ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 139 ರ ಕುರಿತು ಕಾಂಪ್ರೆಹೆನ್ಸಿವ್ ಗೈಡ್

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 139 ಎನ್ನುವುದು ಸೆಕ್ಷನ್ 139 ರ ಸಬ್-ಸೆಕ್ಷನ್‌ಗಳಲ್ಲಿ ತಿಳಿಸಲಾದ ಸೂಚನೆಗಳ ಪ್ರಕಾರ ಇನ್ಕಮ್ ಟ್ಯಾಕ್ಸ್ ರಿಟರ್ನ್‌ಗಳನ್ನು ಡ್ಯೂ ಡೇಟ್‌ನೊಳಗೆ ಫೈಲ್ ಮಾಡಲು ವಿಫಲವಾದ ವ್ಯಕ್ತಿ ಅಥವಾ ವೈಯಕ್ತಿಕವಲ್ಲದ ಟ್ಯಾಕ್ಸ್ ಪೇಯರ್‌ಗಳಿಗೆ ಗೈಡ್ ಮಾಡುವ ಹಲವಾರು ಸೆಷನ್‌ಗಳನ್ನು ಒಳಗೊಂಡಿದೆ.

ಈ ಸೆಷನ್‌ನ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯಲು ಬಯಸುವಿರಾ? ನಿಮ್ಮ ಉತ್ತರ ಹೌದು ಎಂದಾದರೆ, ಓದುವುದನ್ನು ಮುಂದುವರೆಸಿ!

ಸೆಕ್ಷನ್ 139 ರ ಸಬ್-ಸೆಕ್ಷನ್‌ಗಳು ಯಾವುವು?

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್ 1961 ರ ಸೆಕ್ಷನ್ 139 ರ ಕೆಳಗಿನ ಸಬ್-ಸೆಕ್ಷನ್‌ಗಳನ್ನು ವಿವರವಾಗಿ ನೋಡೋಣ:

1. ಸೆಕ್ಷನ್ 139(1): ವಾಲಂಟರಿ ಮತ್ತು ಕಡ್ಡಾಯ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್

ಈ ಸಬ್-ಸೆಕ್ಷನ್‌, ವಾಲಂಟರಿ ಮತ್ತು ಕಡ್ಡಾಯ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್‌ಗಳಿಗೆ ವ್ಯಾಲಿಡ್ ಆಗಿದೆ ಮತ್ತು ಈ ಕೆಳಗಿನ ಸಂದರ್ಭಗಳಲ್ಲಿ ಅನ್ವಯಿಸುತ್ತದೆ:

  • ವಾಲಂಟರಿ ರಿಟರ್ನ್ಸ್ 

ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಅನ್ನು ಕಡ್ಡಾಯವಾಗಿ ಫೈಲ್ ಮಾಡಬೇಕಿಲ್ಲದ ಎಂಟಿಟಿಗಳು ಅಥವಾ ವೈಯಕ್ತಿಕ ಟ್ಯಾಕ್ಸ್ ಪೇಯರ್‌ಗಳು ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಪ್ರಕಾರ ವ್ಯಾಲಿಡ್ ಇನ್ಕಮ್ ರಿಟರ್ನ್ಸ್ ಆಗಿರುವ ಇನ್ಕಮ್ ಟ್ಯಾಕ್ಸ್ ಅನ್ನು ವಾಲಂಟರಿ ರಿಟರ್ನ್ಸ್ ಎಂದು ಪರಿಗಣಿಸಲಾಗುತ್ತದೆ.

  • ಕಡ್ಡಾಯ ರಿಟರ್ನ್ಸ್  

ಕಂಪನಿ ಅಥವಾ ಸಂಸ್ಥೆಯನ್ನು ಹೊರತುಪಡಿಸಿ ವ್ಯಕ್ತಿಯ ಒಟ್ಟು ವಾರ್ಷಿಕ ಇನ್ಕಮ್, ವಿನಾಯಿತಿ ಲಿಮಿಟ್‌ಗಿಂತ ಹೆಚ್ಚಿದ್ದರೆ, ಅವನು / ಅವಳು ಡ್ಯೂ ಡೇಟ್‌ನೊಳಗೆ ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡಬೇಕಾಗುತ್ತದೆ. , ಪಾರ್ಟ್ನರ್‌ಶಿಪ್ ಸಂಸ್ಥೆಗಳು, ಲಿಮಿಟೆಡ್ ಲಯಬಿಲಿಟಿ ಪಾರ್ಟ್ನರ್‌ಶಿಪ್‌ಗಳು ಮತ್ತು ಇತರ ಅರ್ಹ ಸಂಸ್ಥೆಗಳು ತಮ್ಮ ಇನ್ಕಮ್ ಅಥವಾ ನಷ್ಟವನ್ನು ಲೆಕ್ಕಿಸದೆ ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡಬೇಕಾಗುತ್ತದೆ. 

