ಮೋಟಾರ್
ಹೆಲ್ತ್
ಮೋಟಾರ್
ಹೆಲ್ತ್
More Products
ಮೋಟಾರ್
ಹೆಲ್ತ್
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
Select Number of Travellers
24x7
Missed Call Facility
Affordable
Premium
1-Day Adventure
Activities Covered
Terms and conditions apply*
ಪ್ರಯಾಣವು ಹೀಲಿಂಗ್ ಥೆರಪಿಯಾಗಿದ್ದು, ಅದು ಮನಸ್ಸು ಮಾತ್ರವಲ್ಲ ಆತ್ಮವನ್ನೂ ಶಾಂತಗೊಳಿಸುತ್ತದೆ. ಪ್ರಕೃತಿ ಪ್ರಿಯರು ಮತ್ತು ಪದೇ ಪದೇ ಪ್ರಯಾಣ ಮಾಡುವವರು ಇಂಡೋನೇಷ್ಯನ್ ದ್ವೀಪಲ್ಲಿರುವ ಬಾಲಿಯನ್ನು ಅದರ ರಮಣೀಯ ಸೌಂದರ್ಯಕ್ಕಾಗಿ ಇಷ್ಟಪಡುತ್ತಾರೆ.
ರೊಟೀನ್ ಲೈಫ್ ಮತ್ತು ಒತ್ತಡದ ಕೆಲಸದಿಂದ ಪಾರಾಗಲು, ರಜಾದಿನಗಳಿಗೆ ಬಾಲಿ ಯುವಜನರ ಫೇವರಿಟ್ ಡೆಸ್ಟಿನೇಷನ್ ಆಗಿದೆ. ಇಂಡೋನೇಷ್ಯಾದಲ್ಲಿರುವ 1700 ದ್ವೀಪಗಳಲ್ಲಿ ಉಳಿದೆಲ್ಲಕ್ಕಿಂತ ಇದು ಅತ್ಯಂತ ಪ್ರಕಾಶಮಾನವಾದ ದ್ವೀಪವಾಗಿದೆ. ಬಹುತೇಕ ವರ್ಷಪೂರ್ತಿ ಇರುವ ಪ್ರವಾಸಿಗರ ರಶ್ನಿಂದಾಗಿ, ನೀವು ಪ್ರವಾಸವನ್ನು ಪ್ರೀ-ಪ್ಲಾನ್ ಮಾಡುವುದು ನಿಜಕ್ಕೂ ಅವಶ್ಯ.
ಉತ್ಸವ! ಮತ್ತು ಅದೂ ಬಾಲಿ, ಖಂಡಿತವಾಗಿಯೂ ಅದು ಕಿಕ್ ಕೊಡುವ ಅತ್ಯಂತ ಸಂತೋಷದಾಯಕ ಪ್ಲಾನ್ ಆಗಿದೆ. ಸಹಜ ಸುಂದರ ಬೀಚ್ಗಳಿಗೆ ಜನಪ್ರಿಯವಾಗಿದೆ, ನೀವು ವಾಟರ್ ಸ್ಪೋರ್ಟ್ಸ್, ಟ್ರೆಡಿಷನಲ್ ಆರ್ಟ್ ಮತ್ತು ಫುಡ್ನೊಂದಿಗೆ ಸಾಕಷ್ಟು ಅಣ್ವೇಷಣೆ ನಡೆಸಬಹುದು. ಮತ್ತು ನೀವು ಮಿಸ್ ಮಾಡದೆ ನಿಮ್ಮ ಟ್ರಿಪ್ ಗಾಗಿ ಹೇಗೆ ಪ್ರಿಪೇರ್ ಆಗಬಹುದು ಎಂಬುದು ಇಲ್ಲಿದೆ.
ಹೌದು, ಇಂಡೋನೇಷ್ಯಾಗೆ ಭಾರತೀಯರು 30 ದಿನಗಳ ವೀಸಾ ಆನ್ ಅರೈವಲ್ ಹೊಂದಿರುವುದು ಅವಶ್ಯ. ಅದನ್ನು ಪ್ರಾದೇಶಿಕ ಇಮಿಗ್ರೇಷನ್ ಆಫೀಸ್ ಮೂಲಕ ಹೆಚ್ಚುವರಿ 30 ದಿನಗಳಿಗೆ ವಿಸ್ತರಿಸಿಕೊಳ್ಳಬಹುದು. ನಿಮ್ಮ ಟ್ರಾವೆಲ್ ಉದ್ದೇಶದ ಪ್ರಕಾರ ನೀವು ವೀಸಾದ ವಿಧವನ್ನು ಆಯ್ಕೆ ಮಾಡಿಕೊಳ್ಳಬಹುದು. ಎಲ್ಲಾ ವೀಸಾ ಅಪ್ರೂವಲ್ಗಳನ್ನು ಡೈರೆಕ್ಟೋರೇಟ್ ಜನರಲ್ ಆಫ್ ಇಮಿಗ್ರೇಷನ್ ಮೂಲಕ ಮಾತ್ರ ನೀಡಲಾಗುತ್ತದೆ.
ಒಂದು ವೇಳೆ ನಿಮ್ಮ ಟ್ರಾವೆಲ್ ಅವಧಿಯು 30 ದಿನಗಳಿಗಿಂತ ಹೆಚ್ಚಿದ್ದರೆ ನಿಮಗೆ ವೀಸಾ ಅವಶ್ಯಕತೆ ಇದೆ. ನಿಮ್ಮ ಟ್ರಾವೆಲ್ ಉದ್ದೇಶದ ಪ್ರಕಾರ ನೀವು ವೀಸಾದ ವಿಧವನ್ನು ಆಯ್ಕೆ ಮಾಡಿಕೊಳ್ಳಬಹುದು.
