನ್ಸ್, ಇತ್ಯಾದಿ ಸೇರಿದಂತೆ ಸ್ಪಾನ್ಸರ್ಗಳ ಫೈನಾನ್ಸಿಯಲ್ ಸ್ಟೇಟ್ಮೆಂಟ್ಗಳು.
ಹಾಂಗ್ ಕಾಂಗ್ನಲ್ಲಿ ಸ್ಪಾನ್ಸರ್ಗಳ ವಸತಿ ಪ್ರೂಫ್.
ಭಾರತೀಯ ನಾಗರಿಕರು ಹಾಂಗ್ ಕಾಂಗ್ ವೀಸಾ ಅಪ್ಲಿಕೇಶನ್ ಅನ್ನು ನೇರವಾಗಿ ದೇಶದ ಎಮಿಗ್ರೇಶನ್ ಡಿಪಾರ್ಟ್ಮೆಂಟಿಗೆ ಮಾಡಬೇಕು.
ಹಾಗೆ ಮಾಡಲು, ಕೆಳಗೆ ತಿಳಿಸಲಾದ ಹಂತಗಳನ್ನು ಫಾಲೋ ಮಾಡಿ:
ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ. ಅಗತ್ಯವಿರುವ ವಿವರಗಳೊಂದಿಗೆ ಅದನ್ನು ಭರ್ತಿ ಮಾಡಿ.
ಅಪ್ಲಿಕೇಶನ್ ಫಾರ್ಮ್ಗೆ ಪಾಸ್ಪೋರ್ಟ್ ಸೈಜಿನ್ ಫೋಟೋಗಳು ಹಾಗೂ ಅಗತ್ಯವಿರುವ ಡಾಕ್ಯುಮೆಂಟುಗಳ ಹಾರ್ಡ್ ಕಾಪಿಯನ್ನು ಸೇರಿಸಿ ಮತ್ತು ಅಟ್ಯಾಚ್ ಮಾಡಿ.
ಎಲ್ಲಾ ಡಾಕ್ಯುಮೆಂಟುಗಳನ್ನು ಪೋಸ್ಟ್ ಅಥವಾ ಕೊರಿಯರ್ ಮೂಲಕ ಹಾಂಗ್ ಕಾಂಗ್ ಎಮಿಗ್ರೇಷನ್ ಡಿಪಾರ್ಟ್ಮೆಂಟಿಗೆ ಮೇಲ್ ಮಾಡಿ. (ಮೇಲಿಂಗ್ ಅಡ್ರೆಸ್ - ರಿಸಿಪ್ಟ್ ಅಂಡ್ ಡೆಸ್ಪ್ಯಾಚ್ ಸಬ್-ಯುನಿಟ್, ಎಮಿಗ್ರೇಷನ್ ಡಿಪಾರ್ಟ್ಮೆಂಟಿಗೆ - 2/ಎಫ್, ಎಮಿಗ್ರೇಷನ್ ಟವರ್, 7 ಗ್ಲೌಸೆಸ್ಟರ್ ರೋಡ್, ವಾನ್ ಚಾಯ್, ಹಾಂಗ್ ಕಾಂಗ್)
ನೀವು ಬ್ಯಾಂಕ್ ಡ್ರಾಫ್ಟ್ ಮೂಲಕ HKD190 ಪಾವತಿಯನ್ನು ಸಹ ಮಾಡಬೇಕಾಗುತ್ತದೆ.
ವೀಸಾ ಅಪ್ರುವಲ್ ಆದನಂತರ, ಹಾಂಗ್ ಕಾಂಗ್ ವೀಸಾ ಲೇಬಲ್ ಅನ್ನು ನಿಮಗೆ ಮರಳಿ ಮೇಲ್ ಮಾಡಲಾಗುತ್ತದೆ. ಅದನ್ನು ನೀವು ನಿಮ್ಮ ಪಾಸ್ಪೋರ್ಟ್ಗೆ ಅಟ್ಯಾಚ್ ಮಾಡಬೇಕು.
ಹಾಂಗ್ ಕಾಂಗ್ನ ಎಮಿಗ್ರೇಷನ್ ಡಿಪಾರ್ಟ್ಮೆಂಟ್ ಮೂಲಕ ವೀಸಾ ಪ್ರೊಸೆಸಿಂಗ್ ಟೈಮ್, ಸುಮಾರು 3-4 ವಾರಗಳಾಗುತ್ತದೆ.
ಹೆಚ್ಚಿನ ವಿಚಾರಣೆಗಾಗಿ, ನೀವು ಹಾಂಗ್ ಕಾಂಗ್ ಎಮಿಗ್ರೇಷನ್ ಡಿಪಾರ್ಟ್ಮೆಂಟ್ ಅನ್ನು ಇಲ್ಲಿ ಸಂಪರ್ಕಿಸಬಹುದು:
ಇಮೇಲ್ - enquiry@immd.gov.hk
ದೂರವಾಣಿ - +852-2824-611
ಆದ್ದರಿಂದ, ಇಂಡಿಯನ್ ಪಾಸ್ಪೋರ್ಟ್ ಹೋಲ್ಡರ್ಗಳು ಹಾಂಗ್ ಕಾಂಗ್ ವೀಸಾ ಅಪ್ಲಿಕೇಶನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲ ಮಾಹಿತಿಯೂ ಇಲ್ಲಿದೆ.
ಆದರೆ, ನೀವು ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಲು ಯೋಚಿಸಿದ್ದೀರಾ?
ಹಾಂಗ್ ಕಾಂಗ್ಗೆ ವಿಸಿಟ್ ಮಾಡುವ ಮೊದಲು ಭಾರತೀಯರು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವುದು ಕಡ್ಡಾಯವಲ್ಲದಿದ್ದರೂ, ಅದನ್ನು ಖರೀದಿಸುವಂತೆ ಸಲಹೆ ನೀಡಲಾಗುತ್ತದೆ.
ಉದಾಹರಣೆಗೆ, ಡಿಜಿಟ್ನಿಂದ ಹಾಂಗ್ ಕಾಂಗ್ಗಾಗಿ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ನಿಮಗೆ ಈ ಕೆಳಗಿನ ಪ್ರಯೋಜನಗಳನ್ನು ನೀಡುತ್ತದೆ:
$50,000 ಸಮ್ ಇನ್ಶೂರ್ಡ್ಗೆ ದಿನಕ್ಕೆ ₹225 (18% ಜಿ.ಎಸ್.ಟಿ ಅನ್ನು ಹೊರತುಪಡಿಸಿ) ಅತ್ಯಲ್ಪ ಪ್ರೀಮಿಯಂನಲ್ಲಿ ನೀವು ಡಿಜಿಟ್ನೊಂದಿಗೆ ಇವೆಲ್ಲವನ್ನೂ ಮತ್ತು ಇನ್ನೂ ಹೆಚ್ಚಿನದನ್ನು ಪಡೆಯಬಹುದು!
ಹಾಗಾದ್ರೆ, ಮತ್ತೆ ನೀವಿನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ? ನಿಮ್ಮ ಹಾಂಗ್ ಕಾಂಗ್ ಟ್ರಾವೆಲ್ ಇನ್ಶೂರೆನ್ಸ್ ಇಂದೇ ಪಡೆಯಿರಿ ಮತ್ತು ನಿಮ್ಮ ಟ್ರಿಪ್ ಅನ್ನು ಸುರಕ್ಷಿತಗೊಳಿಸಿ!