ಪ್ರತಿ ಕಂಪನಿಯು ತನ್ನ ಇನ್ಕಮ್ ಅನ್ನು ಲೆಕ್ಕಿಸದೆ ತನ್ನಕಂಪನಿಯ ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಕಡ್ಡಾಯವಾಗಿ ಫೈಲ್ ಮಾಡಬೇಕು. ಎಲ್ಲಾ ಸಾರ್ವಜನಿಕ, ಖಾಸಗಿ, ವಿದೇಶಿ ಅಥವಾ ದೇಶೀಯ ಕಂಪನಿಗಳು ಭಾರತದಲ್ಲಿ ಇರುವ ಅಥವಾ ನಿರ್ವಹಿಸುವ ಬಿಸಿನೆಸ್‌ಗಳಿಗೆ ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡುವ ಅಗತ್ಯವಿದೆ. 

ಏಕವ್ಯಕ್ತಿಗಳ ಸಂಸ್ಥೆ, ವ್ಯಕ್ತಿಗಳ ಸಂಘ ಮತ್ತು ಹಿಂದೂ ಅವಿಭಜಿತ ಕುಟುಂಬದ ಒಟ್ಟು ಇನ್ಕಮ್, ವಿನಾಯಿತಿ ಲಿಮಿಟ್‌ಗಿಂತ ಹೆಚ್ಚಿದ್ದರೆ, ಅಂತಹ ಟ್ಯಾಕ್ಸ್ ಪೇಯರ್‌ಗಳು ಐಟಿ ರಿಟರ್ನ್ಸ್ ಫೈಲ್ ಮಾಡಬೇಕಾಗುತ್ತದೆ.

ಭಾರತದ ಹೊರಗೆ ಅಸೆಟ್ ಅನ್ನು ಹೊಂದಿರುವ ನಿವಾಸಿಗಳು ಅಥವಾ ಭಾರತದ ಹೊರಗಿನ ಅಕೌಂಟ್‌ಗಾಗಿ ತಮ್ಮ ಸಹಿಯ ಹಕ್ಕನ್ನು ಉಳಿಸಿಕೊಂಡಿರುವವರು, ಆ ಗಳಿಕೆಯ ಮೇಲೆ ಅನ್ವಯವಾಗುವ ಟ್ಯಾಕ್ಸ್ ಲಯಬಿಲಿಟಿಯನ್ನು ಲೆಕ್ಕಿಸದೆ ಐಟಿ ರಿಟರ್ನ್ಸ್ ಅನ್ನು ಫೈಲ್ ಮಾಡಬೇಕಾಗುತ್ತದೆ.

ಸೆಕ್ಷನ್ 139(1)(ಸಿ) ಪ್ರಕಾರ ಕೇಂದ್ರ ಸರ್ಕಾರವು ಯಾವುದೇ ಟ್ಯಾಕ್ಸ್ ಪೇಯರ್‌ಗಳಿಗೆ ತಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವುದರಿಂದ ವಿನಾಯಿತಿ ನೀಡಬಹುದು. 

ಸೆಕ್ಷನ್ 139(1c) ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಿದ ನಂತರ, ಕನಿಷ್ಠ 30 ದಿನಗಳ ಕಾಲ ಅಧಿವೇಶನಗಳು ನಡೆದಾಗ ಅದನ್ನು ಸಂಸತ್ತಿನ ಎರಡು ಸದನಗಳ ಮುಂದೆ ಇಡಬೇಕು. ಒಮ್ಮೆ ಎರಡೂ ಸದನಗಳು ಪ್ರಸ್ತಾಪಕ್ಕೆ ಸಮ್ಮತಿಸಿ ಆ ಅಧಿಸೂಚನೆಯನ್ನು ಮಾರ್ಪಡಿಸಿದರೆ, ಅದು ಜಾರಿಗೆ ಬರುತ್ತದೆ; ಇಲ್ಲದಿದ್ದರೆ ಆ ಅಧಿಸೂಚನೆ ನಿಷ್ಪರಿಣಾಮಕಾರಿಯಾಗುತ್ತದೆ. 

2. ಸೆಕ್ಷನ್ 139(3) - ನಷ್ಟದ ಸಮಯದಲ್ಲಿ ಐಟಿಆರ್ ಅನ್ನು ಫೈಲ್ ಮಾಡುವುದು

ಹಿಂದಿನ ಹಣಕಾಸು ವರ್ಷದಲ್ಲಿ ಒಂದು ಎಂಟಿಟಿ ಅಥವಾ ವೈಯಕ್ತಿಕ ಟ್ಯಾಕ್ಸ್ ಪೇಯರ್‌ಗಳು ನಷ್ಟವನ್ನು ಅನುಭವಿಸಿದರೆ ಈ ಸಬ್-ಸೆಕ್ಷನ್ ಐಟಿಆರ್ ಮೇಲೆ ಗಮನ ಹರಿಸುತ್ತದೆ,

ಟ್ಯಾಕ್ಸ್ ಪೇಯರ್‌ಗಳು ಈ ಕೆಳಗಿನ ಸಂದರ್ಭಗಳಲ್ಲಿ ನಷ್ಟದ ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡಲು ಜವಾಬ್ದಾರರಾಗಿರುತ್ತಾರೆ:

ಒಬ್ಬ ವ್ಯಕ್ತಿಯು 'ಕ್ಯಾಪಿಟಲ್ ಗೇನ್ಸ್' ಅಥವಾ 'ಬಿಸಿನೆಸ್ ಹಾಗೂ ಪ್ರೊಫೆಷನ್‌ನ ಪ್ರಾಫಿಟ್ ಮತ್ತು ಗೇನ್ಸ್' ಅಡಿಯಲ್ಲಿ ಇನ್ಕಮ್‌ನಲ್ಲಿ ನಷ್ಟವನ್ನು ಅನುಭವಿಸಿದರೆ, ಆಗ ಅವರು ತಮ್ಮ ಭವಿಷ್ಯದ ಇನ್ಕಮ್‌ನೊಂದಿಗೆ ಈ ನಷ್ಟವನ್ನು ಅಡ್ಜಸ್ಟ್ ಮಾಡಲು ಐಟಿಆರ್ ಅನ್ನು ಫೈಲ್ ಮಾಡಬೇಕಾಗುತ್ತದೆ. ಡ್ಯೂ ಡೇಟ್‌ನೊಳಗೆ ನಷ್ಟವನ್ನು ಸೂಚಿಸುವ ಐಟಿಆರ್ ಅನ್ನು ಫೈಲ್ ಮಾಡಿದಾಗ ಮಾತ್ರ ಈ ಆಯ್ಕೆಯು ಲಭ್ಯವಿರುತ್ತದೆ. 

ಒಬ್ಬ ವ್ಯಕ್ತಿಯು 'ಹೌಸ್ ಅಥವಾ ರೆಸಿಡೆನ್ಸಿಯಲ್ ಪ್ರಾಪರ್ಟಿ' ಅಡಿಯಲ್ಲಿ ನಷ್ಟವನ್ನು ಅನುಭವಿಸಿದರೆ, ಅದು ಡ್ಯೂ ಡೇಟ್‌ನ ನಂತರ ಐಟಿಆರ್ ಅನ್ನು ಫೈಲ್ ಮಾಡಿದರೂ ಸಹ ಈ ನಷ್ಟವನ್ನು ಕ್ಯಾರಿ ಫಾರ್ವರ್ಡ್ ಮಾಡಬಹುದು. 

ಒಬ್ಬ ವ್ಯಕ್ತಿಯು ಅದೇ ಹಣಕಾಸು ವರ್ಷದಲ್ಲಿ ಮತ್ತೊಂದು ಕೆಟಗರಿಯ ಇನ್ಕಮ್‌ನೊಂದಿಗೆ ನಷ್ಟವನ್ನು ಅಡ್ಜಸ್ಟ್ ಮಾಡಲು ಬಯಸಿದರೆ, ಅದನ್ನು ಡ್ಯೂ ಡೇಟ್‌ ಮುಗಿದು ಐಟಿಆರ್ ಅನ್ನು ಫೈಲ್ ಮಾಡಿದ ನಂತರವೂ ಅಡ್ಜಸ್ಟ್ ಮಾಡಬಹುದು.

ಆದಾಗ್ಯೂ, ಅಂತಹ ಸಂದರ್ಭಗಳಲ್ಲಿ ಅವರು ಅನ್ಅಬ್ಸಾರ್ಬ್ಡ್ ಡೆಪ್ರಿಸಿಯೇಶನ್ ಅನ್ನು ಮುಂದಕ್ಕೆ ಕ್ಯಾರಿ ಮಾಡಬಹುದು.

ಸಂಸ್ಥೆಯು, ಆ ನಷ್ಟಗಳಿಗೆ ಡ್ಯೂ ಡೇಟ್‌ನೊಳಗೆ ಟ್ಯಾಕ್ಸ್ ರಿಟರ್ನ್‌ಗಳನ್ನು ಫೈಲ್ ಮಾಡಿದ್ದರೆ ಮತ್ತು ಮೌಲ್ಯಮಾಪನ ಮಾಡಿದ್ದರೆ, ಹಿಂದಿನ ವರ್ಷಗಳಲ್ಲಿ ಉಂಟಾದ ನಷ್ಟವನ್ನು ಭವಿಷ್ಯದ ಇನ್ಕಮ್‌ನೊಂದಿಗೆ ಅಡ್ಜಸ್ಟ್ ಮಾಡಬಹುದು. 

3. ಸೆಕ್ಷನ್ 139(4): ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್‌ನ ಲೇಟ್ ಫೈಲಿಂಗ್

ಈ ಸಬ್-ಸೆಕ್ಷನ್ ಈ ಕೆಳಗಿನ ಪ್ರಾವಿಷನ್‌ಗಳನ್ನು ಒಳಗೊಂಡಿರುವ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್‌ನ ಲೇಟ್ ಫೈಲಿಂಗ್‌ ಮೇಲೆ ಕೇಂದ್ರೀಕರಿಸುತ್ತದೆ:

ಮೌಲ್ಯಮಾಪನ ವರ್ಷದ ಅಂತ್ಯಕ್ಕೆ ಮೂರು ತಿಂಗಳ ಮೊದಲು ಅಥವಾ ಮೌಲ್ಯಮಾಪನ ಪೂರ್ಣಗೊಳ್ಳುವ ಮೊದಲು ಮೌಲ್ಯಮಾಪಕರು ತಮ್ಮ ಐಟಿಆರ್ ಅನ್ನು ಯಾವುದೇ ಸಮಯದಲ್ಲಿ ಫೈಲ್ ಮಾಡಬಹುದು. 