ನಿಮ್ಮ ಟ್ರಾವೆಲ್ ಅವಧಿ 30 ದಿನಗಳಾಗಿದ್ದರೆ, ನೀವು ಇಂಡೋನೇಷ್ಯಾ ಪ್ರವೇಶಿಸುವಾಗ ವೀಸಾ ಆನ್ ಅರೈವಲ್ಗೆ ಅಪ್ಲೈ ಮಾಡಬಹುದು. ಇದನ್ನು ರೂ.. 2,680* (Rp 500,000. /SGD 50 /ಯುಎಸ್ಡಿ 35) ವೆಚ್ಚದಲ್ಲಿ ಹೆಚ್ಚುವರಿ 30 ದಿನಗಳಿಗೆ ವಿಸ್ತರಿಸಿಕೊಳ್ಳಬಹುದು.
ಒಂದು ವೇಳೆ ನಿಮ್ಮ ಟ್ರಾವೆಲ್ ಅವಧಿಯು 30 ದಿನಗಳಿಗಿಂತ ಹೆಚ್ಚಿದ್ದರೆ, ನೀವು ಇಂಡೋನೇಷ್ಯಾ ಪ್ರವೇಶಿಸುವಾಗ ವೀಸಾ ಆನ್ ಅರೈವಲ್ಗೆ ಅಪ್ಲೈ ಮಾಡಬಹುದು.
*ಡಿಸ್ಕ್ಲೈಮರ್: ಪ್ರಸ್ತುತ ಎಕ್ಸ್ಚೇಂಜ್ ರೇಟ್ ಪ್ರಕಾರ ಬದಲಾವಣೆಗೆ ಒಳಪಟ್ಟಿರುವುದರಿಂದ ಬೆಲೆಗಳು ಬದಲಾಗುತ್ತವೆ.
ವೀಸಾ ವಿಧ |
ದಿನಗಳ ಸಂಖ್ಯೆ |
ವಿವರಗಳು |
ಪ್ರವಾಸಿ |
30-60 ದಿನಗಳು |
ವೀಸಾ ಆನ್ ಅರೈವಲ್ ಶುಲ್ಕಗಳು IDR500,000, 30 ದಿನಗಳವರೆಗೆ ವಿಸ್ತರಿಸಿಕೊಳ್ಳಬಹುದು. |
ಸೋಷಿಯಲ್/ಕಲ್ಚರಲ್/ಟೂರಿಸ್ಟ್ -B211 |
60 ದಿನಗಳವರೆಗೆ ವ್ಯಾಲಿಡ್ |
30 ದಿನಗಳಿಗೆ 3 ಸಲ ವಿಸ್ತರಿಸಿಕೊಳ್ಳಬಹುದು. ಇಂಡೋನೇಷ್ಯಾದ ಹೊರಗೆ ಕಾನ್ಸುಲೇಟ್ ಅಥವಾ ಎಂಬೆಸಿಯಿಂದ ನೀಡಲಾಗುತ್ತದೆ. |
ಮಲ್ಟಿಪಲ್ ಎಂಟ್ರಿ ವೀಸಾ |
ಮಲ್ಟಿಪಲ್ ಎಂಟ್ರಿ ವೀಸಾ |
ಇಂಡೋನೇಷ್ಯಾದ ಹೊರಗೆ ಕಾನ್ಸುಲೇಟ್ ಅಥವಾ ಎಂಬೆಸಿಯಿಂದ ನೀಡಲಾಗುತ್ತದೆ. 1 ವರ್ಷಕ್ಕೆ ವ್ಯಾಲಿಡ್ |
ವೀಸಾ ವಿಧ |
ದಿನಗಳ ಸಂಖ್ಯೆ |
ಶುಲ್ಕಗಳು |
ಟೂರಿಸ್ಟ್ (ವೀಸಾ ಆನ್ ಅರೈವಲ್) |
30-60 |
● ರೂ. 2,680 ಅಥವಾ ಯುಎಸ್ಡಿ 35 ● ವಸತಿ ವಿಸ್ತರಣೆಗಾಗಿ, ಯಾರೇ ಭಾರತೀಯ ನಾಗರಿಕರು ಇಮಿಗ್ರೇಷನ್ ಹಾಲ್ನಲ್ಲಿ ರೂ. 4213 ಅಥವಾ ಯುಎಸ್ಡಿ 61.5 ಪಾವತಿಸಬೇಕು. ● ಒಂದು ವೇಳೆ ಏಜೆಂಟ್ ಸಹಾಯದಿಂದ ವಿಸ್ತರಣೆ ಅಪ್ಲೈ ಮಾಡಿದ್ದರೆ, ನೀವು ಅವರ ಶುಲ್ಕವಾಗಿ ರೂ..1817 ಅಥವಾ ಯುಎಸ್ಡಿ 26.50 ಪಾವತಿಸುವುದು ಅವಶ್ಯ. |
ಸೋಷಿಯಲ್/ಕಲ್ಚರಲ್ ಉದ್ದೇಶಗಳು |
30-60 ದಿನಗಳು |
