ಕೆಲವು ವ್ಯಕ್ತಿಗಳು ಸೆಕ್ಷನ್ 44AD ಅಡಿಯಲ್ಲಿ ಸ್ಕೀಮ್ ಪ್ರಯೋಜನಗಳಿಗೆ ಅರ್ಹತೆ ಹೊಂದಿರುವುದಿಲ್ಲ, ಇವರನ್ನ ಒಳಗೊಂಡಂತೆ -
- ಸೆಕ್ಷನ್ 44AD ಪ್ರಯೋಜನಗಳು ವೃತ್ತಿಪರ ಸೇವೆಗಳಿಗೆ ಸಂಬಂಧಿಸಿದ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಮತ್ತು ಬ್ರೋಕರೇಜ್ ಅಥವಾ ಕಮಿಷನ್ ಮೂಲಕ ಇನ್‌ಕಮ್ ಅನ್ನು ಗಳಿಸುವರಿಗೆ ಲಭ್ಯವಿಲ್ಲ. ಅಂತಹ ಜನರಿಗೆ, ಭಾರತ ಸರ್ಕಾರವು ಪ್ರಿಸಂಪ್ಟಿವ್ ಸ್ಕೀಮ್‌ಗಾಗಿ ಸೆಕ್ಷನ್ 44ADA ಅನ್ನು ಒದಗಿಸುತ್ತದೆ.
- ಏಜೆನ್ಸಿ ಬಿಸಿನೆಸ್‌ನಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು
- ನಿರ್ದಿಷ್ಟ ಇನ್‌ಕಮ್‌ನ ವಿರುದ್ಧ ಪಾರ್ಟ್ C ಡಿಡಕ್ಷನ್‌ಗಳ ಅಡಿಯಲ್ಲಿ ಅಧ್ಯಾಯ VIA ಅಥವಾ 10AA ಅಡಿಯಲ್ಲಿ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಲು ಅರ್ಹರಾಗಿರುವ ಜನರು.
- ವ್ಯಕ್ತಿಗಳು ಒಂದು ಆರ್ಥಿಕ ವರ್ಷಕ್ಕೆ ಪ್ರಿಸಂಪ್ಟಿವ್ ಸ್ಕೀಮ್‌ಗೆ ಹೋದರೆ ಮತ್ತು ಸ್ಕೀಮ್ ಪ್ರಕಾರ ಟರ್ನ್‌ಓವರ್ ವಿವರಗಳನ್ನು ಒದಗಿಸುತ್ತಾರೆ ಮತ್ತು 44AD ಸ್ಕೀಮ್ ಅಡಿಯಲ್ಲಿ ಸತತ 5 ವರ್ಷಗಳವರೆಗೆ ರಿಟರ್ನ್ ಅನ್ನು ಫೈಲ್ ಮಾಡಲು ವಿಫಲರಾಗಿದ್ದಾರೆ ಎಂದು ಭಾವಿಸೋಣ. ಅಂತಹ ಸಂದರ್ಭಗಳಲ್ಲಿ, ಅವರು ಮುಂದಿನ 5 ಮೌಲ್ಯಮಾಪನ ವರ್ಷಗಳವರೆಗೆ 44Adನ ಪ್ರಾವಿಶನ್ ಗಳ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ (ಸ್ಕೀಮ್‌ನ ಪ್ರಕಾರ ಲಾಭವನ್ನು ಒದಗಿಸದ ವರ್ಷದಿಂದ ಪ್ರಾರಂಭಿಸಿ).
[ಮೂಲ]
ಉತ್ತಮ ತಿಳುವಳಿಕೆಗಾಗಿ, ನಾವು ಒಂದು ಉದಾಹರಣೆಯನ್ನು ಉಲ್ಲೇಖಿಸೋಣ.