ಡ್ಯೂ ಡೇಟ್‌ನ ನಂತರ ಐಟಿಆರ್ ಅನ್ನು ಫೈಲ್ ಮಾಡುವ ಟ್ಯಾಕ್ಸ್ ಪೇಯರ್‌ಗಳು, ಸೆಕ್ಷನ್ 234F ಪ್ರಕಾರ ₹5,000 ಪೆನಲ್ಟಿಯನ್ನು ಪಾವತಿಸಬೇಕಾಗುತ್ತದೆ. ಮೌಲ್ಯಮಾಪಕರ ಒಟ್ಟು ಇನ್ಕಮ್ ₹5 ಲಕ್ಷಕ್ಕಿಂತ ಹೆಚ್ಚಿಲ್ಲದಿದ್ದರೆ, ಪೆನಲ್ಟಿಯು ₹1000 ಮೊತ್ತವನ್ನು ಮೀರುವುದಿಲ್ಲ. ಸೆಕ್ಷನ್ 139(1) ರ ಪ್ರಕಾರ ಕಡ್ಡಾಯವಾಗಿ ಫೈಲ್ ಮಾಡುವ ಅಗತ್ಯವಿಲ್ಲದ ಟ್ಯಾಕ್ಸ್ ರಿಟರ್ನ್ಸ್‌ಗಳಿಗೆ ಪೆನಲ್ಟಿಗಳು ಅನ್ವಯಿಸುವುದಿಲ್ಲ. 

4. ಸೆಕ್ಷನ್ 139(4)(ಎ): ಚಾರಿಟೇಬಲ್ ಮತ್ತು ಧಾರ್ಮಿಕ ಟ್ರಸ್ಟ್‌ನ ಐಟಿ ರಿಟರ್ನ್ಸ್

ಪಬ್ಲಿಕ್ ಚಾರಿಟೇಬಲ್ ಅಥವಾ ಧಾರ್ಮಿಕ ಟ್ರಸ್ಟ್‌ನ ಮಾಲೀಕತ್ವದ ಪ್ರಾಪರ್ಟಿಯಿಂದ ಇನ್ಕಮ್ ಅನ್ನು ಗಳಿಸುವ ಟ್ಯಾಕ್ಸ್ ಪೇಯರ್‌ಗಳು, ಭಾಗಶಃ ಅಥವಾ ಸಂಪೂರ್ಣವಾಗಿ, ಅಥವಾ ಸಬ್-ಸೆಕ್ಷನ್ 2(24)(ii)(a) ಪ್ರಕಾರ ವಾಲಂಟರಿ ಕೊಡುಗೆಗಳನ್ನು ಸ್ವೀಕರಿಸುತ್ತಾರೆ ಮತ್ತು ಒಟ್ಟು ಇನ್ಕಮ್, ಗರಿಷ್ಠ ವಿನಾಯಿತಿ ಲಿಮಿಟ್‌ಗಿಂತ ಹೆಚ್ಚಿದ್ದರೆ, ಅವರು, ಐಟಿಆರ್ ಅನ್ನು ಫೈಲ್ ಮಾಡಬೇಕಾಗುತ್ತದೆ.

5. ಸೆಕ್ಷನ್ 139(4)(B): ರಾಜಕೀಯ ಪಕ್ಷಗಳಿಂದ ಐಟಿಆರ್

ರಾಜಕೀಯ ಪಕ್ಷದ ಒಟ್ಟು ಇನ್ಕಮ್, ಗರಿಷ್ಠ ವಿನಾಯಿತಿ ಲಿಮಿಟ್‌ಗಿಂತ ಹೆಚ್ಚಿದ್ದರೆ, ಅವರು ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡಬೇಕು. ಈ ಸೆಕ್ಷನ್‌ನ ಅಡಿಯಲ್ಲಿ ಮೌಲ್ಯಮಾಪನ ಮಾಡಲಾದ ಒಟ್ಟು ಇನ್ಕಮ್, ಸೆಕ್ಷನ್ 13(A) ಪ್ರಾವಿಷನ್‌ ರಹಿತವಾಗಿರುತ್ತದೆ.

6. ಸೆಕ್ಷನ್ 139(4)(C)

ಈ ಸಬ್-ಸೆಕ್ಷನ್ ಗರಿಷ್ಠ ಟ್ಯಾಕ್ಸ್ ವಿನಾಯಿತಿ ಲಿಮಿಟ್‌ಗಿಂತ ಹೆಚ್ಚಿನ ಇನ್ಕಮ್ ಹೊಂದಿರುವ ಇನ್ಸ್ಟಿಟ್ಯೂಷನ್‌ಗಳೊಂದಿಗೆ ವ್ಯವಹರಿಸುತ್ತದೆ. ಆದಾಗ್ಯೂ, ಇತರ ವಿನಾಯಿತಿಗಳನ್ನು ಆನಂದಿಸುವ ಇನ್ಸ್ಟಿಟ್ಯೂಷನ್‌ಗಳು ಇಲ್ಲಿ ಕವರ್ ಆಗುವುದಿಲ್ಲ. 