● B-211 ವೀಸಾ ಅರೈವಲ್ ಸಮಯದಲ್ಲಿ ಖರೀದಿಸಬಹುದು. ● ಟ್ರಾವೆಲ್ ಏಜೆಂಟ್ ಆಗಿದ್ದರೂ ಪರವಾಗಿಲ್ಲ ಒಬ್ಬ ವೈಯಕ್ತಿಕ ಪ್ರಾಯೋಜಕರು ಅವಶ್ಯ. ● ವಿಸ್ತರಣೆ ಸಾಧ್ಯವಿದೆ, ಆದರೆ ಗರಿಷ್ಠ 3 ಸಲ. ● ವೀಸಾ ಮತ್ತು ಪ್ರತೀ ವಿಸ್ತರಣೆಗೆ ಬೆಲೆ ರೂ.4216 ಅಥವಾ ಯುಎಸ್ಡಿ 61.5. ● ಒಂದು ವೇಳೆ ಏಜೆಂಟ್ ಸಹಾಯದಿಂದ ವಿಸ್ತರಣೆ ಅಪ್ಲೈ ಮಾಡಿದ್ದರೆ, ನೀವು ಅವರ ಶುಲ್ಕವಾಗಿ ರೂ..1817 ಅಥವಾ ಯುಎಸ್ಡಿ 26.50 ಪಾವತಿಸುವುದು ಅವಶ್ಯ. |
ಬಿಸಿನೆಸ್ |
ಯಾವುದೇ ಆದರೆ 30 ದಿನಗಳಿಗಿಂತ ಹೆಚ್ಚು ಇಲ್ಲ |
ರೂ. 2900 ಅಥವಾ ಯುಎಸ್ಡಿ 42.30 |
ಬಾಲಿ ವೀಸಾಗೆ ಬೇಕಾದ ಮೊದಲ ಮತ್ತು ಅತಿಮುಖ್ಯ ಬೇಸಿಕ್ ಡಾಕ್ಯುಮೆಂಟ್ ಪಾಸ್ಪೋರ್ಟ್. ಟ್ರಾವೆಲ್ ದಿನಾಂಕ ಮೀರಿ 6 ತಿಂಗಳವರೆಗೆ ನಿಮ್ಮ ಪಾಸ್ಪೋರ್ಟ್ ವ್ಯಾಲಿಡ್ ಆಗಿದೆಯೇ ಎಂದು ಚೆಕ್ ಮಾಡಿ.
ಅಪ್ಲಿಕೆಂಟ್ಗಳ ವೀಸಾ ಫಾರ್ಮ್, ಸುಮಾರು 02 ಪ್ರತಿಗಳು.
35X44 ಎಂಎಂ ಡೈಮೆನ್ಶನ್ನಲ್ಲಿ 2 ಫೋಟೋಗ್ರಾಫ್ಗಳು. ಇದು ಮ್ಯಾಟ್ ಫಿನಿಶ್ ಆಗಿದೆಯೇ ಮತ್ತು ಬಿಳಿ ಬ್ಯಾಕ್ಗ್ರೌಂಡ್ನಲ್ಲಿ ಕ್ಲಿಕ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ವಸತಿಯ ಪುರಾವೆಯೊಂದಿಗೆ ವಿಮಾನ ಟಿಕೆಟ್ ಬುಕಿಂಗ್ಗಳ ಕಾಪಿ
ಟ್ರಾವೆಲ್ ಪ್ಲಾನ್ ಅಥವಾ ಪ್ರಯಾಣದ ಯೋಜನೆ.
ಕಳೆದ 3 ವರ್ಷಗಳ ನಿಮ್ಮ ಎಲ್ಲಾ ಟ್ಯಾಕ್ಸ್ ಸಬ್ಮಿಟ್ ಮಾಡಿರುವ ಡಾಕ್ಯುಮೆಂಟ್ಗಳು ಮತ್ತು ಅಪ್ಲಿಕೆಂಟ್ಗಳ ಫಾರ್ಮ್ 16.
ಅಪ್ಲಿಕೆಂಟ್ಗಳ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
ಅಪ್ಲಿಕೆಂಟ್ಗಳ ಕಳೆದ 3 ತಿಂಗಳ ಸ್ಯಾಲರಿ ಸ್ಲಿಪ್
ಆತ/ಆಕೆ ನಿವೃತ್ತರಾಗಿದ್ದರೆ, ಅಪ್ಲಿಕೆಂಟ್ಗಳ ಪೆನ್ಷನ್ ಆರ್ಡರ್.
ಒಂದು ವೇಳೆ ತಾರುಣ್ಯದಲ್ಲಿರುವ ವ್ಯಕ್ತಿ ಅಥವಾ ವಿದ್ಯಾರ್ಥಿ ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ, ಕುಟುಂಬ ಸದಸ್ಯರ ಎನ್ಓಸಿ ಪತ್ರ ಅವಶ್ಯವಾಗಬಹುದು.
ಈ ಎಲ್ಲಾ ಸಂದರ್ಭಗಳಲ್ಲಿ ಡಾಕ್ಯುಮೆಂಟ್ ಅವಶ್ಯ, ಆದರೆ ನೀವು ಎಂಪ್ಲಾಯ್ಮೆಂಟ್ ವೀಸಾ ಅಪ್ಲೈ ಮಾಡಿದ್ದರೆ ಕೆಲವು ಹೆಚ್ಚುವರಿ ಪುರಾವೆಗಳ ಅವಶ್ಯಕತೆ ಇದೆ.
ಬ್ಯಾಂಕ್ ಅಕೌಂಟ್ನಲ್ಲಿರುವ ಅಗತ್ಯವಿರುವಷ್ಟು ಹಣದ ಪುರಾವೆ.
ನೇರ ಇಮಿಗ್ರೇಷನ್ ಡಿಪಾರ್ಟ್ಮೆಂಟ್ಗೆ ಫ್ಯಾಕ್ಸ್ ಮಾಡಲಾದ ನಿಮ್ಮ ವರ್ಕ್ ಪರ್ಮಿಟ್ ತಿಳಿಸುವ ಡಾಕ್ಯುಮೆಂಟ್.
