ಅದರ ಉಸಿರು-ಬಿಗಿಹಿಡಿಯುವ ಭೂದೃಶ್ಯಗಳು, ಎತ್ತರದ ಏರಿಕೆಗಳು, ಅದ್ಭುತ ಸ್ಕೈಲೈನ್ಗಳು, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಹಜವಾಗಿ ಅಲ್ಲಿನ ಪ್ರಸಿದ್ಧ ಮಾರುಕಟ್ಟೆಗಳಿಂದ! ಭಾರತದಿಂದ ತುಂಬಾ ದೂರದಲ್ಲಿ ಇಲ್ಲದಿದ್ದರೂ ಸಹ, ಚೀನಾ ದೇಶ ನಮ್ಮ ಸಂಸ್ಕೃತಿಗಿಂತ ಭಿನ್ನವಾದ ಸಂಸ್ಕೃತಿಯೊಂದಿಗೆ ಅದ್ಭುತ ಟ್ರಾವೆಲ್ ಅನುಭವವನ್ನು ನೀಡುತ್ತದೆ. ಇದನ್ನು ಆನಂದಿಸಲು, ಎಲ್ಲಾ ಭಾರತೀಯರು ತಮ್ಮ ಡಿಪಾರ್ಚರ್ ದಿನಾಂಕದ ಮೊದಲೇ ವೀಸಾ ಪಡೆಯಬೇಕು.
ಇಲ್ಲ, ಭಾರತೀಯರು ಚೀನಾದಲ್ಲಿ ವೀಸಾ ಆನ್ ಅರೈವಲ್ ಅನ್ನು ಪಡೆಯಲು ಅರ್ಹರಲ್ಲ. ದೇಶದೊಳಗೆ ಎಂಟ್ರಿ ಪಡೆಯಲು ನೀವು ವ್ಯಾಲಿಡ್ ಆಗಿರುವ ಪಾಸ್ಪೋರ್ಟ್ ಮತ್ತು ಟೂರಿಸ್ಟ್ ವೀಸಾವನ್ನು ಹೊಂದಿರಬೇಕು.
ಚೀನಾದ ಮೇನ್ಲ್ಯಾಂಡ್ಗೆ ಟ್ರಾವೆಲ್ ಮಾಡಲು ಭಾರತೀಯರಿಗೆ ಪಾವತಿಸಬೇಕಾದ ಫೀಸ್ ಈ ಕೆಳಗಿನಂತಿವೆ:
ಸಿಂಗಲ್ ಎಂಟ್ರಿ: ₹3900/-
ಡಬಲ್ ಎಂಟ್ರಿ: ₹5850/-
ನಿಮ್ಮ ಡಾಕ್ಯುಮೆಂಟುಗಳ ಸಂಪೂರ್ಣ ವೆರಿಫಿಕೇಶನ್ ನಂತರವೇ ನೀವು ಗವರ್ನಮೆಂಟ್ ಅಥವಾ ಎಂಬೆಸಿಯಿಂದ ನಿಮ್ಮ ವೀಸಾಗಾಗಿ ಅಪ್ರುವಲ್ ಅನ್ನು ಪಡೆಯುತ್ತೀರಿ. ಇವುಗಳು ಈ ಕೆಳಗಿನವುಗಳನ್ನು ಒಳಗೊಂಡಿರಬಹುದು:
ಚೀನಾಕ್ಕೆ ಆಗಮಿಸಿದ ದಿನಾಂಕದಿಂದ ಕನಿಷ್ಠ 6 ತಿಂಗಳವರೆಗೆ ವ್ಯಾಲಿಡ್ ಆಗಿರುವ ಒರಿಜಿನಲ್ ಪಾಸ್ಪೋರ್ಟ್.
ಹೋಗುವ ಮತ್ತು ರಿಟರ್ನ್ ಆಗಲು ಕನ್ಫರ್ಮ್ಡ್ ಏರ್ ಟಿಕೆಟ್ಗಳು.
ನೀವು ಚೀನಾದಲ್ಲಿ ಇರುವ ದಿನಗಳಿಗೆ, ದಿನವಹಿ ಐಟಿನರರಿ.
ಸರಿಯಾಗಿ ಭರ್ತಿ ಮಾಡಿ ಮತ್ತು ಸಹಿ ಮಾಡಲಾದ ವೀಸಾ ಅಪ್ಲಿಕೇಶನ್ ಫಾರ್ಮ್.
2 ಇತ್ತೀಚಿನ ಪಾಸ್ಪೋರ್ಟ್ ಸೈಜಿನ ಫೋಟೋಗಳು. ಫೋಟೋಗಳು 3 ತಿಂಗಳಿಗಿಂತ ಹಳೆಯದಾಗಿರಬಾರದು ಮತ್ತು ಮ್ಯಾಟ್ ಫಿನಿಶ್ನೊಂದಿಗೆ ವೈಟ್ ಬ್ಯಾಕ್ಗ್ರೌಂಡ್ ಅನ್ನು ಹೊಂದಿರಬೇಕು.
ವಿಸಿಟ್ ಮಾಡುವ ಸ್ಥಳಗಳ ಜೊತೆಗೆ ಟ್ರಾವೆಲ್ನ ಉದ್ದೇಶ ಮತ್ತು ದಿನಾಂಕಗಳನ್ನು ನಮೂದಿಸುವ ಕವರ್ ಲೆಟರ್.