ಈ ಸೆಕ್ಷನ್‌ನ ಅಡಿಯಲ್ಲಿ ಐಟಿಆರ್ ಫೈಲ್ ಮಾಡಬೇಕಾದ ಇನ್ಸ್ಟಿಟ್ಯೂಷನ್‌ಗಳು ಹೀಗಿವೆ- 

ವೈಜ್ಞಾನಿಕ ಸಂಶೋಧನಾ ಇನ್ಸ್ಟಿಟ್ಯೂಷನ್‌ಗಳು 

ನ್ಯೂಸ್ ಏಜೆನ್ಸಿಗಳು

ಸೆಕ್ಷನ್ 10(23A) ಮತ್ತು ಸೆಕ್ಷನ್ 10(23B) ಅಡಿಯಲ್ಲಿ ತಿಳಿಸಲಾದ ಇನ್ಸ್ಟಿಟ್ಯೂಷನ್‌ಗಳು

ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು ಮತ್ತು ಇತರ ಎಜುಕೇಶನಲ್ ಇನ್ಸ್ಟಿಟ್ಯೂಷನ್‌ಗಳು

7. ಸೆಕ್ಷನ್ 139(4)(d)

ಈ ಸೆಕ್ಷನ್‌ನಲ್ಲಿನ ಯಾವುದೇ ಇತರ ಪ್ರಾವಿಷನ್‌ಗಳ ಅಡಿಯಲ್ಲಿ ಐಟಿಆರ್ ಅಥವಾ ನಷ್ಟವನ್ನು ಫೈಲ್ ಮಾಡಲು ಜವಾಬ್ದಾರರಾಗದ ಇನ್ಸ್ಟಿಟ್ಯೂಷನ್‌ಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಈ ಸೆಕ್ಷನ್‌ನ ಅಡಿಯಲ್ಲಿ ತಮ್ಮ ರಿಟರ್ನ್‌ಗಳನ್ನು ಫೈಲ್ ಮಾಡಲು ಜವಾಬ್ದಾರರಾಗಿರುತ್ತಾರೆ.

8. ಸೆಕ್ಷನ್ 139(4)(f)

ಈ ಸಬ್-ಸೆಕ್ಷನ್‌ನ ಪ್ರಕಾರ, ಸೆಕ್ಷನ್ 115UB ಅಡಿಯಲ್ಲಿ ಇನ್ವೆಸ್ಟ್‌ಮೆಂಟ್ ಫಂಡ್‌ಗಳು ಈ ಸೆಕ್ಷನ್‌ನ ಇತರ ಪ್ರಾವಿಷನ್‌ಗಳ ಅಡಿಯಲ್ಲಿ ಕವರ್ ಆಗದಿದ್ದರೂ ಸಹ, ತಮ್ಮ ಐಟಿಆರ್ ಗಳನ್ನು ಒದಗಿಸಬೇಕಾಗುತ್ತದೆ.

9. ಸೆಕ್ಷನ್ 139(5): ರಿವೈಸ್ಡ್ ಇನ್ಕಮ್ ಟ್ಯಾಕ್ಸ್ ರಿಟರ್ನ್

ಆರಂಭಿಕ ಟ್ಯಾಕ್ಸ್ ರಿಟರ್ನ್‌ಗಳನ್ನು ಫೈಲ್ ಮಾಡುವಾಗ ಟ್ಯಾಕ್ಸ್ ಪೇಯರ್‌ಗಳು ತಪ್ಪು ಮಾಡಿದಾಗ ಈ ಸಬ್-ಸೆಕ್ಷನ್‌ ಅನ್ವಯಿಸುತ್ತದೆ. ಇಲ್ಲೊಮ್ಮೆ ನೋಡಿ:

ಒಂದುವೇಳೆ ಒಂದು ಎಂಟಿಟಿ ಅಥವಾ ಮೌಲ್ಯಮಾಪಕರು ತಮ್ಮ ಒರಿಜಿನಲ್ ಇನ್ಕಮ್ ಅನ್ನು ಸೆಕ್ಷನ್ 139(1) ಅಥವಾ ಸೆಕ್ಷನ್ 139(4) ರ ಪ್ರಕಾರ ಫೈಲ್ ಮಾಡುತ್ತಾರೆ ಎಂದು ಭಾವಿಸೋಣ. ಆ ಸಂದರ್ಭದಲ್ಲಿ, ಅವರು ಯಾವುದೇ ಎರರ್‌ಗಳನ್ನು ಸರಿಪಡಿಸಲು ಅಥವಾ ಬಿಟ್ಟುಬಿಡಲು ರಿವೈಸ್ಡ್ ಐಟಿಆರ್ ಅನ್ನು ಯಾವುದೇ ಸಮಯದಲ್ಲಿ ಮೌಲ್ಯಮಾಪನ ವರ್ಷದ ಕೊನೆಯ ಮೂರು ತಿಂಗಳ ಮೊದಲು ಅಥವಾ ಮೌಲ್ಯಮಾಪನವನ್ನು ಪೂರ್ಣಗೊಳಿಸುವ ಮೊದಲು ಫೈಲ್ ಮಾಡಬಹುದು. 