ಟೂರಿಸ್ಟ್ ಮತ್ತು ಎಂಪ್ಲಾಯ್ಮೆಂಟ್ ವೀಸಾ ಹೊರತಾಗಿ, ಬಾಲಿಗೆ ಕೆಲಸಕ್ಕೆ ಮತ್ತು ಬಿಸಿನೆಸ್ಗೆ ಜನ ಅಪ್ಲೈ ಮಾಡಬಹುದು. ಮೇಲೆ ಸೂಚಿಸಿದವುಗಳ ಜೊತೆಗೆ ಅವಶ್ಯವಿರುವ ಇನ್ನೂ ಕೆಲವು ಡಾಕ್ಯುಮೆಂಟ್ಗಳೆಂದರೆ:
ಸಂಸ್ಥೆಯಿಂದ ಕವರಿಂಗ್ ಲೆಟರ್.
ಬಿಸಿನೆಸ್ ಅಥವಾ ಕಂಪನಿ ಭಾರತದಲ್ಲೇ ರಿಜಿಸ್ಟರ್ಡ್ ಆಗಿದೆಯೇ ಇಲ್ಲವೇ ಎಂಬುದಕ್ಕೆ ಪುರಾವೆ.
ಬಾಲಿಯಲ್ಲಿರುವ ಕಂಪನಿಯಿಂದ ಆಹ್ವಾನ ಪತ್ರ.
ಅಪ್ಲಿಕೆಂಟ್ನ ಟ್ರಾವೆಲ್ ಇನ್ಶೂರೆನ್ಸ್.
ಪ್ರವಾಸಿಯಾಗಿ ಬಾಲಿಗೆ ಪ್ರಯಾಣ ಮಾಡುತ್ತಿದ್ದರೆ, ನಿಮ್ಮ ವಾಸ್ತವ್ಯ ಬಹುಶಃ 30 ದಿನಗಳಿಗಿಂತ ಕಡಿಮೆ ಇರುತ್ತದೆ. ಅಂಥಾ ಸಂದರ್ಭಗಳಲ್ಲಿ, ನೀವು ವೀಸಾ ಆನ್ ಅರೈವಲ್ ಪಡೆಯಬಹುದು. ಆಗ ಏರ್ಪೋರ್ಟ್ನಲ್ಲಿ ಹಾಜರುಪಡಿಸಬೇಕಾದ ವಸ್ತುಗಳೆಂದರೆ :
ಎರಡು ಖಾಲಿ ವೀಸಾ ಪುಟಗಳ ಜೊತೆಗೆ ಕನಿಷ್ಠ 6 ತಿಂಗಳ ವ್ಯಾಲಿಡಿಟಿ ಹೊಂದಿರುವ ಪಾಸ್ಪೋರ್ಟ್.
ಮುಂದಿನ ಮತ್ತು ಹಿಂತಿರುಗುವ ವಿಮಾನಗಳ ಪುರಾವೆ.
ನಿಮ್ಮ ವಾಸ್ತವ್ಯವು 30 ದಿನಗಳಿಗಿಂತ ಹೆಚ್ಚಿಗೆ ಇದ್ದರೆ ಟೂರಿಸ್ಟ್ ವೀಸಾಗೆ ಅಪ್ಲೈ ಮಾಡುವ ಪ್ರೊಸೆಸ್:
ಪ್ರೊಸೀಜರ್ಗಾಗಿ ಮತ್ತು ಅಪ್ಲಿಕೇಷನ್ ಫಾರ್ಮ್ ಡೌನ್ಲೋಡ್ ಮಾಡಲು ಆನ್ಲೈನ್ಗೆ ಭೇಟಿ ನೀಡಿ.
ಭೇಟಿಯ ಉದ್ದೇಶವನ್ನು ತಿಳಿಸುವ ಕವರ್ ಲೆಟರ್ ಅನ್ನು ಡ್ರಾಫ್ಟ್ ಮಾಡಿ.
ನಿಮ್ಮ ಪಾಸ್ಪೋರ್ಟ್ ಎರಡು ಖಾಲಿ ವೀಸಾ ಪುಟಗಳ ಜೊತೆಗೆ ಕನಿಷ್ಠ 6 ತಿಂಗಳ ವ್ಯಾಲಿಡಿಟಿ ಹೊಂದಿದೆಯೇ ಎಂದು ಚೆಕ್ ಮಾಡಿ.
ಫಾರ್ಮ್ಗೆ ನಿಮ್ಮ ಫೋಟೋಗ್ರಾಫ್ ಅನ್ನು ಅಂಟಿಸಿ. ಫೋಟೋಗ್ರಾಫ್ ಕೇವಲ 3 ತಿಂಗಳು ಹಳೆಯದಾಗಿರಬಹುದು.
ನಿಮ್ಮ ದೃಢೀಕೃತ ವಿಮಾನ ಟಿಕೆಟ್ಗಳನ್ನು ಪಡೆಯಿರಿ ಮತ್ತು ಅದನ್ನು ಅಪ್ಲಿಕೇಷನ್ ಫಾರ್ಮ್ನೊಂದಿಗೆ ಲಗತ್ತಿಸಿ.
ಫೈಲ್ ಜೊತೆಗೆ 10 ಅಥವಾ 25ಯುಎಸ್ಡಿ ಶುಲ್ಕವನ್ನು ಪಾವತಿಸಬೇಕು.