ಸ್ಟ್ಯಾಂಪ್ ಮಾಡಲಾದ ಮತ್ತು ಸರಿಯಾಗಿ ಸಹಿ ಮಾಡಲಾದ ಕಳೆದ 6 ತಿಂಗಳುಗಳ ಒರಿಜಿನಲ್ ಬ್ಯಾಂಕ್ ಸ್ಟೇಟ್ಮೆಂಟ್ಗಳು. ಪ್ರತಿಯೊಬ್ಬ ಟ್ರಾವೆಲರ್ ಬ್ಯಾಂಕ್ ತಮ್ಮ ಅಕೌಂಟ್ನಲ್ಲಿ ಕನಿಷ್ಠ ₹1,50,000 ಗಳನ್ನು ಹೊಂದಿರಬೇಕು.
ಹೋಟೆಲ್ ಕನ್ಫರ್ಮೇಶನ್ ವಿವರಗಳು.
ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ.
ನೀವು ಭಾರತವನ್ನು ಬಿಡುವ ಮೊದಲು ನೀವು ಹೊಂದಿರಬೇಕಾದ ಮುಖ್ಯ ಡಾಕ್ಯುಮೆಂಟ್ ಎಂದರೆ, ಅದು ಟ್ರಾವೆಲ್ ಇನ್ಶೂರೆನ್ಸ್ ಆಗಿದೆ. ಮೆಡಿಕಲ್ ಎಮರ್ಜೆನ್ಸಿಗಳು, ಬ್ಯಾಗೇಜುಗಳ ನಷ್ಟ, ಪಾಸ್ಪೋರ್ಟ್ನ ನಷ್ಟ, ಬ್ಯಾಗೇಜುಗಳ ಡಿಲೇಗಳಂತಹ ಇತರ ಸಂದರ್ಭಗಳಲ್ಲಿ, ಈ ಪಾಲಿಸಿಯು ಆರ್ಥಿಕ ಬಿಕ್ಕಟ್ಟಿನಿಂದ ನಿಮ್ಮನ್ನು ಉಳಿಸುತ್ತದೆ. ನಿಮ್ಮ ಚೀನಾ ಟ್ರಿಪ್ಗೆ ಒಂದು ವ್ಯಾಲಿಡ್ ಟ್ರಾವೆಲ್ ಇನ್ಶೂರೆನ್ಸ್ ಏಕೆ ಬೇಕು ಎಂಬುದಕ್ಕೆ ಉತ್ತರ ಇಲ್ಲಿದೆ:
ಅಭ್ಯರ್ಥಿಯು, ಚೀನಾ ಎಂಬೆಸಿಯ ವೆಬ್ಸೈಟ್ಗೆ ಭೇಟಿ ನೀಡಬಹುದು. ವೀಸಾಗಾಗಿ ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ. ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
ಅಪ್ಲಿಕೇಶನ್ ಫಾರ್ಮ್ನೊಂದಿಗೆ ಸಬ್ಮಿಟ್ ಮಾಡಬೇಕಾದ ಅಗತ್ಯ ಡಾಕ್ಯುಮೆಂಟುಗಳನ್ನು ಚೆಕ್ ಮಾಡಿ.
ಎಲ್ಲಾ ಡಾಕ್ಯುಮೆಂಟುಗಳನ್ನು ಕಲೆಕ್ಟ್ ಮಾಡಿ ಮತ್ತು ಅವುಗಳನ್ನು ಅಪ್ಲೋಡ್ ಮಾಡಿ. ಒರಿಜಿನಲ್ ಡಾಕ್ಯುಮೆಂಟುಗಳನ್ನು ಸಬ್ಮಿಟ್ ಮಾಡಬೇಕೆಂಬುದನ್ನು ನೆನಪಿಡಿ.
ವೀಸಾ ಅಪ್ಲಿಕೇಶನ್ ಸೆಂಟರ್ ಅಥವಾ ಎಂಬೆಸಿಯಲ್ಲಿ ಅಪಾಯಿಂಟ್ಮೆಂಟ್ಗಾಗಿ ಸ್ಲಾಟ್ ಅನ್ನು ಬುಕ್ ಮಾಡಿ.
ವೆಬ್ಸೈಟ್ನಲ್ಲಿ ತಿಳಿಸಿದಂತೆ ವೀಸಾ ಫೀಸ್ ಅನ್ನು ಪಾವತಿಸಿ.
ಅಭ್ಯರ್ಥಿಯು ಇಂಟರ್ವ್ಯೂ ಇರುವ ದಿನಾಂಕದಂದು ಎಂಬೆಸಿಗೆ ಭೇಟಿ ನೀಡಬೇಕು.
ಅಧಿಕಾರಿಗಳ ಮಾರ್ಗದರ್ಶನದಂತೆ ಬಯೋಮೆಟ್ರಿಕ್ ಟೆಸ್ಟ್ ತೆಗೆದುಕೊಳ್ಳಿ.
ನಿಮ್ಮ ವೀಸಾವನ್ನು ಸ್ವೀಕರಿಸಿದರೂ/ತಿರಸ್ಕರಿಸಿದರೂ, ನಿಮ್ಮ ಪಾಸ್ಪೋರ್ಟ್ ಅನ್ನು ನೀವು ಕಲೆಕ್ಟ್ ಮಾಡಿಕೊಳ್ಳಿ.
ಸಾಮಾನ್ಯ ಸಂದರ್ಭಗಳಲ್ಲಿ ವೀಸಾ ಪ್ರೊಸೆಸಿಂಗ್ಗಾಗಿ ಸುಮಾರು 8 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ನೀವು ಎಕ್ಸ್ಪ್ರೆಸ್ ವೀಸಾವನ್ನು ಬಯಸಿದರೆ, ಅದಕ್ಕಾಗಿ ಹೆಚ್ಚಿನ ಫೀಸ್ ಚಾರ್ಜ್ ಮಾಡಲಾಗುತ್ತದೆ.