ಐಟಿಆರ್ ಫೈಲ್ ಮಾಡುವಾಗ ಉದ್ದೇಶಪೂರ್ವಕ ಎರರ್‌ಗಳನ್ನು ಹೊಂದಿರುವ ಐಟಿಆರ್‌ಗಳು ಪರಿಷ್ಕರಣೆಗೆ ಅರ್ಹತೆ ಪಡೆಯುವುದಿಲ್ಲ.

10. ಸೆಕ್ಷನ್ 139(9): ದೋಷಪೂರಿತ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್

ಒಂದುವೇಳೆ ಮೌಲ್ಯಮಾಪಕರು ದೋಷಪೂರಿತ ರಿಟರ್ನ್ ಅನ್ನು ಫೈಲ್ ಮಾಡಿದ್ದರೆ, ಅವನು)ಅವಳು ನೋಟಿಫಿಕೇಶನ್ ಪಡೆದ 15 ದಿನಗಳಲ್ಲಿ ಅದನ್ನು ಪುನಃ ಸರಿಪಡಿಸಬಹುದು. ಆದಾಗ್ಯೂ, ಟ್ಯಾಕ್ಸ್ ಪೇಯರ್‌ಗಳು ರಿಕ್ವೆಸ್ಟ್ ಅನ್ನು ಫಾರ್ವರ್ಡ್ ಮಾಡುವ ಮೂಲಕ, ನಿರ್ದಿಷ್ಟಪಡಿಸಿದ ಕಂಡೀಶನ್‌ಗಳ ಅಡಿಯಲ್ಲಿ ಸರಿಪಡಿಸುವ ಈ ಲಿಮಿಟ್ ಅನ್ನು ವಿಸ್ತರಿಸಬಹುದು.

ಸೆಕ್ಷನ್ 139(9) ಅಡಿಯಲ್ಲಿ ದೋಷಪೂರಿತ ಐಟಿ ರಿಟರ್ನ್ಸ್ ಅನ್ನು ಸರಿಪಡಿಸುವುದು ಹೇಗೆ?

ನೀವು ದೋಷಪೂರಿತ ಐಟಿ ರಿಟರ್ನ್ ಅನ್ನು ಫೈಲ್ ಮಾಡಿದ್ದರೆ, ನಿಮಗೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನಿಂದ ನೋಟಿಸ್ ಬರುತ್ತದೆ. ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 13(9) ಅಡಿಯಲ್ಲಿ, ದೋಷಪೂರಿತ ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಸರಿಪಡಿಸಲು ಈ ಕೆಳಗಿನ ಹಂತ ಹಂತವಾದ ಗೈಡ್ ಅನ್ನು ನೋಡಿ: 

ಹಂತ 1: ವ್ಯಕ್ತಿಗಳು ತಮ್ಮ ದಾಖಲೆಗಳೊಂದಿಗೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನ ಆಫೀಷಿಯಲ್ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬೇಕಾಗುತ್ತದೆ. 

ಹಂತ 2: 'ಇ-ಫೈಲ್' ಟ್ಯಾಬ್ ಅನ್ನು ಆಯ್ಕೆಮಾಡಿ. ದೋಷಪೂರಿತ ರಿಟರ್ನ್ಸ್‌ಗೆ ಸಂಬಂಧಿಸಿದ ಯಾವುದೇ ನೋಟಿಸ್ ಅನ್ನು ನೀಡಿದ್ದರೆ, ಅದನ್ನು ಡಿಸ್‌ಪ್ಲೇ ಮಾಡಲಾಗುತ್ತದೆ. ‘139(9) ಅಡಿಯಲ್ಲಿ ‘ನೋಟಿಸ್‌ಗೆ ಪ್ರತಿಕ್ರಿಯಿಸಿ’ ಮೇಲೆ ಕ್ಲಿಕ್ ಮಾಡಿ 

ಹಂತ 3: ಸ್ವೀಕೃತಿ ನಂಬರ್, ಸಿಪಿಸಿ ರೆಫರೆನ್ಸ್ ನಂಬರ್, ನೋಟಿಸ್‌ ಡೇಟ್ ಮುಂತಾದ ವಿವರಗಳನ್ನು ನಮೂದಿಸಿ. 

ಹಂತ 4: ಸೂಕ್ತವಾದ ಐಟಿಆರ್ ಫಾರ್ಮ್ ಅನ್ನು ಆಯ್ಕೆಮಾಡಿ, ಎಕ್ಸ್ಎಮ್ಎಲ್ ಫೈಲ್ ಅನ್ನು ಅಪ್‌ಲೋಡ್ ಮಾಡಿ ಮತ್ತು ಸಬ್ಮಿಟ್ ಮಾಡಿ. ಒಮ್ಮೆ ಪೂರ್ಣಗೊಂಡ ನಂತರ, ಮೆಸೇಜ್ ಕಾಣಿಸಿಕೊಳ್ಳುತ್ತದೆ. 