ಬಾಲಿ ಇಂಡೋನೇಷ್ಯಾದಲ್ಲಿನ ನಿಮ್ಮ ಹೋಟೆಲ್ ಬುಕಿಂಗ್ ಪುರಾವೆಯನ್ನು ತೋರಿಸಿ. ಒಂದು ವೇಳೆ ನೀವು ಬಾಲಿಯಲ್ಲಿ ಸ್ಪಾನ್ಸರ್ ಹೊಂದಿರುವ ಅದೃಷ್ಟವಂತರಾಗಿದ್ದರೆ, ಸ್ಪಾನ್ಸರ್ ಪತ್ರವನ್ನು ಹಾಜರುಪಡಿಸಿ. ಫೈಲ್ ಪ್ರೊಸೆಸ್ ಆಗಲು 3-4 ದಿನಗಳು ಬೇಕಾಗುತ್ತವೆ.
ಅಪ್ಲಿಕೆಂಟ್ ಬ್ಯಾಂಕ್ನಲ್ಲಿ ಬೇಕಾಗುವಷ್ಟು ಫಂಡ್ಗಳನ್ನು ಹೊಂದಿರಬೇಕು. ಅದು ನೀವು ಬಾಲಿಯಲ್ಲಿರುವಾಗ ನಿಮ್ಮ ವಾಸ್ತವ್ಯವು ಆರಾಮದಾಯಕವಾಗಿರುತ್ತದೆ ಎಂಬ ಪುರಾವೆಯಾಗಿರುತ್ತದೆ.
ಎಲ್ಲಾ ಅಪ್ಲಿಕೆಂಟ್ಗಳು ಫೈಲ್ ಟ್ರ್ಯಾಕಿಂಗ್ ನಂಬರ್ ಪಡೆಯುತ್ತಾರೆ, ಅದು ನಿಮ್ಮ ವೀಸಾದ ಸ್ಟೇಟಸ್ ತಿಳಿಯಲು ಸಹಾಯ ಮಾಡುತ್ತದೆ.
ಎಲ್ಲಾ ಪ್ರೊಸೆಸ್ ಪೂರ್ತಿಯಾದ ಬಳಿಕ, ನೀವು ನಿಮ್ಮ ಪಾಸ್ಪೋರ್ಟ್ ಅನ್ನು ಕಲೆಕ್ಟ್ ಮಾಡಬಹುದು. ಸಂತೋಷದ ಸಮಯಗಳಿಗಾಗಿ ಗೆಟ್ ಸೆಟ್ ಗೋ.
ವಾಸ್ತವ್ಯ 30 ದಿನಗಳಿಗಿಂತ ಹೆಚ್ಚಿಗೆ ಇದ್ದರೆ ಟೂರಿಸ್ಟ್ ವೀಸಾ ಪ್ರೊಸೆಸಿಂಗ್ಗೆ 2ರಿಂದ 15 ದಿನಗಳ ಅಗತ್ಯವಿದೆ. ಬಾಲಿ ಪ್ರಪಂಚದಾದ್ಯಂತ ಇರುವ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಾಸ್ತವ್ಯ 30 ದಿನಗಳಿಗಿಂತ ಕಡಿಮೆ ಇದ್ದರೆ ಭಾರತವೂ ಸೇರಿದಂತೆ ಕೆಲವು ದೇಶಗಳು ವೀಸಾ ವಿಸ್ತರಣೆಗೆ ಅನುವು ಮಾಡಿಕೊಡುತ್ತದೆ.
ತಮಾಷೆ ಮತ್ತು ಎಂಜಯ್ಮೆಂಟ್ಗಾಗಿ ಶೀಘ್ರದಲ್ಲೇ ಬಾಲಿಗೆ ಪ್ರಯಾಣಿಸುತ್ತಿದ್ದೀರೇ? ಹೌದು ಎಂದಾದರೆ, ನಿಮ್ಮ ಪ್ರಯಾಣಕ್ಕೆ ಸಿದ್ಧರಾಗುವ ಮೊದಲು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನಿಮಗಾಗಿ ಸ್ವಲ್ಪ ಮನಃಶಾಂತಿಯನ್ನು ಪಡೆಯಿರಿ. ಅದು ಕಡ್ಡಾಯವಲ್ಲದೇ ಇದ್ದರೂ ತುರ್ತು ಪರಿಸ್ಥಿತಿಗಳಲ್ಲಿ ಅದನ್ನು ಹೊಂದಿರುವುದು ಖಂಡಿತವಾಗಿಯೂ ಉತ್ತಮ ಐಡಿಯಾ. ಬಾಲಿಗೆ ಭೇಟಿ ಕೊಡುವ ಯಾರೇ ಆದರೂ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಬೇಕು :
ನೀವು ಸುಗಮವಾದ ಸ್ಕೂಟರ್ ರೈಡ್ ಆಯೋಜಿಸಿರುತ್ತೀರಿ, ಆದರೆ ಅದು ಸ್ಕಿಡ್ ಆಗುತ್ತದೆ. ಈ ಥರದ ಎಲ್ಲಾ ಸಂದರ್ಭಗಳ ಮೆಡಿಕಲ್ ವೆಚ್ಚಗಳನ್ನು ಕವರ್ ಮಾಡಲು. ನೀವು ಬೀಳುತ್ತೀರಿ ಮತ್ತು ಗಾಯಗೊಳ್ಳುತ್ತೀರಿ, ನಿಮ್ಮನ್ನು ಹಾಸ್ಪಿಟಲ್ಗೆ ಕರೆದೊಯ್ಯಲಾಗುತ್ತದೆ. ನಿಮ್ಮ ಟ್ರಾವೆಲ್ ಪಾಲಿಸಿಯೊಂದಿಗೆ ಮೆಡಿಕಲ್ ವೆಚ್ಚಗಳು ಕವರ್ ಆಗಬಹುದಾಗಿದೆ.