ಸೆಕ್ಷನ್ 44ADಯ ಪ್ರಾವಿಶನ್ ಗಳ ಪ್ರಕಾರ, 2021-2022ರ ಮೌಲ್ಯಮಾಪನ ವರ್ಷಕ್ಕೆ ಶ್ರೀ B ಅವರ ಸನ್ನಿವೇಶವನ್ನು ಪರಿಗಣಿಸೋಣ, ಶ್ರೀ. B ಅವರು ಪ್ರಿಸಂಪ್ಟಿವ್ ಸ್ಕೀಮ್ ಅಡಿಯಲ್ಲಿ ಟ್ಯಾಕ್ಸ್ ವಿಧಿಸುವುದನ್ನು ಆಯ್ಕೆಮಾಡಿದ್ದಾರೆ. ಒಟ್ಟು ₹ 1.2 ಕೋಟಿ ವಹಿವಾಟಿನ ಆಧಾರದ ಮೇಲೆ ಅವರು ₹ 10 ಲಕ್ಷ ಇನ್‌ಕಮ್ ಡಿಕ್ಲೇರ್ ಮಾಡಿದರು.
ನಂತರದ ಎರಡು ಮೌಲ್ಯಮಾಪನ ವರ್ಷಗಳಲ್ಲಿ, 2022-2023 ಮತ್ತು 2023-2024, ಶ್ರೀ. ಬಿ ಅವರು ಸೆಕ್ಷನ್ 44AD ಪ್ರಾವಿಶನ್ ಗಳ ಪ್ರಕಾರ ಇನ್‌ಕಮ್ ಪುರಾವೆಗಳನ್ನು ಒದಗಿಸುವುದನ್ನು ಮುಂದುವರೆಸಿದರು. ಆದಾಗ್ಯೂ, ಮೌಲ್ಯಮಾಪನ ವರ್ಷ 2024-2025ಕ್ಕೆ, ಅವರು ಪ್ರಿಸಂಪ್ಟಿವ್ ಸ್ಕೀಮ್ ಅನ್ನು ಆಯ್ಕೆ ಮಾಡದೆ ಬೇರೆ ಸ್ಕೀಮ್ ಅಡಿಯಲ್ಲಿ ತಮ್ಮ ಇನ್‌ಕಮ್ ಅನ್ನು ಡಿಕ್ಲೇರ್ ಮಾಡಲು ನಿರ್ಧರಿಸಿದರು. ಇಂತಹ ಸಂದರ್ಭದಲ್ಲಿ, ಅವರು ಒಟ್ಟು ₹ 1.6 ಕೋಟಿ ಟರ್ನ್‌ಓವರ್ ವಿರುದ್ಧ ₹ 5 ಲಕ್ಷ ಇನ್‌ಕಮ್ ಅನ್ನು ಡಿಕ್ಲೇರ್ ಮಾಡಿದರು.
ಆದ್ದರಿಂದ ಶ್ರೀ. ಬಿ ಅವರು ಸತತ ಐದು ವರ್ಷಗಳವರೆಗೆ ಪ್ರಿಸಂಪ್ಟಿವ್ ಸ್ಕೀಮ್ (ಸೆಕ್ಷ್ 44AD) ಅಡಿಯಲ್ಲಿ ತಮ್ಮ ಇನ್‌ಕಮ್ ಅನ್ನು ಡಿಕ್ಲೇರ್ ಮಾಡಲಿಲ್ಲ, ಅವರು 2025-2026 ರಿಂದ 2029-2030 ರವರೆಗಿನ ಮೌಲ್ಯಮಾಪನ ವರ್ಷಗಳವರೆಗೆ ಪ್ರಿಸಂಪ್ಟಿವ್ ಸ್ಕೀಮ್ (44AD) ಅಡಿಯಲ್ಲಿ ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡಲು ಅರ್ಹರಾಗಿರುವುದಿಲ್ಲ.
ಸೂಚನೆ: ವಿವರಣೆಯು 20/12/2022 ದಿನಾಂಕದ ನಿಯಮಾವಳಿಗಳನ್ನು ಆಧರಿಸಿದೆ ಮತ್ತು ಯಾವುದೇ ಮಾರ್ಪಾಡುಗಳನ್ನು ಮಾಡಿದರೆ ಬದಲಾಗಬಹುದು.
ಒಮ್ಮೆ ವ್ಯಕ್ತಿಗಳು ಅರ್ಹತೆಯ ಬಗ್ಗೆ ತಿಳಿದ ಬಳಿಕ, ಅವರು ತೊಂದರೆಗಳಿಂದ ದೂರವಿರಲು ಸೆಕ್ಷನ್ 44ADಯ ವಿಭಿನ್ನ ವೈಶಿಷ್ಟ್ಯಗಳ ಬಗ್ಗೆ ಸ್ಪಷ್ಟತೆಯನ್ನು ಪಡೆಯಬೇಕು.