ಹಂತ 5: 'ನೀವು ದೋಷವನ್ನು ಒಪ್ಪುತ್ತೀರಾ?' ಎಂಬುದಕ್ಕೆ ಅವಶ್ಯಕತೆಗೆ ಅನುಗುಣವಾಗಿ ಲಭ್ಯವಿರುವ ಕಾಲಮ್‌ನಿಂದ 'ಹೌದು' ಅಥವಾ 'ಇಲ್ಲ' ಆಯ್ಕೆಯನ್ನು ಆಯ್ಕೆಮಾಡಿ 

ಹಂತ 6: ಸಬ್ಮಿಟ್ ಮಾಡಿದ ಪ್ರತಿಕ್ರಿಯೆಯನ್ನು ನೋಡಲು, 'ನೋಡಿ' ಅನ್ನು ಕ್ಲಿಕ್ ಮಾಡಿ.

[ಮೂಲ]

ಸೆಕ್ಷನ್ 139 ರ ಅಡಿಯಲ್ಲಿ ದೋಷ ಕೋಡ್‌ಗಳು ಯಾವುವು?

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 139 ರ ಅಡಿಯಲ್ಲಿ ದೋಷಪೂರಿತ ಟ್ಯಾಕ್ಸ್ ರಿಟರ್ನ್‌ಗಳಿಗಾಗಿ ಟ್ಯಾಕ್ಸ್ ಪೇಯರ್‌ಗಳು ಸ್ವೀಕರಿಸುವ ಕೆಳಗಿನ ಎರರ್ ಕೋಡ್‌ಗಳನ್ನು ನೋಡಿ:

  • ಎರರ್ ಕೋಡ್ 8 

ಸೆಕ್ಷನ್ 44AD ಅಡಿಯಲ್ಲಿ, ಒಟ್ಟು ಪ್ರಿಸಂಪ್ಷನ್ ಗಳಿಕೆಯು ಒಟ್ಟು ರಿಸಿಪ್ಟ್‌ಗಳ 8% ಕ್ಕಿಂತ ಕಡಿಮೆ ಇದ್ದಾಗ ವ್ಯಕ್ತಿಯೊಬ್ಬನು ಐಟಿಆರ್-4S ಅನ್ನು ಫೈಲ್ ಮಾಡಿದರೆ, ಅದು ದೋಷಪೂರಿತ ಇನ್ಕಮ್ ಆಗಿದೆ.

  • ಎರರ್ ಕೋಡ್ 14 

ಟ್ಯಾಕ್ಸ್ ಪೇಯರ್‌ಗಳು ನೆಗೆಟಿವ್ ನೆಟ್ ಪ್ರಾಫಿಟ್ ಅಥವಾ ಗ್ರಾಸ್ ಪ್ರಾಫಿಟ್ ಸೆಕ್ಷನ್ ಅನ್ನು ನೀಡಿದಾಗ, ಅದು ದೋಷಪೂರಿತ ಟ್ಯಾಕ್ಸ್ ರಿಟರ್ನ್ ಆಗಿದೆ.

  • ಎರರ್ ಕೋಡ್ 31 

ಮೌಲ್ಯಮಾಪಕರು 'ಬಿಸಿನೆಸ್ ಹಾಗೂ ಪ್ರೊಫೆಷನ್‌ನ ಪ್ರಾಫಿಟ್ ಮತ್ತು ಗೇನ್ಸ್' ಅಡಿಯಲ್ಲಿ ಇನ್ಕಮ್ ಅನ್ನು ಪಡೆದರೆ ಹಾಗೂ ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ ಹಾಗೂ ಬ್ಯಾಲೆನ್ಸ್ ಶೀಟ್ ಅನ್ನು ನೀಡದಿದ್ದರೆ, ಅದು ದೋಷಯುಕ್ತ ಟ್ಯಾಕ್ಸ್ ರಿಟರ್ನ್ ಆಗಿದೆ.

  • ಎರರ್ ಕೋಡ್ 38

ಐಟಿಆರ್‌ನಲ್ಲಿ ಹೇಳಿರುವಂತೆ ಪಾವತಿಸಬೇಕಾದ ಆದರೆ ಇನ್ನೂ ಪಾವತಿಸದ ಟ್ಯಾಕ್ಸ್‌ಗೆ ಇದು ಅನ್ವಯಿಸುತ್ತದೆ.

ಸೆಕ್ಷನ್ 139 ರ ಅಡಿಯಲ್ಲಿ ಐಟಿಆರ್ (ITR) ಅನ್ನು ಫೈಲ್ ಮಾಡಲು ಡ್ಯೂ ಡೇಟ್‌ಗಳು ಯಾವುವು?