ಕೆಲವು ಸಂದರ್ಭಗಳಲ್ಲಿ, ಜನರು ಒಳಗಾಗುವ ತೀವ್ರಥರದ ಗಾಯಗಳು ಅವರನ್ನು ನಿಶ್ಚಲರನ್ನಾಗಿ ಮಾಡುತ್ತದೆ. ಆಗ ಟ್ರಾವೆಲ್ ಪಾಲಿಸಿ ಅಡಿಯಲ್ಲಿ ಕವರ್ ಆಗುವಂತಹ ಸುರಕ್ಷಿತ ಸ್ಥಳಗಳಿಗೆ ಮೆಡಿಕಲ್ ಕಾರಣಕ್ಕೆ ಸ್ಥಳಾಂತರ ಮಾಡುವ ಅವಶ್ಯಕತೆ ಉಂಟಾಗುತ್ತದೆ.
ಸಂಬಂಧಿಕರ ಮರಣದಂತಹ ಅನಿರೀಕ್ಷಿತ ಘಟನೆಗಳಿಂದ ಮನೆಗೆ ಹಿಂತಿರುಗಬೇಕಾದ ಸಂದರ್ಭದಲ್ಲಿ ಟಿಕೆಟ್ಗಳ ಮತ್ತು ಹೋಟೆಲ್ಗಳ ಬುಕಿಂಗ್ ಅಮೌಂಟ್ಗಳಂತಹ ತಕ್ಷಣದ ಕ್ಯಾನ್ಸಲೇಷನ್ ವೆಚ್ಚಗಳನ್ನು ಕವರ್ ಮಾಡಲು.
ನೀವು ರೈಡ್ಗಳನ್ನು ಅಡ್ವೆಂಚರ್ಗಳನ್ನು ಎಂಜಾಯ್ ಮಾಡುತ್ತಾ ಬ್ಯುಸಿಯಾಗಿರುವ ವೇಳೆಯಲ್ಲಿ, ಆದರೆ ಓಹ್, ನಿಮ್ಮ ಪಾಸ್ಪೋರ್ಟ್ ಮತ್ತು ಇತರ ಬೆಲೆಬಾಳುವ ವಸ್ತುಗಳಿರುವ ಬ್ಯಾಗ್ ಅನ್ನು ಕಳೆದುಕೊಳ್ಳುತ್ತೀರಿ. ಪಾಸ್ಪೋರ್ಟ್ ಇಲ್ಲದೆ, ನಿಮ್ಮ ಬದುಕು ಅಷ್ಟೇನೂ ಉತ್ತಮವಾಗಿರುವುದಿಲ್ಲ, ಆದರೆ ಅದನ್ನೂ ಟ್ರಾವೆಲ್ ಪಾಲಿಸಿಯು ಸರಿದೂಗಿಸುತ್ತದೆ.
ನೀವು ಬಾಲಿಯಲ್ಲಿ ರಜೆಯನ್ನು ಕಳೆಯುತ್ತಿರುವಾಗ ಬೇರೆಯವರ ಪ್ರಾಪರ್ಟಿಗೆ ಡ್ಯಾಮೇಜ್ ಮಾಡಿದರೆ, ಅದರಿಂದ ಉಂಟಾಗುವ ಎಲ್ಲಾ ಲಯಬಿಲಿಟಿಯಿಂದ ನಿಮ್ಮನ್ನು ರಕ್ಷಿಸಲಾಗುತ್ತದೆ.
ಕಳ್ಳತನದಿಂದಾಗಿ ನಿಮ್ಮ ಲಗ್ಗೇಜ್, ಪರ್ಸನಲ್ ವಸ್ತುಗಳು, ಪರ್ಸ್, ನಗದು ಮತ್ತು ಇತರ ಅವಶ್ಯ ವಸ್ತುಗಳನ್ನು ಕಳೆದುಕೊಂಡಾಗ ಹೆಚ್ಚು ಒತ್ತಡದ ಸಮಯಗಳಿಗೆ. ಇಂಡೋನೇಷ್ಯಾದ ಟ್ರಾವೆಲ್ ಇನ್ಶೂರೆನ್ಸ್ ಪ್ರಾಯಶಃ ಒಬ್ಬನೇ ರಕ್ಷಕ.
ಬಾಲಿಯಲ್ಲಿ ಸ್ನೋರ್ಕ್ಲಿಂಗ್ನಂತಹ ವಾಟರ್ಸ್ಪೋರ್ಟ್ಸ್ ಆ್ಯಕ್ಟಿವಿಟಿಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವ ಸಮಯಗಳಿಗಾಗಿ. ನಿರ್ದಿಷ್ಟ ಗಂಟೆಗಳಿಗೆ ಅಥವಾ ಸಂಖ್ಯೆಗಳಿಗೆ ಯಾವುದೇ ಆ್ಯಕ್ಟಿವಿಟಿ ಮಾಡಲು ನಿಮ್ಮ ಇನ್ಶೂರೆನ್ಸ್ ಅನುಮತಿ ನೀಡುತ್ತದೆ.
ಇನ್ನಷ್ಟು ಹೆಚ್ಚು ತಿಳಿಯಿರಿ:
ಇಂಡೋನೇಷ್ಯಾಗೆ ನನ್ನ ವೀಸಾ ಆನ್ ಅರೈವಲ್ಗೆ ಸುಲಭವಾಗಿ ಅಪ್ರೂವಲ್ ಪಡೆಯಲು, ನೀವು ಈ ಕೆಳಗಿನ ಸಬ್ಮಿಟ್ ಮಾಡಲೇಬೇಕು- ಎರಡು ಖಾಲಿ ಪುಟಗಳ ಜೊತೆಗೆ ಕನಿಷ್ಠ 6 ತಿಂಗಳ ವ್ಯಾಲಿಡಿಟಿ ಪೀರಿಯಡ್ ಹೊಂದಿರುವ ಭಾರತೀಯ ಪಾಸ್ಪೋರ್ಟ್. ಕನ್ಫರ್ಮ್ ಆದ ವಿಮಾನದ ರಿಟರ್ನ್ ಟಿಕೆಟ್.
ಇಂಡೋನೇಷ್ಯಾಗೆ ನನ್ನ ವೀಸಾ ಆನ್ ಅರೈವಲ್ಗೆ ಸುಲಭವಾಗಿ ಅಪ್ರೂವಲ್ ಪಡೆಯಲು, ನೀವು ಈ ಕೆಳಗಿನ ಸಬ್ಮಿಟ್ ಮಾಡಲೇಬೇಕು-
ಹೌದು, ಇಂಡೋನೇಷ್ಯಾಗೆ ವೀಸಾ ಆನ್ ಅರೈವಲ್ ಹೊಂದಿರುವುದರಿಂದ, ನೀವು ಯಾವುದೇ ಇಂಟರ್ನ್ಯಾಷನಲ್ ಸೀಪೋರ್ಟ್ಗಳ ಮೂಲಕ ದೇಶವನ್ನು ಪ್ರವೇಶಿಸಬಹುದು. ಅಲ್ಲದೇ, ಎಲ್ಲಾ ಅವಶ್ಯಕ ಡಾಕ್ಯುಮೆಂಟ್ಗಳನ್ನು ಒಯ್ಯುವುದನ್ನು ಖಚಿತಪಡಿಸಿಕೊಳ್ಳಿ.
ಹೌದು, ಇಂಡೋನೇಷ್ಯಾಗೆ ವೀಸಾ ಆನ್ ಅರೈವಲ್ ಹೊಂದಿರುವುದರಿಂದ, ನೀವು ಯಾವುದೇ ಇಂಟರ್ನ್ಯಾಷನಲ್ ಸೀಪೋರ್ಟ್ಗಳ ಮೂಲಕ ದೇಶವನ್ನು ಪ್ರವೇಶಿಸಬಹುದು. ಅಲ್ಲದೇ, ಎಲ್ಲಾ ಅವಶ್ಯಕ ಡಾಕ್ಯುಮೆಂಟ್ಗಳನ್ನು ಒಯ್ಯುವುದನ್ನು ಖಚಿತಪಡಿಸಿಕೊಳ್ಳಿ.
ಇಲ್ಲ, ಇಂಡೋನೇಷ್ಯಾಗೆ ಟೂರಿಸ್ಟ್ ವೀಸಾ ಆನ್ ಅರೈವಲ್ ಅನ್ನು ಕಟ್ಟುನಿಟ್ಟಾಗಿ ಪ್ರವಾಸ ಮತ್ತು ಪ್ರಯಾಣಕ್ಕೆ ಬಳಸಲಾಗುತ್ತದೆ. ನಾವು ಯಾವುದೇ ಇನ್ನಿತರ ಪರ್ಮಿಟ್ ಅಥವಾ ವೀಸಾ ವಿಧಾನಕ್ಕೆ ಪರಿವರ್ತಿಸಲು ಸಾಧ್ಯವಿಲ್ಲ.
ಇಲ್ಲ, ಇಂಡೋನೇಷ್ಯಾಗೆ ಟೂರಿಸ್ಟ್ ವೀಸಾ ಆನ್ ಅರೈವಲ್ ಅನ್ನು ಕಟ್ಟುನಿಟ್ಟಾಗಿ ಪ್ರವಾಸ ಮತ್ತು ಪ್ರಯಾಣಕ್ಕೆ ಬಳಸಲಾಗುತ್ತದೆ. ನಾವು ಯಾವುದೇ ಇನ್ನಿತರ ಪರ್ಮಿಟ್ ಅಥವಾ ವೀಸಾ ವಿಧಾನಕ್ಕೆ ಪರಿವರ್ತಿಸಲು ಸಾಧ್ಯವಿಲ್ಲ.
ಇಂಡೋನೇಷ್ಯಾದಲ್ಲಿ ನೀವು ಹೆಚ್ಚವರಿಯಾಗಿ ವಾಸ್ತವ್ಯ ಮಾಡಿದ ಪೀರಿಯಡ್ ಆಧಾರದಲ್ಲಿ, ದಿನವಹಿ ದಂಡಗಳು, ಡೀಪೋರ್ಟೇಷನ್ ಅಥವಾ ಬ್ಲಾಕ್ಲಿಸ್ಟಿಂಗ್ನಂತಹ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ, ನಿಮ್ಮ ವೀಸಾ ಅವಧಿ ಎಕ್ಸ್ಪೈರ್ ಆಗುವ ಮೊದಲು ಅದನ್ನು ರಿನೀವ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ.
ಇಂಡೋನೇಷ್ಯಾದಲ್ಲಿ ನೀವು ಹೆಚ್ಚವರಿಯಾಗಿ ವಾಸ್ತವ್ಯ ಮಾಡಿದ ಪೀರಿಯಡ್ ಆಧಾರದಲ್ಲಿ, ದಿನವಹಿ ದಂಡಗಳು, ಡೀಪೋರ್ಟೇಷನ್ ಅಥವಾ ಬ್ಲಾಕ್ಲಿಸ್ಟಿಂಗ್ನಂತಹ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ, ನಿಮ್ಮ ವೀಸಾ ಅವಧಿ ಎಕ್ಸ್ಪೈರ್ ಆಗುವ ಮೊದಲು ಅದನ್ನು ರಿನೀವ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ.