ಸೆಕ್ಷನ್ 139 ಟ್ಯಾಕ್ಸ್ ಪೇಯರ್ ತಮ್ಮ ಐಟಿಆರ್ ಅನ್ನು ಫೈಲ್ ಮಾಡಬೇಕಾದ ಕೆಳಗಿನ ಡ್ಯೂ ಡೇಟ್‌ಗಳನ್ನು ಸೂಚಿಸುತ್ತದೆ:

  • 31 ನೇ ಜುಲೈ (31st July)

ತಮ್ಮ ಅಕೌಂಟಿಂಗ್ ಬುಕ್‌ಗಳಲ್ಲಿ ಆಡಿಟ್‌ನ ಅಗತ್ಯವಿಲ್ಲದ ಕೆಳಗಿನ ಎಲ್ಲಾ ಟ್ಯಾಕ್ಸ್ ಪೇಯರ್‌ಗಳಿಗೆ ಇದು ವ್ಯಾಲಿಡ್ ಆಗಿರುತ್ತದೆ:

ಸ್ಯಾಲರೀಡ್ ಎಂಪ್ಲಾಯೀಗಳು

ಸೆಲ್ಫ್ ಎಂಪ್ಲಾಯ್ಡ್ ಪ್ರೊಫೆಷನಲ್‌ಗಳು

ಕನ್ಸಲ್ಟೆಂಟ್‌ಗಳು ಅಥವಾ ಫ್ರೀಲ್ಯಾನ್ಸರ್‌ಗಳು 

  • 31 ನೇ ಅಕ್ಟೋಬರ್ (31st October)

ಟ್ಯಾಕ್ಸ್ ಪೇಯರ್‌ಗಳು ಮತ್ತು ತಮ್ಮ ಗಳಿಕೆಯ ಟ್ಯಾಕ್ಸ್ ಆಡಿಟ್ ಮಾಡಬೇಕಾದ ಎಂಟಿಟಿಗಳಿಗೆ ಈ ಡ್ಯೂ ಡೇಟ್‌ಗಳು ವ್ಯಾಲಿಡ್ ಆಗಿರುತ್ತವೆ. ಉದಾಹರಣೆಗೆ

ಟ್ಯಾಕ್ಸ್ ಆಡಿಟ್‌ಗೆ ಜವಾಬ್ದಾರರಾಗಿರುವ ಬಿಸಿನೆಸ್ ಎಂಟಿಟಿಗಳು, ಕನ್ಸಲ್ಟೆಂಟ್‌ಗಳು ಅಥವಾ ಸೆಲ್ಫ್ ಎಂಪ್ಲಾಯ್ಡ್ ಪ್ರೊಫೆಷನಲ್‌ಗಳು. ಇದು ಟ್ಯಾಕ್ಸ್ ಆಡಿಟ್‌ಗೆ ಜವಾಬ್ದಾರರಾಗಿರುವ ಎಂಟಿಟಿಯಲ್ಲಿ ಕೆಲಸ ಮಾಡುವ ಪಾರ್ಟ್ನರ್ ಅನ್ನು ಸಹ ಒಳಗೊಂಡಿದೆ. 

[ಮೂಲ]

 

ಇದರೊಂದಿಗೆ, ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 139 ರ ಆರ್ಟಿಕಲ್ ಇಲ್ಲಿಗೆ ಕೊನೆಗೊಳ್ಳುತ್ತದೆ. ಈ ಸೆಕ್ಷನ್‌ನ ಪ್ರಾವಿಷನ್‌ಗಳ ಬಗ್ಗೆ ತಿಳಿದುಕೊಳ್ಳುವುದು ಟ್ಯಾಕ್ಸ್ ಪೇಯರ್‌ಗಳಿಗೆ ಡ್ಯೂ ಡೇಟ್‌ ಮುಗಿದ ನಂತರವೂ ಐಟಿಆರ್ ಅನ್ನು ಫೈಲ್ ಮಾಡಲು ಸಹಾಯ ಮಾಡುತ್ತದೆ ಮತ್ತು ಟ್ಯಾಕ್ಸ್‌ಗೆ ಅನುಗುಣವಾಗಿ ಉಳಿಯುತ್ತದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 139 ರ ಅಡಿಯಲ್ಲಿ ಐಟಿಆರ್ (ITR) ಅನ್ನು ಫೈಲ್ ಮಾಡುವ ಡ್ಯೂ ಡೇಟ್‌ಗಳನ್ನು ವಿಸ್ತರಿಸಲಾಗಿದೆಯೇ?

ಹೌದು, ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 139 ರ ಅಡಿಯಲ್ಲಿ, ಸರ್ಕಾರವು ಡೇಟ್‌ಗಳನ್ನು ವಿಸ್ತರಿಸಬಹುದು. ಉದಾಹರಣೆಗೆ, ಜುಲೈ 31 ಅನ್ನು ಆಗಸ್ಟ್ 31 ರವರೆಗೆ ವಿಸ್ತರಿಸಬಹುದು. ಸರ್ಕಾರವು ತನ್ನ ವಿವೇಚನೆಯಿಂದ ಸೆಪ್ಟೆಂಬರ್ 30 ಅನ್ನು ವಿಸ್ತರಿಸಬಹುದು. 

[ಮೂಲ]