ಒಮ್ಮೆ ಅಪ್ರೂವ್ ಆದ ಮೇಲೆ, ನೀವು ಇಂಡೋನೇಷ್ಯಾವನ್ನು ತಲುಪಿದ ನಂತರ ಅನುಮತಿಸಲಾದ ಭೂ ಗಡಿಯಾದ ಪಶ್ಚಿಮ ಕಾಲಿಮಂಟನ್ನ ಎಂಟಿಕಾಂಗ್ನಲ್ಲಿ, ಮುಖ ಇಂಟರ್ನ್ಯಾಷನಲ್ ಏರ್ಪೋರ್ಟ್ಗಳಲ್ಲಿ ಮತ್ತು ಸೀಪೋರ್ಟ್ಗಳಲ್ಲಿ ನಿಮ್ಮ ವೀಸಾ ಆನ್ ಅರೈವಲ್ ಅನ್ನು ಕಲೆಕ್ಟ್ ಮಾಡಿಕೊಳ್ಳಬಹುದು.
ಒಮ್ಮೆ ಅಪ್ರೂವ್ ಆದ ಮೇಲೆ, ನೀವು ಇಂಡೋನೇಷ್ಯಾವನ್ನು ತಲುಪಿದ ನಂತರ ಅನುಮತಿಸಲಾದ ಭೂ ಗಡಿಯಾದ ಪಶ್ಚಿಮ ಕಾಲಿಮಂಟನ್ನ ಎಂಟಿಕಾಂಗ್ನಲ್ಲಿ, ಮುಖ ಇಂಟರ್ನ್ಯಾಷನಲ್ ಏರ್ಪೋರ್ಟ್ಗಳಲ್ಲಿ ಮತ್ತು ಸೀಪೋರ್ಟ್ಗಳಲ್ಲಿ ನಿಮ್ಮ ವೀಸಾ ಆನ್ ಅರೈವಲ್ ಅನ್ನು ಕಲೆಕ್ಟ್ ಮಾಡಿಕೊಳ್ಳಬಹುದು.
Please try one more time!
ಹಕ್ಕು ನಿರಾಕರಣೆ -
ನಿಮ್ಮ ಪಾಲಿಸಿಯು ನಿಮ್ಮ ಪಾಲಿಸಿ ವೇಳಾಪಟ್ಟಿ ಮತ್ತು ನೀತಿ ಪದಗಳಲ್ಲಿ ನಮೂದಿಸಲಾದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ದಯವಿಟ್ಟು ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
ದೇಶಗಳು, ವೀಸಾ ಶುಲ್ಕಗಳು ಮತ್ತು ಇತರರ ಬಗ್ಗೆ ಇಲ್ಲಿ ಉಲ್ಲೇಖಿಸಲಾದ ಮಾಹಿತಿಯನ್ನು ವಿವಿಧ ಮೂಲಗಳಿಂದ ತೆಗೆದುಕೊಳ್ಳಲಾಗಿದೆ. ಅಂಕಿ ವಿಮೆ ಇಲ್ಲಿ ಯಾವುದನ್ನೂ ಪ್ರಚಾರ ಮಾಡುತ್ತಿಲ್ಲ ಅಥವಾ ಶಿಫಾರಸು ಮಾಡುತ್ತಿಲ್ಲ. ನಿಮ್ಮ ಟಿಕೆಟ್ಗಳನ್ನು ಕಾಯ್ದಿರಿಸುವ ಮೊದಲು, ವೀಸಾಕ್ಕೆ ಅರ್ಜಿ ಸಲ್ಲಿಸುವ ಮೊದಲು, ಪ್ರಯಾಣ ನೀತಿಯನ್ನು ಖರೀದಿಸುವ ಅಥವಾ ಯಾವುದೇ ಇತರ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ಅದನ್ನು ಪರಿಶೀಲಿಸಿ.
Get 10+ Exclusive Features only on Digit App
closeAuthor: Team Digit
Last updated: 25-10-2024
CIN: U66010PN2016PLC167410, IRDAI Reg. No. 158.
ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಹಿಂದೆ ಒಬೆನ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) - ರಿಜಿಸ್ಟರ್ಡ್ ಆಫೀಸ್ ವಿಳಾಸ - 1 ರಿಂದ 6ನೇ ಮಹಡಿಗಳು, ಅನಂತ ಒನ್ (ಎಆರ್ ಒನ್), ಪ್ರೈಡ್ ಹೋಟೆಲ್ ಲೇನ್, ನರ್ವೀರ್ ತಾನಾಜಿ ವಾಡಿ, ಸಿಟಿ ಸರ್ವೆ ನಂ.1579, ಶಿವಾಜಿ ನಗರ, ಪುಣೆ -411005, ಮಹಾರಾಷ್ಟ್ರ | ಕಾರ್ಪೊರೇಟ್ ಆಫೀಸ್ ವಿಳಾಸ - ಅಟ್ಲಾಂಟಿಸ್, 95, 4ನೇ B ಕ್ರಾಸ್ ರೋಡ್, ಕೋರಮಂಗಲ ಇಂಡಸ್ಟ್ರಿಯಲ್ ಲೇಔಟ್, 5ನೇ ಬ್ಲಾಕ್, ಬೆಂಗಳೂರು-560095, ಕರ್ನಾಟಕ | ಮೇಲೆ ಡಿಸ್ಪ್ಲೇ ಮಾಡಲಾದ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂಬ ಟ್ರೇಡ್ ಲೋಗೋ, ಗೋ ಡಿಜಿಟ್ ಇನ್ಫೋವರ್ಕ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿದೆ ಮತ್ತು ಇದನ್ನು ಲೈಸೆನ್ಸ್ನ ಅಡಿಯಲ್ಲಿ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಒದಗಿಸಿದೆ ಮತ್ತು ಬಳಸುತ್ತದೆ.